ಜಿ.ಎಸ್.ಸದಾಶಿವ ೧೯೩೯ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ಗುಂಡೂಮನೆಯಲ್ಲಿ ಜನಿಸಿದರು.

ಜಿ.ಎಸ್.ಸದಾಶಿವ

ಕೃತಿಗಳು

ಬದಲಾಯಿಸಿ

ಕಥಾ ಸಂಕಲನ

ಬದಲಾಯಿಸಿ
  • ಮಗುವಾಗಿ ಬಂದವನು
  • ತುಣುಕುಗಳು
  • ನಂ ಕೌಲಿ ಕಂಡ್ರಾ
  • ಸಿಕ್ಕು

ಅನುವಾದ

ಬದಲಾಯಿಸಿ
  • ಚೆಲುವು
  • ತಾಯಿ
  • ಕಥರೀನ್ ಬ್ಲಮ್

ಮಕ್ಕಳ ಸಾಹಿತ್ಯ

ಬದಲಾಯಿಸಿ
  • ಮೂರ್ಖ ರಾಜಕುಮಾರರು (ಪಂಚತಂತ್ರ)
  • ಪ್ರಾಚೀನ ಭಾರತದ ಹಕ್ಕಿ ಕತೆಗಳು
  • ಮೀನುಗಾರ ಮತ್ತು ರಾಜ
  • ಪ್ರಾಚೀನ ಭಾರತದ ಕತೆಗಳು
  • ಪಾರಿವಾಳ ಮತ್ತು ಹಕ್ಕಿ ಹಿಡಿಯುವವನು
  • ಅಲೀ ಬಾಬಾ ಮತ್ತು ಇತರ ಕತೆಗಳು

ಸಂಪಾದನೆ

ಬದಲಾಯಿಸಿ

ಪುನರ್ನಿರೂಪಣೆ

ಬದಲಾಯಿಸಿ
  • ದೇವುಡು ಅವರ ಮಯೂರ ಕಾದಂಬರಿಯ ಸಂಕ್ಷೇಪಿತ ಪುನರ್ ನಿರೂಪಣೆ

ಪತ್ರಕರ್ತ

ಬದಲಾಯಿಸಿ

ಜಿ.ಎಸ್.ಸದಾಶಿವರು ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಕೊನೆಯಲ್ಲಿ ಕನ್ನಡ ಪ್ರಭದ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು.

ನನ್ನಂತೆ ಹಲವರಿಗೆ ಪತ್ರಿಕಾ ವ್ಯವಸಾಯದ ಓನಾಮ ಶುರುವಾದದ್ದು `ಸಂಯುಕ್ತ ಕರ್ನಾಟಕ'ದ ಬೆಂಗಳೂರು ಆವೃತ್ತಿಯಲ್ಲಿ. ಒಂದು ರೀತಿಯಲ್ಲಿ `ಸಂಕ' ಹಲವು ಯುವ ಪತ್ರಕರ್ತರ ಪಾಲಿಗೆ ತರಬೇತಿ ಕೇಂದ್ರವಾಗಿ ಬಿಟ್ಟಿತ್ತು. `ಸಂಕ'ದಲ್ಲಿ ಎರಡು ಮೂರು ವರ್ಷ ಕೆಲಸ ಮಾಡಿದವರು `ಪ್ರಜಾವಾಣಿ', `ಕನ್ನಡಪ್ರಭ'ಕ್ಕೆ ವಲಸೆ ಹೋಗುತ್ತಿದ್ದುದೇ ಹೆಚ್ಚಾಗಿತ್ತು. ಹೀಗೆ ವಲಸೆ ಹೋಗುವವರಿಗೆ `ಸಂಕ' ಬರೀ ಚಿಮ್ಮುಹಲಗೆಯಷ್ಟೇ ಆಗಿರಲಿಲ್ಲ, ಅವರು ಪತ್ರಿಕೋದ್ಯಮದ ಒಂದು ಗಟ್ಟಿ ಅನುಭವವನ್ನು ಪಡೆದುಕೊಂಡೇ ಹೊರ ಬೀಳುತ್ತಿದ್ದರು. ಇಂಥ ಗಟ್ಟಿ ಅನುಭವ ದೊರಕುತ್ತಿದ್ದುದಕ್ಕೆ ಕಾರಣ ಆ ಕಾಲದಲ್ಲಿ `ಸಂಕ'ದಲ್ಲಿ ಸ್ಥಿರವಾಗಿ ಉಳಿದಿದ್ದ ಹಲವು ಹಿರಿಯ ಪತ್ರಕರ್ತರು. ಅವರಲ್ಲಿ ಹೆಚ್.ಆರ್.ನಾಗೇಶರಾವ್ ಒಬ್ಬರು.

ನಾಗೇಶರಾವ್ ಎಂದೂ `ಹೈ ಪ್ರೊಫೈಲ್' ಪತ್ರಕರ್ತರಾಗಿರಲಿಲ್ಲ. ಒಬ್ಬ ಕಿರಿಯ ಪತ್ರಕರ್ತನಾಗಿ ನಾನು ಅವರ ಜತೆ ಕೆಲಸ ಶುರು ಮಾಡುವ ಹೊತ್ತಿಗೆ ಅವರು ಹೆಚ್ಚು ಬರವಣಿಗೆಯನ್ನು ಮಾಡುತ್ತಿರಲಿಲ್ಲ. `ಸಂಕ'ದಲ್ಲಿ `ಚಿಟಿಕೆ ಚಪ್ಪರ' ಎಂಬೊಂದು ಕಾಲಂ ನಮ್ಮೆಲ್ಲರಿಗೆ ಮೆಚ್ಚಿಗೆಯ ಬರವಣಿಗೆಯಾಗಿತ್ತು. ಅದನ್ನು ಬಿಟ್ಟರೆ ಹೆಚ್ಚು ಬರವಣಿಗೆ ಇರಲಿಲ್ಲ. ಆದರೆ ಪತ್ರಿಕೆಯನ್ನು ಸಿದ್ಧಪಡಿಸುವುದರಲ್ಲಿ ಅವರು ತೋರುತ್ತಿದ್ದ `ಪ್ರೊಫೆಷನಲಿಸಂ' ಇಂದಿಗೂ ಯುವಕರಿಗೆ ಮೇಲ್ಪಂಕ್ತಿಯಾಗಬೇಕು. ಅಂಥವರ ಬಗೆಗೂ ಪುಸ್ತಕಗಳು ಬರಬೇಕು. ಈಗ `ಸುದ್ದಿಜೀವಿ' ಎಂಬ ಹೆಸರಿನಲ್ಲಿ ಬಂದ ಅವರ ನಿಕಟ ಸಂಪರ್ಕದಲ್ಲಿದ್ದ ಪತ್ರಕರ್ತರು ಬರೆದ ಲೇಖನಗಳ ಸಂಗ್ರಹ ನಾಗೇಶರಾಯರಿಗೆ ಅವರ ಒಡನಾಡಿಗಳು ಅರ್ಪಿಸಿದ `ನುಡಿ ನಮನ'ವೇ ಆಗಿದೆ.

ಒಬ್ಬರ ವ್ಯಕ್ತಿ ಚಿತ್ರ ಬರೆಯುವಾಗ ಅದರಲ್ಲಿ ಬರಹಗಾರನೇ ಹೆಚ್ಚಾಗಿ ಕಾಣಿಸಿಕೊಳ್ಳುವ ಅಪಾಯ ಇದೆ. ನಾಗೇಶರಾಯರ ಬಗ್ಗೆ ಬರೆದ ಹಲವು ಲೇಖನಗಳಲ್ಲಿ ಇದು ಕಾಣುತ್ತದೆ ಎಂಬುದು ನಿಜ. ಅದು ಸ್ವಲ್ಪ ಮಟ್ಟಿಗೆ ಅನಿವಾರ್ಯವೂ ಹೌದು. ವೈಯಕ್ತಿಕ ಅನುಭವವನ್ನು ಬರೆಯುವಾಗ `ಅವನ' ಜತೆ `ನಾನು' ಇರಲೇಬೇಕಾಗುತ್ತದೆ. ಆದರೆ `ಅವನು' ಮುಖ್ಯವಾಗಬೇಕು. ಅದೃಷ್ಟಕ್ಕೆ `ಸುದ್ದಿಜೀವಿ'ಯಲ್ಲಿ ಅಂಥ ಹಲವು ಚಿತ್ರಣಗಳಿವೆ. ಎಲ್ಲ ಬರಹಗಳೂ ನಾಗೇಶರಾಯರ ವೃತ್ತಿ ಸಂಬಂಧದ ಮೂಲಭೂತ ಗುಣಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿವೆ. ಶ್ರದ್ಧೆ, ಅಚ್ಚುಕಟ್ಟುತನ, ಎಂಥ ಸನ್ನಿವೇಶದಲ್ಲೂ ಕಳೆದುಕೊಳ್ಳದ ಸಂಯಮ, ವೃತ್ತಿಪರತೆ, ಸಮಯ ಪಾಲನೆ ವಿಷಯವನ್ನು ಎಲ್ಲ ಬರಹಗಳೂ ಸರಿಯಾಗಿಯೇ ಗುರುತಿಸಿವೆ. ನನ್ನಂಥವರಿಗೆ ಪತ್ರಿಕಾ ರಂಗದಲ್ಲಿ ತಮ್ಮದೇ ಆದ ದಾರಿ ಕಂಡುಕೊಳ್ಳಲು ಅಗತ್ಯವಾದ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದಂಥ `ಪುಟ್ಟ ದೇಹದ ದೊಡ್ಡ ಮನಸ್ಸಿನ' ನಾಗೇಶರಾಯರ ಬಗೆಗಿನ `ಸುದ್ದಿಜೀವಿ'ಯ ಹಿಂದಿನ ಶ್ರಮ ಸಾರ್ಥಕವಾದುದು.

- ಜಿ.ಎಸ್.ಸದಾಶಿವ, ಕಾರ್ಯನಿರ್ವಾಹಕ ಸಂಪಾದಕರು, `ಕನ್ನಡಪ್ರಭ'

ಚಲನಚಿತ್ರ ಸಂಭಾಷಣೆ

ಬದಲಾಯಿಸಿ

ಜಿ.ಎಸ್.ಸದಾಶಿವರು ೨೦೦೭,ಜನೆವರಿ ೯ರಂದು ನಿಧನರಾದರು.

ಇವುಗಳನ್ನೂ ನೋಡಿ

ಬದಲಾಯಿಸಿ

ಹೊರಗಿನ ಸಂಪರ್ಕಗಳು

ಬದಲಾಯಿಸಿ