ಜಯಂತ ನಾರ್ಳಿಕರ್ ಭಾರತದ ಪ್ರಸಿದ್ಧ ಖಗೋಳ ವಿಜ್ಞಾನಿ.ಇವರು ಜುಲೈ ೧೯,೧೯೩೮ ರಲ್ಲಿ ಕೊಲ್ಲಾಪುರದಲ್ಲಿ ಜನಿಸಿದರು.ಇವರ ತಂದೆ ವಿ.ವಿ.ನಾರ್ಳಿಕರ್ ಪ್ರಸಿದ್ಧ ಗಣಿತಜ್ಞ.ತಾಯಿ ಸಂಸ್ಕೃತದಲ್ಲಿ ವಿದ್ವಾಂಸೆ.ಇವರು ಪ್ರೊಫೆಸರ್ ಫ್ರೆಡ್ ಹೋಯ್ಲ್ (Fred Hoyle)ರವರೊಂದಿಗೆ ಪ್ರತಿಪಾದಿಸಿದ ತತ್ವ 'ಹೋಯ್ಲ್ -ನಾರ್ಲಿಕರ್ ಥಿಯರಿ'ಎಂದು ಪ್ರಸಿದ್ಧವಾಗಿದೆ. ಇವರಿಗೆ ಶಾಂತಿಸ್ವರೂಪ ಭಟ್ನಾಗರ್ ಪ್ರಶಸ್ತಿ, ಪದ್ಮ ವಿಭೂಷಣಪ್ರಶಸ್ತಿ ದೊರೆತಿದೆ.ಇವರು ಹಲವಾರು ಲೇಖನ,ವೈಜ್ಞಾನಿಕ ಬರಹ,ಕಥೆಗಳ ಮೂಲಕ ಜನರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಪ್ರಯತ್ನಶೀಲರಾಗಿದ್ದಾರೆ.

ಜಯಂತ್ ವಿಷ್ಣು ನಾರ್ಳೀಕರ್
ಜಯಂತ್ ವಿಷ್ಣು ನಾರ್ಳೀಕರ್
ಜನನ (1938-07-19) ೧೯ ಜುಲೈ ೧೯೩೮ (ವಯಸ್ಸು ೮೬)
ಕೊಲ್ಹಾಪುರ್, ಭಾರತ
ವಾಸಸ್ಥಳಪುಣೆ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಭೌತಶಾಸ್ತ್ರ, ಖಗೋಳಶಾಸ್ತ್ರ
ಸಂಸ್ಥೆಗಳುಕೇಂಬ್ರಿಜ್ ವಿಶ್ವವಿದ್ಯಾಲಯ
ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ
ಖಗೋಳಶಾಸ್ತ್ರ ಮತ್ತು ಖಭೌತಶಾಸ್ತ್ರದ ಅಂತರವಿಶ್ವವಿದ್ಯಾಲಯ ಕೇಂದ್ರ
ಅಭ್ಯಸಿಸಿದ ವಿದ್ಯಾಪೀಠಬನಾರಸ್ ಹಿಂದೂ ವಿಶ್ವವಿದ್ಯಾಲಯ
ಕೇಂಬ್ರಿಜ್ ವಿಶ್ವವಿದ್ಯಾಲಯ
ಡಾಕ್ಟರೇಟ್ ಸಲಹೆಗಾರರುಫ಼್ರೆಡ್ ಹಾಯ್ಲ್
ಡಾಕ್ಟರೇಟ್ ವಿದ್ಯಾರ್ಥಿಗಳುತನು ಪದ್ಮನಾಭನ್
ಪ್ರಸಿದ್ಧಿಗೆ ಕಾರಣಭಾಗಶಃ ಸ್ಥಿರ ಸ್ಥಿತಿ ವಿಶ್ವವಿಜ್ಞಾನ
ಹಾಯ್ಲ್ ನಾರ್ಳೀಕರ್ ಗುರುತ್ವ ಸಿದ್ಧಾಂತ
ಗಮನಾರ್ಹ ಪ್ರಶಸ್ತಿಗಳುಪದ್ಮ ವಿಭೂಷಣ
ಆಡಮ್ಸ್ ಪ್ರಶಸ್ತಿ
ಪದ್ಮ ಭೂಷಣ

ಉಲ್ಲೇಖಗಳು

ಬದಲಾಯಿಸಿ