ಚೂರ್ಮಾ ವಾಹಿ ವಾಲಾ ಹರ್ಯಾಣಾ, ರಾಜಸ್ಥಾನ, ಬಿಹಾರ್, ಉತ್ತರ ಪ್ರದೇಶ ಮತ್ತು ಅವಧ್‍ನ ಒಂದು ಜನಪ್ರಿಯ ಖಾದ್ಯವಾಗಿದೆ.[][][] ಪಂಜಾಬ್‍ನಲ್ಲಿ ಈ ಖಾದ್ಯವನ್ನು ಚೂರಿ ಎಂದು ಕರೆಯಲಾಗುತ್ತದೆ.[] ಇದು ಒರಟಾಗಿ ಪುಡಿಮಾಡಿದ ಗೋಧಿಯಾಗಿದ್ದು ಇದನ್ನು ತುಪ್ಪ ಮತ್ತು ಸಕ್ಕರೆಯೊಂದಿಗೆ ಬೇಯಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಸಜ್ಜೆ ಅಥವಾ ಗೋಧಿ ಹಿಟ್ಟಿನ ಬಾಟಿಗಳು ಅಥವಾ ರೋಟಿಗಳನ್ನು ತುಪ್ಪ ಮತ್ತು ಬೆಲ್ಲದಲ್ಲಿ ಚೂರ್ಣಮಾಡಿ ಇದನ್ನು ತಯಾರಿಸಲಾಗುತ್ತದೆ.

ಇದರ ಹೆಚ್ಚು ದೇಶಿ ಅಥವಾ ಸಾಂಪ್ರದಾಯಿಕ ಬಗೆಯು ಹರಿಯಾಣಾದಲ್ಲಿ ಬಹಳ ಜನಪ್ರಿಯವಾಗಿದೆ. ಇದನ್ನು ದಾಲ್ ಅಥವಾ ಲಸ್ಸಿಯೊಂದಿಗೆ ಬಡಿಸಲಾಗುವುದಿಲ್ಲ ಬದಲಾಗಿ ಬಹುತೇಕವಾಗಿ ತುಪ್ಪದೊಂದಿಗೆ, ವಿಶೇಷವಾಗಿ ಅಖಾಡಾಗಳ ದಂಗಲ್‍ನಲ್ಲಿನ ಕುಸ್ತಿಪಟುಗಳಿಗೆ ಆಹಾರವಾಗಿ ಬಡಿಸಲಾಗುತ್ತದೆ.[] ಇದನ್ನು ಸಾಮಾನ್ಯವಾಗಿ ಬಿಸಿ ಹಾಲಿನ, ಲಸ್ಸಿಯ ದೊಡ್ಡ ಲೋಟದೊಂದಿಗೆ ಅಥವಾ ಹುಳಿ ಕಢಿಯೊಂದಿಗೆ ಬಡಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Bihar District Gazetteers: Patna (& suppl. 2 v.)(1971)
  2. Dahiya, Ashish (2013). Food of Haryana: The Great Desserts (PDF). IHTM-MDU / MDU Rohtak. ISBN 978-93-81818-13-5. Retrieved 7 April 2019. {{cite book}}: Check |isbn= value: checksum (help)
  3. Churma, chutney behind exploits of Hry players
  4. Aziz, Khursheed Kamal(2006) A Journey Into the Past: Portrait of a Punjabi Family, 1800-1970. Khursheed Kamal Aziz
  5. Bite this! Festivals and the Sweet Haryanvi, DailyO, 20 October 2016.


"https://kn.wikipedia.org/w/index.php?title=ಚೂರ್ಮಾ&oldid=992650" ಇಂದ ಪಡೆಯಲ್ಪಟ್ಟಿದೆ