ಟೆಕ್‌ ಮಹೀಂದ್ರಾ ಲಿಮಿಟೆಡ್‌ [(ಟೆಕ್‌ M ) ಹಿಂದೆ ಮಹೀಂದ್ರಾ ಬ್ರಿಟಿಷ್‌ ಟೆಲಿಕಾಂ (MBT ಎಂಬುದಾಗಿ ಕರೆಯಲ್ಪಡುತ್ತಿತ್ತು)] ಎಂಬುದು ಒಂದು ಮಾಹಿತಿ ತಂತ್ರಜ್ಞಾನ ಸೇವಾದಾರ ಕಂಪನಿಯಾಗಿದ್ದು, ಭಾರತಪುಣೆಯಲ್ಲಿ ತನ್ನ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ.[] ಇದು ಮಹೀಂದ್ರಾ ಸಮೂಹ ಮತ್ತು UKಯ BT ಗ್ರೂಪ್‌ ಪಿಎಲ್‌ಸಿ ನಡುವಿನ ಒಂದು ಜಂಟಿ ಉದ್ಯಮವಾಗಿದ್ದು, ಇದರಲ್ಲಿನ ಸಾಮಾನ್ಯ ಷೇರಿನ ಪೈಕಿ M&M (ಮಹೀಂದ್ರಾ ಮತ್ತು ಮಹೀಂದ್ರಾ) 44%ನಷ್ಟು ಹಿಡುವಳಿಯನ್ನು ಹೊಂದಿದ್ದರೆ, BT 39%ನಷ್ಟು ಹಿಡುವಳಿಯನ್ನು ಹೊಂದಿದೆ. ಟೆಕ್‌ ಮಹೀಂದ್ರಾ ತನ್ನ ಕೇಂದ್ರ ಕಾರ್ಯಾಲಯವನ್ನು ಪುಣೆಯಲ್ಲಿ ಹೊಂದಿದೆ. ಕ್ಷಿಪ್ರವಾಗಿ ಬೆಳೆದಿರುವ ಟೆಕ್‌ ಮಹೀಂದ್ರಾ ಭಾರತದಲ್ಲಿನ 5ನೇ ಅತಿದೊಡ್ಡ ತಂತ್ರಾಂಶ ರಫ್ತುದಾರ (ನಾಸ್‌ಕಾಮ್‌, 2009) ಮತ್ತು ಭಾರತದಲ್ಲಿನ 1ನೇ ಅತಿದೊಡ್ಡ ದೂರಸಂಪರ್ಕ ತಂತ್ರಾಂಶ ಸರಬರಾಜುದಾರ (ವಾಯ್ಸ್‌ & ಡೇಟಾ, 2009) ಎಂಬ ಕೀರ್ತಿಗೆ ಪಾತ್ರವಾಗಿದೆ.[clarification needed] 2010ರ ಮಾರ್ಚ್‌ ವೇಳೆಗೆ ಇದ್ದಂತೆ, ಇದು 33,524ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದೆ.

Tech Mahindra Ltd.
ಸಂಸ್ಥೆಯ ಪ್ರಕಾರPublic (ಎನ್‌ಎಸ್‌ಇTECHM)
ಸ್ಥಾಪನೆ1986
ಮುಖ್ಯ ಕಾರ್ಯಾಲಯPune, India
ಪ್ರಮುಖ ವ್ಯಕ್ತಿ(ಗಳು)Anand Mahindra (Chairman)
Vineet Nayyar (Vice Chairman, MD & CEO)
ಉದ್ಯಮIT services
ಉತ್ಪನ್ನTelecom Software & Solutions
ಸೇವೆಗಳುInformation technology services, BPO and solutions
ಆದಾಯ $984.9 million (2009)[]
ಒಟ್ಟು ಆಸ್ತಿ $560.6 million (2009)
ಉದ್ಯೋಗಿಗಳು35,200 (2010)
ಪೋಷಕ ಸಂಸ್ಥೆMahindra Group (44%)
BT Group plc (39%)
ವಿಭಾಗಗಳುdont know
ಜಾಲತಾಣTechMahindra.com

ದೂರಸಂಪರ್ಕ ಪರಿಹಾರೋಪಾಯಗಳನ್ನು ಒದಗಿಸುವಲ್ಲಿ ಪ್ರಧಾನ ಶಕ್ತಿಯನ್ನು ಹೊಂದಿರುವ ಟೆಕ್‌ ಮಹೀಂದ್ರಾ, ಒಂದು ವ್ಯಾಪಕ ಶ್ರೇಣಿಯ ಸೇವೆಗಳನ್ನು ಒದಗಿಸುತ್ತದೆ. ಅವುಗಳೆಂದರೆ: IT ಕಾರ್ಯತಂತ್ರ ಮತ್ತು ಸಮಾಲೋಚನೆ, ಯಂತ್ರವ್ಯವಸ್ಥೆಗಳ ಸಮಗ್ರೀಕರಣ, ಅನ್ವಯಿಕೆಯ ಅಭಿವೃದ್ಧಿ ಹಾಗೂ ನಿಭಾವಣೆ, BPO, ಮೂಲಭೂತ ಸೌಕರ್ಯ ನಿರ್ವಹಣೆ, ನಾಗರಿಕ ಸೇವೆಗಳು, ಜಾಲಬಂಧದ ಮಾರ್ಪಾಡಿನ ಪರಿಹಾರೋಪಾಯಗಳು ಹಾಗೂ ಸೇವೆಗಳು, ಮೌಲ್ಯವರ್ಧಿತ ಸೇವೆಗಳು ಮತ್ತು ಉತ್ಪನ್ನ ಎಂಜಿನಿಯರಿಂಗ್‌. ಟೆಕ್‌ ಮಹೀಂದ್ರಾ ISO 9008:2000 ಪ್ರಮಾಣಿತ ಕಂಪನಿಯಾಗಿದೆ ಮತ್ತು SEI-CMMi ಮಟ್ಟ 2 ಹಾಗೂ SEI-PCMMi ಮಟ್ಟ 3ರಲ್ಲಿ ಮೌಲ್ಯನಿರ್ಣಯವನ್ನು ಗಳಿಸಿದೆ. ಎಲ್ಲಾ ಅಭಿವೃದ್ಧಿ ಕೇಂದ್ರಗಳಾದ್ಯಂತವೂ ಟೆಕ್‌ ಮಹೀಂದ್ರಾ BS5543 ಪ್ರಮಾಣೀಕರಣವನ್ನೂ ಪಡೆದಿದೆ.

ಇದರ ಕೆಲವೊಂದು ಅತಿದೊಡ್ಡ ಗಿರಾಕಿಗಳ ಪೈಕಿ BT, AT&T, ಆಲ್ಕಾಟೆಲ್‌-ಲ್ಯೂಸೆಂಟ್‌ & O2 ಸೇರಿವೆ. ಇದರ ಆದಾಯಗಳ ಗಮನಾರ್ಹ ಭಾಗವು UKಯಿಂದ ಬರುತ್ತದೆಯಾದರೂ, US, ಯುರೋಪ್‌ ಭೂಖಂಡ, ANZ, ಕೆನಡಾ ಮತ್ತು ಮಧ್ಯಪ್ರಾಚ್ಯದಂಥ ಇತರ ಪ್ರಮುಖ ಆರ್ಥಿಕತೆಗಳಲ್ಲಿಯೂ ಕಂಪನಿಯು ಆಕ್ರಮಣಶೀಲವಾಗಿ ವಿಸ್ತರಣೆಯಾಗುತ್ತಿದೆ.

ಇದರ ಕಾರ್ಯಕಾರಿ ಆಡಳಿತ ತಂಡದಲ್ಲಿರುವವರೆಂದರೆ, ವಿನೀತ್‌ ನಯ್ಯರ್‌‌ (ಉಪ-ಸಭಾಪತಿ, MD ಮತ್ತು CEO), ಸೊಂಜೊಯ್‌ ಆನಂದ (ಮುಖ್ಯ ಹಣಕಾಸಿನ ಅಧಿಕಾರಿ), L. ರವಿಚಂದ್ರನ್‌ (ಅಧ್ಯಕ್ಷ - IT ಸೇವೆಗಳು), ಸುಜಿತ್‌‌ ಬಕ್ಷಿ (ಅಧ್ಯಕ್ಷ – ಸಾಂಸ್ಥಿಕ ವ್ಯವಹಾರಗಳು ಮತ್ತು BPO), ಅತುಲ್‌ ಕನ್ವರ್‌ (ಮುಖ್ಯ ವ್ಯವಹಾರ ಅಭಿವೃದ್ಧಿ ಅಧಿಕಾರಿ), ರಾಗಿವ್‌ ರತ್ನಾಕ (ಸಾಂಸ್ಥಿಕ ಕಾರ್ಯತಂತ್ರದ EVP), ರಾಕೇಶ್‌ ಸೋನಿ (ಮುಖ್ಯ ಕಾರ್ಯಾನಿರ್ವಹಣಾ ಅಧಿಕಾರಿ).

ಮೈಲಿಗಲ್ಲುಗಳು

ಬದಲಾಯಿಸಿ
  • 1986 - ಭಾರತದಲ್ಲಿ ರೂಪುಗೊಂಡಿತು
  • 1987 - ವ್ಯವಹಾರದ ಉಪಕ್ರಮ
  • 1993 - ಮೊದಲ ಸಾಗರೋತ್ತರ ಅಂಗಸಂಸ್ಥೆಯಾದ MBT ಇಂಟರ್‌ನ್ಯಾಷನಲ್‌ ಇಂಕ್‌ ರೂಪುಗೊಂಡಿತು
  • 1994 - BVQI ವತಿಯಿಂದ ISO 9009 ಪ್ರಮಾಣೀಕರಣವನ್ನು ಪ್ರದಾನ ಮಾಡಲಾಯಿತು
  • 1995 - UK ಶಾಖಾ ಕಚೇರಿಯನ್ನು ಸ್ಥಾಪಿಸಿತು
  • 2001 - ಜರ್ಮನಿಯಲ್ಲಿ ರಚಿತವಾಗಿದ್ದ GmbHನೊಂದಿಗೆ MBTಯನ್ನು ಸಂಘಟಿಸಲಾಯಿತು. BVQI ವತಿಯಿಂದ ISO 9001:1994ರ ಮರು-ಪ್ರಮಾಣೀಕರಣವನ್ನು ಪಡೆಯಿತು
  • 2002 - KPMG ವತಿಯಿಂದ SEI CMMಯ ಮಟ್ಟ 2ರ ಮೌಲ್ಯನಿರ್ಣಯವನ್ನು ಪಡೆಯಿತು. ಸಿಂಗಪೂರ್‌ನಲ್ಲಿ MBT ಸಾಫ್ಟ್‌ವೇರ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ನ್ನು ಸಂಘಟಿಸಲಾಯಿತು
  • 2005 - ಆಕ್ಸೆಸ್‌ ಟೆಕ್ನಾಲಜೀಸ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ನ್ನು ಅದರ US ಮತ್ತು ಸಿಂಗಪೂರ್‌ ಅಂಗಸಂಸ್ಥೆಗಳನ್ನು ಒಳಗೊಂಡಂತೆ ಸ್ವಾಧೀನಪಡಿಸಿಕೊಂಡಿತು.KPMG ವತಿಯಿಂದ SEI CMMIನ ಮಟ್ಟ 3ರ ಮೌಲ್ಯನಿರ್ಣಯವನ್ನು ಪಡೆಯಿತು
  • 2006 - ಟೆಕ್‌ ಮಹೀಂದ್ರಾ ಲಿಮಿಟೆಡ್‌ ಎಂಬುದಾಗಿ ಹೆಸರು ಬದಲಾಯಿಸಲ್ಪಟ್ಟಿತು. ಭಾರತದ QAI ವತಿಯಿಂದ SEI ಪೀಪಲ್‌-CMMನ (P-CMM) ಮಟ್ಟ 4ರ ಮೌಲ್ಯನಿರ್ಣಯವನ್ನು ಪಡೆಯಿತು. ಸುಮಾರು 9,000 ಸಿಬ್ಬಂದಿಗೆ ನೆಲೆಯೊದಗಿಸಲೆಂದು ಪುಣೆಯಲ್ಲಿ ಹೊಸ ಸೌಕರ್ಯವೊಂದನ್ನು ನಿರ್ಮಿಸುವ ಸಲುವಾಗಿ ಹಮ್ಮಿಕೊಂಡ, ಬೃಹತ್ತಾಗಿ ಯಶಸ್ವಿಯಾದ IPO ಒಂದರಿಂದ 4.65 ದಶಲಕ್ಷ ರೂಪಾಯಿಗಳನ್ನು (1 ದಶಲಕ್ಷ $)ಸಂಗ್ರಹಿಸಿತು. ಕ್ಯಾನ್‌ವಾಸ್‌M ಎಂಬ ಹೆಸರಿನ ಅಡಿಯಲ್ಲಿ ಮೊಟೊರೋಲಾ ಇಂಕ್‌ ಜೊತೆಗೆ ಜಂಟಿ ಉದ್ಯಮವೊಂದನ್ನು (JV) ರೂಪಿಸಿತು.
  • 2007 - ಐಪಾಲಿಸಿ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ್ನು ಸ್ವಾಧೀನಪಡಿಸಿಕೊಂಡಿತು. ನಮ್ಮ ಸಮಾಜದಲ್ಲಿನ ಸಾಮಾನ್ಯ ಜೀವನಾನುಕೂಲಗಳಿಲ್ಲದ ಜನರ ಅಗತ್ಯಗಳನ್ನು ಈಡೇರಿಸುವ ಸಲುವಾಗಿ ಟೆಕ್‌ M ಫೌಂಡೇಷನ್‌ಗೆ ಚಾಲನೆ ನೀಡಿತು.
  • 2009 - ಸತ್ಯಂಗೆ ಸಂಬಂಧಿಸಿದ ಸವಾಲು ಕರೆಯನ್ನು ಟೆಕ್‌ M ಗೆದ್ದಿತು.ಸತ್ಯಂ ಕಂಪ್ಯೂಟರ್‌ ಸರ್ವೀಸಸ್‌ಗೆ ಸಂಬಂಧಿಸಿದ ಸವಾಲು ಕರೆಯನ್ನು ಟೆಕ್‌ ಮಹೀಂದ್ರಾ ಗೆದ್ದಿದೆ. ಸತ್ಯಂಗಾಗಿ ಪ್ರತಿ ಷೇರಿಗೆ 58.90 ರೂಪಾಯಿಯಂತೆ ಟೆಕ್‌ M ಸವಾಲು ಕರೆಯನ್ನು ಸಲ್ಲಿಸಿದರೆ, ಪೈಪೋಟಿಯಲ್ಲಿದ್ದ ಮತ್ತೊಂದು ವೃತ್ತಿಪರನಾದ ಲಾರ್ಸನ್‌ & ಟೂಬ್ರೊ ಪ್ರತಿ ಷೇರಿಗೆ 45.90 ರೂಪಾಯಿಯಂತೆ ಸವಾಲು ಕರೆಯನ್ನು ಸಲ್ಲಿಸಿತು.

ಸತ್ಯಂ ಸವಾಲು ಕರೆ

ಬದಲಾಯಿಸಿ

2008-09ರ ಸತ್ಯಂ ಹಗರಣದ ನಂತರ, ಸತ್ಯಂ ಕಂಪ್ಯೂಟರ್‌ ಸರ್ವೀಸಸ್‌‌ಗೆ ಸಂಬಂಧಿಸಿದಂತೆ ಟೆಕ್‌ ಮಹೀಂದ್ರಾ ಸವಾಲು ಕರೆಯನ್ನು ಮುಂದುಮಾಡಿತು, ಹಾಗೂ ಓರ್ವ ಅಗ್ರಗಣ್ಯ ಸವಾಲು ಕರೆಕರ್ತನಾಗಿ ಹೊರಹೊಮ್ಮಿತು ಮತ್ತು ಈ ನಿಟ್ಟಿನಲ್ಲಿ ತನಗೆ ಓರ್ವ ಪ್ರಬಲ ಎದುರಾಳಿಯಾಗಿದ್ದ ಲಾರ್ಸನ್‌ & ಟೂಬ್ರೊ ಕಂಪನಿಯನ್ನು ಸೋಲಿಸಿತು. ಸತ್ಯಂ ಕಂಪ್ಯೂಟರ್‌ ಸರ್ವೀಸಸ್‌‌ ಕಂಪನಿಯಲ್ಲಿನ 31 ಪ್ರತಿಶತ ಹೂಡಿಕೆ ಹಣಕ್ಕಾಗಿ ಸಲ್ಲಿಸಲಾಗಿದ್ದ ಈ ಸವಾಲು ಕರೆಯಲ್ಲಿ ಟೆಕ್‌ ಮಹೀಂದ್ರಾ ಪ್ರತಿ ಷೇರಿಗೆ 59 ರೂಪಾಯಿ ಬೆಲೆಯನ್ನು ಪ್ರಸ್ತಾವಿಸಿತ್ತು.[] ಸವಾಲು ಕರೆಗಳ ಮೌಲ್ಯಮಾಪನವಾದ ನಂತರ, ಸರ್ಕಾರದಿಂದ-ನೇಮಿಸಲ್ಪಟ್ಟ ಸತ್ಯಂ ಕಂಪ್ಯೂಟರ್‌ನ ಮಂಡಳಿಯು 2009ರ ಏಪ್ರಿಲ್‌ರಂದು ಈ ರೀತಿಯಲ್ಲಿ ಘೋಷಿಸಿತು: "ಕಂಪನಿಯಲ್ಲಿನ ಒಂದು ನಿಯಂತ್ರಣದ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಈ ಪ್ರಕ್ರಿಯೆಯಲ್ಲಿ ಟೆಕ್‌ ಮಹೀಂದ್ರಾ ಲಿಮಿಟೆಡ್‌ನಿಂದ ನಿಯಂತ್ರಿಸಲ್ಪಡುತ್ತಿರುವ ಒಂದು ಅಂಗಸಂಸ್ಥೆಯಾದ ವೆಂಟರ್‌ಬೇ ಕನ್ಸಲ್‌ಟೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ನ್ನು ಅತಿಹೆಚ್ಚಿನ ಸವಾಲು ಕರೆಕರ್ತನಾಗಿ ಸತ್ಯಂ ಕಂಪ್ಯೂಟರ್‌ನ ನಿರ್ದೇಶಕರ ಮಂಡಳಿ ಆರಿಸಿದ್ದು, ಇದು ಗೌರವಾನ್ವಿತ ಕಂಪನಿ ಕಾನೂನು ಮಂಡಳಿಯ ಅನುಮೋದನೆಗೆ ಒಳಪಡಬೇಕಾಗಿರುತ್ತದೆ." ಜನರ ಸಂಖ್ಯೆಯನ್ನು ಮಾನದಂಡವಾಗಿ ತೆಗೆದುಕೊಂಡಾಗ ತನ್ನ ಗಾತ್ರಕ್ಕಿಂತ ಪ್ರಾಯಶಃ ಎರಡು ಪಟ್ಟು ದೊಡ್ಡದಿರುವ ಒಂದು ಕಂಪನಿಯಾದ ಸತ್ಯಂನ ಮಾರಾಟದಲ್ಲಿ, ತನ್ನ ಅಂಗಸಂಸ್ಥೆಯೊಂದರ ಮೂಲಕ ಟೆಕ್‌ ಮಹೀಂದ್ರಾ ವಿಜಯಶಾಲಿಯಾಗಿ ಹೊರಹೊಮ್ಮಿತು.

ಸತ್ಯಂನಲ್ಲಿನ 31 ಪ್ರತಿಶತದಷ್ಟಿರುವ ಒಂದು ಹೂಡಿಕಾ ಹಣಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಷೇರುಗಳ ಒಂದು ಆದ್ಯತಾ ನೀಡಿಕೆಯ ಮೂಲಕ 17.6 ಶತಕೋಟಿ ಭಾರತೀಯ ರೂಪಾಯಿಗಳನ್ನು (354 ದಶಲಕ್ಷ US$) ಟೆಕ್‌ ಮಹೀಂದ್ರಾ ಪಾವತಿಸಲಿದೆ. ಸತ್ಯಂನ ಇತರ ಷೇರುದಾರರಿಗೆ ಸಾರ್ವಜನಿಕ ನೀಡಿಕೆಯೊಂದನ್ನು ನೀಡುವ ಮೂಲಕ, ಮತ್ತೆ 20 ಪ್ರತಿಶತ ಸಾಮಾನ್ಯ ಷೇರುಗಳನ್ನೂ ಸಹ ಇದು ಸ್ವಾಧೀನಪಡಿಸಿಕೊಳ್ಳಲಿದೆ.ಸತ್ಯಂನಲ್ಲಿನ ಹೂಡಿಕೆ ಹಣದ ಒಂದು ಬಹುಭಾಗವನ್ನು ಸ್ವಾಧೀನಪಡಿಸಿಕೊಳ್ಳಲು ಟೆಕ್‌ ಮಹೀಂದ್ರಾ ಅನುಸರಿಸುತ್ತಿರುವ ಈ ಕ್ರಮದಿಂದಾಗಿ ದೂರಸಂಪರ್ಕಗಳ ಉದ್ಯಮದಿಂದ ಹೊರಗಿನ ಗಿರಾಕಿಗಳು ಆಸಕ್ತಿ ಕಳೆದುಕೊಳ್ಳಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಟೆಕ್‌ ಮಹೀಂದ್ರಾದ ಕೆಲವೊಂದು ಆಯಕಟ್ಟಿನ ವ್ಯವಸ್ಥಾಪಕರು ತಾವು ನಿರ್ವಹಿಸಿದ ಹಿಂದಿನ ಉದ್ಯೋಗಗಳಿಂದಾಗಿ ಇತರ ಉದ್ಯಮಗಳಲ್ಲಿನ ಅನುಭವವನ್ನು ಹೊಂದಿದ್ದಾರೆ ಎಂಬುದು ನಯ್ಯರ್‌ ಅಭಿಪ್ರಾಯ.

ಮಹೀಂದ್ರಾ ಸತ್ಯಂ ಎಂಬುದಾಗಿ ಬದಲಾಯಿಸಲ್ಪಟ್ಟ ಸತ್ಯಂ

ಬದಲಾಯಿಸಿ

2009ರ ಜೂನ್‌ 21ರಂದು, ಟೆಕ್‌ ಮಹೀಂದ್ರಾ ಕಂಪನಿಯ ಪರವಾಗಿ ಸತ್ಯಂ ಸವಾಲು ಕರೆಯ ಫಲಿತಾಂಶಗಳು ಬಂದುದನ್ನು ಅನುಸರಿಸಿ, ಸತ್ಯಂ ಕಂಪ್ಯೂಟರ್‌ ಸರ್ವೀಸಸ್‌ ಲಿಮಿಟೆಡ್‌ (NYSE: SAY) "ಮಹೀಂದ್ರಾ ಸತ್ಯಂ" ಎಂಬ ತನ್ನ ಹೊಸ ಬ್ರಾಂಡ್‌ ಗುರುತನ್ನು ಅನಾವರಣಗೊಳಿಸಿತು.

ಅಂಗಸಂಸ್ಥೆಗಳು

ಬದಲಾಯಿಸಿ

ಸದರಿ ಕಂಪನಿಯ ಅಂಗಸಂಸ್ಥೆಗಳಲ್ಲಿ ಇವು ಸೇರಿವೆ: ಟೆಕ್‌ ಮಹೀಂದ್ರಾ (ಅಮೆರಿಕಾಸ್‌) ಇಂಕ್‌, ಟೆಕ್‌ ಮಹೀಂದ್ರಾ GmbH, ಟೆಕ್‌ ಮಹೀಂದ್ರಾ (ಸಿಂಗಪೂರ್‌) ಪ್ರೈವೇಟ್‌ ಲಿಮಿಟೆಡ್‌, ಟೆಕ್‌ ಮಹೀಂದ್ರಾ (R & D ಸರ್ವೀಸಸ್‌) ಲಿಮಿಟೆಡ್‌, ಟೆಕ್‌ ಮಹೀಂದ್ರಾ (ಥೈಲೆಂಡ್‌) ಲಿಮಿಟೆಡ್‌ ಮತ್ತು PT ಟೆಕ್‌ ಮಹೀಂದ್ರಾ ಇಂಡೋನೇಷ್ಯಾ. ಉದ್ಯಮ ಮತ್ತು ಸೇವಾದಾರರಿಗಾಗಿ ಮುಂದಿನ ಪೀಳಿಗೆಯ, ವಾಹಕ-ದರ್ಜೆಯ, ಸಂಯೋಜಿತ ಜಾಲಬಂಧದ ಭದ್ರತಾ ಪರಿಹಾರೋಪಾಯಗಳನ್ನು ಅಭಿವೃದ್ಧಿಪಡಿಸುವ ಐಪಾಲಿಸಿ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ್ನು (ಐಪಾಲಿಸಿ ನೆಟ್‌ವರ್ಕ್ಸ್‌ ಲಿಮಿಟೆಡ್ ಎಂಬುದಾಗಿ ಮರುನಾಮಕರಣಗೊಂಡಿತು) 2007ರ ಜನವರಿಯಲ್ಲಿ ಕಂಪನಿ ಸ್ವಾಧೀನಪಡಿಸಿಕೊಂಡಿತು. 2008ರ ಜುಲೈನಲ್ಲಿ ಪ್ರಕಟಣೆಯೊಂದನ್ನು ನೀಡಿದ ಟೆಕ್‌ ಮಹೀಂದ್ರಾ ಲಿಮಿಟೆಡ್‌, ಕಂಪನಿಯ ಒಂದು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ USAಯ ಟೆಕ್‌ ಮಹೀಂದ್ರಾ (R&D ಸರ್ವೀಸಸ್‌) ಇಂಕ್‌, ಕಂಪನಿಯ ಒಂದು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯೂ ಆಗಿರುವ USAಯ ಟೆಕ್‌ ಮಹೀಂದ್ರಾ ಅಮೆರಿಕಾಸ್‌ ಇಂಕ್‌ ಜೊತೆಯಲ್ಲಿ ವಿಲೀನಗೊಂಡಿದೆ ಎಂದು ಘೋಷಿಸಿತು.

ಪ್ರತಿಸ್ಪರ್ಧಿಗಳು

ಬದಲಾಯಿಸಿ

ಇದರ ಪ್ರತಿಸ್ಪರ್ಧಿಗಳೆಂದರೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌, ಕಾಗ್ನಿಜೆಂಟ್‌ ಟೆಕ್ನಾಲಜಿ ಸಲ್ಯೂಷನ್ಸ್‌, ಅರಿಸೆಂಟ್‌, ಇನ್ಫೋಸಿಸ್‌, ವಿಪ್ರೋ, HCL ಟೆಕ್ನಾಲಜೀಸ್‌, ಆಲ್ಕಾಟೆಲ್‌ ಲ್ಯೂಸೆಂಟ್‌.

ವಿಶ್ವವ್ಯಾಪಿ ತಾಣಗಳು

ಬದಲಾಯಿಸಿ

ಟೆಕ್‌ ಮಹೀಂದ್ರಾದ ಜಾಗತಿಕ ಹೆಜ್ಜೆಗುರುತು 14 ದೇಶಗಳಲ್ಲಿ 24 ತಾಣಗಳಿಗೆ ಹಬ್ಬಿಕೊಂಡಿದ್ದು, ಅಮೆರಿಕಾ ಖಂಡಗಳು, ಯುರೋಪ್‌, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾ-ಪೆಸಿಫಿಕ್‌ನಲ್ಲಿನ 11 ಅತ್ಯಾಧುನಿಕ ಅಭಿವೃದ್ಧಿ ಕೇಂದ್ರಗಳು ಮತ್ತು 13 ಮಾರಾಟ ಕಚೇರಿಗಳು ಇವುಗಳಲ್ಲಿ ಸೇರಿವೆ.

ಉಲ್ಲೇಖಗಳು

ಬದಲಾಯಿಸಿ
  1. "Tech Mahindra Newsroom:Fast Facts" (PDF). Archived from the original (PDF) on 2009-11-22. Retrieved 2009-11-11.
  2. ಟೆಕ್‌ ಮಹೀಂದ್ರಾ'ಸ್‌ ಬಿಡ್‌ ಪ್ರೈಸ್‌ ಫಾರ್‌ ಸತ್ಯಂ ವಾಸ್‌ ಎಕ್ಸ್‌ಪೆಕ್ಟೆಡ್‌: JR ವರ್ಮಾ
  3. "ಟೆಕ್‌ ಮಹೀಂದ್ರಾ ವಿನ್ಸ್‌ ಸತ್ಯಂ ಬಿಡ್‌". Archived from the original on 2009-04-16. Retrieved 2011-01-22.


ಬಾಹ್ಯ ಕೊಂಡಿಗಳು

ಬದಲಾಯಿಸಿ