ಜರೀಗಿಡ
ಜರೀಗಿಡಗಳು ಬೀಜಕಣಗಳ ಮೂಲಕ ಸಂತಾನೋತ್ಪತ್ತಿ ಮಾಡುವ ಅಥವಾ ಹೂವುಗಳನ್ನು ಹೊಂದಿರದ ನಾಳೀಯ ಸಸ್ಯ ಗುಂಪಿನ ಸದಸ್ಯ. ಇವು ಪಾಚಿಗಳಿಂದ ಭಿನ್ನವಾಗಿರುತ್ತವೆ ಅಂದರೆ ನೀರು ಮತ್ತು ಪೋಷಕಾಂಶಗಳನ್ನು ಪಡೆಯಲು ಬೇಕಾದ ವಿಶಿಷ್ಟವಾದ ಅಂಗಾಂಶಗಳನ್ನು ಹೊಂದಿರುತ್ತವೆ. ಇತರ ನಾಳೀಯ ಸಸ್ಯಗಳಂತೆ ಜರೀಗಿಡಗಳು ಸಂಕೀರ್ಣವಾದ ಎಲೆಗಳನ್ನು ಹೊಂದಿರುತ್ತವೆ. ಹೆಚ್ಚಿನ ಜರೀಗಿಡಗಳು ಸುರುಳಿಯಾಕಾರದ ಫಿಟಲ್ಹೆಡ್ಗಳನ್ನು ಉತ್ಪಾದಿಸುತ್ತವೆ. ಈ ಗುಂಪಿನಲ್ಲಿ ಸುಮಾರು ೧೦೫೬೦ ಪ್ರಸಿದ್ಧ ಜಾತಿಗಳು ಇವೆ. ಜರೀಗಿಡಗಳ ಪಳೆಯುಳಿಕೆಗಳು ೩೬೦ ದಶಲಕ್ಷ ವರ್ಷಗಳ ಹಿಂದೆ ಕಾಣಿಸಿಕೊಂಡರೂ ಅದರ ಬಹುತೇಕ ಪ್ರಸ್ತುತ ಕುಟುಂಬಗಳು ಮತ್ತು ಪ್ರಭೇದಗಳು ಸುಮಾರು ಕ್ರಿ.ಶ. ೧೪೫ ದಶಲಕ್ಷ ವರ್ಷಗಳ ಹಿಂದೆ ಕಾಣಸಿಗಲು ಆರಂಭವಾಯಿತು.[೧]
ಬೆಳವಣಿಗೆ
ಬದಲಾಯಿಸಿಜರೀಗಿಡಗಳು ಅರೆವಿದಳನದ ಮೂಲಕ ಹಾಪ್ಲಾಯ್ಡ್ ಬೀಜಕಗಳನ್ನು ಉತ್ಪಾದಿಸುತ್ತದೆ. ಈ ಮೂಲಕ ಸ್ವ-ಜೀವಿತ ಹ್ಯಾಪ್ಲಾಯ್ಡ್ ಗ್ಯಾಮೀಟೊಫೈಟ್ ಆಗಿ ಬೆಳೆಯುತ್ತದೆ. ಗ್ಯಾಮೀಟೊಫೈಟ್ ವಿಶಿಷ್ಟವಾಗಿ ಒಂದು ದ್ಯುತಿಸಂಶ್ಲೇಷಕ ಪ್ರೋಥಾಲಸ್ ಅನ್ನು ಹೊಂದಿರುತ್ತದೆ. ಗ್ಯಾಮಿಟೋಫೈಟ್ ಮಿಟೋಸಿಸ್ನಿಂದ ಗ್ಯಾಮೆಟ್ಗಳನ್ನು ಉತ್ಪಾದಿಸುತ್ತದೆ. ಸಾಮಾನ್ಯವಾಗಿ ಅದೇ ಪ್ರೋಥಾಲಸ್ನಲ್ಲಿ ವೀರ್ಯ ಮತ್ತು ಮೊಟ್ಟೆಗಳು ಎರಡೂ ಇರುತ್ತವೆ. ಫ್ಲ್ಯಾಗ್ಲೆಲೇಟ್ ವೀರ್ಯಾಣು ಮೊಟ್ಟೆಯನ್ನು ಫಲವತ್ತಾಗಿಸುತ್ತದೆ ಇದು ಪ್ರೋಥಾಲಸ್ಗೆ ಅಂಟಿಕೊಂಡಿರುತ್ತದೆ. ಫಲವತ್ತಾದ ಮೊಟ್ಟೆಯು ಡಿಪ್ಲಾಯ್ಡ್ ಝೈಗೋಟ್ ಮತ್ತು ಮಿಟೋಸಿಸ್ನಿಂದ ಡಿಪ್ಲಾಯ್ಡ್ ಸ್ಪೊರೊಫೈಟ್ (ವಿಶಿಷ್ಟ ಜರೀಗಿಡ ಸಸ್ಯ) ಆಗಿ ಬೆಳೆಯುತ್ತದೆ.[೨]
ವರ್ಗೀಕರಣ
ಬದಲಾಯಿಸಿಜರೀಗಿಡಗಳ ನಾಲ್ಕು ವರ್ಗಗಳು
- ಸೈಲೊಟೊಪ್ಸಿಡಾ (೯೨ಜಾತಿಗಳು)
- ಇಕ್ಸೆಸೆಟೊಪ್ಸಿಡಾ(೧೫ ಜಾತಿಗಳು
- ಮರಾಟಿಯೋಪ್ಸಿಡಾ (೧೫೦ ಜಾತಿಗಳು)
- ಪಾಲಿಪೋಡಿಯೋಪ್ಸಿಡಾ(೯,೦೦೦ ಜಾತಿಗಳು)[೩]
ಉಪಯೋಗ
ಬದಲಾಯಿಸಿಜರೀಗಿಡಗಳು ಪ್ರಮುಖ ಆರ್ಥಿಕ ಪ್ರಾಮುಖ್ಯತೆ ಹೊಂದಿಲ್ಲ. ಆಹಾರ, ಔಷಧ, ಜೈವಿಕ ಗೊಬ್ಬರವಾಗಿ, ಅಲಂಕಾರಿಕ ಸಸ್ಯಗಳಾಗಿ ಮತ್ತು ಕಲುಷಿತ ಮಣ್ಣಿನ ನಿವಾರಣೆಗಾಗಿ ಬಳಸಲಾಗುತ್ತದೆ. ವಾತಾವರಣದಿಂದ ಕೆಲವು ರಾಸಾಯನಿಕ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಕೆಲವು ಜರೀಗಿಡ ಪ್ರಭೇದಗಳನ್ನು ಬಳಸುತ್ತಾರೆ.[೪]
ಔಷಧೀಯ ಬಳಕೆ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ https://www.britannica.com/plant/fern
- ↑ "ಆರ್ಕೈವ್ ನಕಲು". Archived from the original on 2022-12-05. Retrieved 2018-06-30.
- ↑ https://www.sciencelearn.org.nz/resources/1104-classifying-and-identifying-ferns
- ↑ https://www.hunker.com/12436470/common-uses-for-ferns
- ↑ "ಆರ್ಕೈವ್ ನಕಲು". Archived from the original on 2019-02-12. Retrieved 2018-06-30.