ಟಿಫಿನ್ ಕ್ಯಾರಿಯರ್
ಟಿಫಿನ್ ಕ್ಯಾರಿಯರ್‌ಗಳು ಅಥವಾ ಡಬ್ಬಾಗಳು ಟಿಫಿನ್ ಊಟಕ್ಕಾಗಿ ಏಷ್ಯಾ ಮತ್ತು ಕೆರಿಬಿಯನ್‌ನಲ್ಲಿ ವ್ಯಾಪಕವಾಗಿ ಬಳಸಲಾಗುವ ಒಂದು ರೀತಿಯ ಊಟದ ಡಬ್ಬವಾಗಿದೆ. ಇಂಡೋನೇಷ್ಯಾ, ಮಲೇಷಿಯಾ, ಸಿಂಗಾಪುರ್, ಗಯಾನಾ, ಸುರಿನಾಮ್ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊಗಳಲ್ಲಿಯೂ ಅವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. [೧] [೨] [೩] ಹಂಗರಿಯಲ್ಲಿ ಮನೆಯ ಬಳಕೆಗಾಗಿ ರೆಸ್ಟೋರೆಂಟ್ ಊಟವನ್ನು ಸಾಗಿಸಲು ಅವುಗಳನ್ನು ಬಳಸಲಾಗುತ್ತದೆ. ಹಂಗೇರಿಯನ್ನರ ಟಿಫಿನ್ ಕ್ಯಾರಿಯರ್‌ಗಳು ಸಾಮಾನ್ಯವಾಗಿ ಸೂಪ್, ಮುಖ್ಯವಾದ ಭಕ್ಷ್ಯ ಮತ್ತು ಕೇಕ್ ತುಂಡುಗಳನ್ನು ಹೊಂದಿರುತ್ತದೆ. ಇದೇ ರೀತಿಯ ಸಾಧನವನ್ನು ಜರ್ಮನಿಯಲ್ಲಿ ಹೆಂಕೆಲ್ಮನ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಮಿಲಿಟರಿ ಮೆಸ್ ಕಿಟ್‌ಗಳಂತೆಯೇ ದುಂಡಗೆ ಅಥವಾ ಅಂಡಾಕಾರದಲ್ಲಿರುತ್ತದೆ. ೧೯೬೦ ರ ದಶಕದವರೆಗೂ ಹೆಂಕೆಲ್ಮನ್ ಬಹಳ ಜನಪ್ರಿಯವಾಗಿತ್ತು, ಆದರೆ ಇಂದು ಜರ್ಮನ್ನರು ಇದನ್ನು ಬಹಳ ವಿರಳವಾಗಿ ಬಳಸುತ್ತಾರೆ.
ಭಾರತದ ನಗರವಾದ ಮುಂಬೈನಲ್ಲಿ, ನಗರದ ಕಛೇರಿಯ ಉದ್ಯೋಗಿಗಳಿಗೆ ಅವರ ಉಪನಗರದ ಮನೆಗಳಿಂದ ಅಥವಾ ಕ್ಯಾಟರರ್‌ನಿಂದ ಡಬ್ಬಾಗಳಲ್ಲಿ ಪ್ಯಾಕ್ ಮಾಡಲಾದ ಬಿಸಿ ಊಟವನ್ನು ನಿಯಮಿತವಾಗಿ ತಲುಪಿಸುವ ಸಂಕೀರ್ಣ ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ ಇದೆ. ಈ ಡೆಲಿವರಿ ಕೆಲಸಗಾರರನ್ನು ಡಬ್ಬಾವಾಲಾಗಳು ಎಂದು ಕರೆಯುತ್ತಾರೆ.
ವಿವಿಧ ಹೆಸರುಗಳು
ಬದಲಾಯಿಸಿಟಿಫಿನ್ ಕ್ಯಾರಿಯರ್‌ಗಳನ್ನು ಇಂಡೋನೇಷಿಯನ್ ಭಾಷೆಯಲ್ಲಿ ರಾಂಟಂಗ್ ಎಂದು ಕರೆಯಲಾಗುತ್ತದೆ. ಇದನ್ನು ಮಲಯದಲ್ಲಿ ಮಂಗ್ಕುಕ್ ಟಿಂಗ್‌ಕಟ್ (ಲೆವೆಲ್ಡ್ ಬೌಲ್‌ಗಳು)ಎಂದೂ, ಥೈ ಭಾಷೆಯಲ್ಲಿ ಪಿನ್ ಟೊ ಎಂದೂ ಮತ್ತು ಕಾಂಬೋಡಿಯಾದಲ್ಲಿ ಚಾನ್ ಸ್ರಾಕ್ ಎಂದು ಕರೆಯಲಾಗುತ್ತದೆ. ಅರಬ್ ರಾಷ್ಟ್ರಗಳಲ್ಲಿ ಇದನ್ನು ಸಫರ್ಟಾಸ್ ಎಂದು ಕರೆಯಲಾಗುತ್ತದೆ. (ಟರ್ಕಿಶ್‌ನಲ್ಲಿ "ಸೆಫರ್ ಟಾಸಿ" ಎಂದರೆ 'ಪ್ರಯಾಣ ಬಟ್ಟಲುಗಳು'). ಟಿಫಿನ್ ಬಾಕ್ಸ್‌ಗೆ ಹಂಗೇರಿಯನ್ ಪದ ಎಥೋರ್ಡೋ.
ವಿನ್ಯಾಸ ಮತ್ತು ವಸ್ತುಗಳು
ಬದಲಾಯಿಸಿಸಾಮಾನ್ಯವಾಗಿ ಈ ಕಂಟೈನರ್‌ಗಳು ಎರಡು ಅಥವಾ ಮೂರು ಡಬ್ಬಗಳನ್ನು ಹೊಂದಿರುತ್ತವೆ, ಅವುಗಳಲ್ಲಿ ಹೆಚ್ಚು ವಿಸ್ತಾರವಾದ ಕಂಟೈನರ್‌ಗಳು ನಾಲ್ಕು ಡಬ್ಬಗಳನ್ನು ಹೊಂದಬಹುದು. ಕೆಳಗಿನ ಹಂತವು ಕೆಲವೊಮ್ಮೆ ಉಳಿದವುಗಳಿಗಿಂತ ದೊಡ್ಡದಾಗಿರುತ್ತದೆ, ಇದನ್ನು ಸಾಮಾನ್ಯವಾಗಿ ಅನ್ನಕ್ಕಾಗಿ ಬಳಸಲಾಗುತ್ತದೆ. ಟಿಫಿನ್ ಕ್ಯಾರಿಯರ್‌ಗಳನ್ನು ಸಾಮಾನ್ಯವಾಗಿ ಉಕ್ಕಿನಿಂದ ಮತ್ತು ಕೆಲವೊಮ್ಮೆ ಅಲ್ಯೂಮಿನಿಯಂನಿಂದ ತಯಾರಿಸಲಾಗುತ್ತದೆ.ಹಾಗೆಯೇ ಪ್ಲಾಸ್ಟಿಕ್ ಆವೃತ್ತಿಗಳನ್ನು ಯುರೋಪಿಯನ್ ಕಂಪನಿಗಳು ತಯಾರಿಸಿವೆ.
-
ಮುಂಬೈನಲ್ಲಿ ಎರಡು ಡಬ್ಬಾವಾಲಾಗಳು ಟಿಫಿನ್ ಕ್ಯಾರಿಯರ್ಗಳಲ್ಲಿ ಪ್ಯಾಕ್ ಮಾಡಿದ ಊಟವನ್ನು ತಲುಪಿಸುತ್ತಿದ್ದಾರೆ
-
ಬಾಂಗ್ಲಾದೇಶದಲ್ಲಿ ಥೈ ಟಿಫಿನ್ ಬಾಕ್ಸ್
-
ಟಿಫಿನ್ ಕ್ಯಾರಿಯರ್, ಬರ್ಮೀಸ್ ಲ್ಯಾಕ್ವರ್ವೇರ್
-
ಮಲೇಷ್ಯಾ, ಪೆರನಾಕನ್ ಟಿಫಿನ್ ಕ್ಯಾರಿಯರ್
ಸಹ ನೋಡಿ
ಬದಲಾಯಿಸಿ
- ಡಬ್ಬಾವಾಲಾ
- ದಿ ಲಂಚ್ ಬಾಕ್ಸ್ (೨೦೧೩ ಭಾರತೀಯ ಚಲನಚಿತ್ರ)
ಉಲ್ಲೇಖಗಳು
ಬದಲಾಯಿಸಿ- ↑ Leong-Salobir, Cecilia (2011). Food Culture in Colonial Asia; A Taste of Empire (Hardback ed.). London: Routledge. ISBN 9780415606325. Retrieved 1 November 2018.
- ↑ "Food Carrier". Zebra e-store. Archived from the original on 7 ನವೆಂಬರ್ 2016. Retrieved 1 November 2018.
- ↑ "Food Fare: H Street's Cane Pays Tribute to Trinidad Roots with Tiffin Boxes".