ಚಂದ್ರಕಾಂತ ಕುಸನೂರ
ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ರಂಗಕರ್ಮಿಗಳು.ಇವರು ೧೯೩೧ರಲ್ಲಿ ಕಲಬುರ್ಗಿಯ ಕುಸನೂರಲ್ಲಿ ಜನಿಸಿದರು. ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ.ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.ಕಲಬುರ್ಗಿಯಲ್ಲಿ "ರಂಗ ಮಾಧ್ಯಮ"ಎಂಬ ನಾಟಕ ಸಂಸ್ಥೆಯ ಸ್ಥಾಪಕರು.ಕನ್ನಡದಲ್ಲಿ ಅಬ್ಬರ್ಡ್ ಮಾದರಿ ನಾಟಕಗಳನ್ನು ರಚಿಸಿದರು.
ಕೃತಿಗಳು
ಬದಲಾಯಿಸಿನಾಟಕ
ಬದಲಾಯಿಸಿ- ಆನಿ ಬಂತಾನಿ.
- ರಿಹರ್ಸಲ್.
- ರತ್ತೋ ರತ್ತೋ ರಾಯನ ಮಗಳೇ.
- ದಿಂಡಿ.
- ವಿದೂಷಕ.
- ಹಳ್ಳಾ ಕೊಳ್ಳಾ ನೀರು.
ಕಾವ್ಯ
ಬದಲಾಯಿಸಿ- ನಂದಿಕೋಲು
ಕಾದಂಬರಿ
ಬದಲಾಯಿಸಿ- ಮಾಲತಿ ಮತ್ತು ನಾನು.
- ಯಾತನಾ ಶಿಬಿರ.
- ಗೋಹರಜಾನ್.
- ಕೆರೂರು ನಾಮ.
- ಚರ್ಚ್ ಗೇಟ್.
ಹಿಂದಿಗೆ ಅನುವಾದ
ಬದಲಾಯಿಸಿ- ಸಂಸ್ಕಾರ (ಕನ್ನಡ ಮೂಲ: ಯು.ಆರ್.ಅನಂತಮೂರ್ತಿ)
- ಕಾಡು (ಕನ್ನಡ ಮೂಲ: ಶ್ರೀಕೃಷ್ಣ ಆಲನಹಳ್ಳಿ)
ಪುರಸ್ಕಾರ
ಬದಲಾಯಿಸಿ- ೧೯೭೫ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ.
- ೧೯೯೨ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ನೀಡಲಾಗಿದೆ.
- ೨೦೦೬ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ.
2013ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ