ಚರ್ಚೆಪುಟ:ಕರ್ನಾಟಕ ರಾಜ್ಯದ ನಿಗಮ ಮಂಡಳಿಗಳ ನೇಮಕ ೨೦೧೬

ಈ ತರಹದ ಪುಟಗಳು ಕನ್ನಡ ವಿಕಿಪೀಡಿಯದಲ್ಲಿ ಆವಶ್ಯಕತೆ ಇದೆಯೇ...Sangappadyamani (ಚರ್ಚೆ) ೦೫:೦೭, ೯ ಆಗಸ್ಟ್ ೨೦೧೭ (UTC)

  • ಕರ್ನಾಟಕದ ಸಾಂಸ್ಕೃತಿಕ ಬೆಳವಣಿಗೆಗೆ ಸಹಾಕವಾದ ಸಂಸ್ಥೆಗಳ ವಿವರ ಬೇಡವೇ? ಅವುಗಳ ಕಾರ್ಯ ಚಟುವಟಿಕೆಗಳು ಸಿಕ್ಕಿದರೆ ಇನ್ನೂ ಒಳ್ಳೆಯದೆಂದು ನನ್ನ ಭಾವನೆ.Bschandrasgr (ಚರ್ಚೆ) ೦೮:೨೪, ೯ ಆಗಸ್ಟ್ ೨೦೧೭ (UTC)

ನನ್ನ ಅಭಿಪ್ರಾಯದಲ್ಲಿ ಇಲ್ಲ. --ಗೋಪಾಲಕೃಷ್ಣ (ಚರ್ಚೆ) ೦೯:೧೫, ೯ ಆಗಸ್ಟ್ ೨೦೧೭ (UTC)

ನನಗೆ ಕರ್ನಾಟಕದಲ್ಲಿ ಸಾಹಿತ್ಯ ಸಂಸ್ಕೃತಿಗೆ ಸಂಬಂಧಪಟ್ಟ ಎಷ್ಟು ಸಂಸ್ಥೆಗಳಿವೆ?, ಅವುಗಳ ಮುಖ್ಯಸ್ಥರು ಯಾರು? ಅವು ಏನುಮಾಡುತ್ತಿವೆ ಎಂದು ತೀಳಿಯಬೇಕಿತ್ತು, ಹಾಗೆಯೇ ಕನ್ನಡದಲ್ಲಿ ಆಸಕ್ತಿ ಇರುವವರಿಗೂ ಇರಬಹುದೆಂದು ಭಾವಿಸುತ್ತೇನೆ, ಪವನಜರು ನಿನ್ನೆಯಷ್ಟೇ, 'ಅಂತೂ ಅಕಾಡಮಿಗೆ ನೇಮಕವಾಯಿತೆಂದು ಟ್ವೀಟ್ ಮಾಡಿದ್ದಾರೆ'; ಹಾಗೆ ಅನೇಕರಿಗೆ ಅದು ಆಸಕ್ತಿವಿಷಯ ಅದರ ಮಾಹಿತಿ ಇದ್ದರೆ ಒಳ್ಳೆಯುದು, ಈ ಮಾಹಿತಿ ಸರ್ಕಾರಿ ಕಡತ ಬಿಟ್ಟರೆ ಇನ್ನೆಲ್ಲೂ ಸಿಗದು. ಕನ್ನಡಿಗರಿಗೆ ಅಗತ್ಯ ಮಾಹಿತಿ ಕೊಡುವಕೆಲಸ ವಿಕಿಗೆ ಬೇಡವೇ? ಕೇಂದ್ರಸರ್ಕಾರದ ಈ ಬಗೆಯ ಮಾಹಿತಿಗಳನ್ನು ಇಂಗ್ಲಿಷ್ ನಲ್ಲಿ ನೋಡಬಹುದು, ನಮ್ಮ ರಾಜ್ಯದ ಬಗ್ಗೆ ಇದ್ದರೆ ತಪ್ಪೇನು?Bschandrasgr (ಚರ್ಚೆ) ೧೧:೪೨, ೯ ಆಗಸ್ಟ್ ೨೦೧೭ (UTC)

ಸರ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು

ನಿಮ್ಮ ಲೇಖನ ಓದಿದ ಮೇಲೆ ನನಗೆ ಈ ಕೆಳಗಿನ ಮಾಹಿತಿ ಸಿಗಲಿಲ್ಲ ಆದ್ದರಿಂದ ಪುಟದಲ್ಲಿ ಪ್ರಶ್ನಿಸಿದ್ದೇನೆ.

  1. ಕರ್ನಾಟಕ ರಾಜ್ಯ ಸರಕಾರಿ ಒಡೆತನದ ನಿಗಮ ಮಂಡಳಿಗಳು ಮತ್ತು ನೇಮಕ ಯಾವ ಸಂಸ್ಥೆ ನಡೆಸುತ್ತದೆ ಮತ್ತು ಯಾವಾಗ ಆಧಿಕಾರ ಕೊನೆಗೊಳ್ಳುತ್ತದೆ.
  2. ಅಲ್ಲಿರುವ ಮಂಡಳಿಗಳ ವಿಕಿ ಲಿಂಕ್ ಅಥವಾ ನ್ಯೂಸ್ (ಹೆಚ್ಚಿನ ಮಾಹಿತಿ ಇಲ್ಲ). ಉದಾ ಕರ್ನಾಟಕ ವಿದ್ಯುತ್ ಕಾರ್ಖಾನೆ ಅಥವಾ www.kavika.co.in/, ಪೂರ್ತಿ ಮಾಹಿತಿ ಓದುಗರು ನಿರೀಕ್ಷಿಸುತ್ತಾರೆ .
  3. ಲೇಖನದಲ್ಲಿರುವ ಮಾಹಿತಿ ನ್ಯೂಸ್ ಪೇಪರ್ ನಲ್ಲಿರುವ ಮಾಹಿತಿಯನ್ನು ಆದೆ ರೀತಿ ಹಾಕಲಾಗಿದೆ. ಮತ್ತು ಒಂದು ದಿನದ ಸುದ್ದಿಯನ್ನು ಹೊಂದಿದೆ.
  • ಈ ಚರ್ಚೆ ಕನ್ನಡ ವಿಕಿಪೀಡಿಯಾದ ಗುಣಮಟ್ಟದ ಉತ್ತಮ ಗೊಳಿಸುವದು ಹೊರತು ಬೇರೆ ಯಾವ ಉದ್ದೇಶ ಹೊಂದಿರುವದಿಲ್ಲ.ಧನ್ಯವಾದಗಳು Sangappadyamani (ಚರ್ಚೆ) ೧೩:೧೮, ೯ ಆಗಸ್ಟ್ ೨೦೧೭ (UTC)

ಉತ್ತರ ಬದಲಾಯಿಸಿ

  • ಮಾನ್ಯರೇ, ಈ ನೇಮಕಾತಿ ಮತ್ತು ಇತರೆ ವಿವರಗಳೆಲ್ಲಾ ಸರ್ಕಾರಿ ಗೆಜೆಟ್ ನಲ್ಲಿ ಪ್ರಕಟವಾಗುತ್ತೆ. ಹಾಗೆಯೇ ಪ್ರಶಸ್ತಿ ಮೊದಲಾದವು. ಯಾವುದೇ ಅಧಿಕೃತ ಸರ್ಕಾರಿ ಪ್ರಕಟಣೆ ಸಾರ್ಜನಿಕರಿಗಾಗಿ ಸರ್ಕಾರಿ ಪತ್ರದಲ್ಲಿ ಪ್ರಕಟವಾದುದನ್ನು ಅಥವಾ ಪ್ರಕಟವಾಗುವುದಕ್ಕೆ ಮೊದಲೇ ಪತ್ರಿಕೆಯಲ್ಲಿ ಪ್ರಕಟವಾಗುತ್ತೆ. ಹೀಗೆ ಗೆಜೆಟ್ ನಲ್ಲಿ ಪ್ರಕಟವಾಗುವ ಪ್ರಕಟಭೆಗಳು ಸಾರ್ಜನಿಕ ಆಸಕ್ತಿಯದಾಗಿದ್ದರೆ, ಅಥವಾ ಸಾರ್ವಜನಿಕಕ್ಕೆ ಉಪಯೋಗ ವಾಗುತ್ತಿದ್ದರೆ ವಿಕಿಯಲ್ಲಿ ಪ್ರಕಟಿಸಿದರೆ ತಪ್ಪಿಲ್ಲವೆಂದು ತಿಳಿಯುತ್ತೇನೆ. ಕಾಪಿ ರೈಟ್ ವಿಚಾರದಲ್ಲಿ ಬಹಳತಪ್ಪು ತಿಳುವಳಿಕೆ ಇದೆ, ಸರ್ಕಾರಿಗೆಜೆಟ್ ನಲ್ಲಿ ಪ್ರಕಟವಾಗುವ ಸಾರ್ವಜನಿಕ ಹಕ್ಕಿನ ಮಾಹಿತಿಗಳಿಗೆ ಯಾರಾದರೂ ಪ್ರಕಟಿಸಿ ತಮ್ಮ ಕಾಪಿರೈಟ್ ಹಕ್ಕು ಇದೆ ಎಂದು ಹೇಳು ಸಾದ್ಯವೇ!? ಹಾಗೆ ನೀವು ಹಾಕಿದ ಪಿಎಸ್‌ಎಲ್‌ವಿ–ಸಿ40‎ ಇದರ ಎಲ್ಲಾ ಮಾಹಿತಿಗಳಿಗೆ ಇಸ್ರೊದವರು ತಮ್ಮ ಕಾಪಿ ರೈಟ್ ಹಾಕಿಕೊಂಡಿದ್ದಾರೆ. ಸಾರ್ಜನಿಕರಿಗಾಗಿ ಬಿಡುಗಡೆಮಾಡಿ ಪತ್ರಿಕೆಗಳಿಗೆ ಕೊಟ್ಟಿದ್ದಾರೆ. ಆ ಮಾಹಿತಿಗಳ ಮೇಲೆ ಮತ್ತೆ ಪತ್ರಿಕೆಗಳಿಗೆ ಅವರು ಪ್ರಕಟಿಸದ ಮಾತ್ರಕ್ಕೆ ಕಾಪಿರೈಟ್ ಬರುವುದೇ - ಖಂಡಿತಾ ಬರಲಾರದು. ಪತ್ರಿಕೆ ಪ್ರಕಟಿಸಿದರೆ ಇಸ್ರೊ ಹಕ್ಕು ಹೋಗುತ್ತದೆಯೇ? ಅದೇ ರೀತಿ ನಾಸಾ ಮತ್ತು ಇತರೆಯವರದು, ನಾನು ಈ ಬಗ್ಗೆ ತಜ್ಞರ ಲೇಖನ ನೋಡಿದ್ದೇನೆ. ಪತ್ರಿಕೆ ಪ್ರಕಟಿಸಿದರೆ ನ್ಯಾಯಾಲಯದ ತೀರ್ಮಾನ ಪ್ರಕಟಿಸಿದರೆ ಅದರ ಕಾಪಿರೈಟ್ ಪತ್ರಿಕೆಯದು ಎಂದರೆ ಅದಕ್ಕಿಂತ ಜಾಣರ ದಡ್ಡತನ ಬೇರೆ ಇದೆಯಯೇ? ನಿಮ್ಮ ಪಿಎಸ್‌ಎಲ್‌ವಿ–ಸಿ40‎ ಪುಟದಲ್ಲಿ ಮಾಹಿತಿ ತೀರಾ ಕಡಿಮೆ ಇದೆ. ನೀವು ಹಾಕಿದ ಮಾಹಿತಿ ಮತ್ತು ಉಳಿದ ಪತ್ರಿಕೆಯಲ್ಲಿ ಹಾಕಿದ ಮಾಹಿತಿಗೆ ಇಸ್ರೊ ಕಾಪಿರೈಟ್ ಹಾಕಿಕೊಂಡಿದೆ. ಗಮನಿಸಿ. ಈ ಬಗ್ಗೆ ನಾನು ಅರರಳಿಕಟ್ಟೆ ಪುಟದಲ್ಲಿ ವಿವರಿಸಿ ಬರೆಯಬೇಕೆಂದಿದ್ದೇನೆ. "ವಿಕಿಯ ಲೇಖನಗಳು ಎಲ್ಲವೂ ಒಂದೇ ಬಗೆಯ ಮಾದರಿ ಹೊಂದಿರುವುದಿಲ್ಲ -ಇಂಗ್ಲಿಷ್ ವಿಭಾಗದಲ್ಲೇ ನೋಡಿ".

ಅಚ್ಚಾದ ವಿಶ್ವಕೋಶಗಳಲ್ಲಿ ಎಲ್ಲಾ ಹಿಂದಿನ ವಿಷಯ ಇರುತ್ತೆ. ಆದರೆ ಇದರಲ್ಲಿ ಪ್ರಸ್ತುತ ವಿಷಯವೂ ವರ್ತಮಾನ ಕಾಲದಲ್ಲಿ ಇರುವುದು - ಅದನ್ನು ನಂತರ ಭೂತಕಾಲಕ್ಕೆ ಬದಲಾಯಿಸಬೇಕು. ಈ ವಿಚಾರವನ್ನು ಇಲ್ಲಿ ನಿರ್ವಾಕರಾಗಿರುವವರು ತಿಳಿದುಕೊಳ್ಳದೆ ವಿನಾಕಾರಣ ತಕರಾರು ಮಾಡುತ್ತಾರೆ. ಅವರಿಗೆ ಒಂದೇ ಒಂದು ಪ್ರಸ್ತುತ ಲೇಖನ ತಯಾರಿಸಿ ಗೊತ್ತಿಲ್ಲ. ಆದರೆ ಅಹಂಕಾರಕ್ಕೆ ಕಡಿಮೆ ಇಲ್ಲ. ಉದಾಹರಣೆಗೆ ಪಿಎಸ್‌ಎಲ್‌ವಿ–ಸಿ40‎ ಎಲ್ಲಾ ಪತ್ರಿಕೆಯವರೂ ಹಾಕಿದ್ದಾರೆ. ಆದರೆ ಕಾಪಿ ರೈಟ್ 'ಇಸ್ರೊ' ದ್ದು. ನಿಮ್ಮನಾಯಕರಿಗೆ ತಿಳಿಸಿ. ಅದಕ್ಕೆ ಉಳಿದ ವಿವರ ಹಾಕಿದರೆ ತಪ್ಪಲ್ಲ.ನಿಮ್ಮವ.Bschandrasgr (ಚರ್ಚೆ) ೧೭:೩೭, ೧೪ ಜನವರಿ ೨೦೧೮ (UTC)

ನಮಸ್ಕಾರ ಸರ್.
ನೀವು ಪತ್ರಿಕೆಗಳಿಂದ ವಿಷಯ ಸೇರಿಸಿರುವದಕ್ಕೆ ಯಾರ ಅಭ್ಯಂತರವು ಇಲ್ಲ.ಆ ವಿಷಯವನ್ನು ವಿಕಿಪೀಡಿಯ ಶೈಲಿಯಲ್ಲಿ ಮಾರ್ಪಾಡು ಮಾಡಿ ಹಾಕಲು ವಿನಂತಿ.
ಉದಾಹರಣೆಗೆ.ತುಳುನಾಡಿನ ಕನ್ನಡಿಗ ಭೂತಗಳು ಲೇಖನವನ್ನು ಪತ್ರಿಕೆಯಿಂದ ನೇರವಾಗಿ ಸ್ವಲ್ಪನು ಮಾರ್ಪಾಡು ಮಾಡದೆ ಕನ್ನಡ ವಿಕಿಪೀಡಿಯದಲ್ಲಿ

ಯಾರೋ ಹಾಕಿದ್ದರು.ಇದನ್ನು ನೋಡಿದ ಲೇಖಕರು ಕನ್ನಡ ವಿಕಿಪೀಡಿಯದ ಬಗ್ಗೆ facebook ನಲ್ಲಿ ನಕರಾತ್ಮಕವಾಗಿ ಬಿಂಬಿಸಿದ್ದರು.ಹಾಗೆ ಆಗದಿರಲಿ ಎಂಬುವದು ನಮ್ಮ ಉದ್ದೇಶ ವಿನಹ ಬೇರೆ ಏನು ಇಲ್ಲ ಎಂಬುವದು ಈ ಮೂಲಕ ತಿಳಿಯಪಡಿಸುತ್ತೇನೆ.ಧನ್ಯವಾದಗಳು.__Sangappadyamani (ಚರ್ಚೆ) ೧೮:೨೫, ೧೪ ಜನವರಿ ೨೦೧೮ (UTC)

ಉತ್ತರ! ಬದಲಾಯಿಸಿ

  • ಮಿತ್ರರೇ, ತುಳುನಾಡಿನ ಕನ್ನಡಿಗ ಭೂತಗಳು ಲೇಖನವನ್ನು ವಿಕಿಗೆ ಹಾಕಿದವರು ಯಾರು ಗೊತ್ತೇ/!! ತಕರಾರು ಮಾಡಿದ ಅದನ್ನು ಬರೆದ ಲೇಖಕರೇ! ಅವರಿಗೆ ಅದು ಮರೆತು -ತಕರಾರು ತೆಗೆದಿದ್ದಾರೆ. ಪವನಜ ಅವರು ಅವರಿಗೆ ಅದನ್ನು ಹೇಳಿದರೂ ತಿಳಿದುಕೊಳ್ಳಲಿಲ್ಲ, ವಿನಯದಿಂದ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ವಾಸ್ತವವಾಗಿ ಪತ್ರಿಕೆಯಿಂದ ಸಂಭಾವನೆ ಪಡೆದ ಮೇಲೆ ಅದರ ಕಾಪಿ ರೈಟು ಪತ್ರಿಕೆಗೆ ಹೋಗುತ್ತದೆ. ಆದರೆ ಲೇಖನದಲ್ಲಿ ಲೇಖಕರು, ಪ್ರಕಟಣೆಯಾದರೂ ಕಾಪಿರೈಟು ತಮ್ಮದೇ ಇರುವುದೆಂದು ಷರತ್ತು ಹಾಕಿದ್ದರೆ ಮಾತ್ರಾ ಅವರದಿರುತ್ತದೆ. ಆ ಲೇಖಕರು ಬೇರೆ ಸಂಶೋದನಾ ಗ್ರಂಥದಿಂದ ನಕಲು ಮಾಡಿದ ಲೇಖನಕ್ಕೆ ಅವರು ಕಾಪಿರೈಟು ಹಾಕಿಕೊಳ್ಳಬಹುದೇ?/Bschandrasgr (ಚರ್ಚೆ) ೦೫:೦೪, ೧೫ ಜನವರಿ ೨೦೧೮ (UTC)
Return to "ಕರ್ನಾಟಕ ರಾಜ್ಯದ ನಿಗಮ ಮಂಡಳಿಗಳ ನೇಮಕ ೨೦೧೬" page.