ಟಾಟಾ ಕಮ್ಯೂನಿಕೇಶನ್ಸ್
ಟಾಟಾ ಕಮ್ಯೂನಿಕೇಶನ್ಸ್ ನಿಯಮಿತ, ಭಾರತೀಯ ಸಂಘಟಿತ ಉದ್ಯಮ ಸಂಸ್ಥೆ ಟಾಟಾ ಸಮೂಹದ ಒಂದು ಜಾಗತಿಕ ದೂರಸಂಪರ್ಕ ಸಂಸ್ಠೆ. ಕಂಪನಿಯ ಸ್ವತ್ತುಗಳಲ್ಲಿ ಜಲಾಂತರ ಮತ್ತು ಭೂಮಿಯ ಮೇಲಿನ ಸಂಪರ್ಕ ಜಾಲಗಳು, ದತ್ತಾಂಶ ಕೇಂದ್ರಗಳು ಒಳಗೊಂಡಿವೆ. ಸಂಸ್ಠೆಯು ಸ್ಥಿರ ಮತ್ತು ನಿಸ್ತಂತು ಸೇವೆಗಳನ್ನು ಒದಗಿಸುತ್ತದೆ. ಇದು ದಕ್ಷಿಣ ಆಫ್ರಿಕಾದ ನಿಯೋಟೆಲ್, ನೇಪಾಳದ ಯುನೈಟೆಡ್ ಟೆಲಿಕಾಂ ಮತ್ತು ಶ್ರೀಲಂಕಾದ ಟಾಟಾ ಕಮ್ಯುನಿಕೇಷನ್ಸ್ ಶ್ರೀಲಂಕಾ ಲಿಮಿಟೆಡ್‍ನ ಷೇರುಗಳನ್ನು ಹೊಂದಿದೆ.[೨] ೬೨.೫೭ ದಶಲಕ್ಷ ಚಂದಾದಾರರೊಂದಿಗೆ ಭಾರತದ ಮೊಬೈಲ್ ಸೇವಾದಾರರ ಪಟ್ಟಿಯಲ್ಲಿ ೬ನೇ ಸ್ಠಾನದಲ್ಲಿರುವ ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್‍ನಲ್ಲಿಯೂ ಟಾಟಾ ಕಮ್ಯೂನಿಕೇಶನ್ಸ್ ಪಾಲನ್ನು ಹೊಂದಿದೆ.
ಸಂಸ್ಥೆಯ ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | ೧೯೮೬ |
ಸಂಸ್ಥಾಪಕ(ರು) | ಭಾರತ ಸರ್ಕಾರ |
ಮುಖ್ಯ ಕಾರ್ಯಾಲಯ | ಮುಂಬಯಿ, ಮಹಾರಾಷ್ಟ್ರ, ಭಾರತ |
ಪ್ರಮುಖ ವ್ಯಕ್ತಿ(ಗಳು) | ವಿನೋದ್ ಕುಮಾರ್ (ಸಿಇಓ ಮತ್ತು ಎಂ.ಡಿ) |
ಉದ್ಯಮ | ದೂರಸಂಪರ್ಕ |
ಆದಾಯ | ೩.೨ ಶತಕೋಟಿ ಡಾಲರ್ (೨೦೧೪)[೧] |
ಆದಾಯ(ಕರ/ತೆರಿಗೆಗೆ ಮುನ್ನ) | ೧೮೨ ದಶಲಕ್ಷ ಡಾಲರ್ (೨೦೧೧) |
ಉದ್ಯೋಗಿಗಳು | (೨೦೧೨) |
ಪೋಷಕ ಸಂಸ್ಥೆ | ಟಾಟಾ ಸಮೂಹ |
ಜಾಲತಾಣ | www |
ಇತಿಹಾಸ
ಬದಲಾಯಿಸಿಕಂಪನಿಯನ್ನು ೧೯೮೬ರಲ್ಲಿ ಭಾರತ ನರ್ಕಾರವು ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ (ವಿಎಸ್ಎನ್ಎಲ್) ಎಂದು ಸ್ಥಾಪಿಸಲಾಗಿತ್ತು, ೨೦೦೨ರಲ್ಲಿ ಟಾಟಾ ಸಮೂಹ ವಿಎಸ್ಎನ್ಎಲ್‍ನಲ್ಲಿ ಶೇಖಡ ೪೫ರಷ್ಟು ಪಾಲನ್ನು ಪಡೆದುಕೊಂಡಿತು. ವಿಎಸ್ಎನ್ಎಲ್‍ನ ಅಂತಾರಾಷ್ಟ್ರೀಯ ವಿಭಾಗವನ್ನು ವಿಎಸ್ಎನ್ಎಲ್ ಇಂಟರ್ನ್ಯಾಷನಲ್ ಎಂಬ ಹೆಸರಿನಲ್ಲಿ ೨೦೦೪ರಲ್ಲಿ ಆರಂಭಿಸಲಾಯಿತು.
೨೦೦೮ರ ಫೆಬ್ರವರಿ ೧೩ರಂದು ಟಾಟಾ ಸಮೂಹವು ವಿಎಸ್ಎನ್ಎಲನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡು ಟಾಟಾ ಕಮ್ಯೂನಿಕೇಶನ್ಸ್ ಎಂದು ಮರುನಾಮಕರಣ ಮಾಡತು. ೨೦೦೯ರಲ್ಲಿ ಟಾಟಾ ಕಮ್ಯೂನಿಕೇಶನ್ಸ್ ಮತ್ತು ಟೈಕೋ ಟೆಲಿಕಮ್ಯೂನಿಕೇಶನ್ಸ್ ಟಿಜಿಎನ್-ಇಂಟ್ರಾ ಏಷ್ಯಾ ಕೇಬಲ್ ವ್ಯವಸ್ಥೆಯನ್ನು ಪೂರ್ಣಗೊಳಿಸಿದವು. ಟಾಟಾ ಕಮ್ಯೂನಿಕೇಶನ್ಸ್ ನಿಯಮಿತ ಮುಂಬಯಿ ಷೇರು ವಿನಿಮಯ ಮಾರುಕಟ್ಟೆ ಮತ್ತು ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆಗಳಲ್ಲಿ ಪಟ್ಟಿಯಗಿದೆ.
ಸೇವೆಗಳು
ಬದಲಾಯಿಸಿಟಾಟಾ ಕಮ್ಯೂನಿಕೇಶನ್ಸ್ ೨೦೧೨ರಲ್ಲಿ ಫಾರ್ಮುಲಾ-೧ ಸ್ಪರ್ಧೆಯೊಂದಿಗೆ ಅಧಿಕೃತ ಸಂಪರ್ಕ ಪೂರೈಕೆದಾರರಾಗುವ ಒಪ್ಪಂದಕ್ಕೆ ಸಹಿ ಹಾಕಿತು. ಇದರೊಂದಿಗೆ ಕಂಪನಿಯೂ ಸ್ಪರ್ಧೆಗೆ ಅಂತರಜಾಲ ತಾಣಾ ಹಾಯಿಸುವ ಮತ್ತು ನೇರ ಸಮಯ ಸೇವೆಗಳನ್ನು ಒದಗಿಸುವಂಥ ಕೋರ್ ಡೇಟಾ ಸೇವೆಗಳನ್ನು ಕೊಡುತ್ತದೆ.[೩]
ಜನವರಿ 2016 ರಲ್ಲಿ, ವಿಂಡ್ಸ್ಟ್ರೀಮ್ ಕಮ್ಯುನಿಕೇಷನ್ಸ್, ನ್ಯೂಜೆರ್ಸಿಯ ವಾಲ್ ಟೌನ್‍ಶಿಪ್‍ನಲ್ಲಿರುವ ಟಾಟಾರವರ ಕೇಬಲ್ ಲ್ಯಾಂಡಿಂಗ್ ಸ್ಟೇಷನ್‍ನಲ್ಲಿನ (CLS) ಎನ್‍ಜೆಎಫ಼್‍ಎಕ್ಸ್‍ನ ಉಪಸ್ಥಿತಿಯಿಂದ ಆಶ್ಬರ್ನ್, ವರ್ಜೀನಿಯಾವರೆಗೆ, ತನ್ನ ೧೦೦ಜಿ ಸಂಪರ್ಕ ಜಾಲವನ್ನು ವಿಸ್ತರಿಸುವುದಾಗಿ ಘೋಷಿಸಿತು . ಇದು ವಿಶ್ವದ ಶೇಖಡ ೭೦ರಷ್ಟು ಅಂತರಜಾಲ ಸಂಚಾರದ ಕೇಂದ್ರವಾಗುವುದು ಎಂದು ಅಂದಾಜಿಸಲಾಗಿದೆ.[೪]
ದತ್ತಾಂಶ ಕೇಂದ್ರ ಸೇವೆಗಳು
ಬದಲಾಯಿಸಿಟಾಟಾ ಕಮ್ಯೂನಿಕೇಶನ್ಸ್ ಜಗತ್ತಿನಾದ್ಯಂತ ೪೪ ಮಹತ್ವದ ಸ್ಥಳಗಳಲ್ಲಿ ದತ್ತಾಂಶ ಕೇಂದ್ರ ಸೇವೆಗಳು ಒದಗಿಸುತ್ತದೆ. ಈ ಸೇವೆ ಉದ್ಯಮಗಳಿಗೆ ವೆಚ್ಚವನ್ನು ಉಳಿಸಲು ಸಹಾಯ ಮಾಡುತ್ತದೆ.
ಮೊಬೈಲ್ ಸೇವೆಗಳು
ಬದಲಾಯಿಸಿಟಾಟಾ ಕಮ್ಯೂನಿಕೇಶನ್ಸ್‌ನ ಜಾಗತಿಕ ಜಾಲಬಂಧ ಮೂಲಸೌಕರ್ಯಗಳನ್ನು ಬಳಸಿ ಧ್ವನಿ, ದತ್ತಾಂಶ, ಮೊಬೈಲ್ ಸಂದೇಶಗಳು, ವಿಡಿಯೋ, ರೋಮಿಂಗ್, ಕಾನ್ಫರೆನ್ಸಿಂಗ್ ಹೀಗೆ ಹಲವು ರೀತಿಯ ಮೊಬೈಲ್ ವಿತರಣೆ ಸೇವೆಗಳನ್ನು ಒದಗಿಸುತ್ತದೆ.[೫]
ಜಾಗತಿಕ ಮೂಲಸೌಕರ್ಯ
ಬದಲಾಯಿಸಿಐದು ಖಂಡಗಳಲ್ಲಿ ೪೦೦ರಕ್ಕೂ ಜಾಗಿತಿಕ ನೆಟ್ವರ್ಕ್ ಕೇಂದ್ರಗಳನ್ನು ಹೊಂದಿರುವ ಟಾಟಾ ಕಮ್ಯೂನಿಕೇಶನ್ಸ್, ವಿಶ್ವದ ಶೇಖಡ ೨೪ರಷ್ಟು ಅಂತರಜಾಲದ ಮಾರ್ಗಗಳ ಅಧಿಪತ್ಯವನ್ನು ಹೊಂದಿದೆ. ಸಂಸ್ಥೆಯು ೭೧೦೦೦೦ ಕಿ.ಮಿ. ಉದ್ದದ ಭೂಮಿ ಹಾಗೂ ಜಲಾಂತರದ ಫ಼ೈಬರ್ ಜಾಲಗಳನ್ನು ಹೊಂದಿದೆ. ಇದು ವಿಶ್ವದ ಅತಿ ದೊಡ್ಡ ಜಲಾಂತರ ಜಾಲವಾಗಿದೆ. ತಿಂಗಳಿಗೆ ೭೬೦೦ ಪೆಟಬೈಟ್‌ಗಳ ಅಂತರಜಾಲದ ಸಂಚಾರ ಸಂಸ್ಥೆಯ ಈ ಎಲ್ಲ ಸೌಲಭ್ಯಗಳನ್ನು ಬೆನ್ನೆಲುಬಾಗಿ ಬಳಸುತ್ತದೆ.
ಟಾಟಾ ಕಮ್ಯೂನಿಕೇಶನ್ಸ್ ವಿಶ್ವದ ಅತಿ ದೊಡ್ಡ ಸಾರ್ವಜನಿಕ ಟೆಲಿಪ್ರೆಸೆನ್ಸ್ ಜಾಲವನ್ನು ಹೊಂದಿದೆ. ಸಂಸ್ಥೆಯ ಜಾಲಗಳು ವರ್ಷಕ್ಕೆ ೫೩೦೦ ಕೋಟಿ ನಿಮಿಷಗಳಷ್ಟು ಅಂತಾರಾಷ್ಟ್ರೀಯ ಧ್ವನಿ ಕರೆಗಳಿಗೆ ಸೇವೆ ಒದಗಿಸುತ್ತವೆ. ಇದಲ್ಲದೆ ವಿಶ್ವದ ೧೬೦೦ ದೂರಸಂಪರ್ಕ ಸಂಸ್ಥೆಗಳು ಟಾಟಾ ಕಮ್ಯೂನಿಕೇಶನ್ಸ್‌ನ ಸಂಪರ್ಕ ಜಾಲಗಳನ್ನು ಬಳಸುತ್ತವೆ.[೬]
ಡಿಜಿಟಲ್ ಇಂಡಿಯಾ
ಬದಲಾಯಿಸಿಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ೨.೦ ಯೋಜನೆಗೆ ಬೆಂಬಲ ನೀಡಲು ಟಾಟಾ ಕಮ್ಯೂನಿಕೇಶನ್ಸ್ ಮುಂದಾಗಿದೆ. ಸಂಸ್ಥೆಯು ಭಾರತದಲ್ಲಿ ಮೊದಲ ಬಾರಿಗೆ ಲೋರಾ (LoRa) ಸಂಪರ್ಕ ಜಾಲವನ್ನು ಮುಂಬಯಿ, ದೆಹಲಿ ಮತ್ತು ಬೆಂಗಳೂರಿನಲ್ಲಿ ಹೊರತಂದಿದೆ. ಐಓಟಿ (ಇಂಟರ್ನೆಟ್ ಆಫ಼್ ಥಿಂಗ್ಸ್) ತಂತ್ರಜ್ಙಾನವನ್ನು ಸಕ್ರಿಯಗೊಳಿಸಲು ಟಾಟಾ ಕಮ್ಯೂನಿಕೇಶನ್ಸ್ ಸೆಮ್‌ಟೆಕ್ ಕಾರ್ಪೋರೇಶನ್‍ನೊಂದಿಗೆ ಕೈ ಜೋಡಿಸಿದೆ. ಈ ಮೂರೂ ನಗರಗಳಲ್ಲಿ ೩೫ ಪ್ರಾಯೋಗಿಕ ಯೋಜನೆಗಳನ್ನು ನಿಯೋಜಿಸಲಾಗಿದೆ. ಲಾಕರ್‌ಗಳನ್ನು ಮತ್ತು ಉಪಕರಣಗಳನ್ನು ದೂರದಿಂದ ನಿಯಂತ್ರಿಸುವುದು, ಜಲ, ವಿದ್ಯುತ್ ಹಾಗೂ ಅನಿಲ ಬಳಿಕೆಯ ನಿರ್ವಹಣೆ ಮಾಡುವ ವ್ಯವಸ್ಥೆಗಳು ಈ ಪ್ರಾಯೋಗಿಕ ಯೋಜನೆಗಳಲ್ಲಿ ಕಾಣಿಸಿಕೊಂಡವು.[೭]
ಅಧೀನ ಸಂಸ್ಥೆಗಳು
ಬದಲಾಯಿಸಿ- ಟಾಟಾ ಕಮ್ಯೂನಿಕೇಶನ್ಸ್ ಟ್ರಾನ್ಸ್ಫರ್ಮೇಷನ್ ಸೇವೆಗಳು (ಟಿಸಿಟಿಎಸ್)
- ಟಾಟಾ ಕಮ್ಯೂನಿಕೇಶನ್ಸ್ ಡೇಟಾ ಕೇಂದ್ರ ಲಿಮಿಟೆಡ್ (ಟಿಸಿಡಿಸಿ)
- ಟಾಟಾ ಕಮ್ಯೂನಿಕೇಶನ್ಸ್ ಪೇಮೆಂಟ್ ಸಲ್ಯೂಶನ್ಸ್ ಲಿಮಿಟೆಡ್(ಟಿಸಿಪಿಎಸ್‍ಎಲ್)
ಉಲ್ಲೇಖಗಳು
ಬದಲಾಯಿಸಿ- ↑ "ಟಾಟಾ ಕಮ್ಯುನಿಕೇಶನ್ಸ್ ಅಂತರಜಾಲ ತಾಣಾ". Archived from the original on 2016-11-04. Retrieved 2016-11-30.
- ↑ "ಆರ್ಕೈವ್ ನಕಲು" (PDF). Archived from the original (PDF) on 2016-03-04. Retrieved 2016-11-30.
- ↑ "ಆರ್ಕೈವ್ ನಕಲು". Archived from the original on 2012-02-26. Retrieved 2016-11-30.
- ↑ [೧]
- ↑ "ಆರ್ಕೈವ್ ನಕಲು". Archived from the original on 2016-12-30. Retrieved 2016-12-30.
- ↑ "ಆರ್ಕೈವ್ ನಕಲು". Archived from the original on 2016-11-04. Retrieved 2016-12-30.
- ↑ [೨]