ಚರಿಟಾನ್ ಮಿಮ್

ಗ್ರೀಕ್ ನಾಟಕ



ಚರಿಟಾನ್ ಮಿಮ್ ಒ೦ದು ಗ್ರೀಕ್ ನಾಟಕ. ಪಪೈರಸ್ ಒಕ್ಸೈರಿಂಚಸ್ 413 ಹಸ್ತಪ್ರತಿಯಲ್ಲಿ ಇರುವ ಒ೦ದು ಪ್ರಹಸನ ಅಥವ ಅಣಕು ನಾಟಕ. ಇದು ಸುಮಾರು ಎರಡನೆಯ ಶತಮಾನಕ್ಕೆ ಸಂಬಂಧಿಸಿದ್ದು ಮತ್ತು ಈ ನಾಟಕವನ್ನು ಈಜಿಪ್ಟ್ನಲ್ಲಿ ನಡೆಸಲಾಗುತ್ತಿತ್ತು.

https://en.m.wikipedia.org/wiki/Chariton

ಕಥಾವಸ್ತು

ಬದಲಾಯಿಸಿ

ಚರಿಟಾನ್ , ಒಬ್ಬಳು ಸುಂದರ ಗ್ರೀಕ್ ಹುಡುಗಿ. ಇವಳನ್ನು ಭಾರತದ ಕರಾವಳಿ ಸಾಮ್ರಾಜ್ಯದ ಒಬ್ಬ ರಾಜನಿಗೆ ಮಾರಾಟಮಾಡಲಾಗುತ್ತದೆ. ರಾಜ ಅವಳನ್ನು ಚ೦ದ್ರದೇವತೆಯ ದೇವಸ್ಥಾನದಲ್ಲಿ ಇರಿಸುತ್ತಾನೆ. ಅವಳನ್ನು ಕಾಪಾಡಲು , ಅವಳ ಸಹೋದರ ಮತ್ತು ಒಬ್ಬ ವಿದೂಷಕ ಒಳಗೊ೦ಡ ಗು೦ಪೊ೦ದು ಹಿ೦ದುಮಹಾಸಾಗರ ದಾಟಿ ಬರುತ್ತದೆ. ಚರಿಟಾನ್ ,ಅವಳ ಸಹೋದರ ಮತ್ತು ವಿದೂಷಕನು ಅಲ್ಲಿ೦ದ ತಪ್ಪಿಸಿಕೊಳ್ಳುವ ಉಪಾಯ ಮಾಡುತ್ತಿರುವಾಗ , ಬೇಟೆಯಿ೦ದ ಹಿಂದಿರುತ್ತಿದ್ದ ಭಾರತೀಯ ಮಹಿಳೆಯರ ಗುಂಪು ಅವರನ್ನು ಎದುರಾಗುತ್ತದೆ. ವಿದೂಷಕನು ತನ್ನ ಹೂಸಿನಿ೦ದ ಗ್ರೀಕರನ್ನು ಪಾರುಮಾಡುತ್ತಾನೆ. ಅವನು ಚರಿಟಾನ್ ಗೆ ದೇವಸ್ಥಾನದ ಆಭರಣಗಳನ್ನು ತರಲು ಹೇಳಿದಾಗ , ಕಳ್ಳತನ ಮಾಡಿದರೆ ದೇವತೆ ಕೋಪಗೊಳ್ಳುತ್ತಾಳೆ ಎಂದು ಅವರು ವಾದಿಸುತ್ತಾಳೆ. ಸಹೋದರನ ಸಲಹೆಯ ಮೇರೆಗೆ, ಗ್ರೀಕರು ರಾಜನಿಗೆ ಮತ್ತು ಅವರ ಪ್ರಜೆಗಳಿಗೆ ಮದ್ಯ ಕುಡಿಸಿ ಅವರ ಅಮಲೇರಿಸುತ್ತಾರೆ. ನ೦ತರ ರಾಜನೂ ಒಳಗೂಡಿ ಎಲ್ಲರು ದೇವತೆಗೆ ನೃತ್ಯ ಮಾಡುತ್ತಾರೆ. ನ೦ತರ ಅಮಲೇರಿದ ರಾಜನನ್ನು ಕಟ್ಟಿಹಾಕುವ ಉಪಾಯ ಮಾಡುತ್ತಾರೆ. ನಾಟಕದ ಕೊನೆಯ ಭಾಗ ಕಳೆದುಹೊಗಿದೆ, ಆದರೆ ಗ್ರೀಕರು ತಮ್ಮ ಹಡಗಿಗೆ ಪರಾರಿಯಾಗುತ್ತಾರೆ.

ಭಾರತೀಯ ಭಾಷಾ ಸಂಭಾಷಣೆ

ಬದಲಾಯಿಸಿ

ಈ ನಾಟಕದ ವೈಶಿಶ್ಃಟ್ಯವೆ೦ದರೆ , ಇದರಲ್ಲಿ ಹಲವಾರು ಪಾತ್ರದಾರಿಗಳು ಒ೦ದು ಅಜ್ಞಾತ ಭಾಷೆಯಲ್ಲಿ ಮಾತನಾಡುತ್ತಾರೆ. ಈ ಭಾಷೆ ಭಾಗಶಃ ಅಥವಾ ಸಂಪೂರ್ಣವಾಗಿ ದಕ್ಷಿಣ ಭಾರತದ್ರಾವಿಡ ಭಾಷೆಯನ್ನು ಹೋಲುತ್ತದೆ. ಸಮಕಾಲೀನ ಪ್ರೇಕ್ಷಕರಿಗೆ ಈ ಭಾಷೆ ಅರ್ಥವಾಗದಿದ್ದ ಕಾರಣದಿ೦ದ ನಾಟಕವನ್ನು ವಿನೋದವಾಗಿಸಲು ಅಜ್ಞಾತ ಭಾಷೆ ಸ೦ಭಾಷಣೆ ಸೇರಿಸಲಾಯಿತು.

ದ್ರಾವಿಡ ಭಾಷೆಗಳ ಉತ್ತಮ ಜ್ಣಾನ ಹೊ೦ದಿದ್ದ ಜೆರ್ಮನ್ ಭಾರತಜ್ಞ ಡಾ. ಇ. ಹಲ್ಟ್ಜ್ ಎ೦ಬುವರು , ಈ ಪದಗಳು ಪ್ರಾಚೀನ ಕನ್ನಡವನ್ನು ಹೋಲುತ್ತದೆ ಎ೦ದು ಸೂಚಿಸಿದರು.

ಭಾರತೀಯ ವಿದ್ವಾಂಸರಾದ ಶಿವಪ್ರಸಾದ್ ರೈ ಮತ್ತು ಯು. ಪದ್ಮನಾಭ ಉಪಾಧ್ಯಾಯ ಈ ಭಾಷೆ ತುಳು ಕೂಡ ಆಗಿರಬಹುದೆ೦ದು ಹೇಳುತ್ತಾರೆ. ಇನ್ನು ಕೆಲವರು ಈ ಭಾಷೆ ಮಲಯಾಳ೦ ಅಥವಾ ಸ೦ಸ್ಕೃತ ಆಗಿರಬಹುದೆ೦ದು ಕಲ್ಪಿಸಿದ್ದಾರೆ.

ಗ್ರೀಕ್ ನಾಟಕ ಚರಿಟಾನ್ ಮಿಮ್ ನ ಕನ್ನಡ ಪದಗಳ ಅನುವಾದಿತ

ಬದಲಾಯಿಸಿ

ಕೆಳಗಿರುವ ಪದಗಳು ಗ್ರೀಕ್ ನಾಟಕ ಚರಿಟಾನ್ ಮಿಮ್ ನ ಕನ್ನಡ ಪದಗಳ ಅನುವಾದಿತ ರೂಪ. ಯಾರಾದರು ಇವುಗಳನ್ನು ಪರಿಶೀಲಿಸಬಹುದು ಮತ್ತು ಬದಲಾಯಿಸಬಹುದು.

ತಾಳೇವ ನಾವು ಲಲನೆ ಇಲ್ಲೆ ತಾಳಿ ಅಂತಾಳೆ ಲಲನೆ ಆಕೋ ತಕೋ ಸಣಬ ಮೀಯೋ ಸರ್ವೇವೆಶಪತಿಯಾ ಅಲ್ಲಾ ಎಂಮ್ಮಕ್ಕ ಪಾಪನಾಶಿನಿ ಹೋರಟೆ ಮೀಯೊಣ ಬರ್ತಿ ಈಸು ಇಷ್ಟ ಪ್ಪೊಯಿರಿ ಮೆಲ್ಲ ಕರಕೆ ಭಾರತಿ ಇ ಬೇರೆ ಕೊಂಚ ಈಯಡ (ಕೊಡೊ) ಮುನ್ನ ಬೆತ್ತಿರಿ (ಇಟ್ಟಿರಿ) ಏಕೋ ? ಭಾಗ ತೆಗೊ! ತಮ್ಮ ಈಸೊ ಬೇರೆ ಈಯಲ ಇರದೆ ಪೊಗುಂ ಎನಿಸಿ ಬೆಟ್ಟಿರೇಕೆ ಅದಮ ಊಟಕ್ಕೆಣಿಸಿ ಅಪೇಕ್ಷ್ಯೆ ಭಯ ಬಿರ್ಡು (ಬಿಡು) ಇಸಿಕೊ ತುಸು ಕೊಡು ತುಸು ಜೆ (ಹೆ) ಒಪ್ಪತೆ ಇಸೆ(ಇತು - ಇದು) ಕೊಲ್ ಮೊಸದ ಇಸು ಕಾಲ ಮಾಗದ ಪಾಪ ತೀರಾಗಮೆ ತೆಗೋ ಒಮ್ಮೆ ನಿಗಲ್ ಏಕೆ ಎದ್ರೊ ಇತು ಬೆಳ್ಳ ದ್ರಾಚ (ದ್ರಾಕ್ಶ) ವಪ್ಪ ತೀರಾ ಗಮೆ ದ್ರಾಚ ಅಂದರೆ ಮಾನ ಭವ ಓಳಿತು ಈ ಕಾಲ ಉಂಬೇಯ ಪಲ ತೆಗೋ ಒಲ್ಡು (ಹೊರಡು) ಆ ಪುಳಿಯಕ್ಕು ಸಾರ ಚೊರುತ ಆ ನೋರ್ವ ತೋರ್ತ ಆತ ಅನ್ನ ಈಯ ನೋಕ್ಶಿಸಿ ದೇಶ ಬಿರ್ತು (ಬಿಟ್ಟು) ಪಲ ತೆಕೊ ಒಲ್ಡು (ಹೊರಡು) ಶೇಶ ರಕ್ಶಿಸ್ವ ದೊಶ ತೀರು ಓ ಉಮೇಶ್ವರ ಸಂಸಾರದಾರ ಈರ್ಯವೋದ ಮಾರ್ದಮ ಅರಿತರ್ ಮಾಯದ ಮೋಯಮ ನ ಆಯದೋತ್ತ ಮೌನ ಆರಿದೆವಮ್ಮ ಮಲ್ಪೆ ನಾಯಕ ವರ ಕೊ ಂಕೊಣಿ ಕರಕೊ ಅಬ್ಬ ಹಾ ಬೇಡ ಬಲಿಗೀಡು ಅಂಬ ಅಬ್ಬ ಅವನು ಪನ ಉಂಬ ರೆತ್ತಿಕಿ ದೆ ಮನ ಉಂಬ ವೆತ್ತ ಅವೇನಿ ಪರಾ ಕೋಂಬ ರೆತ್ತಿಕದೆ ಮನ ಉಂಬರೆತ್ತ ಅವೇನಿ ಒಳಿಸಾದಿಹ ಪರಾದಪ್ಪಿಸಿಕೊ ಒಪ್ಪಿಸಿ ಕೊದೆಮ್ಮನರ ಎಮ್ಮನರಿದು ಒಪ್ಪತೆ? ಒರಗಿಸು