ಚೀಜ಼್‍ಕೇಕ್

ಮೃದುವಾದ ಗಿಣ್ಣು ಒಂದು ಪ್ರಾಥಮಿಕ ಪದಾರ್ಥವಾಗಿದೆ

ಚೀಜ಼್‍ಕೇಕ್ ಒಂದು ಅಥವಾ ಹೆಚ್ಚು ಪದರಗಳನ್ನು ಹೊಂದಿರುವ ಒಂದು ಸಿಹಿ ಖಾದ್ಯ. ಮುಖ್ಯ, ಮತ್ತು ಅತ್ಯಂತ ದಪ್ಪನೆಯ ಪದರ ಮೃದು, ತಾಜಾ ಚೀಸ್ (ಸಾಮಾನ್ಯವಾಗಿ ಕ್ರೀಮ್ ಚೀಸ್ ಅಥವಾ ರೀಕಾಟಾ), ಮೊಟ್ಟೆಗಳು, ಮತ್ತು ಸಕ್ಕರೆಯ ಮಿಶ್ರಣವನ್ನು ಹೊಂದಿರುತ್ತದೆ; ಕೆಳ ಪದರವಿದ್ದರೆ ಅದು ಹಲವುವೇಳೆ ಪುಡಿಮಾಡಿದ ಕುಕಿಗಳು (ಅಥವಾ ಡೈಜೆಸ್ಟಿವ್ ಬಿಸ್ಕಿಟ್), ಗ್ರೇಯಮ್ ಕ್ರ್ಯಾಕರ್‍ಗಳು, ಪೇಸ್ಟ್ರಿ, ಅಥವಾ ಸ್ಪಂಜ್ ಕೇಕ್‍ನಿಂದ ತಯಾರಿಸಲಾದ ಒಂದು ಹಕ್ಕಳೆ ಅಥವಾ ಬುಡವನ್ನು ಹೊಂದಿರುತ್ತದೆ. ಅದು ಬೇಕ್ ಆಗಿರಬಹುದು ಅಥವಾ ಆಗದೇ ಇರಬಹುದು (ಸಾಮಾನ್ಯವಾಗಿ ಫ್ರಿಜ್‍ನಲ್ಲಿಡಲಾಗುತ್ತದೆ).

ಚೀಸ್ ಕೇಕ್ ನ ತಯಾರಿಕೆಯಲ್ಲಿ ಸಾಮಾನ್ಯವಾಗಿ ಸಿಹಿ ರುಚಿಗಾಗಿ ಸಕ್ಕರೆಯನ್ನು ಉಪಯೋಗಿಸುತ್ತಾರೆ ಮತ್ತು ಇದನ್ನು ವಿವಿಧ ರೀತಿಯಲ್ಲಿ ಸವಿಯಬಹುದು . ಚೀಸ್ ಕೇಕ್ ನ ಪದರಕ್ಕೆ ವೆನಿಲ್ಲಾ, ಮಸಾಲೆಗಳು, ನಿಂಬೆ, ಚಾಕೊಲೇಟ್, ಕುಂಬಳಕಾಯಿ ಅಥವಾ ಇತರ ಫ್ಲೇವರ್ ಗಳನ್ನು ಸೇರಿಸುವ ಮೂಲಕ ಇದನ್ನು ಸವಿಯಬಹುದು . ಸಿದ್ಧಪಡಿಸಿದ ಪೈ ಅನ್ನು ಹಣ್ಣು, ಹಾಲಿನ ಕೆನೆ, ಬೀಜಗಳು , ಕುಕೀಸ್, ಹಣ್ಣಿನ ಸಾಸ್, ಚಾಕೊಲೇಟ್ ಸಿರಪ್ ಅಥವಾ ಇತರ ಖಾದ್ಯದಿಂದ ಹೆಚ್ಚುವರಿ ಫ್ಲೇವರ್ ಅನ್ನು ಸೇರಿಸಬಹುದು.

ಇತಿಹಾಸ

ಬದಲಾಯಿಸಿ

ಚೀಸ್ ಕೇಕ್ ಬಗ್ಗೆ ಮೊದಲನೇ ಬಾರಿಗೆ ಉಲ್ಲೇಖಿಸಿದ್ದು ಗ್ರೀಕ್ ನ ವೈದ್ಯ ಅಜಿಮಸ್ ಕ್ರಿ.ಪೂ % ನೇ ಶತಮಾನದಲ್ಲಿ . ಅವನು ತನ್ನ ಚೀಸ್ ಕೇಕ್ ತಯಾರಿಸುವ ಪುಸ್ತಕದಲ್ಲಿ ಇದರ ಬಗ್ಗೆ ಉಲ್ಲೇಖಿಸಿದ್ದನು .