ಚಂಬಾ
ಚಂಬಾ ಭಾರತದ ಹಿಮಾಚಲ ಪ್ರದೇಶ ರಾಜ್ಯದ ಚಂಬಾ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಈ ಪಟ್ಟಣವು ರಾವಿ ನದಿಯ ದಡದಲ್ಲಿ ಸ್ಥಿತವಾಗಿದೆ.
ಈ ಪಟ್ಟಣವು ಹಲವಾರು ದೇವಾಲಯಗಳು ಮತ್ತು ಅರಮನೆಗಳನ್ನು ಹೊಂದಿದೆ,[೧][೨] ಮತ್ತು ಎರಡು ಜನಪ್ರಿಯ ಜಾತ್ರೆಗಳಾದ "ಸೂಹಿ ಮಾತಾ ಮೇಳ" ಮತ್ತು "ಮಿಂಜಾರ್ ಮೇಳ" ಗಳನ್ನು ಆಯೋಜಿಸುತ್ತದೆ, ಇದು ಹಲವಾರು ದಿನಗಳವರೆಗೆ ಸಂಗೀತ ಮತ್ತು ನೃತ್ಯಗಳೊಂದಿಗೆ ನಡೆಯುತ್ತದೆ. ಚಂಬಾ ತನ್ನ ಕಲೆ ಮತ್ತು ಕುಶಲಕರ್ಮಗಳಿಗೆ, ವಿಶೇಷವಾಗಿ ಪಹಾಡಿ ವರ್ಣಚಿತ್ರಗಳಿಗೆ, ಮತ್ತು ಅದರ ಕರಕುಶಲ ವಸ್ತುಗಳು ಹಾಗೂ ಜವಳಿಗೆ ಹೆಸರುವಾಸಿಯಾಗಿದೆ. ಪಹಾಡಿ ಚಿತ್ರಕಲೆ 17 ಮತ್ತು 19 ನೇ ಶತಮಾನದ ನಡುವೆ ಉತ್ತರ ಭಾರತದ ಹಿಲ್ ಕಿಂಗ್‌ಡಮ್‌ಗಳಲ್ಲಿ ಹುಟ್ಟಿಕೊಂಡಿತು.[೩][೪][೫]
ಹೆಗ್ಗುರುತುಗಳು ಮತ್ತು ನಗರದೃಶ್ಯ
ಬದಲಾಯಿಸಿ1846 ಕ್ಕೆ ಮೊದಲು ನಿರ್ಮಿತವಾದ ಸ್ಮಾರಕಗಳು
ಬದಲಾಯಿಸಿಚಂಪಾವತಿ ದೇವಸ್ಥಾನ
ಬದಲಾಯಿಸಿಈ ದೇವಾಲಯವನ್ನು ರಾಜಾ ಸಾಹಿಲ್ ವರ್ಮನ್ ತನ್ನ ಮಗಳು ಚಂಪಾವತಿಯ ನೆನಪಿಗಾಗಿ ನಿರ್ಮಿಸಿದ. ಇದನ್ನು ಶಿಖರ ಶೈಲಿಯಲ್ಲಿ ಸಂಕೀರ್ಣವಾದ ಕಲ್ಲಿನ ಕೆತ್ತನೆಗಳೊಂದಿಗೆ ನಿರ್ಮಿಸಲಾಗಿದೆ. ಇದು ಚಕ್ರದ ಮೇಲ್ಛಾವಣಿಯನ್ನು ಹೊಂದಿದೆ ಮತ್ತು ಲಕ್ಷ್ಮಿ ನಾರಾಯಣ ದೇವಾಲಯದಂತೆ ದೊಡ್ಡದಾಗಿದೆ. ದೇವಸ್ಥಾನದಲ್ಲಿ ಮಹಿಷಾಸುರಮರ್ದಿನಿ (ದುರ್ಗಾ) ದೇವಿಯ ವಿಗ್ರಹವನ್ನು ಪೂಜಿಸಲಾಗುತ್ತದೆ. ದೇವಾಲಯದ ಗೋಡೆಗಳು ಸೊಗಸಾದ ಕಲ್ಲಿನ ಶಿಲ್ಪಗಳಿಂದ ತುಂಬಿವೆ. ಅದರ ಐತಿಹಾಸಿಕ ಮತ್ತು ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯ ಕಾರಣದಿಂದಾಗಿ, ಈ ದೇವಾಲಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯು ನಿರ್ವಹಿಸುತ್ತದೆ.[೨][೬][೭]
ಬನ್ನಿ ಮಾತಾ ದೇವಾಲಯ
ಬದಲಾಯಿಸಿಬನ್ನಿ ಮಾತಾ ದೇವಾಲಯವನ್ನು ಮಹಾಕಾಳಿ ಬನ್ನಿ ಮಾತಾ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯವು 8,500 ಅಡಿ ಎತ್ತರದಲ್ಲಿದ್ದು ಚಂಬಾ ಕಣಿವೆಯ ಪೀರ್ ಪಂಜಾಲ್ ಪರ್ವತಶ್ರೇಣಿಯ ತಳದಲ್ಲಿದೆ. ಇದು ಹಿಂದೂ ಧರ್ಮದ ದೇವತೆಯಾದ ಕಾಳಿ ದೇವಿಗೆ ಅರ್ಪಿತವಾದ ಪುರಾತನ ದೇವಾಲಯವಾಗಿದೆ.
ಲಕ್ಷ್ಮೀ ನಾರಾಯಣ ದೇವಾಲಯಗಳು
ಬದಲಾಯಿಸಿವೈಷ್ಣವ ಪಂಥಕ್ಕೆ ಸಮರ್ಪಿತವಾದ ಲಕ್ಷ್ಮಿ ನಾರಾಯಣ ದೇವಾಲಯಗಳ ಸಂಕೀರ್ಣವು 10 ನೇ ಶತಮಾನದಲ್ಲಿ ರಾಜಾ ಸಾಹಿಲ್ ವರ್ಮನ್ ನಿರ್ಮಿಸಿದ ಮುಖ್ಯ ಲಕ್ಷ್ಮೀ ನಾರಾಯಣ ದೇವಾಲಯವನ್ನು ಒಳಗೊಂಡಿದೆ. ಇದು ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಮರದ ಛತ್ರಿಗಳೊಂದಿಗೆ ನಿರ್ಮಿಸಲ್ಪಟ್ಟಿದೆ ಮತ್ತು ಶಿಖರ ಹಾಗೂ ಗರ್ಭಗೃಹ, ಅಂತರಾಳ ಹಾಗೂ ಮಂಟಪವನ್ನು ಹೊಂದಿದೆ. ವಿಷ್ಣುವಿನ ವಾಹನವಾದಗರುಡನ ಲೋಹದ ಚಿತ್ರವನ್ನು ದೇವಾಲಯದ ಮುಖ್ಯ ದ್ವಾರದಲ್ಲಿರುವ ಧ್ವಜಸ್ತಂಭದ ಮೇಲೆ ಸ್ಥಾಪಿಸಲಾಗಿದೆ. 1678 ರಲ್ಲಿ, ರಾಜಾ ಛತ್ರ ಸಿಂಗ್ ದೇವಾಲಯದ ಮೇಲ್ಛಾವಣಿಯನ್ನು ಚಿನ್ನದ ಲೇಪಿತ ಶಿಖರಗಳಿಂದ ಅಲಂಕರಿಸಿದನು.[೨]
ಚಾಮುಂಡಾ ದೇವಿ ದೇವಸ್ಥಾನ
ಬದಲಾಯಿಸಿಚಾಮುಂಡಾ ದೇವಿ ದೇವಾಲಯವನ್ನು ರಾಜಾ ಉಮೇದ್ ಸಿಂಗ್ ನಿರ್ಮಿಸಿದನು ಮತ್ತು 1762[೮]ರಲ್ಲಿ ನಿರ್ಮಾಣ ಪೂರ್ಣಗೊಂಡಿತು. ಇದು ಚಂಬಾದಲ್ಲಿ ಗೇಬಲ್ಲುಳ್ಳ ಮೇಲ್ಛಾವಣಿಯನ್ನು (ಒಂದೇ ಅಂತಸ್ತಿನ) ಹೊಂದಿರುವ ಏಕೈಕ ಮರದ ದೇವಾಲಯವಾಗಿದೆ. ಪಟ್ಟಣದಲ್ಲಿರುವ ಎಲ್ಲಾ ಇತರವುಗಳನ್ನು ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ಕಲ್ಲಿನಿಂದ ನಿರ್ಮಿಸಲಾಗಿದೆ.[೮]
ಅಖಂಡ ಚಂಡಿ ಅರಮನೆ
ಬದಲಾಯಿಸಿಅಖಂಡ ಚಂಡಿ ಅರಮನೆಯು ತನ್ನ ವಿಶಿಷ್ಟವಾದ ಹಸಿರು ಛಾವಣಿಗೆ ಹೆಸರುವಾಸಿಯಾಗಿದೆ. ಇದನ್ನು ರಾಜಾ ಉಮೇದ್ ಸಿಂಗ್ 1747 ಮತ್ತು 1765 ರ ನಡುವೆ ನಿರ್ಮಿಸಿದನು ಮತ್ತು ತನ್ನ ನಿವಾಸವಾಗಿ ಬಳಸಿಕೊಂಡನು.[೯] ನಂತರ, ರಾಜಾ ಶಾಮ್ ಸಿಂಗ್ ಬ್ರಿಟಿಷ್ ಎಂಜಿನಿಯರ್‌ಗಳ ಸಹಾಯದಿಂದ ಇದನ್ನು ನವೀಕರಿಸಿದನು.
1847 ರ ನಂತರ ನಿರ್ಮಿಸಲಾದ ಸ್ಮಾರಕಗಳು
ಬದಲಾಯಿಸಿಚೌಗನ್
ಬದಲಾಯಿಸಿಚೌಗನ್ ಚಂಬಾದಲ್ಲಿನ ಎಲ್ಲಾ ಚಟುವಟಿಕೆಗಳ ಕೇಂದ್ರವಾಗಿದೆ. ಇದು ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾದ ಪ್ರಭಾವಶಾಲಿ ಆಡಳಿತ ಕಟ್ಟಡಗಳು ಮತ್ತು ಕಮಾನು ಅಂಗಡಿಗಳ ಸಾಲಿನಿಂದ ಆವೃತವಾಗಿದೆ. ಹಳೆಯ ಅಖಂಡ ಚಂಡಿ ಅರಮನೆಯು ಹತ್ತಿರದಲ್ಲಿದೆ. ಇಂದು ಇದನ್ನು ಸಾಮಾನ್ಯವಾಗಿ ಬೇಸಿಗೆಯ ಮಧ್ಯದ ತಿಂಗಳುಗಳಲ್ಲಿ ಕ್ರಿಕೆಟ್ ಪಂದ್ಯಗಳು, ಪಿಕ್ನಿಕ್ ಮತ್ತು ವಾಯುವಿಹಾರಗಳಿಗೆ ಬಳಸಲಾಗುತ್ತದೆ.[೧೦] ವಾರ್ಷಿಕ 'ಮಿಂಜಾರ್ ಮೇಳ' ಜಾತ್ರೆಯ ಸಂದರ್ಭದಲ್ಲಿ ಇಡೀ ಮೈದಾನವೇ ಬಯಲು ಮಾರುಕಟ್ಟೆಯಾಗುತ್ತದೆ. ದಸರಾ ಹಬ್ಬದ ನಂತರ, ನಿರ್ವಹಣೆ ಉದ್ದೇಶಗಳಿಗಾಗಿ ಮೈದಾನವನ್ನು ಏಪ್ರಿಲ್ ವರೆಗೆ ಸಾರ್ವಜನಿಕರಿಗೆ ಮುಚ್ಚಲಾಗುತ್ತದೆ.[೧][೨]
ಚರ್ಚ್ ಆಫ್ ಸ್ಕಾಟ್ಲೆಂಡ್
ಬದಲಾಯಿಸಿಚರ್ಚ್ ಆಫ್ ಸ್ಕಾಟ್ಲೆಂಡ್‍ನ್ನು 1863 ಮತ್ತು 1873 ರ ನಡುವೆ ಸೇವೆ ಸಲ್ಲಿಸಿದ ಚಂಬಾದ ಮೊದಲ ಮಿಷನರಿ ರೆವರೆಂಡ್ ವಿಲಿಯಂ ಫರ್ಗುಸನ್ ಸ್ಥಾಪಿಸಿದರು.[೧೧][೧೨] ರಾಜರು ಚರ್ಚ್ ಅನ್ನು ನಿರ್ಮಿಸಲು ಉದಾರ ಅನುದಾನವನ್ನು ನೀಡಿದರು ಮತ್ತು ಅದನ್ನು ಉತ್ತಮವಾದ ಕಲ್ಲಿನಲ್ಲಿ ನಿರ್ಮಿಸಲಾಗಿದೆ ಎಂದು ಖಚಿತಪಡಿಸಿಕೊಂಡರು.[೧೧] ಗೋಡೆಗಳಿಗೆ ಆನಿಕೆಗಳು ಆಧಾರವಾಗಿವೆ ಮತ್ತು ಲ್ಯಾನ್ಸರ್ ಕಮಾನು ಕಿಟಕಿಗಳು ಬೆಳಕು ಹಾಗೂ ವಾತಾಯನವನ್ನು ಒದಗಿಸುತ್ತವೆ.
ಭೂರಿ ಸಿಂಗ್ ವಸ್ತುಸಂಗ್ರಹಾಲಯ
ಬದಲಾಯಿಸಿ1904 ರಿಂದ 1919 ರವರೆಗೆ [೨] ಆಳಿದ ರಾಜ ಭೂರಿ ಸಿಂಗ್ ರಾಜನ ಗೌರವಾರ್ಥವಾಗಿ ಚಂಬಾದಲ್ಲಿರುವ ಭೂರಿ ಸಿಂಗ್ ವಸ್ತುಸಂಗ್ರಹಾಲಯವನ್ನು 14 ಸೆಪ್ಟೆಂಬರ್ 1908 ರಂದು ಸ್ಥಾಪಿಸಲಾಯಿತು. ಸರಹನ್, ದೇವಿ-ರಿ-ಕೋಠಿ ಮತ್ತು ಮುಲ್ ಕಿಹಾರ್ (ಕಾರಂಜಿ ಶಾಸನ) ದ ಪ್ರಶಸ್ತಿಗಳು (ಶಾಸನಗಳು) ಸೇರಿದಂತೆ ಅನೇಕ ಶಾಸನಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ.[೨] ಭೂರಿ ಸಿಂಗ್ ಅವರು ತಮ್ಮ ಕುಟುಂಬದ ವರ್ಣಚಿತ್ರಗಳ ಸಂಗ್ರಹವನ್ನು ವಸ್ತುಸಂಗ್ರಹಾಲಯಕ್ಕೆ ದಾನ ಮಾಡಿದರು. ನಾಣ್ಯಗಳು, ಬೆಟ್ಟದ ಆಭರಣಗಳು ಮತ್ತು ರಾಜಮನೆತನದ ಮತ್ತು ಸಾಂಪ್ರದಾಯಿಕ ವೇಷಭೂಷಣಗಳು, ಶಸ್ತ್ರಾಸ್ತ್ರಗಳು ಮತ್ತು ರಕ್ಷಾಕವಚಗಳು, ಸಂಗೀತ ವಾದ್ಯಗಳು ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಚಂಬಾದ ಪರಂಪರೆಗೆ ಪ್ರಮುಖವಾದ ಹಲವಾರು ಕಲಾಕೃತಿಗಳನ್ನು ಸೇರಿಸಲಾಯಿತು.[೨] ಪ್ರಸ್ತುತ ವಸ್ತುಸಂಗ್ರಹಾಲಯವನ್ನು 1975 ರಲ್ಲಿ ಕಾಂಕ್ರೀಟ್‍ನಲ್ಲಿ ನಿರ್ಮಿಸಲಾಯಿತು.[೨]
ಟಿಪ್ಪಣಿಗಳು
ಬದಲಾಯಿಸಿ- ↑ ೧.೦ ೧.೧ Bhatnagar (2008), pages 39-44
- ↑ ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ "Places of Interest in Chamba". National Informatics Centre:Government of Chamba district. Archived from the original on 20 October 2009. Retrieved 28 October 2009. ಉಲ್ಲೇಖ ದೋಷ: Invalid
<ref>
tag; name "places" defined multiple times with different content - ↑ "Hindu Hill Kingdoms". Victoria and Albert Museum. Archived from the original on 30 March 2010. Retrieved 6 April 2010.
- ↑ "PahariKamat".
- ↑ Bradnock (2000), p.211
- ↑ Bharati (2001), p.24
- ↑ "ChampavatiTempleChamba". Himachal Tourism. Retrieved 6 April 2010.
- ↑ ೮.೦ ೮.೧ "Chamunda devi temple history". Tourism Chamba. Archived from the original on 25 February 2010. Retrieved 6 April 2010.
- ↑ "AkhandChandiPalaceChamba". Himachal Pradesh Tourism. Retrieved 6 April 2010.
- ↑ "Introducing Chamba". Lonely Planet. Retrieved 6 April 2010.
- ↑ ೧೧.೦ ೧೧.೧ The Church of Scotland home and foreign mission record, Volume 24. Church of Scotland. 1899. p. 136.
{{cite book}}
:|work=
ignored (help) - ↑ "Church of Scotland". Retrieved 6 April 2010.
ಉಲ್ಲೇಖಗಳು
ಬದಲಾಯಿಸಿ- Archer, W. G (1973). Indian Paintings from the Punjab Hills: A Survey and History of Pahari Miniature Painting. Sotheby Parke Bernet. ISBN 0-85667-002-2.
- Bhatnagar, Manu (2008). "Chamba Urban evolution of an ancient town in the Himalaya" (PDF). Journal of the Development and Research Organization for Nature, Arts and Heritage. 5 (1). UNESCO: 39–44. Retrieved 26 October 2009.
- Bharati, K.R (2001). Chamba Himalaya: amazing land, unique culture. Indus Publishing. ISBN 81-7387-125-6. Retrieved 26 October 2009.
- Bradnock, Robert & Roma (2000). Footprint Indian Himalaya Handbook:The Travel Guide. Footprint Travel Guides. ISBN 1-900949-79-2.
- Handa, O.C (2001). Temple architecture of the western Himalaya: wooden temples. Indus Publishing. ISBN 81-7387-115-9. Retrieved 28 October 2009.
{{cite book}}
:|work=
ignored (help) - Handa, O.C (2005). Gaddi land in Chamba: its history, art & culture : new light on the early ... Indus Publishing. ISBN 81-7387-174-4.
{{cite book}}
:|work=
ignored (help) - Scotland, Church of (1899). The Church of Scotland home and foreign mission record, Volume 24. Church of Scotland.
{{cite book}}
:|work=
ignored (help) - Sharma, K.P.; Sethi, S.M. (1997). Costumes and ornaments of Chamba. Indus Publishing. ISBN 81-7387-067-5.
- Sharma, K.P. (2004). Folk dances of Chambā. Indus Publishing. ISBN 81-7387-166-3.
- Negi, Baldev Singh (2012), Single Line Administration and Tribal Development in Himachal Pradesh, Lambert Academic Publishing, Germany, .
- Rana, Kulwant Singh, Negi, Baldev Singh (2012), Changing Cropping Pattern in the Tribal Areas of Himachal Pradesh: with special reference to Pangi Valley, Lambert Academic Publishing, Germany, .
- Negi, Baldev Singh (2012), Village Studies in Northern India: a case study of Devikothi, Lambert Academic Publishing, Germany,
ಹೆಚ್ಚಿನ ಓದಿಗೆ
ಬದಲಾಯಿಸಿ- Hutchinson, J. & J. PH Vogel (1933). History of the Panjab Hill States, Vol. I. 1st edition: Govt. Printing, Pujab, Lahore, 1933. Reprint 2000. Department of Language and Culture, Himachal Pradesh. Chapter IV Chamba State, pp. 268–339.
- Negi, Baldev Singh (2012), Single Line Administration and Tribal Development in Himachal Pradesh, Lambert Academic Publishing, Germany, .
- Rana, Kulwant Singh, Negi, Baldev Singh (2012), Changing Cropping Pattern in the Tribal Areas of Himachal Pradesh: with special reference to Pangi Valley, Lambert Academic Publishing, Germany, .
- Negi, Baldev Singh (2012, Village Studies in Northern India: a case study of Devikothi, Lambert Academic Publishing, Germany,
- Ulrich Friebel, Trekking in Himachal Pradesh, NaturFreunde-Verlag Stuttgart 2001,