ಸ್ಪಂಜ್ ಕೇಕ್ ಮೊಟ್ಟೆಗಳು, ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಲ್ಪಡುವ ಹಗುರವಾದ ಕೇಕ್ ಆಗಿದೆ. ಕೆಲವೊಮ್ಮೆ ಇದನ್ನು ಉಬ್ಬುಪುಡಿಯನ್ನು ಬಳಸಿ ಹುದುಗು ಬರಿಸಲಾಗುತ್ತದೆ.[] ಒಡೆದು ಬಿರುಸಾಗಿ ಕಲಕಿದ ಮೊಟ್ಟೆಗಳನ್ನು ಬಳಸಿ ಹುದುಗು ಬರಿಸಿದ ಸ್ಪಂಜ್ ಕೇಕ್‍ಗಳು ನವೋದಯದ ಕಾಲದಲ್ಲಿ ಹುಟ್ಟಿಕೊಂಡವು, ಪ್ರಾಯಶಃ ಸ್ಪೇನ್‍ನಲ್ಲಿ.[] ಸ್ಪಂಜ್ ಕೇಕ್ ಯೀಸ್ಟ್ ಬಳಸದ ಮೊದಲ ಕೇಕ್‍ಗಳಲ್ಲಿ ಒಂದೆಂದು ಭಾವಿಸಲಾಗಿದೆ.

ಮೂಲಭೂತ ಗೊಟಾಯಿಸಿದ ಸ್ಪಂಜ್ ಕೇಕ್ ಯಾವುದೇ ಕೊಬ್ಬನ್ನು ಹೊಂದಿರುವುದಿಲ್ಲ. ಇದನ್ನು ಮೊಟ್ಟೆಗಳು ಹಾಗೂ ಸಕ್ಕರೆಯನ್ನು ಗೊಟಾಯಿಸಿ ಮತ್ತು ಹಿಟ್ಟನ್ನು ನಿಧಾನವಾಗಿ ಕಲಸಿ ತಯಾರಿಸಲಾಗುತ್ತದೆ.[] ಈ ಬಗೆಯ ಕೇಕ್‍ನ್ನು ಫ಼ೋಮ್ ಕೇಕ್ ಎಂದೂ ಕರೆಯಲಾಗುತ್ತದೆ. ಇದು ಏರಲು ಮೊಟ್ಟೆಗಳ ಅನಿಲಗೂಡಿಕೆ ಮತ್ತು ಶಾಖದ ಮೇಲೆ ಅವಲಂಬಿಸಿರುತ್ತದೆ.[]

ಉಲ್ಲೇಖಗಳು

ಬದಲಾಯಿಸಿ
  1. "Sponge cake". BBC. Retrieved 2019-11-19.
  2. Castella, Krystina (2010). A World of Cake: 150 Recipes for Sweet Traditions From Cultures Around the World, pp. 6–7. ISBN 978-1-60342-576-6.
  3. Mary Berry's Ultimate Cake Book 1995 printing.
  4. Braker, Flo (2003). The Simple Art of Perfect Baking. ISBN 9780811841092.