ಜನಸಂಖ್ಯಾ ಗಡಿಯಾರವು ವಿಶ್ವದ ಹಲವು ರಾಷ್ಟ್ರಗಳು ತಮ್ಮ ರಾಷ್ಟ್ರದ ಯಾವುದೇ ಕ್ಷಣದಲ್ಲಿನ ಜನಸಂಖ್ಯೆಯನ್ನು ಆದಷ್ಟೂ ಕರಾರುವಾಕ್ಕಾಗಿ ತೋರಿಸಲು ನಿರ್ಮಿಸಿಕೊಂಡಿರುವ ವ್ಯವಸ್ಥೆ ಅಥವಾ ಸಾಧನ. ಸಾಮಾನ್ಯವಾಗಿ ಇಂತಹ ಗಡಿಯಾರವು ಆಯಾ ರಾಷ್ಟ್ರದ ಜನಸಂಖ್ಯೆ ಮತ್ತು ವಿಶ್ವದ ಒಟ್ಟು ಜನಸಂಖ್ಯೆಯನ್ನು ತೋರಿಸುವುವು. ಒಟ್ಟು ಜನಸಂಖ್ಯೆಯನ್ನು ನಿರ್ಧರಿಸುವಲ್ಲಿ ಆ ದೇಶದ ಅತ್ಯಂತ ಇತ್ತೀಚಿನ ಜನಗಣತಿಯ ಮಾಹಿತಿಗಳು ಮತ್ತು ದೇಶದ ಜನಸಂಖ್ಯಾ ಅಂದಾಜುಗಳು ನೆರವಾಗುತ್ತವೆ.

ಸಾಮಾನ್ಯವಾಗಿ ನಿರ್ದಿಷ್ಟ ಸಮಯದಲ್ಲಿನ ರಾಷ್ಟ್ರದ ಜನಸಂಖ್ಯೆಯನ್ನು ಲೆಕ್ಕಹಾಕಲು ಈ ಕೆಳಕಂಡ ಗಣಿತ ಸೂತ್ರಗಳನ್ನು ಬಳಸಲಾಗುವುದು.

ಪ್ರತಿ ಜನನದ ನಡುವಿನ ಸಮಯದ ಅಂತರ
- ಪ್ರತಿ ಮರಣದ ನಡುವಿನ ಸಮಯದ ಅಂತರ
+ ಪ್ರತಿ ವಲಸಿಗನ ಆಗಮನದ ಸಮಯ ನಡುವಿನ ಅಂತರ
= ಒಟ್ಟಾರೆ ಹೆಚ್ಚಳ ( ಪ್ರತಿ ಒಂದು ಹೆಚ್ಚಳಕ್ಕೆ ತಗಲುವ ಸಮಯ)

ಉದಾಹರಣೆಗೆ :

ಪ್ರತಿ ೧ ನಿಮಿಷ ೫೬ ಸೆಕೆಂಡಿಗೆ ಒಂದು ಜನನ
- ಪ್ರತಿ ೩ ನಿಮಿಷ ೫೯ ಸೆಕೆಂಡಿಗೆ ಒಂದು ಮರಣ
+ ಪ್ರತಿ ೩ ನಿಮಿಷ ೧೧ ಸೆಕೆಂಡಿಗೆ ಹೊರದೇಶದಿಂದ ಒಬ್ಬ ವಲಸಿಗನ ಆಗಮನ
= ಪ್ರತಿ ೧ ನಿಮಿಷ ೪೪ ಸೆಕೆಂಡಿಗೆ ಜನಸಂಖ್ಯೆಯಲ್ಲಿ ೧ ಹೆಚ್ಚಳ.

ಇದನ್ನೂ ನೋಡಿ

ಬದಲಾಯಿಸಿ

ವಿವಿಧ ದೇಶಗಳ ಜನಸಂಖ್ಯೆ

ಬಾಹ್ಯ ಸಂಪರ್ಕಕೊಂಡಿಗಳು

ಬದಲಾಯಿಸಿ