ಜುರಾಸಿಕ್‌ ಪಾರ್ಕ್‌ (ಸಿನಿಮಾ)

ಜುರಾಸಿಕ್‌ ಪಾರ್ಕ್‌ ೧೯೯೩ರಲ್ಲಿ ಬಿಡುಗಡೆಯಾದ ಅಮೆರಿಕದ ಒಂದು ವೈಜ್ಞಾನಿಕ ಕಾಲ್ಪನಿಕ ಸಾಹಸ ಸಿನಿಮಾ.[೩] ಇದನ್ನು ಸ್ಟೀವನ್‌ ಸ್ಪಿಲ್‌ಬರ್ಗ್‌ ನಿರ್ದೇಶಿಸಿದ್ದಾರೆ ಮತ್ತು ಮೈಕಲ್‌ ಕ್ರೈಟನ್‌ ಬರೆದಿರುವ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಸಿನಿಮಾದಲ್ಲಿ ಸ್ಯಾಮ್‌ ನೀಲ್‌, ಲಾರಾ ಡೆರ್ನ್‌, ಜೆಫ್‌ ಗೋಲ್ಡ್‌ಬ್ಲಮ್‌ ಮತ್ತು ರಿಚರ್ಡ್‌ ಅಟೆನ್‌ಬರೋ ನಟಿಸಿದ್ದಾರೆ.

ಜುರಾಸಿಕ್ ಪಾರ್ಕ್
Jurassic Park, US.JPG
ನಿರ್ದೇಶನಸ್ಟೀವನ್‌ ಸ್ಪಿಲ್‌ಬರ್ಗ್‌
ನಿರ್ಮಾಪಕKathleen Kennedy
Gerald R. Molen
Steven Spielberg
ಚಿತ್ರಕಥೆDavid Koepp
Michael Crichton
ಆಧಾರJurassic Park 
by Michael Crichton
ಪಾತ್ರವರ್ಗSam Neill
Laura Dern
Jeff Goldblum
Richard Attenborough
Bob Peck
Martin Ferrero
B.D. Wong
Samuel L. Jackson
Wayne Knight
Joseph Mazzello
Ariana Richards
ಸಂಗೀತJohn Williams
ಛಾಯಾಗ್ರಹಣDean Cundey
ಸಂಕಲನMichael Kahn
ಸ್ಟುಡಿಯೋAmblin Entertainment
ವಿತರಕರುUniversal Pictures
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೭".
 • ಜೂನ್ 11, 1993 (1993-06-11)
ಅವಧಿ೧೨೭ minutes
ದೇಶಟೆಂಪ್ಲೇಟು:Film US
ಭಾಷೆEnglish
Spanish
ಬಂಡವಾಳ$೬೩ million[೧]
ಬಾಕ್ಸ್ ಆಫೀಸ್$೯೧೪,೬೯೧,೧೧೮[೨]

ಈ ಸಿನಿಮಾ ಪೆಸಿಫಿಕ್ ತೀರದ ಮಧ್ಯ ಅಮೆರಿಕದಲ್ಲಿ ಕೋಸ್ಟಾ ರಿಕಾದ ಬಳಿಯ ಕಾಲ್ಪನಿಕ ಐಸ್ಲ ನ್ಯುಬ್ಲರ್‌ನಲ್ಲಿ ಒಬ್ಬ ಪರೋಪಕಾರಿ ಕೋಟ್ಯಧಿಪತಿ ಮತ್ತು ವಂಶವಾಹಿ ವಿಜ್ಞಾನಿಗಳ ಒಂದು ಸಣ್ಣ ತಂಡ ಸೇರಿ ಕ್ಲೋನ್‌ ಮಾಡಿದ ಡೈನೋಸಾರ್‌‌ಗಳ ಮನೋರಂಜನಾ ಪಾರ್ಕ್‌ ಹುಟ್ಟುಹಾಕಿದ ಕಥೆಯನ್ನು ಕೇಂದ್ರವಾಗಿಟ್ಟುಕೊಂಡಿದೆ.

ಕ್ರೈಟನ್‌ ಅವರ ಕಾದಂಬರಿ ಪ್ರಕಟವಾಗುವುದಕ್ಕಿಂತ ಮೊದಲೇ, ವಾರ್ನರ್ ಬ್ರದರ್ಸ್‌, ಕೊಲಂಬಿಯಾ, ಟ್ರೈಸ್ಟಾರ್‌, ೨೦ಯತ್‌ ಸೆಂಚುರಿ ಫಾಕ್ಸ್ ಮತ್ತು ಯುನಿವರ್ಸಲ್‌ ಸ್ಟುಡಿಯೋಗಳು ಅದನ್ನು ಸಿನಿಮಾ ಮಾಡುವ ಹಕ್ಕುಗಳಿಗಾಗಿ ಪ್ರಯತ್ನ ನಡೆಸಿದ್ದವು. ಯುನಿವರ್ಸಲ್‌ ಸ್ಟುಡಿಯೋಸ್‌ ಬೆಂಬಲದೊಂದಿಗೆ ಸ್ಪಿಲ್‌‌ಬರ್ಗ್‌, ಕಾದಂಬರಿಯ್ ೧೯೯೦ರಲ್ಲಿ ಪ್ರಕಟವಾಗುವುದಕ್ಕಿಂತ ಮೊದಲೇ ಅದರ ಹಕ್ಕುಗಳನ್ನು ಪಡೆದುಕೊಂಡರು ಮತ್ತು ಕ್ರೈಟನ್‌ಗೆ ಕಾದಂಬರಿಯನ್ನು ಚಿತ್ರಕಥೆ ರೂಪಕ್ಕೆ ತರಲು ಹೆಚ್ಚುವರಿ ೫೦೦,೦೦೦ ಡಾಲರ್‌ ಹಣ ನೀಡಿದರು.[೪] ಡೇವಿಡ್‌ ಕೋಪ್‌ ಅಂತಿಮ ಕರಡನ್ನು ಸಿದ್ಧಪಡಿಸಿದರು, ಕಾದಂಬರಿಯ ಬಹುಭಾಗವನ್ನು ಮತ್ತು ಹಿಂಸಾತ್ಮಕ ದೃಶ್ಯಗಳನ್ನು ಕೈಬಿಟ್ಟರು. ಜೊತೆಗೆ ಪಾತ್ರ ಚಿತ್ರಣದಲ್ಲಿಯೂ ಸಾಕಷ್ಟು ಬದಲಾವಣೆ ಮಾಡಿದರು.

ಜುರಾಸಿಕ್‌ ಪಾರ್ಕ್‌ ಸಿನಿಮಾ ಕಂಪ್ಯೂಟರ್‌‌ನಿಂದ ರೂಪಿಸಿದ ದೃಶ್ಯಗಳನ್ನು ಬಳಸಿದ ಸಿನಿಮಾಗಳಲ್ಲಿ ಒಂದು ಮೈಲುಗಲ್ಲು ಎಂದು ಪರಿಗಣಿಸಲಾಗಿದೆ. ಜೊತೆಗೆ ಸಿನಿಮಾಕ್ಕೆ ಅತ್ಯುತ್ತಮ ವಿಮರ್ಶೆಯೂ ದೊರೆಯಿತು. ಸಿನಿಮಾ ಬಿಡುಗಡೆದಾಗ, ವಿಶ್ವಾದ್ಯಂತ ೯೧೪ ದಶಲಕ್ಷ ಡಾಲರ್‌ಗೂ ಅಧಿಕ ಹಣವನ್ನು ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿತು. ಇದು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಆವರೆಗೆ ಬಿಡುಗಡೆಯಾದ ಎಲ್ಲ ಸಿನಿಮಾಗಳ ದಾಖಲೆಯನ್ನು ಮೀರಿಸಿತು (ಇ.ಟಿ. ದಿ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್‌ ಸಿನಿಮಾದ ದಾಖಲೆಯನ್ನೂ ಮೀರಿಸಿತ್ತು.) ೪ ವರ್ಷಗಳ ನಂತರ ಬಿಡುಗಡೆಯಾದ ಟೈಟಾನಿಕ್ ) ಇದರ ದಾಖಲೆಯನ್ನು ಮೀರಿಸಿತು. ಸದ್ಯ ಈ ಸಿನಿಮಾ ೧೬ನೇ ಅತ್ಯಧಿಕ ಗಳಿಕೆಯ ಸಿನಿಮಾ ಆಗಿದೆ. (ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ, ಉತ್ತರ ಅಮೆರಿಕಾದಲ್ಲಿ ೧೮ನೇ ಅತ್ಯಧಿಕ ಗಳಿಕೆಯ ಸಿನಿಮಾ ಆಗಿದೆ). ಇದು ಎನ್‌ಬಿಸಿಯುನಿವರ್ಸಲ್‌ ಮತ್ತು ಸ್ಟೀವನ್‌ ಸ್ಪಿಲ್‌ಬರ್ಗ್‌ಗೆ ಹಣಕಾಸಿನ ದೃಷ್ಟಿಯಿಂದ ಅತ್ಯಂತ ಯಶಸ್ಸು ತಂದುಕೊಟ್ಟ ಸಿನಿಮಾ ಆಗಿದೆ. ಅತ್ಯುತ್ತಮ ಶಬ್ದ ಮಿಶ್ರಣ (ಸೌಂಡ್‌ ಮಿಕ್ಸಿಂಗ್), ಅತ್ಯುತ್ತಮ ಶಬ್ದ ಸಂಕಲನ ಮತ್ತು ಅತ್ಯುತ್ತಮ ದೃಶ್ಯ ಪರಿಣಾಮ (ವಿಶುವಲ್‌ ಇಫೆಕ್ಟ್‌) ವಿಭಾಗಗಳಲ್ಲಿ ಅಕಾಡೆಮಿ ಪ್ರಶಸ್ತಿ ಗಳಿಸಿದೆ.

ಕಥಾವಸ್ತುಸಂಪಾದಿಸಿ

ಇನ್‌ಜೆನ್‌(InGen) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ, ವಿಲಕ್ಷಣ ಸ್ವಭಾವದ ಕೋಟ್ಯಧಿಪತಿ ಜಾನ್‌ ಹ್ಯಮಂಡ್‌ (ರಿಚರ್ಡ್‌ ಅಟೆನ್‌ಬರೋ) ಜುರಾಸಿಕ್‌ ಪಾರ್ಕ್‌: ಎಂಬ ಥೀಮ್‌ ಪಾರ್ಕ್‌ ಅನ್ನು ಸ್ಥಾಪಿಸಿರುತ್ತಾನೆ. ಅದರಲ್ಲಿ ಪ್ರಾಗೈತಿಹಾಸಕ್ಕೆ ಸೇರಿದ ಪಳೆಯುಳಿಕೆ ರಾಳ (ಆಂಬರ್‌)ದಲ್ಲಿ ರಕ್ಷಿತವಾಗಿದ್ದ ಕೀಟಗಳಿಂದ ಪಡೆದ ಡಿಎನ್‌ಎದಿಂದ ಕ್ಲೋನ್‌ ಮಾಡಿದ ಡೈನೋಸಾರ್‌‌ಗಳನ್ನು ಇಟ್ಟಿರುತ್ತಾರೆ. ಪೆಸಿಫಿಕ್ ತೀರದ ಕೋಸ್ಟಾ ರಿಕಾದ ಒಂದು ದ್ವೀಪದಲ್ಲಿ ಈ ಉದ್ಯಾನ (ಪಾರ್ಕ್‌) ಇರುತ್ತದೆ.

ಪಾರ್ಕ್‌ನ ಕೆಲಸಗಾರನ ಮೇಲೆ ಒಂದು ಡೈನೋಸಾರ್‌‌ ದಾಳಿ ಮಾಡಿದ ನಂತರ, ಹ್ಯಮಂಡ್‌ನ ಹೂಡಿಕೆದಾರರ ಪ್ರತಿನಿಧಿಯಾಗಿರುವ ವಕೀಲ ಡೊನಾಲ್ಡ್‌ ಜೆನರೊ (ಮಾರ್ಡಿನ್‌ ಫೆರೆರೋ) ತಜ್ಞರು ಪಾರ್ಕ್‌ಗೆ ಭೇಟಿ ನೀಡಿ ಅದು ಸುರಕ್ಷಿತ ಎಂಬುದನ್ನು ಪರಿಶೀಲಿಸಬೇಕೆಂದು ಆಗ್ರಹಿಸುತ್ತಾನೆ. ಜೆನರೋ ಡಾ. ಇಯಾನ್ ಮಾಲ್ಕಮ್‌ (ಜೆಫ್‌ ಗೋಲ್ಡ್‌ಬಲ್ಮ್‌) ಎಂಬ ಗಣಿತಜ್ಞನನ್ನು ಆಹ್ವಾನಿಸಿದರೆ ಹ್ಯಮಂಡ್‌ ಪ್ರಾಗ್ಜೀವ ವಿಜ್ಞಾನಿ ಡಾ. ಅಲಾನ್‌ ಗ್ರಾಂಟ್‌ (ಸ್ಯಾಮ್‌ ನೈಲ್‌) ಮತ್ತು ಪ್ರಾಗ್ಜೀವ ವಿಜ್ಞಾನಿ ಡಾ. ಎಲ್ಲೀ ಸಟ್ಲರ್‌ (ಲಾರಾ ಡರ್ನ್‌) ಅವರನ್ನು ಪಾರ್ಕ್‌ಗೆ ಆಹ್ವಾನಿಸುತ್ತಾರೆ. ದ್ವೀಪಕ್ಕೆ ಬರುವ ಇವರಿಬ್ಬರೊಂದಿಗೆ ಹ್ಯಮಂಡ್‌ರ ಇಬ್ಬರು ಮೊಮ್ಮಕ್ಕಳು ಟಿಮ್‌ (ಜೋಸೆಫ್‌ ಮಜೆಲೋ) ಮತ್ತು ಲೆಕ್ಸ್‌ ಮರ್ಫಿ (ಅರಿಯನಾ ರಿಚರ್ಡ್ಸ್) ಸೇರಿಕೊಳ್ಳುತ್ತಾರೆ. ಈ ಗುಂಪು ಪಾರ್ಕ್‌ನಲ್ಲಿ ಶೋಧನೆಗೆ ತೊಡಗಿಕೊಳ್ಳುತ್ತಾರೆ. ಹ್ಯಮಂಡ್‌ ತನ್ನ ಅತಿಥಿಗಳನ್ನು ಮುಖ್ಯ ತಂತ್ರಜ್ಞ ರೇ ಅರ್ನಾಲ್ಡ್‌ (ಸ್ಯಾಮ್ಯುಯೆಲ್‌ ಎಲ್‌ ಜಾಕ್‌ಸನ್‌) ಮತ್ತು ತನ್ನ ಗೇಮ್‌ ವಾರ್ಡನ್‌ ಆಗಿರುವ ರಾಬರ್ಟ್‌ ಮುಲ್ಡೂನ್‌ (ಬಾಬ್‌ ಪೆಕ್‌) ಅವರೊಂದಿಗೆ ಸೇರಿ ಗಮನಿಸುತ್ತಿರುತ್ತಾನೆ.

ಪ್ರಧಾನ ಕಂಪ್ಯೂಟರ್‌ ಪ್ರೋಗ್ರಾಮರ್‌ ಆಗಿರುವ ಡೆನಿಸ್‌ ನೆಡ್ರಿ (ವೆಯ್ನ್‌ ನೈಟ್‌) ರಹಸ್ಯವಾಗಿ ಇನ್‌ಜೆನ್‌ ಕಂಪನಿಯ ಕಾರ್ಪೊರೇಟ್‌ ಎದರಾಳಿಯೊಂದಿಗೆ ಸೇರಿಕೊಳ್ಳುತ್ತಾನೆ ಮತ್ತು ಫಲಿತಗೊಂಡಿದ್ದ ಡೈನೋಸಾರ್‌‌ ಭ್ರೂಣಗಳನ್ನು ಕದಿಯಲು ಹಣ ಪಡೆದಿರುತ್ತಾನೆ. ಹಾಗೆ ಕಳವು ಮಾಡುವಾಗ, ನೆಡ್ರಿಯು ಭ್ರೂಣದ ಸಂಗ್ರಹಾಗಾರಕ್ಕೆ ಪ್ರವೇಶ ಪಡೆಯಲಿಕ್ಕಾಗಿ ಪಾರ್ಕ್‌ನ ರಕ್ಞಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿರುತ್ತಾನೆ. ಇನ್ನುಳಿದ ಗುಂಪಿನವರು, ರಕ್ಷಣಾ ವ್ಯವಸ್ಥೆ ನಿಷ್ಕ್ರಿಯಗೊಂಡಿದ್ದರಿಂದ ಪಾರ್ಕ್‌ನಲ್ಲಿ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇವರ ಮೇಲೆ ತನ್ನ ಆವರಣದ ಬೇಲಿಯಿಂದ ತಪ್ಪಿಸಿಕೊಳ್ಳುವ ಟಿರನೋಸಾರಸ್‌ ದಾಳಿ ಮಾಡಿ, ಜೆನೆರೋನನ್ನು ಸಾಯಿಸುತ್ತದೆ ಮತ್ತು ಇಯಾನ್‌ನ್ನು ಗಾಯಗೊಳಿಸುತ್ತದೆ. ಟಿಮ್‌ ಮತ್ತು ಲೆಕ್ಸ್ ಅವರೊಂದಿಗೆ ಗ್ರಾಂಟ್‌ ತಪ್ಪಿಸಿಕೊಳ್ಳಲು ಶಕ್ಯನಾಗುತ್ತಾನೆ. ಭ್ರೂಣಗಳನ್ನು ತೆಗೆದುಕೊಂಡು ಪರಾರಿಯಾಗುವ ನೆಡ್ರಿಯ ಪ್ರಯತ್ನ ವಿಫಲವಾಗುತ್ತದೆ ಮತ್ತು ಅವನಿಗೆದುರಾಗಿ ಬಂದ ಡಿಲೊಫೊಸಾರಸ್‌ ದಾಳಿ ಮಾಡಿ, ಅವನನ್ನು ಸಾಯಿಸುತ್ತದೆ.

ರಕ್ಷಣಾ ಬೇಲಿ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸಲು ನೆಡ್ರಿಯ ಸಂಕೇತಾಕ್ಷರಗಳು ಗೊತ್ತಾಗದೇ, ಹ್ಯಮಂಡ್‌ ಇಡೀ ಸಿಸ್ಟಮ್‌ಅನ್ನು ರಿಬೂಟ್‌ ಮಾಡಲು ಶಿಫಾರಸು ಮಾಡುತ್ತಾನೆ. ಆತ ಪಾರ್ಕ್‌ನ ಸಿಸ್ಟಮ್‌ಅನ್ನು ಶಟ್‌ಡೌನ್‌ ಮಾಡಿ, ಎಲ್ಲೀ, ಅರ್ನಾಲ್ಡ್‌, ಮುಲ್ಡೂನ್‌ ಮತ್ತು ಮಾಲ್ಕಮ್‌ ಅವರೊಂದಿಗೆ ಸೇರಿ ತುರ್ತುಸ್ಥಿತಿ ಬಂಕರ್‌ನಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿಂದ ಅರ್ನಾಲ್ಡ್‌ ಸಿಸ್ಟಮ್‌ಅನ್ನು ರಿಬೂಟ್‌ ಮಾಡಲು ನಿರ್ವಹಣಾ ಬಂಕರ್‌ನತ್ತ ಸಾಗುತ್ತಾನೆ. ಆತ ಹಿಂತಿರುಗಿ ಬಾರದಿದ್ದಾಗ, ಮುಲ್ಡೂನ್‌ ಮತ್ತು ಎಲ್ಲೀ ಬಂಕರ್‌ನತ್ತ ಹೋಗುತ್ತಾರೆ. ಇದೇ ವೇಳೆಗೆ, ಗ್ರಾಂಟ್‌ ಮತ್ತು ಮಕ್ಕಳು ಅದೇ ಮೊಟ್ಟೆಗಳಿದ್ದ ಒಂದು ಗೂಡನ್ನು ಕಂಡುಹಿಡಿಯುತ್ತಾರೆ ಮತ್ತು ಡೈನೋಸಾರ್‌‌ಗಳು ತಮ್ಮಷ್ಟಕ್ಕೆ ಮರಿಮಾಡಲು ಶುರುಮಾಡಿವೆ ಎಂಬುದನ್ನು ಇದು ಸೂಚಿಸುತ್ತದೆ.

ಮುಲ್ಡೂನ್‌ ಮತ್ತು ಎಲ್ಲೀ ನಿರ್ವಹಣಾ ಬಂಕರ್‌ನತ್ತ ಸಾಗುತ್ತಿದ್ದಂತೆ, ಮುಲ್ಡೂನ್‌ಗೆ ತಮ್ಮನ್ನು ರಾಪ್ಟರ್‌ಗಳು ಬೇಟೆಯಾಡುತ್ತಿವೆ ಎಂಬುದನ್ನು ಗಮನಿಸುತ್ತಾನೆ. ಮುಲ್ಡೂನ್‌ನನ್ನು ವೆಲೊಸಿರಾಪ್ಟರ್ಸ್‌ ಕೊಲ್ಲುತ್ತದೆ. ಎಲ್ಲೀ ಹಾಗೂ ಹೀಗೂ ಬಂಕರ್‌ನತ್ತ ಸಾಗಿ, ಪಾರ್ಕ್‌ ಸಿಸ್ಟಮ್‌ ಅನ್ನು ಪುನಾ ಶುರುಮಾಡುತ್ತಾಳೆ. ಇದೇ ಸಮಯದಲ್ಲಿ ಟಿಮ್‌, ಲೆಕ್ಸ್‌ ಮತ್ತು ಗ್ರಾಂಟ್‌ ಪಾರ್ಕ್‌ನ ಹೊರಗಿರುವ ಪ್ರಾಣಿಗಳ ವಲಯದ ವಿದ್ಯುತ್‌ ಬೇಲಿಯನ್ನು ಹತ್ತಿರುತ್ತಾರೆ ಮತ್ತು ಸಿಸ್ಟಮ್‌ ಪುನಾ ಶುರುವಾದೊಡನೆ ಬೇಲಿಯಲ್ಲಿ ವಿದ್ಯುತ್‌ ಹರಿಯಲಾರಂಭಿಸಿ, ಟಿಮ್‌ ಇನ್ನೇನು ಸಾಯುತ್ತಾನೆ ಎಂಬ ಸ್ಥಿತಿಗೆ ಬರುತ್ತಾನೆ.

ಗ್ರಾಂಟ್‌ ಮತ್ತು ಮಕ್ಕಳು ಅತಿಥಿಗಳ ಕೇಂದ್ರದ ಕಟ್ಟಡದತ್ತ ಬರುತ್ತಾರೆ. ಆತ ಮಕ್ಕಳನ್ನಷ್ಟೇ ಅಲ್ಲಿಯ ಅಡುಗೆ ಮನೆಯಲ್ಲಿ ಬಿಟ್ಟು, ತಾನು ಸೆಟ್ಲರ್ ಮತ್ತು ಇತರರೊಂದಿಗೆ ಸೇರಿಕೊಳ್ಳುತ್ತಾನೆ. ಮಕ್ಕಳು ಗ್ರಾಂಟ್‌ ಮತ್ತು ಎಲ್ಲೀ ಜೊತೆ ಸೇರಿಕೊಳ್ಳುವ ಮೊದಲು ಎರಡು ರಾಪ್ಟರ್‌ಗಳಿಂದ ಪಾರಾಗುತ್ತಾರೆ. ಲೆಕ್ಸ್‌ ನಿಯಂತ್ರಣಾ ಕೊಠಡಿಯಿಂದ ಕೆಲಸ ಮಾಡುತ್ತ ಪಾರ್ಕ್‌ನ ರಕ್ಷಣಾ ವ್ಯವಸ್ಥೆ ಸರಿಹೋಗುವಂತೆ ಮಾಡುತ್ತಾನೆ. ಗ್ರಾಂಟ್‌ ಹ್ಯಮಂಡ್‌ಗೆ ಕರೆ ಮಾಡಿ, ತಮ್ಮನ್ನು ಪಾರುಮಾಡಲು ಹೊರಗಿನಿಂದ ರಕ್ಷಣಾ ವ್ಯವಸ್ಥೆಯನ್ನು ಕರೆಸಬೇಕೆಂದು ಕೇಳಿಕೊಳ್ಳುತ್ತಾರೆ. ಆದರೆ ಅಷ್ಟರಲ್ಲಿ ಎರಡು ರಾಪ್ಟರ್‌ಗಳು ಈ ಗುಂಪನ್ನು ನೋಡಿ, ದಾಳಿ ಮಾಡುತ್ತವೆ.

ಗುಂಪು ಅಲ್ಲಿಂದ ಹೊಗೆಕೊಳವೆಯ ಮೂಲಕ ಪಾರಾಗುತ್ತದೆ. ಆದರೆ ಅವರು ತಪ್ಪಿಸಿಕೊಂಡು ಪ್ರವೇಶ ಕೊಠಡಿಗೆ ಬಂದರೆ ಅಲ್ಲಿ ರಾಪ್ಟರ್‌ಗಳು ಮೇಲೆ ಎರಗಲು ಸಿದ್ಧವಾಗಿರುತ್ತವೆ. ಆದರೆ ಅಷ್ಟರಲ್ಲಿ ಟಿ. ರೆಕ್ಸ್‌ ಮುಖ್ಯ ದ್ವಾರವನ್ನು ಮುರಿದು, ಒಳನುಗ್ಗಿ ರಾಪ್ಟರ್‌ಗಳ ಮೇಲೆ ಆಕ್ರಮಣ ಮಾಡುತ್ತದೆ. ಆಗ ಈ ನಾಲ್ವರೂ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಹೋಗುತ್ತಾರೆ. ಅಲ್ಲಿಂದ ಮಾಲ್ಕಮ್‌ ಮತ್ತು ಹ್ಯಮಂಡ್‌ ಅವರನ್ನು ಪಾರುಮಾಡಿ, ಕರೆದುಕೊಂಡು ಹೋಗುತ್ತಾರೆ.

ಪಾತ್ರವರ್ಗಸಂಪಾದಿಸಿ

 • ಪ್ರಮುಖ ಪ್ರಾಗ್ಜೀವ ವಿಜ್ಞಾನಿ ಮತ್ತು ಮುಖ್ಯ ಪಾತ್ರಧಾರಿ ಡಾ. ಅಲಾನ್‌ ಗ್ರಾಂಟ್‌ ಆಗಿ ಸ್ಯಾಮ್‌ ನೀಲ್‌ ನಟಿಸಿದ್ದಾನೆ.
 • ಪ್ರಾಗ್ಜೀವ ಜೀವವಿಜ್ಞಾನಿ, ಡಾ. ಎಲ್ಲೀ ಸೆಟ್ಲರ್‌ ಆಗಿ ಲಾರಾ ಡೆರ್ನ್‌ .
 • ಗಣಿತಜ್ಞ ಮತ್ತು ಗೊಂದಲಮಯ ಸಿದ್ಧಾಂತವಾದಿ ಡಾ. ಇಯಾನ್ ಮಾಲ್ಕಮ್‌ ಆಗಿ ಜೆಫ್‌ ಗೋಲ್ಡ್‌ಬಲ್ಮ್‌
 • ಕೋಟ್ಯಧಿಪತಿ, ಇನ್‌ಜೆನ್‌ ಸಿಇಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಮತ್ತು ಜುರಾಸಿಕ್‌ ಪಾರ್ಕ್‌ನ ರೂವಾರಿ, ಮೇಲ್ವಿಚಾರಕ ಜಾನ್‌ ಹ್ಯಮಂಡ್‌ ಆಗಿ ರಿಚರ್ಡ್‌ ಅಟೆನ್‌ಬರೋ
 • ಹ್ಯಮಂಡ್‌ನ ಮೊಮ್ಮಗಳು, ಲೆಕ್ಸ್‌ ಮರ್ಫಿಯಾಗಿ ಅರಿಯನಾ ರಿಚರ್ಡ್ಸ್‌. ಕಥೆ ಮುಂದುವರೆದಂತೆ ಗ್ರಾಂಟ್‌ ಜೊತೆ ಸ್ನೇಹದ ಬಾಂಧವ್ಯ ಹೊಂದುತ್ತಾಳೆ.
 • ಲೆಕ್ಸ್‌ಳ ಕಿರಿಯ ತಮ್ಮ ಟಿಮ್‌ ಮರ್ಫಿಯಾಗಿ ಜೋಸೆಫ್‌ ಮಜೆಲ್ಲೊ. ಇವನು ಡೈನೋಸಾರಸ್‌ಗಳ ಅಭಿಮಾನಿ. ಇವನಿಗೂ ಗ್ರಾಂಟ್‌ ಜೊತೆ ಅಕ್ಕರೆಯ ಸಂಬಂಧ ಉಂಟಾಗುತ್ತದೆ.
 • ಜುರಾಸಿಕ್‌ ಪಾರ್ಕ್‌ನ ಕಂಪ್ಯೂಟರ್‌ ಸಿಸ್ಟಮ್‌ಗಳ ಅತೃಪ್ತ ವಾಸ್ತುಶಿಲ್ಪಿ ಡೆನಿಸ್‌ ನೆಡ್ರಿ ಆಗಿ ವೆಯ್ನ್‌ ನೈಟ್‌. ಇವನು ಬಯೋಸಿನ್‌ ಬೇಹುಗಾರನಿರುತ್ತಾನೆ.
 • ಪಾರ್ಕಿನ ಗೇಮ್‌ ವಾರ್ಡನ್‌ ರಾಬರ್ಟ್‌ ಮುಲ್ಡೂನ್‌ ಆಗಿ ಬಾಬ್‌ ಪೆಕ್‌.
 • ಹ್ಯಮಂಡ್‌ನ ಸಂಬಂಧಿತ ಹೂಡಿಕೆದಾರರನ್ನು ಪ್ರತಿನಿಧಿಸುವ ವಕೀಲ ಡೊನಾಲ್ಡ್‌ ಜೆನೆರೋ ಆಗಿ ಮಾರ್ಟಿನ್‌ ಫೆರೆರೋ.
 • ಪಾರ್ಕಿನ ಮುಖ್ಯ ಇಂಜಿನಿಯರ್ ರೇ ಅರ್ನಾಲ್ಡ್‌ ಆಗಿ ಸಾಮ್ಯುಯೆಲ್‌ ಎಲ್‌ ಜಾಕ್‌ಸನ್‌ .
 • ಪಾರ್ಕಿನ ಮುಖ್ಯ ಜೆನೆಟಿಸ್ಟ್ ಡಾ. ಹೆನ್ರಿ ವು ಆಗಿ ಬಿ. ಡಿ. ವಾಂಗ್‌ .
 • ಇನ್‌ಜೆನ್‌ ಕಂಪನಿಯ ಪ್ರತಿಸ್ಪರ್ಧಿ ಕಾರ್ಪೊರೇಶನ್‌ ಬಯೋಸಿನ್‌ ಮುಖ್ಯಸ್ಥ ಲೂಯಿಸ್ ಡಾಡ್‌ಸನ್‌ ಆಗಿ ಕೆಮರಾನ್ ಥಾರ್‌.

ಚಿತ್ರೀಕರಣಸಂಪಾದಿಸಿ

ಮೈಕಲ್‌ ಕ್ರೈಟನ್‌ ಮೊದಲು ಒಬ್ಬ ಪದವಿ ಹುಡುಗ ಡೈನೋಸಾರ್‌ಅನ್ನು ಪುನಾಸೃಜಿಸುವ ಚಿತ್ರಕಥೆಯ ಕುರಿತು ಮೊದಲು ಯೋಚಿಸಿದ್ದ; ನಂತರ ಆತ ಡೈನೋಸಾರ್‌‌ಗಳ ಮತ್ತು ಕ್ಲೋನಿಂಗ್ ಕುರಿತು ಯೋಚಿಸುತ್ತ, ಕೊನೆಗೆ ಜುರಾಸಿಕ್‌ ಪಾರ್ಕ್‌ ಕಾದಂಬರಿಯನ್ನು ಬರೆಯಲಾರಂಭಿಸಿದ.[೫] ಅದು ಪ್ರಕಟಗೊಳ್ಳುವ ಮೊದಲೇ, ೧೯೮೯ರ ಅಕ್ಟೋಬರ್‌ನಲ್ಲಿ ಸ್ಪಿಲ್‌ಬರ್ಗ್‌ ಕ್ರೈಟನ್‌ ಜೊತೆ ದೂರದರ್ಶನ ಧಾರಾವಾಹಿ ಇಆರ್‌ ಗೆ ಚಿತ್ರಕತೆ ಕುರಿತು ಚರ್ಚಿಸುವಾಗ, ಈ ಕಾದಂಬರಿಯ ವಿಚಾರ ಸ್ಪಿಲ್‌ಬರ್ಗ್‌ಗೆ ಗೊತ್ತಾಗುತ್ತದೆ.[೬] ಪುಸ್ತಕ ಪ್ರಕಟಗೊಳ್ಳುವ ಮೊದಲೇ, ಕ್ರೈಟನ್‌ ಚೌಕಾಶಿಗೆ ಆಸ್ಪದವಿಲ್ಲದಂತೆ ೧.೫ ದಶಲಕ್ಷ ಡಾಲರ್‌ಗಳನ್ನು ಮತ್ತು ಸಿನಿಮಾದ ಒಟ್ಟುಗಳಿಕೆಯಲ್ಲಿಯೂ ಸಾಕಷ್ಟು ಪಾಲನ್ನು ಕೇಳಿದರು. ವಾರ್ನರ್‌ ಬ್ರದರ್ಸ್‌ ಮತ್ತು ಟಿಮ್‌ ಬರ್ಟನ್‌, ಸೋನಿ ಪಿಕ್ಚರ್ಸ್‌ ಎಂಟರ್‌ಟೈನ್‌ಮೆಂಟ್‌ ಮತ್ತು ರಿಚರ್ಡ್‌ ಡೊನರ್‌, ಮತ್ತು ೨೦ಯತ್‌ ಸೆಂಚುರಿ ಫಾಕ್ಸ್‌ ಮತ್ತು ಜೋ ಡಾಂಟೆ ಚಿತ್ರದ ಹಕ್ಕುಗಳಿಗಾಗಿ ಬಿಡ್ ಮಾಡಿದರು. ಆದರೆ [೬] ಸ್ಪಿಲ್‌ಬರ್ಗ್‌ಗಾಗಿ ಮೇ ೧೯೯೦ರಂದು ಯುನಿವರ್ಸಲ್‌ನವರು ಹಕ್ಕುಗಳನ್ನು ಕೊಂಡುಕೊಂಡರು.[೭] ಯುನಿವರ್ಸಲ್‌ನವರು ಕ್ರೈಟನ್‌ಗೆ ಕಾದಂಬರಿಯನ್ನು ಚಿತ್ರಕಥೆಗೆ ಅಳವಡಿಸಲು ಹೆಚ್ಚುವರಿ ೫೦೦,೦೦೦ ಡಾಲರ್‌ ಹಣ ನೀಡಿದರು.[೮] ಆತ ಅದನ್ನು ಮುಗಿಸುವ ವೇಳೆಗೆ ಸ್ಪಿಲ್‌ಬರ್ಗ್‌ ಹುಕ್‌ ಚಿತ್ರೀಕರಣ ಮಾಡುತ್ತಿದ್ದನು. ಕಾದಂಬರಿ ಸುದೀರ್ಘವಾಗಿದ್ದದ್ದರಿಂದ ಅದರ ಶೇ. ೧೦ರಿಂದ ೨೦ರಷ್ಟನ್ನು ಮಾತ್ರ ಚಿತ್ರಕಥೆಗೆ ಅಳವಡಿಸಲಾಯಿತು ಎಂದು ಕ್ರೈಟನ್‌ ಹೇಳಿದ್ದಾನೆ; ಬಜೆಟ್‌ ಮತ್ತು ಪ್ರಾಯೋಗಿಕ ಕಾರಣಗಳಿಗಾಗಿ ಹಲವಾರು ದೃಶ್ಯಗಳನ್ನು ಕೈಬಿಡಲಾಯಿತು.[೯] ಹುಕ್‌ ಸಿನಿಮಾ ಮುಗಿಸಿದ ನಂತರ ಸ್ಪಿಲ್‌ಬರ್ಗ್‌ ಷಿಂಡ್ಲರ್ಸ್‌ ಲಿಸ್ಟ್‌ ಸಿನಿಮಾ ಮಾಡಲು ಬಯಸಿದ್ದ. ಮ್ಯೂಸಿಕ್‌ ಕಾರ್ಪೊರೇಶನ್‌ ಆಫ್‌ ಅಮೆರಿಕಾ (ನಂತರ ಮಾತೃ ಕಂಪನಿಯಾದ ಯುನಿವರ್ಸಲ್‌ ಪಿಕ್ಚರ್ರ್ಸ್‌) ಅಧ್ಯಕ್ಷ ಸಿಡ್‌ ಶೈನ್‌ಬರ್ಗ್‌ ಈ ಸಿನಿಮಾ ಮಾಡಲು ಒಂದು ಷರತ್ತಿನ ಮೇಲೆ ಒಪ್ಪಿದರು: ಸ್ಪಿಲ್‌ಬರ್ಗ್‌ ಜುರಾಸಿಕ್‌ ಪಾರ್ಕ್‌ ಅನ್ನು ಮೊದಲು ಮಾಡಬೇಕು ಎಂಬುದೇ ಆ ಕರಾರು. ಸ್ಪೀಲ್‌ಬರ್ಗ್‌ ನಂತರ, "ನಾನು ಒಮ್ಮೆ ಷಿಂಡ್ಲರ್‌ ಚಿತ್ರವನ್ನು ನಿರ್ದೇಶಿಸಿದರೆ, ನಂತರ ಜುರಾಸಿಕ್‌ ಪಾರ್ಕ್‌ ಚಿತ್ರವನ್ನು ಮಾಡಲಾರೆ ಎಂದು ಅವರಿಗೆ ಗೊತ್ತಿತ್ತು" ಎಂದು ಆಮೇಲೆ ಹೇಳಿದ್ದಾರೆ.[೬]

ಸ್ಪಿಲ್‌ಬರ್ಗ್‌ ಸ್ಟಾನ್‌ ವಿನ್ಸ್‌ಟನ್‌ ಅವರನ್ನು ಅನಿಮೇಟ್ರಾನಿಕ್‌ ಡೈನೋಸಾರ್‌‌ಗಳನ್ನು ಸೃಷ್ಟಿಸಲು ನೇಮಿಸಿಕೊಂಡರು. ಲಾಂಗ್‌ ಶಾಟ್‌ಗಳಲ್ಲಿ ಗೋ ಮೋಶನ್‌ (ಚಲನಾತ್ಮಕ) ಡೈನೋಸಾರ್‌‌ಗಳನ್ನು ಸೃಷ್ಟಿಸಲು ಫಿಲ್‌ ಟಿಪ್ಪೆಟ್‌ರನ್ನು ಮತ್ತು ಆನ್‌ಸೆಟ್‌ ಎಫೆಕ್ಟ್‌ಗಳ ಮೇಲ್ವಿಚಾರಣೆಗೆ ಮೈಕೆಲ್‌ ಲಾಂಟಿರಿ ಮತ್ತು ಡಿಜಿಟಲ್‌ ಕಾಂಪೋಸಿಂಗ್‌ಗಾಗಿ ಡೆನಿಸ್‌ ಮ್ಯುರೆನ್‌ ಅವರನ್ನು ನೇಮಿಸಿಕೊಂಡಿದ್ದರು. ಪ್ರಾಗ್ಜೀವ ವಿಜ್ಞಾನಿ ಜಾಕ್‌ ಹಾರ್ನರ್‌ ವಿನ್ಯಾಸಗಳನ್ನು ಮೇಲ್ವಿಚಾರಣೆ ಮಾಡಿದರು ಮತ್ತು ಡೈನೋಸಾರ್‌ಗಳನ್ನು ರಾಕ್ಷಸರ ಬದಲಿಗೆ ಪ್ರಾಣಿಗಳ ಹಾಗೆ ಚಿತ್ರಿಸುವ ಸ್ಪಿಲ್‌ಬರ್ಗ್‌ನ ಆಶಯ ಸಾಕಾರಗೊಳ್ಳಲು ನೆರವಾದರು. ಟಿಪ್ಪೆಟ್‌ ಮೊದಲು ರೂಪಿಸಿದ್ದ ಅನಿಮೇಶನ್‌‌ ಚಿತ್ರಗಳಲ್ಲಿ ರಾಪ್ಟರ್‌ಗಳ ನಾಲಿಗೆ ಹಿಂದೆಮುಂದೆ ಅಲ್ಲಾಡುತ್ತಿರುವಂತೆ ಚಿತ್ರಿಸಿದ್ದನ್ನು[೧೦] ನೋಡಿ, ಅವನ್ನು ಅಲ್ಲಗೆಳೆದ ಹಾರ್ನರ್‌, "ಡೈನೋಸಾರ್‌ಗಳು ಹಾಗೆ ಮಾಡಲು ಸಾಧ್ಯವೇ ಇಲ್ಲ!' ಎಂದ. ಹಾರ್ನರ್‌ ಸಲಹೆಯನ್ನು ಪರಿಗಣಿಸಿದ ಸ್ಪಿಲ್‌ಬರ್ಗ್‌ ಟಿಪ್ಪೆಟ್‌ಗೆ ಆ ರೀತಿಯನ್ನು ನಾಲಿಗೆಯನ್ನು ತೆಗೆಯುವಂತೆ ಒತ್ತಾಯಿಸಿದ.[೧೧] ವಿನ್ಸ್‌ಟನ್‌ನ ವಿಭಾಗದವರು ಲ್ಯಾಟೆಕ್ಸ್‌ ಚರ್ಮವನ್ನು ರೂಪಿಸುವ ಮೊದಲು ಡೈನೋಸಾರ್‌‌ಗಳ ವಿವರವಾದ ಮಾದರಿಗಳನ್ನು ರೂಪಿಸಿದರು ಮತ್ತು ನಂತರ ಅವನ್ನು ಸಂಕೀರ್ಣವಾದ ರೊಬಾಟಿಕ್ಸ್‌ಗೆ ಅಳವಡಿಸಲಾಯಿತು. ಟಿಪ್ಪೆಟ್‌ ಪ್ರಮುಖ ದೃಶ್ಯಗಳಲ್ಲಿ ಸ್ಥಿರ-ಚಲನೆಯ ಅನಿಮ್ಯಾಟಿಕ್‌ಗಳನ್ನು ರೂಪಿಸಿದರು. ಆದರೆ ಅವುಗಳ ಅಸ್ಪಷ್ಟ ಚಲನಾತ್ಮಕ ಚಿತ್ರಗಳನ್ನು ಗೋ ಮೋಶನ್‌ನಲ್ಲಿಡುವ ಪ್ರಯತ್ನ ಮಾಡಿದರೂ, ಲಿವ್‌-ಆಕ್ಷನ್‌ ಸಿನಿಮಾದ ಕೆಲಸ ಮಾಡುವ ಹಿನ್ನೆಲೆಯಲ್ಲಿ ಅವು ಅತೃಪ್ತಿಕರವಾಗಿವೆ ಎಂದು ಸ್ಪಿಲ್‌ಬರ್ಗ್‌ ಭಾವಿಸಿದರು.[೧೦] ಮಾರ್ಕ್‌ ಡಿಪ್ಪಿ ಮತ್ತು ಸ್ಟೀವ್‌ ವಿಲಿಯಮ್ಸ್‌ ಟಿ. ರೆಕ್ಸ್‌ ಅಸ್ಥಿಪಂಜರಕ್ಕೆ ಕಂಪ್ಯೂಟರ್‌‌ ಅನಿಮೇಟೆಡ್‌ ವಾಕ್‌ ಸೈಕಲ್‌ ರಚಿಸಿದರು. ನಂತರ ಅವರಿಗೆ ಇನ್ನಷ್ಟು ಹಾಗೆ ಮಾಡಲು ಚಿತ್ರತಂಡದಿಂದ ಬೇಡಿಕೆ ಬಂದಿತು.[೧೨] ಟಿ. ರೆಕ್ಸ್‌ ಗ್ಯಾಲಿಮಸ್‌ ಗಳ ಒಂದು ಗುಂಪನ್ನು ಅಟ್ಟಿಸಿಕೊಂಡು ಹೋಗುವ ಅನಿಮೇಶನ್‌ ಚಿತ್ರವನ್ನು ಸ್ಪಿಲ್‌ಬರ್ಗ್‌ ಮತ್ತು ಟಿಪ್ಪೆಟ್‌ ಕಂಡಾಗ, "ನಿನ್ನನ್ನು ಕೆಲಸದಿಂದ ಹೊರಹಾಕಿದಂತೆಯೇ ಸರಿ" ಎಂದು , ಸ್ಪಿಲ್‌ಬರ್ಗ್‌ ಟಿಪ್ಪೆಟ್‌ಗೆ ಹೇಳಿದರಂತೆ. ಅದಕ್ಕೆ ಟಿಪ್ಪೆಟ್‌ "ಅಂದರೆ ನಿರ್ನಾಮಗೊಳ್ತೀನಿ ಎಂದು ಅರ್ಥವೇ" ಎಂದು ಕೇಳುತ್ತಾನೆ.[೧೦] ಸ್ಪಿಲ್‌ಬರ್ಗ್‌ ನಂತರದಲ್ಲಿ ಅನಿಮ್ಯಾಟಿಕ್ ಮತ್ತು ತಮ್ಮಿಬ್ಬರ ನಡುವಣ ಸಂಭಾಷಣೆಯನ್ನು ಮಾಲ್ಕಮ್‌ ಮತ್ತು ಗ್ರಾಂಟ್‌ ನಡುವಣ ಸಂಭಾಷಣೆಯ ಹಾಗೆ ಚಿತ್ರಕಥೆಗೆ ಸೇರಿಸಿದರು.[೧೩] ಪಕ್ಕದಲ್ಲಿ ನಿಂತು ಅವರಿಬ್ಬರನ್ನು ಗಮನಿಸುತ್ತಿದ್ದ ಜಾರ್ಜ್‌ ಲ್ಯುಕಾಸ್‌ರಿಗೆ ಕಣ್ಣೀರು ತುಂಬಿ ಬಂದಿತ್ತು. "ಅದು ಇತಿಹಾಸದಲ್ಲಿ ಬಲ್ಬಿನ ಶೋಧ ಅಥವಾ ದೂರವಾಣಿಯ ಶೋಧದ ಅಮೂಲ್ಯ ಕ್ಷಣಗಳಂತೆ ಇತ್ತು." ಎಂದು ಆತ ಹೇಳಿದ್ದಾನೆ. "ಒಂದು ದೊಡ್ಡ ಕಂದಕವನ್ನು ದಾಟಿದೆವು ಮತ್ತು ನಂತರದಲ್ಲಿ ಸಂಗತಿಗಳು ಮತ್ತೆ ಮೊದಲಿನಂತೆ ಇರಲಿಲ್ಲ" ಎಂದು ನಂತರ ಅವರು ಹೇಳಿದರು.[೧೪] ಜುರಾಸಿಕ್‌ ಪಾರ್ಕ್‌ನಲ್ಲಿ ಯಾವುದೇ ಗೋ ಮೋಶನ್‌ ಚಿತ್ರಗಳನ್ನು ಬಳಸದಿದ್ದರೂ, ಫಿಲ್‌ ಟಿಪ್ಪೆಟ್‌ ಮತ್ತು ಆತನ ಅನಿಮೇಟರ್‌ಗಳು ಡೈನೋಸಾರ್‌‌ಗಳು ಹೇಗೆ ಸರಿಯಾಗಿ ಚಲಿಸಬೇಕು ಎಂಬುದನ್ನು ಅರಿತಿದ್ದರು. ಟಿಪ್ಪೆಟ್‌ ಡೈನೋಸಾರ್‌‌ ಅನಾಟಮಿಯ ಕುರಿತ ಸಮಾಲೋಚಕನಂತೆ ಕೆಲಸ ಮಾಡಿದ ಮತ್ತು ಆತನ ಸ್ಟಾಪ್‌ ಮೋಶನ್‌ ಅನಿಮೇಟರ್‌ಗಳು ಕಂಪ್ಯೂಟರ್‌ ಅನಿಮೇಟರ್‌ಗಳಾಗಿ ಪುನಾ-ತರಬೇತಿ ಪಡೆದರು.[೧೦]

ಮಲಿಯಾ ಸ್ಕಾಚ್‌ ಮರ್ಮೊ ಚಿತ್ರಕಥೆಯನ್ನು ೧೯೯೧ರ ಅಕ್ಟೋಬರ್‌ನಿಂದ ಐದು ತಿಂಗಳವರೆಗೆ ಪುನಾ ಬರೆಯಲಾರಂಭಿಸಿದರು. ಆತ ಇಯಾನ್‌ ಮಾಲ್ಕಮ್‌ ಅವರನ್ನು ಅಲಾನ್‌ ಗ್ರಾಂಟ್‌ ಪಾತ್ರದೊಂದಿಗೆ ಸೇರಿಸಿದ.[೧೫] ಚಿತ್ರಕಥೆಗಾರ ಡೇವಿಡ್‌ ಕೋಪ್‌ ನಂತರ ಇದರಲ್ಲಿ ತೊಡಗಿಕೊಂಡರು, ಅವರು ಮೆರ್ಮೊ ಬರೆದ ಚಿತ್ರಕಥೆಯನ್ನು ಮತ್ತೆ ಸರಿಪಡಿಸಲಾರಂಭಿಸಿದರು. ಕ್ರೈಟನ್‌ ಅವರ ಕಾದಂಬರಿಯ ನಿರೂಪಣೆಯ ಬಹುಭಾಗವನ್ನು ಆವರಿಸಿದ ಭಾಗವನ್ನು ತೆಗೆದುಹಾಕಲು ಅತಿಥಿಗಳಿಗೆ ಕಾರ್ಟೂನ್‌ಗಳನ್ನು ತೋರಿಸುವ ಸ್ಪಿಲ್‌ಬರ್ಗ್‌ ಅವರ ಕಲ್ಪನೆಯನ್ನು ಆತ ಬಳಸಿಕೊಂಡ.[೧೬] ಸ್ಪಿಲ್‌ಬರ್ಗ್‌ ಪ್ರೊಕಂಪ್ಸೊಗ್ನೇತಸ್‌ ಎಂಬ ಡೈನೋಸಾರ್‌ ಒಂದು ಪಾರ್ಕ್‌ನಿಂದ ತಪ್ಪಿಸಿಕೊಂಡು ಹೊರಗೆ ಹೋಗಿ, ಮಕ್ಕಳ ಮೇಲೆ ದಾಳಿ ಮಾಡುವ ಇನ್ನೊಂದು ಉಪಕಥೆಯನ್ನು ಯೋಚಿಸಿದ, ಅದು ತುಂಬ ಭಯಾನಕವಾಗಿರುತ್ತದೆ ಎಂದು ಅವನು ಯೋಚಿಸಿದ.[೧೭] ಈ ಉಪ-ಕಥಾನಕವನ್ನು ಸ್ಪಿಲ್‌ಬರ್ಗ್‌ ನಂತರ ನಿರ್ದೇಶಿಸಿದ ಇದೇ ಸರಣಿಯ ದಿ ಲಾಸ್ಟ್‌ ವರ್ಲ್ಡ್ ನಲ್ಲಿ ಬಳಸಿಕೊಂಡ. ಹ್ಯಮಂಡ್‌ನನ್ನು ನಿಷ್ಕರಣಿ ಉದ್ದಿಮೆದಾರನಿಂದ ಒಳ್ಳೆಯ ವೃದ್ಧನಾಗಿ ಬದಲಾಯಿಸಲಾಯಿತು. ಸ್ಪಿಲ್‌ಬರ್ಗ್‌ ಹ್ಯಮಂಡ್‌ಗೆ ತುಂಬ ಪ್ರದರ್ಶನದ ಗೀಳು ಇರುತ್ತದೆ ಎಂದು ಗುರುತಿಸಿರುತ್ತಾನೆ.[೧೮] ಜೊತೆಗೆ ಆತ ಟಿಮ್ ಮತ್ತು ಲೆಕ್ಸ್‌ ಪಾತ್ರಗಳನ್ನೂ ಸ್ವಲ್ಪ ಬದಲಿಸಿರುತ್ತಾನೆ; ಪುಸ್ತಕದಲ್ಲಿ ಟಿಮ್‌ ೧೧ ವರ್ಷದವನಾಗಿದ್ದು, ಕಂಪ್ಯೂಟರ್‌ಗಳಲ್ಲಿ ಆಸಕ್ತಿ ಹೊಂದಿರುತ್ತಾನೆ ಮತ್ತು ಲೆಕ್ಸ್‌ ಇನ್ನೂ ಏಳೆಂಟು ವರ್ಷದವಳಿದ್ದು, ಕ್ರೀಡೆಯಲ್ಲಿ ಆಸಕ್ತಿ ಹೊಂದಿರುತ್ತಾಳೆ. ಸ್ಪಿಲ್‌ಬರ್ಗ್‌ ಹೀಗೆ ಮಾಡಿದ್ದು ಏಕೆಂದರೆ ಆತ ಕಿರಿಯವನಾದ ಜೋಸೆಫ್‌ ಮಜೆಲ್ಲೋನನ್ನು ಆ ಪಾತ್ರಕ್ಕೆ ತೆಗೆದುಕೊಂಡಿರುತ್ತಾನೆ. ಜೊತೆಗೆ ಹೀಗೆ ಮಾಡುವುದರಿಂದ ಲೆಕ್ಸ್‌ಗೆ ಗ್ರಾಂಟ್‌ ಕುರಿತು ಹದಿವಯಸ್ಸಿನ ಒಲವು ಇರುವ ಉಪ-ಕಥೆಯನ್ನು ಪರಿಚಯಿಸಲು ಆಸ್ಪದ ನೀಡುತ್ತಿತ್ತು.[೧೯] ಕೋಪ್‌ ಮಕ್ಕಳೊಂದಿಗೆ ಗ್ರಾಂಟ್‌ನ ಸಂಬಂಧವನ್ನು ಸ್ವಲ್ಪ ಬದಲಿಸಿದ್ದಾನೆ. ಮೊದಲು ಗ್ರಾಂಟ್‌ ಮಕ್ಕಳೊಂದಿಗೆ ವೈರಿಯಂತೆ ಇರುತ್ತಾನೆ, ಅದು ಪಾತ್ರ ಬೆಳವಣಿಗೆ ಹೆಚ್ಚು ಅವಕಾಶ ಒದಗಿಸಿದೆ.[೬] ಕೋಪ್‌ ಕಾದಂಬರಿಯ ಒಂದು ಮುಖ್ಯ ಸನ್ನಿವೇಶವನ್ನು ಆಯವ್ಯಯದ ಕಾರಣಕ್ಕಾಗಿ ಕತ್ತರಿಸಿದ್ದಾನೆ. ಅದೆಂದರೆ ಟಿ. ರೆಕ್ಸ್‌ ಗ್ರಾಂಟ್‌ ಮತ್ತು ಮಕ್ಕಳನ್ನು ನದಿ ಇಳಿಜಾರಿನಲ್ಲಿ ಅಟ್ಟಿಸಿಕೊಂಡು ಹೋಗುವುದು, ನಂತರ ಮುಲ್ಡೂನ್‌ ಅದನ್ನು ಮೂರ್ಛೆ ತಪ್ಪಿಸುತ್ತಾನೆ. ಈ ದೃಶ್ಯವನ್ನು ಇದೇ ಸರಣಿಯ ಜುರಾಸಿಕ್‌ ಪಾರ್ಕ್‌ III ಸಿನಿಮಾದಲ್ಲಿ ಚಿತ್ರೀಕರಿಸಲಾಗಿದ್ದು, ಇದರಲ್ಲಿ ಟಿ. ರೆಕ್ಸ್‌ ಬದಲಿಗೆ ಸ್ಪಿನೊಸಾರಸ್‌ ಈ ದೃಶ್ಯದಲ್ಲಿ ಭಾಗವಹಿಸಿದೆ.[೧೬]

೨೫ ತಿಂಗಳು ಚಿತ್ರೀಕರಣದ ಪೂರ್ವ ತಯಾರಿಯ ನಂತರ ಹವಾಯಿ ದ್ವೀಪಗಳಲ್ಲಿ ಒಂದಾದ ಕವಾʻಯಿ ದ್ವೀಪದಲ್ಲಿ ೧೯೯೨ರ ಆಗಸ್ಟ್‌ ೨೪ರಂದು ಚಿತ್ರೀಕರಣವನ್ನು ಆರಂಭಿಸಿದರು.[೨೦] ಮೂರು ವಾರಗಳ ಚಿತ್ರೀಕರಣವು ಹಲವಾರು ಹೊರಾಂಗಣ ದೃಶ್ಯಗಳನ್ನು ಒಳಗೊಂಡಿತ್ತು.[೭] ಸೆಪ್ಟೆಂಬರ್‌ ೧೧ರಂದು, ಇನಿಕಿ ಚಂಡಮಾರುತ (ಹರಿಕೇನ್‌ ಇನಿಕಿ) ಕವಾʻಯಿ ದ್ವೀಪದ ಮೇಲೆ ಅಪ್ಪಳಿಸಿತು, ಅದರಿಂದ ಚಿತ್ರತಂಡವು ಒಂದು ದಿನದ ಚಿತ್ರೀಕರಣವನ್ನು ಕಳೆದುಕೊಂಡಿತು.[೨೧] ಆದರೆ ಸಿನಿಮಾದಲ್ಲಿ ನಂತರ ಬಳಸಿದ ಬಿರುಗಾಳಿಯ ಹಲವಾರು ದೃಶ್ಯಗಳು ಚಂಡಮಾರುತ ಅಪ್ಪಳಿಸಿದ ಸಮಯದಲ್ಲಿ ಚಿತ್ರೀಕರಿಸಿಕೊಂಡ ನೈಜ ದೃಶ್ಯಗಳಾಗಿದ್ದವು. ಪೂರ್ವನಿಯೋಜಿತವಾಗಿದ್ದ ಗ್ಯಾಲಿಮಿಮಸ್‌ ಬೆನ್ನಟ್ಟುವ ದೃಶ್ಯದ ಚಿತ್ರೀಕರಣವನ್ನು ಓಹು ದ್ವೀಪದ ಕೌಲಾ ರಾಂಚ್‌ಗೆ ಸ್ಥಳಾಂತರಿಸಿದರು ಮತ್ತು ಒಂದು ದೃಶ್ಯದ ಸ್ಟಿಲ್‌ ಶಾಟ್‌ ಅನ್ನು ಡಿಜಿಟಲಿ ಅನಿಮೇಟ್‌ ಮಾಡಿ, ಆರಂಭದ ಒಂದು ದೃಶ್ಯವನ್ನು ಸೃಷ್ಟಿಸಬೇಕಾಯಿತು.[೧೩] ಚಿತ್ರೀಕರಣ ತಂಡವು ನಂತರ ದ್ವೀಪದಿಂದ ಮರಳಿ ಅಮೆರಿಕಕ್ಕೆ ಬಂದು, ಯುನಿವರ್ಸಲ್‌ ಸ್ಟುಡಿಯೋಸ್‌ನ ಸ್ಟೇಜ್‌ ೨೪ರಲ್ಲಿ ಅಡುಗೆಮನೆಯಲ್ಲಿ ರಾಪ್ಟರ್‌ಗಳನ್ನು ಒಳಗೊಂಡಂತೆ ಇನ್ನುಳಿದ ದೃಶ್ಯಗಳನ್ನು ಚಿತ್ರೀಕರಿಸಿದರು.[೭] ಚಿತ್ರತಂಡವು ಸ್ಟೇಜ್‌ ೨೩ ಸ್ಟುಡಿಯೋದಲ್ಲಿ ಕೂಡ ಪವರ್‌ ಸಪ್ಲೈ ದೃಶ್ಯಗಳನ್ನು ಚಿತ್ರೀಕರಿಸಿಕೊಂಡರು. ನಂತರ ಮೊಂಟಾನಾದ ರೆಡ್‌ ರಾಕ್‌ ಕ್ಯಾನಿಯನ್ನಲ್ಲಿ ಅಗೆಯುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡರು.[೨೨] ಚಿತ್ರತಂಡವು ಮತ್ತೆ ಯುನಿವರ್ಸಲ್‌ ಸ್ಟುಡಿಯೋಸ್‌ಗೆ ಮರಳಿ ಬಂದು, ಟಿಮ್‌ನನ್ನು ಗ್ರಾಂಟ್‌ ಪಾರುಮಾಡುವ ದೃಶ್ಯವನ್ನು ಮತ್ತು ಬ್ರಶಿಯೊಸಾರಸ್ ನೊಂದಿಗೆ ಮುಖಾಮುಖಿ ಆಗುವುದನ್ನು ಚಿತ್ರೀಕರಿಸಿದರು. ಇದರಲ್ಲಿ ಕಾರು ಬೀಳುವ ದೃಶ್ಯಕ್ಕೆ ಹೈಡ್ರಾಲಿಕ್‌ ಚಕ್ರಗಳ ಮೇಲೆ ಐವತ್ತು ಅಡಿ ಎತ್ತರದ ಪ್ರಾಪ್‌ ಬಳಸಲಾಯಿತು. ಜೊತೆಗೆ ಪಾರ್ಕ್‌ನ ಪ್ರಯೋಗಾಲಯ, ನಿಯಂತ್ರಣಾ ಕೊಠಡಿಗಳನ್ನು ಚಿತ್ರೀಕರಿಸಿದರು. ಸಿಲಿಕಾನ್‌ ಗ್ರಾಫಿಕ್ಸ್‌ ಮತ್ತು ಆಪಲ್‌ ಕಂಪನಿಯಿಂದ ಕಂಪ್ಯೂಟರ್‌ಗಳನ್ನು ಬಾಡಿಗೆಗೆ ಪಡೆದು ಅನಿಮೇಶನ್‌ಗೆ ಬಳಸಿದರು.[೨೩]

ನಂತರ ಚಿತ್ರತಂಡವು ವಾರ್ನರ್‌ ಬ್ರದರ್ಸ್‌ ಸ್ಟುಡಿಯೋಸ್‌ನ ಸ್ಟೇಜ್‌ ೧೬ ಸ್ಟುಡಿಯೋದಲ್ಲಿ ಟಿ. ರೆಕ್ಸ್‌ ಪ್ರವಾಸೀ ಕಾರುಗಳ ಮೇಲೆ ಆಕ್ರಮಣ ಮಾಡುವ ದೃಶ್ಯವನ್ನು ಚಿತ್ರೀಕರಿಸಿದರು.[೨೩] ಅನಿಮ್ರಾಟಿಕ್ ಡೈನೋಸಾರ್‌‌ನ ಫೋಮ್‌ ರಬ್ಬರ್ ಚರ್ಮವು ನೀರಿನಲ್ಲಿ ನೆಂದಿದ್ದರಿಂದ ಶೂಟಿಂಗ್‌ ತೀವ್ರ ಬೇಸರ ಹುಟ್ಟಿಸುವಂತೆ ಆಯಿತು.[೨೪] ತನ್ನ ಕಾರಿನಲ್ಲಿ ಕೂತು ಅರ್ಥ್‌, ವಿಂಡ್‌ ಆಂಡ್‌ ಫೈರ್‌ ಬ್ಯಾಂಡ್‌ನ ಸಂಗೀತವನ್ನು ಮತ್ತು ಬಾಸ್‌ ಲಯ ಹುಟ್ಟುಹಾಕಿದ ಕಂಪನವನ್ನು ಕೇಳಿದ ಸ್ಪಿಲ್‌ಬರ್ಗ್‌ಗೆ ನೀರಿನ ಗ್ಲಾಸ್‌ನಲ್ಲಿ ಅಲೆಗಳನ್ನು ಟಿ. ರೆಕ್ಸ್‌  '​ನ ಹೆಜ್ಜೆಗಳ ಹಾಗೆ ತೆಗೆದುಕೊಳ್ಳಲು ಸ್ಫೂರ್ತಿ ನೀಡಿತು. ಲಾಂಟೈರಿಗೆ ಶಾಟ್‌ ಅನ್ನು ಹೇಗೆ ತೆಗೆದುಕೊಳ್ಳಬೇಕೆಂಬುದು ಸಿನಿಮಾ ಚಿತ್ರೀಕರಣದ ಹಿಂದಿನ ರಾತ್ರಿಯವರೆಗೂ ಖಚಿತವಿರಲಿಲ್ಲ. ಅವನು ತಾನು ನುಡಿಸುತ್ತಿದ್ದ ಗಿಟಾರ್‌ ಒಳಗೆ ಒಂದು ಗ್ಲಾಸ್ ನೀರನ್ನು ಹಾಕಿ, ಸ್ಪಿಲ್‌ಬರ್ಗ್‌ ಬಯಸಿದ್ದ ನೀರಿನಲ್ಲಿ ಏಕಕೇಂದ್ರಿತ ವೃತ್ತಗಳನ್ನು ಪಡೆಯಲು ಶಕ್ಯನಾದ. ಮರುದಿನ ಬೆಳಗ್ಗೆ, ಗಿಟಾರ್‌ ತಂತಿಗಳನ್ನು ಕಾರಿನ ಕಾರಿನ ಒಳಗಿಟ್ಟು, ನೆಲೆದ ಮೇಲೆ ನಿಂತು ಒಬ್ಬ ತಂತಿಗಳನ್ನು ಮೀಟುವ ಮೂಲಕ ತಮಗೆ ಬೇಕಾದ ಧ್ವನಿಪರಿಣಾಮ ಪಡೆಯುವಲ್ಲಿ ಸಫಲರಾದರು.[೨೫] ಮತ್ತೆ ಯುನಿವರ್ಸಲ್‌ ಸ್ಡುಡಿಯೋಗೆ ಮರಳಿ, ಡಿಲೊಫಾಸಾರಸ್‌ ಜೊತೆಗಿನ ದೃಶ್ಯಗಳನ್ನು ಸ್ಟೇಜ್‌ ೨೭ ಸ್ಟುಡಿಯೋದಲ್ಲಿ ಚಿತ್ರೀಕರಿಸಿಕೊಂಡರು. ಅಂತಿಮವಾಗಿ, ಸ್ಟೇಜ್‌ ೧೨ ಸ್ಟುಡಿಯೋದಲ್ಲಿ ಪಾರ್ಕ್‌ನ ಕಂಪ್ಯೂಟರ್‌ ಕೊಠಡಿಗಳಲ್ಲಿ ಮತ್ತು ವಿಸಿಟರ್ಸ್‌ ಸೆಂಟರ್‌ನಲ್ಲಿ ರಾಪ್ಟರ್‌ಗಳು ಬೆನ್ನತ್ತುವ ಕ್ಲೈಮಾಕ್ಸ್‌ ದೃಶ್ಯ ಚಿತ್ರೀಕರಿಸುವುದರೊಂದಿಗೆ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದರು.[೨೬] ಸ್ಪಿಲ್‌ಬರ್ಗ್‌ ತಾವು ಮೊದಲು ಯೋಜಿಸಿದಂತೆ ಗ್ರಾಂಟ್‌ ಒಂದು ಪ್ಲಾಟ್‌ಫಾರ್ಮ್‌ ಯಂತ್ರ ಬಳಸಿಕೊಂಡು ಒಂದು ರಾಪ್ಟರ್‌ನನ್ನು ಟಿರನೋಸಾರಸ್‌ನ ಪಳೆಯುಳಿಕೆ ದವಡೆಗೆ ನೂಕುವ ದೃಶ್ಯವನ್ನು ಕೈಬಿಟ್ಟು, ಟಿ. ರೆಕ್ಸ್‌ ನನ್ನು ಪುನಾ ಕ್ಲೈಮಾಕ್ಸ್‌ಗೆ ತಂದರು.[೨೭] ಮೊದಲು ಯೋಜಿಸಿದ್ದಕ್ಕಿಂತ ಹನ್ನೆರಡು ದಿನಗಳ ಮೊದಲೇ ನವೆಂಬರ್‌ ೩೦ರಂದೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿತು.[೭][೨೮][೨೯] ಕೆಲವೇ ದಿನಗಳಲ್ಲಿ ಸಂಕಲನಕಾರ ಮೈಕೆಲ್‌ ಕನ್‌ ಒಂದು ರಫ್‌ ಕಟ್‌ ಸಿದ್ಧಪಡಿಸಿದರು. ಇದರಿಂದ ಸ್ಪಿಲ್‌ಬರ್ಗ್‌ ಷಿಂಡ್ಲರ್ಸ್‌ ಲಿಸ್ಟ್‌‌ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.[೩೦]

ಸಿನಿಮಾಗೆ ಸ್ಪೆಶಲ್‌ ಇಫೆಕ್ಟ್‌ ಕೊಡುವ ಕೆಲಸ ಮುಂದುವರೆಯಿತು. ಟಿಪ್ಪೆಟ್‌ ಅವರ ಘಟಕವು ಡೈನೋಸಾರ್‌‌ ಇನ್‌ಪುಟ್‌ ಡಿವೈಸ್‌ನೊಂದಿಗೆ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡಿತು:[೩೧] ಮಾಡೆಲ್‌ಗಳು ಕಂಪ್ಯೂಟರ್‌ಗಳಿಗೆ ಮಾಹಿತಿ ನೀಡಿದಾಗ, ಪಾತ್ರಗಳನ್ನು ಸಾಂಪ್ರದಾಯಿಕ ವಿಧಾನದಲ್ಲಿ ಅನಿಮೇಟ್‌ ಮಾಡಲು ಆಸ್ಪದವಿತ್ತು. ಜೊತೆಗೆ, ಅವರು ರಾಪ್ಟರ್‌ಗಳು ಮತ್ತು ಗ್ಯಾಲಿಮಿಮಸ್‌‌ ಜೊತೆಗಿನ ದೃಶ್ಯಗಳೊಂದಿಗೂ ಕೆಲಸ ಮಾಡಿದರು. ಅಲ್ಲದೇ ಕಂಪ್ಯೂಟರ್‌-ಜನರೇಟೆಡ್‌ ಡೈನೋಸಾರ್‌‌ಗಳನ್ನು ರೂಪಿಸಿದರು ಮತ್ತು ಐಎಲ್‌ಎಂಗಳಿಂದ ನೀರು ಎರಚುವುದು ಮತ್ತು ಅರಿಯಾನ ರಿಚರ್ಡ್ಸ್‌ನ ಸ್ಟಂಟ್‌ ದೃಶ್ಯಗಳಲ್ಲಿ ಡಿಜಿಟಲ್‌ ಮೂಲಕ ಮುಖ ಬದಲಾವಣೆ ಮಾಡುವುದು ಇಂತಹ ಕೆಲವನ್ನು ಸೃಷ್ಟಿಸಲು ಸಾಧ್ಯವಾಯಿತು.[೧೦] ಡೈನೋಸಾರ್‌‌ಗಳನ್ನು ಜೀವಂತ ದೃಶ್ಯಗಳಲ್ಲಿ (ಲಿವ್‌ ಆಕ್ಷನ್‌) ಸಂಯೋಜಿಸುವ ಕೆಲಸವು ಒಂದು ಗಂಟೆ ಸಮಯ ತೆಗೆದುಕೊಂಡಿತು. ಡೈನೋಸಾರ್‌‌ಗಳನ್ನು ಕಂಪ್ಯೂಟರ್‌ನಲ್ಲಿ ರೆಂಡರಿಂಗ್ ಮಾಡುವುದು ಪ್ರತಿ ಫ್ರೇಮ್‌ಗೆ ಎರಡರಿಂದ ನಾಲ್ಕು ಗಂಟೆ ಸಮಯ ತೆಗೆದುಕೊಂಡಿತ್ತು ಮತ್ತು ಟಿ. ರೆಕ್ಸ್‌ ಮಳೆಯಲ್ಲಿದ್ದ ದೃಶ್ಯಗಳು ಪ್ರತಿ ಫ್ರೇಮ್‌ಗೆ ಆರು ಗಂಟೆ ಸಮಯವನ್ನೂ ತೆಗೆದುಕೊಂಡಿತ್ತು.[೩೨] ಸ್ಪಿಲ್‌ಬರ್ಗ್‌ ಇವರೆಲ್ಲರ ಕೆಲಸದ ಪ್ರಗತಿಯನ್ನು ಪೋಲಂಡ್‌ನಿಂದಲೇ ಮೇಲ್ವಿಚಾರಣೆ ಮಾಡುತ್ತಿದ್ದರು.[೩೩] ಸಂಗೀತ ಸಂಯೋಜಕ ಜಾನ್‌ ವಿಲಿಯಮ್ಸ್‌ ಚಿತ್ರ ಸಂಗೀತದ ಕುರಿತು ಫೆಬ್ರವರಿ ಕೊನೆಯಲ್ಲಿ ಕೆಲಸ ಮಾಡಲಾರಂಭಿಸಿದರು. ಒಂದು ತಿಂಗಳಿನ ನಂತರ ಜಾನ್‌ ನ್ಯುಫೆಲ್ಡ್‌ ಮತ್ತು ಅಲೆಕ್ಸಾಂಡರ್‌ ಕರೇಜ್‌ ಸಂಗೀತದ ಧ್ವನಿಮುದ್ರಣವನ್ನು ಮಾಡಿದರು.[೩೪] ಸೌಂಡ್‌ ಇಫೆಕ್ಟ್‌ ತಂಡವನ್ನು ಜಾರ್ಜ್‌ ಲ್ಯುಕಾಸ್‌ ಮೇಲ್ವಿಚಾರಣೆ ಮಾಡಿದ್ದರು [೩೫] ಮತ್ತು ಏಪ್ರಿಲ್‌ ಕೊನೆಯ ವೇಳೆಗೆ ಪೂರ್ಣಗೊಳಿಸಿದರು. ಅಂತೂ ಜುರಾಸಿಕ್‌ ಪಾರ್ಕ್‌ ೧೯೯೩ ಮೇ ೨೮ರಂದು ಪೂರ್ಣಗೊಂಡಿತು.[೩೪]

ತೆರೆಯ ಮೇಲೆ ಡೈನೋಸಾರ್‌‌ಗಳುಸಂಪಾದಿಸಿ

ಸಿನಿಮಾದ ಶೀರ್ಷಿಕೆ ಜುರಾಸಿಕ್‌ ಅವಧಿಯನ್ನು ಪ್ರತಿಧ್ವನಿಸಿದರೂ, ಅದರಲ್ಲಿ ತೋರಿಸಿದ ಬಹುತೇಕ ಡೈನೋಸಾರ್‌‌ಗಳು ಕ್ರೆಟೇಶಿಯಸ್‌ ಅವಧಿಯವರೆಗೆ ಅಸ್ತಿತ್ವದಲ್ಲಿ ಇರಲಿಲ್ಲ.[೩೬] ಚಿತ್ರಕಥೆಯು ಇದನ್ನು ಒಪ್ಪಿಕೊಂಡಿದ್ದು, ಡಾ. ಗ್ರಾಂಟ್‌ ವೆಲೊಸಿರಾಪ್ಟರ್‌ ನ ಉಗ್ರಸ್ವಭಾವವನ್ನು ಒಬ್ಬ ಹುಡುಗನಿಗೆ ವಿವರಿಸುವಾಗ, "ನೀನು ಕ್ರೆಟೇಶೀಯಸ್‌ ಕಾಲಘಟ್ಟದಲ್ಲಿ ಇದ್ದೆ ಎಂದು ಊಹಿಸಿಕೋ" ಎಂದು ಹೇಳುತ್ತಾನೆ.

 • ಟಿರನೋಸಾರಸ್‌ ರೆಕ್ಸ್‌' ಪ್ರಮುಖ ಎದುರಾಳಿಯಾಗಿದ್ದು, ಸ್ಪಿಲ್‌ಬರ್ಗ್‌ ಪ್ರಕಾರ ಅಂತ್ಯವನ್ನು ಪುನಾಬರೆದಿದ್ದು ಪ್ರೇಕ್ಷಕರಿಗೆ ನಿರಾಸೆಯಾದರೆ ಎಂಬ ಭಯದಿಂದ.[೧೦] ಅದಕ್ಕಿಂತ ಮೊದಲು ಅಷ್ಟೇನೂ ಅಚ್ಚರಿ ಹುಟ್ಟುಹಾಕದ ಅಂತ್ಯವನ್ನು ಚಿತ್ರಕಥೆಯಲ್ಲಿ ಬರೆಯಲಾಗಿತ್ತು, ಅದರಲ್ಲಿ ಒಂದು ರಾಪ್ಟರ್‌ಅನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ ಮತ್ತು ಇನ್ನೊಂದು ಬೀಳುತ್ತಿರುವ ಹಳೆಯ ಪಳೆಯುಳಿಕೆಯಿಂದ ಸಾಯುತ್ತದೆ. ವಿನ್ಸ್‌ಟನ್‌ನ ಅನಿಮ್ಯಾಟ್ರಾನಿಕ್ ಟಿ. ರೆಕ್ಸ್‌ 20 feet (6.1 m) ಹೆಚ್ಚು ತೂಕ ಹೊಂದಿದ್ದು,13,000 pounds (5,900 kg),[೨೩] ಉದ್ದವಾಗಿ ಇತ್ತು40 feet (12 m).[೩೭] ಜಾಕ್‌ ಹಾರ್ನರ್‌ ಇದು "ನಾನು ಭಾವಿಸುವಂತೆ ಜೀವಂತ ಡೈನೋಸಾರ್‌‌ಗೆ ಅತ್ಯಂತ ಹತ್ತಿರುವಾಗಿದೆ" ಎಂದು ಹೇಳಿದ್ದಾನೆ.[೩೭] ಡೈನೋಸಾರ್‌‌ ಅನ್ನು ಚಲನೆಯ ಮೇಲೆ ಆಧಾರಿತವಾದ ದೃಶ್ಯ ವ್ಯವಸ್ಥೆಯಿಂದ ಚಿತ್ರಿಸಲಾಗಿದೆ. ಇದರ ಘೀಳಿಡುವಿಕೆಯನ್ನು ಮರಿ ಆನೆಯ ಕೂಗಿನೊಂದಿಗೆ ಹುಲಿ ಮತ್ತು ಮೊಸಳೆಯ ಕೂಗಿನೊಂದಿಗೆ ಸೇರಿಸಿ ಸೃಷ್ಟಿಸಿದರು. ಅದರ ಉಸಿರಾಟ ದ ಶಬ್ದವನ್ನು ವೇಲ್‌ ಗಾಳಿ ಮತ್ತು ನೀರನ್ನು ಚಿಮ್ಮುವಾಗ ಉಂಟುಮಾಡುವ ಶಬ್ದದಿಂದ ಸೃಷ್ಟಿಸಿದ್ದರು.[೩೪] ನಾಯಿಯೊಂದು ಹಗ್ಗದ ಆಟಿಕೆಯ ಮೇಲೆ ದಾಳಿ ಮಾಡಿದಾಗ ಮಾಡುವ ಶಬ್ದವನ್ನು ಗ್ಯಾಲಿಮಿಮಸ್‌‌ ಅನ್ನು ಅಪ್ಪಳಿಸಿ ಚೂರಾಗಿಸುವ ಶಬ್ದಕ್ಕೆ ಬಳಸಿದರು.[೧೦]
 • ವೆಲೊಸಿರಾಪ್ಟರ್‌ ಕೂಡ ಪ್ರಮುಖ ಪಾತ್ರ ಹೊಂದಿತ್ತು ಮತ್ತು ಟಿ-ರೆಕ್ಸ್‌ ನಂತರ ಸಿನಿಮಾದಲ್ಲಿ ಎರಡನೇ ಪ್ರತಿಸ್ಪರ್ಧಿ ಎಂಬಂತೆ ಚಿತ್ರಿಸಲಾಗಿದೆ. ಪ್ರಾಣಿಗಳ ಚಿತ್ರಣವು ನಿಜವಾದ ಡೈನೋಸಾರ್‌‌ ಪ್ರಭೇದಗಳನ್ನು ಆಧರಿಸಿರಲಿಲ್ಲ, (ಅವು ಇವಕ್ಕಿಂತ ಸಾಕಷ್ಟು ಚಿಕ್ಕವಾಗಿದ್ದವು). ಬದಲಿಗೆ (ಮತ್ತು ದೊಡ್ಡದಾಗಿದ್ದ) ಪ್ರಭೇದಗಳಾದ ಡೈನೋನಿಕಸ್‌ ಗಳೊಂದಿಗೆ ಸಂಬಂಧ ಹೊಂದಿತ್ತು. ಅವನ್ನು ೧೯೮೮ರಲ್ಲಿ ಗ್ರಿಗೊರಿ ಎಸ್‌. ಪಾಲ್‌ ಅವರು ವೆಲೊಸಿರಾಪ್ಟರ್‌ ಎಂದು ಹೆಸರಿಸಿದ್ದರು.[೩೮] ಕ್ರೈಟನ್‌ರ ಕಾದಂಬರಿ ಇದನ್ನು ಅನುಸರಿಸಿತ್ತು. ಆದರೆ ಸಿನಿಮಾ ಮಾಡುವ ಹೊತ್ತಿಗೆ, ಆ ವಿಚಾರವನ್ನು ವಿಜ್ಞಾನಿಗಳ ಸಮುದಾಯ ಕೈಬಿಟ್ಟಿತ್ತು. ಕಾಕತಾಳೀಯವಾಗಿ, ಜುರಾಸಿಕ್‌ ಪಾರ್ಕ್‌ ಸಿನಿಮಾಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕಿಂತ ಮೊದಲು, ಉಟಾಹ್‌ರಾಪ್ಟರ್‌ ಗಳನ್ನು ಕಂಡುಹಿಡಿಯಲಾಯಿತು. ಅವು ಸಿನಿಮಾದಲ್ಲಿ ತೋರಿಸಿದ ರಾಪ್ಟರ್‌ಗಳಿಗಿಂತ ದೊಡ್ಡವಿದ್ದುದ್ದನ್ನು ರುಜುವಾತು ಪಡಿಸಿದವು; ಸ್ಟಾನ್‌ ವಿನ್ಸ್‌ಟನ್‌ ಹೀಗಾಗಿ "ನಾವು ಸಿನಿಮಾ ಮಾಡಿದೆವು, ನಂತರ ಅವರು ಪತ್ತೆ ಮಾಡಿದರು" ಎಂದು ತಮಾಶೆ ಮಾಡುತ್ತಿದ್ದರು.[೩೭] ರಾಬರ್ಟ್‌ ಮುಲ್ಡೂನ್‌ ಮೇಲೆ ದಾಳಿ ಮಾಡಿದ ರಾಪ್ಟರ್‌ಗಳನ್ನು ಆ ರೀತಿಯ ಉಡುಗೆ ತೊಟ್ಟ ಮನುಷ್ಯರು ಅಭಿನಯಿಸಿ, ಚಿತ್ರೀಕರಿಸಲಾಯಿತು.[೨೬] ಡಾಲ್ಫಿನ್‌ ಚೀರುವಿಕೆ, ವಾಲ್‌ರಸ್‌ಗಳು ಗಾಳಿಊದುವುದು, ಹೆಬ್ಬಾತು (ಗೂಸ್‌)ಗಳ ಹಿಸ್‌ ಶಬ್ದ, ಆಫ್ರಿಕಾದ ಕ್ರೇನ್‌ಗಳು ಸಂಗಾತಿಯನ್ನು ಕರೆಯುವ ಧ್ವನಿ, ಮನುಷ್ಯರು ಕರಕರ ಶಬ್ದ ಮಾಡುವುದು, ಎಲ್ಲವನ್ನೂ ಮಿಶ್ರಗೊಳಿಸಿ, ರಾಪ್ಟರ್‌ಗಳ ವಿವಿಧ ಧ್ವನಿಯನ್ನು ಸೃಷ್ಟಿಸಿದರು.[೧೦][೩೪] ಸಿನಿಮಾದ ಬಿಡುಗಡೆ ನಂತರ ಮಾಡಲಾದ ಶೋಧಗಳ ನಂತರ, ಅನೇಕ ಪ್ರಗ್ಜೀವ ವಿಜ್ಞಾನಿಗಳು ಡ್ರೊಮೆಯೊಸಾರ್‌ಗಳು ವೆಲೊಸಿರಾಪ್ಟರ್‌ಗಳ ಹಾಗೆ ಇದ್ದವು ಮತ್ತು ಡೈನೋನಿಕಸ್‌ಗಳು ಗರಿಗಳನ್ನು ಹೊಂದಿದ್ದವು ಎಂಬ ಸಿದ್ಧಾಂತ ಮಂಡಿಸಿದರು. ಈ ಲಕ್ಷಣವನ್ನು ಜುರಾಸಿಕ್‌ ಪಾರ್ಕ್‌ IIIರಲ್ಲಿ ಮಾತ್ರ ಸೇರಿಸಿಕೊಳ್ಳಲಾಯಿತು.[೩೯]
 • ಡಿಲೊಫಾಸಾರಸ್‌ ಕೂಡ ನಿಜಜೀವನದ ಆ ಬಗೆಯ ಪ್ರಾಣಿಗಳಿಗಿಂತ ಭಿನ್ನವಾಗಿತ್ತು, ಅದನ್ನು ಪ್ರೇಕ್ಷಕರು ರಾಪ್ಟರ್‌ಗಳ ಜೊತೆ ಗೊಂದಲ ಮಾಡಿಕೊಳ್ಳದಿರಲಿ ಎಂದು ಸಾಕಷ್ಟು ಸಣ್ಣದಾಗಿ ರೂಪಿಸಿದ್ದರು.[೪೦] ಕುತ್ತಿಗೆಯ ನೆರಿಗೆಗಳು ಮತ್ತು ವಿಷ ಕಕ್ಕುವ ಅದರ ಸಾಮರ್ಥ್ಯವು ಕಾಲ್ಪನಿಕವಾದುದು. ಅದರ ಧ್ವನಿಯನ್ನು ಹಂಸ, ಗಿಡುಗ, ಊಳು ಕಪಿ, ಮತ್ತು ಬುಡುಬುಡುಕೆ ಹಾವುಗಳ ಧ್ವನಿಯನ್ನು ಸಮ್ಮಿಶ್ರಗೊಳಿಸಿ ಸೃಷ್ಟಿಸಿದರು.[೧೦]
 • ಪಾರ್ಕಿಗೆ ಬರುವವರಿಗೆ ಮೊದಲು ಕಾಣಿಸುವ ಡೈನೋಸಾರ್‌‌ ಎಂದರೆ ಬ್ರಾಶಿಯೊಸಾರಸ್‌ . ಅದು ಆಹಾರವನ್ನು ಮೆಲ್ಲುತ್ತಲೇ ಹಿಂದಿನ ಕಾಲುಗಳ ಮೇಲೆ ನಿಂತು ಎತ್ತರದ ಮರಗಳ ನಡುವೆ ಹುಡುಕುತ್ತಿರುವಂತೆ ಚಿತ್ರಿಸಲಾಗಿದ್ದು, ಅಷ್ಟು ಸಮರ್ಪಕವಾಗಿಲ್ಲ. ಡೈನೋಸಾರ್‌ಗಳಿಗೆ ಧ್ವನಿ ಸಾಮರ್ಥ್ಯ ತುಂಬ ಸೀಮಿತವಿತ್ತು ಎಂದು ವೈಜ್ಞಾನಿಕ ಪುರಾವೆಗಳು ಇದ್ದಾಗ್ಯೂ, ಶಬ್ದ ಸಂಯೋಜಕ ಗ್ಯಾರಿ ರಿಡ್‌ಸ್ಟಾರ್ಮ್‌ ಅವುಗಳನ್ನು ವೇಲ್‌ ಹಾಡುಗಳು ಮತ್ತು ಕತ್ತೆ ಕರೆಗಳನ್ನು ಸೇರಿಸಿದ ಧ್ವನಿಯಿಂದ ಪ್ರತಿನಿಧಿಸಲು ನಿರ್ಧರಿಸಿದ್ದರು, ಅದು ಅಚ್ಚರಿಯ ಮಧುರಭಾವವನ್ನು ತುಂಬುತ್ತದೆ ಎಂದು ಅವರು ಭಾವಿಸಿದ್ದರು.[೩೪]
 • ಟ್ರೈಸಿರಾಪ್ಟರ್ಸ್‌‌ ಉದ್ದನೆಯ ಉಬ್ಬಿದ ಭಾಗವನ್ನು ಹೊಂದಿದ್ದು, ಅದು ಯಾವುದೋ ಕಾಯಿಲೆಯಿಂದ ನರಳುತ್ತಿತ್ತು. ಸ್ಟಾನ್‌ ವಿನ್ಸ್‌ಟಗೆ ಅದರ ಚಿತ್ರ ಸಾಕಷ್ಟು ದುಸ್ವಪ್ನದಂತಿತ್ತು, ಏಕೆಂದರೆ ಸ್ಪಿಲ್‌ಬರ್ಗ್‌ ನಿರೀಕ್ಷಿತ ದಿನಕ್ಕಿಂತ ಮೊದಲೇ ಆ ರೋಗಿಷ್ಟ ಪ್ರಾಣಿಯ ಅನಿಮ್ಯಾಟ್ರಾನಿಕ್ಅನ್ನು ಚಿತ್ರೀಕರಿಸಲು ಕೇಳಿದರು.[೪೧] ವಿನ್ಸ್‌ಟನ್‌ ಒಂದು ಮರಿ ಟ್ರೈಸಿರಾಪ್ಟರ್ಸ್‌‌ ಅನ್ನು ಅರಿಯಾನ ರಿಚರ್ಡ್ಸ್ ಸವಾರಿಗೆ ಬಳಸಲು ಎಂದು ರೂಪಿಸಿದ್ದರು. ನಂತರ ಅದನ್ನು ಪೇಸಿಂಗ್ ಕಾರಣಗಳಿಗಾಗಿ ಸಿನಿಮಾದಿಂದ ಕೈಬಿಡಲಾಯಿತು.[೪೨] ವಿಫುಲವಾಗಿದ್ದ ಟ್ರೈಸಿರಾಪ್ಟರ್ಸ್‌‌ ಮಾಡೆಲ್‌ಗಳನ್ನು ನಂತರ ಸ್ಪಿಲ್‌ಬರ್ಗ್‌ನ ೧೯೯೭ರ ಸರಣಿ ಚಿತ್ರ ಜುರಾಸಿಕ್‌ ಪಾರ್ಕ್‌: ದಿ ಲಾಸ್ಟ್‌ ವರ್ಲ್ಡ್ ನಲ್ಲಿ ಬಳಸಿಕೊಂಡರು.
 • ಗ್ಯಾಲಿಮಿಮಸ್‌‌ ಗಳನ್ನು ತುಳಿತದ ದೃಶ್ಯಗಳಲ್ಲಿ ಬಳಸಲಾಯಿತು, ಅದರಲ್ಲಿ ಒಂದನ್ನು ಟಿರನೋಸಾರಸ್‌ ಭಕ್ಷಿಸುತ್ತದೆ.
 • ಬ್ರಾಶಿಯೊಸಾರಸ್‌ ಜೊತೆ ಮೊದಲ ಮುಖಾಮುಖಿಯಲ್ಲಿ ಹಿನ್ನೆಲೆಯಲ್ಲಿ ಪರಸಾರೊಲೊಫಸ್‌ ಕಾಣಿಸಿಕೊಳ್ಳುತ್ತದೆ.

ವಿತರಣೆಸಂಪಾದಿಸಿ

ಯುನಿವರ್ಸಲ್‌ ಜುರಾಸಿಕ್‌ ಪಾರ್ಕ್‌ ನ ಮಾರುಕಟ್ಟೆ ಪ್ರಚಾರಕ್ಕೆ ೬೫ ದಶಲಕ್ಷ ಡಾಲರ್‌ ಖರ್ಚು ಮಾಡಿದರು. ಸುಮಾರು ೧೦೦೦ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ೧೦೦ ಕಂಪನಿಗಳೊಂದಿಗೆ ವ್ಯವಹಾರ ನಡೆಸಿದರು.[೪೩] ಇವುಗಳಲ್ಲಿ ಸೆಗಾದವರಿಂದ ಮೂರು ಜುರಾಸಿಕ್‌ ಪಾರ್ಕ್‌ ವಿಡಿಯೋ ಗೇಮ್‌ಗಳು ಮತ್ತು ಓಶಿಯನ್‌ ಸಾಫ್ಟ್‌ವೇರ್‌ಗಳು,[೪೪] ಹಾಸ್‌ಬ್ರೊವಿತರಿಸಿದ ಕೆನ್ನರ್‌ನಿಂದ ಒಂದು ಆಟಿಕೆ ಸರಣಿ,[೪೫] ಮತ್ತು ಚಿಕ್ಕಮಕ್ಕಳಿಗಾಗಿ ಸಿನಿಮಾವನ್ನು ಕಾದಂಬರಿಗೆ ಅಳವಡಿಸಿದ್ದು ಸೇರಿವೆ.[೪೬] ಬಿಡುಗಡೆ ಮಾಡಿದ ಸೌಂಡ್‌ಟ್ರಾಕ್‌ನಲ್ಲಿ ಬಳಸದೇ ಇದ್ದ ಟ್ರಾಕ್‌ಗಳೂ ಇದ್ದವು.[೪೭] ಸಿನಿಮಾದ ಟ್ರೈಲರ್‌ಗಳಲ್ಲಿ ಡೈನೋಸಾರ್‌‌ಗಳ ಅರೆಕ್ಷಣದ ಮಿಂಚಿನಂತಹ ದೃಶ್ಯಗಳನ್ನು ಮಾತ್ರ ತೋರಿಸಲಾಗಿತ್ತುದ್ದವು.[೪೮] ಚಾಣಾಕ್ಷ ಪತ್ರಕರ್ತ ಜೋಶ್‌ ಹೊರೊವಿಜ್‌ ಅದನ್ನು ನೋಡಿ, "ವೃದ್ಧ ಸ್ಪಿಲ್‌ಬರ್ಗ್‌ ಎಂದೂ ಹೆಚ್ಚು ಬಿಟ್ಟುಕೊಡದ ಸೂತ್ರವನ್ನು ಅನುಸರಿಸಿದ್ದಾನೆ ಎಂದಿದ್ದ. ಸ್ಪಿಲ್‌ಬರ್ಗ್‌ ಮತ್ತು ನಿರ್ದೇಶಕ ಮೈಕೆಲ್‌ ಬೇ ನಂತರ ೨೦೦೭ರಲ್ಲಿ ತಮ್ಮ ಟ್ರಾನ್ಸ್‌ಫಾರ್ಮ್‌ರ್ಸ್‌ ಸಿನಿಮಾಕ್ಕೂ ಇದೇ ತಂತ್ರ ಬಳಸಿದ್ದರು.[೪೯] ಸಿನಿಮಾವನ್ನು "ರೂಪುಗೊಳ್ಳಲು ೬೫ ದಶಲಕ್ಷ ವರ್ಷ ತೆಗೆದುಕೊಂಡ ಒಂದು ಸಾಹಸ (೬೫ ಮಿಲಿಯನ್ ಈಯರ್ಸ್ ಇನ್ ದಿ ಮೇಕಿಂಗ್)" ಎಂಬ ಶೀರ್ಷಿಕೆ ಸಾಲು (ಟ್ಯಾಗ್‌ಲೈನ್‌) ಜೊತೆ ಬಿಡುಗಡೆ ಮಾಡಲಾಯಿತು. ಇದರ ಯಥಾರ್ಥತೆಯ ಕುರಿತು ಸೆಟ್‌ನಲ್ಲಿ ಸ್ಪಿಲ್‌ಬರ್ಗ್‌ ತಮಾಶೆ ಮಾಡುತ್ತ, ಹ್ಯಮಂಡ್‌ನ ವಾಕಿಂಗ್‌ ಸ್ಟಿಕ್‌ಗೆ ಸಾವಿರಾರು ವರ್ಷ ಹಳೆಯ ರಾಳ(ಆಂಬರ್‌)ದಲ್ಲಿದ್ದ ಸೊಳ್ಳೆಯನ್ನು ಬಳಸಲಾಗಿದೆ ಎಂದಿದ್ದರು.[೫೦]

ಇಬ್ಬರು ಮಕ್ಕಳಿಗೆ ದೇಣಿಗೆ ನೀಡಿ ಬೆಂಬಲಿಸಲೆಂದು, ವಾಷಿಂಗ್ಟನ್‌ ಡಿ.ಸಿ.[೫೧] ಯ ನ್ಯಾಶನಲ್‌ ಬಿಲ್ಡಿಂಗ್‌ ಮ್ಯೂಸಿಯಂನಲ್ಲಿ ೧೯೯೩ರ ಜೂನ್‌ ೩ರಂದು ಸಿನಿಮಾದ ಪ್ರೀಮಿಯರ್‌ ಶೋ ಏರ್ಪಡಿಸಲಾಗಿತ್ತು.[೫೨] ಸಿನಿಮಾದ ಮೊದಲ ವಿಎಚ್‌ಎಸ್‌ ಮತ್ತು ಲೇಸರ್‌ಡಿಸ್ಕ್‌ಗಳನ್ನು ೧೯೯೪ರ ಅಕ್ಟೋಬರ್‌‌ ೪ರಂದು ಬಿಡುಗಡೆ ಮಾಡಿದರು.[೫೩] ನಂತರ ಮೊದಲಬಾರಿ ಡಿವಿಡಿಯಲ್ಲಿ ೨೦೦೦, ಅಕ್ಟೋಬರ್‌‌ ೧೦ರಂದು ಬಿಡುಗಡೆಯಾಯಿತು.[೫೪] ಈ ಸಿನಿಮಾದ ಡಿವಿಡಿಯನ್ನು ಜುರಾಸಿಕ್‌ ಪಾರ್ಕ್‌: ದಿ ಲಾಸ್ಟ್‌ ವರ್ಲ್ಡ್ ಜೊತೆಗೆ ಬಿಡುಗಡೆ ಮಾಡಲಾಯಿತು. The Lost World: Jurassic Park .[೫೫] ಡಿವಿಡಿಯನ್ನು ಪುನಾ ಇನ್ನೆರಡು ಸರಣಿಗಳೊಂದಿಗೆ, ೨೦೦೧ರ ಡಿಸೆಂಬರ್‌ ೧೧ರಂದು,[೫೬] ಜುರಾಸಿಕ್‌ ಪಾರ್ಕ್‌ ಟ್ರಿಯಾಲಜಿ ಎಂದು ಮತ್ತು ಜುರಾಸಿಕ್‌ ಪಾರ್ಕ್‌ ಅಡ್ವೆಂಚರ್‌ ಪ್ಯಾಕ್‌ ೨೦೦೫ರ ನವೆಂಬರ್‌ ೨೯ರಂದು ಬಿಡುಗಡೆ ಮಾಡಲಾಯಿತು.[೫೭]

ಸಿನಿಮಾದ ಬಿಡುಗಡೆ ನಂತರ, ಒಂದು ಪ್ರಯಾಣಿಕ ಪ್ರದರ್ಶನವನ್ನು ಆರಂಭಿಸಲಾಯಿತು.[೫೮] ಸ್ಟೀವ್‌ ಇಂಗ್ಲೆಹಾರ್ಟ್‌ ಕಾಮಿಕ್ ಪುಸ್ತಕಗಳ ಸರಣಿಗಳನ್ನು ಬರೆದರು ಮತ್ತು ಅವನ್ನು ಟಾಪ್ಸ್‌ ಕಾಮಿಕ್ಸ್‌ ಪ್ರಕಟಿಸಿದರು. ಅವು ಸಿನಿಮಾದ ಮುಂದುವರೆಯಂತೆ ಕೆಲಸ ಮಾಡಿದವು. ಅವುಗಳಲ್ಲಿ ರಾಪ್ಟರ್‌ ಗಳ ಎರಡು ಸಂಚಿಕೆ, ರಾಪ್ಟರ್‌ಗಳ ದಾಳಿ ಕುರಿತು ೪ ಸಂಚಿಕೆಗಳು ಮತ್ತು ರಾಪ್ಟರ್‌ಗಳ ಅಪಹರಣ (ಹೈಜಾಕ್ ) , ಮತ್ತು ರಿಟರ್ನ್‌ ಟು ಜುರಾಸಿಕ್‌ ಪಾರ್ಕ್‌ ಎಂದು ಒಟ್ಟು ೯ ಸಂಚಿಕೆಗಳು ಬಂದವು. ಎಲ್ಲ ಪ್ರಕಟಿತ ಸಂಚಿಕೆಗಳು ಸಂಯುಕ್ತ ಸಂಸ್ಥಾನದಲ್ಲಿ ಜುರಾಸಿಕ್‌ ಪಾರ್ಕ್‌ ಅಡ್ವೆಂಚರ್ಸ್‌ ಎಂಬ ಒಂದೇ ಶೀರ್ಷಿಕೆಯಲ್ಲಿ ಮತ್ತು ಬ್ರಿಟನ್‌‌ನಲ್ಲಿ ಜುರಾಸಿಕ್‌ ಪಾರ್ಕ್‌ ಎಂಬ ಒಂದೇ ಶೀರ್ಷಿಕೆಯಲ್ಲಿ ಪುನಾ ಪ್ರಕಟಗೊಂಡವು.[೫೯] ಓಶನ್‌ ಸಾಫ್ಟ್‌ವೇರ್‌ನವರು ೧೯೯೪ರಲ್ಲಿ ಗೇಮ್ ಸರಣಿಯನ್ನು Jurassic Park 2: The Chaos Continues ಸೂಪರ್‌ ಎನ್‌ಇಎಸ್‌ ಮತ್ತು ಗೇಮ್‌ ಬಾಯ್‌ ಎಂಬ ಶೀರ್ಷಿಕೆಯಲ್ಲಿ ಬಿಡುಡಗೆ ಮಾಡಿದರು.[೪೪]

ಜುರಾಸಿಕ್‌ ಪಾರ್ಕ್‌ ಅನ್ನು ಮೊದಲ ಬಾರಿ ದೂರದರ್ಶನದಲ್ಲಿ ೧೯೯೫ರ ಏಪ್ರಿಲ್‌ ೨೬ರಂದು ದಿ ಮೇಕಿಗ್ ಆಫ್‌ ಜುರಾಸಿಕ್‌ ಪಾರ್ಕ್‌ ಎಂದು ಪ್ರಸಾರ ಮಾಡಿ, ನಂತರ ಮೇ ೭ರಂದು ಸಿನಿಮಾ ಪ್ರಸಾರ ಮಾಡಿದರು.[೬೦] ಸುಮಾರು ೬೮.೧೨ ದಶಲಕ್ಷ ಜನರು ಅದನ್ನು ನೋಡಿದರು. ಆ ರಾತ್ರಿಯ ಒಟ್ಟು ಪ್ರೇಕ್ಷಕರಲ್ಲಿ ಶೇ. ೩೬ರಷ್ಟು ಜನರು ಎನ್‌ಬಿಸಿಯನ್ನು ನೋಡುತ್ತಿದ್ದರು. ೧೯೮೭ರ ಏಪ್ರಿಲ್‌ನಲ್ಲಿ ಪ್ರಸಾರಗೊಂಡ ಟ್ರೇಡಿಂಗ್ ಪ್ಲೇಸಸ್‌ ನಂತರ ದೂರದರ್ಶನದಲ್ಲಿ ಯಾವುದೇ ಚಾಹಿನಿಯಿಂದ ಪ್ರಸಾರವಾದ ಸಿನಿಮಾಗಳಲ್ಲಿ ಜುರಾಸಿಕ್‌ ಪಾರ್ಕ್‌ ಅತ್ಯಧಿಕ ಶ್ರೇಣಿ ಪಡೆದ ಸಿನಿಮಾ ಆಗಿದೆ.[೬೧] ೧೯೯೫ರ ಜೂನ್‌–ಜುಲೈ ನಲ್ಲಿ ಸಿನಿಮಾವನ್ನು ಟಿಎನ್‌ಟಿ ನೆಟ್‌ವರ್ಕ್‌ನಲ್ಲಿ ಹಲವಾರು ಬಾರಿ ಪ್ರಸಾರ ಮಾಡಲಾಯಿತು.[೬೧]

"ಜುರಾಸಿಕ್‌ ಪಾರ್ಕ್‌ ರೈಟ್‌" ಅನ್ನು ೧೯೯೦ರ ನವೆಂಬರ್‌ನಲ್ಲಿ ಆರಂಭಿಸಲಾಯಿತು[೬೨] ಮತ್ತು ಯುನಿವರ್ಸಲ್‌ ಸ್ಟುಡಿಯೋಸ್‌, ಹಾಲಿವುಡ್‌‌ನಲ್ಲಿ ೧೯೯೬ರ ಜೂನ್‌ ೧೫ರಂದು [೬೩] ೧೧೦ ದಶಲಕ್ಷ ಡಾಲರ್‌ಗಳ ವೆಚ್ಚದಲ್ಲಿ ಸಿದ್ಧಪಡಿಸಿ, ಪ್ರೀಮಿಯರ್ ಶೋ ಏರ್ಪಡಿಸಲಾಯಿತು.[೬೨] ಫ್ಲೋರಿಡಾದ ಒರ್ಲ್ಯಾಂಡೋದಲ್ಲಿರುವ ಐಲ್ಯಾಂಡ್ಸ್ ಆಫ್‌ ಅಡ್ವೆಂಚೆರ್‌ನಲ್ಲಿ ಒಂದು ಇಡೀ ವಿಭಾಗವನ್ನು ಜುರಾಸಿಕ್‌ ಪಾರ್ಕ್‌ ಗೆ ಮೀಸಲಾಗಿಟ್ಟಿದ್ದು, ಅಲ್ಲಿ "ಜುರಾಸಿಕ್‌ ಪಾರ್ಕ್‌ ರಿವರ್ ಅಡ್ವೆಂಚರ್" ಎಂಬ ಪ್ರಧಾನ ಸವಾರಿ ಮತ್ತು ಅನೇಕ ಚಿಕ್ಕ ಸವಾರಿ ಹಾಗೂ ಆಕರ್ಷಣೆಗಳನ್ನು ಈ ಸರಣಿಗಳನ್ನು ಆಧರಿಸಿ ರೂಪಿಸಿದ್ದಾರೆ.[೬೪] ಯುನಿವರ್ಸಲ್‌ ಸ್ಟುಡಿಯೋಸ್‌ನ ಥೀಮ್‌ ಪಾರ್ಕ್‌ ಸವಾರಿಗಳನ್ನು ಸಿನಿಮಾದ ಚಿತ್ರಕಥೆಗೆ ಹೊಂದುವಂತೆ ಸಿದ್ಧಪಡಿಸಲಾಯಿತು. ಹ್ಯಮಂಡ್‌ ತೀಮ್‌ ಪಾರ್ಕ್‌ ಸ್ಥಳದಲ್ಲಿ ಪಾರ್ಕ್‌ಅನ್ನು ಪುನಾನಿರ್ಮಾಣ ಮಾಡಲು ಸಂಪರ್ಕಿಸಿದ್ದರು ಎನ್ನಲಾಗಿದೆ.[೬೩]

ಸ್ವೀಕೃತಿಸಂಪಾದಿಸಿ

ವಾಣಿಜ್ಯಕವಾಗಿಸಂಪಾದಿಸಿ

ಜುರಾಸಿಕ್‌ ಪಾರ್ಕ್‌ ಹಣಕಾಸಿನ ದೃಷ್ಟಿಯಿಂದ ಆವರೆಗೆ ಬಿಡುಗಡೆಯಾದ ಅತ್ಯಂತ ಯಶಸ್ವೀ ಸಿನಿಮಾ ಆಗಿದ್ದು, ಅದಕ್ಕಿಂತ ಮೊದಲು ಆ ಸ್ಥಾನದಲ್ಲಿದ್ದ ಸ್ಪಿಲ್‌ಬರ್ಗ್‌ರ ಇ.ಟಿ. ದಿ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್‌ ಇ.ಟಿ. ದಿ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್‌ ಸಿನಿಮಾದ ಗಳಿಕೆಯನ್ನು ಹಿಂದಿಕ್ಕಿತು. ಆದರೆ ಉತ್ತರ ಅಮೆರಿಕದಲ್ಲಿ ಅದು ಇ.ಟಿ. ಗಿಂತ ಮೇಲೇರಲು ಆಗಲಿಲ್ಲ.[೬೫] ಸಿನಿಮಾ ತನ್ನ ಮೊದಲ ವಾರಾಂತ್ಯದಲ್ಲಿ ೪೭ ದಶಲಕ್ಷ ಡಾಲರ್‌ ಆರಂಭಿಕ ಹಣ ಗಳಿಸಿತು[೨] ಮತ್ತು ಮೊದಲ ವಾರದಲ್ಲಿ ೮೧.೭ ದಶಲಕ್ಷ ಡಾಲರ್‌ ಹಣ ಗಳಿಸಿತು.[೬೬] ಮೂರು ವಾರಗಳವೆಗೆ ಸಿನಿಮಾ ನಂ.೧ ಸ್ಥಾನದಲ್ಲಿ ಇತ್ತು ಮತ್ತು ಅಮೆರಿಕದಲ್ಲಿ ಹಾಗೂ ಕೆನಡಾದಲ್ಲಿ ಸೇರಿ ೩೫೭ ದಶಲಕ್ಷ ಡಾಲರ್‌ ಗಳಿಸಿತು.[೬೭] ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಸಿನಿಮಾ ಚೆನ್ನಾಗಿ ಹಣಗಳಿಸಿತು. ಬ್ರಿಟನ್‌, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ ಮತ್ತು ತೈವಾನ್‌ ದೇಶಗಳಲ್ಲಿ ಆವರೆಗಿನ ಆರಂಭಿಕ ದಾಖಲೆಗಳನ್ನು ಮುರಿಯಿತು.[೬೮] ಸ್ಪಿಲ್‌ಬರ್ಗ್‌ ಆ ಸಿನಿಮಾದಿಂದ ೨೫೦ ದಶಲಕ್ಷ ಡಾಲರ್‌ಗೂ ಅಧಿಕ ಹಣಗಳಿಸಿದರು.[೬೯] ಜುರಾಸಿಕ್‌ ಪಾರ್ಕ್‌ನ ವಿಶ್ವಾದ್ಯಂತದ ಗಳಿಕೆಯನ್ನು ಐದು ವರ್ಷಗಳ ನಂತರ ಬಿಡುಗಡೆಯಾದ ಜೇಮ್ಸ್‌ ಕೆಮರೂನ್‌ ಅವರ ಟೈಟಾನಿಕ್‌ ಹಿಂದಿಕ್ಕಿತು.[೭೦]

ವಿಮರ್ಶೆಸಂಪಾದಿಸಿ

ಚಿತ್ರವು ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು. ಸಿನಿಮಾದ ವಿಶುವಲ್‌ ಇಫೆಕ್ಟ್‌ ಕುರಿತು ಅತ್ಯಧಿಕ ಮೆಚ್ಚುಗೆ ದೊರೆಯಿತು. ಆದರೂ ಕಾದಂಬರಿಯಿಂದ ಸಾಕಷ್ಟು ಬೇರೆಯಾಗಿ ಮಾಡಿರುವುದಕ್ಕೆ ಕೆಲವರು ಟೀಕಿಸಿದರು. ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ ಜಾನೆಟ್‌ ಮಸ್ಲಿನ್‌ ಇದನ್ನು "ಒಂದು ನೈಜ ಮೈಲುಗಲ್ಲು, ಈ ಹಿಂದೆ ಎಂದೂ ತೆರೆಯ ಮೇಲೆ ತೋರಿಸಿದೇ ಇರುವಷ್ಟು ಅಚ್ಚರಿಯ ಮತ್ತು ಭಯ ಹುಟ್ಟಿಸುವ ದೃಶ್ಯಗಳಿವೆ. ಕಾಗದದ ಮೇಲೆ (ಅಂದರೆ ಕಾದಂಬರಿ), ಈ ಕಥೆ ಶ್ರೀ. ಸ್ಪಿಲ್‌ಬರ್ಗ್‌ ಅವರ ಪ್ರತಿಭೆಗೆ ಹೇಳಿಮಾಡಿಸಿದಂತಿದೆ.[ಆದರೆ]ಇದು ತೆರೆಯ ಮೇಲೆ ಕಾಗದಲ್ಲಿದ್ದಷ್ಟು ಹರಳುಗಟ್ಟಿಲ್ಲ, ಅಧಿಕ ಮನರಂಜನೆ ಇರುವ ಇದು ಒಂದೋ ಗೊಂದಲಮಯವಾಗಿದೆ ಅಥವಾ ಬಿಸಾಡುವಂತೆ ಇದೆ" ಎಂದು ವಿಮರ್ಶಿಸಿದ್ದರು.[೭೧] ರೋಲಿಂಗ್‌ ಸ್ಟೋನ್‌ ನಿಯತಕಾಲಿಕದಲ್ಲಿ ಪೀಟರ್‌ ಟ್ರಾವರ್ಸ್ ಸಿನಿಮಾವನ್ನು "ಅದ್ಭುತ ಮನೋರಂಜನೆಯ ಸಿನಿಮಾ-ಕಣ್ಣೆವೆ ಮುಚ್ಚದೆ, ಮನಸ್ಸು ತಲ್ಲೀನವಾಗಿ, ಹಲ್ಲು ಕಚ್ಚಿ ನೋಡುವ ಬೇಸಿಗೆಯ ಸಾಹಸದ ಚಿತ್ರ ಮತ್ತು ಪ್ರಾಯಶಃ ವರ್ಷದ ಚಿತ್ರವೂ ಹೌದು[...] ನಿಜವೆಂದರೆ ಡೈನೋಗಳಿಗೆ ಹೋಲಿಸಿದರೆ, ಪಾತ್ರಗಳು ಶುಷ್ಕ ಮೂಳೆಗಳು. ಕ್ರೈಟನ್‌ ಮತ್ತು ಸಹ-ಚಿತ್ರಕಥೆಗಾರ ಡೇವಿಡ್‌ ಕೋಪ್‌ ಪುಟಗಳಿಂದ (ಅಂದರೆ ಕಾದಂಬರಿಯಿಂದ) ತೆರೆಯ ಮೇಲೆ ತರುವಾಗ ಅವುಗಳನ್ನು ಅಸ್ತಿತ್ವರಹಿತವಾಗಿಸಿ ಸಪ್ಪೆಯಾಗಿಸಿದ್ದಾರೆ." ಎಂದು ಬರೆದಿದ್ದರು.[೭೨] ರೋಜರ್‌ ಎಬರ್ಟ್‌ ಹೀಗೆ ಬರೆದಿದ್ದರು, "ಸಿನಿಮಾ ನಮಗೆ ಡೈನೋಸಾರ್‌‌ಗಳನ್ನು ತೋರಿಸುವ ತನ್ನ ವಾಗ್ದಾನದಂತೆ ಚೆನ್ನಾಗಿ ಬಂದಿದೆ. ನಾವು ಇಂಥವನ್ನು ಆಗೀಗ ನೋಡುತ್ತೇವೆ ಮತ್ತು ನಿಜವೆಂದರೆ ಅವು ಕಲಾತ್ಮಕತೆಯ ವಿಶೇಷ ಎಫೆಕ್ಟ್‌ನ ವಿಜಯ. ಆದರೆ ಈ ಸಿನಿಮಾದಲ್ಲಿ ಅಚ್ಚರಿ ಮತ್ತು ಅದ್ಭುತವೆನ್ನಿಸುವ, ಬಲವಾದ ಮಾನವೀಯ ಕಥಾ ಮೌಲ್ಯಗಳು, ಹೀಗೆ ಅಗತ್ಯವಾಗಿದ್ದ ಇನ್ನೂ ಕೆಲವು ಗುಣಗಳ ಕೊರತೆ ಇದೆ."[೭೩] ಹೆನ್ರಿ ಶೀಹನ್‌ "ಜುರಾಸಿಕ್‌ ಪಾರ್ಕ್‌ ಕುರಿತು ಕಥಾನಕದ ಮತ್ತು ಪಾತ್ರಗಳ ಕುರಿತ ಲೋಪದ ದೂರುಗಳಲ್ಲಿ ಹುರುಳಿಲ್ಲ." ಎಂದು ಪ್ರತಿಪಾದಿಸಿ, ಮೊದಲು ಹ್ಯಮಂಡ್‌ರ ಮೊಮ್ಮಕ್ಕಳನ್ನು ಗ್ರಾಂಟ್‌ ಇಷ್ಟಪಡದಿದ್ದರೂ, ನಂತರ ಅವರನ್ನು ರಕ್ಷಿಸುವುದನ್ನು ಉಲ್ಲೇಖಿಸಿದ್ದರು.[೧೮] ಎಂಪೈರ್‌ ನಿಯತಕಾಲಿಕ ಈ ಸಿನಿಮಾಗೆ ಐದು ಸ್ಟಾರ್‌ ನೀಡಿತ್ತು, "...ಸರಳವಾಗಿ ಹೇಳಬೇಕೆಂದರೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದ ಸಾರ್ವಕಾಲಿಕ ಸಿನಿಮಾ" ಎಂದು ವಿಮರ್ಶೆ ಬರೆದಿತ್ತು.[೭೪] ರೋಟೆನ್‌ ಟೊಮಟೋಸ್‌ ನಿಯತಕಾಲಿಕವು ಶೇ. ೮೮ರಷ್ಟು ವಿಮರ್ಶಕರು ಜುರಾಸಿಕ್‌ ಪಾರ್ಕ್‌ಗೆ ಧನಾತ್ಮಕ ಬರಹ ನೀಡಿದ್ದು, ಅವರಲ್ಲಿ ಶೇ. ೧೦೦ರಷ್ಟು ಟಾಪ್‌-ವಿಮರ್ಶಕರು ಎಂದು ಹೀಗೆ ವರದಿ ಮಾಡಿತ್ತು.[೭೫]

೧೯೯೪ರಲ್ಲಿ ಸಿನಿಮಾ ನಾಮಕರಣಗೊಂಡ ಮೂರೂ ವಿಭಾಗಳಲ್ಲಿ ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿತ್ತು: ವಿಶ್ಯುವಲ್ ಇಫೆಕ್ಟ್ಸ್, ಸೌಂಡ್‌ ಇಫೆಕ್ಟ್‌ ಎಡಿಟಿಂಗ್, ಮತ್ತು ಶಬ್ದಗ್ರಹಣ (ಇದೇ ಸಮಾರಂಭದಲ್ಲಿ, ಸ್ಟೀವನ್‌ ಸ್ಪಿಲ್‌ಬರ್ಗ್‌, ಮೈಕೆಲ್‌ ಕನ್‌, ಮತ್ತು ಜಾನ್‌ ವಿಲಿಯಮ್ಸ್‌ ಷಿಂಡ್ಲರ್ಸ್‌ ಲಿಸ್ಟ್‌‌ ಗೆ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದುಕೊಂಡರು). ಈ ಸಿನಿಮಾ ಅಮೆರಿಕದ ಹೊರಗೂ ಸಾಕಷ್ಟು ಪ್ರಶಸ್ತಿ ಗೆದ್ದಿತು. ಅವುಗಳಲ್ಲಿ ೧೯೯೪ರ ಅತ್ಯುತ್ತಮ ಸ್ಪೆಶಲ್‌ ಇಫೆಕ್ಟ್ಸ್‌ಗೆ ಬಿಎಎಫ್‌ಟಿಎ ಮತ್ತು ಸಾರ್ವಜನಿಕರ ಅಚ್ಚುಮೆಚ್ಚಿನ ಸಿನಿಮಾ ಪ್ರಶಸ್ತಿಯನ್ನೂ ಗಳಿಸಿತು.[೭೬] ಜೊತೆಗೆ ೧೯೯೪ರ ಬೆಸ್ಟ್‌ ಡ್ರಾಮಾಟಿಕ್ ಪ್ರೆಸೆಂಟೇಶನ್‌ಗೆ ಹ್ಯುಗೋ ಪ್ರಶಸ್ತಿ,[೭೭] ಮತ್ತು ೧೯೯೩ರ ಸಾಟರ್ನ್‌ ಪ್ರಶಸ್ತಿ ಅತ್ಯುತ್ತಮ ವೈಜ್ಞಾನಿಕ ಕಾಲ್ಪನಿಕ ಸಿನಿಮಾ, ಅತ್ಯುತ್ತಮ ನಿರ್ದೇಶನ, ಕ್ರೈಟನ್‌ ಮತ್ತು ಕೋಪ್‌ಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಮತ್ತು ಬೆಸ್ಟ್‌ ಸ್ಪೆಶಲ್‌ ಇಫೆಕ್ಸ್ಟ್ ಪ್ರಶಸ್ತಿಗಳು ಬಂದವು.[೭೮] ಈ ಸಿನಿಮಾ ಫೇವರಿಟ್‌ ಆಲ್‌-ಅರೌಂಡ್‌ ಮೋಶನ್‌ ಪಿಕ್ಚರ್‌ ವಿಭಾಗದಲ್ಲಿ ೧೯೯೩ರಲ್ಲಿ ಜನರ ಆಯ್ಕೆಯ ಪ್ರಶಸ್ತಿ (ಪೀಪಲ್ಸ್‌ ಚಾಯ್ಸ್‌ ಅವಾರ್ಡ್‌) ಗಳಿಸಿತು.[೭೯] ಯುವ ಕಲಾವಿದ ಪ್ರಶಸ್ತಿಯನ್ನು ಅರಿಯಾನ ರಿಚರ್ಡ್ಸ್ ಮತ್ತು ಜೋಸೆಫ್‌ ಮಜೆಲೋ ಪಡೆದುಕೊಂಡರು. ಜೊತೆಗೆ ಅತ್ಯುತ್ತಮ ಆಕ್ಷನ್‌/ಸಾಹಸ ಕೌಟುಂಬಿಕ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದೆ.[೮೦] ಚಿಕಾಗೋ ಸಿನಿಮಾ ವಿಮರ್ಶಕರ ಸಂಘವು ಜುರಾಸಿಕ್‌ ಪಾರ್ಕ್‌ ಅನ್ನು ಸಾರ್ವಕಾಲಿಕ ಭಯಾನಕ ಚಿತ್ರಗಳಲ್ಲಿ ೫೫ನೆಯದು ಎಂದು ಶ್ರೇಣಿ ನೀಡಿದೆ.

ಪರಂಪರೆಸಂಪಾದಿಸಿ

ಅಮೆರಿಕನ್ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಜುರಾಸಿಕ್‌ ಪಾರ್ಕ್‌ ಅನ್ನು ಸಾರ್ವಕಾಲಿಕ ೩೫ನೇ ಅತ್ಯಂತ ರೋಮಾಂಚಕ ಸಿನಿಮಾ ಎಂದು ೨೦೦೧ರ ಜೂನ್‌ ೧೩ರಂದು ಹೆಸರಿಸಿತು.[೮೧] ಬ್ರೇವೋ ನಿಯತಕಾಲಿಕವು ಲೆಕ್ಸ್‌ ಮತ್ತು ಟಿಮ್ ಅಡುಗೆಮನೆಯಲ್ಲಿ ಎರಡು ರಾಪ್ಟರ್‌ಗಳಿಂದ ದಾಳಿಗೀಡಾಗುವ ದೃಶ್ಯವನ್ನು ಸಾರ್ವಕಾಲಿಕ ೯೫ನೇ ಅತ್ಯಂತ ಭಯಾನಕ ದೃಶ್ಯ ಎಂದು ೨೦೦೫ರಲ್ಲಿ ಹೆಸರಿಸಿತು.[೮೨] ಎಂಪೈರ್‌ ನಿಯತಕಾಲಿಕದ ೧೫ನೇ ವಾರ್ಷಿಕೋತ್ಸವ ೨೦೦೪ರಲ್ಲಿ ನಡೆದಾಗ, ಅದು ಜುರಾಸಿಕ್‌ ಪಾರ್ಕ್‌ ಅನ್ನು ನಿಯತಕಾಲಿಕದ ಇಷ್ಟು ವರ್ಷಗಳ ಅನುಭವದಲ್ಲಿ ೬ನೇ ಅತ್ಯಂತ ಪ್ರಭಾವೀ ಸಿನಿಮಾ ಎಂದು ಹೆಸರಿಸಿತು.[೮೩] ಎಂಪೈರ್‌ ನಿಯತಕಾಲಿಕವು ಬ್ರಾಶಿಯೊಸಾರಸ್‌ ನೊಂದಿಗೆ ಮೊದಲು ಮುಖಾಮುಖಿಯಾಗುವ ದೃಶ್ಯವನ್ನು ಸಿನಿಮಾದಲ್ಲಿ ೨೮ನೇ ಅತ್ಯಂತ ಮಾಂತ್ರಿಕ ಕ್ಷಣ ಎಂದು ಹೆಸರಿಸಿತು.[೮೪] ೨೦೦೮ರಲ್ಲಿ, ಎಂಪೈರ್‌ ನಿಯತಕಾಲಿಕದ ಓದುಗರು, ಸಿನಿಮಾ ನಿರ್ಮಾಪಕರು ಮತ್ತು ವಿಮರ್ಶಕರ ಜನಮತದಲ್ಲಿಯೂ ಈ ಸಿನಿಮಾವನ್ನು ಸಾರ್ವಕಾಲಿಕ ೫೦೦ ಅತ್ಯುತ್ತಮ ಸಿನಿಮಾಗಳಲ್ಲಿ ಒಂದೆಂದು ಹೆಸರಿಸಿದ್ದರು.[೮೫] ಫಿಲ್ಮ್‌ ರಿವ್ಯೂ ದ ೫೫ನೇ ವಾರ್ಷಿಕೋತ್ಸವ ೨೦೦೫ರಲ್ಲಿ ನಡೆದಾಗ, ಅದು ಈ ಸಿನಿಮಾವು ನಿಯತಕಾಲಿಕದ ಇಷ್ಟು ವರ್ಷಗಳ ಅನುಭವದಲ್ಲಿ ಐದು ಅತ್ಯಂತ ಪ್ರಮುಖ ಸಿನಿಮಾಗಳಲ್ಲಿ ಒಂದೆಂದು ಘೋಷಿಸಿತು.[೮೬] ೨೦೦೬ರಲ್ಲಿ, ಐಜಿಎನ್‌ ಜುರಾಸಿಕ್‌ ಪಾರ್ಕ್‌ ಅನ್ನು ಸಾರ್ವಕಾಲಿಕ ೧೯ನೇ ಅತ್ಯಧಿಕ ಸಿನಿಮಾ ಫ್ರಾಂಚೈಸಿ ಎಂದು ಶ್ರೇಣಿ ನೀಡಿದೆ.[೮೭] ೨೦೧೦ರಲ್ಲಿ ಎಂಟರ್‌ಟೈನ್‌ಮೆಂಟ್‌ ವೀಕ್ಲೀಯ ಓದುಗರ ಜನಮತವು ಹಿಂದಿನ ೨೦ ವರ್ಷಗಳಲ್ಲಿ ಅತ್ಯುತ್ತಮ ಬೇಸಿಗೆ ಸಿನಿಮಾ ಎಂದು ಅಭಿಪ್ರಾಯಪಟ್ಟಿದ್ದರು.[೮೮]

ಎಲ್ಲಕ್ಕಿಂತ ಹೆಚ್ಚು ಮಹತ್ವದ್ದೆಂದರೆ ಹಲವಾರು ಚಿತ್ರತಯಾರಕರು ಜುರಾಸಿಕ್‌ ಪಾರ್ಕ್‌ನಲ್ಲಿ ಕಂಪ್ಯೂಟರ್‌ ಜನೆರೇಟೆಡ್‌ ಇಮೇಜರಿಗಳನ್ನು ಬಳಸಿಕೊಂಡಿದ್ದನ್ನು ನೋಡಿದಾಗ, ಈ ಮೊದಲು ಅಸಾಧ್ಯ ಅಥವಾ ತುಂಬಾ ದುಬಾರಿ ಎಂದುಕೊಂಡಿದ್ದ ತಮ್ಮ ಅನೇಕ ಚಿಂತನೆಗಳು, ದೃಶ್ಯಗಳು ಈಗ ಸಾಧ್ಯ ಎಂಬುದನ್ನು ಅರಿತುಕೊಂಡರು. ಸ್ಟ್ಯಾನ್ಲಿ ಕ್ಯುಬ್ರಿಕ್‌ 2001: ಎ ಸ್ಪೇಸ್‌ ಒಡಿಸ್ಸಿ ಸಿನಿಮಾ ನಿರ್ದೇಶಕ, ಸ್ಪಿಲ್‌ಬರ್ಗ್‌ನನ್ನು ಸಂಪರ್ಕಿಸಿ, ಎ.ಐ. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ನಿರ್ದೇಶಿಸುವಂತೆ ಕೇಳಿಕೊಂಡ.[೮೩] ಚಿತ್ರನಿರ್ಮಾಪಕ ವೆರ್ನರ್‌ ಹೆರ್‌ಜಾಗ್‌ ಕೂಡ ಹೀಗೆಯೇ ಪ್ರಭಾವಿತನಾಗಿ, ಸ್ಪಿಲ್‌ಬರ್ಗ್‌ "ಅತ್ಯುತ್ತಮ ಕಥೆಗಾರ" ಎಂಬುದಕ್ಕೆ ಈ ಸಿನಿಮಾ ಒಂದು ಉದಾಹರಣೆ ಮತ್ತು ಆತನಿಗೆ ಕಥೆಗಳಿಗೆ ಸಮನ್ವಯವಾಗುವಂತೆ ಸ್ಪೆಶಲ್‌ ಇಫೆಕ್ಟ್‌ಗಳನ್ನು ಹೇಗೆ ಹೆಣೆಯಬೇಕು ಎಂಬು ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾನೆ.[೮೯] ಜಾರ್ಜ್‌ ಲ್ಯುಕಾಸ್‌ ಸ್ಟಾರ್‌ ವಾರ್ಸ್‌ನ ಕೃತಿಯಾಧಾರಿತ ಸಿನಿಮಾ ಮಾಡಲಾರಂಭಿಸಿದ,[೯೦] ಮತ್ತು ಪೀಟರ್‌ ಜಾಕ್ಸನ್‌ ತನಗೆ ಚಿಕ್ಕವಯಸ್ಸಿನಲ್ಲಿ ಪ್ರೀತಿಯಿದ್ದ ಫ್ಯಾಂಟಸಿ ಸಿನಿಮಾಗಳ ಕುರಿತು ಪುನಾ ಯೋಚಿಸಲಾರಂಭಿಸಿದ. ನಂತರ ಆತ ದಿ ಲಾರ್ಡ್‌ ಆಫ್‌ ದಿ ರಿಂಗ್ಸ್‌ ಮತ್ತು ಕಿಂಗ್‌ ಕಾಂಗ್‌ ನಿರ್ಮಿಸಿದ.[೯೧] ಜುರಾಸಿಕ್‌ ಪಾರ್ಕ್‌ ಕೆಲವು ಸಿನಿಮಾಗಳ ಮತ್ತು ಸಾಕ್ಷ್ಯಚಿತ್ರಗಳ ಅಮೆರಿಕನ್ ಅಡಾಪ್ಟೇಶನ್‌ಗಳಿಗೆ ಸ್ಫೂರ್ತಿಯಾಯಿತು, ಅವೆಂದರೆ ಗಾಡ್ಜಿಲ್ಲಾ, ಕಾರ್ನೊಸಾರ್‌, ಮತ್ತು ವಾಕಿಂಗ್ ವಿತ್ ಡೈನೋಸಾರ್ಸ್‌,[೮೩] ಜೊತೆಗೆ ಹಲವಾರು ವಿಡಂಬನೆಗಳಿಗೂ ಸ್ಫೂರ್ತಿಯಾಯಿತು, ಅವೆಂದರೆ ಲೆಸ್ಲೀ ನಿಲ್ಸೆನ್, ಕಾಮೆಡಿ ಫೀಚರ್‌ ಸ್ಪೈ ಹಾರ್ಡ್‌. ಸ್ಟಾನ್‌ ವಿನ್ಸ್‌ಟನ್‌, ಸಿನಿಮಾ ಬಳಸಿದ್ದ ಹೊಸ ತಂತ್ರಜ್ಞಾನದ ಕುರಿತು ಅತ್ಯಂತ ಉತ್ಸಾಹ ಹೊಂದಿದ್ದರು. ಅವರು ಐಬಿಎಂ ಮತ್ತು ನಿರ್ದೇಶಕ ಜೇಮ್ಸ್‌ ಕೆಮರಾನ್‌ ಜೊತೆ ಸೇರಿ ಡಿಜಿಟಲ್ ಡೊಮೈನ್ ಎಂಬ ಹೊಸ ಸ್ಪೆಶಲ್‌ ಇಫೆಕ್ಟ್ಸ್ ಕಂಪನಿಯನ್ನೇ ಹುಟ್ಟುಹಾಕಿದರು.[೯೨]

ಸಿನಿಮಾ ಇತಿಹಾಸಕಾರ ಟಾಮ್‌ ಶೋನ್‌ ಸಿನಿಮಾದ ನಾವೀನ್ಯತೆ ಮತ್ತು ಪ್ರಭಾವದ ಕುರಿತು ಅಭಿಪ್ರಾಯ ಹೇಳುತ್ತ, "ಒಂದು ರೀತಿಯಲ್ಲಿ, ಜುರಾಸಿಕ್‌ ಪಾರ್ಕ್‌ ೧೯೨೭ರಲ್ಲಿ ಸಿನಿಮಾದಲ್ಲಿ ಧ್ವನಿ ಬಳಕೆ ಉಂಟುಮಾಡಿದಷ್ಟೇ ಕ್ರಾಂತಿಯನ್ನು ಉಂಟುಮಾಡಿದೆ" ಎಂದಿದ್ದಾರೆ.[೯೩]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಸಂಪಾದಿಸಿ

 • ಅಕಾಡೆಮಿ ಪ್ರಶಸ್ತಿ‌
  • ಅತ್ಯುತ್ತಮ ದೃಶ್ಯ ಪರಿಣಾಮಗಳು (ವಿಜೇತ )
  • ಅತ್ಯುತ್ತಮ ಸೌಂಡ್‌ ಮಿಕ್ಸಿಂಗ್‌ (ವಿಜೇತ )
  • ಅತ್ಯುತ್ತಮ ಶಬ್ದ ಸಂಕಲನ (ವಿಜೇತ )
 • ಬಿಎಎಫ್‌ಟಿಎ
  • ಅತ್ಯುತ್ತಮ ಸ್ಪೆಶಲ್‌ ವಿಶ್ಯುವಲ್‌ ಇಫೆಕ್ಟ್ಸ್‌ಗೆ ಬಿಎಎಫ್‌ಟಿಎ ಪ್ರಶಸ್ತಿ (ವಿಜೇತ )
  • ಅತ್ಯುತ್ತಮ ಶಬ್ದಗ್ರಹಣಕ್ಕೆ ಬಿಎಎಫ್‌ಟಿಎ ಪ್ರಶಸ್ತಿ (ನಾಮನಿರ್ದೇಶನ )
 • ಸ್ಯಾಟರ್ನ್‌ ಅವಾರ್ಡ್ಸ್
  • ಅತ್ಯುತ್ತಮ ವೈಜ್ಞಾನಿಕ ಕಾಲ್ಪನಿಕ ಸಿನಿಮಾ (ವಿಜೇತ )
  • ಅತ್ಯುತ್ತಮ ನಿರ್ದೇಶನ (ವಿಜೇತ )
  • ಅತ್ಯುತ್ತಮ ಸ್ಪೆಶಲ್‌ ಇಫೆಕ್ಟ್ಸ್‌ (ವಿಜೇತ )
  • ಅತ್ಯುತ್ತಮ ಚಿತ್ರಕಥೆ (ವಿಜೇತ )
  • ಅತ್ಯುತ್ತಮ ನಟಿ (ಲಾರಾ ಡರ್ನ್‌ - ನಾಮನಿರ್ದೇಶನ )
  • ಕಿರಿಯ ನಟನ ಅಭಿನಯ (ಜೋಸೆಫ್‌ ಮಜೆಲೋ - ನಾಮನಿರ್ದೇಶನ )
  • ಕಿರಿಯ ನಟಿ ಅಭಿನಯ (ಅರಿಯಾನ ರಿಚರ್ಡ್ಸ್ - ನಾಮನಿರ್ದೇಶನ )
  • ಅತ್ಯುತ್ತಮ ಸಂಗೀತ (ನಾಮನಿರ್ದೇಶನ )
  • ಅತ್ಯುತ್ತಮ ವಸ್ತ್ರವಿನ್ಯಾಸ (ನಾಮನಿರ್ದೇಶನ )
  • ಅತ್ಯುತ್ತಮ ಪೋಷಕ ನಟ (ಜೆಫ್‌ ಗೋಲ್ಡ್‌ಬ್ಲಮ್‌ - ನಾಮನಿರ್ದೇಶನ )
  • ಅತ್ಯುತ್ತಮ ಪೋಷಕ ನಟ (ವೆಯ್ನ್‌ ನೈಟ್‌ - ನಾಮನಿರ್ದೇಶನ )
 • ಎಂಟಿವಿ ಮೂವೀ ಅವಾರ್ಡ್ಸ್‌
  • ಅತ್ಯುತ್ತಮ ಸಿನಿಮಾ (ನಾಮನಿರ್ದೇಶನ )
  • ಅತ್ಯುತ್ತಮ ಆಕ್ಷನ್‌ ಸನ್ನಿವೇಶ (ನಾಮನಿರ್ದೇಶನ )
  • ಅತ್ಯುತ್ತಮ ಖಳನಾಯಕ (ನಾಮನಿರ್ದೇಶನ )
 • ಅಮೆರಿಕನ್ ಫಿಲ್ಮ್ ಇನ್ಸ್ ಟಿಟ್ಯೂಟ್
  • ಎಎಫ್‌ಐ'ನ ೧೦೦ ವರ್ಷಗಳು... ೧೦೦ ಚಲನಚಿತ್ರಗಳು - ನಾಮನಿರ್ದೇಶನ
  • ಎಎಫ್‌ಐ'ನ ೧೦೦ ವರ್ಷಗಳು... ೧೦೦ ಥ್ರಿಲ್ಸ್‌ - #೩೫
  • ಎಎಫ್‌ಐ'ನ ೧೦೦ ವರ್ಷಗಳು... ೧೦೦ ಮೂವೀ ಕೋಟ್ಸ್
   • "ಬದುಕು ಒಂದು ದಾರಿ ಕಂಡುಕೊಳ್ಳುತ್ತದೆ." - ನಾಮನಿರ್ದೇಶನ
  • ಎಎಫ್‌ಐ'ನ ೧೦೦ ವರ್ಷಗಳು...೧೦೦ ಚಲನಚಿತ್ರಗಳು (೧೦ನೇ ವಾರ್ಷಿಕೋತ್ಸವ ಆವೃತ್ತಿ) - ನಾಮನಿರ್ದೇಶನ
  • ಎಎಫ್‌ಐ'ನ ೧೦ ಟಾಪ್‌ ೧೦ - ನಾಮನಿರ್ದೇಶನ ವೈಜ್ಞಾನಿಕ ಕಾಲ್ಪನಿಕ ಸಿನಿಮಾ
 • ಜೆಕ್‌ ಲಯನ್‌
  • ಅತ್ಯುತ್ತಮ ವಿದೇಶೀ ಸಿನಿಮಾ (ವಿಜೇತ )

ಇವನ್ನೂ ಗಮನಿಸಿ‌ಸಂಪಾದಿಸಿ

 • ಕಾರ್ನೊಸಾರ್‌
 • The Lost World: Jurassic Park
 • ಜುರಾಸಿಕ್‌ ಪಾರ್ಕ್‌ III
 • ಜುರಾಸಿಕ್‌ ಪಾರ್ಕ್‌ನ ಪಾತ್ರಗಳ ಪಟ್ಟಿ
 • ಜುರಾಸಿಕ್‌ ಪಾರ್ಕ್‌ನಲ್ಲಿ ನಿರ್ನಾಮಗೊಂಡ ಜೀವಿಗಳ ಪಟ್ಟಿ
 • ಎಫ್‌ಎಸ್‌ಎನ್‌ (ಫೈಲ್‌ ಸಿಸ್ಟಮ್‌ ನೇವಿಗೇಟರ್‌) ಜುರಾಸಿಕ್‌ ಪಾರ್ಕ್‌ ಕಂಪ್ಯೂಟರ್‌ನಲ್ಲಿ ಕಾಣುವ ಕಂಪ್ಯೂಟರ್‌ ಇಂಟರ್‌ಫೇಸ್‌

ಉಲ್ಲೇಖಗಳು‌‌ಸಂಪಾದಿಸಿ

 1. "Jurassic Park (1993)". Box Office Mojo. 1993-09-24. Retrieved 2010-06-26.
 2. ೨.೦ ೨.೧ "Jurassic Park". Box Office Mojo. Retrieved 2007-02-08.
 3. http://www.allmovie.com/work/jurassic-park-೨೬೮೦೮
 4. http://jurassicpark.wikia.com/wiki/Jurassic_Park_Series
 5. Michael Crichton (2001). Michael Crichton on the Jurassic Park Phenomenon (DVD). Universal.
 6. ೬.೦ ೬.೧ ೬.೨ ೬.೩ ಜೋಸೆಫ್‌ ಮೆಕ್‌ಬ್ರೈಡ್‌ (೧೯೯೭). ಸ್ಟೀವನ್‌ ಸ್ಪಿಲ್‌ಬರ್ಗ್‌ ಫೇಬರ್‌ ಮತ್ತು ಫೇಬರ್‌, ೪೧೬–೯. ಐಎಸ್‌ಬಿಎನ್‌ ೦-೫೭೧-೧೯೧೭೭-೦
 7. ೭.೦ ೭.೧ ೭.೨ ೭.೩ ಡಿವಿಡಿ ಪ್ರೊಡಕ್ಷನ್‌ ನೋಟ್ಸ್‌
 8. "Leaping Lizards". Entertainment Weekly. 1990-12-07. Retrieved 2007-02-17.
 9. ಸ್ಟೀವ್‌ ಬಿಯೊಡ್ರೊವ್‌‌ಸ್ಕಿ. ಸಿನೆಫೆಂಟಾಸ್ಟಿಕ್‌ ನಿಯತಕಾಲಿಕ, ಸಂಪುಟ. ೨೪, ಸಂಖ್ಯೆ.೨, ಪುಟ. ೧೨, "ಜುರಾಸಿಕ್‌ ಪಾರ್ಕ್‌: ಮೈಕಲ್‌ ಕ್ರೈಟನ್‌"
 10. ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ ೧೦.೬ ೧೦.೭ ೧೦.೮ The Making of Jurassic Park — Hosted by James Earl Jones (VHS). Universal. 1995.
 11. ಲಾರೆನ್ಸ್‌ ಫ್ರೆಂಚ್‌. ಸಿನೆಫೆಂಟಾಸ್ಟಿಕ್‌ ನಿಯತಕಾಲಿಕ, ಸಂಪುಟ.೨೪, ಸಂಖ್ಯೆ.೨, ಪುಟ. ೯, "ಜುರಾಸಿಕ್‌ ಪಾರ್ಕ್‌: ಡೈನೋಸಾರ್‌‌ ಮೂವ್‌ಮೆಂಟ್ಸ್‌"
 12. ಶೇ, ಡಂಕನ್‌, ಪು. ೪೯.
 13. ೧೩.೦ ೧೩.೧ ಶೇ, ಡಂಕನ್‌, ಪು. ೧೩೪–೫.
 14. ಶೋನ್‌, ಟಾಮ್‌. ಬ್ಲಾಕ್‌ಬಸ್ಟರ್‌: ಹೌ ಹಾಲಿವುಡ್‌ ಲರ್ನಡ್‌ ಟು ಸ್ಟಾಪ್‌ ವರಿಯಿಂಗ್ ಆಂಡ್ ಲವ್‌ ಸಮ್ಮರ್‌ ಪುಟ ೨೧೮. (ಸೈಮನ್ ಮತ್ತು ಶೂಸ್ಟರ್‌, ೨೦೦೩). ಐಎಸ್‌ಬಿಎನ್‌ ೦-೭೪೩೨-೩೫೬೮-೧, ೯೭೮೦೭೪೩೨೩೫೬೮೬
 15. ಶೇ, ಡಂಕನ್‌, ಪು. ೩೯–೪೨.
 16. ೧೬.೦ ೧೬.೧ ಶೇ, ಡಂಕನ್‌, ಪು. ೫೫–೬.
 17. "A Tale Of Two 'Jurassics'". Entertainment Weekly. 1993-06-18. Retrieved 2007-02-17.
 18. ೧೮.೦ ೧೮.೧ ಮೆಕ್‌ಬ್ರೈಡ್‌, ಪು. ೪೨೧–೪೨೨.
 19. ಶೇ, ಡಂಕನ್‌, ಪು.೭೦.
 20. ಶೇ, ಡಂಕನ್‌, ಪು. ೬೫ ಮತ್ತು ೬೭.
 21. ಶೇ, ಡಂಕನ್‌, ಪು. ೮೬.
 22. ಶೇ, ಡಂಕನ್‌, ಪು. ೯೧–೯೨.
 23. ೨೩.೦ ೨೩.೧ ೨೩.೨ ಶೇ, ಡಂಕನ್‌, ಪು. ೯೫–೧೦೫.
 24. ಶೇ, ಡಂಕನ್‌, ಪು. ೧೧೦–೧.
 25. "The 200 things that rocked our world". Empire. February 2006. p. 131.
 26. ೨೬.೦ ೨೬.೧ ಶೇ, ಡಂಕನ್‌, ಪು. ೧೧೩–೧೧೪.
 27. ಶೇ, ಡಂಕನ್‌, ಪು. ೧೧೮.
 28. ಶೇ, ಡಂಕನ್‌, ಪು. ೧೨೦.
 29. Army Archerd (1992-12-01). "Spielberg parks 'Jurassic' under sked, budget". Variety. Retrieved 2007-01-27.
 30. ಶೇ, ಡಂಕನ್‌, ಪು. ೧೨೬.
 31. Brian Knep (1995). "Dinosaur Input Device". Proceedings of the SIGCHI Conference on Human Factors in Computing Systems. pp. 304–309. Unknown parameter |coauthors= ignored (|author= suggested) (help)
 32. John Peterson (1994). "Jurassic Park - The Illusion of Life". Silicon Valley ACM Siggraph. p. 1. Retrieved 2008-04-19. Unknown parameter |coauthors= ignored (|author= suggested) (help)
 33. ಶೇ, ಡಂಕನ್‌, ಪು. ೧೩೮.
 34. ೩೪.೦ ೩೪.೧ ೩೪.೨ ೩೪.೩ ೩೪.೪ ಶೇ, ಡಂಕನ್‌ ಪು. ೧೪೪–೬.
 35. ಶೇ, ಡಂಕನ್‌, ಪು. ೧೨೩.
 36. Stephen Jay Gould (1993-08-12). "Dinomania". The New York Review of Books. Retrieved 2007-04-02.
 37. ೩೭.೦ ೩೭.೧ ೩೭.೨ Richard Corliss (1993-04-26). "Behind the Magic of Jurassic Park". TIME. Retrieved 2007-01-26.
 38. ಪಾಲ್‌, ಜಿ.ಎಸ್‌. ೧೯೮೮. ಪ್ರಿಡೇಟರಿ ಪ್ರಿಡೇಟರಿ ಡೈನೋಸಾರ್ಸ್‌ ಆಫ್‌ ದಿ ವರ್ಲ್ಡ್ ನ್ಯೂಯಾರ್ಕ್‌: ಸೈಮನ್‌ ಮತ್ತು ಶೂಸ್ಟರ್‌. ೪೬೪ ಪು.
 39. ಪಾಲ್‌, ಜಿ.ಎಸ್‌. ೨೦೦೨. ಡೈನೋಸಾರ್ಸ್‌ ಆಫ್‌ ದಿ ಏರ್‌: ದಿ ಎವಲ್ಯೂಶನ್‌ ಆಂಡ್‌ ಲಾಸ್‌ ಆಫ್‌ ಫ್ಲೈಟ್‌ ಇನ್‌ ಡೈನೋಸಾರ್ಸ್‌ ಆಂಡ್‌ ಬರ್ಡ್ಸ್ ಬಾಲ್ಟಿಮೋರ್‌: ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾನಿಲಯ ಮುದ್ರಣಾಲಯ, ೪೭೨ ಪುಟಗಳು
 40. ಶೇ, ಡಂಕನ್‌, ಪು. ೩೬.
 41. ಶೇ, ಡಂಕನ್‌, ಪು. ೮೩.
 42. ಶೇ, ಡಂಕನ್‌, ಪು. ೬೪.
 43. "The Beastmaster". Entertainment Weekly. 1993-03-12. Retrieved 2007-02-17.
 44. ೪೪.೦ ೪೪.೧ "Jurassic Park Licensees". Moby Games. Retrieved 2007-03-12.
 45. "Jurassic Park Series 1 & 2". Jurassic Park Legacy. Retrieved 2007-03-12.
 46. Gail Herman (1993). Jurassic Park. Grosset & Dunlap. p. 88. ISBN 0-448-40172-X. Unknown parameter |coauthors= ignored (|author= suggested) (help)
 47. "Jurassic Park Unleashed". Jurassic Park Legacy. Retrieved 2007-03-29.
 48. Michael Sauter (1993-06-04). "Trailer Park". Entertainment Weekly. Retrieved 2007-02-17.
 49. Josh Horowitz (2007-02-15). "Michael Bay Divulges 'Transformers' Details — And Word Of 'Bad Boys III'". MTV. Retrieved 2007-02-15.
 50. Steven Spielberg (2001). Steven Spielberg directs Jurassic Park (DVD)|format= requires |url= (help). Universal Pictures.
 51. "Beltway Barbra". Entertainment Weekly. 1993-05-21. Retrieved 2007-02-17.
 52. "The Stars Rain Down On Washington". Entertainment Weekly. 1993-06-11. Retrieved 2007-02-17.
 53. Adam Sandler (1994-03-22). "'Jurassic' rumbles to vid in October". Variety. Retrieved 2007-01-27.
 54. IGN staff (2000-06-16). "Jurassic Park". IGN. Retrieved 2007-03-06.
 55. "Jurassic Park / The Lost World: The Collection". IGN. Retrieved 2007-03-06.
 56. "Jurassic Park Trilogy". IGN. Retrieved 2007-03-06.
 57. IGN DVD (2005-11-17). "Jurassic Park Adventure Pack". IGN. Retrieved 2007-03-06.
 58. "The Exhibits". Jurassic Park Legacy. Retrieved 2007-03-29.
 59. "Jurassic Park". stevenenglehart.com. Retrieved 2007-02-24.
 60. Mink, Eric (April 25, 1995). "'Making of Jurassic Park' really dino-mite". New York Daily News. Retrieved 29 March 2009.
 61. ೬೧.೦ ೬೧.೧ Huff, Richard (May 10, 1995). "Ratings: 'Jurassic' parks NBC right at the top of the Nielsens". New York Daily News. Retrieved 29 March 2009.
 62. ೬೨.೦ ೬೨.೧ "Jurassic Park: The Ride (1996–present)". The Studio Tour. Retrieved 2007-03-13.
 63. ೬೩.೦ ೬೩.೧ "JP: Hollywood River Adventure". Jurassic Park Legacy. Retrieved 2007-03-13.
 64. "Islands Of Adventure: Jurassic Park Island". Jurassic Park Legacy. Retrieved 2007-03-13.
 65. "Hollywood Scores Big". Entertainment Weekly. 1994-01-21. Retrieved 2007-02-17.
 66. Richard Corliss (1993-06-28). "Hollywood's Summer: Just Kidding". TIME. Retrieved 2007-01-26.
 67. "Jurassic Park (1993) - Weekend Box Office". Box Office Mojo. Retrieved 2007-02-08.
 68. Don Groves (1993-07-20). "'Jurassic' renders Japan B.O. record extinct". Variety. Retrieved 2007-02-11.
 69. ಮೆಕ್‌ಬ್ರೈಡ್‌, ಪು. ೪೨೪.
 70. "Titanic sinks competitors without a trace". BBC. 1998-02-25. Retrieved 2007-04-02.
 71. Janet Maslin (1993-06-11). "Screen Stars With Teeth To Spare". The New York Times. Retrieved 2007-02-04.
 72. Peter Travers (June 1993). "Jurassic Park". Rolling Stone. Archived from the original on 2007-08-24. Retrieved 2007-02-04.
 73. Roger Ebert (1993-06-11). "Jurassic Park". Chicago Sun-Times. Retrieved 2007-02-04.
 74. ರಿವ್ಯೂ ಆಫ್‌ ಜುರಾಸಿಕ್‌ ಪಾರ್ಕ್‌ ಎಂಪೈರ್‌ ಆನ್‌ಲೈನ್‌.ಕಾಂ
 75. "Jurassic Park". Rotten Tomatoes. Retrieved 2010-06-09.
 76. "Jurassic Park Awards". Allmovie. Retrieved 2007-02-13.
 77. "1994 Hugo Awards". Thehugoawards.org. Retrieved 2008-06-08.
 78. "Past Saturn Awards". Saturnawards.org. Retrieved 2007-04-14.
 79. "1993 20th People's Choice Awards". The Envelope – Los Angeles Times. Archived from the original on 2006-10-31. Retrieved 2007-02-14.
 80. "Fifteenth Annual Youth in Film Awards 1992–1993". Youngartistawards.org. Retrieved 2007-02-14.
 81. "AFI's 100 Years, 100 Thrills". AFI. 2001-06-13. Archived from the original on February 8, 2007. Retrieved 2007-02-13.
 82. "The 100 Scariest Movie Moments". Bravo TV. Archived from the original on February 19, 2007. Retrieved 2007-02-13. Unknown parameter |deadurl= ignored (help)
 83. ೮೩.೦ ೮೩.೧ ೮೩.೨ Ian Freer (2004-04-30). "The 15 Most Influential Films Of Our Lifetime". Empire. p. 120.
 84. "50 Most Magical Movie Moments". Empire. 2003-11-28. p. 122.
 85. 500 ಸಾರ್ವಕಾಲಿಕ ಅತ್ಯುತ್ತ, ಚಲನಚಿತ್ರಗಳು ಎಂಪೈರ್‌ ನಿಯತಕಾಲಿಕ ಆನ್‌ಲೈನ್‌
 86. "Film Review Special #59 - 55 Years Anniversary contents". Film Review. 2005-07-28. Retrieved 2007-03-06.
 87. Stax, Brian Linder, Todd Gilchrist, Eric Moro, Chris Carle (2006-11-30). "Top 25 Movie Franchises of All Time: #19". IGN. Retrieved 2007-03-08.CS1 maint: multiple names: authors list (link)
 88. "ಸಮ್ಮರ್‌ ಬ್ಲಾಕ್‌ಬಸ್ಟರ್ಸ್‌: ದಿ ನ್ಯೂ ಜನರೇಶನ್‌," ಎಂಟರ್‌ಟೈನ್‌ಮೆಂಟ್‌ ವೀಕ್ಲೀ, ಪುಟ ೩೨, ಸಂಚಿಕೆ #೧೧೧೨, ಜುಲೈ ೨೩, ೨೦೧೦.
 89. "INTERVIEW: Strong Man on a Mission; Werner Herzog Talks About "Invincible"".
 90. Marcus Hearn (2005). "ILM and the Digital Revolution" The Cinema of George Lucas. New York: Harry N. Abrams Inc, Publishers. p. 174. ISBN 0-8109-4968-7.
 91. Sibley, Brian (2006). Peter Jackson: A Film-maker's Journey. London: Harpercollins. p. 310. ISBN 0-00-717558-2.
 92. "Rex n' Effects". Entertainment Weekly. 1993-06-18. Retrieved 2007-02-18.
 93. ಶೋನ್‌, ಟಾಮ್‌. ಬ್ಲಾಕ್‌ಬಸ್ಟರ್‌: ಹೌ ಹಾಲಿವುಡ್‌ ಲರ್ನಡ್‌ ಟು ಸ್ಟಾಪ್‌ ವರಿಯಿಂಗ್ ಆಂಡ್ ಲವ್‌ ಸಮ್ಮರ್‌ ಪುಟ. ೨೧೩. (ಸೈಮನ್ ಮತ್ತು ಶೂಸ್ಟರ್‌, ೨೦೦೪). ಐಎಸ್‌ಬಿಎನ್‌ ೦-೭೪೩೨-೩೫೬೮-೧, ೯೭೮೦೭೪೩೨೩೫೬೮೬

ಬಾಹ್ಯ ಕೊಂಡಿಗಳು‌‌ಸಂಪಾದಿಸಿ

ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಜುರಾಸಿಕ್‌ ಪಾರ್ಕ್‌ (ಸಿನಿಮಾ)]]
Awards and achievements
ಪೂರ್ವಾಧಿಕಾರಿ
Star Trek VI: The Undiscovered Country
Saturn Award for Best Science Fiction Film
1993
ಉತ್ತರಾಧಿಕಾರಿ
Stargate