ಗುಜರಾತ್ ಸಮಾಚಾರ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಗುಜರಾತ್ ರಾಜ್ಯದ ಅಹಮದಾಬಾದಿನಿಂದ ಪ್ರಕಟವಾಗುತ್ತಿರುವ ಗುಜರಾತಿ ಭಾಷಾಪತ್ರಿಕೆ. ಪ್ರತಿದಿನ ಬೆಳಗ್ಗೆ ಹೊರಡುತ್ತದೆ. ಪ್ರಸಾರದ ದೃಷ್ಟಿಯಿಂದ ಇದು ಗುಜರಾತಿ ಪತ್ರಿಕೆಗಳಲ್ಲಿ ಎರಡನೆಯದು. ಲೋಕ ಪ್ರಕಾಶನ ಲಿಮಿಟೆಡ್ ಸಂಸ್ಥೆ 1932ರಲ್ಲಿ ಈ ಪತ್ರಿಕೆಯ ಪ್ರಕಾಶನವನ್ನು ಪ್ರಾರಂಭಿಸಿತು. ರಾಷ್ಟ್ರೀಯ ಧೋರಣೆಯುಳ್ಳ ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶಾಂತಿಲಾಲ ಎ.ಶಹಾ. ಶ್ರೇಯಾಂಸ ಎಸ್. ಶಹಾ ಸಂಪಾದಕರು. ಅಗ್ರಲೇಖನ, ರಾಜಕೀಯ, ಆರ್ಥಿಕ, ಸಾಮಾಜಿಕ ಲೇಖನಗಳು ಇವು ನಿತ್ಯದ ವೈಶಿಷ್ಟ್ಯಗಳು. ಭಾನುವಾರದ ಸಂಚಿಕೆಯಲ್ಲಿ ಸಾಹಿತ್ಯಕ ಲೇಖನಗಳಿರುತ್ತವೆ. ಅಹಮದಾಬಾದ್ ಅಲ್ಲದೆ ವಡೋದರ, ಸೂರತ್, ರಾಜ್ಕೋಟ್, ಭಾವನಗರ ಮತ್ತು ಮುಂಬೈನಿಂದಲೂ ಪ್ರಕಟವಾಗುತ್ತಿದೆ.
Gujarat Samachar logo.png | |
---|---|
ವರ್ಗ | Daily newspaper |
ವಿನ್ಯಾಸ | Broadsheet |
ಮಾಲೀಕ | Lok Prakashan Ltd. |
ಪ್ರಕಾಶಕ | Shreyans Shah |
ಸಂಪಾದಕ | Shreyans Shah |
ಸ್ಥಾಪನೆ | 1932 |
ಭಾಷೆ | Gujarati |
ಕೇಂದ್ರ ಕಾರ್ಯಾಲಯ | Ahmedabad, India |
ಚಲಾವಣೆ | 46,42,000 (Indian Readership Survey 2014) |
ಅಧಿಕೃತ ತಾಣ | www |