ಎಂ. ಜಯಶ್ರೀ

(ಜಯಶ್ರೀ ಇಂದ ಪುನರ್ನಿರ್ದೇಶಿತ)

ಎಂ. ಜಯಶ್ರೀ (೧೯೨೧–೨೦೦೬), ಕನ್ನಡದ ಪ್ರಮುಖ ಪೋಷಕ ನಟಿಯರಲ್ಲೊಬ್ಬರು. ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ತಾಯಿಯ ಪಾತ್ರದಲ್ಲಿ ಹೆಸರು ಮಾಡಿದರು.

ಎಂ. ಜಯಶ್ರೀ
ಜನನ೧೯೨೧
ಮೈಸೂರು, ಮೈಸೂರು ರಾಜ್ಯ, ಬ್ರಿಟಿಷ್ ಭಾರತ (ಈಗ ಕರ್ನಾಟಕ, ಭಾರತ)
ಮರಣ೨೯ ಅಕ್ಟೊಬರ್, ೨೦೦೬ (ವಯಸ್ಸು ೮೪-೮೫)[೧]
ಮರಣಕ್ಕೆ ಕಾರಣಹೃದಯಾಘಾತ
ಉದ್ಯೋಗ
  • ನಟಿ
ಸಕ್ರಿಯ ವರ್ಷಗಳು೧೯೪೮–೧೯೯೬

ನಟನಾವೃತ್ತಿ ಸಂಪಾದಿಸಿ

ಹೊನ್ನಪ್ಪ ಭಾಗವತರ್ ನಿರ್ದೇಶನದ ಭಕ್ತ ಕುಂಬಾರ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ ಕನ್ನಡ, ತಮಿಳು ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ನಾಗಕನ್ನಿಕಾ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಮುಂತಾದ ನಾಯಕ ನಟರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು.

ನಾಗರ ಹಾವು, ಚಕ್ರತೀರ್ಥ, ಜಗನ್ಮೋಹಿನಿ, ತಿಲೋತ್ತಮೆ, ಸೋದರಿ, ಮುತ್ತೈದೆ ಭಾಗ್ಯ, ಚಂದವಳ್ಳಿಯ ತೋಟ, ಜಗಜ್ಯೋತಿ ಬಸವೇಶ್ವರ, ಮಿಸ್ ಲೀಲಾವತಿ, ಸಾವಿರ ಮೆಟ್ಟಿಲು -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.

'ನಾಗಕನ್ನಿಕಾ' ಚಿತ್ರದ ನಾಯಕಿಯಾಗಿ ಜಯಶ್ರೀಯವರು ಹೇರಳ ಮೈಮಾಟ ಪ್ರದರ್ಶಿಸಿದ್ದು ಅಂದಿನ ದಿನಗಳಲ್ಲಿ ಮನೆ ಮಾತಾಗಿತ್ತು. ಚಿತ್ರಕ್ಕೆ ಈ ಮೂಲಕ ಹೊಸ ಆಯಾಮವೇ ಬಂದು ಕನ್ನಡಚಿತ್ರಗಳೂ ಕುತೂಹಲಕಾರಿ ಕೋಲಾಹಲ ಉಂಟು ಮಾಡಲಾರಂಭಿಸಿದ್ದವು.

ಪ್ರಶಸ್ತಿ-ಪುರಸ್ಕಾರ ಸಂಪಾದಿಸಿ

ನಿಧನ ಸಂಪಾದಿಸಿ

ಮೈಸೂರಿನ ವಾಸವಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಜಯಶ್ರೀಯವರು ತೀವ್ರ ಹೃದಯಾಘಾತದಿಂದ ಅಕ್ಟೋಬರ್ ೨೯,೨೦೦೬ ಭಾನುವಾರ ಸಂಜೆ ನಿಧನರಾದರು. ಅವರಿಗೆ ೮೫ ವರ್ಷವಾಗಿತ್ತು.

ಉಲ್ಲೇಖನಗಳು ಸಂಪಾದಿಸಿ

  1. Chitraloka Team (30 Oct 2006). "M. Jayashree dead". Chitraloka.com. Archived from the original on 6 ಫೆಬ್ರವರಿ 2022. Retrieved 21 Sep 2020.