ಚರ್ಚೆಪುಟ:ಗೌರಿ ಲಂಕೇಶ್‌

ಪತ್ರಿಕೆಗಳಲ್ಲಿನ ವರದಿವಾಕ್ಯಗಳನ್ನು ಇಲ್ಲಿ ತಂದು ಸುರಿಯುವುದನ್ನು ನಿಲ್ಲಿಸಬೇಕು. ಸ್ವಂತ ವಾಕ್ಯಗಲಲ್ಲಿ ವಿಶ್ವಕೋಶ ಶೈಲಿಯಲ್ಲಿ ಸಾರಾಂಶ ರೂಪದಲ್ಲಿ ಬರೆಯಬೇಕು ಮತ್ತು ಕೊಲೆಯಂತರ ಸೂಕ್ಷ್ಮ ವಿಚಾರಗಳಲ್ಲಿ ಉಲ್ಲೇಖಗಳು ಬಹಳ ಮುಖ್ಯ. ಚಂದ್ರಶೇಖರ್ ಅವರು ಇನ್ನೂ ವಿಕಿಪೀಡಿಯ ನಿಯಮ, ಕ್ರಮ ಮತ್ತು ರೂಢಿಗಳನ್ನು ಅರ್ಥ ಮಾಡಿಕೊಳ್ಳದೇ ಇರುವುದು ವಿಪರ್ಯಾಸ. ಅವರು ರಚಿಸಿದ ಬಹುತೇಕ ಪುಟಗಳ ಎಲ್ಲೆಲ್ಲಿಂದಲೋ ಯಥಾವತ್ ತಂದು ಹಾಕಿದ ಮಾಹಿತಿ ಡಂಪಿಂಗ್ ಪುಟಗಳಾಗಿವೆ. --Vikashegde (ಚರ್ಚೆ) ೦೯:೨೮, ೮ ಸೆಪ್ಟೆಂಬರ್ ೨೦೧೭ (UTC)

  • ಈ ವಿಷಯದಲ್ಲಿ ಗೋಪಾಲಕೃಷ್ಣ ಅವರ ಚರ್ಚೆ ಪುಟದಲ್ಲಿ ವಿವರಿಸಿದ್ದೇನೆ. ಕೆಲವು ಸಂಕ್ಷಿಪ್ತ ಮಾಹಿತಿಗಳು ಬದಲಾವಣೆ ಅಸಾಧ್ಯ- ಅದರಲ್ಲಿ ನೋಡಿ, ಉದಾರರಣೆ ಸಹಿತ ಹೇಳಿದ್ದೇನೆ. ಡಾಗ್ಮ್ಯಾಟಿಕ್ ಆಗಿ ಯಾವುದೇ ನಿಯಮ ಪಾಲನೆ ಸರಿಯಲ್ಲ. ಪುಸ್ತಕದ ಬದನೇಕಾಯಿ ಅಡಿಗೆಗೆ ಬರುವುದಿಲ್ಲ.
  • ನಾನು ಮೊದಲಿಂದಲೂ ಹೇಳುತ್ತಿರುವುದನ್ನೇ ಮತ್ತೆ ಹೇಳಬೇಕಾಗಿದೆ. ವಿಕಿಯ ನಿಯಮಕ್ಕೆ ಸರಿ ಇದ್ದು, ಕಾಪಿರೈಟ್ ಇಲ್ಲದೆ, ಸಾರ್ವಜನಿಕ ಮಾಹಿತಿಯಾಗಿದ್ದು, ಸಮಾಜ ಮತ್ತು ಜನರಿಗೆ ಉಪಯೋಗವಾಗುವಂತಿದ್ದರೆ, ಸಂಕ್ಷಿಪ್ತವಾಗಿದ್ದು, ವಾಕ್ಯ ಬದಲಾಯಿಸಿದರೆ, ಭಾಷೆಕೆಟ್ಟು, ಅದರ ಅರ್ಥಕೆಡುವಹಾಗಿದ್ದರೆ,ಏನು ಮಾಡಬೇಕು? ಆ ಮಾಹಿತಿಯನ್ನು ಏಕೆ ತೆಗೆದುಕೊಳ್ಳಬಾರದು? ಇದಕ್ಕೆ ನನಗೆ ಇದುವರೆಗೂ ಯಾರೂ ಉತ್ತರ ಕೊಟ್ಟಿಲ್ಲ!!Bschandrasgr (ಚರ್ಚೆ) ೧೦:೧೦, ೮ ಸೆಪ್ಟೆಂಬರ್ ೨೦೧೭ (UTC)
ನೀವು ಯಾವುದಕ್ಕೆ ಕಾಪಿರೈಟ್ ಇಲ್ಲ ಎಂದು ಹೇಳುತ್ತೀರಿ? ಒಂದು ಮಾಹಿತಿಯನ್ನು ತೆಗೆದುಕೊಂಡು ಮಾಹಿತಿ ಕೆಡದಂತೆ ಸ್ವಂತ ವಾಕ್ಯ ಮಾಡಲು ಸಾಧ್ಯವೇ ಇಲ್ಲವೇ? --ಗೋಪಾಲಕೃಷ್ಣ (ಚರ್ಚೆ) ೧೧:೩೧, ೮ ಸೆಪ್ಟೆಂಬರ್ ೨೦೧೭ (UTC)
  • ಸರ್ಕಾರ ಮತ್ತು ಸಾರ್ಜನಿಕ ಸಂಸ್ಥೆಗಳು ಕೊಡುವ ಮಾಹಿತಿಗೆ ಮತ್ತು ವ್ಯಕ್ತಿಯ ತಂದೆ- ತಾಯಿ - ಹುಟ್ಟಿದ ದಿನಾಂಕ ಈ ಬಗೆಯ ವಿವರಗಳು ಪತ್ರಿಕೆಯಲ್ಲಿ ಅಥವಾ ಲೇಖನಗಳಲ್ಲಿ ಬಂದಾಗ ಅವಕ್ಕೆ ಯಾರೂ ಕಾಪಿರೈಟ್ ನನ್ನದು ಎಂದು ತಕರಾರು ಮಾಡುವಂತಿಲ್ಲ. ಹಾಗಿದ್ದರೆ ನೀವು ಯಾವ ವಿವರವನ್ನೂ ವಾಕ್ಯ ಬದಲಾಯಿಸಿ ಹಾಕಿದರೂ ತಪ್ಪಾಗುತ್ತದೆ, ವಿಜ್ಞಾನದ ಸತ್ಯಗಳನ್ನು, ಪ್ರಾಚೀನ ಧಾರ್ಮಿಕ ನಿಯಮ- ಸೂಕ್ತಿಗಳಿಗೆ, ಇತಿಹಾಸಿಕ ಸತ್ಯಗಳಿಗೆ ನೀವು ಅದು ಇದ್ದ ಹಾಗೆಯೇ ಬರೆದು ಸ್ವಂತ ಕಾಪಿರೈಟ್ ಹಾಕಿಕೊಳ್ಳಬಹುದೇ? ಸ್ವಲ್ಪ ಕಾಮನ್ ಸೆನ್ಸ್ ಉಪಯೋಗಿಸಿದರೆ ಅರ್ಥವಾಗುವುದು. ಸ್ವಂತ ಅಭಿಪ್ರಾಯದ ಅಥವಾ ಅಲಂಕಾರಿಕ, ಕಾವ್ಯಮಯ ಬರಹಗಳಿಗೆ ಅವರು ಕಾಪಿರೈಟ್ ಹಾಕಿಕೊಳ್ಳಬಹುದು, ಹಾಗಯೇ ಇರುವ ಯಾವುದೇ ಸ್ವಂತ ಪತ್ರಿಕಾ ವರದಿಗಳಿಗೂ ಪತ್ರಿಕಯವರು ಕಾಪಿರೈಟ್ ಹಾಕಬಹುದು. ನಾನು ಈ ಮೊದಲೇ ಹೇಳಿದಂತೆ "ಕೋವಿಂದ್ ಅವರು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿದರು", ಎಂಬ ವಾಕ್ಯವನ್ನು ಬದಲಾಯಿಸಿ ಹಾಕಿ ಎಂದರೆ ಅರ್ಥವಿದೆಯೇ? ಅದನ್ನು ಏನು ಹೇಳೋಣ; 'ಅಧಿಕಪ್ರಸಂಗ'ವೆಂದರೆ ಬೇಜಾರಾಗುತ್ತದೆ. ಅದರ ಬದಲು ಪ್ರಸ್ತುತ ವಿಷಯವೆಲ್ಲಾ ವರದಿಗಳಿಂದಲೇ ಬರುತ್ತದೆ. ಎಲ್ಲದಕ್ಕೂ ಎಂಗ್ಲಿಷ ಉದಾಹರಣೆ ಕೊಡಬೇಡಿ, ಕೆಲವರ ಕೆಟ್ಟ ಇಂಗ್ಲಿಷ್ ನೊಡಿ ನನಗೆ ಬೇಜಾರಾಗಿದೆ; ಉದಾ:ಇಂಗ್ಲಿಷ್ ವ್ಯಾಕರಣ ದಂಥ ಮುಖ್ಯವಿಷಯ ನೋಡಿ- ಇಂಗ್ಲಿಷ್ ಮೂಲವು ಅಸಂಬದ್ದವಾಗಿದೆ. ಇದರ ಬದಲು, ' ವಿಕೀಪೀಡಿಯಾ ಅಪ್ಡೇಟ್ ನಾವು ಮಾಡುವುದಿಲ್ಲ, ನೀವೂ ಮಾಡಬೇಡಿ, ಹಾಗೆಯೇ ತಂಗಳಾಗಿರಲಿ' ಎಂದರೆ,ನೇರ ಮಾತು.
  • ಇದಕ್ಕೆ ಅಪವಾದವಾಗಿ ನಾನು ಕಾಪಿರೈಟ್ ಇರುವ / ಇರಬಹುದಾದ ಕೆಲವು ವಿಜ್ಞಾನದ ಲೇಖನದ ಪ್ಯಾರಾಗಳನ್ನು ವಾಕ್ಯ ಬದಲಿಸಲು ಆಗದವುಗಳನ್ನು ಅದರ ಪ್ರಾಮುಖ್ಯತೆಗಾಗಿ/ ಕನ್ನಡದ ಹೊಸ ಓದುಗರಿಗಾಗಿ ಹಾಕಿದ್ದೇನೆ- ಉದಾ: ಡಿ.ಎನ್.ಎ. ಆ ಲೇಖನ ಬರೆದವರು ಅದನ್ನು ಸರಿಯಾಗಿ ಡಿಪೈನ್ ಮಾಡಿರಲಿಲ್ಲ. ನನಗೂ ಬರದು; ಅದನ್ನು ಶ್ರೀ ನಾಗೇಶ ಹೆಗಡೆಯವರು ಚೆನ್ನಾಗಿ ತುಂಬಾ ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಿದ್ದರು ಅದನ್ನು ಬಾಕ್ಸ್ ಮಾಡಿಹಾಕಿದೆ. ಅದೇ ರೀತಿ ಕೆಲವು ಅವರ ಉತ್ತಮ ಅಗತ್ಯ ವಿಷಯಗಳು; ಅವರು ನನ್ನನ್ನು ಕ್ಷಮಿಸಬೇಕು, ಉದ್ದೇಶ ಆ ಪ್ರಮುಖ ವಿಷಯಗಳು ಒಂದೇ ದಿನದ ಪತ್ರಿಕೆಯ ಸಮಯದ ನಂತರ ರದ್ದಿ ಕಾಗದಕ್ಕೆ ಹೋಗಿ ನಷ್ಟವಾಗದೆ ಕನ್ನಡಿಗರಿಗೆ ಸದಾ ಸಿಗಲಿ ಎಂದು. ಅದೇ ಬಗೆಯ ಇನ್ನು ಕೆಲವು ಪ್ರಮುಖ ವಿಷಯದ ಪ್ಯಾರಾಗಳು ಇವೆ; ಅವುಗಳ ಅಗತ್ಯ ಇಲ್ಲಿ ಬಹಳ ಇದೆ ಎಂಬ ಭಾವನೆ, ಅವರೂ ನನ್ನನ್ನು ಕ್ಷಮಿಸುವರೆಂಬ ನಂಬುಗೆ. (ಟೈಪಿಂಗ್ ತಪ್ಪಿದ್ದರೆ ತಿದ್ದಿಕೊಳ್ಳಿ)ನಿಮ್ಮವ-Bschandrasgr (ಚರ್ಚೆ) ೧೪:೧೮, ೮ ಸೆಪ್ಟೆಂಬರ್ ೨೦೧೭ (UTC)
ಪತ್ರಿಕೆಯ ಪ್ರತಿವಾಕ್ಯಗಳೂ ಕಾಪಿರೈಟಿನಲ್ಲಿರುತ್ತವೆ. ಯಥಾವತ್ ಹಾಕುವಂತಿಲ್ಲ. ಜೊತೆಗೆ ನೀವು ಅದರ ಕಾಲ ಬದಲಾಯಿಸುತ್ತಿಲ್ಲ. ಹಾಗಾಗಿ ಮಾಹಿತಿ ವರದಿಯರೀತಿಯಲ್ಲಿ ಉಳಿಯುತ್ತದೆ. ಪತ್ರಿಕೆಗಳಿಂದ ವಿಷಯ ತೆಗೆದುಕೊಂಡು ಅದನ್ನು ನಿಮ್ಮ ವಾಕ್ಯಗಳಲ್ಲಿ ವಿಶ್ವಕೋಶ ಶೈಲಿಯಲ್ಲಿ ಭಾಷೆ ಕೆಡದಂತೆ ಬರೆಯಿರಿ, ಅಷ್ಟೆ. ಈಗ ನೀವು ವಿಶ್ವಕೋಶವನ್ನೇ ಕೆಡಿಸುವ ಕೆಲಸದಲ್ಲಿ ತೊಡಗಿದ್ದೀರಿ ಎಂದು ಹೇಳಲು ಬೇಸರ ಮತ್ತು ವಿಷಾದವಾಗುತ್ತಿದೆ. ಕ್ಷಮಿಸಿ --Vikas Hegde (ಚರ್ಚೆ) ೦೮:೨೭, ೧೦ ಸೆಪ್ಟೆಂಬರ್ ೨೦೧೭ (UTC)
ವಿಕಿಪೀಡಿಯ ಸಾರ್ವಕಾಲಿಕ ವಿಶ್ವಕೋಶ. ಹತ್ತು ವರ್ಷಗಳ ನಂತರ ಓದಿದವರಿಗೆ ಅದರಲ್ಲಿ ಸದ್ಯದಲ್ಲಿ ನಡೆಯುತ್ತಿರುವ ಘಟನೆಗಳ ವರದಿಯ ಮಾದರಿಯ ಲೇಖನ ಮತ್ತು ವಾಕ್ಯಗಳು ಕಂಡುಬಂದರೆ ಅವರಿಗೆ ಏನು ಅನ್ನಿಸಬಹುದು? ಉದಾಹರಣೆಗೆ "ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ತನಿಖೆಗೆ ಗುಪ್ತದಳದ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಬಿ.ಕೆ. ಸಿಂಗ್‌ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ." ಎಂಬ ವಾಕ್ಯ. ಇಡಿಯ ಲೇಖನದಲ್ಲಿ ವರದಿಗಳನ್ನು ಪ್ರತಿದಿನ ಅಪ್‍ಡೇಟ್ ಮಾಡುತ್ತಲೇ ಇರಬೇಕಾಗುತ್ತದೆ. ವಿಕಿಪೀಡಿಯ ಒಂದು ವಿಶ್ವಕೋಶ ಎಂದು ಮತ್ತೆ ಮತ್ತೆ ಹೇಳುತ್ತಿದ್ದೇವೆ. ಇದು ವರದಿಗಳನ್ನು ಸಂಗ್ರಹಿಸಿಡುವ ಸ್ಥಳ ಅಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ.--ಪವನಜ (ಚರ್ಚೆ) ೧೨:೦೩, ೧೦ ಸೆಪ್ಟೆಂಬರ್ ೨೦೧೭ (UTC)

ಪ್ರಸ್ತುತ ವಿಷಯ ಬದಲಾಯಿಸಿ

  • ಮಾನ್ಯ ಪವನಜರೇ,
  • ಪ್ರಸ್ತುತ ವಿಷಯಗಳಲ್ಲಿ ಹಾಗಾಗುತ್ತದೆ; ಅಪ್‍ಡೇಟ್ ಮಾಡಬೇಕಾಗುವುದು. ಬೇಡವೆಂದರೆ ಬಿಡುತ್ತೇನೆ. ಅನಿವಾರ್ಯವಾಗಿ ಇಂಗ್ಲಿಷ್ ಉದಾ:ಕೊಡುತ್ತಿದ್ದೇನೆ. ನಾನೂ ಈ ಕೆಳಗಿನ ವಿಷಯಗಳನ್ನು ಹಾಕಬೇಕೆಂದಿದ್ದೆ. ವಿಚಾರ ಬೇಧ - ಆದ ಸಮಸ್ಯೆಯಿಂದ ಬಿಟ್ಟಿದ್ದೇನೆ. ("ಗೌರಿ ಲೇಖನ", ಅನೂಪ್, ಕನ್ನಡ ತಲೆಬರೆಹದಲ್ಲಿ, ಇಂಗ್ಲಿಷ್ ಲೇಖನಹಾಕಿ ಕನ್ನಡಕ್ಕೆ ಅನುವಾದಿಸಲು ಕೋರಿದ್ದರು; ಯಾರೂ ಅನುವಾದಿಸದೆ ಇದ್ದುದ್ದರಿಂದ ನಾನು ಅನುವಾದಿಸಿ ಅಪ್‍ಡೇಟ್‍ ಮಾಡಿದೆ; ಅದರ ಮುಖ್ಯ ಉಲ್ಲೇಖ ಕೊಂಡಿಗಳನ್ನು ಉಳಿಸಿದೆ; ಇಂಗ್ಲಿಷ್‍ನಲ್ಲಿ -ಗೌರಿ ಲೇಖನಗಳು ತಪ್ಪು ವರದಿಗಳಿಂದ ತುಂಬಿದೆ, ನಾನು ಹಾಕಿದ ತಿದ್ದಿದ ಅಂತಿಮ ವರದಿಯ ಉಲ್ಲೇಖದ ಕೊಂಡಿಯನ್ನು ವಜಾಮಾಡಿ ಇಂಗ್ಲಿಷ್‍ನ ತಪ್ಪು ವರದಿಯ ಕೊಂಡಿಯನ್ನು ಉಳಿಸಿದ್ದಾರೆ. ಏನು ಮಾಡಲಿ. ಇರಲಿ!
  • ದಯವಿಟ್ಟು ನೋಡಿ:Hurricane Irma
  • Current storm information
  • As of 11:00 p.m. EDT September 10 (03:00 UTC September 11), Hurricane Irma is located within 15 nautical miles of 27.5°N 81.9°W, about 40 miles (65 km) east-northeast of Sarasota, Florida and about 50 miles (80 km) southeast of Tampa, Florida. Maximum sustained winds are 85 knots (100 mph; 155 km/h), a Category 2 on the Saffir–Simpson scale, with gusts to 105 knots (120 mph; 195 km/h). The minimum barometric pressure is 952 millibars (hPa; 28.12 inHg). The system is moving north at 12 knots (14 mph; 22 km/h). Hurricane-force winds extend up to 70 nautical miles (80 mi; 130 km) from the center of Irma, and tropical-storm-force winds extend outward up to 360 nautical miles (415 mi; 665 km)
  • ೨.ಎಐಎಡಿಎಮ್‍ಕೆ;ಪ್ರಮುಖ ಬೆಳವಣಿಗೆಯ ಈ ವಿಷಯಕ್ಕೆ ಲೇಖನ ತಯಾರಿಸಿ, ತಕರಾರಾಗುವುದೆಂದು ಹಾಕದೆ ಬಿಟ್ಟಿದ್ದೇನೆ.
  • AIADMK
  • Edappadi K. Palaniswami era (2017-present)
  • On 21st August 2017, both EPS and OPS factions of the AIADMK have merged and O. Panneerselvam has been made Deputy Chief Minister, Finance Minister of Tamil Nadu and the convener (chairman) of AIADMK. He also holds portfolios of Housing, Rural Housing, Housing Development, Slum Clearance Board and Accommodation Control, Town Planning, Urban Development, and Chennai Metropolitan Development Authority.[16]
  • A day after the merger of two AIADMK factions, 19 MLAs [17] owing allegiance to ousted deputy general secretary T. T. V. Dhinakaran on 22 April 2017 submitted letters to Governor, expressing lack of confidence in Chief Minister Edappadi K. Palaniswami and withdrawing support to him.[17]
  • Based on these developments, the opposition leader M. K. Stalin shot off a letter to the Governor C. Vidyasagar Rao asking him to convene the assembly and direct Palaniswami to prove his majority in the House.[18]
  • As things stand now, the Chief Minister Palaniswami lost his majority
  • (ಅಪ್ರಸ್ತುತ ಪ್ರಸಂಗ: ವಿಕಿಸೋರ್ಸ್ ನೋಡುತ್ತಿದ್ದೀರಾ?ಜೈಮಿನಿಭಾರತ ತುಂಬಿ ಅರ್ಥ ಹಾಕುತ್ತಿದ್ದೇನೆ. ಏನಾದರೂ ಸಲಹೆ ಇದೆಯೇ?)ನಿಮ್ಮವ;Bschandrasgr (ಚರ್ಚೆ) ೦೪:೪೯, ೧೧ ಸೆಪ್ಟೆಂಬರ್ ೨೦೧೭ (UTC)


ಇದು ಗೌರಿ ಲಂಕೇಶ್‌ ವಿಷಯದ ಚರ್ಚಾಪುಟ. ಎಷ್ಟು ಬಾರಿ ಹೇಳಿದರೂ ನಿಮ್ಮ ಅದೇ ಹಳೆಯವಾದ ಮುಂದುವರೆಯುತ್ತದೆ. ಎಲ್ಲದಕ್ಕೂ ವಿಕಿಪೀಡಿಯನ್ನರು ಈ ಮೊದಲೇ ಉತ್ತರ ಕೊಟ್ಟಾಗಿದೆ. ಏನು ಹೇಳುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳದೇ ನಿಮ್ಮದೇ ಗೊಂದಲದಲ್ಲಿ ನೀವಿರುತ್ತೀರಿ. ಕನ್ನಡ ವಿಕಿಪೀಡಿಯಾವನ್ನು ಈ ರೀತಿ ಡಂಪಿಂಗ್ ತಾಣ ಮಾಡುವುದಕ್ಕಿಂತ ಸಂಪಾದನೆ ನಿಲ್ಲಿಸಿಬಿಟ್ಟರೆ ಉಪಕಾರವಾಗುತ್ತದೆ ಎಂದು ಕಳಕಳಿಯ ಕೋರಿಕೆ. ಕಾಪಿರೈಟುಗಳನ್ನು ಲೆಕ್ಕಿಸದೇ ಪತ್ರಿಕೆ ವರದಿ ತಂದುಹಾಕುವ ಮತ್ತು ಫಾರ್ಮ್ಯಾಟ್ ಇಲ್ಲದೇ ಬರೆಯುವ ನಿಮ್ಮ ಸಂಪಾದನೆ ಹೀಗೇ ಮುಂದುವರೆದರೆ ಅದು ವಿಕಿ ಗುಣಮಟ್ಟ ಹಾಳುಮಾಡುವ 'ವಿಧ್ವಂಸಕತೆ' ಆಗುತ್ತದೆ. ವಿಕಿಸಮುದಾಯ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಬಹುದು!--Vikas Hegde (ಚರ್ಚೆ) ೧೫:೦೫, ೧೨ ಸೆಪ್ಟೆಂಬರ್ ೨೦೧೭ (UTC)
  • ಒಳ್ಳೆಯದು :ಪುಟ ತೆರೆಯದಂತೆ ನನ್ನ ಸದಸ್ಯತ್ವವನ್ನು ತಡೆಹಿಡಿಯಬಹುದು!
  • ನೀವು ಕೆಲವು ವಿಷಯ ಪೂರ್ವಾಗ್ರಹದಿಂದ ಹೇಳುತ್ತಿರುವಿರೆಂದು. ಭಾವಿಸುತ್ತೇನೆ. ಏಕೆಂದರೆ ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಗಳೂ ಪತ್ರಿಕೆಯಲ್ಲಿ ಪ್ರಕಟವಾದ ತಕ್ಷಣ ಅದು 'ಅವರ ಕಾಪಿ ರೈಟ್' ಆಗುತ್ತದೆ ಎಂದರೆ ಅದಕ್ಕಿಂತ ತಪ್ಪು ಯಾವುದಿದೆ?. ಉದಾ: ಚುನಾವಣಾ ಕಮಿಶನರು ಘೋಷಣೆ ಮಾಡಿದ ವಿಷಯ, ಫಲಿತಾಂಶಗಳು ಪತ್ರಿಕೆಯಲ್ಲಿ ಬಂದರೆ ಅದು ಅವರ ಕಾಪಿರೈಟ್ ಆಗುತ್ತದೆ ಎಂದು ನೀವು ಹೇಳಿದಂತಾಯಿತು. " ಪತ್ರಿಕೆಯಲ್ಲಿ ಪ್ರಕಟವಾದ ಪ್ರತಿಯೊಂದು ವಾಕ್ಯಕ್ಕೂ ಅವರ ಕಾಪಿರಯಟ್ ಇದೆ',ಎಂದರೆ ಏನೆನ್ನಬೇಕು? ಓಟ್ಟಿನಲ್ಲಿ ನಾನು ಯಾವುದೇ ಸಂಪಾದನೆ ಮಾಡುವುದು ನಿಮಗೆ ವೈಯುಕ್ತಿಕವಾಗಿ ಇಷ್ಟವಿಲ್ಲ. *ನೀವು ಇದರ ನಿರ್ವಾಕರೆಂದು ಭಾವಿಸುತ್ತೇನೆ.
  • ೧.ನಿರ್ವಾಕರಾಗಿತರುವುದಕ್ಕಾಗಿ ನಿಮಗೆ ಒಂದೆರಡು ಪ್ರಶ್ನೆ: ನೀವು ಯಾವುದಅದರೂ ಪ್ರಸ್ತುತ ವಿಷಯದಲ್ಲಿ ಸಂಪಾದನೆ ಪುಟ ರಚಿಸಿದ್ದೀರಾ?? ನಾನು ೫-೬ ವರ್ಷದಿಂದ ನೋಡಿಲ್ಲ.
  • ೨. ಯಾವುದಾದರು ಪುಟ ಪ್ರಸ್ತುತ ಬೆಳವಣಿಗೆ ಆಗಾಗ ಅಪ್‍ಡೇಟ್ ಮಾಡಿದ್ದೀರಾ? -ನಾನು ನೋಡಿಲ್ಲ. ತಮಿಳುನಾಡು ಸರ್ಕಾರದ ಪುಟವನ್ನು ನಾನು ಅಪ್‍ಡೇಟ್ ಮಾಡಿದ್ದನ್ನು ಅಳಿಸಿ, ಹಿಂದಿನ ಮುಖ್ಯಮಂತ್ರಿ ಹೆಸರು ಮಾತ್ರಾ ಉಳಿಸಿದವರು, ನಂತರ ಅದನ್ನು ಹೊಸ ಮುಖ್ಯಮಂತ್ರಿ ಬಂದ ನಂತರ ಅಪ್‍ಡೇಟ್ ಮಾಡಿಲ್ಲ ಏಕೆ ಎಂದು ಕೇಳಬಹುದೇ? ಅದು ನಿಮ್ಮ ಇಷ್ಟ. (ಕನ್ನಡದ ಪುಟ ಹಳಸಲಾದರೆ ತೊಂದರೆ ಇಲ್ಲ)
  • ೩. ಹಿಂದಿನ ಬಿಹಾರದ ಚುನಾವಣೆ ಫಲಿತಾಂಶದ ವಿಷಯ ನೀವು ಹಾಕಿ ತೋರಿಸಿ ಎಂದು ನಾನು ಎಷ್ಟು ಕೇಳಿಕೊಂಡರೂ, ನೀವು ಅದನ್ನು ಹಾಕದೆ ನಾನೇ ಹಾಕಬೇಕಾಯಿತು.
  • ೪.ನೀವು ಕನ್ನಡದ ವಿಕಿಗಾಗಿ ಕೆಲಸ ಮಾಡುವವರು ತಕರಾರು ತೆಗೆವುದಕ್ಕಿಂತ ಹೆಚ್ಚಿನ ಕೆಲಸ: ಹೊಸ ಸಂಪಾದನೆ; ತಪ್ಪಾದ ಸಂಪಾದನೆಗಳನ್ನು ತಿದ್ದಿ ಸರಿಪಡಿಸುವುದು, ವರ್ಗ- ಕೊಂಡಿಗಳನ್ನು ಹಾಕುವುದು, ಪಟಕ್ಕೆ ಕೆಳಗಡಿ ಪರಿವಿಡಿ ಟೆಂಪ್ಲೇಟ್ ಹಾಕುವುದು, ಮೊದಲಾದ ವಿಕಿ-ಅಭಿವೃದ್ಧಿಯ ಕೆಲಸಗಳನ್ನು ಎಷ್ಟು ಮಾಡಿದ್ದೀರಿ. ನನ್ನ ಗಮನಕ್ಕೆ ಬಂದಿಲ್ಲ. ಮಾಡಿದ್ದರೆ ವಿಷಾದಿಸುತ್ತೇನೆ.
  • ೫.ವಿಜ್ಞಾನದ ವಿದ್ಯಾರ್ಥಿಯಾಗಿ, ತಂತ್ರಜ್ಞರಾಗಿ, ಬಹಳ ತಿಳಿದವರಾಗಿ, ಹತ್ತು-ಇಪ್ಪತು ವಿಜ್ಞಾನದ ಉತ್ತಮ ಲೇಖನ ಹಾಕಬಹುದಿತ್ತು; ಒಂದಾದರೂ ಉತ್ತಮ ವಿಜ್ಞಾನದ ಲೇಖನ ಹಾಕಿದ್ದೀರಾ?
  • ೬.ನೀವು ಹಿಂದೆ ಹೇಳಿದಂತೆ ಕತ್ತಿಬೀಸುವ ಕೆಲಸ ಮಾತ್ರಾ ಮಾಡಿ ಕನ್ನಡವಿಕಿ ಅಭಿವೃದ್ಧಪಡಿಸಲು ಆಗದು. ಕೇವಲ ಯಜಮಾನಿಕೆಯ ಚಪಲಕ್ಕಾಗಿ ನಿರ್ವಾಹಕರಾಗಿದ್ದರೆ ಕನ್ನಡ ವಿಕಿಯ ದುರದೃಷ್ಠ.
  • ೭.ಆದರೆ ಪ್ರಸ್ತುತ ವಿಷಯ - ರಾಜಕೀಯ, ಕ್ರೀಡೆ, ಪ್ರಮುಖ ಘಟನೆಗಳನ್ನು ನೀವೇ ಅಪ್‍ಡೇಟ್ ಮಾಡಿದರೆ ನನಗೆ ಸಂತೋಷ; ಆದರೆ ಅದಾವುದನ್ನೂ ಮಾಡದೆ ಬೇರೆಯವರಿಗೆ ಮಾಡಲೂ ಬಿಡದೆ, ಕನ್ನಡವಿಕಿಯನ್ನು "ಹಳಸಲು ವಿಭಾಗವಾಗಿ" ಮಾಡಿದರೆ ಆ ದೋಷ ನಿಮ್ಮದು; ಆದರೂ ನಿಮಗೆ ಚಿಂತೆ ಇದ್ದಂತೆ ಕಾಣದು. ನಿಮಗೆ ಯಜಮಾನಿಕಯೇ ಮುಖ್ಯವಾದರೆ ಮತ್ತು ಒಂದು ಪ್ರಸ್ತುತ ವಿಷಯವನ್ನಾದರೂ ಸಂಪಾದನೆ ಮಾಡಿ ತೋರಿಸುವ ಸಾಮರ್ಥ್ಯ ನಿಮಗೆ ಇಲ್ಲದಿದ್ದರೆ, ನಮ್ಮ ದೌರ್ಭಾಗ್ಯ.
  • ಆಗಲಿ ನಾನು ಅಪ್‍ಡೇಟ್ ಮಢುವ ಕೆಲಸ ನಿಲ್ಲಿಸುತ್ತೇನೆ; ಬೆದರಿಕೆಗಾಗಿ ಅಲ್ಲ, ಆದರೆ ನಿಮ್ಮೆಲ್ಲರ ಅಭಿಪ್ರಾಯ ಹಾಗಿದ್ದರೆ ನಾನೇಕೆ ಕಷ್ಟಪಡಲಿ.
  • ನನಗೆ ಬೆದರಿಕೆ ಹಾಕುತ್ತಿದ್ದೀರಿ; ನನಗೆ ನಷ್ಟವಿಲ್ಲ. ಆದರೆ ನೀವು ಕನ್ನಡ ವಿಕಿ ಅಪ್‍ಡೇಟ್ ಮಾಡಿ ತೋರಿಸಿದರೆ ಅದು ನಿಮ್ಮ ಪ್ರಾಮಾಣಿಕತೆಯ ರುಜುವಾತು.
  • Bschandrasgr (ಚರ್ಚೆ) ೧೧:೦೬, ೧೩ ಸೆಪ್ಟೆಂಬರ್ ೨೦೧೭ (UTC)
ನಮಸ್ಕಾರ Bschandrasgr ಅವರೆ ನಿಮ್ಮ ಈ ವಿಕಿಯ ಸಂಪಾದನೆಗಳು ಗಮನರ್ಹವಾಗಿದೆ ಆದರೆ ವಿಕಿಯಲ್ಲಿ ನೀವು ಉಪಯೋಗಿಸುವ ಕೆಲವೊಂದು ವಾಕ್ಯಗಳು ಸರ್ವಕಾಲಿಕವಾಗಿರ ಬೇಕೆಂದು ನಮ್ಮ ಆಶಯ, ಎಕೆಂದರೆ English Wikipedia ರೀತಿಯ ಪುಟಗಳನ್ನು ನಿತ್ಯ ಆಧುನೀಕರಿಸುವ ಸಂಪಾದಕರು ಕನ್ನಡದಲ್ಲಿ ಅನೇಕರಿಲ್ಲ ಅದ್ದರಿಂದ ದಯವಿಟ್ಟು ನೀವು ವಾಕ್ಯಗಳು ಸರ್ವಕಾಲಿಕವಾಗಿ ಉಪಯೋಗಿಸಬೇಕು ಎಂದು ನನ್ನ ಮನವಿ ಮತ್ತು ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರತಿಯೊಂದು ಕೃತಿಸ್ವಾಮ್ಯವಗುವುದಿಲ್ಲ ಸಹಾಯ:ಕೃತಿಸ್ವಾಮ್ಯ ಪರಿಶೀಲಿಸಿ ★ Anoop/ಅನೂಪ್ . © ೧೪:೦೮, ೧೩ ಸೆಪ್ಟೆಂಬರ್ ೨೦೧೭ (UTC)
  • (ಇಲ್ಲಿ ೧೦ ದಿನದಿಂದ ಪದೇ ಪದೇ ಇಂಟರ್‍ನೆಟ್ ಸಂಪರ್ಕ ಕಡಿಯುತ್ತಿದೆ. ಉತ್ತರಕೊಡಲು ಕಷ್ಟ; ತೆರೆದರೆ ಮತ್ತೆ ಉಳಿಸಲು ಬರುವುದಿಲ್ಲ.)
  • ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು; ಆದರೆ ನಾನು ಅನೇಕಬಾರಿ ಅಪ್‍ಡೇಟ್ ಮಾಡುವಾಗ ಪತ್ರಿಕಾವರದಿಯನ್ನು ಯಥಾವತ್ ತೆಗೆದುಕೊಂಡಿದ್ದು ನಿಜ. ಅದು ಪಿ.ಟಿ.ಐ. ಅಥವಾ ಸರ್ಕಾರಿ ವರದಿಯೆಂಬ ದೃಷ್ಟಿಯಿಂದ ಕಾಪಿರೈಟ್ ಸಮಸ್ಯೆ ಬರಲಾರೆಂದು ಭಾವಿಸಿದ್ದೇನೆ. ಆದರೆ ನನ್ನ ಸಂಪಾದನೆಗೆ ಉಗ್ರ ಪ್ರತಿರೋಧ ಕಂಡು ಬಂದಿದೆ. ಅದು "ವಿಧ್ವಂಸಕ ಕೃತ್ಯ", ಎನ್ನುವವರೆಗೂ ಹೋಗಿದೆ. ಕೆಲವು ಕಡೆ ವಿಷಯದ ಪ್ರಾಮುಖ್ಯತೆಗಾಗಿ ನಿಯಮ ಮೀರಿದ್ದು ನಿಜ. ಕನ್ನಡದ ವಿಕಿಯಲ್ಲಿ, ಕ್ರೀಡೆ,ರಾಜಕೀಯ ಬೆಳವಣಿಗೆ -ರಾಷ್ಟ್ರ ರಾಜ್ಯ ಚುನಾವಣೆ ವಿಶ್ವ ವಿದ್ಯಮಾನಗಳ ವಿಷಯಗಳನ್ನು ಯಾರೂ ಅಪ್‍ಡೇಟ್ ಮಾಡದೆ ಬಿಟ್ಟಿದ್ದನ್ನು ನೋಡಿ ಆ ವಿವರಗಳನ್ನು ಬಹಳಷ್ಟು ಇಂಗ್ಲಿಷ್ ವಿಕಿ ಸಹಾಯದಿಂದ ತುಂಬಿದೆ. ಆದರೆ ಕೆಲವರಿಗೆ ಏಕೋ ನನ್ನ ಕೆಲಸ ಬಹಳ ಬೇಸರವಾಗಿದೆ. ಆದ್ದರಿಂದ, ಕನ್ನಡ ಸಾಹಿತ್ಯದಲ್ಲಿ ಜೈಮಿನಿ ಕುಮಾರವ್ಯಾಸರು - ಅರ್ಥವಾಗುವುದಿಲ್ಲವೆದು ಕೆಲವರು ಹೇಳಿದ್ದರಿಂದ ಈಗ ನಾನು ಸಧ್ಯ ಜೈಮಿನಿಭಾರತದ ಅರ್ಥ ಬರೆದು ವಿಕಿಸೋರ್ಸಿಗೆ ಹಾಕುತ್ತಿದ್ದೇನೆ. ಅದು ಎಲ್ಲರಿಗೂ ಸಿಗಲಿ ಎಂದು. ಆದ್ದರಿಂದ ಇಲ್ಲಿ ಪ್ರಸ್ತುತ ಪ್ರಾಮುಖ್ಯ ಘಟನೆಗಳನ್ನು ಪರಿಣಿತರು ಸಂಪಾದನೆ ಮಾಡಲಿ. (ನನಗೆ ದೇವರು ಆಯುಷ್ಯಕೊಟ್ಟರೆ ಮುಂದೆ ನೋಡೋಣ)
  • ಪ್ರಸ್ತುತ ವಿಷಯ ಪದೇಪದೇ ಅಪ್‍ಡೇಟ್ ಮಾಡಿ ಸರಿಪಡಿಸ ಬೇಕು. ಮೇಲೆ ಇಂಗ್ಲಿಷ್‍ ವಿಕಿಯಲ್ಲಿ ಎಐಡಿಎಮ್‍ಕೆ, ಬೆಳವಣಿಗೆ ಯಲ್ಲಿ,"As things stand now, the Chief Minister Palaniswami lost his majority –etc (Now - denotes present time) ಪತ್ರಿಕಾ ವರದಿಯಂತೆ "M. K. Stalin shot off a letter to the Governor C. Vidyasagar-- ;(ಅಲಂಕಾರಿಕ ಭಾಷೆ - ಅದಕ್ಕೆ ಕನ್ನಡದಲ್ಲಿ ಬಹಳ ವಿರೋಧವಿದೆ!)ಇತ್ಯಾದಿ ಹಾಕಿದ್ದನ್ನು ಉದಾಹರಣೆ ಕೊಟ್ಟಿದ್ದೇನೆ. ಅದೇ ರೀತಿ ಇರ್‍ಮಾ ಚಂಡಮಾರತ ಪ್ರತಿ ನಿಮಿಷ ನಿಮಿಷಕ್ಕೆ "ಸಮಯ ಮತ್ತು ದಿನಾಂಕ" ಹಾಕಿ ಸುದ್ದಿ ಹಾಕಿದ್ದಾರೆ; ಅದೂ ಕೂಡಾ ವರ್ತಮಾನಕಾಲದಲ್ಲಿದೆ; ನಂತರ ಅವನ್ನು ವಿಕಿ-ವಿಶ್ವಕೋಶಕ್ಕೆ ಅನುಗುಣವಾಗಿ ಅಪ್‍ಡೇಟ್ ಮಾಡಬೇಕಾಗುವುದು. ಈಗ ನೆಡೆಯುತ್ತಿರುವ ಘಟನೆಗೆ ಎರಡು ದಿನ/ ವಾರದನಂತರ ಭೂತಕಾಲಕ್ಕೆ ಸರಿಪಡಿಸಬೇಕು. ಈ ಬಗೆಯ ಸಂಪಾದನೆಗೆ ಅವಕಾಶವೇ ಇಲ್ಲವೆಂದರೆ ಏನು ಮಾಡವುದು. ಆಗಲಿ ಯಾರಾದರು ಅಪ್ಡೇಟ್ ಮಾಡಲಿ. ನನ್ನನ್ನು ವಿಕಿಯ ವಿಧ್ವಂಸಕನನ್ನಾಗಿ ಮಾಡಿದ್ದಾರೆ!! ಏನು ಮಾಡಲಿ! ನಾನು ಕನ್ನಡದ ಆಭಿಮಾನದಿಂದ ಇಲ್ಲಿ ಅವಕಾಶವಿರುವುದು ನೋಡಿ ಉಪಯೋಗಿಸಿಕೊಂಡೆ. ಮುದ್ರಣವಾದ ಎಷ್ಟೋ ಉತ್ತಮ ವಿಷಯಗಳು ಮೂಲೆಗುಂಪಾಗಿಬಿದ್ದಿವ. ಇಲ್ಲಿ ಸುಲಭವಾಗಿ ಎಲ್ಲರಿಗೆ ವಿಶ್ವಾದ್ಯಂತ ಸಿಗುವುದು.
  • ಗೌರಿಯವರ ಕೊಲೆ ಪತ್ತೆ ವಿಷಯ ಬೆಳವಣಿಗೆ ಕಂಡರೆ, ಅಪ್‍ಡೇಟ್ ಮಾಡಿ, ಕೊನೆಯ ವಾಕ್ಯ ಸರಿಪಡಿಸಿ. ನಿಮ್ಮವ /ನಮಸ್ತೇ; Bschandrasgr (ಚರ್ಚೆ) ೧೬:೪೫, ೧೩ ಸೆಪ್ಟೆಂಬರ್ ೨೦೧೭ (UTC)
Return to "ಗೌರಿ ಲಂಕೇಶ್‌" page.