1974 ರ ಚಲನಚಿತ್ರ ದಿ ಗಾಡ್‌ಫಾದರ್ ಭಾಗ II ರ ಚಿತ್ರಕಥೆ, ಇದನ್ನು ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾ ಮತ್ತು ಮಾರಿಯೋ ಪೂಜೊ ಬರೆದಿದ್ದಾರೆ.


ಚಿತ್ರಕಥೆ, ಅಥವಾ ಸ್ಕ್ರಿಪ್ಟ್, ಚಿತ್ರಕಥೆಗಾರರಿಂದ ಚಲನಚಿತ್ರ, ದೂರದರ್ಶನ ಕಾರ್ಯಕ್ರಮ ಅಥವಾ ವಿಡಿಯೋ ಗೇಮ್ ಗಾಗಿ ನಿರ್ಮಿಸಲಾದ ಲಿಖಿತ ಕೃತಿಯಾಗಿದೆ. ದೂರದರ್ಶನಕ್ಕಾಗಿ ಬರೆದ ಚಿತ್ರಕಥೆಯನ್ನು ಟೆಲಿಪ್ಲೇ ಅಂತಲೂ ಕರೆಯುವರು. ಚಿತ್ರಕಥೆಗಳು ಮೂಲ ಕೃತಿಗಳಾಗಿರಬಹುದು ಅಥವಾ ಅಸ್ತಿತ್ವದಲ್ಲಿರುವ ಬರವಣಿಗೆಯ ತುಣುಕುಗಳಿಂದ ರೂಪಾಂತರಗೊಂಡಿರಬಹುದು. ಚಿತ್ರಕಥೆಯು ನಿರೂಪಣೆಯ ಒಂದು ರೂಪವಾಗಿದ್ದು, ಇದರಲ್ಲಿ ಪಾತ್ರಗಳ ಚಲನೆಗಳು, ಕ್ರಿಯೆಗಳು, ಅಭಿವ್ಯಕ್ತಿಗಳು ಮತ್ತು ಸಂಭಾಷಣೆಗಳನ್ನು ಸ್ಪಷ್ಟವಾಗಿ ವಿವರಿಸಲಾಗುತ್ತದೆ. ದೃಶ್ಯ ರೂಪದ ಅಥವಾ ಸಿನಿಮಾಟೋಗ್ರಾಫಿಕ್ ಸೂಚನೆಗಳನ್ನು ನೀಡಬಹುದು, ಜೊತೆಗೆ ದೃಶ್ಯ ವಿವರಣೆಗಳನ್ನೂ , ದೃಶ್ಯ ಬದಲಾವಣೆಗಳನ್ನೂ ಸೂಚಿಸಬಹುದು.

ಇತಿಹಾಸ

ಬದಲಾಯಿಸಿ

ಆರಂಭಿಕ ಮೂಕಿ ಚಿತ್ರಗಳ ಯುಗದಲ್ಲಿ, ೨೦ ನೇ ಶತಮಾನದ ಆರಂಭಕ್ಕೂ ಮುನ್ನ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಚಲನಚಿತ್ರಗಳ "ಸ್ಕ್ರಿಪ್ಟ್‌ಗಳು", ಸಾಮಾನ್ಯವಾಗಿ ಚಲನಚಿತ್ರದ ಸಾರಾಂಶವಾಗಿದ್ದವು ಮತ್ತು ಕೆಲವೊಮ್ಮೆ ಒಂದು ವಾಕ್ಯದಷ್ಟು ಚಿಕ್ಕದಾಗಿದ್ದವು. [] ಚಲನಚಿತ್ರಗಳು ಬೆಳೆದಂತೆ, ಚಲನಚಿತ್ರ ಸನ್ನಿವೇಶಗಳನ್ನು ನಿರೂಪಣೆಗೆ ಸುಸಂಬದ್ಧತೆ ಒದಗಿಸಲು ಸೇರಿಸಲಾಯಿತು. [] ಎ ಟ್ರಿಪ್ ಟು ದಿ ಮೂನ್ (1902) ಮತ್ತು ದಿ ಗ್ರೇಟ್ ಟ್ರೈನ್ ರಾಬರಿ (1903) ಅಂತಹ ಚಲನಚಿತ್ರಗಳು ದೃಶ್ಯ ಶೀರ್ಷಿಕೆಗಳ ಪಟ್ಟಿ ಮತ್ತು ಸನ್ನಿವೇಶಗಳ ಪಟ್ಟಿಯನ್ನು ಹೊಂದಿದ್ದು, ಪ್ರತಿ ದೃಶ್ಯದ ಕ್ರಿಯೆಗಳ ಸಂಪೂರ್ಣ ವಿವರಣೆಯನ್ನು ಹೊಂದಿದ್ದವು. [] ಈ ಸಮಯದಲ್ಲಿ, ಸ್ಕ್ರಿಪ್ಟ್‌ಗಳು ಇನ್ನೂ ವೈಯಕ್ತಿಕ ಶಾಟ್ಸ್ ಅಥವಾ ಸಂಭಾಷಣೆಗಳನ್ನು ಒಳಗೊಂಡಿರಲಿಲ್ಲ. []

ಈ ಸನ್ನಿವೇಶಗಳನ್ನೊಳಗೊಂಡ ಸ್ಕ್ರಿಪ್ಟ್‌ಗಳು, ಕಂಟಿನ್ಯೂಯಿಟಿ ಸ್ಕ್ರಿಪ್ಟ್‌ಗಳಾಗಿ ವಿಕಸನಗೊಂಡವು. ಇದು ಪ್ರತಿ ದೃಶ್ಯದೊಳಗೆ ಹಲವಾರು ಶಾಟ್‌ಗಳನ್ನು ಪಟ್ಟಿಮಾಡುತ್ತದೆ, ಹೀಗಾಗಿ ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಿರಂತರತೆಯನ್ನು ಒದಗಿಸುತ್ತದೆ. [] ದಿ ಬರ್ತ್ ಆಫ್ ಎ ನೇಷನ್ (1915) ನಂತಹ ಕೆಲವು ಚಿತ್ರಗಳು,ಸ್ಕ್ರಿಪ್ಟ್ ಇಲ್ಲದೆ ಮಾಡಲ್ಪಟ್ಟಿದ್ದರೂ, ಪೂರ್ವ ಅನುಮೋದಿತ " ಕಂಟಿನ್ಯುಯಿಟಿ " ಗಳಿಂದ, ಸ್ಟುಡಿಯೋಗಳಿಗೆ ಚಿತ್ರ ನಿರ್ಮಾಣಕ್ಕಾಗಿ ಹೆಚ್ಚು ನಿಖರವಾದ ಬಜೆಟ್ ನಿರ್ಧರಿಸಲು ಸಾಧ್ಯವಾಯಿತು. [] ಚಲನಚಿತ್ರ ಉದ್ಯಮದ ಕ್ರಾಂತಿಕಾರಿ ಥಾಮಸ್ ಎಚ್. ಇನ್ಸ್, ಸ್ವತಃ ಚಿತ್ರಕಥೆಗಾರರಾಗಿದ್ದು, ಚಲನಚಿತ್ರಗಳನ್ನು ತಯಾರಿಸಲು " ಅಸೆಂಬ್ಲಿ ಲೈನ್ " ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಚಲನಚಿತ್ರ ನಿರ್ಮಾಣವನ್ನು ಕಂಡುಹಿಡಿದರು. ಇದು ಹೆಚ್ಚು ಲಿಖಿತ ವಿವರಗಳನ್ನು ಬಳಸಿತು. []

ಧ್ವನಿ ಇರುವ ಚಲನಚಿತ್ರಗಳ ಆಗಮನದೊಂದಿಗೆ, ಸಂಭಾಷಣೆಯು ಸ್ಕ್ರಿಪ್ಟ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿತು. [] ಕಾಸಾಬ್ಲಾಂಕಾ (1942) ಚಲನಚಿತ್ರವನ್ನು ಈ ಶೈಲಿಯಲ್ಲಿಯೇ ಬರೆಯಲಾಗಿದೆ. ಇದರಲ್ಲಿ, ವಿವರವಾದ ತಾಂತ್ರಿಕ ಸೂಚನೆಗಳು ಸಂಭಾಷಣೆಯೊಂದಿಗೆ ಹೆಣೆದುಕೊಂಡಿವೆ. [] "ಸ್ಕ್ರೀನ್‌ಪ್ಲೇ"(ಚಿತ್ರಕಥೆ) ಪದದ ಮೊದಲ ಬಳಕೆಯು ಈ ಯುಗಕ್ಕೆ ಸೇರಿದೆ; : 86 "ಸ್ಕ್ರೀನ್ ಪ್ಲೇ" ಎಂಬ ಪದವನ್ನು(ಎರಡು ಪದಗಳಾಗಿ) 1916 ರಲ್ಲಿ "ಮೂಕ ಯುಗ"ದಲ್ಲಿ ಚಲನಚಿತ್ರವನ್ನು ಉಲ್ಲೇಖಿಸಲು ಬಳಸಲಾಯಿತು. [] : 82 []

1950 ಮತ್ತು 1960 ರ ದಶಕದಲ್ಲಿ ಸ್ಟುಡಿಯೋ ವ್ಯವಸ್ಥೆಯ ಅಂತ್ಯದೊಂದಿಗೆ, ಈ ಕಂಟಿನ್ಯುಯಿಟಿಗಳನ್ನು ಕ್ರಮೇಣ ಮಾಸ್ಟರ್-ಸ್ಕ್ರೀನ್ ಸ್ಕ್ರಿಪ್ಟ್ ಆಗಿ ವಿಭಜಿಸಲಾಯಿತು. ಇದು ಎಲ್ಲಾ ಸಂಭಾಷಣೆಗಳನ್ನು ಒಳಗೊಂಡಿರುತ್ತದೆ ಆದರೆ ನಿರ್ದೇಶಕರು ರೂಪಿಸಿದ ಸಂಕ್ಷಿಪ್ತ ದೃಶ್ಯ-ವಿವರಣೆ ಮತ್ತು ಚಿತ್ರೀಕರಣದ ಸ್ಕ್ರಿಪ್ಟ್ ಮಾತ್ರ ಇರುತ್ತದೆ. [] ಚೈನಾಟೌನ್ (1974) ನಿರ್ಮಾಣದ ಮೂಲಕ , ಈ ಬದಲಾವಣೆಯು ಪೂರ್ಣಗೊಂಡಿತು. [] ಆಂಡ್ರ್ಯೂ ಕೆನ್ನೆತ್ ಗೇ ಅವರು ಈ ಬದಲಾವಣೆಯು ನಿರ್ದೇಶಕರ ಸ್ಥಾನಮಾನವನ್ನು ಆಟರ್‌ಗಳಾಗಿ ಮಾಡಿದೆ ಮತ್ತು ಚಿತ್ರಕಥೆಗಾರರ ಸ್ಥಾನಮಾನವನ್ನು ಕಡಿಮೆ ಮಾಡಿದೆ ಎಂದು ವಾದಿಸುತ್ತಾರೆ. [] ಆದಾಗ್ಯೂ, ಚಿತ್ರಕಥೆಯು ಇನ್ನು ಮುಂದೆ ತಾಂತ್ರಿಕ ದಾಖಲೆಯಾಗಿ ಉಳಿಯದ ಕಾರಣ, ಹೆಚ್ಚು ಸಾಹಿತ್ಯಿಕ ರೂಪವಾಗಿದೆ ಎಂದು ಅವರು ಹೇಳುತ್ತಾರೆ. []

ಸ್ವರೂಪ ಮತ್ತು ಶೈಲಿ

ಬದಲಾಯಿಸಿ
 
ಚಿತ್ರಕಥೆಯ ಪುಟ: ಸಂಭಾಷಣೆ ,ಕ್ರಿಯೆಗಳ ವಿವರಣೆ ಮತ್ತು ದೃಶ್ಯದ ಕಟ್ ಗಳನ್ನು ತೋರಿಸುತ್ತದೆ

ಚಿತ್ರಕಥೆಯ ಸ್ವರೂಪವು, ( ಬಾಲ್ ಪಾರ್ಕ್ ಅಂದಾಜಿನಂತೆ ) ಒಂದು ಪುಟ ಸರಿಸುಮಾರು ಒಂದು ನಿಮಿಷದ ಸ್ಕ್ರೀನ್‌ ಟೈಂ ಗೆ ಸಮನಾಗಿರುವಂತೆ ರಚಿಸಲಾಗಿದ್ದರೂ, ಅಂತಿಮ ಚಲನಚಿತ್ರದ ರನ್‌ಟೈಂಗೆ ಸ್ವಲ್ಪವೇ ಹೋಲಿಕೆಯನ್ನು ಹೊಂದಿರುತ್ತದೆ. [] ಸ್ಟ್ಯಾಂಡರ್ಡ್ ಫಾಂಟ್ 12 ಪಾಯಿಂಟ್, 10 ಪಿಚ್ ಕೊರಿಯರ್ ಟೈಪ್‌ಫೇಸ್ ಆಗಿದೆ. [] ಕನಿಷ್ಠ ಒಂದು ಇಂಚಿನ ಅಗಲವಾದ ಮಾರ್ಜಿನ್ ಬಳಸಲಾಗುತ್ತದೆ (ಸಾಮಾನ್ಯವಾಗಿ ಹೋಲ್ ಪಂಚ್‌ಗಳನ್ನು ಸರಿಹೊಂದಿಸಲು ಎಡಕ್ಕೆ ದೊಡ್ಡದಾಗಿರುತ್ತದೆ).

ಪ್ರಮುಖ ಅಂಶಗಳೆಂದರೆ ಕ್ರಿಯೆ (ಕೆಲವೊಮ್ಮೆ "ಪರದೆ ನಿರ್ದೇಶನ" ಎಂದೂ ಕರೆಯುತ್ತಾರೆ) ಮತ್ತು ಸಂಭಾಷಣೆ . ಕ್ರಿಯೆಯನ್ನು "ವರ್ತಮಾನ ಕಾಲದಲ್ಲಿ" ಬರೆಯಲಾಗುತ್ತದೆ. ಸಂಭಾಷಣೆಯು ಪಾತ್ರಗಳು ಮಾತನಾಡುವ ಪದಗಳನ್ನು ಒಳಗೊಂಡಿರುತ್ತದೆ ಮತ್ತು ಮಧ್ಯದ ಅಂಕಣದಲ್ಲಿ ಬರೆಯಲಾಗುತ್ತದೆ.

ಚಿತ್ರಕಥೆಗೂ ನಾಟಕಕ್ಕೂ ಇರುವ ಮುಖ್ಯ ವ್ಯತ್ಯಾಸ: ಸ್ಲಗ್ ಲೈನ್‌ಗಳ ಬಳಕೆ. ಸ್ಲಗ್ ಲೈನ್ ಅನ್ನು ಮಾಸ್ಟರ್ ಸೀನ್ ಹೆಡಿಂಗ್ ಎಂದೂ ಕರೆಯುತ್ತಾರೆ. ಇದು ಪ್ರತಿ ದೃಶ್ಯದ ಪ್ರಾರಂಭದಲ್ಲಿರುತ್ತದೆ ಮತ್ತು ಸಾಮಾನ್ಯವಾಗಿ ಈ 3 ಮಾಹಿತಿ-ತುಣುಕುಗಳನ್ನು ಹೊಂದಿರುತ್ತದೆ: ದೃಶ್ಯವನ್ನು ಒಳಗೆ ಅಥವಾ ಹೊರಗೆ ಹೊಂದಿಸಲಾಗಿದೆಯೇ (INT. ಅಥವಾ EXT.; ಆಂತರಿಕ ಅಥವಾ ಬಾಹ್ಯ), ನಿರ್ದಿಷ್ಟ ಸ್ಥಳ, ಮತ್ತು ದಿನದ ಸಮಯ. ಪ್ರತಿ ಸ್ಲಗ್ ಲೈನ್ ಹೊಸ ದೃಶ್ಯವನ್ನು ಪ್ರಾರಂಭಿಸುತ್ತದೆ. " ಶೂಟಿಂಗ್ ಸ್ಕ್ರಿಪ್ಟ್ " ನಲ್ಲಿ ಸುಲಭವಾಗಿ ಉಲ್ಲೇಖಿಸಲು ಸ್ಲಗ್ ಲೈನ್‌ಗಳನ್ನು ಸಂಖ್ಯೆ ಮಾಡಲಾಗುತ್ತದೆ. []


ಚಿತ್ರಕಥೆ ತಂತ್ರಾಂಶ

ಬದಲಾಯಿಸಿ

ಕಟ್ಟುನಿಟ್ಟಾದ ಫಾರ್ಮ್ಯಾಟಿಂಗ್ ಸಂಪ್ರದಾಯಗಳನ್ನು ಅನುಸರಿಸಲು ಚಿತ್ರಕಥೆಗಾರರಿಗೆ ಸಹಾಯ ಮಾಡಲು ವಿವಿಧ ಚಿತ್ರಕಥಾ ಸಾಫ್ಟ್‌ವೇರ್ ಪ್ಯಾಕೇಜ್‌ಗಳು ಲಭ್ಯ. ವಿವರವಾದ ಕಂಪ್ಯೂಟರ್ ಪ್ರೋಗ್ರಾಂಗಳನ್ನು ನಿರ್ದಿಷ್ಟವಾಗಿ ಚಿತ್ರಕಥೆ, ಟೆಲಿಪ್ಲೇ ಮತ್ತು ರಂಗ ನಾಟಕಗಳನ್ನು ಫಾರ್ಮ್ಯಾಟ್ ಮಾಡಲು ರೂಪಿಸಲಾಗಿದೆ. ಅಂತಹ ಪ್ಯಾಕೇಜುಗಳಲ್ಲಿ ಬಿಪಿಸಿ-ಸ್ಕ್ರೀನ್ ಪ್ಲೇ, ಫೇಡ್ ಇನ್, ಫೈನಲ್ ಡ್ರಾಫ್ಟ್, ಫೈವ್ ಸ್ಪ್ರಾಕೆಟ್ಸ್, ಮಾಂಟೇಜ್ ಮುಂತಾದ ತಂತ್ರಾಂಶಗಳಿವೆ.ಈ ಸಾಫ್ಟ್‌ವೇರ್ ಗಳು ವೆಬ್ ಅಪ್ಲಿಕೇಶನ್‌ಗಳಾಗಿಯೂ ಲಭ್ಯ. ಉದಾಹರಣೆಗೆ ಫೇಡ್ ಇನ್ ಮೊಬೈಲ್ ಸ್ಕ್ರಿಪ್ಟ್‌ಗಳು ಪ್ರೊ ಮತ್ತು ಸ್ಟುಡಿಯೋ ಬೈಂಡರ್, ಮತ್ತು ರೈಟರ್‌ಡ್ಯುಯೆಟ್. ಇದು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ ರೂಪದಲ್ಲಿ ಲಭ್ಯವಿದೆ.

ಮೊದಲ ಸ್ಕ್ರೀನ್‌ರೈಟಿಂಗ್ ಸಾಫ್ಟ್‌ವೇರ್ ಸ್ಮಾರ್ಟ್‌ಕೀ. ಇದು ಇಂದಿನ ವರ್ಡ್ ಪ್ರೊಸೆಸಿಂಗ್ ಪ್ರೋಗ್ರಾಂಗಳಾದ ವರ್ಡ್‌ಸ್ಟಾರ್, ವರ್ಡ್‌ಪರ್ಫೆಕ್ಟ್ ಮತ್ತು ಮೈಕ್ರೋಸಾಫ್ಟ್ ವರ್ಡ್‌ಗಳಿಗೆ ಆದೇಶಗಳ ಸ್ಟ್ರಿಂಗ್‌ಗಳನ್ನು ಕಳುಹಿಸುವ ಮ್ಯಾಕ್ರೋ ಪ್ರೋಗ್ರಾಂ ಆಗಿದೆ. ಇದು 1982 ರಿಂದ 1987 ರವರೆಗೆ ಜನಪ್ರಿಯವಾಗಿತ್ತು. ಅದರ ನಂತರ ವರ್ಡ್ ಪ್ರೊಸೆಸಿಂಗ್ ಪ್ರೋಗ್ರಾಂಗಳು ತಮ್ಮದೇ ಆದ ಮ್ಯಾಕ್ರೋ ವೈಶಿಷ್ಟ್ಯಗಳನ್ನು ಆರಂಭಿಸಿದವು.

ಉಲ್ಲೇಖಗಳು

ಬದಲಾಯಿಸಿ
  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ Andrew Kenneth Gay. "History of scripting and the screenplay" at Screenplayology: An Online Center for Screenplay Studies. Retrieved 15 December 2021.
  2. ಉಲ್ಲೇಖ ದೋಷ: Invalid <ref> tag; no text was provided for refs named Maras
  3. JohnAugust.com "How accurate is the page-per-minute rule?
  4. JohnAugust.com "Hollywood Standard Formatting"
  5. Schumach, Murray (August 28, 1960). "HOLLYWOOD USAGE Experts Analyze the Pros and Cons Of Time-Tested 'Master' Scene". The New York Times. Retrieved April 6, 2021.

ಬಾಹ್ಯ ಕೊಂಡಿಗಳು

ಬದಲಾಯಿಸಿ