ಜಿ. ಎನ್. ಉಪಾಧ್ಯ
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಜಿ.ಎನ್.ಉಪಾಧ್ಯರವರು, ಮುಂಬಯಿನಗರಕ್ಕೆ ಬಂದಾಗ 'ಕರ್ನಾಟಕ ಮಲ್ಲ' ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ದುಡಿದರು. ಕೆಲಕಾಲ ಮುಂಬಯಿನ ಕನ್ನಡ ಭವನ ಜೂನಿಯರ್ ಕಾಲೇಜ್ ನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಸೇರಿದರು. ಡಾ.ತಾಳ್ತಜೆ ವಸಂತ್ ಕುಮಾರ್, ನಿವೃತ್ತರಾದ ಬಳಿಕ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. 'ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ', 'ಮಹಾರಾಷ್ಟ್ರದ ಕನ್ನಡ ಶಾಸನಗಳ ವರ್ಣನಾತ್ಮಕ ಸೂಚಿ', 'ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು', 'ಮಹಾರಾಷ್ಟ್ರ ಕರ್ನಾಟಕ ಸಾಂಸ್ಕೃತಿಕ ಬಾಂಧವ್ಯ' ಮೊದಲಾದ ಸಂಶೋಧನ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.'ಚಿತ್ರದುರ್ಗದ, ಮುರುಘ ರಾಜೇಂದ್ರಮಠ,'ದ 'ಶಿಕ್ಷಣವಿಭೂಷಣ' ಪ್ರಶಸ್ತಿ-ಪುರಸ್ಕೃತರಾದ,'ಗಣೇಶ್ ಉಪಾಧ್ಯ'ರವರು,ಮಹಾರಾಷ್ಟ್ರ ಸರ್ಕಾರದ ಮಾಧ್ಯಮಿಕ ಹಾಗೂ ಉಚ್ಚ ಮಾಧ್ಯಮಿಕ ವಿಭಾಗದ ಪಠ್ಯಪುಸ್ತಕಮಂಡಳಿಯ ಬೆಂಗಳೂರಿನ," ಕರ್ನಾಟಕ ಲೇಖಕರ ಮತ್ತು ಪ್ರಕಾಶಕರ ಸಂಘ" ದ ರಾಜ್ಯಪರಿಷತ್ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ಪರಿಚಯ
ಬದಲಾಯಿಸಿಉಪಾಧ್ಯರವರು, ದಕ್ಷಿಣ ಕನ್ನಡದ ಉಡುಪಿ ತಾಲ್ಲೂಕಿನ ಕೋಟಾದಲ್ಲಿ ಫೆಬ್ರವರಿ ೭ ರ ೧೯೬೬ ರಲ್ಲಿ ಜನಿಸಿದರು. ತಂದೆ ನಾಗೇಂದ್ರ ಉಪಾಧ್ಯ ;ತಾಯಿ ಇಂದಿರಾ.ಈ ಪರಿವಾರದ ೪ ಹೆಣ್ಣು ೩ ಗಂಡು ಗಂಡು ಮಕ್ಕಳಲ್ಲಿ ಉಪಾಧ್ಯರವರೇ ಹಿರಿಯರು. ಕೇವಲ ೮-೧೦ ಮನೆಗಳಿದ್ದ ಸಣ್ಣ ಹಿಡುವಳಿಯ ಜಮೀನಿನ ಕೃಷಿಕ ಕುಟುಂಬದ ರೈತಾಪಿ ವಾತಾವರಣದಲ್ಲಿ ಬೆಳೆದರು. ಅವರ ಅಜ್ಜನವರು ಸಾಲಿಗ್ರಾಮದಲ್ಲಿ ಸಂಸ್ಕೃತ ಪಂಡಿತರು. ಅವರ ಶಿಷ್ಯರ ಸಾಲಿನಲ್ಲಿ ಶಿವರಾಮ ಕಾರಂತರು, ಮತ್ತು ತಾಯಿ, ಇಂದಿರ ಇರುತ್ತಿದ್ದರು. ತಾಯಿಯವರು ೫ ನೆಯ ಇಯತ್ತೆಯವರೆಗೆ ಓದಿದ್ದರು. ತಂದೆಯವರು ಕುಮಾರ ವ್ಯಾಸ ಕರ್ನಾಟಕ ಭಾರತದ ಕಥಾಮಂಜರಿ ವಾಚನ ಮಾಡಿದರೆ, ಅದಕ್ಕೆ ತಾಯಿಯವರು ಸಮರ್ಥವಾಗಿ ಅರ್ಥ ವಿವರಣೆ ಮಾಡುತ್ತಿದ್ದರು. ಉಪಾಧ್ಯರವರು, ವಂಡಾರು ಸಮೀಪದ ಕಿರಾಡಿ ಕುಗ್ರಾಮದಲ್ಲಿ ಸೀತಾನದಿಯ ಸಮೀಪದ ಅವರ್ಸೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ, ೭ ನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು.
ಹುಬ್ಬಳ್ಳಿಯ ಜೀವನ
ಬದಲಾಯಿಸಿತಮ್ಮ ಸೋದರ ಮಾವನವರ ಮನೆಯಲ್ಲಿ ಇದ್ದುಕೊಂಡು ಕೋಟಾದ 'ವಿವೇಕ್ ಪ್ರೌಢಶಾಲೆ'ಯಲ್ಲಿ ತಮ್ಮ ಪ್ರಾರಂಭಿಕ ಶಿಕ್ಷಣ ಗಳಿಸಿ, ಹುಬ್ಬಳ್ಳಿಯಲ್ಲಿದ್ದ ಅವರ ತಂದೆಯವರ ಗೆಳೆಯನ ಹೋಟೆಲ್ ನಲ್ಲಿ ಇದ್ದುಕೊಂಡು ೫ ವರ್ಷ ಸಪ್ಲೈಯರ್, ಕ್ಯಾಷಿಯರ್, ಮ್ಯಾನೇಜರ್ ಮೊದಲಾದ ಕೆಲಸಗಳನ್ನು ನಿರ್ವಹಿಸಿ ಬಿಡುವಿನ ಸಮಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸ್ವಲ್ಪ ಸಮಯದ ನಂತರ, ಬೆಳಿಗ್ಗೆ ಕಾಲೇಜಿಗೆ ಹೋಗಲು ಹೋಟೆಲ್ ಮಾಲೀಕರಿಂದ ಅನುಮತಿ ದೊರೆಯಿತು. ಡೆಕ್ಕನ್ ಥಿಯೇಟರ್ ಎದುರಿಗಿನ ಮರಾಠಿ ಗಲ್ಲಿಯ ಹೋಟೆಲ್ ನಲ್ಲಿ ದಿನವಿಡಿ ವ್ಯಾಪಾರ ನಡೆಯುತ್ತಿತ್ತು. ರಾತ್ರಿ ೧೦ ರವರೆಗೆ ಬಿಡುವಿಲ್ಲದ ಕೆಲಸ ಇರುತ್ತಿತ್ತು. ರಾತ್ರಿ ೧೦ ಗಂಟೆಯ ಬಳಿಕ ಹತ್ತಿರದಲ್ಲೇ ಇದ್ದ ಕರಿಯಮ್ಮನವರ ದೇವಸ್ಥಾನದ ಲೈಟ್ ಬೆಳಕಿನಲ್ಲಿ ಕುಳಿತು ಅಭ್ಯಾಸ ಮಾಡುತ್ತಿದ್ದರು. ಬಿ.ಎ ಓದಲು ಅಂಜುಮಾನ್ ನೆಹರೂ ಮಹಾವಿದ್ಯಾಲಯ ಪ್ರವೇಶ, ಕನ್ನಡ ಮೇಜರ್ ತೆಗೆದುಕೊಂಡು. ವ್ಯಾಸಂಗ ಮುಂದುವರೆಸಲು ಇಚ್ಛಿಸಿದರು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಹೋಟೆಲ್ ಕೆಲಸ ಬಿಟ್ಟು, ಗೆಳೆಯನೊಬ್ಬನ ಮನೆಯಲ್ಲೇ ವಾಸ್ತವ್ಯ ಮಾಡಬೇಕಾದ ಪ್ರಸಂಗ ಬಂತು. ಆಗ ತಿಂಗಳ ಖರ್ಚಿಗೆಂದು ಕಾಲೇಜಿನ ಉಪಾಧ್ಯಾಯರೆಲ್ಲಾ ಸೇರಿ ೬ ತಿಂಗಳ ಕಾಲ, ವಂತಿಕೆ ಹಾಕಿ ಹಣ ಸಂಗ್ರಹಿಸಿ ಸಹಕರಿಸಿದರು. ವರ್ಷದ ಶ್ರೇಷ್ಠ ವಿದ್ಯಾರ್ಥಿ ಮಹಾವಿದ್ಯಾಲಯದಲ್ಲಿ ಆಯ್ಕೆಯಾದರೂ ನಿರೀಕ್ಷಿಸಿದ್ದ ರ‍್ಯಾಂಕ್ ದೊರೆಯಲಿಲ್ಲ.
ಮುಂಬಯಿನಲ್ಲಿ
ಬದಲಾಯಿಸಿಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಎಂ.ಎ.ಪ್ರವೇಶ ಪರೀಕ್ಷೆಯಲ್ಲಿ ತೃತಿಯ ರ‍್ಯಾಂಕ್ ಗಳಿಸಿದ ಉಪಾಧ್ಯ ಕಾಲೇಜಿನಲ್ಲಿ ಪ್ರವೇಶ ಪಡೆದರು. ಆದರೆ ಮೆರಿಟ್ ಶಿಷ್ಯವೇತನ ಸಿಗದೆ ಮನನೊಂದ ಉಪಾಧ್ಯ, ಮುಂಬಯಿ ವಿಶ್ವ ವಿದ್ಯಾಲಯಕ್ಕೆ ತೆರಳಿ, ಎಂಎ.ಪ್ರವೇಶ ಪಡೆದುಕೊಂಡರು. ಮುಂಬಯಿನಗರದಿಂದ ಪ್ರಕಟಗೊಳ್ಳುತ್ತಿದ್ದ ಏಕೈಕ ಕನಡ ದಿನಪತ್ರಿಕೆ, 'ಕರ್ನಾಟಕ ಮಲ್ಲ'ದಲ್ಲಿ ಕೆಲಸ ಮಾಡುತ್ತಲೇ ಎಂಎ. ಮುಗಿಸಿ 'ಪ್ರತಿಷ್ಠಿತ ವರದರಾಜ್ಯ ಆದ್ಯ ಸ್ವರ್ಣಪದಕ' ವಿಜೇತರಾದರು. ಕನ್ನಡ ಭವನ ಕಿರಿಯ ಮಹಾವಿದ್ಯಾಲಯದ ರಾತ್ರಿ ಕಾಲೇಜಿನಲ್ಲಿ ಅಧ್ಯಾಪಕನಾಗಿ ಸೇರಿದರು. 'ಯುಜಿಸಿ ನೆಟ್ ಪರೀಕ್ಷೆ'ಯಲ್ಲಿ ಉತ್ತೀರ್ಣರಾಗಿ ೧೯೯೪ ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನ ಹುದ್ದೆಗೆ ಆಯ್ಕೆಯಾದರು. ಆಗಿನ ಕನ್ನಡ ವಿಭಾಗದ ಮುಖ್ಯಸ್ಥ, ಡಾ.ತಾಳ್ತಜೆ ವಸಂತಕುಮಾರ ಅವರ ದಿವ್ಯ ಮಾರ್ಗದರ್ಶನ ದೊರೆಯಿತು. ೨೦೦೧ ರಲ್ಲಿ 'ರೊಟೇಶನ್' ನಿಯಮದಂತೆ ಡಾ.ಉಪಾಧ್ಯರನ್ನು ವಿಭಾಗದ ಮುಖ್ಯಸ್ಥನನ್ನಾಗಿ ಮಾಡಲಾಯಿತು.
ಕನ್ನಡ ವಿಭಾಗಕ್ಕೆ 'ಎ ಗ್ರೇಡ್ ಪಂಚತಾರಾ ದರ್ಜೆ'
ಬದಲಾಯಿಸಿ೨೦೦೭ ರಲ್ಲಿ ಮತ್ತಷ್ಟು ಹೆಚ್ಚು ಜವಾಬ್ದಾರಿ ನಿರ್ವಹಿಸಬೇಕಾಯಿತು. 'ಯುಜಿಸಿ ಪ್ರಾಯೋಜಿತ ನ್ಯಾಕ್ ಸಮಿತಿ ವಿಶ್ವವಿದ್ಯಾಲಯ ಮಾದರಿ ವಿಭಾಗ'ವೆಂದು ಗುರುತಿಸಿ 'ಎ ಗ್ರೇಡ್ ಪಂಚತಾರಾ ದರ್ಜೆ'ಯನ್ನು ಪ್ರದಾನಿಸಿತು. ವಿಭಾಗದ ಪ್ರಕಟಣೆ ೩೮ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ರಾಷ್ಟ್ರದ ೧೨ ನೆಯ ಪಂಚವಾರ್ಷಿಕ ಯೋಜನೆಯ ಅಡಿಯಲ್ಲಿ ೨ ಹೊಸಹುದ್ದೆಗಳಿಗೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಗೆ ಬೇಡಿಕೆ ಸಲ್ಲಿಸಿದ್ದು ನೇಮಕಾತಿ ಆರಂಭವಾಗಿದೆ. ಒಂದು ಪೂರ್ಣ ಪ್ರಮಾಣದ ೪ ಮಂದಿ ಪ್ರಾಧ್ಯಾಪಕರಿರುವ ಘಟಕ ಅಸ್ತಿತ್ವಕ್ಕೆ ಅನುಮತಿ ಸಿಗುವ ಹಂತದಲ್ಲಿದೆ. ವಿಭಾಗದ ಗ್ರಂಥಾಲಯಕ್ಕೆ ಕಾಯಕಲ್ಪ ನೀಡಲು ಯುಜಿಸಿ ೫ ಲಕ್ಷ ಅನುದಾನ ನೀಡಿದೆ. ಮೊದಲು ಒಬ್ಬರಿಗೆ ಸಿಗುತ್ತಿದ್ದ ಶಿಷ್ಯವೇತನ ಈಗ ೪ ಜನ ಅರ್ಹ ವಿದ್ಯಾರ್ಥಿಗಳಿಗೆ ದೊರೆಯುವ ವ್ಯವಸ್ಥೆ ಜಾರಿಗೆ ಬಂದಿದೆ. ಆ ವಿದ್ಯಾರ್ಥಿವೇತನಗಳ ಹೆಸರುಗಳು ಈ ರೀತಿ ಇವೆ :
- ರಾಜೀವ್ ಗಾಂಧಿ ಶಿಷ್ಯವೇತನ
- ಕನ್ನಡ ಅಭಿವೃದ್ಧಿ ಪ್ರಾಧಿಕಾರ
- ಕುಲಪತಿ ಶಿಷ್ಯವೇತನ
- ಕಲಿಕಾ ಯೋಜನೆಗೆ ನೆರವು
- ಕರ್ನಾಟಕ ಸಂಘದ ಶಿಷ್ಯವೇತನ
ಶ್ರೀ. ಉಪಾಧ್ಯ ಮಂಡಿಸಿದ ಸಂಶೋಧನಾ ಮಹಾಪ್ರಬಂಧ, " ಮಹಾರಾಷ್ಟ್ರದ ಕನ್ನಡಶಾಸನಗಳು ಮತ್ತು -ಸಾಂಸ್ಕೃತಿಕ ಅಧ್ಯಯನ ".'ಭಾಷಾವಿಜ್ಞಾನ', 'ಪತ್ರಿಕೊದ್ಯಮ', ಹಾಗೂ 'ವಿಮರ್ಶೆ', ಅವರ ಆಸಕ್ತಿಯ ಕ್ಷೇತ್ರಗಳು. ಕರ್ನಾಟಕದಲ್ಲಿ ಕೆಲಕಾಲ ಪತ್ರಿಕೆಯೊಂದರ ಉಪಸಂಪಾದಕರಾಗಿ, ಕಾರ್ಯ ನಿರ್ವಹಿಸಿದ್ದರು. ೩೩ ಉಪಾಧ್ಯರ ಕೃತಿಗಳು ಬೆಳಕು ಕಂಡಿವೆ.
ಉಪಾಧ್ಯರ ಯಶಸ್ಸಿಗೆ ಕಾರಣ
ಬದಲಾಯಿಸಿಬಾಲ್ಯದಲ್ಲೇ ಸಾಹಿತ್ಯದ ಬಗ್ಗೆ ಹುದುಗಿದ್ದ ಅವ್ಯಕ್ತ ಆಸೆ ಗರಿಗೆದರಿ ಹಾರಾಡಲು ಆರಂಭಿಸಲು ಕಾರಣವಾಗಿದ್ದು ಕೋಟದಲ್ಲಿನ ವಿವೇಕ್ ಹೈಸ್ಕೂಲಿನ ಸುಸಜ್ಜಿತ ಗ್ರಂಥ ಭಂಡಾರವಿದ್ದ ವಾತಾವರಣ . ಅದೇ ಊರಿನ ನಿವಾಸಿ ಶಿವರಾಮಕಾರಂತರ ಜೊತೆಗಿನ ಒಡನಾಟ. ಹುಬ್ಬಳ್ಳಿಯಲ್ಲಿದ್ದಾಗ, ಪ್ರೊ. ಹೇಮಗಿರಿ ಮಠರವರು, ಸಾಂಸ್ಕೃತಿಕ ಕಾರ್ಯಕ್ರಗಳಿಗೆ ತಪ್ಪದೆ ಕರೆದೊಯ್ಯುತ್ತಿದ್ದರಲ್ಲದೆ, ಡಾ. ಪಾಟೀಲ್ ಪುಟ್ಟಪ್ಪನವರ ಕೃತಿಗಳನ್ನು ಪರಿಚಯಿಸಿ ಅವುಗಳನ್ನು ಓದಲು ಪ್ರೋತ್ಸಾಹಿಸಿದರು.
ಪರಿವಾರ
ಬದಲಾಯಿಸಿಡಾ. ಉಪಾಧ್ಯರವರ ಬಿಡುವಿಲ್ಲದ ದಿನಚರಿಗೆ ನಗುಮುಖದಿಂದ ಸ್ಪಂದಿಸುತ್ತಾ, ಸಹಕರಿಸುತ್ತಿರುವ ಅವರ ಪ್ರೀತಿಯ ಪತ್ನಿ ವಿದ್ಯಾ, ಮತ್ತು ಮಗ ಅಭಿಜಿತ್, ಅವರ ಬೆಂಬಲಿಗರು.
’ಅಭಿಜಿತ್ ಪುಸ್ತಕ ಪ್ರಕಾಶನಾಲಯ,’ ಸ್ಥಾಪನೆ
ಬದಲಾಯಿಸಿಕಳೆದ ನಾಲ್ಕೈದು ವರ್ಷಗಳ ಹಿಂದೆ ತಮ್ಮದೇ ಆದ ’ಅಭಿಜಿತ್ ಪುಸ್ತಕ ಪ್ರಕಾಶನ,’ ವನ್ನು ಸ್ಥಾಪಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳ ಎಂ. ಫಿಲ್ ; ಪಿ.ಎಚ್.ಡಿ, ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿ, ಅವರೊಡನೆ ಸಹಕರಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ, ’ಅಭಿಜಿತ್ ಪುಸ್ತಕ ಪ್ರಕಾಶನಾಲಯ, ’ಕ್ಕೆ, ೨ ವರ್ಷಗಳ ಹಿಂದೆ ’ಎ, ಗ್ರೇಡ್,’ ಮಾನ್ಯತೆ ಪ್ರದಾನ ಮಾಡಿ ಗೌರವಿಸಿದೆ. ’ಅಭಿಜಿತ್ ಪುಸ್ತಕ ಪ್ರಕಾಶನಾಲಯ,’ ನಿಂದ ಪ್ರಕಟಗೊಂಡ ಹಲವಾರು ಕೃತಿಗಳಿಗೆ ಹೊರನಾಡಿನ ಪ್ರಶಸ್ತಿ ಗೌರವಗಳು ಲಭಿಸಿವೆ. ಡಾ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಎಂ.ಫಿಲ್ ; ಪಿ.ಎಚ್.ಡಿ, ಪದವಿಗಳನ್ನು ಪಡೆದಿದ್ದಾರೆ. ಪ್ರಸ್ತುತದಲ್ಲಿ ಸುಮಾರು ೨೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.
’ಕನ್ನಡ ಕಲಿಯೋಣ ಬನ್ನಿ,’-ಮಕ್ಕಳ ಕೈಪಿಡಿ
ಬದಲಾಯಿಸಿ'ಮಹಾರಾಷ್ಟ್ರ ಸರ್ಕಾರದ ಮಾಧ್ಯಮಿಕ, ಉಚ್ಚಮಾಧ್ಯಮಿಕ ವಿಭಾಗದ ಪಠ್ಯಪುಸ್ತಕ ಮಂಡಳಿಯ ಸದಸ್ಯರಾಗಿ', 'ಮಾರ್ಗದರ್ಶಕರಾಗಿ', 'ಬೆಂಗಳೂರಿನ ಕರ್ನಾಟಕ ಲೇಖಕರ ಮತ್ತು ಪ್ರಕಾಶಕರ ಸಂಘದ ರಾಜ್ಯಪರಿಷದ್ ಸದಸ್ಯರಾಗಿದ್ದಾರೆ. ೨೫ ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಒಂದು ವಿಶೇಷ ಪ್ರಯೋಗ, ಮುಂಬಯಿ ಚಿಣ್ಣರ ಮನಸ್ಸನ್ನು ತಟ್ಟಿದೆ. ’ಕನ್ನಡ ಕಲಿಯೋಣ ಬನ್ನಿ,’ ಯೆಂಬ ಚಿಣ್ಣರ ಬಿಂಬದ ’ಮಕ್ಕಳ ಕೈಪಿಡಿ,’ ಯು,ಜನಪ್ರಿಯವಾಗಿದೆ.
ಸಂಶೋಧನೆಗಳು
ಬದಲಾಯಿಸಿ- 'ಸೊಲ್ಲಾಪುರ',-ಒಂದು ಅಧ್ಯಯನ,
- 'ಮಹಾರಾಷ್ಟ್ರದ ಕನ್ನಡ, 'ಸ್ಥಳನಾಮಗಳು,
- 'ಮಹಾರಾಷ್ಟ್ರದ ಕನ್ನಡ,' ಶಾಸನಗಳ ವರ್ಣನಾತ್ಮಕ-ಸೂಚಿ,
- 'ಮಹಾರಾಷ್ಟ್ರ-ಕರ್ನಾಟಕ, 'ಸಾಂಸ್ಕೃತಿಕ ಬಾಂಧವ್ಯ.
- 'ಸಂಸ್ಕೃತಿ ಶೋಧ ಮತ್ತು ಪ್ರೊ. ಹಂಪನಾ,’ (ಈ ಕೃತಿ, ಬೆಂಗಳೂರಿನ ’ಸ್ವಪ್ನ ಪುಸ್ತಕ ಪ್ರಕಟನಾಲಯ,’ದ ಪ್ರಕಟಣೆ).
ಕನ್ನಡಸಾಹಿತ್ಯ ಪರಿಷತ್ತು ಕೊಡುವ ೨೦೦೮ ರ ಸಾಲಿನ ’ ಪಿ. ಶಾಂತಿಲಾಲ್ ಪ್ರಶಸ್ತಿ ದತ್ತಿ ಬಹುಮಾನ,’ ಡಾ. ಜಿ. ಎನ್. ಉಪಾದ್ಯ ಅವರಿಗೆ ದೊರಕಿದೆ. ಕೃತಿಯನ್ನು ದತ್ತಿ ಪ್ರಶಸ್ತಿಗೆ ಆಯ್ಕೆಮಾಡಿದ್ದಾರೆ. ಡಾ. ಜಿ. ಎನ್. ಉಪಾಧ್ಯಾ ಅವರು, ಕನ್ನಡ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತೆ ಈವರೆಗೆ ೨೫ ಕೃತಿಗಳನ್ನು ಪ್ರಕಟಿಸಿದ್ದಾರೆ.
ಕೃತಿರಚನೆಗಳು
ಬದಲಾಯಿಸಿ- 'ಮಹಾರಾಷ್ಟ್ರದ ಕನ್ನಡ' ಶಾಸನ ಸಂಪುಟ, (ಹಂಪಿ ಕನ್ನಡ ವಿಶ್ವವಿದ್ಯಾಲಯ)
- 'ಗೋದಾವರಿವರಂ ಇರ್ದ ಕನ್ನಡ ನಾಡು'
- 'ಸಿದ್ಧರಾಮನ ಸೊನ್ನಲಿಗೆ' (ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ)
- 'ಕನ್ನಡ ಮನಸ್ಸುಗಳೊಂದಿಗೆ'
- 'ವ್ಯಾಖ್ಯಾನ ಭಾಸ್ಕರ', ಮತ್ತೂರು ಕೃಷ್ಣಮೂರ್ತಿ
- 'ಡಾ.ಬಿ.ಎಸ್.ಸನದಿ'- ಬದುಕು ಬರಹ, ವಿಚಾರದ ಬೆಳಕು,
- 'ಅವಲೋಕನ,'
- 'ನಿಜದ ನಿಲುವು,'[೧]
- 'ಅನುಭಾವ ಸಾಹಿತ್ಯದ ಅನನ್ಯತೆ,'[೨]
ಮೊದಲಾದವುಗಳು.[೩]
ಅತ್ಯುತ್ತಮ ಕಾರ್ಯ-ಸಂಯೋಜಕ, ಹಾಗೂ ನಿರ್ವಾಹಕ
ಬದಲಾಯಿಸಿ'ಸಂಯುಕ್ತ ಕರ್ನಾಟಕ' ಪತ್ರಿಕೆಯ 'ಸಾಪ್ತಾಹಿಕ ಸೌರಭದ ಪುಸ್ತಕ ವಿಮರ್ಶಕ,'ರಾಗಿಯೂ ಬರವಣಿಗೆಯನ್ನು ಮುಂದುವರೆಸಿದ್ದಾರೆ. ಮುಂಬಯಿನ ಮೈಸೂರ್ ಅಸೋಸಿಯೇಶನ್ ಪ್ರಕಟಿಸುತ್ತಿರುವ 'ನೇಸರು',ಪತ್ರಿಕೆಯಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ. ಅವರು ನೇಸರು ಪತ್ರಿಕೆಯ ೨೫ ವರ್ಷಗಳ ಸಂಚಿಕೆಯನ್ನು ಸಜ್ಜುಮಾಡುವಲ್ಲಿ ಕಾರ್ಯನಿರತರಾಗಿದ್ದರು. (೨೦೦೭). 'ಮುಂಬಯಿ ಕರ್ನಾಟಕ ಸಂಘ' ದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದಾರೆ. ಮುಂಬಯಿನಲ್ಲಿ ನಡೆಯುವ 'ಸಾಂಸ್ಕೃತಿಕ ಕಾರ್ಯಕ್ರಮ,' ಗಳಲ್ಲಿಯೂ ಡಾ.ಉಪಾಧ್ಯ ಅವರು ಆಸಕ್ತಿ ವಹಿಸಿ ನಡೆಸಿಕೊಡುತ್ತಿದ್ದಾರೆ. ಶತಮಾನದ ಇತಿಹಾಸವಿರುವ ಮೊಗವೀರ ವ್ಯವಸ್ಥಾಪಕ ಮಂಡಳಿ, ಅತಿಹಳೆಯ ಸಂಸ್ಥೆ ಬಿಲ್ಲವರ ಅಸೋಸಿಯೇಷನ್, ಬಂಟರ ಸಂಘ, ಮುಂಬಯಿ ಕನ್ನಡ ಸಂಘ, ಮೊದಲಾದ ಸಂಘ ಸಂಸ್ಥೆಗಳ ಜೊತೆ ನಿಕಟ ಸಂಬಂಧ ವನ್ನಿಟ್ಟುಕೊಂಡು ಅವರ ಸಾಹಿತ್ಯಿಕ ಕೆಲಸ ಕಾರ್ಯಗಳಿಗೆ ಸಲಹೆ, ಸಹಾಯ ನೀಡುತ್ತಾ ಬಂದಿದ್ದಾರೆ.
ಪ್ರಗತಿಪರ ಪ್ರಾಧ್ಯಾಪಕ
ಬದಲಾಯಿಸಿವಿದ್ಯಾರ್ಥಿಗಳನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು ಕೈಲಾದ ಸಹಾಯಮಾಡುವ ಸ್ವಭಾವದರು, ಮುಂಬಯಿನಗರದ ನಾಡು-ನುಡಿಯ ಸೇವೆಗೆ ಯಾವಾಗಲೂ ಮುಂದಿರುತ್ತಾರೆ. ಮುಂಬಯಿವಿಶ್ವವಿದ್ಯಾಲಯದ ಕನ್ನಡವಿಭಾಗದ ಮಕ್ಕಳಿಗಾಗಿ, ’ವ್ಯಕ್ತಿತ್ವ ವಿಕಸನ,’ ದಂತಹ, ಶಿಬಿರಗಳನ್ನು ಆಯೋಜಿಸುವುದಲ್ಲದೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ವಿಚಾರ-ಸಂಕಿರಣಗಳನ್ನು ನಗರದ ಎಲ್ಲಾ ಕನ್ನಡಪರ, ಸಂಘ-ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಾಡು-ನುಡಿ-ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಭಾಷಾ ಸಮಿತಿಯ ಸದಸ್ಯರಾಗಿ ಆಯ್ಕೆ
ಬದಲಾಯಿಸಿಕೆಂದ್ರ ಸಾಹಿತ್ಯ ಅಕಾಡೆಮಿ (ನವದೆಹಲಿ) ವಿವಿಧ ಸಮಿತಿಗಳನ್ನು ಪುನರ್ರಚಿಸಲಾಗಿದ್ದು ಸನ್. ೦೯೧೩ -೧೭ ರ ಅವಧಿಗೆ ೧೦ ಮಂದಿಯನ್ನು ಆಯ್ಕೆ ಮಾಡಲಾಗಿದ್ದು 'ಡಾ.ಎಂ.ಎಂ.ಕಲ್ಬುರ್ಗಿ'ಯವರಲ್ಲದೆ ಮುಂಬಯಿನ 'ಡಾ. ಉಪಾಧ್ಯ', ಸದಸ್ಯರಾಗಿ ನೇಮಕ ಗೊಂಡಿದ್ದಾರೆ. 'ಡಾ. ನರಹಳ್ಳಿ ಬಾಲ ಸುಬ್ರಹ್ಮಣ್ಯಂ,'ಸಮಿತಿಯ ಸಂಚಾಲಕರು. ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ 'ಡಾ.ವಿಶ್ವನಾಥ ಪ್ರಸಾದ್ ತಿವಾರಿ', ಉಪಾಧ್ಯಕ್ಷರಾಗಿ 'ಡಾ,ಚಂದ್ರ ಶೇಖರ ಕಂಬಾರ',ಕನ್ನಡದ ಪ್ರತಿನಿಧಿಯಾಗಿ 'ಡಾ.ಬಾಲ ಚಂದ್ರ ನೇಮಾಡೆ'ಯವರಲ್ಲದೆ ೨೮ ಜನ ನೇಮಕ ಗೊಂಡಿದ್ದಾರೆ.
ಪ್ರಶಸ್ತಿ, ಪುರಸ್ಕಾರಗಳು
ಬದಲಾಯಿಸಿ- ಡಾ.ಜಿ.ಎನ್.ಉಪಾಧ್ಯ-'ಕರ್ನಾಟಕ ಸಂಸ್ಕೃತಿ ಚಿಂತನೆ(ಸಂಶೋಧನಾ ವಿಭಾಗ) ಕೃತಿ,'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ'ಗೆ ಆಯ್ಕೆಯಾಗಿದೆ.
- 'ಕಾಂತಾವರ ಕನ್ನಡ ಸಂಘದ ದತ್ತಿನಿಧಿ ಪ್ರಶಸ್ತಿ ಘೋಷಣೆ, ಡಾ. ಜಿ.ಎಮ್.ಹೆಗಡೆ ಹೆಸರಿನ ಪ್ರಾಧ್ಯಾಪಕ ಸಂಶೋಧನ ಪ್ರಶಸ್ತಿಗೆ ಡಾ.ಜಿ.ಎನ್.ಉಪಾಧ್ಯ ಆಯ್ಕೆಯಾಗಿದ್ದಾರೆ [೪]
- ಡಾ.ನರಹಳ್ಳಿ ಪ್ರತಿಷ್ಠಾನ ಪ್ರಶಸ್ತಿಯನ್ನು ಡಾ.ಜಿ.ಎನ್.ಉಪಾಧ್ಯರಿಗೆ ಪ್ರದಾನಮಾಡಲಾಯಿತು.[೫]
- [೬]
ಕನ್ನಡ ವಿಕೀಪೀಡಿಯ ಮುಕ್ತ ವಿಶ್ವಕೋಶದ ಜೊತೆ ಹೊಂದಾಣಿಕೆ
ಬದಲಾಯಿಸಿಕನ್ನಡವನ್ನು ಕಟ್ಟಿ ಬೆಳೆಸುವ ಕೈಂಕರ್ಯದಲ್ಲಿ ಸದಾ ತಮ್ಮ ಅಪೂರ್ವ ಸಮಯವನ್ನು ಕೊಡುತ್ತಿರುವ ಉಪಾಧ್ಯರು, ಕನ್ನಡ ಭಾಷೆಯಲ್ಲಿ ತಂತ್ರಜ್ಞಾನಗಳು ಹೆಚ್ಚು ಹೆಚ್ಚು ಮುಂದುವರೆಯಲು ಕೊಡಬೇಕಾದ ಗಮನದ ಬಗ್ಗೆ ಸೂಕ್ತ ಏರ್ಪಾಟುಗಳನ್ನು ಮಾಡಲು ಪ್ರಾರಂಭಿಸಿದ್ದಾರೆ.ಡಾ. ಪವನಜ, ಪ್ರೋಗ್ರಾಮ್ ಆಫೀಸರ್-ಇಂಡಿಕ್ (Indic),'ದ ಇಂಟರ್ನೆಟ್ ಸೆಂಟರ್ ಫಾರ್ ಅಂಡ್ ಸೊಸೈಟಿ' ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಜಂಟಿಯಾಗಿ ಈಗಾಗಲೇ ಎರಡು ಆರಂಭಿಕ ಮತ್ತು ಹೆಚ್ಚಿನ ಮಟ್ಟದ ಕಂಪ್ಯೂಟರ್ ಬಳಕೆಯ ನೆಲೆಯಲ್ಲಿ 'ವಿಕಿಪೀಡಿಯ ಮುಕ್ತ ವಿಶ್ವಕೋಶ'ದಲ್ಲಿ, ಪ್ರದೇಶಗಳು, ವ್ಯಕ್ತಿಸಂಗತಿ, ಸಾಧನೆಗಳು ಮೊದಲಾದ ಎಲ್ಲಾ ಬಗೆಯ ಕನ್ನಡ ಲೇಖನಗಳು ರೂಪುಗೊಳ್ಳಲು ಕಮ್ಮಟಗಳನ್ನು ಆಯೋಜಿಸಿದ್ದು, ಸಾಕಷ್ಟು ವಿದ್ಯಾರ್ಥಿಗಳು ಇದರಲ್ಲಿ ಸಕ್ರಿಯವಾಗಿ ಕಾರ್ಯನಿರತರಾಗಿದ್ದಾರೆ.
೨೦೧೫ ರಲ್ಲಿ
ಬದಲಾಯಿಸಿಮುಂಬಯಿ ಕನ್ನಡ ಪತ್ರಿಕೋದ್ಯಮ-ಒಂದು ಸಮ್ಮೇಳನ, [೭]
ಮುಂಬಯಿ ವಿಶ್ವವಿದ್ಯಾಲಯದ ಘಟಿಕೋತ್ಸವ-೨೦೨೧
ಬದಲಾಯಿಸಿಮುಂಬೈ ವಿಶ್ವವಿದ್ಯಾಲಯದ ೨೦೨೧ ರ ಘಟಿಕೋತ್ಸವ ಸಮಾರಂಭವು ಡಿಸೆಂಬರ್,೨೭ ರಂದು 'ಫೋರ್ಟ್ ಕ್ಯಾಂಪಸ್ ನ ಜಹಾಂಗೀರ್ ಹಾಲ್' ನಲ್ಲಿ ನೆರವೇರಿತು. [೮]
ಮೈಸೂರು ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ
ಬದಲಾಯಿಸಿ೨೦೨೩ ರ ದತ್ತಿ ಉಪನ್ಯಾಸದ ಸಮಯದಲ್ಲಿ ಆಹ್ವಾನಿತ ಉಪನ್ಯಾಸಕಿ, ಡಾ. ಟಿ.ಎನ್.ಸತ್ಯವತಿಯವರ ಉಪಸ್ಥಿತಿಯಲ್ಲಿ ಡಾ. ಜಿ. ಎನ್. ಉಪಾಧ್ಯಾರವರು, ಪ್ರಾಸ್ತಾವಿಕ ಭಾಷಣ ಮಾಡಿದರು. [೯]
ಉಲ್ಲೇಖಗಳು
ಬದಲಾಯಿಸಿ- ↑ 'ನಿಜದ ನಿಲುವು'(ಡಾ ಜಿ.ಎನ್.ಉಪಾಧ್ಯ ಅಭಿನಂದನ ಗ್ರಂಥ); ಸಂ: ಡಾ.ಭರತ್‌ಕುಮಾರ್ ಪೊಲಿಪು; ಪು:280 ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ, 'ಮನುಶ್ರುತಿ', ಸಿ-42/2/2, ಸೆಕ್ಟರ್- 29, ವಾಶಿ, ನವಿ ಮುಂಬಯಿ- 400 703
- ↑ "'ಅನುಭಾವ ಸಾಹಿತ್ಯದ ಅನನ್ಯತೆ,' ಪು. ೧೩೬ ಲೇ: ಡಾ.ಜಿ.ಎನ್.ಉಪಾಧ್ಯ". Archived from the original on 2013-09-21. Retrieved 2014-08-05.
- ↑ ಡಾ| ಜಿ. ಎನ್. ಉಪಾಧ್ಯ ಅವರ ಕೃತಿ ಬಿಡುಗಡೆ, ಉದಯವಾಣಿi, ಅಕ್ಟೋಬರ್,೨೯, ೨೦೧೩
- ↑ ಕಾಂತಾವರ ಕನ್ನಡ ಸಂಘದ ದತ್ತಿನಿಧಿ ಪ್ರಶಸ್ತಿ ಘೋಷಣೆ, ಡಾ. ಜಿ.ಎಮ್.ಹೆಗಡೆ ಹೆಸರಿನ ಪ್ರಾಧ್ಯಾಪಕ ಸಂಶೋಧನ ಪ್ರಶಸ್ತಿಗೆ ಡಾ.ಜಿ.ಎನ್.ಉಪಾಧ್ಯ ಆಯ್ಕೆಯಾಗಿದ್ದಾರೆ, ಪ್ರಜಾವಾಣಿ,೧,ಜನವರಿ,೨೦೨೨
- ↑ Narahalli Prathistana award conferred on Dr.G N Upadhya-Rons Bantwal, Daijiworld Media Network,Mumbai, ೭,ಫ಼ೆಬ್ರವರಿ,೨೦೨೨
- ↑ "ಮುಂಬಯಿ ವಿಶ್ಚವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್.ಉಪಾಧ್ಯರಿಗೆ ನರಹಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭ, ಕರ್ನಾಟಕ ಮಲ್ಲ, ೮,ಫ಼ೆಬ್ರವರಿ,೨೦೨೨". Archived from the original on 2022-02-08. Retrieved 2022-02-08.
- ↑ ಕರ್ನಾಟಕ ಮಲ್ಲ, 'ಮುಂಬಯಿ ಕನ್ನಡ ಪತ್ರಿಕೋದ್ಯಮ-ಒಂದು ಪಕ್ಷಿನೋಟ', ಪು.೪, ೧೧,೦೪-೨೦೧೫, ಡಾ.ಜಿ.ಎನ್.ಉಪಾಧ್ಯ
- ↑ ಪಾರ್ವತಿ ಪೂಜಾರಿ ಹಾಗೂ ಕಲಾ ಭಾಗ್ವತ್ ರವರಿಗೆ, 'ಎಮ್.ಬಿ.ಕುಕ್ಯಾನ್ ಚಿನ್ನದ ಪದಕ'ವನ್ನು ಪ್ರದಾನಮಾಡಲಾಯಿತು. ವಿಶ್ವಧ್ವನಿ,ಸುದ್ದಿಸಮಾಚಾರ,೩೦,ಡಿಸೆಂಬರ್,೨೦೨೧
- ↑
ಬಾಹ್ಯ ಸಂಪರ್ಕಗಳು
ಬದಲಾಯಿಸಿ- 'ಅನೂನ ಸಾಂಸ್ಕೃತಿಕ ನೇತಾರ, ಕೋ. ಚನ್ನಬಸಪ್ಪ', 'ನೇಸರು'-ಪುಟ. ೫-೭, ಡಾ.ಜಿ.ಎನ್.ಉಪಾಧ್ಯ
- ಕರ್ನಾಟಕಮಲ್ಲ, ೨೯,ಜೂನ್,೨೦೧೫, ಪು-೧೧, 'ಆಧುನಿಕ ಇ-ಬುಕ್', ಆಗಿ ಮಾರ್ಪಟ್ಟ 'ಕನ್ನಡ ಕಲಿಯೋಣ ಬನ್ನಿ'-ಡಾ.ಜಿ.ಎನ್.ಉಪಾಧ್ಯ
- ಕರ್ನಾಟಕ ಮಲ್ಲ,೦೩-೦೮-೨೦೧೬, ಪು.೩, ವಿದುಷಿ ಸರೋಜಾ ಶ್ರೀನಾಥ್ ರ "ಮೈಸೂರಿನಿಂದ ಮೌಂಟ್ ಟಾಂಬೋರವರೆಗೆ" ಕೃತಿ ಬಿಡುಗಡೆ.ಸಮುದಾಯವನ್ನು ಬೆಸೆಯುವ ಸಾಹಿತ್ಯ ರಚನೆ ನಿರಂತರವಿರಲಿ :ಡಾ.ಜಿ.ಎನ್.ಉಪಾಧ್ಯ.
- ಕರ್ನಾಟಕದ ಹೆಮ್ಮೆಯ ಐ.ಎಂ.ವಿಠಲಮೂರ್ತಿ, ಡಾ. ಜಿ.ಎನ್.ಉಪಾಧ್ಯ,'ನೇಸರು ವಿಠಲಮೂರ್ತಿಯವರ ವಿಶೇಷ ಸಂಚಿಕೆ,'ಪು.೭
- ಡಾ. ಜಿ.ಎನ್.ಉಪಾಧ್ಯ,ಕಣಜ, ಫೆಬ್ರವರಿ ೭,೨೦೧೮ Archived 2020-11-30 ವೇಬ್ಯಾಕ್ ಮೆಷಿನ್ ನಲ್ಲಿ.