ಜಾಲರಿ
ಜಾಲರಿಯು (ಜಾಲಂದರ) ಲೋಹ, ನಾರು, ಅಥವಾ ಇತರ ಮೆತುವಾದ ಅಥವಾ ಬಾಗಿಸಬಹುದಾದ ವಸ್ತುಗಳ ಜೋಡಣೆಗೊಂಡಿರುವ ಎಳೆಗಳಿಂದ ತಯಾರಿಸಲಾದ ತಡೆಗೋಡೆ. ಜಾಲರಿಯು ಅನೇಕ ಲಗತ್ತಿಸಲಾದ ಅಥವಾ ಹೆಣೆದ ಎಳೆಗಳನ್ನು ಹೊಂದಿರುವುದರಿಂದ ಜಾಲ ಅಥವಾ ಬಲೆಯನ್ನು ಹೋಲುತ್ತದೆ.
ಉಪಯೋಗಗಳು
ಬದಲಾಯಿಸಿ- ಜಾಲರಿಗಳನ್ನು ಹಲವುವೇಳೆ ಕೀಟಗಳನ್ನು ಹೊರತಡೆಯಲು ಬಳಸಲಾಗುತ್ತದೆ. ಕಿಟಕಿಗಳ ಮೇಲಿನ ತಂತಿ ಪರದೆಗಳು ಮತ್ತು ಸೊಳ್ಳೆಪರದೆಗಳು ಜಾಲರಿಗಳಾಗಿವೆ.
- ರೇಡಿಯೋ ಆವೃತ್ತಿ ವಿಕಿರಣದ ವಿರುದ್ಧ ರಕ್ಷಿಸಲು ತಂತಿಪರದೆಗಳನ್ನು ಬಳಸಬಹುದು, ಉದಾ. ಮೈಕ್ರೋವೇವ್ ಓವನ್ ಹಾಗೂ ಫ಼್ಯಾರಡೇ ಪಂಜರಗಳು.
- ಲೋಹದ ಮತ್ತು ನೈಲಾನ್ ತಂತಿಜಾಲರಿಯ ಶೋಧಕಗಳನ್ನು ಸೋಸುವಿಕೆಯಲ್ಲಿ ಬಳಸಲಾಗುತ್ತದೆ.
- ತಂತಿಜಾಲರಿಯನ್ನು ಸುಭದ್ರ ಪ್ರದೇಶಗಳ ರಕ್ಷಣೆಯಲ್ಲಿ ಮತ್ತು ವಿಧ್ವಂಸಕ ಪರದೆಗಳ ರೂಪದಲ್ಲಿ ರಕ್ಷಣೆಯಾಗಿ ಬಳಸಲಾಗುತ್ತದೆ.
- ತಂತಿಜಾಲರಿಗೆ ರೂಪಕೊಟ್ಟು ಉದ್ಯಾನದ ಆಸನಗಳು, ತ್ಯಾಜ್ಯ ಬುಟ್ಟಿಗಳು ಮತ್ತು ವಸ್ತು ನಿರ್ವಹಣೆಗಾಗಿ ಇತರ ಬುಟ್ಟಿಗಳನ್ನು ಸೃಷ್ಟಿಸಬಹುದು.
ಬಾಹ್ಯ ಸಂಪರ್ಕಗಳು
ಬದಲಾಯಿಸಿWire Mesh Archived 2019-05-06 ವೇಬ್ಯಾಕ್ ಮೆಷಿನ್ ನಲ್ಲಿ.