ಜಯರಾಮನ್ ಗೌರಿಶಂಕರ್

ಜಯರಾಮನ್ ಗೌರಿಶಂಕರ್ (ಜನನ ೧೯೫೬) ಇವರು ಭಾರತೀಯ ವೈದ್ಯಕೀಯ ಸೂಕ್ಷ್ಮ ಜೀವಶಾಸ್ತ್ರಜ್ಞ. ಗೌರಿಶಂಕರ್ ಇವರು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದರು ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾನಿಲಯದಿಂದ ಬ್ಯಾಕ್ಟೀರಿಯಾದ ತಳಿಶಾಸ್ತ್ರದಲ್ಲಿ ಡಾಕ್ಟರ್ ಆಫ್ ಫಿಲಾಸಫಿಯನ್ನು ಹೊಂದಿದ್ದಾರೆ.

ಜಯರಾಮನ್ ಗೌರಿಶಂಕರ್
ಜನನ1956 (ವಯಸ್ಸು 67–68)
ಚೆನ್ನೈ, ಭಾರತ
ರಾಷ್ಟ್ರೀಯತೆFile:Flag of India.svg
ಕಾರ್ಯಕ್ಷೇತ್ರಗಳುBiology
ಸಂಸ್ಥೆಗಳುಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲಾರ್ ಬಯಾಲಜಿ

ಡಿಎನ್ಎ ಫಿಂಗರ್ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ ಸೆಂಟರ್

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್, ಮೊಹಾಲಿ [೧]
ಅಭ್ಯಸಿಸಿದ ಸಂಸ್ಥೆಮದ್ರಾಸ್ ವಿಶ್ವವಿದ್ಯಾಲಯ, ಮೆಲ್ಬೋರ್ನ್ ವಿಶ್ವವಿದ್ಯಾಲಯ
ಗಮನಾರ್ಹ ಪ್ರಶಸ್ತಿಗಳುಪದ್ಮಶ್ರೀ (2013)

ಅವರು ಹೈದರಾಬಾದ್‌ನಲ್ಲಿರುವ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಕೇಂದ್ರದಲ್ಲಿ ವಿಜ್ಞಾನಿ ಹಾಗೂ ತಂಡದ ನಾಯಕರಾಗಿದ್ದರು. ೨೦೦೦ ರಲ್ಲಿ, ಅವರು ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ ಕೇಂದ್ರದ ನಿರ್ದೇಶಕರಾದರು. [೨] ಪ್ರಸ್ತುತ, ಅವರು ಮೊಹಾಲಿಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. [೩]

ಅವರಿಗೆ ೧೯೯೧ ರಲ್ಲಿ, ಜೈವಿಕ ವಿಜ್ಞಾನ ವಿಭಾಗದಲ್ಲಿ ಭಾರತದ ಅತ್ಯುನ್ನತ ವಿಜ್ಞಾನ ಪ್ರಶಸ್ತಿಯಾದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ನೀಡಲಾಯಿತು. [೪] ೨೦೧೩ ರಲ್ಲಿ ಅವರಿಗೆ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪದ್ಮಶ್ರೀ ಗೌರವ ದೊರೆತಿದೆ, ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ನೀಡಲಾಯಿತು. [೫]

ನಾಗರಿಕ ಗೌರವಗಳು ಬದಲಾಯಿಸಿ

ಸಂಶೋಧನಾ ಪ್ರಶಸ್ತಿಗಳು ಬದಲಾಯಿಸಿ

ಸಂಶೋಧನೆಯ ಮುಖ್ಯಾಂಶಗಳು ಬದಲಾಯಿಸಿ

  • ಒಪೆರಾನ್ ಮತ್ತು ಅದರ ಸೊಗಸಾದ ಆಸ್ಮೋಟಿಕ್ ನಿಯಂತ್ರಣದ ಅನ್ವೇಷಣೆ
  • ವಿಷಕಾರಿ ಆರ್‌ಎನ್‌ಎ-ಡಿಎನ್‌ಎ ಹೈಬ್ರಿಡ್‌ಗಳು (ಆರ್‌-ಲೂಪ್‌ಗಳು) ಇ ಕೊಲಿಯಲ್ಲಿನ ಹೊಸ ಅನುವಾದಿಸದ ಪ್ರತಿಲಿಪಿಗಳಿಂದ ಸಂಭವಿಸುವ ಸಾಧ್ಯತೆಯಿದೆ ಎಂಬ ಹೊಸ ಊಹೆಯ ನಿರೂಪಣೆ.

ಉಲ್ಲೇಖಗಳು ಬದಲಾಯಿಸಿ

  1. ಗೌರಿಶಂಕರ್ ಹೊಸ ಐಐಎಸ್ಇಆರ್ ನಿರ್ದೇಶಕ, 'ಹಿಂದೂಸ್ತಾನ್ ಟೈಮ್ಸ್'
  2. The American Society for Microbiology honors Jayaraman Gowrishankar
  3. "Executive Positions - IISER Mohali". www.iisermohali.ac.in (in ಬ್ರಿಟಿಷ್ ಇಂಗ್ಲಿಷ್). Archived from the original on 18 ಸೆಪ್ಟೆಂಬರ್ 2017. Retrieved 18 September 2017.
  4. "INSA". Archived from the original on 4 March 2016. Retrieved 16 June 2012.
  5. "Padma Awards Announced" (Press release). Ministry of Home Affairs. 25 January 2013. Retrieved 24 February 2013.
  6. "Padma Awards Announced" (Press release). Ministry of Home Affairs. 25 January 2013. Retrieved 24 February 2013."Padma Awards Announced" (Press release). Ministry of Home Affairs. 25 January 2013. Retrieved 24 February 2013.