ಚರ್ಚೆಪುಟ:ಬಿ. ಆರ್. ಅಂಬೇಡ್ಕರ್

(ಚರ್ಚೆಪುಟ:ಬಿ.ಆರ್. ಅಂಬೇಡ್ಕರ್ ಇಂದ ಪುನರ್ನಿರ್ದೇಶಿತ)
ಈ ವಾರದ ಸಹಯೋಗ



ಬಿ. ಆರ್. ಅಂಬೇಡ್ಕರ್ : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ

ಚರ್ಚೆಪುಟ:ಬಿ. ಆರ್. ಅಂಬೇಡ್ಕರ್/to do


ಅಂಬೇಡ್ಕರ್ ಅವರಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳೂ ಬಂದಿವೆ. ಕರ್ನಾಟಕದಲ್ಲಿ ಎಪ್ಪತ್ತರ ದಶಕದಲ್ಲಿ ಹುಟ್ಟಿದ ದಲಿತ ಚಳವಳಿಯನ್ನು ಅಂಬೇಡ್ಕರ್ ಚಿಂತನೆಗಳು ಬಹುವಾಗಿ ಪ್ರಭಾವಿಸಿವೆ. ಇಂಗ್ಲಿಷ್ ನ ಬಾಹ್ಯ ಸಂಪರ್ಕಗಳು ಸಾಕಷ್ಟಿವೆ. ಕನ್ನಡದ್ದನ್ನು ಹುಡುಕಿ ಸೇರಿಸಲು ಪ್ರಯತ್ನಿಸುತ್ತಿದ್ದೇನೆ.--Ismail 09:52, ೧೪ April ೨೦೦೬ (UTC)

ಗೀತೆ-ಗಾಂಧಿ-ಅಂಬೇಡ್ಕರ್

ಬದಲಾಯಿಸಿ

ರವೀಂದ್ರ ಕೊಟಕಿ (ಸಂಗತ:.prajavani.೫-೩-೨೦೧೬)

  • ದೇಶದಲ್ಲಿ ಮೂರು ವಿಷಯಗಳು ಸದಾ ಚರ್ಚೆಗೆ ಒಳಪಡುತ್ತಲೇ ಇರುತ್ತವೆ. ಅವೇ ಗೀತೆಯ ಪ್ರಸ್ತುತತೆ, ಗಾಂಧಿವಾದ ಮತ್ತು ಅಂಬೇಡ್ಕರ್‌ ವಾದ. ಇದರಲ್ಲಿ ಗಾಂಧಿ ಗೀತೆಗೆ ಹತ್ತಿರವಾಗಿದ್ದರೆ, ಅಂಬೇಡ್ಕರ್ ಮೈಲಿಗಳ ದೂರದಲ್ಲಿ ನಿಲ್ಲುತ್ತಾರೆ. ಗೀತೆ ಏಕಕಾಲಕ್ಕೆ ಎರಡು ಬಗೆಯಲ್ಲಿ ಕಣ್ಣ ಎದುರಿಗೆ ನಿಲ್ಲುತ್ತದೆ. ಅದು ಭಾರತದಲ್ಲಿ ಬಹುಚರ್ಚಿತವಾಗುವುದರ ಜೊತೆಗೆ, ಅದನ್ನು ಸುಡಬೇಕು ಎಂಬ ಕಾಲಘಟ್ಟದಲ್ಲೇ ಅದು ಮಂಗಳಯಾನ ಮಾಡಿದ (ಸುನೀತಾ ವಿಲಿಯಮ್ಸ್ ತಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದರು) ಮೊದಲ ಧಾರ್ಮಿಕ ಗ್ರಂಥವಾಗಿ ಗಮನ ಸೆಳೆಯುತ್ತದೆ.
  • ಅಮೆರಿಕದ ಸೆನೆಟರ್ ತುಳಸಿ ಗಬ್ಬಾರ್ಡ್ ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸುತ್ತಾರೆ. ಅಲ್ಲಿಗೆ ಗೀತೆ ಏಕಕಾಲಕ್ಕೆ ವಿಮರ್ಶೆಗೂ, ಪ್ರಶಂಸೆಗೂ ಒಳಪಡುತ್ತದೆ. ಯಾವುದು ವಿಮರ್ಶೆಗೆ ಹೆಚ್ಚು ಹೆಚ್ಚು ಒಳಪಡುತ್ತದೋ ಅದು ಜೀವಂತವಾಗಿರುವುದಕ್ಕೆ ಸಾಕ್ಷಿ. ಅಲ್ಲಿಗೆ ಗೀತೆಗೆ ಜೀವಂತಿಕೆ ಇದೆ! ಹಾಗೇ ಗಾಂಧಿವಾದ, ಅಂಬೇಡ್ಕರ್‌ ವಾದಗಳು ಜೀವಂತವಾಗಿದ್ದರೆ ಅದಕ್ಕೆ ಮುಖ್ಯ ಕಾರಣ ಅವು ನಿರಂತರ ವಿಮರ್ಶೆಗೆ ಒಳಪಡುತ್ತಿರುವುದು.
  • ಗಾಂಧಿ- ಅಂಬೇಡ್ಕರ್ ಒಂದೇ (ದೀನ ದಲಿತರ) ವಿಚಾರವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಕಂಡವರು. ಇಬ್ಬರನ್ನೂ ಪ್ರೀತಿಸುವವರೂ ಇದ್ದಾರೆ, ಟೀಕಿಸುವವರೂ ಇದ್ದಾರೆ. ಪ್ರೀತಿ, ಟೀಕೆ ಎರಡೂ ಇದ್ದರೆ ಮಾತ್ರವೇ ವಾದಕ್ಕೆ ಮೌಲ್ಯ ದಕ್ಕುವುದು. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಗಾಂಧೀಜಿ ಬಗ್ಗೆ ನಿರ್ಭಯವಾಗಿ ಬರೆಯುವ ವಾತಾವರಣವಿದೆ, ಆದರೆ ಇದೇ ವಾತಾವರಣ ಅಂಬೇಡ್ಕರ್ ವಿಷಯದಲ್ಲಿ ಇದೆ ಎಂದು ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.
  • ಯಾಕೆಂದರೆ ಗಾಂಧೀಜಿ ಜಾತಿಯ ಸಂಕೋಲೆಯಲ್ಲಿ ಬಂದಿಯಾಗಿಲ್ಲ. ಗಾಂಧಿವಾದದ ವಾರಸುದಾರಿಕೆ ಯಾವುದೋ ಒಂದು ವರ್ಗ, ಜಾತಿ, ಧರ್ಮದವರ ಕೈಯಲ್ಲಿಲ್ಲ. ಹೀಗಾಗಿ ಗಾಂಧಿ, ಗಾಂಧಿವಾದ ದೇಶ, ಕಾಲಗಳ ಆಚೆಗೂ ವಿಸ್ತರಿಸಿ ನಿಂತಿದೆ. ಗಾಂಧಿ ‘ಮುನ್ನಾಭಾಯಿ ಎಂಬಿಬಿಎಸ್‌’ಗೂ ಸಿಗುತ್ತಾನೆ, ಸಾರ್ವಜನಿಕವಾಗಿ ಮೆಚ್ಚುಗೆಗೂ ಟೀಕೆಗೂ ಮುಕ್ತವಾಗಿ ಒಳಪಡುತ್ತಾನೆ. ಗಾಂಧಿವಾದದ ವಿಸ್ತರಣೆಯಲ್ಲಿ ಈ ಸಹಿಷ್ಣುತೆ ಪ್ರಮುಖ ಪಾತ್ರ ವಹಿಸುತ್ತದೆ.
  • ಅದೇ ಅಂಬೇಡ್ಕರ್‌ ವಾದಕ್ಕೆ ಬಂದಾಗ ಅದು ಕೇವಲ ಒಂದು ವರ್ಗದವರ ಕೈಯಲ್ಲಿ ಬಂದಿಯಾಗಿದೆ ಮತ್ತು ಅವರಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಹೌದು, ಅಂಬೇಡ್ಕರ್ ಅವರು ಬದುಕಿನ ಕೊನೇ ಕ್ಷಣದವರೆಗೂ ಅಸಮಾನತೆಯ ವಿರುದ್ಧ ಹೋರಾಡಿ ಹೋರಾಡಿ ಅವರೂ ದಲಿತರಾಗಿಯೇ ವಿಧಿವಶರಾದರು.
  • ವಿಪರ್ಯಾಸವೆಂದರೆ ಅಂಬೇಡ್ಕರ್‌ ವಾದ ಕೂಡ ದಲಿತೀಕರಣವಾಗುತ್ತಿದೆ ಹೊರತು ಮುಕ್ತ ಸಾಮಾಜಿಕ ಚಿಂತನೆಯಾಗಿ ಸಮಾಜದ ಮಧ್ಯೆ ಸ್ಥಾನ ಪಡೆಯುತ್ತಿಲ್ಲ. ಅಂಬೇಡ್ಕರ್ ಜೀವಂತವಾಗಿದ್ದಾಗ ತಮ್ಮ ಚಿಂತನೆ ಮತ್ತು ವಾದಕ್ಕೆ ಅವರು ಮುಕ್ತರಾಗಿದ್ದರು. ಆದರೆ ಅವರ ಕಾಲಾನಂತರ ಅಂಬೇಡ್ಕರ್‌ ವಾದವು ಅಂಬೇಡ್ಕರ್‌ ವಾದಿಗಳ ಕೈಯಲ್ಲಿ ಸಿಕ್ಕಿ ಅವರ ಸಾಮಾಜಿಕ, ನವ ಸಮಾಜ ನಿರ್ಮಾಣದ ಆಶಯ ಇವೆಲ್ಲ ದಲಿತೀಕರಣವಾಗಿ ಹೋಗಿವೆ.
  • ಗಾಂಧಿವಾದಕ್ಕೆ ಸಿಕ್ಕ ವಿಶ್ವಮಾನ್ಯತೆ ಯಾಕೆ ಅಂಬೇಡ್ಕರ್‌ ವಾದಕ್ಕೆ ಸಿಗುತ್ತಿಲ್ಲ? ಉತ್ತರ, ಗಾಂಧಿ ಎಂಬ ಪಾತ್ರಧಾರಿ ಸಮಾಜದ ಮುಂದೆ ಮುಕ್ತರೂಪದಲ್ಲಿ ನಿಂತಿದ್ದಾನೆ, ಅವನನ್ನು ನೀವು ಹೇಗೆ ಬೇಕಾದರೂ ಸ್ವೀಕರಿಸಬಹುದು. ಆದರೆ ಅಂಬೇಡ್ಕರ್ ಪಾತ್ರಕ್ಕೆ ‘ದಲಿತ’ ಎಂಬ ಮೂರು ಅಕ್ಷರಗಳನ್ನು ಜೋಡಿಸಿ ನಿಲ್ಲಿಸಲಾಗಿದೆ. ಹೀಗಾಗಿ ಅಂಬೇಡ್ಕರ್‌ ವಾದವೆಂದರೆ ಅದು ದಲಿತರಿಗೆ ಮಾತ್ರ ಎಂಬಂತಾಗಿದೆ. ಅಂಬೇಡ್ಕರ್ ಹೆಸರಿನ ದುರ್ಬಳಕೆ ಕೂಡ ನಡೆಯುತ್ತಿದೆ.(:w:prajavani.net/article/ಗೀತೆ-ಗಾಂಧಿ-ಅಂಬೇಡ್ಕರ್|[[೧]])Bschandrasgr (ಚರ್ಚೆ) ೧೬:೦೫, ೭ ಏಪ್ರಿಲ್ ೨೦೧೬ (UTC)
@Bschandrasgr Sanjukumar6965 (ಚರ್ಚೆ) ೧೨:೪೨, ೧೦ ಮಾರ್ಚ್ ೨೦೨೨ (UTC)

ಅಂಬೇಡ್ಕರ್ ರವರ ಬಗ್ಗೆ ಸುಳ್ಳು ಹೇಳಿದ್ದೀರ

ಬದಲಾಯಿಸಿ

ಚರ್ಚೆ ಗೆ ಬನ್ನಿ ಉತ್ತರಿಸುವೆ. ಕಸವಿರೆಡ್ಡಿಹಳ್ಳಿ ರಾಜು (ಚರ್ಚೆ) ೦೦:೫೦, ೧೦ ಏಪ್ರಿಲ್ ೨೦೧೮ (UTC)

ಎನದು ಸುಳ್ಳು 117.247.189.67 ೦೭:೫೨, ೨೨ ಮಾರ್ಚ್ ೨೦೨೨ (UTC)

ಉತ್ತರಿಸಿ

ಬದಲಾಯಿಸಿ
  • ಅದು ರವೀಂದ್ರ ಕೊಟಗಿಯವರ ವಿಮರ್ಶೆ - ಒಂದು ರೀತಿಯಲ್ಲಿ ಸಮ್ಮತ ಕಾಣುವುದು. ಇಡೀ ಜಗತ್ತಿನಲ್ಲಿ ಗಾಂಧೀ-ವಾದ; ಗಾಂಧೀಜಿ ಮಾರ್ಗ ಎಂದು ಪ್ರಸಿದ್ಧಿಯಾಗಿದೆ. ಅದು ಯಾರನ್ನೂ ದ್ವೇಷಿಸದೆ ಪರಿವರ್ತಿಸುವ ಮಾರ್ಗ. ಜೊತೆಗೆ ಅವರ ಸಿದ್ದಾಂತಗಳನ್ನು ಈಗ ಜಗತ್ತೇ ಒಪ್ಪಿ ಅನುಸರಿಸುತ್ತಿದೆ. ಎಲ್ಲಾ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕೆಂಬುದು- ಆ ವಾದ. ಭಗತ್ಸಿಂಗ್ ಮತ್ತು ಅಜಾದರ ಉಗ್ರವಾದವೇ ಸರಿ ಎಂಬುದು ಕೆಲವು ದೇಶಭಕ್ತರ ಮತ-;
  • ಹಾಗೆಯೇ ಗಾಂಧೀಜಿ ಸಮಾನತೆಗಾಗಿ ಅದನ್ನು ತಮ್ಮ ಆಶ್ರಮದಲ್ಲಿಯೇ ಕ್ರಿಯಾಶೀಲವಾಗಿ ಅನುಸರಿಸಿದರು. ದೇಶದ ಬಡತನ ನೋಡಿ ತಾವೂ ಸರಳ ಜೀವನ ನೆಡಸಿ, ಕೇವಲ ಪಂಚೆ ಹೊದಿಕೆಯಲ್ಲಿ ಜೀವನ ಕಳೆದರು. ಅದು ಸಮಾನತೆಗಾಗಿ ಜೀವನ ವಿಡೀ ಅನುಭವಿಸಿದ ಕಷ್ಟ. ಅದಕ್ಕೆ ಸಮಾನರು ಯಾರು? ಅದಕ್ಕಾಗಿ ಅವರನ್ನು ವಿಶ್ವವೇ ಗೌರವಿಸುತ್ತದೆ, (ಭಾರತದ ಆರ್‍ಎಸ್‍ಎಸ್‍ ಬಿಟ್ಟು). ಏನು ತಪ್ಪಿದೆ ಆಂಬೇಡ್ಕರ್ ಅವರ ಶ್ರಮ ಭಾರತದಲ್ಲಿದ್ದ ದಲಿತರಿಗೆ ಮಾತ್ರಾ ಸೀಮಿತವಾಗಿತ್ತು. ಹಾಗಾಗಿ ಅವರು ವಿಶ್ವಮಟ್ಟದಲ್ಲಿ ಹೆಸರಾಗಲಿಲ್ಲ. ತಪ್ಪೇನಿಲ್ಲ ಅವರ ಗುರಿ ಭಾರತದ ನಿಮ್ನವರ್ಗದವರನ್ನು ಮೇಲೆತ್ತುವ ಉದ್ದೇಶವಿತ್ತು. ಇದು ಮೇಲಿನ ಲೇಖನದ ಸಾರಾಂಶ. ಅದರಲ್ಲಿ ಅಂಬೇಡ್ಕರರ ಬಗ್ಗೆ ತಪ್ಪು ಅಭಿಪ್ರಾಯ ಯಾವುದಿದೆ? Bschandrasgr (ಚರ್ಚೆ) ೦೭:೪೨, ೧೦ ಏಪ್ರಿಲ್ ೨೦೧೮ (UTC)

ಅಂಬೇಡ್ಕರರವ ಹೋರಾಟವು ಕೇವಲ ದಲಿತರಿಗಾಗಿ ಮಾತ್ರ ಸೀಮಿತವಾಗಿರಲಿಲ್ಲ. ಅವರು ಶೋಷಿತರಿಗಾಗಿ ಹೋರಾಡುತ್ತಿದ್ದರು. ಶೋಷಿತರು ಎಂದರೆ ಕೇವಲ ಜಾತಿವಾರು ಅಲ್ಲ..... ಅಂಬೇಡ್ಕರವರು ಜ್ಞಾನದ ಭಂಡಾರವಾಗಿದ್ದರು. ಅನೇಕ ಅನಿಷ್ಟಪದ್ದತಿಗಳನ್ನು ದೂರ ಮಾಡಿರುವ ನಮ್ಮ ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ ಅಂಬೆಡ್ಕರವರನ್ನು ಪ್ರತಿಯೊಬ್ಬರು ನೆನೆಯಬೇಕು. ಉದಾಹರಣೆಗಾಗಿ ಪ್ರಸ್ತುತವಾಗಿ ಸತಿಸಹಗಮನ ಪದ್ದತಿಯು ಆಚರಣೆಯಲ್ಲಿತ್ತು ಎಂದು ಅಂದುಕೊಳ್ಳಿ ಅದರ ಕಲ್ಪನೆ ಮಾಡಿಕೊಳ್ಳಿ ಎಷ್ಟು ವಿಕಾರವಾದ ಅನಿಷ್ಟ ಪದ್ಧತಿಗಳು ಇವೆಲ್ಲ. ಇಂತಹ ಅನಿಷ್ಟರಿಂದ ನಮ್ಮನ್ನು ಪಾರು ಮಾಡಿದ ಮಹಾನುಭಾವರಿಗೆ ಕೃತಘ್ನತೆಗಳು....ಇನ್ನು ಅಂಬೇಡ್ಕರವರು ವಿಶ್ವಮಟ್ಟದಲ್ಲಿ ಹೆಸರಾಗಿಲ್ಲ ಎನ್ನುವುದು ತಪ್ಪು ನೈಜವಾಗಿ ಇಡಿ ವಿಶ್ವವೇ ಭಾರತವನ್ನು ಗುರುತಿಸುವುದು ಬಾಬಾಸಾಹೇಬ ಅಂಬೇಡ್ಕರವರ ಹೆಸರಲ್ಲೆ... ದುರದುಷ್ಟವಶಾತ್‌ ವಿಶ್ವಮಟ್ಟದಲ್ಲೇ ಹೆಸರುವಾಸಿಯಾದ ಡಾ. ಬಿ ಆರ್‌ ಅಂಬೇಡ್ಕರವರನ್ನು ಇವತ್ತಿಗೂ ಭಾರತದಲ್ಲಿ ಉನ್ನತ ಜಾತಿಯವರು ಎಂದು ಎನಿಸಿಕೊಳ್ಳುವಂತಹ ಕೆಲ ಅಜ್ಞಾನಿಗಳು ಒಪ್ಪಿಕೊಳ್ಳುತ್ತಿಲ್ಲ. ಕಾರಣ ಇಷ್ಟೆ ಅವರು ನಿಮ್ನ ವರ್ಗದವರು... ಯಾರು ಒಪ್ಪಿದರೆಷ್ಟು ಬಿಟ್ಟರೆಷ್ಟು ಬಾಬಾಸಾಹೇಬರು ಮಹಾನಾಯಕರು, ಜ್ನಾನದ ಭಂಡಾರವು, ದೇವರ ರೂಪವು ಎನ್ನುವುದು ಸುಳ್ಳಲ್ಲ.........

ಅಂಬೇಡ್ಕರ್ ಸಂವಿಧಾನದ ಕರಡು ರಚಿಸಿದ್ದಾರೆ ಎಂಬುದರ ಬಗ್ಗೆ

ಬದಲಾಯಿಸಿ

ಬಿ.ಎನ್ .ರಾವ್ ಸಂವಿಧಾನದ ಕರಡನ್ನು ರಚಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹಾಕಿದ್ದಾರೆ. ಅಂಬೇಡ್ಕರ್ರವರ ಪಾತ್ರವನ್ನು ಕಡಿಮೆ ಮಾಡುವ ಉದ್ದೇಶವಾಗಿದೆ. John seena5 (ಚರ್ಚೆ) ೧೧:೪೯, ೨೯ ಜನವರಿ ೨೦೨೦ (UTC)

  • ಅದು ಸುಳ್ಳು ಸುದ್ದಿಯಲ್ಲ. ಅದಕ್ಕೆ ಆಧಾರಗಳಿವೆ, ಲೇಖನದಲ್ಲಿರುವ ಉಲ್ಲೇಖಗಳನ್ನು ನೋಡಿ.Bschandrasgr (ಚರ್ಚೆ) ೧೦:೩೪, ೧೧ ಮಾರ್ಚ್ ೨೦೨೦ (UTC)
    ಸಂವಿಧಾನ ರಚಿಸಿರುವ ಪ್ರಮುಖ ಪಾತ್ರ ಎನ್ನುವುದಕ್ಕಿಂತ ಸಂವಿಧಾನದ ಪ್ರತಿ ಅಕ್ಷರವು ಸಹ ನಮ್ಮ ಹೆಮ್ಮೆಯ ಡಾ. ಬಿ ಆರ್‌ ಅಂಬೆಡ್ಕರವರದ್ದೇ...... ಇದರಲ್ಲಿ ಯಾವ ಸಂದೇಹವು ಇಲ್ಲ. ಇತಿಹಾಸವನ್ನೆ ತಿರುಚಿದವರು ಲೇಖನ ಉಲ್ಲೆಖಗಳನ್ನೇನು ಉಳಿಸಿರುತ್ತಾರೆ. ತಮಗೆ ಅನುಕೂಲವಾಗುವಂತೆ ಉಲ್ಲೇಖಗಳನ್ನು ಬರೆದುಕೊಂಡು ಅದೇ ನಿಜ ಎಂದು ನಂಬಿಸುವುದು ಹೊಸದೇನಲ್ಲ.... 117.247.189.67 ೦೭:೫೮, ೨೨ ಮಾರ್ಚ್ ೨೦೨೨ (UTC)
ರಾವ್ ಅವರು ಸಂವಿಧಾನ ರಚನಾಸಭೆಯ ಸಲಹೆಗಾರರಾಗಿದ್ದರು. ಕರಡು ರಚಿಸಿದ್ದು ಅಂಬೇಡ್ಕರ್ ಅಧ್ಯಕ್ಷತೆಯ ಕರಡು ರಚನಾ ಸಮಿತಿ.

ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅವರ ಕೊಡುಗೆಗಳನ್ನು ಹೇಳದೇ, ರಾವ್ ಅವರನ್ನು ಉನ್ನತೀಕರಿಸಿರುವುದು ಆಶ್ಚರ್ಯ. ಮೂಲ ಕರಡನ್ನು ರಚಿಸಿದ್ದು ರಾವ್ ಎಂಬ ಸಾಲಿಗೆ ಲೇಖಕ ನೀಡಿರುವ ಉಲ್ಲೇಖದಲ್ಲಿ ಅಂತಹ ಮಾಹಿತಿಯಿಲ್ಲ. ಬರ್ಮಾ ಮತ್ತು ಭಾರತ ದೇಶದ ಸಂವಿಧಾನ ಕರಡು ರಚನೆಯಲ್ಲಿ ಅವರ ಪಾತ್ರವಿದೆ ಎಂದಷ್ಟೇ ಇದೆ.

ರಾವ್ ಬರೆದ ಮೂಲ ಕರಡನ್ನು ತಿದ್ದಿ ತೀಡಿ 395 ವಿಧಿ ಮಾಡಿದ್ದಷ್ಟೇ ಕರಡು ರಚನಾ ಸಮಿತಿಯ ಕೆಲಸ ಎಂಬಂತೆ ಬರೆದಿರುವ ಉದ್ದೇಶವೇನು!!? NinadMysuru (ಚರ್ಚೆ) ೦೪:೧೮, ೧೬ ಸೆಪ್ಟೆಂಬರ್ ೨೦೨೦ (UTC)

ಸಂವಿಧಾನ ಕರಡು ರಚನಾ ಸಮಿತಿ

ಬದಲಾಯಿಸಿ

ಈ ಲೇಖನದ "ಕರಡು ರಚನಾಸಮಿತಿಯ ಅಧ್ಯಕ್ಷರಾಗಿ" ಎಂಬ ಉಪವಿಭಾಗದಲ್ಲಿ ಕರಡು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಕೊಡುಗೆಗಳನ್ನು ಸಂಪೂರ್ಣವಾಗಿ ಗೌಣ ಮಾಡಲಾಗಿದೆ. ಸರಿಯಾದ ಉಲ್ಲೇಖಗಳೊಂದಿಗೆ ಸದ್ಯದಲ್ಲೇ ಈ ಉಪವಿಭಾಗವನ್ನು ಪರಿಷ್ಕರಿಸಲಾಗುವುದು. NinadMysuru (ಚರ್ಚೆ) ೦೪:೫೩, ೧೬ ಸೆಪ್ಟೆಂಬರ್ ೨೦೨೦ (UTC)

  • Role in drafting the Constitution of India:-
  • B. N. Rau was appointed as the Constitutional Adviser to the Constituent Assembly in formulating the Indian Constitution in 1946.[11] He was responsible for the general structure of its democratic framework of the Constitution and prepared its initial draft in February 1948.[13] This draft was debated, revised and finally adopted by the Constituent Assembly of India on 26 November 1949.[14]
  • As part of his research in drafting the Constitution of India, in 1946, Rau travelled to the US, Canada, Ireland, and the United Kingdom, where he had personal consultations with judges, scholars, and authorities on constitutional law.[15] Amongst others, he met Justice Felix Frankfurter of the American Supreme Court, who famously advised him against the inclusion of a clause for 'due process' in the Indian Constitution as it would impose an 'undue burden' on the judiciary.[16]
  • The Constituent Assembly's resolution setting up the Drafting Committee on August 29, 1947, under the chairmanship of B. R. Ambedkar, declared that it was being set up to "Scrutinise the Draft of the text of the Constitution prepared by the Constitutional Adviser, give into effect the decisions taken already in the Assembly and include all matters ancillary thereto or which have to be provided in such a Constitution, and to submit to the Assembly for consideration the text of the Draft Constitution as revised by the Committee." The draft prepared by the constitutional advisor was submitted in October 1947. Along with this draft, the proposals offered by the various other committees set up by the Constituent Assembly were considered and the first draft by the Drafting Committee was published in February, 1948. The people of India were given eight months to discuss the draft and propose amendments. In the light of the public comments, criticisms and suggestions, the Drafting Committee prepared a second draft, which was published in October 1948. The final draft of the Constitution was introduced by Dr. B. R. Ambedkar on November 4, 1948 (first reading). The second reading was clause by clause consideration and took over a year. After three drafts and three readings, the constitution was declared as passed on November 26, 1949. Dr B. R. Ambedkar in his concluding speech in constituent assembly on November 25, 1949 stated that:
The credit that is given to me does not really belong to me. It belongs partly to Sir B.N. Rau the Constitutional Advisor to the Constituent Assembly who prepared a rough draft of the Constitution for the consideration of Drafting Committee, "who prepared a rough draft of the Constitution for the consideration of Drafting Committee".

ಶ್ರೀ ಬಿ.ಆರ್ ಅಂಬೇಡ್‍ಕರ್ ಪ್ರಾಮಾಣಿಕರಾಗಿದ್ದರು. ಅವರೇ ಬಿ,ಎನ್.ರಾವ್ ಕೊಡಿಗೆಯನ್ನು ಸಂವಿಧಾನ ಸಭೆಯಲ್ಲಿ ಹೊಗಳಿದ್ದಾರೆ.

Return to "ಬಿ. ಆರ್. ಅಂಬೇಡ್ಕರ್" page.