ಜಯರಾಮ ಕಾರಂತ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ವಿಕೀಕರಣ ಮಾಡಬೇಕು, ಸರಿಯಾದ ಉಲ್ಲೇಖ ಬೇಕು, ಕೊಂಡಿಗಳು ಬೇಕು. |
ಜಯರಾಮ ಕಾರಂತ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ೧೩ ಜೂನ್ ೧೯೫೮ರಂದು ಜನಿಸಿದರು. ಇವರ ತಂದೆಯ ಹೆಸರು ಕಾಂತಾವರ ಸುಬ್ರಾಯ ಕಾರಂತ ಮತ್ತು ತಾಯಿಯ ಹೆಸರು ಶ್ರೀಮತಿ ಗಿರಿಜಾ ಕಾರಂತ. ಒಟ್ಟು ೭ ಜನ ಮಕ್ಕಳಲ್ಲಿ ಹಿರಿಯರಾದ ಇವರು ಕವಿಯಾಗಿ ಪ್ರಸಿದ್ಧರು.
ವಿದ್ಯಾಭ್ಯಾಸ
ಬದಲಾಯಿಸಿತಮ್ಮ ವಿದ್ಯಾಭ್ಯಾಸವನ್ನು ಕಾಂತಾವರ, ಮೂಡುಬಿದಿರೆ[೧], ಕಳಸ[೨] ಮತ್ತು ಉಡುಪಿ[೩] ಮೊದಲಾದ ಊರುಗಳಲ್ಲಿ ಪೂರೈಸಿ, ಸ್ನಾತಕೋತ್ತರ ಇಂಗ್ಲೀಷ್ ಡಿಪ್ಲೋಮಾವನ್ನು ಪಡೆದಿದ್ದಾರೆ.
ವೃತ್ತಿ ಜೀವನ
ಬದಲಾಯಿಸಿಉಡುಪಿಯ ಉದಯಭಾರತಿ ಪಾಕ್ಷಿಕದಲ್ಲಿ ಅಂಶಕಾಲಿಕ ಸಂಪಾದಕರಾಗಿ ಸೇವೆ ಸಲ್ಲಿಸಿ ನಂತರ ೧೯೭೭-೧೯೮೦ರವರೆಗೆ ಉಡುಪಿಯ ರಾಘವೇಂದ್ರ ಸ್ವಾಮಿ ಪುಸ್ತಕ ಭಂಡಾರದಲ್ಲಿ ಮತ್ತು ನವಭಾರತ ಪುಸ್ತಕ ಭಂಡಾರದಲ್ಲಿ ಮಾರಾಟಗಾರರಾಗಿ ಹಾಗೂ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೮೮ರಿಂದ ೨೦೦೩ರವರೆಗೆ ಕನ್ನಡ ದಿನಪತ್ರಿಕೆಯಾದ ಉದಯವಾಣಿಯಲ್ಲಿ ಉಪಸಂಪಾದಕರಾಗಿ ಹಾಗೂ ೨೦೦೩ರಿಂದ ತರಂಗ ವಾರಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಧನೆಗಳು
ಬದಲಾಯಿಸಿ- ೧೯೯೭ರಿಂದ ದ್ವಿತೀಯಾಕ್ಷರ ಪ್ರಾಸವುಳ್ಳ ೧೦+೧೦+೧೧ ಮಾತ್ರೆಗಳ ಮೂರು ಸಾಲಿನ 'ಮುಕ್ಕಾಲು ಪದ್ಯ'ಗಳನ್ನು ರಚಿಸುತ್ತಿರುವ ಜಯರಾಮ ಕಾರಂತರು, ಈ ಮೂಲಕ ವಿಭಿನ್ನ ಛಂದಸ್ಸಿನ ಪದ್ಯರಚನೆಯ ಕ್ರಮವೊಂದನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
- ಜಯರಾಮ ಕಾರಂತ ಅವರು ತಮ್ಮ ಸ್ವಂತ 'ಸ್ನೇಹ ಪ್ರಕಾಶನ'ದಡಿಯಲ್ಲಿ ನಾಡಿನ ಗಣ್ಯ ಸಾಹಿತಿಗಳ ಕವಿತೆ, ನಾಟಕ, ಅನುವಾದಿತ ನೀಳ್ಗತೆ, ಕಾದಂಬರಿ ಮೊದಲಾದ ಹತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
- ಉದಯವಾಣಿ, ಕನ್ನಡಪ್ರಭ, ಪ್ರಜಾವಾಣಿ, ಮುಂಗಾರು, ಕನ್ನಡಪ್ರಭ, ತರಂಗ, ಕರ್ಮವೀರ, ತುಷಾರ, ಉತ್ಥಾನ ಮತ್ತು ಯುಗಪುರುಷ ಮುಂತಾದ ಪತ್ರಿಕೆಗಳಲ್ಲಿ ಕಥೆ, ಕವನಗಳನ್ನು ಪ್ರಕಟಿಸಿದ್ದಾರೆ.
- ತಾಲೂಕು, ಜಿಲ್ಲಾ, ರಾಜ್ಯ, ಗಡಿನಾಡ, ಕನ್ನಡ ಸಮ್ಮೇಳನಗಳಲ್ಲಿ ಕವಿಗೋಷ್ಠಿಗಳಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ.
- ಕುಂದಾಪುರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ.(೧೯೯೩)
- ಕಾರ್ಕಳ ತಾಲೂಕು ಸಮ್ಮೇಳನದಲ್ಲಿ ನಡೆದ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ.(೨೦೦೯)
- ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗಿ.(೨೦೦೯)
- ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚುಟುಕು ಕವಿಗೋಷ್ಠಿಯಲ್ಲಿ ಭಾಗಿ.(೨೦೦೬)
- ಆಳ್ವಾಸ್ ನುಡಿಸಿರಿ - ಕವಿನಮನ -ಕವಿಸಮಯದಲ್ಲಿ ಕವನವಾಚನ.
- ಕಾಂತಾವರ ಕನ್ನಡ ಸಂಘದಲ್ಲಿ ಹಲವು ವರ್ಷಗಳ ಕಾಲ ಸಕ್ರಿಯ ಸೇವೆ ಸಲ್ಲಿಸಿದ್ದಾರೆ.
ಕೃತಿಗಳು
ಬದಲಾಯಿಸಿ- ದಳಗಳು - ಕವನ ಸಂಕಲನ (೧೯೮೫)
- ವಲಸೆ ಬಂದ ಹಕ್ಕಿ - ಕವನ ಸಂಕಲನ (೧೯೯೭)
- ಮುಕ್ಕಾಲು ಪದ್ಯಗಳು - ಕವನ ಸಂಕಲನ (೧೯೯೭, ೨೦೦೧)
- ನೆಲಗುಲಾಬಿಯ ಗುಟ್ಟು - ಕವನ ಸಂಕಲನ (೨೦೦೧)
- ಬಿದ್ದ ಪ್ರತಿಮೆ - ಕವನ ಸಂಕಲನ (೨೦೧೪)
- ನಾಯಕನಿಗೆ ನಮನ - (ಜೆಪಿ ಕುರಿತ ಲೇಖನಗಳ ಸಂಗ್ರಹ) (ಸಹಸಂಪಾದಿತ)
- ಮೊಗಸಾಲೆ ಐವತ್ತರ ಹೊತ್ತಿಗೆ - ಅಭಿನಂದನ ಗ್ರಂಥ - (ಸಹಸಂಪಾದಿತ) (೨೦೦೪)
- ಮುದ್ದಣನಿಗೆ ನಮನ - ವಿಮರ್ಶೆಗಳ ಸಂಕಲನ - (ಸಂಪಾದಿತ) (೨೦೦೩)
- ಮುದ್ದಣ ಪುರಸ್ಕಾರ - ಮುದ್ದಣ ಜನ್ಮಶತಮಾನೋತ್ಸವ ಸಂಭ್ರಮ ಸ್ಮೃತಿ ಸಂಪುಟ - (ಸಂಪಾದಿತ) (೨೦೦೩)
- ಝೆನ್ ಹನಿಗಳು - (೧೦೦ ಕಥೆಗಳ ಅನುವಾದ) (೨೦೦೧)
- ಉಡುಪಿ ಜಿಲ್ಲೆಯ ಕಾವ್ಯ - (ಸಂಪಾದಿತ) (೨೦೦೭)
- ಪುನರೂರು ಪುರಸ್ಕಾರ - ಅಭಿನಂದನ ಗ್ರಂಥ (ಸಂಪಾದಿತ) (೨೦೦೫)
- ಬತ್ತದ ಚೈತನ್ಯದ ಗಣಿ - ದ ಪವರ್ ವಿದಿನ್ - ಅನುವಾದ) (೨೦೧೫)
- ಯಶಸ್ಸಿನ ಏಳು ಸೂತ್ರಗಳು - ದೀಪಕ್ ಚೋಪ್ರಾ ಅವರ ಗ್ರಂಥದ ಸಂಕ್ಷಿಪ್ತ ರೂಪಾಂತರ
- ದೌ ದ ಜಿಂಗ್ - ಅನುವಾದ
- ಖಲೀಲ್ ಗಿಬ್ರಾನ್ ಕತೆಗಳು - ಅನುವಾದ
ಗೌರವಗಳು
ಬದಲಾಯಿಸಿ- 'ದಳಗಳು' ಕವನಸಂಕಲನಕ್ಕೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ. (೧೯೮೫)
- 'ವಲಸೆ ಬಂದ ಹಕ್ಕಿ' ಕವನಸಂಕಲನಕ್ಕೆ ಪೆರ್ಲ ಕಾವ್ಯ ಪ್ರಶಸ್ತಿ. (೧೯೯೭)
- ಕನ್ನಡ ಸಂಘ, ಕಾಂತಾವರ ಇದರ ಬೆಳ್ಳಿ ಹಬ್ಬದಲ್ಲಿ ಸನ್ಮಾನ.(೨೦೦೧)
- ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.(೧೯೯೯)