ಮೈಕ್ರೋವೇವ್ ಓವನ್
'ಮೈಕ್ರೋವೇವ್ ಓವನ್' ಬಳಕೆ [೧] ಈಗ ಅನಿವಾರ್ಯವಾಗಿದೆ. ನಮ್ಮ ವಿಮಾನಯಾನದಲ್ಲಿ ಬಿಸಿ ಉಪಹಾರ, ಊಟವನ್ನು ಉಣಬಡಿಸುವ ಗಗನ ಸಖಿಯರು ಮೈಕ್ರೋವೇವ್ ಇಲ್ಲದೆ ತಮ್ಮ ಕೆಲಸ ಮಾಡಲು ಅಸಾಧ್ಯ. ಮನೆಯಲ್ಲೂ ಬಿಡುವಿಲ್ಲದ ದಿನಚರ್ಯೆಯಲ್ಲಿ, ಅದಲ್ಲದೆ ಸಮಯದ ಮಿತಿಯಿಂದ ಅಂತಹ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದು ಬಹಳ ಪ್ರಮುಖ ಕೊಡುಗೆ.
ಮೈಕ್ರೋ ಓವನ್ಸ್ ಗಳು ಕೆಲಸಮಾಡುವ ಪರಿ
ಬದಲಾಯಿಸಿನಮ್ಮ ಕಣ್ಣಿಗೆ ಗೋಚರಿಸುವ ಬೆಳಕು ಒಂದು 'ವಿದ್ಯುತ್ ಕಾಂತೀಯ ವಿಕಿರಣ' ಅಥವಾ ತರಂಗ (Electromagnetic spectrum) ತುಂಬಾ ದೊಡ್ಡದಿದೆ. ಅದರ ಒಂದು ತುದಿಯಲ್ಲಿ ಅತಿ ಬಲಾಢ್ಯ ಗಾಮಾ ಕಿರಣಗಳ ಅಲೆಗಳಿವೆ. ಮತ್ತೊಂದು ತುದಿಯಲ್ಲಿ ಕಡಿಮೆ ಶಕ್ತಿಯ ರೇಡಿಯೋ ಅಲೆಗಳಿವೆ. ಈ ಮಧ್ಯೆ ಕಣ್ಣಿಗೆ ಕಾಣಿಸುವ ಬೆಳಕಿದೆ. ರೇಡಿಯೋ ಅಲೆಗಳ ಬಳಿಕ ಇರುವುದೇ ಮೈಕ್ರೋವೇವ್. ಮೈಕ್ರೋ ಓವೆನ್ ನಲ್ಲಿ ರೇಡಿಯೋ ಅಲೆಗಳ ಬಳಕೆ ಹೆಚ್ಚಾಗಿ ಆಗುತ್ತದೆ. ಯಾವುದೇ ಶಕ್ತಿ ಈ ವಿದ್ಯುತ್ ಕಾಂತೀಯ ಅಲೆಗಳನ್ನು ಹೀರಿಕೊಳ್ಳಬೇಕಾದರೆ, ಆ ಅಲೆಯ ಶಕ್ತಿಗೆ ಸರಿಹೋಗುವಂತಹ ಆಂತರಿಕ ಬದಲಾವಣೆ ಅದರಲ್ಲಿ ಆಗುವುದು ಅತಿ ಮುಖ್ಯ. ಸೂಕ್ಷ್ಮ ತರಂಗಗಳನ್ನು ಹೀರಿಕೊಂಡ ಬಳಿಕ ಅಡುಗೆ ಹೇಗಾಗುತ್ತದೆ ಎನ್ನುವುದನ್ನು ಕೆಳಗೆ ವಿವರಿಸಲಾಗಿದೆ.
ಆಕರದ ಬಗ್ಗೆ
ಬದಲಾಯಿಸಿನಮ್ಮ ದಿನನಿತ್ಯದ ಅಡುಗೆ ವ್ಯವಸ್ಥೆಯಲ್ಲಿ ಪಾತ್ರೆಯಲ್ಲಿ ಎಸರಿಟ್ಟು ಅದರಲ್ಲಿ ಅಕ್ಕಿ, ಬೇಳೆ, ತರಕಾರಿ ಇತ್ಯಾದಿ ಸೇರಿಸಿ ಕುದಿಸುತ್ತೇವೆ. ಪಾತ್ರೆಯ ಹೊರಗೆ ಉಷ್ಣವನ್ನು ಒದಗಿಸುತ್ತೇವೆ. ಆಗ ಅದು ಪಾತ್ರೆಯ ಗೋಡೆಗಳ ಮೂಲಕ ಪ್ರವಹಿಸಿ ನೀರಿಗೆ ಹರಿದು ಅದರ ಅಣುಗಳನ್ನು ಬಿಸಿ ಮಾಡುತ್ತದೆ. ಈ ಶಕ್ತಿಯನ್ನು ಹೀರಿಕೊಂಡ ನೀರಿನ ಅಣುಗಳು ವೇಗವಾಗಿ ಚಲಿಸಲು ತೊಡಗಿ ಆಹಾರದ ಅಣುಗಳಿಗೆ ಡಿಕ್ಕಿ ಹೊಡೆದು ಇತರ ಅಣುಗಳಿಗೆ ದಾಟಿಸುತ್ತವೆ. ಆಗ ಆಹಾರ ಬೇಯುತ್ತವೆ. ಅವುಗಳಿಗೆ ಹಲವು ಬಗೆಯ ಬದಲಾವಣೆಗಳಿಗೆ ಸಾಧ್ಯತೆಯಿದೆ. ಸೂಕ್ಷ್ಮ ತರಂಗಗಳು ಎಲ್ಲಾ ವಿದ್ಯುತ್ ತರಂಗಗಳಂತೆ ತಮ್ಮಲ್ಲೂ ಶಕ್ತಿಯನ್ನು ಒಳಗೊಂಡಿರುತ್ತವೆ. ಹೀರಿಕೊಂಡ ಆಹಾರಗಳ ಅಣುಗಳು ವೇಗವಾಗಿ ಹೊರಳಾಡಿ ಬೇಯುತ್ತವೆ. ಹೀಗೆ ಅಲೆಯನ್ನು ಹೀರಿಕೊಂಡ ಆಹಾರದ ಅಣುಗಳು ವೇಗವಾಗಿ ತಿರುಗತೊಡಗುಡುತ್ತವೆ. ವೇಗವಾಗಿ ಹೊರಳುತ್ತಾ ಅವು ಅಣುಗಳಿಗೆ ಡಿಕ್ಕಿ ಹೊಡೆಯುತ್ತವೆ. ಹಾಗೂ ಶಕ್ತಿಯನ್ನು ಇತರ ಅಣುಗಳಿಗೆ ದಾಟಿಸುತ್ತವೆ. ಮೈಕ್ರೋವೇವ್ ಒಲೆಯಲ್ಲಿ 'ಮ್ಯಾಗ್ನೆಟ್ರಾನ್' ಎಂಬ ಒಂದು ಉಪಕರಣವಿದೆ. ಇದು ಅಲೆಗಳನ್ನು ಸೃಷ್ಟಿಸುತ್ತದೆ. ಈ ಅಲೆಗಳನ್ನು ಓವೆನ್ ಮಧ್ಯೆ ಇಟ್ಟ ಆಹಾರದ ಬಟ್ಟಲಿನ ಮೇಲೆ ಪ್ರತಿಫಲಿಸುವಂತೆ ನಾಲ್ಕೂಕಡೆ ಲೋಹದ ಗೋಡೆಯಿದೆ. ಸೂಕ್ಷ್ಮ ತರಂಗಗಳನ್ನು ಲೋಹ ಪ್ರತಿಫಲಿಸುತ್ತದೆ. ಪ್ಲಾಸ್ಟಿಕ್, ಪಿಂಗಾಣಿ ಮತ್ತಿತರ ವಸ್ತುಗಳು ತಮ್ಮ ಮೂಲಕ ಹಾದು ಹೋಗಲು ಸಹಕ್ರಿಯಿಸುತ್ತವೆ. ಅದಕ್ಕಾಗಿ ಮೈಕ್ರೋವೇವ್ ಒಲೆಯಲ್ಲಿ ಲೋಹದ ಪಾತ್ರೆಗಳಿಗೆ ಅನುಮತಿಯಿಲ್ಲ. ಮೈಕ್ರೋ ವೇವ್ ನಿಂದ ಶಕ್ತಿ ಹೊರಗೆ ಹೋಗದಂತೆ ಲೋಹದ ಗೋಡೆಗಳಿಗೆ ಒಂದು ಗಾಜಿನ ಬಾಗಿಲಿದೆ. ಇದಕ್ಕೂ ಶಕ್ತಿ ಸೋರದಿರಲೆಂದು ಲೋಹದ ತೆಳುವಾದ ಬಲೆ ರೂಪದ ಪದರವನ್ನು ಅಂಟಿಸಿರುತ್ತಾರೆ.
ಎಚ್ಚರಿಕೆಯ ಕ್ರಮಗಳು
ಬದಲಾಯಿಸಿಸೂಕ್ಷ್ಮ ತರಂಗಗಳು, ನಮ್ಮ ಶರೀರದ ಮೃದು ಭಾಗಗಳಾದ ಕಣ್ಣು, ಕಿವಿ, ಮೂಗು, ಬಾಯಿಗಳಿಗೆ ನೇರವಾಗಿ ಬೀಳುವುದು ಅಪಾಯಕಾರಿ. ಬಾಗಿಲನ್ನು ಸರಿಯಾಗಿ ಮುಚ್ಚುವುದು ಅತಿ ಮುಖ್ಯ. 'ಮೈಕ್ರೋ ವೇವ್ ಓವೆನ್' ನಲ್ಲಿ ಪದಾರ್ಥಗಳು ಒಳಗಿನಿಂದ ಬೇಯುತ್ತವೆ. ಉಷ್ಣ ಒಳಗೇ ಸೃಷ್ಟಿಯಾಗಿ ಆಹಾರ ಬೇಯಲು ಸಹಕಾರಿಯಾಗುತ್ತದೆ. ನಮ್ಮ ಸಾಮಾನ್ಯ ಆಡುಗೆ ಪದ್ಧತಿಯಲ್ಲಿ ಆದರೆ ಉಷ್ಣವನ್ನು ಹೊರಗಿನಿಂದ ಸರಬರಾಜು ಮಾಡಲಾಗುವುದು.
ಮೈಕ್ರೋ ಓವನ್ ನ ಹಲವಾರು ಉಪಯೋಗಗಳು
ಬದಲಾಯಿಸಿ- ಆಹಾರ ಪದಾರ್ಥಗಳನ್ನು ತಕ್ಷಣ ಬಿಸಿಮಾಡಿ ಇಲ್ಲವೆ ತಯಾರಿಸಿ ಬಡಿಸಬಹುದು. ವಿಮಾನಯಾನದಲ್ಲಿ 'ಮೈಕ್ರೋ ಓವನ್' ಉಪಯೋಗ ಆತ್ಯಧಿಕ ಹಾಗೂ ಅತ್ಯಾವಶ್ಯಕ.
- 'ಫ್ರಿಡ್ಜ್' ನಿಂದ ಹೊರತೆಗೆದ ತಣ್ಣನೆಯ ಆಹಾರ ಪದಾರ್ಥಗಳನ್ನು ನಿಮಿಷಾರ್ಧದಲ್ಲಿ ಬಿಸಿಮಾಡಬಹುದು.
ಓವನ್ ಬಗ್ಗೆ ಕೆಲವು ಮಿಥ್ಯಾಪವಾದಗಳು
ಬದಲಾಯಿಸಿ- 'ಮೈಕ್ರೋ ವೇವ್ ಓವನ್' ನಲ್ಲಿ ಬೇಯಿಸಿ ತಯಾರಿಸಿದ ಆಹಾರವಸ್ತುಗಳು ಆರೋಗ್ಯಕ್ಕೆ ಹಾನಿಕಾರಿ.
- ಆಹಾರ ಬೆಂದ ನಂತರವೂ ವಿಕಿರಣವಿರುತ್ತದೆ.
ವೈಜ್ಞಾನಿಕವಾಗಿ ಈ ತರಹದ ಅಭಿಪ್ರಾಯಗಳಿಗೆ ಆಧಾರವಿಲ್ಲ. ಬೆಳಕಿನ ಆಕರವನ್ನು ದೂರ ತೆಗೆದುಕೊಂಡು ಹೋದ ಮೇಲೆ ಹೇಗೆ ಅಲ್ಲಿ ಬೆಳಕಿರಲು ಸಾಧ್ಯತೆ ಇರುವುದಿಲ್ಲವೋ ಹಾಗೆಯೇ ಸೂಕ್ಷ್ಮತರಂಗಗಳು ಓವೆನ್ ನಿಂದ ಹೊರಗೆ ತೆಗೆದಿಟ್ಟ ಆಹಾರ ಪದಾರ್ಥಗಳಲ್ಲಿ ಕಾಣಲು ಸಾಧ್ಯವಿಲ್ಲ. ಸೋರಿಕೆಗೆ ಪ್ರಾಮುಖ್ಯತೆ ಕೊಡಲಾಗಿದೆ. ಕಿರಣಗಳು ಮೈಮೇಲೆ ಬೀಳದಂತೆ ನಿಗಾ ವಹಿಸುವುದು ಅತ್ಯಾವಶ್ಯಕ. ಅದರಿಂದ ದುಷ್ಪರಿಣಾಮವಾಗುವ ಸಾಧ್ಯತೆ ಇದೆ. ಹಳೆಯ ಮೈಕ್ರೋ ಓವನ್ ತಕ್ಷಣವೇ ದುರಸ್ತಿಮಾಡಿಸಿ ಬಳಸಬೇಕು.