ದ ಲಂಚ್‍ಬಾಕ್ಸ್ (ಚಲನಚಿತ್ರ)
ದ ಲಂಚ್‍ಬಾಕ್ಸ್ 2013ರ ಒಂದು ಪತ್ರವ್ಯವಹಾರದ ಪ್ರಣಯಪ್ರಧಾನ ಚಲನಚಿತ್ರ. ರಿತೇಶ್ ಬಾತ್ರಾ ಇದನ್ನು ಬರೆದು ನಿರ್ದೇಶಿಸಿದ್ದಾರೆ. ಗುನೀತ್ ಮೋಂಗಾ, ಅನುರಾಗ್ ಕಶ್ಯಪ್ ಹಾಗೂ ಅರುಣ್ ರಂಗಾಚಾರಿ ಇದನ್ನು ನಿರ್ಮಿಸಿದ್ದಾರೆ. ಡಿಎಆರ್ ಮೋಶನ್ ಪಿಕ್ಚರ್ಸ್, ಯುಟಿವಿ ಮೋಶನ್ ಪಿಕ್ಚರ್ಸ್, ಧರ್ಮಾ ಪ್ರೊಡಕ್ಷನ್ಸ್, ಸಿಖ್ಯಾ ಎಂಟರ್‍ಟೇನ್‍ಮಂಟ್, ಎನ್ಎಫ಼್‍ಡಿಸಿ (ಭಾರತ), ಆರ್‌ಒಎಚ್ ಫ಼ಿಲ್ಮ್ಸ್ (ಜರ್ಮನಿ), ಎಎಸ್‍ಎಪಿ ಫ಼ಿಲ್ಮ್ಸ್ (ಫ಼್ರಾನ್ಸ್) ಮತ್ತು ಸಿನೆ ಮೋಜ಼ೇಕ್ (ಅಮೇರಿಕ) ಸೇರಿದಂತೆ ವಿವಿಧ ನಿರ್ಮಾಣಶಾಲೆಗಳು ಈ ಚಲನಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದವು.[೫] ಈ ಚಿತ್ರದಲ್ಲಿ ಇರ್ಫಾನ್ ಖಾನ್, ನಿಮ್ರತ್ ಕೌರ್ ಮತ್ತು ನವಾಜ಼ುದ್ದೀನ್ ಸಿದ್ದೀಕಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ೨೦೧೩ರ ಕಾನ್ ಚಲನಚಿತ್ರೋತ್ಸವದಲ್ಲಿ, ಚಿತ್ರವು ಪ್ರದರ್ಶನಗೊಂಡು ಗ್ರ್ಯಾಂಡ್ ರೇಲ್ ಡೆ ಆರ್ ಎಂದೂ ಕರೆಯಲ್ಪಡುವ ವಿಮರ್ಶಕರ ವಾರ ಪ್ರೇಕ್ಷಕರ ಆಯ್ಕೆ ಪ್ರಶಸ್ತಿಯನ್ನು ಗೆದ್ದಿತು.[೬] ಇದನ್ನು ೨೦೧೩ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.[೭] ಈ ಚಿತ್ರವು ಭಾರತದಲ್ಲಿ ೨೦ ಸೆಪ್ಟೆಂಬರ್ ೨೦೧೩ ರಂದು ಬಿಡುಗಡೆಯಾಯಿತು.[೮]
ದ ಲಂಚ್‍ಬಾಕ್ಸ್ | |
---|---|
ನಿರ್ದೇಶನ | ರಿತೇಶ್ ಬಾತ್ರಾ |
ನಿರ್ಮಾಪಕ |
|
ಲೇಖಕ | ರಿತೇಶ್ ಬಾತ್ರಾ |
ಪಾತ್ರವರ್ಗ | ಇರ್ಫ಼ಾನ್ ಖಾನ್ ನಿಮ್ರತ್ ಕೌರ್ ನವಾಜ಼ುದ್ದೀನ್ ಸಿದ್ದೀಕಿ |
ಸಂಗೀತ | ಮ್ಯಾಕ್ಸ್ ರಿಕ್ಟರ್ |
ಛಾಯಾಗ್ರಹಣ | ಮೈಕಲ್ ಸಿಮಂಡ್ಸ್ |
ಸಂಕಲನ | ಜಾನ್ ಎಫ಼್. ಲಾಯನ್ಸ್ |
ಸ್ಟುಡಿಯೋ | ಡಿಎಆರ್ ಮೋಶನ್ ಪಿಕ್ಚರ್ಸ್ ಯುಟಿವಿ ಮೋಶನ್ ಪಿಕ್ಚರ್ಸ್ ಧರ್ಮಾ ಪ್ರೊಡಕ್ಷನ್ಸ್ ಸೀಖ್ಯಾ ಎಂಟರ್ಟೇನ್‍ಮಂಟ್ ಎನ್ಎಫ಼್‍ಡಿಸಿ |
ವಿತರಕರು | ಯುಟಿವಿ ಮೋಷನ್ ಪಿಕ್ಚರ್ಸ್ (ಭಾರತ) ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್ (ಉತ್ತರ ಅಮೇರಿಕಾ) [೧] |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 105 ನಿಮಿಷಗಳು[೨] |
ದೇಶ | ಭಾರತ ಅಮೇರಿಕ ಜರ್ಮನಿ ಫ಼್ರಾನ್ಸ್ |
ಭಾಷೆ | ಹಿಂದಿ
|
ಬಂಡವಾಳ | ರೂ 22 ಕೋಟಿ[೩] |
ಬಾಕ್ಸ್ ಆಫೀಸ್ | ರೂ. 100.85 ಕೋಟಿ[೩][೪] |
ಚಿತ್ರವು ಬಾಕ್ಸ್ ಆಫ಼ಿಸ್‍ನಲ್ಲಿ ಯಶಸ್ವಿಯಾಯಿತು.[೩][೯] ಇದು ಇರ್ಫ಼ಾನ್ ಖಾನ್‍ರ ಅತ್ಯಂತ ಹೆಚ್ಚು ಹಣಗಳಿಸಿದ ಹಿಂದಿ ಚಲನಚಿತ್ರವಾಗಿತ್ತು, ಆದರೆ ಹಿಂದಿ ಮೀಡಿಯಂ ಚಿತ್ರವು (೨೦೧೭) ಇದನ್ನು ಮೀರಿಸಿತು.[೧೦] ೨೦೧೫ರ ಬ್ರಿಟಿಷ್ ಅಕ್ಯಾಡೆಮಿ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ದ ಲಂಚ್‍ಬಾಕ್ಸ್ ಅತ್ಯುತ್ತಮ ಇಂಗ್ಲಿಷೇತರ ವರ್ಗದ ಚಲನಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿತ್ತು.[೧೧] ಈ ಚಿತ್ರವು ನೆಟ್ಫ್ಲಿಕ್ಸ್‌ನಲ್ಲಿ ಲಭ್ಯವಿದೆ.[೧೨]
ಕಥಾವಸ್ತು
ಬದಲಾಯಿಸಿವಿಧುರನಾದ ಸಾಜನ್ ಫ಼ರ್ನಾಂಡಿಸ್ (ಇರ್ಫ಼ಾನ್ ಖಾನ್) ಲೆಕ್ಕಿಗನ ತನ್ನ ವೃತ್ತಿಯಿಂದ ಸ್ವಲ್ಪ ಸಮಯದಲ್ಲಿ ನಿವೃತ್ತನಾಗುವವನಿರುತ್ತಾನೆ. ಈಲಾ (ನಿಮ್ರತ್ ಕೌರ್) ತನ್ನ ಗಂಡನ (ನಕುಲ್ ವೆಯ್ದ್) ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಮತ್ತು ತನ್ನ ದಾಂಪತ್ಯದಲ್ಲಿ ಮತ್ತೆ ಪ್ರಣಯವನ್ನು ಹಾಕಲು ದಾರಿಗಳನ್ನು ಹುಡುಕುತ್ತಿರುವ ಯುವ ಪತ್ನಿಯಾಗಿದ್ದು, ಅವನಿಗಾಗಿ ರುಚಿಯಾದ ಆಹಾರವನ್ನು ಅಡುಗೆ ಮಾಡಿಹಾಕುವುದು ಒಂದಾಗಿರುತ್ತದೆ. ಮುಂಬೈಯ ಪ್ರಸಿದ್ಧ ಡಬ್ಬಾವಾಲಾಗಳ (ಕೆಲಸದಲ್ಲಿರುವವರಿಗೆ ರೆಸ್ಟೊರೆಂಟ್‍ಗಳು ಅಥವಾ ಮನೆಗಳಿಂದ ಊಟಗಳನ್ನು ಸಂಗ್ರಹಿಸಿ ಒದಗಿಸುವ ಸಂಕೀರ್ಣವಾದ ವ್ಯವಸ್ಥೆ) ಅಪರೂಪದ ತಪ್ಪಿನಿಂದಾಗಿ, ಈಲಾ ತನ್ನ ಗಂಡನಿಗಾಗಿ ತಯಾರಿಸಿದ ಊಟದ ಡಬ್ಬಿಯು ಅವನ ಬದಲಿಗೆ ಸಾಜನ್‍ಗೆ ತಲುಪುತ್ತದೆ. ಈಲಾಗೆ ಅಂತಿಮವಾಗಿ ತಪ್ಪಿನ ಅರಿವಾಗುತ್ತದೆ ಮತ್ತು ಮೇಲಿನ ಅಪಾರ್ಟ್‌ಮಂಟನಲ್ಲಿರುವ ತನ್ನ ನೆರೆಯ ಆಂಟಿಯ (ಭಾರತಿ ಆಚ್ರೇಕರ್ - ಧ್ವನಿ ಮಾತ್ರ) ಸಲಹೆಯ ಮೇಲೆ ಮರುದಿನ ಸಾಜನ್‍ಗೆ ತಪ್ಪಿನ ಬಗ್ಗೆ ಪತ್ರ ಬರೆದು (ತನ್ನ ಗಂಡನ ಅಚ್ಚುಮೆಚ್ಚಿನ ಊಟದೊಂದಿಗೆ) ಡಬ್ಬಿಯಲ್ಲಿ ಇಡುತ್ತಾಳೆ.
ಊಟಗಳೊಂದಿಗೆ ಹಿಂದೆ ಮುಂದೆ ಕಳಿಸಿದ ಸಂದೇಶಗಳ ವಿನಿಮಯವು ಇಬ್ಬರ ನಡುವೆ ಸ್ನೇಹ ಬೆಳೆಸುತ್ತದೆ, ಮತ್ತು ತಮ್ಮ ಸ್ವಂತದ ವೈಯಕ್ತಿಕ ಜೀವನಗಳ ನೆನಪುಗಳು ಮತ್ತು ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಕೆಲಸದ ಸ್ಥಳದಲ್ಲಿ, ಸಾಜನ್‍ಗೆ ತನ್ನ ಬದಲಿ ಕೆಲಸಗಾರನಾದ ಅನಾಥ ಶೇಖ್‍ನಿಗೆ ತರಬೇತಿ ನೀಡುವ ಕಾರ್ಯನೀಡಲಾಗುತ್ತದೆ. ತನ್ನ ಹೆಂಡತಿ ಮೃತಳಾದಾಗಿನಿಂದ ಆಗಲೇ ಸಾಮಾಜಿಕವಾಗಿ ದೂರವಾಗಿರುವ ಸಾಜನ್‍ಗೆ ಆರಂಭದಲ್ಲಿ ಅವನ ಅದಕ್ಷತೆ ಸಿಟ್ಟುಬರಿಸುತ್ತದೆ. ಕ್ರಮೇಣವಾಗಿ ಸಾಜನ್ ಮತ್ತು ಶೇಖ್ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಂಡು ನಿಕಟ ಸ್ನೇಹವನ್ನು ಕೂಡ ಬೆಳೆಸಿಕೊಳ್ಳುತ್ತಾರೆ. ಒಂದು ಘಟ್ಟದಲ್ಲಿ, ಸಾಜನ್ ವೇತನಾದೇಶಗಳ ಮೇಲಿನ ಶೇಖ್‍ನ ಸ್ಪಷ್ಟವಾದ ತಪ್ಪುಗಳನ್ನು ಮುಚ್ಚುವ ಮೂಲಕ ಶೇಖ್‍ನ ಕೆಲಸವನ್ನು ಉಳಿಸಿಕೊಡುತ್ತಾನೆ ಮತ್ತು ಮೆಹ್ರುನ್ನೀಸಾಳ (ಶ್ರುತಿ ಬಾಪ್ನಾ) ಜೊತೆಗೆ ಅವನ ಮದುವೆಯಲ್ಲಿ ಗಿಳಿಯನೂ ಆಗುತ್ತಾನೆ.
ಮನೆಯಲ್ಲಿ, ತನ್ನ ಗಂಡನು ಪ್ರಣಯ ಪ್ರಸಂಗದಲ್ಲಿ ಬಿದ್ದಿದ್ದಾನೆ ಎಂದು ಈಲಾಗೆ ಗೊತ್ತಾಗಿ ತನ್ನ ದಾಂಪತ್ಯದ ಮೇಲೆ ಭರವಸೆ ಕಳೆದುಕೊಳ್ಳಲು ಆರಂಭಿಸುತ್ತಾಳೆ. ಊಟದ ಡಬ್ಬಿಯ ಒಂದು ಪತ್ರದಲ್ಲಿ, ಜೀವನ ವೆಚ್ಚವು ಭಾರತಕ್ಕಿಂತ ಕಡಿಮೆಯಿರುವ ಭೂತಾನ್‍ಗೆ ಹೋಗುವ ಸಲಹೆ ನೀಡುತ್ತಾಳೆ. ಸಾಜನ್ ಇಬ್ಬರೂ ಅಲ್ಲಿಗೆ ಒಟ್ಟಾಗಿ ಹೋಗೋಣ ಎಂದು ಸೂಚಿಸುವ ಪ್ರತ್ಯುತ್ತರ ಬರೆಯುತ್ತಾನೆ. ಆಮೇಲೆ ಒಂದು ಜನಪ್ರಿಯ ರೆಸ್ಟೊರೆಂಟ್‍ನಲ್ಲಿ ಮುಖಾಮುಖಿ ಭೇಟಿಯಾಗುವ ಪ್ರಸ್ತಾಪವನ್ನು ಈಲಾ ಮಾಡುತ್ತಾಳೆ, ಆದರೆ ನಿಗದಿತ ಸಮಯಕ್ಕೆ ಸಾಜನ್ ಹಾಜರಾಗುವುದಿಲ್ಲ. ಖಾಲಿ ಊಟದ ಡಬ್ಬಿಯನ್ನು ಪಡೆದ ಮೇಲೆ, ಖಿನ್ನಳಾದ ಈಲಾಗೆ ಸಾಜನ್ ಪ್ರತ್ಯುತ್ತರ ಬರೆದು ಕ್ಷಮೆ ಕೇಳುತ್ತಾನೆ ಮತ್ತು ತಾನು ಬಂದಿದ್ದೆ ಮತ್ತು ದೂರದಿಂದ ಅವಳನ್ನು ನೋಡಿದೆ ಆದರೆ ಸಮೀಪಿಸಲಾಗಲಿಲ್ಲ ಎಂದು ಹೇಳುತ್ತಾನೆ. ಅವಳು ಯುವ ಮತ್ತು ಸುಂದರವಾಗಿ ಕಂಡಳು ಎಂದು ವಿವರಿಸುತ್ತಾನೆ, ಮತ್ತು ಅವಳಿಗಾಗಿ ತಾನು ಬಹಳ ವಯಸ್ಸಾದವನು ಎಂದು ಅಂದಾಜುಮಾಡಿ ಅವಳಿಗೆ ಮುಂದೆ ಸಾಗಲು ಸಲಹೆ ನೀಡುತ್ತಾನೆ.
ಸ್ವಲ್ಪ ಸಮಯದ ನಂತರ, ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಈಲಾಳ ತಂದೆ ಅವಳ ತಾಯಿಯ ಆರೈಕೆಯಲ್ಲಿ ಮೃತನಾಗುತ್ತಾನೆ. ಅವಳ ತಾಯಿ (ಲಿಲೆಟ್ ಡುಬೆ) ತನ್ನ ಮದುವೆ ಎಷ್ಟು ದುಃಖಕರವಾಗಿತ್ತು ಎಂದು ಬಹಿರಂಗಗೊಳಿಸಿದ ಮೇಲೆ, ಈಲಾ ಸಾಜನ್‍ಗಾಗಿ ಹುಡುಕಲು ನಿರ್ಧರಿಸುತ್ತಾಳೆ, ಆದರೆ ಅವನು ಆಗಲೇ ನಿವೃತ್ತನಾಗಿ ನಾಸಿಕ್‍ಗೆ ಹೊರಟಿದ್ದಾನೆಂದು ಶೇಖ್‍ನಿಂದ ತಿಳಿದುಕೊಳ್ಳುತ್ತಾಳೆ. ತಾನು ತನ್ನ ಗಂಡನನ್ನು ಬಿಟ್ಟು ಮಗಳ ಜೊತೆ ಭೂತಾನ್‍ಗೆ ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿ ಸಾಜನ್‍ಗೆ ಕೊನೆಯ ವಿದಾಯದ ಸಂದೇಶವನ್ನು ಬರೆಯುತ್ತಾಳೆ.
ಈ ನಡುವೆ, ನಾಸಿಕ್‍ನ ಮಾರ್ಗದಲ್ಲಿ ಸಾಜನ್ ತನ್ನ ಮನಸ್ಸನ್ನು ಬದಲಾಯಿಸಿ ಮುಂಬೈಗೆ ಮರಳಿ, ಕೊನೆಯದಾಗಿ ತನ್ನ ಮಗಳು ಶಾಲೆಯಿಂದ ಮರಳಲು ಮನೆಯಲ್ಲಿ ಕಾಯುತ್ತಾ ಕಂಡ ಈಲಾಳ ಹುಡುಕಾಟಕ್ಕೆ ಹೋಗುತ್ತಾನೆ. ಇದರಲ್ಲಿ ಅವನಿಗೆ ನಿಯಮಿತವಾಗಿ ನಾಮಸೂಚಕ ಊಟದ ಡಬ್ಬಿಯನ್ನು ಸಂಗ್ರಹಿಸಿ ತಲುಪಿಸುತ್ತಿದ್ದ ಅದೇ ಡಬ್ಬಾವಾಲಾ ನೆರವಾಗುತ್ತಾನೆ.
ಪಾತ್ರವರ್ಗ
ಬದಲಾಯಿಸಿ- ಸಾಜನ್ ಫ಼ರ್ನಾಂಡಿಸ್ ಆಗಿ ಇರ್ಫಾನ್ ಖಾನ್
- ಈಲಾ ಆಗಿ ನಿಮ್ರತ್ ಕೌರ್
- ಶೇಖ್ ಆಗಿ ನವಾಜ಼ುದ್ದೀನ್ ಸಿದ್ದೀಕಿ
- ಮಿ. ಶ್ರಾಫ಼್ ಆಗಿ ಡೆಂಜ಼ಿಲ್ ಸ್ಮಿತ್
- ಮಿಸಸ್ ದೇಶಪಾಂಡೆ ಆಗಿ ಭಾರತಿ ಆಚ್ರೇಕರ್ (ಧ್ವನಿ ಮಾತ್ರ)
- ರಾಜೀವ್ ಆಗಿ ನಕುಲ್ ವೆಯ್ದ್
- ಯಶ್ವಿ ಆಗಿ ಯಶ್ವಿ ಪುನೀತ್ ನಗರ್
- ಈಲಾಳ ತಾಯಿಯಾಗಿ ಲಿಲೆಟ್ ಡುಬೇ
- ಮೆಹ್ರುನ್ನೀಸಾ ಆಗಿ ಶ್ರುತಿ ಬಾಪ್ನಾ
- ಈಲಾಳ ತಂದೆಯಾಗಿ ನಾಸಿರ್ ಖಾನ್
- ಡ್ಯೂಕ್‍ನ ಮಾಲಿಕನಾಗಿ ಲೋಕೇಶ್ ರಾಯ್
- ಡಬ್ಬಾವಾಲಾ ಆಗಿ ಸದಾಶಿವ್ ಕೋಂಡಾಜಿ ಪೋಕರ್ಕರ್
- ಸಾಜನ್‍ನ ನೆರೆಯವಳಾಗಿ ಆರತಿ ರಾಥೋಡ್
- ಈಲಾಳ ಸೋದರನಾಗಿ ರಿಷಿ ರಾಜ್ ಮೋರೆ
- ಹಲ್ಲಿಲ್ಲದ ಮಹಿಳೆಯಾಗಿ ಕೃಷ್ಣಾ ಬಾಯಿ
- ಆಟೊರಿಕ್ಷಾ ಚಾಲಕನಾಗಿ ಸಂತೋಷ್ ಕುಮಾರ್ ಚೌರಾಸಿಯಾ
- ಡ್ಯೂಕ್‍ನ ವೇಟರ್ ಆಗಿ ಸ್ವಪ್ನಿಲ್ ಶ್ರೀರಾವ್
- ಡಬ್ಬಾವಾಲಾ ಆಗಿ ಬಾಬುರಾವ್ ಸಂಕ್ಪಾಲ್
- ಕಚೇರಿ ಜವಾನನಾಗಿ ಮಹೇಶ್ ಮಹಾದೇವ್ ಸಾಲವ್ಕರ್
- ಯುವಕನಾಗಿ ಅಭಿಜಿತ್ ಖಾನ್ವಿಲ್ಕರ್
ತಯಾರಿಕೆ
ಬದಲಾಯಿಸಿಬೆಳವಣಿಗೆ
ಬದಲಾಯಿಸಿಕಿರುಚಿತ್ರಗಳನ್ನು ತಯಾರಿಸಿದ್ದ ರಿತೇಶ್ ಬಾತ್ರಾ, ತಮ್ಮ ದಕ್ಷತೆಗಾಗಿ ಪರಿಚಿತವಾಗಿರುವ ಮುಂಬಯಿಯ ಪ್ರಸಿದ್ಧ ಡಬ್ಬಿ ವಿತರಣಾ ವ್ಯವಸ್ಥೆ ಡಬ್ಬಾವಾಲಾಗಳ ಮೇಲಿನ ಸಾಕ್ಷ್ಯಚಿತ್ರಕ್ಕಾಗಿ ಸಂಶೋಧಿಸಲು ಆರಂಭಿಸಿದರು. ಆದರೆ ೨೦೦೭ರಲ್ಲಿ ಅವರೊಂದಿಗೆ ಒಂದು ವಾರ ಕಳೆದ ಬಳಿಕ, ಬಾತ್ರಾರಿಗೆ ಅನೇಕ ಆಸಕ್ತಿಯ ವೈಯಕ್ತಿಕ ಕಥೆಗಳು ಗೊತ್ತಾದವು. ಈ ವಿಚಾರವು ಚಲನಚಿತ್ರದ ಕಲ್ಪನೆಗೆ ಜನ್ಮನೀಡಿತು, ಮತ್ತು ಸಾಕ್ಷ್ಯಚಿತ್ರವನ್ನು ತಯಾರಿಸುವ ಬದಲಾಗಿ ಅವರು ಒಂದು ಚಿತ್ರದ ಕಥೆಯನ್ನು ಬರೆಯಲು ಆರಂಭಿಸಿದರು.[೮][೧೩] ಕಾಲ ಕಳೆದಂತೆ, ಈ ಚಲನಚಿತ್ರವು ಅನೇಕ ನಿರ್ಮಾಣಶಾಲೆಗಳ ನಡುವೆ ಜಂಟಿ ನಿರ್ಮಾಣವಾಯಿತು. ಜರ್ಮನಿಯ ಮ್ಯಾಚ್ ಫ಼್ಯಾಕ್ಟರಿ ಇದರ ಅಂತರರಾಷ್ಟ್ರೀಯ ಮಾರಟ ಏಜೆಂಟ್ ಆಯಿತು.[೫][೧೪]
ಬರವಣಿಗೆ
ಬದಲಾಯಿಸಿಚಿತ್ರಕಥೆಯ ಮೊದಲ ಕರಡನ್ನು ಬಾತ್ರಾ ೨೦೧೧ರಲ್ಲಿ ಮುಗಿಸಿದರು.[೧೩] ಋತ್ವಿಕ್ ಓಜ಼ಾ ಸಹಾಯವಾದರು.[೧೫] ಚಿತ್ರೀಕರಣದ ಆರು ತಿಂಗಳು ಮೊದಲು, ನಿಮ್ರತ್ ಕೌರ್ ವಹಿಸಿದ ಈಲಾಳ ಪಾತ್ರ ಮತ್ತು ನವಾಜ಼ುದ್ದೀನ್ ಸಿದ್ದೀಕಿ ವಹಿಸಿದ ಪಾತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಯಿತು ಮತ್ತು ಚಿತ್ರೀಕರಣದ ವೇಳೆ ಪೂರ್ವಸಿದ್ಧತೆಯಿಲ್ಲದೆ ನಟಿಸಲಾಯಿತು.
ಪಾತ್ರ ನಿರ್ಧಾರಣ
ಬದಲಾಯಿಸಿಇರ್ಫ಼ಾನ್ ಖಾನ್‍ಗೆ ಚಿತ್ರದ ಕಥೆ ಮತ್ತು ಬಹಳ ಮಾತಾಡದ ಆದರೆ ಚೀಟಿಗಳ ಮೂಲಕ ಮಾತಾಡುವ ತಮ್ಮ ಪಾತ್ರದ ಪರಿಕಲ್ಪನೆ ಇಷ್ಟವಾಯಿತು. ಕೆಲವು ಭೇಟಿಗಳ ನಂತರ ಚಿತ್ರದಲ್ಲಿ ನಟಿಸಲು ಒಪ್ಪಿದರು. ಮುಖ್ಯ ನಟಿಯ ಪಾತ್ರಕ್ಕೆ, ಶಾರೀರ ಪರೀಕ್ಷೆಗಳನ್ನು ಮಾಡಲಾಗಿ ಕೊನೆಗೆ ನಿಮ್ರತ್ ಕೌರ್‌ರನ್ನು ಆಯ್ಕೆ ಮಾಡಲಾಯಿತು. ಚಿತ್ರದ ಸಂಶೋಧನೆ ಮಾಡುವಾಗ ಕೆಲವು ಡಬ್ಬಾವಾಲಾಗಳ ಸ್ನೇಹಬೆಳೆಸಿಕೊಂಡ ನಿರ್ದೇಶಕರು ಅವರಿಗೂ ಕಿರು ಪಾತ್ರಗಳನ್ನು ಹಂಚಿದರು.[೮]
ಚಿತ್ರೀಕರಣ
ಬದಲಾಯಿಸಿಚಿತ್ರವನ್ನು ₹220 ಮಿಲಿಯನ್ ಬಂಡವಾಳದಲ್ಲಿ ೨೦೧೨ ರಲ್ಲಿ ಮುಂಬಯಿಯಲ್ಲಿ ಚಿತ್ರೀಕರಿಸಲಾಯಿತು.[೧೩] ಚಿತ್ರೀಕರಣಕ್ಕೆ ಮುನ್ನ, ಪಾತ್ರವರ್ಗವು ಆರು ತಿಂಗಳು ಪೂರ್ವಾಭ್ಯಾಸ ನಡೆಸಿತು. ಇದನ್ನು ಆರಿ ಅಲೆಕ್ಸಾ ಡಿಜಿಟಲ್ ಫ಼ಿಲ್ಮ್ ಕ್ಯಾಮರಾವನ್ನು ಬಳಸಿ ಚಿತ್ರೀಕರಿಸಲಾಗಿತ್ತು.[೧೪] ಟ್ರೇನ್ ಮೇಲಿನ ದೃಶ್ಯಗಳು ಒಂದೇ ಒಂದು ರೈಲುಡಬ್ಬಿಯ ಬಳಕೆಯನ್ನು ಒಳಗೊಂಡಿದ್ದವು, ಮತ್ತು ಬೇಕಾದಾಗ ನಿಜವಾದ ಸ್ಥಳೀಯ ಪ್ರಯಾಣಿಕರನ್ನು ಕೂಡ ಒಳಗೊಂಡಿದ್ದವು.[೧೬]
ಪ್ರದಾನ ಛಾಯಾಗ್ರಹಣವು ೨೯ ದಿನಗಳು ನಡೆಯಿತು, ಮತ್ತು ಚಿತ್ರದ ದೃಶ್ಯಗಳ ಬಹುಪಾಲನ್ನು ಮೂರು ವಾರಗಳಲ್ಲಿ ಚಿತ್ರೀಕರಿಸಲಾಯಿತು. ನಂತರ, ಸಾಕ್ಷ್ಯಚಿತ್ರ ರೀತಿಯಲ್ಲಿ ತೆಗೆದ ತುಣುಕನ್ನು ಚಿತ್ರೀಕರಿಸಲಾಯಿತು. ಮುಂಬಯಿಯ ಪ್ರಸಿದ್ಧ ಡಬ್ಬಾವಾಲಾಗಳಿಗೆ ತಲುಪಿಸಲು ನಿಜವಾದ ಊಟದ ಡಬ್ಬಿಗಳನ್ನು ಕೊಟ್ಟು, ನಾಲ್ಕು ಸದಸ್ಯರ ಚಿತ್ರ ತಂಡವು ಅವರನ್ನು ಹಿಂಬಾಲಿಸಿ ಪ್ರಕ್ರಿಯೆಯನ್ನು ಸಾಕ್ಷ್ಯಚಿತ್ರ ಶೈಲಿಯಲ್ಲಿ ಚಿತ್ರೀಕರಿಸಲಾಯಿತು.[೧೪][೧೭][೧೮]
ಬಿಡುಗಡೆ ಮತ್ತು ಪ್ರತಿಕ್ರಿಯೆ
ಬದಲಾಯಿಸಿಪ್ರದರ್ಶನಗಳು ಮತ್ತು ಚಲನಚಿತ್ರೋತ್ಸವಗಳು
ಬದಲಾಯಿಸಿ೨೦೧೩ರ ಕಾನ್ ಚಲನಚಿತ್ರೋತ್ಸವದಲ್ಲಿ ಈ ಚಲನಚಿತ್ರವನ್ನು ಅಂತರರಾಷ್ಟ್ರೀಯ ವಿಮರ್ಶಕರ ವಾರದ ಭಾಗವಾಗಿ ಪ್ರದರ್ಶಿಸಲಾಯಿತು, ಮತ್ತು ಜಯಘೋಷ ಹಾಗೂ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.[೧೯][೨೦][೨೧]
ನಂತರ, ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್ ವಿತರಣೆಗಾಗಿ ಸರ್ವ ಉತ್ತರ ಅಮೇರಿಕದ ಹಕ್ಕುಗಳನ್ನು ಪಡೆದುಕೊಂಡಿತು.[೫]
ಬಾಕ್ಸ್ ಆಫ಼ಿಸ್
ಬದಲಾಯಿಸಿಅಮೇರಿಕದಲ್ಲಿ, ದ ಲಂಚ್‍ಬಾಕ್ಸ್ $4.23 ಮಿಲಿಯನ್‍ನಷ್ಟು ಗಳಿಸಿತು, ಮತ್ತು ೨೦೧೪ರ ಮೂರನೇ ಅತಿ ಹೆಚ್ಚು ಹಣಗಳಿಸಿದ ವಿದೇಶಿ ಚಿತ್ರವಾಗಿತ್ತು.[೨೨][೨೩] ಇದರ ಜೀವಮಾನದ ಓಟದಲ್ಲಿ, ಈ ಚಿತ್ರದ ವಿಶ್ವವ್ಯಾಪಿ ಹಣಗಳಿಕೆ ₹100.85 ಕೋಟಿಗಳಷ್ಟಾಗಿತ್ತು[೩] (US$17.24 ಮಿಲಿಯನ್).[೪] ಇದರ ಬಹುತೇಕ ಗಳಿಕೆ ವಿದೇಶದಿಂದ ಆಗಿತ್ತು, ಮತ್ತು ೨೦೧೩ರ ವಿದೇಶದಲ್ಲಿ ಮೂರನೇ ಅತಿ ಹೆಚ್ಚು ಹಣಗಳಿಸಿದ ಭಾರತೀಯ ಚಿತ್ರವಾಗಿತ್ತು.[೨೪]
ಆಸ್ಕರ್ ಆಯ್ಕೆಯ ವಿವಾದ
ಬದಲಾಯಿಸಿಅನೇಕ ಜನರು ವರ್ಶದಾದ್ಯಂತ ದ ಲಂಚ್‍ಬಾಕ್ಸ್ನ್ನು ೮೬ನೇ ಅಕ್ಯಾಡೆಮಿ ಅತ್ಯುತ್ತಮ ವಿದೇಶಿ ಚಲನಚಿತ್ರ ಪ್ರಶಸ್ತಿ ವರ್ಗದಲ್ಲಿ ಭಾರತದ ಆಯ್ಕೆಯಾಗಿ ಖಚಿತಗೊಳ್ಳುತ್ತದೆ ಎಂದು ಪರಿಗಣಿಸಿದ್ದರು, ಮತ್ತು ಅನೇಕ ವಿಮರ್ಶಕರು ಅದನ್ನು ಸರ್ವಾನುಮತದಿಂದ ಹೊಗಳಿದ್ದರು ಮತ್ತು ಪ್ರಾತಿನಿಧಿಕ ಚಲನಚಿತ್ರವಾಗಿ ಅದಕ್ಕೆ ಮತಚಲಾಯಿಸಿದ್ದರು.[೨೫]
ಉಲ್ಲೇಖಗಳು
ಬದಲಾಯಿಸಿ- ↑ ಉಲ್ಲೇಖ ದೋಷ: Invalid
<ref>
tag; no text was provided for refs namedSonyPC
- ↑ "The Lunchbox (PG)". British Board of Film Classification. Archived from the original on 25 ಡಿಸೆಂಬರ್ 2018. Retrieved 24 January 2014.
- ↑ ೩.೦ ೩.೧ ೩.೨ ೩.೩ "The Lunchbox". Box Office India. Archived from the original on 2 August 2015. Retrieved 12 October 2015.
- ↑ ೪.೦ ೪.೧ "Yearly Average Rates (58.5 INR per USD)". OFX. 2013. Archived from the original on 2017-07-13. Retrieved 2020-01-19.
- ↑ ೫.೦ ೫.೧ ೫.೨ "Ritesh Batra's feature debut appeared in Cannes Critics' Week". Variety. 24 May 2013. Retrieved 25 May 2013.
- ↑ "Ritesh Batra's Lunchbox wins Critics Week Viewers Choice Award at Cannes Film Festival 2013". India Today. 24 May 2013. Retrieved 25 May 2013.
- ↑ "Toronto film festival 2013: the full line-up". The Guardian. London. 23 July 2013. Retrieved 24 July 2013.
- ↑ ೮.೦ ೮.೧ ೮.೨ "Indian audience to get a taste of Batra's Lunchbox". ದಿ ಟೈಮ್ಸ್ ಆಫ್ ಇಂಡಿಯಾ. 14 August 2013. Archived from the original on 23 ಸೆಪ್ಟೆಂಬರ್ 2013. Retrieved 16 September 2013.
- ↑ "The Lunchbox (2014)". Box Office Mojo. Retrieved 2 September 2014.
- ↑ "Hindi Medium records higher box office opening than Dangal, Bajrangi Bhaijaan in China; Irrfan's highest grosser worldwide". Firstpost. Retrieved 6 April 2018.
- ↑ "Film In 2015". BAFTA. Retrieved 9 January 2015.
{{cite web}}
: External link in
(help)|ref=
- ↑ "The Lunchbox". Netflix. Retrieved 3 September 2019.
- ↑ ೧೩.೦ ೧೩.೧ ೧೩.೨ "'Lunchbox' is a very personal film: Ritesh Batra". Zee News. 5 May 2013. Retrieved 27 May 2013.
- ↑ ೧೪.೦ ೧೪.೧ ೧೪.೨ Bhushan, Nyay (23 May 2013). "Cannes: 'The Lunchbox' Director Ritesh Batra". The Hollywood Reporter. Retrieved 27 May 2013.
- ↑ "ZEE Cine Awards nominations". Archived from the original on 2 April 2015. Retrieved 1 May 2015.
- ↑ Aarti Virani. "Q&A With Ritesh Batra: Director of the Film 'The Lunchbox'". Travel + Leisure. Retrieved August 6, 2015.
- ↑ Ritesh Batra (January 23, 2014). "What was the process of shooting The Lunchbox?". Quora. Retrieved August 6, 2015.
- ↑ Helen Hu (January 27, 2014). "Q&A: Ritesh Batra, director of "The Lunchbox"". The Eagle. Retrieved August 6, 2015.
- ↑ "The Lunchbox gets standing ovation at Cannes TNN". The Times of India. 22 May 2013. Archived from the original on 21 ಸೆಪ್ಟೆಂಬರ್ 2013. Retrieved 27 May 2013.
- ↑ Saibal Chatterjee (21 May 2013). "Cannes 2013: A delicious Lunchbox and a Shootout gone awry". NDTV Movies. Archived from the original on 8 ಜೂನ್ 2013. Retrieved 25 May 2013.
- ↑ "Ritesh Batra's Lunchbox wins critics week viewers choice award at Cannes". 23 May 2013. Retrieved 26 May 2013.
- ↑ "The Lunchbox (2014)". Box Office Mojo. Retrieved 12 June 2014.
- ↑ "Foreign Language Movies at the Box Office - Box Office Mojo". Box Office Mojo. Retrieved August 7, 2015.
- ↑ "Top Overseas Grossers". Box Office India. 2013.
- ↑ Jha, Subhash K (3 September 2013). "Critics Want The Lunchbox For Oscars". rediff movies.