ಜಗನ್ನಾಥ ದೇವಾಲಯ, ಹೈದರಾಬಾದ್

ಭಾರತದ ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿರುವ ಜಗನ್ನಾಥ ದೇವಾಲಯವು ಹಿಂದೂ ದೇವರಾದ ಜಗನ್ನಾಥನಿಗೆ ಸಮರ್ಪಿತವಾದ ದೇವಾಲಯ. ಹೈದರಾಬಾದ್ ನಗರದ ಓಡಿಯಾ ಸಮುದಾಯದವರು ನಿರ್ಮಿಸಿದ ಆಧುನಿಕ ದೇವಾಲಯ ಇದು. ಈ ದೇವಾಲಯವು ಸಾವಿರಾರು ಭಕ್ತರು ಪಾಲ್ಗೊಳ್ಳುವ ವಾರ್ಷಿಕ ರಥಯಾತ್ರೆ ಉತ್ಸವಕ್ಕೆ ಪ್ರಸಿದ್ಧವಾಗಿದೆ.[] ಜಗನ್ನಾಥ ಎಂದರೆ ಬ್ರಹ್ಮಾಂಡದ ಪ್ರಭು ಎಂದರ್ಥ. 2009 ರಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು ಹೈದರಾಬಾದ್ ನಗರದ ಮಧ್ಯಭಾಗದಲ್ಲಿದೆ.

ಜಗನ್ನಾಥ ದೇವಾಲಯ, ಹೈದರಾಬಾದ್

ರೂಪವೈಶಿಷ್ಟ್ಯಗಳು

ಬದಲಾಯಿಸಿ

ವಿನ್ಯಾಸದ ವಿಷಯದಲ್ಲಿ ಇದು ಪುರಿಯ (ಒಡಿಶಾ) ಮೂಲ ಜಗನ್ನಾಥ ದೇವಾಲಯದ ಪ್ರತಿರೂಪವಾಗಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯದ ಅತ್ಯಂತ ಆಕರ್ಷಕವಾದ ಭಾಗವೆಂದರೆ ಇದರ "ಶಿಖರ". ಇದು ಸುಮಾರು 70 ಅಡಿ ಎತ್ತರವನ್ನು ಹೊಂದಿದೆ. ದೇವಾಲಯದ ಕೆಂಪು ಬಣ್ಣವು ಮರಳುಗಲ್ಲಿನ ಬಳಕೆಯಿಂದಾಗಿ (ಒಡಿಶಾದಿಂದ ಸುಮಾರು 600 ಟನ್‌ಗಳನ್ನು ಈ ಸಂಪೂರ್ಣ ರಚನೆಯನ್ನು ನಿರ್ಮಿಸಲು ಬಳಸಲಾಗುತ್ತಿದೆ) ಆಗಿದೆ ಮತ್ತು ಸುಮಾರು 60 ಕಲ್ಲಿನ ಕೆತ್ತನೆಗಾರರು ಈ ದೇವಾಲಯವನ್ನು ಕೆತ್ತಲು ಆಶೀರ್ವಾದ ಪಡೆದರು. ಶಿವ, ಗಣೇಶ, ಹನುಮಂತ ಮತ್ತು ನವಗ್ರಹಗಳ ಜೊತೆಗೆ ಲಕ್ಷ್ಮಿಗೆ ಸಮರ್ಪಿತವಾದ ಗುಡಿಗಳಿವೆ . ದುಷ್ಟಶಕ್ತಿಗಳನ್ನು ದೂರವಿಡಲು ದೇವಾಲಯದ ಹೊರಗೆ ಸಹ ಮೋಹಗೊಳಿಸುವ ಶಿಲ್ಪಗಳು ಕಂಡುಬರುತ್ತವೆ. ಗರ್ಭಗುಡಿಯಲ್ಲಿ ಭಗವಾನ್ ಜಗನ್ನಾಥ ಮತ್ತು ಅವನ ಒಡಹುಟ್ಟಿದವರಾದ ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರಾ ಇದ್ದಾರೆ .

ಉಲ್ಲೇಖಗಳು

ಬದಲಾಯಿಸಿ
  1. "Over 6,000 devotees attend Jagannath Rath Yatra". New Indian Express. 22 June 2012. Archived from the original on 14 ಆಗಸ್ಟ್ 2014. Retrieved 29 July 2014.