ಗೋಲ್ಡನ್ ಬ್ರಿಡ್ಜ್

"ಗೋಲ್ಡನ್ ಬ್ರಿಡ್ಜ್" ಸೇತುವೆಯು ಪಶ್ಚಿಮ ಭಾರತಗುಜರಾತ್ ರಾಜ್ಯದ ಅಂಕಲೇಶ್ವರ ಹಾಗೂ ಭೂರಾಚ್ ನಡುವೆ ಇದೆ. ಇದನ್ನು ಬ್ರಿಟಿಷರು ೧೮೮೧ ರಲ್ಲಿ ನಿರ್ಮಿಸಿದರು. ಆಗ ಬಾಂಬೆಯಲ್ಲಿದ್ದ ( ಈಗ ಮುಂಬಯಿ ) ಆಡಳಿತ ಅಧಿಕಾರಿಗಳಿಗೆ ಹಾಗೂ ವಾಣಿಜ್ಯ ವ್ಯವಹಾರಗಳಿಗೆ ಈ ಪ್ರದೇಶಗಳಲ್ಲಿ ಸರಿಯಾದ ಸಂಪರ್ಕ ಹಾಗೂ ನಿಯಂತ್ರಣ ಸಾಧಿಸಲು ನರ್ಮದಾ ನದಿಗೆ ಅಡ್ಡಲಾಗಿ ಒಂದು ಸೇತುವೆಯ ಅಗತ್ಯವಿತ್ತು[]. ಈ ಸೇತುವೆಯನ್ನು ನರ್ಮದಾ ಸೇತುವೆ ಎಂದೂ ಕರೆಯುತ್ತಾರೆ.

ಗೋಲ್ಡನ್ ಬ್ರಿಡ್ಜ್

ನಿರ್ಮಾಣ

ಬದಲಾಯಿಸಿ

ಬ್ರಿಟಿಷರು ಕಬ್ಬಿಣದ ಸೇತುವೆಯ ನಿರ್ಮಾಣವನ್ನು ೭ ಡಿಸೆಂಬರ್ ೧೮೭೭ರಂದು ಪ್ರಾರಂಭಿಸಲಾಯ್ತು. ಈ ಸೇತುವೆಯನ್ನು ನಿರ್ಮಿಸುವ ಗುತ್ತಿಗೆಯನ್ನು ಬಾಂಬೆ ಹಾಘು ಬರೋಡಾ ಮತ್ತು ಸೆಂಟ್ರಲ್ ಇಂಡಿಯಾ ರೈಲ್ವೇಯವರು ವಹಿಸಿಕೊಂಡರು. ಇದರ ವಿನ್ಯಾಸ ಸರ್ ಜಾನ್ ಹಾಕ್ಸಾ ಅವರದ್ದಾಗಿದೆ[]. ಸೇತುವೆಯನ್ನು ೧೬ ಮೇ ೧೮೮೧ ರಂದು ೪೫.೫೫ ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಲಾಯಿತು. ಮೂಲತಃ ನರ್ಮದಾ ಸೇತುವೆ ಎಂದು ಹೆಸರಿಸಲಾಯಿತು. ಆದರೆ ಸೇತುವೆ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ಭಾರೀ ನೀರಿನ ಹರಿವಿನಿಂದಾಗಿ ಅಂದಾಜಿಗಿಂತ ಹೆಚ್ಚು ವೆಚ್ಚವಾಯಿತು. ಆದ್ದರಿಂದ ಇದು ಚಿನ್ನದ ಸೇತುವೆ ಎಂದು ಕರೆಯಲ್ಪಡುತ್ತದೆ. ಸ್ವಾತಂತ್ರ್ಯದ ನಂತರ ಇದು ರಾಷ್ಟ್ರೀಯ ಹೆದ್ದಾರಿಯ ಭಾಗವಾಯಿತು. ಆದಾಗ್ಯೂ, ನರ್ಮದಾ ಮೇಲೆ ಹೊಸ ಸೇತುವೆಯನ್ನು ನಿರ್ಮಿಸಿದ ನಂತರ ಭಾರೀ ದಟ್ಟಣೆಯ ಹರಿವು ಕಡಿಮೆಯಾಗಬಹುದು.

ನರ್ಮದಾ ಸೇತುವೆಯು ಸುಮಾರು ೧೪೧೨ ಮೀಟರುಗಳಷ್ಟು ಉದ್ದವಿದೆ.

ಇದನ್ನು ನೋಡಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ