ಚರ್ಚೆಪುಟ:ರಾಜ್‌ಕುಮಾರ್

ಪರಿಚಯದ ಸಾಲುಗಳು ಬದಲಾಯಿಸಿ

ಡಾ.ರಾಜ್ "ಪ್ರಸಿದ್ಧ ನಟರಲ್ಲಿ ಒಬ್ಬರು" - NPOV ಆಗಿರಬೇಕೆಂದು ಈ ರೀತಿ ಬರೆದಿರಬಹುದು ಅಂದುಕೊಂಡಿದ್ದೇನೆ. ಆದರೆ ಸುಮಾರು ೫ ಕೋಟಿ ಕನ್ನಡಿಗರೆಲ್ಲರ ಭಾವನೆಗಳಿಗೆ ಸ್ಪಂದಿಸುವಂತಿಲ್ಲ. ಅತ್ಯಂತ ಸೂಕ್ತವಾಗಿ ಇದನ್ನು ಪರಿಷ್ಕರಿಸಲು ಚರ್ಚೆಗ ಆಹ್ವಾನಿಸುತ್ತಿದ್ದೇನೆ. -ಹಂಸವಾಣಿದಾಸ 01:51, ೧೫ April ೨೦೦೬ (UTC)

ಚರ್ಚೆಪುಟದಲ್ಲಿ ಚರ್ಚಿಸುವಾಗ ದಯವಿಟ್ಟು ಕೊನೆಯಲ್ಲಿ ಸಹಿ ಹಾಕುವುದನ್ನು ಮರೆಯಬೇಡಿ.
ಡಾ. ರಾಜ್ ಅವರನ್ನು ಈಗಿನ ಆವೃತ್ತಿಯಲ್ಲಿ ಬರೆದಿರುವಂತೆ "ಅತಿ ಪ್ರಸಿದ್ಧ ನಟರಲ್ಲಿ ಒಬ್ಬರು" ಎನ್ನುವುದು ಸಮಂಜಸವಾಗಿಲ್ಲ ಎಂದು ನನ್ನ ಅಭಿಪ್ರಾಯ ಕೂಡ. ಪ್ರಮುಖ ದಿನಪತ್ರಿಕೆಗಳು, ಪ್ರಮುಖ ವ್ಯಕ್ತಿಗಳು, ಪ್ರಮುಖ ಕನ್ನಡ ಅಂತರ್ಜಾಲ ತಾಣಗಳ ಆಧಾರದ ಮೇಲೆ ಹೀಗೆ ಹೇಳಬಹುದೆಂದು ನನ್ನ ಸಲಹೆ.
ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. --ಮನ 00:08, ೧೫ April ೨೦೦೬ (UTC)
ಮನ, ಧ್ರುವತಾರೆ ಶೀರ್ಷಿಕೆಯೇನೋ ಸರಿ, ಪತ್ರಿಕೆಗಳನ್ನೇ ಉಲ್ಲೇಖಿಸಿದರೆ ಪ್ರಮಾಣೀಕರಿಸಬಹುದು ಎನ್ನುವುದಿದ್ದರೆ, ಬಿರುದುಗಳ ಪಟ್ಟಿಯಲ್ಲಿರುವ ಒಂದನ್ನು ಆಯ್ದು ಹಾಕಬಹುದು. ಹಾಗು ಅದನ್ನು ಸಮರ್ಥಿಸಿಕೊಳ್ಳುತ್ತಾ, "೨೦ನೆಯ ಶತಮಾನದ ಕರ್ನಾಟಕದ ಅತ್ಯಂತ ಪ್ರಸಿದ್ಧ ವ್ಯಕ್ತಿ" ಎನ್ನುವುದು ನನ್ನ ಸಲಹೆ. ಸಹಿ ಹಾಕಲು ಮರೆತಿದ್ದೆ ಧನ್ಯವಾದಗಳು -ಹಂಸವಾಣಿದಾಸ 01:51, ೧೫ April ೨೦೦೬ (UTC)

ಇದೀಗ ಪರಿಚಯದ ಸಾಲುಗಳನ್ನು ಮಾರ್ಪಾಡು ಮಾಡಿದ್ದೇನೆ. "ಅತಿ ಪ್ರಸಿದ್ಧ ನಟರಲ್ಲಿ ಒಬ್ಬರು" ಎನ್ನುವುದನ್ನು ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ ಎಂತಲೂ, "ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು" ಎನ್ನುವುದನ್ನು "ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು" ಎಂತಲೂ ಬದಲಾಯಿಸಲಾಗಿದೆ. --ಮನ 17:30, ೧೯ April ೨೦೦೬ (UTC)

ಜನ್ಮದಿನಾಂಕದ ವರ್ಷ ಬದಲಾಯಿಸಿ

ಕೆಲವು ಅಂತರ್ಜಾಲ ತಾಣಗಳಲ್ಲಿ ಜನ್ಮದಿನಾಂಕದ ವರ್ಷ ೧೯೨೮ ಎಂದೂ, ಮತ್ತಿತರ ತಾಣಗಳಲ್ಲಿ ೧೯೨೯ ಎಂದೂ ನಮೂದಿಸಲಾಗಿದೆ. ಕೆಳಕಂಡ ಆಧಾರಗಳ ಮೂಲಕ ೧೯೨೯ ಎಂದು ಇದೀಗ ಬದಲಾಯಿಸಿದ್ದೇನೆ.

  • ವಿಜಯಕರ್ನಾಟಕ ಕನ್ನಡ ದಿನಪತ್ರಿಕೆ. ೧೩ ಏಪ್ರಿಲ್ ೨೦೦೬ ಗುರುವಾರದ ಸಂಚಿಕೆ, ಪುಟ ನಾಲ್ಕು
  • "ಕನ್ನಡ ಸಿನೆಮಾ ಇತಿಹಾಸದ ಪುಟಗಳಲ್ಲಿ" ಪುಸ್ತಕದಲ್ಲಿನ ಡಾ.ರಾಜ್ ವ್ಯಕ್ತಿ ಪರಿಚಯ.(ಪ್ರಕಾಶನ: ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು).
  • ಆಂಗ್ಲ ವಿಕಿಪೀಡಿಯದಲ್ಲಿನ ಡಾ.ರಾಜ್ ಲೇಖನ

ಪತ್ತೆ ದಾರಿ ಚಿತ್ರಗಳು ಬದಲಾಯಿಸಿ

ಪತ್ತೆದಾರಿ ಚಿತ್ರಗಳಲ್ಲಿ operation diamond racket irabEku, ಆದರೆ ಅದು rocket ಆಗಿದೆ. ಇದನ್ನು ಸರಿ ಪಡಿಸಲು ಹೋದರೆ ರ್ಯಾಕೆಟ್ ಆಗ್ತಿದೆ. ಇದನ್ನು ಸರಿ ಪಡಿಸುವುದು ಹೇಗೆ?
--ಅರುಣ ಪ್ರಕಾಶ ೨೧:೫೮, ೨೨ January ೨೦೦೭ (UTC)

ಸಾಮಾನ್ಯವಾಗಿ ಪುಟಗಳ ಹೆಸರನ್ನು ಬದಲಾಯಿಸಲು ಪುಟದ ಮೇಲ್ಬಾಗದಲ್ಲಿರುವ ಸ್ಥಳಾಂತರಿಸಿ tab ಅನ್ನು ಉಪಯೋಗಿಸಬಹುದು. ಸದರಿ ಪುಟವನ್ನು ಮೊದಲೇ ಯಾರೋ ಆಪರೇಷನ್ ಡೈಮಂಡ್ ರ್ಯಾಕೆಟ್ಗೆ ಸ್ಥಳಾಂತರಿಸಿದ್ದಾರೆ. ಆದ್ದರಿಂದ ಕೇವಲ ಈ ಪುಟದಲ್ಲಿ ಲಿಂಕ್ ಬದಲಾಯಿಸಿದರೆ ಸಾಕು. ಶುಶ್ರುತ \ಮಾತು \ಕತೆ ೦೦:೪೧, ೨೩ January ೨೦೦೭ (UTC)

ಆದರೆ ಅದು ಈ ಸಮಸ್ಯೆಯನ್ನು ಬಗೆಹರಿಸೊಲ್ಲ. ನೀವು ಈ ಶಬ್ದವನ್ನು ಬರಹದಲ್ಲಿ ಬರೆದು ನೋಡಿ - RyaakeT. ಇದು ಬರಹದಲ್ಲಿ ಬರುವ ಹಾಗೆ ಇಲ್ಲಿ ಬರಬೇಕು. ಆದರೆ ರ್ಯಾಕೆಟ್ ಆಗುತ್ತಿದೆ.
--ಅರುಣ ಪ್ರಕಾಶ ೧೪:೨೩, ೨೩ January ೨೦೦೭ (UTC)

'ರ' ಅಕ್ಷರಕ್ಕೆ 'ಯ' ಒತ್ತು ಕೊಡುವುದು ಹೇಗೆ ಎಂದು ನಿಮ್ಮ ಪ್ರಶ್ನೆಯೆ? ಅದನ್ನು ಮಾಡುವುದು ಹೇಗೆ ಎಂದು ನನಗೆ ಗೊತ್ತಿಲ್ಲ. ಆದರೆ ರ್ಯಾಕೆಟ್ ಅದೇ pronounciation ಕೊಡುತ್ತದಲ್ಲವೆ? ಶುಶ್ರುತ \ಮಾತು \ಕತೆ ೦೩:೪೨, ೨೪ January ೨೦೦೭ (UTC)

ಶೀರ್ಷಿಕೆ ಬದಲಾಯಿಸಿ

ಡಾ.ರಾಜ್‍ಕುಮಾರ್(ಡಾ.ರಾಜ್<ZWJ>ಕುಮಾರ್) ಎಂದಿರುವ ಪುಟವನ್ನು ಡಾ.ರಾಜ್‌ಕುಮಾರ್(ಡಾ.ರಾಜ್<ZWNJ>ಕುಮಾರ್ ) ಆಗಿ ಸ್ಥಳಾಂತರಿಸುವುದು ಸೂಕ್ತ. ~ ತೇಜಸ್ ೧೨:೪೬, ೨೫ ಏಪ್ರಿಲ್ ೨೦೧೧ (UTC)

ಸಮ್ಮತಿ ZWNJ ಇಲ್ಲಿ ಸೂಕ್ತ ~ ಹರೀಶ / ಚರ್ಚೆ / ಕಾಣಿಕೆಗಳು ೧೩:೧೧, ೨೫ ಏಪ್ರಿಲ್ ೨೦೧೧ (UTC)

dr ರಾಜಕುಮಾರ ಬಾಲ್ಯದ ನೆನಪು ಬದಲಾಯಿಸಿ

ಬಾಲ್ಯದ ನೆನಪು 2401:4900:4BB2:1B8E:1:0:DE28:F9E0 ೦೭:೨೩, ೨೪ ಸೆಪ್ಟೆಂಬರ್ ೨೦೨೩ (IST)Reply

Return to "ರಾಜ್‌ಕುಮಾರ್" page.