ಗೋಲ್ಡನ್ ಗೇಟ್ ಬ್ರಿಡ್ಜ್

ಸ್ಯಾನ್ ಫ್ರಾನ್ಸಿಸ್ಕೋ ಬೇ ಮೇಲಿನ ತೂಗು ಸೇತುವೆ

ಅಮೆರಿಕ ದೇಶದ ಸ್ಯಾನ್ ಫ್ರಾನ್ಸಿಸ್ಕೊನಗರದ ಗೋಲ್ಡನ್ ಗೇಟ್ ಬ್ರಿಡ್ಜ್, (San Francisco's Golden Gate Bridge),[] ಬಹಳ ಮಹತ್ವದ ಸೇತುವೆಯೆಂದು ಬಹಳ ವರ್ಷಗಳ ಕಾಲ ಪರ್ಯಟಕರ ದಿನಚರಿಯಲ್ಲಿ ದಾಖಲಾಗಿತ್ತು. ಈ ಸೇತುವೆಯ ರಚನೆಯ ಬಗ್ಗೆ ಹಲವು ಬಾಧಕಗಳಿದ್ದರೂ ಅಮೆರಿಕ ಸರಕಾರದ ಪ್ರೋತ್ಸಾಹದಿಂದ ಅದು ಸಮರ್ಪಕವಾಗಿ ಕಾರ್ಯಗತವಾಯಿತು.

'ಗೋಲ್ಡನ್ ಗೇಟ್ ಬ್ರಿಡ್ಜ್'
'ಪೆಸಿಫಿಕ್ ಸಮುದ್ರದಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ಕೆಳಗೆ ಸಾಗಿದಾಗ'
'ಗೋಲ್ಡನ್ ಗೇಟ್ ಸೇತುವೆ'ಯ ಮೇಲೆ ವಾಹನಗಳ ಹರಿದಾಟದ ದೃಶ್ಯ

ಸೇತುವೆ ನಿರ್ಮಾಣದದಲ್ಲಿ ಎದುರಿಸಿದ ಸವಾಲುಗಳು

ಬದಲಾಯಿಸಿ
  • ೨೦ ನೇ ಶತಮಾನದ ಆದಿಭಾಗದಲ್ಲೇ ಮೆರಿನ್ ಕೌಂಟಿ ಮತ್ತು ಸ್ಯಾನ್ ಫ್ರಾನ್ಸಿಸ್ಕೊನಗರದ ಮಧ್ಯೆ 'ಗೋಲ್ಡನ್ ಗೇಟ್ ಸೇತುವೆ' ನ್ನು ನಿರ್ಮಿಸಲು ಸರ್ಕಾರಕ್ಕೆ ಅನೇಕರು ಒತ್ತಡ ಹೇರುತ್ತಿದ್ದರು. ಇಲ್ಲಿನ 'ಖಾರಿ'ಯು ಸುಮಾರು ೬,೭೦೦ (೨,೦೪೨ ಮೀ) ಅಡಿಗಳಷ್ಟು ಅಗಲವಾಗಿದೆ.
  • ನೀರಿನ ಮಟ್ಟ ೫೦೦ ಅಡಿಗಳಷ್ಟು ಅತ್ಯಂತ ಬಿರುಸಾದ ಅಲೆಗಳು ದಡಕ್ಕೆ ಲಗ್ಗೆ ಹಾಕುವುದರ ಜೊತೆಗೆನೀರು ವೇಗವಾಗಿ ಹರಿಯುತ್ತಿತ್ತು. ಬಿರುಸಾದ ಗಾಳಿಯನ್ನು ಎದುರಿಸುವುದ ಮಹಾಕಷ್ಟದ ಕೆಲಸವಾಗಿತ್ತು. ಜೇಮ್ಸ್ ವಿಲ್ಕಿನ್ಸ್ ಎಂಬ ಇಂಜಿನಿಯರ್ ಪ್ರಕಾರ ವೆಚ್ಚ ೧೦೦ (೧೯೨೦ ರಲ್ಲಿ) ಮಿಲಿಯನ್ ಡಾಲರ್ ಎಂದು ಅಂದಾಜುಮಾಡಿದ್ದನು. ಇಷ್ಟು ಭಾರಿಮೊತ್ತದ ಅಭಿಯಾನಕ್ಕೆ ಸರಕಾರ ಸಿದ್ಧವಿರಲಿಲ್ಲ. ಸಾರ್ವಜನಿಕರ ಸಹಾಯವನ್ನು ಅಪೇಕ್ಷಿಸಿದಾಗ ಮುಂದೆಬಂದ ಜೋಸೆಫ್ ಸ್ಟ್ರಾಸ್ ಎಂಬ ಯುವ ಎಂಜಿನಿಯರ್.
  • ತನ್ನ ಹೇಳಿಕೆಯಲ್ಲಿ ಅವನು, ಕೊಲ್ಲಿಯ ಇಕ್ಕೆಲಗಳಲ್ಲಿ ಬಲವಾದ ಕಬ್ಬಿಣದ ಕಂಬಗಳನ್ನು ನಿರ್ಮಿಸಿ ಅದಕ್ಕೆ ಒಂದು ತೂಗುಸೆತುವೆಯನ್ನು ರಿಂದ ೧೭ ಮಿಲಿಯನ್ ಡಾಲರ್ ದೆಂದು ಬೆಲೆಕಟ್ಟಿದನು. ಇತರ ಇಂಜಿನಿಯರ್ ಗಳೂ ಇದನ್ನು ಅನುಮೋದಿಸಿದರು. ಈಹಂತದ ಬೆಳವಣಿಗೆಯ ಸಮಯದಲ್ಲಿ 'ಅಮೆರಿಕದ ನೌಕಾಪಡೆ' ತನ್ನ ವಿರೋಧವನ್ನು ವ್ಯಕ್ತಪಡಿಸಿ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿತು.
  • ಸೇತುವೆಯ ಅಗತ್ಯ ಅಧಿಕವಾಗಿರುವುದು ಎಲ್ಲರಿಗೂ ತಿಳಿದಿತ್ತು. ಹಾಗಾಗಿ ನ್ಯಾಯಾಲಯವೂ ಸರಿಯಾದ ಯೋಜನೆಯನ್ನು ತಯಾರಿಸಿ ಕೆಲಸ ಮುಂದುವರೆಸಲು ಆದೇಶ ನೀಡಿತು. ೧೯೨೯ ರ ಆರ್ಥಿಕ ಪರಿಸ್ಥಿತಿ, ಸೇತುವೆಯ ಕೆಲಸವನ್ನು ಆರಂಭಿಸಲು ತೊಡಕಾಯಿತು. ಅಂತಿಮವಾಗಿ ಸರಕಾರ ಸಾರ್ವಜನಿಕರಿಂದಹಣ ಸಂಗ್ರಹಿಸಲು 'ಬಾಂಡ್' ಗಳ ಬಿಡುಗಡೆ ಮಾಡಿತು.

ಸಮರ್ಥ ಅಭಿಯಂತರು, ಹಾಗೂ ನಾಗರಿಕರು

ಬದಲಾಯಿಸಿ
  • ಪ್ರಧಾನ ವಾಸ್ತು ಶಿಲ್ಪಿ,ಜೋಸೆಫ್ ರವರ 'ನೀಲನಕ್ಷೆ' ಹೆಚ್ಚುಕಡಿಮೆ ಎಲ್ಲರಿಗೂ ಒಪ್ಪಿಗೆಯಾಗಿತ್ತು. ಅದನ್ನು ಸ್ವಲ್ಪ ಬದಲಾಯಿಸಿ, ಅಂತಿಮ ರೂಪವನ್ನು ಲಿಯೋನ್ ಮೈಸೆಫ್ ಎಂಬ ಅಭಿಯಂತರು ಕೊಟ್ಟರು. ಇರ್ವಿಂಗ್ ಮಾರೋ ಎಂಬ ವಾಸ್ತುಶಿಲ್ಪಿ ವಿನ್ಯಾಸ, ಜನವರಿ, ೫, ೧೯೩೩ ರಲ್ಲಿ ಶುರುವಾಯಿತು.ಈ ಹಂತದಲ್ಲಿ ಅಂದಾಜು ವೆಚ್ಚವು ೩೫ ಮಿಲಿಯನ್ ಡಾಲರ್ ಗೆ ಏರಿತ್ತು. ಕೆಲಸಗಾರರಿಗೆ ಜೀವ ಹಾನಿಯನ್ನು ತಡೆಗಟ್ಟಲು ಸೇತುವೆಯ ಕೆಳ ಬದಿಯಲ್ಲಿ ಬಲೆಯನ್ನು ಹಾಸಲಾಗಿತ್ತು.
  • ೧೯೩೭ ರ ಏಪ್ರಿಲ್ ನಲ್ಲಿ ಕೆಲಸವು ಪೂರ್ಣಗೊಂಡು ಅಂದಾಜು ವೆಚ್ಚದಲ್ಲಿ ೧.೩ ಮಿಲಿಯನ್ ಡಾಲರ್ ಗಳಷ್ಟು ಹಣ ಉಳಿತಾಯವಾಗಿತ್ತು. ಅದೇ ವರ್ಷದ ಮೇ ತಿಂಗಳ ೨೭ ರಂದು ತೂಗು ಸೇತುವೆಯ ಉದ್ಘಾಟನೆ ನಡೆಯಿತು. ವಾಹನಗಳನ್ನು ಓಡಿಸಲು ಅನುಮತಿಕೊಡುವ ಮೊದಲು, ಸುಮಾರು ೨ ಲಕ್ಷಜನ ಗೋಲ್ಡನ್ ಗೇಟ್ ತೂಗು ಸೇತುವೆಯ ಮೇಲೆ, 'ಸ್ಕೇಟಿಂಗ್' ಮಾಡುತ್ತಾ ನಡೆಯುತ್ತಾ ಸಂಚರಿಸಿದರು.

ಬಳಸಿದ ವಸ್ತುಗಳು

ಬದಲಾಯಿಸಿ
  • ಕಬ್ಬಿಣದ ವೈರಿನ ಬಲವಾದ ಹಗ್ಗ-೩೬.೬ ಅಂಗುಲ ವ್ಯಾಸ
  • ಸರಿಗೆಗಳು-೨೭,೫೭೨
  • ಪ್ರಧಾನ ತೂಗು ಸೇತುವೆಯ ೨ ಸ್ಥಂಭಗಳ ಮಧ್ಯ ಭಾಗ-೧,೨೮೦ ಮೀ
  • ೧೯೬೪ ರವರೆಗೆ ಇದೇ ವಿಶ್ವ ಅತಿ ಉದ್ದದ ತೂಗು ಸೇತುವೆ
  • ನಂತರ 'ಬ್ರೂಕ್ಲಿನ್' ನಲ್ಲಿ ನಿರ್ಮಿಸಿದ ಸೇತುವೆ ೬೦ ಅಡಿ ಹೆಚ್ಚು ಉದ್ದವಾಗಿತ್ತು.
  • ೧೯೫೭ ರ ವರೆಗೆ ಅತಿದೊಡ್ಡ ಬೃಹತ್ ಸ್ಥಂಬಗಳೆಂಬ ಖ್ಯಾತಿಯಿತ್ತು.
  • ಮೆಕಿನ್ಯಾಕ್ ಸೇತುವೆಯ ಸ್ಥಂಬಗಳು ಇದಕ್ಕಿಂತ ಹೆಚ್ಚು ಎತ್ತರ.
  • ಪೂರ್ವ ಭಾಗದಲ್ಲಿ ನಡೆಯುವರಿಗೆ ಕಾಲುದಾರಿ, ಹಾಗೂ ಸೈಕಲ್ ಪ್ರಯಾಣಿಕರಿಗೆ ಪ್ರತ್ಯೇಕವಾದ ರಸ್ತೆಗಳಿವೆ.
  • ಪಶ್ಚಿಮ ಭಾಗದಲ್ಲಿ ಸೈಕಲ್ ರಸ್ತೆಯೊಂದಿದೆ. ಇದರ ೬ ರಸ್ತೆಗಳಲ್ಲಿ ಉತ್ತರಕ್ಕೆ ಹೋಗಲು ೩ ರಸ್ತೆ, ಮತ್ತು ದಕ್ಷಿಣಕ್ಕೆ ಬರಲು ೩ ರಸ್ತೆಗಳಿವೆ.
  • ಆದರೆ ವಾಹನಗಳ ಹೆಚ್ಚುಕಡಿಮೆ ಓಡಾಟದ ಅನುಗುಣವಾಗಿ ೨:೪ ಅಥವಾ ೪:೨ ಪ್ರಮಾಣ ಅನುವುಮಾಡಿಕೊಡಲಾಗುವುದು.

ಆತ್ಮಹತ್ಯೆಯ ತಾಣ

ಬದಲಾಯಿಸಿ
  • ರಸ್ತೆಯಲ್ಲಿ ವೇಗದ ಮಿತಿ, ಮೊದಲಿನ ಒಂದು ಗಂಟೆಗ ೫೫ ಮೈಲಿ ಇತ್ತು.
  • ಇದನ್ನು ೪೫ ಮೈಲಿಗೆ ಇಳಿಸಲಾಗಿದೆ(೧೯೬೬ ರಿಂದ) ಸೇತುವೆ ಪ್ರಾರಂಭದ ದಿನಗಳಿಂದ ಬಳಿದ ಅತ್ಯಾಕರ್ಷಕ ಹಾಗೂ ಜನರ ಮೆಚ್ಚುಗೆಯ ಕಿತ್ತಳೆ ಬಣ್ಣವನ್ನು ಇದುವರೆಗೂ ಮುಂದುವರಿಸಲಾಗಿದೆ.
  • ಒಟ್ಟು ಉದ್ದ : ೮,೯೮೧ ಅಡಿ
  • ನೀರಿನ ಮಟ್ಟಕ್ಕಿಂತಾ ೨೨೦ ಅಡಿ ಎತ್ತರದಲ್ಲಿದೆ.
  • ವಿಶ್ವದಲ್ಲೇ ಅತಿಪ್ರಸಿದ್ಧಿ ಹೊಂದಿದ ಈ ತೂಗು ಸೇತುವೆ; ಅತಿ ಹೆಚ್ಚು ಆತ್ಮಹತ್ಯೆ ಮಾಡಿಕ್ಕೊಳ್ಳುವ ತಾಣವೆಂಬ ಕುಖ್ಯಾತಿಗೆ ಹೆಸರಾಗಿದೆ. ಸೇತುವೆಯ ಕೆಳಗೆ ನೀರು ಅತಿವೇಗದಿಂದ ಹರಿಯುವಕಾರಣದಿಂದ ಕೆಳಗೆ ಬಿದ್ದವರನ್ನು ಉಳಿಸುವುದು ಬಹಳ ಕಷ್ಟದ ಕೆಲಸ. ಸೇತುವೆಯ ಅಡಿಯಲ್ಲಿ ಬಲವಾದ ಬಲೆಯನ್ನು ಹರಡುವ ಸಮಿತಿಯವರ ಯೋಜನಾ ಕಾರ್ಯ ಮಂಚೂಣಿಯಲ್ಲಿದೆ.

'ಗೋಲ್ಡನ್ ಗೇಟ್ ಬ್ರಿಡ್ಜ್,'- ಐತಿಹ್ಯ

ಬದಲಾಯಿಸಿ
  • ಒಟ್ಟು ೬ ರಸ್ತೆಗಳು, ಪಾದಚಾರಿಗಳಿಗೆ ಸೈಕಲ್ ಸವಾರರಿಗೆ, ಸ್ಕೇಟ್ ಮಾಡುವವರಿಗೆ ೧ ಲಕ್ಷಕ್ಕಿಂತ ಹೆಚ್ಚು ವಾಹನಗಳು ಈ ಸೇತುವೆಯ ಮೇಲೆ ಯಾನಮಾಡುತ್ತವೆ. ನಗರದ ಮೂರುಭಾಗಗಳೂ ಕಡಲಿನಿಂದ ಆವೃತವಾದ ಪರ್ಯಾಯ ದ್ವೀಪ. ಪಶ್ಚಿಮದಲ್ಲಿ ಪೆಸಿಫಿಕ್ ಸಾಗರ, ಪೂರ್ವದಲ್ಲಿ 'ಸ್ಯಾನ್ ಕೊಲ್ಲಿ' ,ಉತ್ತರದಲ್ಲಿ ಮೂರು ಮೈಲು ಉದ್ದ ಹಾಗೂ ೧ ಮೈಲಿ ಅಗಲದ 'ಗೋಲ್ಡನ್ ಗೇಟ್ ಕೊಲ್ಲಿ'ಗಳಿವೆ. 'ಮೆರಿನ್ ಕೌಂಟಿ,' ಉತ್ತರ ದಿಶೆಯಲ್ಲಿದೆ. ಇದನ್ನು ತಲುಪಬೇಕಾದರೆ ಮೊದಲು ಸುತ್ತುಬಳಸಿ ಬಹಳ ಶ್ರಮಪಡಬೇಕಾಗಿತ್ತು.
  • ಅನೇಕ ಪ್ರಾಕೃತಿಕ ತೊಂದರೆಗಳು ಅಡ್ಡಬಂದವು. ಒಂದು ಸೇತುವೆ ಅನಿವಾರ್ಯವಾಗಿತ್ತು. ೧೯೩೩ ರಲ್ಲಿ ಪ್ರಾರಂಭವಾಗಿ, ೪ ವರ್ಷಗಳಲ್ಲಿ ಕೊನೆಗೊಂಡಿತು. ಆ ಸಮಯದಲ್ಲಿ ವಿಶ್ವದ ಅತಿದೊಡ್ಡ ಕೌಶಪೂರ್ಣ ತಾಂತ್ರಿಕತೆಗೆ ಹೆಸರಾದ ತೂಗುಸೇತುವೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದು ವರೆವಿಗೂ ಅತಿ ಹೆಚ್ಚು ಛಾಯಾಗ್ರಾಹಕರ ಮನಸೆಳೆಯುವ ಭವ್ಯವಾದ ಸುಂದರವಾದ ಸೇತುವೆಗಳಲ್ಲೊಂದಾಗಿದೆ.

ಚಂಡಮಾರುತ, ಭೂಕಂಪಗಳ ಮಧ್ಯೆ

ಬದಲಾಯಿಸಿ
  • ಸಮುದ್ರದ ಮಧ್ಯೆ, ಚಂಡಮಾರುತಗಳನ್ನೂ, ಭೂಕಂಪಗಳನ್ನೂ ಎದುರಿಸಿ ಹಿಮ್ಮೆಟ್ಟದೆ ಮೇಲೆದ್ದುನಿಂತ, ’ಗೋಲ್ಡನ್ ಬ್ರಿಡ್ಜ್,’ ಕಟ್ಟಲು ಸುಮಾರು ೪ ವರ್ಷಕ್ಕಿಂತ ಹೆಚ್ಚುಸಮಯ ಹಿಡಿಯಿತು. ಆದರೆ ಅದರಿಂದಾಗಿ ಮಾತು-ಕತೆಗಳಲ್ಲೇ ಸುಮಾರು ೧೦ ವರ್ಷಗಳು, ಕೇವಲ ವ್ಯರ್ಥವಾದವು. ಸಮುದ್ರದಮೇಲೆ ಬೀಸುವ ಚಂಡಮಾರುತ, ಆಗಾಗ ಆಗುವ ಭೂಕಂಪಗಳು ಮನೋಧಾರಢ್ಯವನ್ನು ತಗ್ಗಿಸಿತ್ತು ಈ ಅಭಿಯಾನಕ್ಕೆ ಯಾರೂತಮ್ಮ ಸಹಕಾರವನ್ನೂ ಕೊಡಲು ಹಿಂಜರೆಯುತ್ತಿದ್ದರು.
  • ಅನೇಕ ಅಡಚಣೆಗಳು, ಹವಾಮಾನ, ಹಣ, ನಂಬಿಕೆಗಳಿಲ್ಲದೆ, ಯಾರೂ ಮುಂದೆಬರಲಿಲ್ಲ. ೩೫ ಮಿಲಿಯನ್ ಡಾಲರ್ ಯರಿಗೆ ಅತ್ಯಾಕರ್ಷಕ ಸ್ಥಳಗಳಲ್ಲೊಂದು. ಮೇ, ೨೮, ೧೯೩೭ ರಲ್ಲಿ ಮಧ್ಯಾನ್ಹ ೧೨ ಘಂಟೆಗೆ ’ಪೂರ್ವನಿರ್ಧಾರಿತ ಬಜೆಟ್,’ ಗಿಂತ ಕಡಿಮೆ ಹಣ ಖರ್ಚಾಯಿತು. ಹಾಗೂ ಮೊದಲೇ ಶುರುವಾಯಿತು. ಆಗಿನ ಆಮೆರಿಕದ ಅಧ್ಯಕ್ಷ, ’ಫ್ರಾಂಕ್ಲಿನ್ ರೂಸ್ವೆಲ್ಟ್,’ ರವರು ತಮ್ಮ ಸರಕಾರಿ ಬಂಗಲೆ, ’ವೈಟ್ ಹೌಸ್,’ ನಲ್ಲಿ ವಾಸ್ತವ್ಯ ಹೂಡಿದ ಸಮಯದಲ್ಲಿ ತಮ್ಮ ಛೇಂಬರ್ ನಿಂದ 'ಟೆಲಿಗ್ರಾಫ್ ಕೀ,' ಒತ್ತಿದೊಡನೆ ಘೋಷಿಸಿದ ಸ್ಯಾನ್ ಫ್ರಾನ್ಸಿಸ್ಕೊ '[GGB]' ನ ’ಮೈನ್ ಹೆಡ್ ಲ್ಯಾಂಡ್ಸ್,’ ಕಡೆಯ ಜಾಗ ಚಿತ್ರ ತೆಗೆಯಲು ಅತ್ಯುತ್ತಮ ಜಾಗ.
  • ಈ ವರ್ಷದ ಜುಲೈ ೪ ರಂದು, ಬಾಣ-ಬಿರುಸು-ಸಿಡಿಮದ್ದುಗಳನ್ನು ಸಿಡಿಸಿ ಅದ್ಧೂರಿಯಿಂದ ’ಅಮೆರಿಕದ ಸ್ವಾತಂತ್ರ್ಯೋತ್ಸವ,’ ವನ್ನು ಆಚರಿಸಲಾಯಿತು. ನಡೆದವು. ದೊಡ್ಡದೊಡ್ದ ಹಡಗುಗಳು ಪ್ರಯಾಣಿಕರ ಸರಕು ಸಾರಂಜಾಮುಗಳನ್ನು ಸಾಗಿಸುವ, ಗೋಲ್ಡನ್ ಗೇಟ್ ಪಾರ್ಕ್ ನಿಂದ, ’ಟ್ವಿನ್ ಪೀಕ್ಸ್,’ ವರೆಗಿನ ಹಬ್ಬಿದ ಜಾಗ ’ಬೇಬ್ರಿಡ್ಜ್,’ ವರೆಗೆ ಮತ್ತೆ ಅಲ್ಲಿಂದ ಮುಂದಿನವರೆಗೂ ಸಾಧ್ಯವಿದೆ.

'ಆರ್ಟ್ ಡೆಕೋ ಮಾದರಿ',ಆಗ ಪ್ರಸಿದ್ಧಿಯಲ್ಲಿತ್ತು

ಬದಲಾಯಿಸಿ

ಪ್ರತಿಷ್ಟಿತ 'ಗೋಲ್ಡನ್ ಬ್ರಿಡ್ಜ್,' ೧೯೩೬ ರ ಸಮಯದಲ್ಲಿ ಚಾಲನೆಯಲ್ಲಿದ್ದ, ’ಆರ್ಟ್ ಡೆಕೊ,’ ಮಾದರಿಯಲ್ಲಿದ್ದು ಹೋಲುತ್ತವೆ. ಅಗಲವಾದ, ಉದ್ದೆಕ್ಕೆದ್ದು ಮೇಲೇರುವ ವೈರ್ ಕಂಬಿಗಳಿಂದ ಹೊಸೆದ ಉದ್ದನೆಯ ಅಡ್ಡವಾಗಿ ನೇತುಹಾಕಿರುವ ತರಹ, ಸೂರ್ಯನ ಕಿರಣಗಳು ನೇರವಾಗಿ ಸೇತುವೆಯ ಉದ್ದದ ದಾರಿಗೆ ಬೆಳಕು ನೀಡುವ ತರಹದ, ಸುಂದರ ವಿನ್ಯಾಸವನ್ನು ಹೊಂದಿದೆ.

ವಿಶ್ವ ಪ್ರಸಿದ್ಧಿಯಾಗಿತ್ತು

ಬದಲಾಯಿಸಿ

ಈ ೫೦೦ ಅಡಿಎತ್ತರದ, ಭಾರಿ ಗೋಪುರಗಳು, (ಟವರ್ ಗಳು), ಮೇಲಕ್ಕೆ ಎತ್ತರಕ್ಕೆ ಹೋದಂತೆಲ್ಲಾ ಅಗಲದಲ್ಲಿ ಕಡಿಮೆಯಾಗುತ್ತವೆ. ’ಕೇಬಲ್’ ಗಳನ್ನು ಸಹಾಯಮಾಡುವ ಮತ್ತೊಂದು ಟವರ್, ’ಕಾಯಿಟ್ ಟವರ್’, ’ಆರ್ಟ್ ಡೆಕೊ’ ನಮೂಗೆ ಮತ್ತೊಂದು ಉದಾಹರಣೆ. ಆಗಿನ ಇಂಜಿನಿಯರ್, ’ಟಿಮೋಥಿ ಫ್ಲೆಂಜರ್, ಹೆಸರುಮಾಡಿದ ಪ್ರತಿಭಾನ್ವಿತ. ೪,೨೦೦ ಅಡಿ ಉದ್ದದ, ಗೋಲ್ಡನ್, ಉದ್ದ, ವಿಶ್ವ ದಾಖಲೆಯಾಗಿತ್ತು. ೨೭ ವರ್ಷ. ಎರಡು ಟವರ್ ಗಳ ಎತ್ತರ, ೭೪೬ ಅಡಿ, ವಾಶಿಂಗ್ಟನ್ ಸ್ಮಾರಕಕ್ಕಿಂತ ೧೯೧ ಅಡಿ ಎತ್ತರ. ೪೦೦ಅಡಿ [೧೩೦ ಮೀ] ಆಳದ ಫೈವ್ ಲೇನ್ ಬ್ರಿಡ್ಜ್, ’ಗೋಲ್ಡನ್ ಗೇಟ್’ ನ್ನು ಸಂಧಿಸುತ್ತದೆ.

'ಸೈಕಲ್-ಸವಾರರು','ಸ್ಕೇಟರ್ಸ್'

ಬದಲಾಯಿಸಿ

ಗೋ ಗೇಟ್ ಬ್ರಿಡ್ಜ್, ೧.೭ ಮೈಲಿ ಉದ್ದ, ಕಾರ್, ಬೈಸಿಕಲ್ ಮೇಲೆ ಸವಾರಿ, ಸ್ಕೇಟಿಂಗ್, ಅಥವಾ ನಡೆದು ದಾಟಬಹುದು. ’ಸ್ಯಾಮರಿನ್ ಕೌಂಟಿ,’ ಗೆ ಸೇರಿಸುವ, ’ದ ಬ್ರೂಕ್ಲಿನ್ ಬ್ರಿಡ್ಜ್’, ೧೮೮೩ ರಲ್ಲಿ, ಅಂದರೆ ೫೪ ವರ್ಷಗಳಹಿಂದೆ, 'ವೈರ್ ರೋಪ್ ತಯಾರಿಕೆ'ಯಲ್ಲಿ 'ಪೇಟೆಂಟ್' ಹೊಂದಿದ್ದ, ’ಜಾನ್ ಎ, ರೋಬ್ಲಿಂಗ್,’ ವಿನ್ಯಾಸಕ, ಮೊದಲ ತೂಗುಸೇತುವೆ. ಸ್ಯಾನ್ ಸಿಸ್ಕೋ ನಗರಕ್ಕೆ ತಂದಂತೆ 'ನ್ಯೂಯಾರ್ಕ್', ನಗರದಖ್ಯಾತಿಯನ್ನು ಹೆಚ್ಚಿಸಿತು.

  • ಮೊದಲಿನಿಂದಲೂ ’ಜೋಸೆಫ್ ಮರ್ಮನ್ ಸ್ಟ್ರಾಸ್’ ಗೆ, ಒಂದು ಸೇತುವೆಯನ್ನು ಕಟ್ಟಿ, ಕಡಲನ್ನು ದಾಟುವ ಅಸೆ ಪ್ರಬಲವಾಗಿತ್ತು. ಪ್ರಚಂಡ ಚಂಡಮಾರುತ, ಮತ್ತು ಮೇಲಿಂದ ಮೇಲೆ ಆಗುತ್ತಿದ್ದ ದಿನನಿತ್ಯದ ಭೂಕಂಪಗಳಿಂದ ಬೇಸತ್ತಿದ್ದ ಹಲವಾರುಜನ ನಾಗರಿಕರು ಪ್ರಯತ್ನಿಸಿ ಕಡಲನ್ನು ದಾಟುವುದು ಅಸಾಧ್ಯವೆಂದು ನಿರ್ಧರಿಸಿ ಕೈಬಿಟ್ಟಿದ್ದರು. ಅದರೆ ’ಸ್ಟ್ರಾಸ್,’ ಮಾತ್ರ ಖಂಡಿತ ಸಾದ್ಯವೆಂದು ಪರಿಗಣಿಸಿದರು. ದಕ್ಷಿಣ ತುದಿಯ ’ಪೋರ್ಟ್ ಪಾಯಿಂಟ್, ಚಾರಿತ್ರಿಕ ಸ್ಮಾರಕವನ್ನು ಸಾರಿತು.
  • ಅಕ್ಟೋಬರ್, ೧೬, ೧೯೭೦ ರಂದು, ೧೮೫೩ ರಲ್ಲಿ ಇಟ್ಟಿಗೆಯಿಂದ ಕಟ್ಟಲ್ಪಟ್ಟಿತು. ೧೮೬೧ ರಲ್ಲಾದ ಸಂಗ್ರಾಮದಿಂದಾಗಿ, ಗೋ ಬ್ರಿಡ್ಜ್ ಕಟ್ಟಲು ಒಂದು ಪ್ರದೇಶವಾಗಿ, ’ಫೋರ್ಟ್ ಪಾಯಿಂಟ್ ಲೈಟ್ ಹೌಸ್,’ ಇದೆ. ’ಕ್ಯಾಲಿಫೋರ್ನಿಯ’ ದ, ಮೊದಲ ಹಾಗೂ ಮೂರನೆಯ ’ಲೈಟ್ ಹೌಸ್’ ಗಳು ಇಲ್ಲಿಂದ ಕಾಣಿಸುತ್ತವೆ.
  • ಆಲ್ಕಟ್ರಾಝ್ ದ್ವೀಪದ ಮೇಲಿರುವ ೩ ನೆಯದು, ’ಪಾಯಿಂಟ್ ಬೊನೀಟ,’ ದಲ್ಲಿರುವ, ೧೮೪೬ ರಲ್ಲಿ ಗೋಲ್ಡನ್ ಗೇಟ್ ಕೊಲ್ಲಿಗೆ ಗೋಲ್ಡನ್ ಗೇಟ್ ಯೆಂಬ ಹೆಸರುಬಂತು. ಈ ಸೇತುವೆಗೆ ಮೊದಲಿನಿಂದಲೂ ಕಿತ್ತಳೆಬಣ್ಣವನ್ನು ಬಳಿದು ಸಿಂಗರಿಸುತ್ತಾ ಬಂದಿದ್ದಾರೆ.

ಪೆಸಿಫಿಕ್ ಮಹಾಸಾಗರದ ಮೇಲೆ

ಬದಲಾಯಿಸಿ
  • ಏಂಜೆಲ್ ದ್ವೀಪ ಮತ್ತು, ’ಆಲ್ಕಟ್ರಾಝ್,’[] ಸುತ್ತಿ ಬರಲು,ಸುಮಾರು ಒಂದೂವರೆ ಗಂಟೆ ಬೇಕು. ’ಥಾಮಸ್ ಎಡಿಸನ್ ಕಂಪೆನಿ,’ ೧೯೦೨ ರಲ್ಲಿ ಒಂದು ’ಮೂವಿ’ [No.37) ತಯಾರಿಸಿದ್ದರು, ಆ ಚಲನಚಿತ್ರ ಗೋಲ್ಡನ್ ಗೇಟ್ ಬ್ರಿಡ್ಜ್ ಕಟ್ಟುವ ಮೊದಲು ಮಾಡಿದ್ದು (ಪ್ಯಾಸೆಂಜರ್ ರೈಲು, 'ಕ್ಲಿಫ್ ಹೌಸ್,' ನಿಂದ ’ಸುಟ್ರೋಬಾತ್,’ ಹಾದು, 'ಕ್ಲಿಫ್' ನ ಕೊನೆವರೆಗಿನ ರಸ್ತೆಯ ಅಂತ್ಯದವರೆಗೆ ಚಲನ-ಚಿತ್ರದಲ್ಲಿ ತೋರಿಸಲಾಗಿತ್ತು.
  • ಸುಮಾರು ಇಂತಹ ೨೫ ಚಲನಚಿತ್ರಗಳನ್ನು ’ಲೈಬ್ರರಿ ಆಫ್ ಕಾಂಗ್ರೆಸ್,’ ನಮಗೆ ಒದಗಿಸುತ್ತದೆ. ಬೇಕಾದಷ್ಟು (SF) ಟೂರ್ ಸರ್ವೀಸ್ ಗಳಿವೆ. ಸೇತುವೆ ದಾಟುವ, ಇಲ್ಲವೇ ಕೆಳಗಡೆ ಹೋಗುವ ಬಗ್ಗೆ, ಮೊದಲೇ ’ಆನ್ ಲೈನ್ ಬುಕಿಂಗ್,’ ಮಾಡಬಹುದು. ಬೇಸಿಗೆಯಲ್ಲಿ ಮೊದಲೇ ಟಿಕೆಟ್ ಬುಕ್ ಮಾಡಿ ಸ್ಥಳ ಕಾದಿರಿಸಬಹುದು. ಒಟ್ಟು ೪೧ ಮಿಲಿಯನ್ ಗಿಂತಾ ಹೆಚ್ಚು ವಾಹನಗಳನ್ನು ಪರ್ಯಟಕರು, ಬಳಸುತ್ತಾರೆ. (ದಿನಂಪ್ರತಿ, ೧ ಲಕ್ಷ ೧೦ ಸಾವಿರಕ್ಕೂ ಅಧಿಕ.

'ರೌಂಡ್ ಹೌಸ್,'ನ ಭೇಟಿ

ಬದಲಾಯಿಸಿ

ಸೇತುವೆಯನ್ನು ನೋಡಲು ಬಂದ ಪರ್ಯಟಕರಿಗೆ, ದಕ್ಷಿಣಭಾಗದಲ್ಲಿರುವ ರೌಂಡ್ ಹೌಸ್ ಅತ್ಯಂತ ಮುದುಕೊಡುವ ತಾಣವೆಂದು ಹೆಸರಾಗಿದೆ. ಇಲ್ಲಿನ ವಸ್ತುಭಂಡಾರದಲ್ಲಿ, ಸೇತುವೆಯ ಬಗ್ಗೆ ಬರೆದ ಪುಸ್ತಕಗಳು, ಸ್ಮರಣಿಕೆಗಳು, ಚಿತ್ರದ ಆಲ್ಬಮ್ ಗಳು, ಅತಿ ಇತ್ತೀಚೆಗೆ ನಿರ್ಮಾಣ ಮಾಡಿದ ವೀಡಿಯೋ ಚಿತ್ರಗಳು,ಇತ್ಯಾದಿಗಳು ಹೇರಳವಾಗಿ ದೊರೆಯುತ್ತವ. ದೇಶ ವಿದೇಶಗಳಿಂದ ವೀಕ್ಷಿಸಲು ಆಗಮಿಸುವವರ ಸಂಖ್ಯೆ ಸುಮಾರು ೧೦ ಮಿಲಿಯನ್ ಗಿಂತ ಹೆಚ್ಚೆಂದು ಅಂದಾಜು ಮಾಡಲಾಗಿದೆ. ನಗರದ,'ಕೇಬಲ್ ಕಾರ್' []ನಲ್ಲಿ ಪ್ರಯಾಣಮಾಡುವುದು ತುಂಬ ಮೋಜಿನ ಸನ್ನಿವೇಶ. ಇಂದಿಗೂ ೧೫೦ ವರ್ಷಕ್ಕೂ ಮೇಲ್ಪಟ್ಟು ಬಳಕೆಯಲ್ಲಿರುವ 'ಕೇಬಲ್ ಕಾರ್' ಗಳು ವ್ಯವಸ್ಥಿತವಾಗಿ ನಗರದ ಪರ್ಯಟಕರಿಗೆ ಸಹಾಯ ಕಲ್ಪಿಸುತ್ತಿವೆ.

ಉಲ್ಲೇಖಗಳು

ಬದಲಾಯಿಸಿ
  1. "Golden_ Gate_ Bridge". Archived from the original on 2006-02-18. Retrieved 2014-07-07.
  2. "A view on cities, Alcatraz The Rock". Archived from the original on 2013-10-15. Retrieved 2015-05-06.
  3. "Cable Cars". Archived from the original on 2015-05-16. Retrieved 2015-05-06.

ಬಾಹ್ಯಸಂಪರ್ಕಗಳು

ಬದಲಾಯಿಸಿ
  1. 'The Golden Gate Bridge 'humming' is driving people crazy. A team of engineers is working to shut it up-Steve Rubenstein,Sanfrancisco chronicle, May 15, 2021
  2. Engineers Work to Silence Loud Hum on Golden Gate Bridge, nbcbayarea.com, The Associated Press, May 16, 2021