ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ

ಡಾ. ಶಾಂತಿಸ್ವರೂಪ್ ಭಟ್ನಾಗರ್ ಬದಲಾಯಿಸಿ

ಚಿತ್ರ:S.S.Bhatnagar.jpg
ವಿಜ್ಞಾನಿ ಡಾ.ೊಶಾಂತಿಸ್ವರೂಪ್ ಭಟ್ನಾಗರ್

ಭಾರತದ ಹೆಸರಾಂತ ವಿಜ್ಞಾನಿ ಡಾ.ೊಶಾಂತಿಸ್ವರೂಪ್ ಭಟ್ನಾಗರ್ ನಡೆಸಿದ ಪ್ರಮುಖ ಸಂಶೋಧನೆಗಳು ಕಲಾಯ್ಡ ಮತ್ತು ದ್ಯುತಿ ರಾಸಾಯನ ವಿಜ್ಞಾನಕ್ಕೆ (colloid & photochemistry) ಸಂಬಂಧಿಸಿವೆ. ಸುಲಭ ಬೆಲೆಯಲ್ಲಿ ಆಕರ್ಷಕ ಕೃತಕ ಆಭರಣಗಳನ್ನು ತಯಾರಿಸಿದರು. ಕಬ್ಬಿನ ನಾರು, ವನಸ್ಪತಿ ನಾರುಗಳ ಬಗ್ಗೆ ಸಂಶೋಧನೆ ನಡೆಸಿದರು. ಕೃತಕ ರಾಳಗಳನ್ನು ತಯಾರಿಸಿದರು. ತೈಲ ಬಾವಿಗಳಿಂದ ಶುದ್ಧ ರೂಪದಲ್ಲಿ ಎಣ್ಣೆ ತೆಗೆಯಲು ಉಪಕರಣವನ್ನು ನಿರ್ಮಿಸಿ ತೈಲ ಶುದ್ದೀಕರಣವನ್ನು ಸರಳಗೊಳಿಸಿದರು. ಕಾಂತೀಯ ರಾಸಾಯನಿಕ ವಸ್ತುಗಳ ಬಗ್ಗೆ ಸಂಶೋಧನೆ ನಡೆಸಿ ಉದ್ಗ್ರಂಥವನ್ನು ರಚಿಸಿದರು. ಬ್ರಿಟಿಷ್ ಸರ್ಕಾರ ಇವರಿಗೆ ನೈಟ್‌ಹುಡ್ ಪ್ರಶಸ್ತಿಯನ್ನು ನೀಡಿತು. ಭಾರತ ಸರ್ಕಾರ CSIR ಸಂಸ್ಥೆಗೆ ಅಧ್ಯಕ್ಷರನ್ನಾಗಿ ಮಾಡಿತು. 2ನೇ ಮಹಾಯುದ್ಧದಲ್ಲಿ ಬಳಕೆಯಾದ ವಿಷಾನಿಲದಿಂದ ತಪ್ಪಿಸಿಕೊಳ್ಳಲು ರಾಸಾಯನಿಕ ದ್ರವ್ಯವೊಂದನ್ನು ಕಂಡು ಹಿಡಿದರು. ಏರ್‌ಫೋಮ್ ಲೋಷನ್ ಎಂಬ ಬಟ್ಟೆಯ ವಾರ್ನಿಷನ್ನು ಕಂಡು ಹಿಡಿದರು. ಹೀಗೆ ಅನೇಕ ವಸ್ತುಗಳನ್ನು ಅವರು ಕೃತಕವಾಗಿ ತಯಾರಿಸಿದರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ಹಲವಾರು ವೈಜ್ಞಾನಿಕ ಸಂಶೋಧನಾಲಯಗಳನ್ನು ಸ್ಥಾಪಿಸಿದ ಇವರು ಸ್ವತಂತ್ರ ಭಾರತದ ಪ್ರಪ್ರಥಮ ‘ವೈಜ್ಞಾನಿಕ ಶಿಲ್ಪಿ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1954ರಲ್ಲಿ ಇವರ ಮರಣಾನಂತರ ಇವರ ನೆನಪಿನಲ್ಲಿ ‘ಶಾಂತಿ ಸ್ವರೂಪ ಭಟ್ನಾಗರ್’ ಪ್ರಶಸ್ತಿಯನ್ನು ಪ್ರತಿವರ್ಷ ಪ್ರಮುಖ ರಸಾಯನ ವಿಜ್ಞಾನಿಗಳಿಗೆ ನೀಡಲಾಗುತ್ತಿದೆ.[೧]

ಪ್ರಶಸ್ತಿ ಬದಲಾಯಿಸಿ

  • ಪ್ರಶಸ್ತಿ ಒಂದು ಉಲ್ಲೇಖದ ಪ್ರಶಸ್ತಿ ಫಲಕ, ಮತ್ತು ರೂ.5 ಲಕ್ಷ (ಅಮೇರಿಕಾದ $ 7,400) ನಗದು ಪ್ರಶಸ್ತಿ ಒಳಗೊಂಡಿದೆ. ಜೊತೆಗೆ, ಪ್ರಶಸ್ತಿ ಪಡೆದವರು 65 ವರ್ಷಗಳ ವಯಸ್ಸಿನ ವರೆಗೆ ತಿಂಗಳಿಗೆ ರೂ.15,000.ಸಹ ಪಡೆಯುವರು.[೨]

೨೦೧೫ರ ಶಾಂತಿಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿ ಬದಲಾಯಿಸಿ

  • ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ಶಾಂತಿಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿಯನ್ನು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯ ಸೋಮವಾರ ಪ್ರಕಟಿಸಿದೆ.
  • ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ರಿಷಿಕೇಶ್‌ ನಾರಾಯಣನ್‌ ಹಾಗೂ ಕೋಲ್ಕತ್ತದ ಸಿಎಸ್‌ಐಆರ್‌ ಭಾರತೀಯ ರಾಸಾಯನಿಕ ಜೀವವಿಜ್ಞಾನ ಸಂಸ್ಥೆಯ (ಐಐಸಿಬಿ) ಸುರೇಂದ್ರನಾಥ್‌ ಭಟ್ಟಾ ಚಾರ್ಯ ಅವರಿಗೆ ಜೈವಿಕ ವಿಜ್ಞಾನ ವಿಭಾಗದ ಪ್ರಶಸ್ತಿ ಪ್ರಕಟಿಸಲಾಗಿದೆ.
  • ರಾಸಾಯನಿಕ ವಿಜ್ಞಾನಗಳ ಕ್ಷೇತ್ರದಲ್ಲಿ ಪಾರ್ಥಸಾರಥಿ ಮುಖರ್ಜಿ ಪ್ರಶಸ್ತಿ ಪಡೆದಿದ್ದರೆ, ಭೂಮಿ, ವಾಯುಮಂಡಲ, ಸಾಗರ ಹಾಗೂ ಗ್ರಹ ವಿಜ್ಞಾನ ಕ್ಷೇತ್ರದಲ್ಲಿ ಸುನಿಲ್‌ ಕುಮಾರ್‌ ಸಿಂಗ್‌ ಅವರು ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
  • ಎಂಜಿನಿಯರಿಂಗ್‌ ವಿಜ್ಞಾನ ವಿಭಾಗದಲ್ಲಿ ಐಐಟಿ ಕಾನ್ಪುರದ ಅವಿನಾಶ್‌ ಕುಮಾರ್‌ ಅಗರ್‌ವಾಲ್‌, ಮೈಕ್ರೋಸಾಫ್ಟ್‌ ರೀಸರ್ಚ್‌ ಇಂಡಿಯಾ ವಿಭಾಗದ ವೆಂಕಟ ನಾರಾಯಣ ಪದ್ಮನಾಭನ್‌ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
  • ಮುಂಬಯಿ ಮೂಲದ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸರ್ಚ್‌ನ (ಟಿಐಎಫ್‌ಆರ್‌) ಅಮ ಲೇಂದು ಕೃಷ್ಣ ಹಾಗೂ ಐಐಟಿ ದೆಹಲಿಯ ನವೀನ್‌ ಗರ್ಗ್‌ ಅವರನ್ನು ಗಣಿತ ವಿಜ್ಞಾನ ವಿಭಾಗದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
  • ವೈದ್ಯಕೀಯ ವಿಭಾಗದಲ್ಲಿ ನಿಯಾಸ್‌ ಅಹಮ್ಮದ್‌ ಎ.ಎಸ್‌. ಪ್ರಶಸ್ತಿ ಪಡೆದಿದ್ದರೆ, ಭೌತ ವಿಜ್ಞಾನ ವಿಭಾಗದಲ್ಲಿ ಐಐಟಿ ಕಾನ್ಪುರದ ಸುಬ್ರಮಣಿಯನ್‌ ಅನಂತ ರಾಮಕೃಷ್ಣ ಹಾಗೂ ಐಐಎಸ್ಸಿಯ ಸುಧೀರ್‌ ಕುಮಾರ್‌ ವೆಂಪತಿ ಜಂಟಿ ಯಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
  • ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ ಐಆರ್‌) 2016ರ ಜೀವ ವಿಜ್ಞಾನ ವಿಭಾಗದ ಪ್ರಶಸ್ತಿಗೆ ರಾಷ್ಟ್ರೀಯ ಸಸ್ಯಶಾಸ್ತ್ರ ಸಂಶೋಧನಾ ಸಂಸ್ಥೆ (ಎನ್‌ಬಿಆರ್‌ಐ) ಹಾಗೂ ಮಧುಮೇಹಕ್ಕೆ ಮೂಲಿಕೆ ಸಂಯೋಜನೆಯನ್ನು ಅಭಿವೃದ್ಧಿಪಡಿಸಿದ ಲಖನೌದ ಕೇಂದ್ರ ಔಷಧೀಯ ಸಸ್ಯಗಳ ಸಂಸ್ಥೆಗಳು (ಸಿಮ್ಯಾಪ್‌) ಪಾತ್ರವಾಗಿವೆ.
  • ಭೌತ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್‌ ವಿಭಾಗದಲ್ಲಿ ಡೆಹ್ರಾ ಡೂನ್‌ನ ಭಾರತೀಯ ಪೆಟ್ರೋಲಿಯಂ ಸಂಸ್ಥೆಗೆ ಸಿಎಸ್‌ಐರ್‌ನ ತಾಂತ್ರಿಕ ಪ್ರಶಸ್ತಿ ನೀಡಲಾಗಿದೆ.
  • ‘ದೃಷ್ಟಿ’ಗೆ ರಾಷ್ಟ್ರೀಯ ಗೌರವ: ಸಿಎಸ್‌ಆರ್‌ಐನ ತಂತ್ರಜ್ಞಾನ ‘ಅನ್ವೇಷಣೆ’ ವಿಭಾಗದಲ್ಲಿ ಎಲ್‌ಇಡಿ ಆಧರಿತ ದೃಷ್ಟಿ ದೃಗ್ಗೋಚರ ವ್ಯವಸ್ಥೆಯನ್ನು ಸಂಶೋಧಿ ಸಿದ ಬೆಂಗಳೂರಿನ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋ ರೇಟರಿಗೆ ಪ್ರಶಸ್ತಿ ಲಭಿಸಿದೆ. ದೃಷ್ಟಿಯು ದೃಗ್ಗೋಚರ ಉಪಕರಣಗಳನ್ನು ಭಾರತದ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದು, ಏರ್‌ಪೋರ್ಟ್‌ನಲ್ಲಿ ಸುರಕ್ಷಿತ ಲ್ಯಾಂಡಿಂಗ್‌ ಹಾಗೂ ಟೇಕಾಫ್‌ ಮಾಡಲು ಪೈಲಟ್‌ಗಳಿಗೆ ಅಗತ್ಯ ಮಾಹಿತಿ ಒದಗಿಸುತ್ತದೆ.[೩]

ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. "ಡಾ. ಶಾಂತಿಸ್ವರೂಪ್ ಭಟ್ನಾಗರ್". Archived from the original on 2013-01-06. Retrieved 2016-09-27.
  2. Shanti Swarup Bhatnagar Prize
  3. ಶಾಂತಿಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿ ಪ್ರಕಟ