ಜಪಮಾಲೆ ಮಾತೆ ಚರ್ಚ್ ಮಂಗಳೂರು


ಜಪಮಾಲೆ ಮಾತೆ ಚರ್ಚ್ ಮಂಗಳೂರು (ಪೋರ್ಚುಗೀಸ್:Igreja Nossa Senhora do Rosário de Mangalore), ಅಥವಾ ರೊಸಾರಿಯೊ ಕ್ಯಾಥೆಡ್ರಲ್ ಇದು ರೋಮನ್ ಕಥೋಲಿಕ ಇದರ ಕ್ಯಾಥೆಡ್ರಲ್ ಆಗಿದ್ದು ರೋಮನ್ ಕಥೋಲಿಕ ಮಂಗಳೂರು ‍ಧರ್ಮಪ್ರಾಂತ್ಯಇಲ್ಲಿಯ ವ್ಯಾಪ್ತಿಗೆ ಒಳಪಟ್ಟಿದ್ದು, ಇದನ್ನು ಜಪಮಾಲೆಯ ಮಾತೆಗೆಸರ್ಮಪಿಸಲಾಗಿದೆ. ಕರಾವಳಿ ಪ್ರದೇಶದಲ್ಲೇ ಇದು ಮೊದಲ ಚರ್ಚ್ ಎಂದು ಗುರುತಿಸಲ್ಪಟ್ಟಿದೆ.[] ಐತಿಹಾಸಿಕಾವಾಗಿ ಮಂಗಳೂರಿನಲ್ಲಿ ಉನ್ನತ ಜಾತಿಯ ಜನರಾಮಂಗಳುರು ಕ್ರೈಸ್ತರು ಇವರಿಗೆ ಈ ಚರ್ಚನ್ನು ಮೀಸಲಾಗಿರಿಸಲಾಗಿತ್ತು .[] ಇದು ಕರ್ನಾಟಕದಲ್ಲೇ ಅತ್ಯಂತ ಹಳೇಯ ಚರ್ಚ್ ಆಗಿದೆ.

Our Lady of Rosary of Mangalore
Mangalore Cathedral
ಜಪಮಾಲೆ ಮಾತೆ ಚರ್ಚ್ ಮಂಗಳೂರು ಇದರ ಛಾಯಾಚಿತ್ರ
ಧರ್ಮ ಮತ್ತು ಸಂಪ್ರದಾಯ
ಧರ್ಮಕಥೋಲಿಕ
Ecclesiastical or organizational statusಸಕ್ರೀಯ
ಪವಿತ್ರವಾದ ವರ್ಷ೧೫೬೮
ಸ್ಥಳ
ಸ್ಥಳಮಂಗಳೂರು, ಭಾರತ

ಪ್ರಸ್ತುತ ಪ್ಯಾರಿಷ್ ಪ್ರೀಸ್ಟ್ - ಫಾದರ್ ಆಲ್ಫ್ರೆಡ್ ಜೆ ಪಿಂಟೋ (೦೨-೦೮-೨೦೨೦ - )

ಇತಿಹಾಸ

ಬದಲಾಯಿಸಿ

ಮಂಗಳುರಿನ ಜಪಮಾಲೆಯ ಚರ್ಚ್ ಮೂಲತಃ ಹಳೆಯ ಪೋರ್ಚುಗೀಸರ ಕಾರ್ಖಾನೆಯ ಚರ್ಚ್ ಆಗಿತ್ತು.[] ಇದನ್ನು ಪೋರ್ಚುಗೀಸರು ೧೫೬೮ರಲ್ಲಿ ಕಟ್ಟಿದ್ದರು.[] ಪವಿತ್ರ ಬಲಿಪೀಠದ ಎತ್ತರದ ಗುಡಿಯಲ್ಲಿದ್ದ ನಿಷ್ಕಳ್ಮಷ ಮಾತೆಯ ಮೂರ್ತಿಯು ಸಮುದ್ರದಲ್ಲಿ ಮೀನುಗಾರರಿಗೆ ಅವರ ಮೀನಿನ ಬಲೆಗೆ ಸಿಕ್ಕಿತ್ತೆಂದು ಮೌಖಿಕ ಪರಂಪರೆಯು ಹೇಳುತ್ತದೆ.[] ತದನಂತರ ಅದನ್ನು ಚರ್ಚಿಗೆ ತಂದು ಅಲ್ಲಿ ಪ್ರತಿಷ್ಠಾಪಿನೆ ಮಾಡಲಾಯಿತು.[] ಚರ್ಚ್-ನ ಪ್ರಮುಖ ಬಲಿಪೀಠದ ಎತ್ತರದ ಗುಡಿಯಲ್ಲಿ ಜಪಮಾಲೆ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಾಮೊನ್ ಇವರ ಆರಾಧನೆಗೆ ಪ್ರಮುಖ ಕೇಂದ್ರವಾಗಿತ್ತು .[] ಇದನ್ನು ಇಟಲಿ ದೇಶದ ಪ್ರಯಾಣಿಕನಾದ ಪಿಯೆಟ್ರೊ ಡೆಲ್ಲಾ ವಾಲ್ಲೆಅವರು, ತಮ್ಮ ೧೬೨೩ರ ಮಂಗಳುರು ಪ್ರವಾಸ ಕಥನದಲ್ಲಿ ಉಲ್ಲೇಖಿಸಿದ್ದಾರೆ.[]

ಚರ್ಚ್ ಕಟ್ಟಡವನ್ನು ಮೈಸೂರು ಇದರ ರಾಜ ಟಿಪ್ಪು ಸುಲ್ತಾನನು ೧೭೮೪ರಲ್ಲಿ ಸಂಪೂರ್ಣವಾಗಿ ಕೆಡವಿ ಹಾಕಿದ್ದ.[] ಆದರೆ ೧೮೧೩ರಲ್ಲಿ ಮತ್ತೆ ಇದರ ನಿರ್ಮಾಣ ಕಾರ್ಯ ಪ್ರಾರಂಭಿಸಲಾಯಿತು.[] ಹಳೆಯ ಕ್ಯಾಥೆಡ್ರಲ್ ಕಟ್ಟಡವನ್ನು ೧೯೧೦ರಲ್ಲಿ ಕೆಡವಿ ಅದರ ಸ್ಥಳದಲ್ಲೇ ಪ್ರಸ್ತುತ ಕಟ್ಟಡವನ್ನು ನಿರ್ಮಿಸಲಾಗಿದೆ.[]ಮಂಗಳೂರು ಧರ್ಮಪ್ರಾಂತ್ಯದಲ್ಲೇ ಪರಮ ಪವಿತ್ರದ ಸ್ಥಳದಲ್ಲಿ ವಿಶಾಲವಾದ ಗುಮ್ಮಟವನ್ನು ಹೊಂದಿದ ಏಕೈಕ ಚರ್ಚ್ ಎಂಬ ಹೆಗ್ಳಿಕೆಗೆ ಪಾತ್ರವಾಗಿದೆ.[] ಗುಮ್ಮಟದ ಮೇಲಿರುವ ಶಿಲುಬೆಯ ಬೆಳಕು ಕಡಲಿನಲ್ಲಿರುವವರಿಗೆ ಪ್ರತಿ ರಾತ್ರಿ ಸಾಂಕೇತಿಕವಾದ ದಾರಿದೀಪವಾಗಿ ಉರಿಯುತ್ತಿದೆ.[] ಚರ್ಚ್ ಪ್ರವೇಶದ್ವಾರದಲ್ಲಿ ಮಂಗಳೂರಿಗೆ ಪೋರ್ಚುಗೀಸರ ಆಗಮನವನ್ನು ಗುರುತಿಸುವ ರಾಜತಾಂತ್ರಿಕ ಮುದ್ರೆಯುಳ್ಳ ಕಲ್ಲು ಇದೆ.[]

೧೮೫೧ರಲ್ಲಿ ಜಪಮಾಲೆ ಮಾತೆಯ ಚರ್ಚ್ ಮಂಗಳೂರು ಇದನ್ನು ಕ್ಯಾಥೆಡ್ರಲ್ ಎಂದು ಘೋಷಿಸಲಾಯಿತು. ಯೇಸುಸಭೆಯ ಗುರುಗಳಾದ ಹೆನ್ರಿ ಭುಝೋನಿ ಅವರು ೧೯೧೦ರಲ್ಲಿ ಇದರ ಸೌಂದರ್ಯವನ್ನು ವೃದ್ಧಿಸಿದರು. ಔಪಚಾರಿಕ ಸರ್ಮಪಣೆಯನ್ನು ಮಂಗಳೂರಿನ ಬಿಷಪ್ ಪೌಲ್ ಪೆರಿನಿ ಅವರು ನೆರವೇರಿಸಿದ್ದರು (೧೯೧೦-೨೮).[]

ಯೇಸುಸಭೆಗೆ ಸೇರಿದ ಮುಂಬಯಿಯ ದಿವೊ ಅವರು ಹೊಸ ಕ್ಯಾಥೆಡ್ರಲ್ ಕಟ್ಟಡದ ವಿನ್ಯಾಸಕಾರರಾಗಿದ್ದಾರೆ. ರಚನೆಯು ಒಂದಕ್ಕೊಂದು ಹೋಂದಾಣಿಕೆಯ ಕಮಾನುಗಳನ್ನು ಹೊಂದಿದ್ದು ೪೮ ಪ್ರಮುಖ ಕಮಾನು, ೧೨ ಪ್ರಧಾನ ಕಮಾನು ಮತ್ತು ೫೦ ಉಪ-ಕಮಾನುಗಳನ್ನು ಹೊಂದಿದೆ.ಬಾಹ್ಯ ಜಗುಲಯು ಸುಮಾರು ೪೫ ಸಣ್ಣ ಕಮಾನುಗಳನ್ನು ಹೊಂದಿದೆ.

ಗುಮ್ಮಟವು ವ್ಯಾಟಿಕನ್ ನಗರದಲ್ಲಿರುವ ಸಂ.ಪೇತ್ರನ ಬೆಸಿಲಿಕದ ಪ್ರತಿಬಿಂಬವಾಗಿದ್ದು, ಇದನ್ನು ಭಾರವಾದ ಲೋಹದ ತಂತಿಗಳಿಂದ, ಕೆಂಪು ಕಲ್ಲು ಮತ್ತು ಜಲ ನಿರೋಧಕ ಅಂಶಗಳಿಂದ ಕೂಡಿದ ಸ್ಥಳೀಯ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ವರ್ಷಗಳಿಂದೀಚೆಗೆ ಕಳೆದಂತೆ ಗುಮ್ಮಟವು ಮಂಗಳೂರು ಬಂದರಿಗೆ ಬರುವ ಹಡಗುಗಳಿಗೆ ಆಕರ್ಷಣೀಯವಾದ ಸಂಕೇತವಾಗಿತ್ತು.[]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ Silva & Fuchs 1965, p. 8
  2. Silva & Fuchs 1965, p. 7
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ Kamila 2004
  4. D'Souza 1983, N. 11, p. 40
  5. ೫.೦ ೫.೧ Saldanha-Shet, I J (25 ಮಾರ್ಚ್ 2014). "An exquisite edifice in Mangalore". No. Bangalore. Deccan Herald. Retrieved 19 ಜನವರಿ 2015.


ಆಧಾರಗಳು

ಬದಲಾಯಿಸಿ