ಜಾಫರ್ ಇಕ್ಬಾಲ್ (ಫೀಲ್ಡ್ ಹಾಕಿ)
ಜಾಫರ್ ಇಕ್ಬಾಲ್ (ಜನನ ೧೨ ಜೂನ್ ೧೯೫೬) ಭಾರತೀಯ ಮಾಜಿ ಹಾಕಿ ಆಟಗಾರ ಮತ್ತು ಭಾರತೀಯ ರಾಷ್ಟ್ರೀಯ ತಂಡದ ನಾಯಕ. [೧]
ಆರಂಭಿಕ ಜೀವನ
ಬದಲಾಯಿಸಿಜಾಫರ್ ಇಕ್ಬಾಲ್ ಅವರು ೧೨ ಜೂನ್ ೧೯೫೬ ರಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU) ಪ್ರಾಧ್ಯಾಪಕರಾದ ಮೊಹಮ್ಮದ್ ಶಹಾಬುದ್ದೀನ್ ಅಹ್ಮದ್ ಮತ್ತು ನಜ್ಮುನ್ ನಿಶಾ ಅವರ ಐದು ಮಕ್ಕಳಲ್ಲಿ ಮೂರನೆಯ ಮಗನಾಗಿ ಬಿಹಾರದ ಷರೀಫ್‌ನ ಹರ್ಗವಾನ್ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ಕುಟುಂಬವು ಉತ್ತರ ಪ್ರದೇಶದ ಅಲಿಗಢಕ್ಕೆ ಸ್ಥಳಾಂತರಗೊಂಡ ನಂತರ ಅವರು ಅಲ್ಲಿಯೇ ಬೆಳೆದರು. [೨] ಇಕ್ಬಾಲ್ ಬಾಲ್ಯದಲ್ಲಿ ಫುಟ್ಬಾಲ್ ಆಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು, ೧೯೬೯-೭೦ ರಲ್ಲಿ ಹಾಕಿಗೆ ಸೇಪಡೆಯಾಗುವುದಕ್ಕೂ ಮೊದಲು ಅವರ ತಂದೆಯ ಸಹೋದ್ಯೋಗಿ ಯಾಗಿದ್ದ ಪ್ರೊಫೆಸರ್ ಖಾನ್ ಇಕ್ಬಾಲ್ ಅವರಿಗೆ ಪ್ರೋತ್ಸಾಹ ನೀಡಿದರು. ಆ ಸಮಯದಲ್ಲಿ ಅಲಿಘಡ್ ಮುಸ್ಲಿಂ ಯುನಿವರ್ಸಿಟಿಯ ಹಾಕಿ ತಂಡದ ತರಬೇತುದಾರರು ಮತ್ತು ೧೯೩೬ ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ರಾಷ್ಟ್ರೀಯ ತಂಡದ ಮ್ಯಾನೇಜರ್ ಆಗಿದ್ದ ಸ್ವಾಮಿ ಜಗನ್ ನಾಥ್ ಅವರು ಇಕ್ಬಾಲ್ ಅವರಿಗೆ ಮಾರ್ಗದರ್ಶನ ನೀಡಿದರು. ಹಾಕಿ ಜೊತೆಗೆ, ಇಕ್ಬಾಲ್ ೧೯೭೮ ರಲ್ಲಿ AMU ನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಶೇಕಡ ೭೪ ಅಂಕಗಳೊಂದಿಗೆ ಪಡೆದರು.
ವೃತ್ತಿ ಜೀವನ
ಬದಲಾಯಿಸಿಇಂಟರ್-ಯೂನಿವರ್ಸಿಟಿ ಆಟಗಳಲ್ಲಿ ಉತ್ತಮ ಪ್ರದರ್ಶನಗಳ ಹಿನ್ನೆಲೆಯಲ್ಲಿ ಹಾಕಿ ತಂಡ್ಕಕೆ ಆಯ್ಕೆಯಾದ ನಂತರ ಇಕ್ಬಾಲ್ ಅವರನ್ನು ಸಂಯೋಜಿತ ವಿಶ್ವವಿದ್ಯಾಲಯ ಹಾಕಿ ತಂಡಕ್ಕೆ ಆಯ್ಕೆ ಮಾಡಲಾಯಿತು; ಇವರು ಲೆಸ್ಲಿ ಫೆರ್ನಾಂಡಿಸ್ ವಿರುದ್ಧ ಗೋಲು ಗಳಿಸುವ ಮೂಲಕ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಇಕ್ಬಾಲ್ ಉತ್ತಮ ಪ್ರದರ್ಶನ ನೀಡಿದ್ದರು, ಇದು ೧೯೭೭ ರಲ್ಲಿ ನೆದರ್ಲ್ಯಾಂಡ್ಸ್ ಪ್ರವಾಸಕ್ಕಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಸಹಕಾರಿಯಾಯಿತು [೩] [೪] .
ಸಾಧನೆಗಳು
ಬದಲಾಯಿಸಿಇಕ್ಬಾಲ್ ೧೯೭೮ ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಮತ್ತು ೧೯೮೨ ರಲ್ಲಿ ನವದೆಹಲಿ ಹಾಕಿ ತಂಡದ ನಾಯಕರಾಗಿದ್ದರು, ಈ ಎರಡರಲ್ಲೂ ಅವರು ಬೆಳ್ಳಿ ಪದಕವನ್ನು ಗೆದ್ದರು. ೧೯೮೦ ರಲ್ಲಿ ಅವರು ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದು ಅವರು ಹಾಕಿಯಲ್ಲಿ ಶ್ರೇಷ್ಠ ವೃತ್ತಿಜೀವನದ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಇದಲ್ಲದೆ, ಅವರು ಲಾಸ್ ಏಂಜಲೀಸ್ ಒಲಿಂಪಿಕ್ಸ್ ೧೯೮೪ ರ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ತಂಡದ ಭಾರತೀಯ ತ್ರಿವರ್ಣ ಧ್ವಜವನ್ನು ಹೊತ್ತ ಗೌರವವನ್ನು ಪಡೆದರು. ಹಾಲೆಂಡ್‌ನಲ್ಲಿ ೧೯೮೨ ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ದೇಶಕ್ಕಾಗಿ ಕಂಚಿನ ಪದಕವನ್ನು ತಂದುಕೊಟ್ಟರು. ಪಾಕಿಸ್ತಾನ, ಮಲೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಶ್ಚಿಮ ಜರ್ಮನಿ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳ ವಿರುದ್ಧದ ಅನೇಕ ಪಂದ್ಯಾವಳಿಗಳನ್ನು ಗೆದ್ದರು.
ಇಕ್ಬಾಲ್ ಅವರ ಅಸಮಾನ್ಯ ಆಟವನ್ನು ಅವರ ನೀಲಿ ಜರ್ಸಿಯ ಹಿಂದಿನ ೧೧ನೇ ಸಂಖ್ಯೆಯಲ್ಲಿ ಗಮನಿಸಬಹುದಗಿದೆ. ಇದು ಭಾರತೀಯ ಹಾಕಿಯ ಇತಿಹಾಸದ ಅದ್ಭುತ ಭಾಗವಾಗಿದೆ. ತನ್ನ ಹಾಕಿ ಆಟಕ್ಕೆ ವಿದಾಯ ಹೇಳಿದ ನಂತರ ಅವರು ಭಾರತೀಯ ಹಾಕಿ ತಂಡದ ಮುಖ್ಯ ಕೋಚ್, ಮುಖ್ಯ ಕೋಚ್ ಮತ್ತು ರಾಷ್ಟ್ರೀಯ ಆಯ್ಕೆಗಾರರಾಗಿ ಅನೇಕ ಆಟಗಾರರಿಗೆ ತರಬೇತಿಯನ್ನು ನೀಡುವಲ್ಲಿ ನಿರತರಾದರು. ೧೯೯೪ರಲ್ಲಿ ಹಿರೋಷಿಮಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಇವರು ತರಬೇತಿ ನೀಡಿದ ತಂಡವು ಬೆಳ್ಳಿ ಪದಕವನ್ನು ಗೆದ್ದಿತ್ತು.
ಜಾಫರ್ ಇಕ್ಬಾಲ್ ಅವರು ಕಠಿಣ ಪರಿಶ್ರಮ, ತಂಡದ ಮನೋಭಾವ, ಸೌಹಾರ್ದತೆ ಮತ್ತು ತಂಡದ ಸದಸ್ಯರ ನಡುವೆ ಸಹಜೀವನದ ಪ್ರಬಲ ಪ್ರತಿಪಾದಕರಾಗಿದ್ದರು. ಭಾರತೀಯ ಕ್ರೀಡಾ ಆಡಳಿತದಲ್ಲಿ ಅವರು ಕ್ರೀಡಾ ಶರೀರಶಾಸ್ತ್ರ ಮತ್ತು ಮನೋವಿಜ್ಞಾನದಂತಹ ಆಧುನಿಕ ಆವಿಷ್ಕಾರಗಳ ಅಳವಡಿಕೆಗೆ ಅವರು ಹೆಚ್ಚು ಒತ್ತು ನೀಡುತ್ತಾರೆ. ವಿಶ್ವವಿದ್ಯಾನಿಲಯಗಳು ಪ್ರತಿಭೆಗಳನ್ನು ನೀಡುವ ಸ್ಥಾನಗಳು ಎಂದು ನಂಬಿದ್ದ ಅವರು, ದೇಶವನ್ನು ಪ್ರತಿನಿಧಿಸಲು ಅವುಗಳು ನೀಡಿರುವ ಕೊಡುಗೆಗಳನ್ನು ಗೌರವಿಸುತ್ತಾ ಅವರು AMU ಗೆ ಅನೇಕ ಕೊಡುಗೆಗಳನ್ನು ನೀಡಿದ್ದು, ಇವರ ಈ ಕಾರ್ಯ ಉದಯೋನ್ಮುಖ ಪ್ರತಿಭೆಗಳಿಗೆ ಪೂರಕ ವಾತಾವರಣ ನಿಮಿಸಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಇವರ ಕೊಡುಗೆಯನ್ನು ಗಮನಿಸಿ 'ಜೆಂಟಲ್‌ಮ್ಯಾನ್ ಆಫ್ ಹಾಕಿ' ಹೊಗಳಿದ್ದಾರೆ.
ಪ್ರಶಸ್ತಿ ಮತ್ತು ಗೌರವಗಳು
ಬದಲಾಯಿಸಿಭಾರತವು ಶ್ರೀ. ಜಾಫರ್ ಇಕ್ಬಾಲ್ ಅವರಿಗೆ ೧೯೮೩ ರಲ್ಲಿ ಕ್ರೀಡೆಯಲ್ಲಿ ನೀಡುವ ಅತ್ಯುನ್ನತ ಗೌರವವಾದ "ಅರ್ಜುನ ಪ್ರಶಸ್ತಿ" ನೀಡಿ ಗೌರವಿಸಿದೆ. ೨೦೧೨ ರಲ್ಲಿ, ಭಾರತದ ರಾಷ್ಟ್ರಪತಿಗಳು ಜಾಫರ್ ಅವರು ಕ್ರೀಡೆಗೆ ನೀಡಿದ ಅಮೂಲ್ಯ ಸೇವೆಗಾಗಿ "ಪದ್ಮಶ್ರೀ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಉತ್ತರ ಪ್ರದೇಶದ ಸರ್ಕಾರವು ಅವರಿಗೆ ೧೯೯೪ ರಲ್ಲಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಯಶ್ ಭಾರತಿ" ಗೌರವವನ್ನು ನೀಡಿತು. ೨೦೧೨ ರಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತರಾದ ೩೪ ಹಾಕಿ ಆಟಗಾರರೊಂದಿಗೆ 'ಗೋಲ್ಡನ್ ಗ್ರೇಟ್ಸ್' ವೇದಿಕೆಯಲ್ಲಿ 'ಹಾಕಿ ಇಂಡಿಯಾ'ವು ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರಕ್ಕೆ ಅವರ ಅನಿವಾರ್ಯ ಸೇವೆಗಳನ್ನು ಗುರುತಿಸಿ, ಅಲಿಘರ್ ನಗರ ಪಾಲಿಕೆಯು ಅವರ ಹೆಸರನ್ನು ರಸ್ತೆಯೊಂದಕ್ಕೆ ಹೆಸರಿಡುವ ಮೂಲಕ ಅವರಿಗೆ ಗೌರವವನ್ನು ನೀಡಿದೆ. ೨೦೧೩ ರಲ್ಲಿ, AMU ನಲ್ಲಿ ಹಾಕಿಯ ಪುನಶ್ಚೇತನಕ್ಕೆ ಅವರ ಬದ್ಧತೆಯನ್ನು ಗಮನಿಸಿದ ವಿಶ್ವವಿದ್ಯಾಲಯವು ತನ್ನ ೬೦ ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರಿಗೆ ಡಿ.ಲಿಟ್ ನೀಡಿ ಗೌರವಿಸಿದೆ.
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Padma Shri is a recognition for Indian hockey: Zafar". Top News. 25 January 2012. Archived from the original on 4 ಮಾರ್ಚ್ 2016. Retrieved 23 September 2013.
- ↑ Raipalli, Dr Manjunath Sahadevappa. A CASE STUDY ON CONTRBUTION OF KARNATAKA HOCKEY PLAYERS TOWARDS THE DEVELOPMENT OF INDIAN HOCKEY (in ಇಂಗ್ಲಿಷ್). p. 20. ISBN 978-1-387-71237-3. Retrieved 27 May 2022.
- ↑ Bhushan, Aditya (21 July 2021). "Zafar Iqbal: Olympic gold medalist, civil engineer and Indian Airlines executive director". Sportskeeda (in ಅಮೆರಿಕನ್ ಇಂಗ್ಲಿಷ್). Retrieved 27 May 2022.
- ↑ Barua, Suhrid (4 August 2016). "Rio Olympics 2016: Ireland will be tough Test for India, feels former Indian hockey captain Zafar Iqbal". Sportskeeda (in ಅಮೆರಿಕನ್ ಇಂಗ್ಲಿಷ್). Retrieved 27 May 2022.