ಗಾಯತ್ರೀ ನಾವಡ ಸ೦ಶೋಧನೆ, ಸ್ತ್ರೀವಾದ, ಸಂಸ್ಕೃತಿ ವಿಮರ್ಶೆ, ಜಾನಪದ ಸ೦ಗ್ರಹ, ಅನುಭಾವ ಸಾಹಿತ್ಯ, ಬುಡಕಟ್ಟು ಅಧ್ಯಯನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಂಶೋಧಕಿಯಾಗಿ ದುಡಿದವರು.ಕನ್ನಡ ಮತ್ತು ತುಳು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ.

ಡಾ.ಗಾಯತ್ರಿ ನಾವಡ ಇವರು ಕನ್ನಡ ಮತ್ತು ತುಳು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ. ಸ೦ಶೋಧನೆ, ಸ್ತ್ರೀವಾದ, ಸಂಸ್ಕೃತಿ ವಿಮರ್ಶೆ, ಜಾನಪದ ಸ೦ಗ್ರಹ, ಅನುಭಾವ ಸಾಹಿತ್ಯ, ಬುಡಕಟ್ಟು ಅಧ್ಯಯನ ಹೀಗೆ ಹಲವು ಕ್ಷೇತ್ರಗಳಲ್ಲಿ ಸಂಶೋಧಕಿಯಾಗಿ ದುಡಿದವರು. ಇವರು ತಮ್ಮ ಹೈಸ್ಕೂಲ್ ಮತ್ತು ಕಾಲೇಜು ಜೀವನದಲ್ಲಿರುವಾಗಲೇ 'ಜೀವಿ' ಎ೦ಬ ಕಾವ್ಯನಾಮದಲ್ಲಿ ಕತೆ, ಕವನ, ಲೇಖನ ಬರೆಯುತ್ತಿದ್ದರು. ಗಾಯತ್ರಿ ನಾವಡರ ಬರವಣಿಗೆಗಳು, ಅಧ್ಯಯನಗಳು ತುಂಬಾ ಆಳ ಮತ್ತು ತಾರ್ಕಿಕವಾಗಿವೆ.

ಜನನ, ಜೀವನ

ಬದಲಾಯಿಸಿ

೧೯೫೪ ಆಗಸ್ಟ್ ೭ರ೦ದು ಇವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಜನಿಸಿದರು. ಇವರ ತ೦ದೆ ಅನಂತ ಕೃಷ್ಣವರ್ಣ ಕೋಟೇಶ್ವರ ಮತ್ತು ಇವರ ತಾಯಿ ಕಮಲಮ್ಮ. ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಲ್ಲಿ ಗಾಯತ್ರಿಯವರು ಕೊನೆಯವರು. ಇವರು ೧೯೭೫ರಲ್ಲಿ ಜಾನಪದ ವಿದ್ವಾ೦ಸ, ಕನ್ನಡ ಸ೦ಶೋಧಕ, ಸ೦ಘಟಕರಾದ ಪ್ರೊ. ಎ. ವಿ. ನಾವಡರವರನ್ನು ವಿವಾಹವಾದರು. ಬಿ.ಎ. ಪದವಿ ಅನ೦ತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿ೦ದ ೧೯೮೮ರಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು.[] ಕನ್ನಡ ಎಂ.ಎ. ಪದವಿಯ ನ೦ತರ ಎರಡು ಪಿ.ಎಚ್.ಡಿ. ಪದವಿಯನ್ನು ಪಡೆದರು. ಮೊದಲಿಗೆ 'ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು' ಎಂಬ ಮಹಾಪ್ರಬಂಧಕ್ಕೆ ೧೯೯೭ರಲ್ಲಿ [ಗುಲ್ಬರ್ಗಾ]] ವಿಶ್ವವಿದ್ಯಾಲಯದಿಂದ, ನ೦ತರ 'ಸಿರಿಪಂಥ: ಮಹಿಳಾ ಸಬಲೀಕರಣ - ಸಮಾಜೋ ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಡಾ.ಟಿ.ಎಂ.ಎ.ಪೈ ರಾಷ್ಟ್ರೀಯ ಫೆಲೋಷಿಪ್ ನಲ್ಲಿ ೨೦೦೪ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ.ಪದವಿ ಪಡೆದರು.[]

ಕೃತಿಗಳು

ಬದಲಾಯಿಸಿ

ಮಹಾಪ್ರಬ೦ಧಗಳು

ಬದಲಾಯಿಸಿ
  • ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು
  • ಸಿರಿಪ೦ಥ:ಮಹಿಳಾ ಸಬಲೀಕರಣ -ಸಮಾಜೋ ಸಾ೦ಸೃತಿಕ ಅಧ್ಯಯನ

ಸ್ತ್ರೀವಾದಿ ವಿಮರ್ಶಾ ಕೃತಿಗಳು

ಬದಲಾಯಿಸಿ
  • ವಿರಚನೆ - ೧೯೯೭
  • ಭಾರತೀಯ ಸ್ತ್ರೀವಾದ: ಒಂದು ಸಂಕಥನ - ೨೦೦೦
  • ಮಹಿಳಾ ಸಂಕಥನ - ೨೦೦೩
  • ಸಿರಿಪಂಥ: ಮಹಿಳಾ ಸಾಂಸ್ಕೃತಿಕ ಸಬಲೀಕರಣದ ಮಾದರಿ

ಸಂಪಾದಿತ ಕೃತಿಗಳು

ಬದಲಾಯಿಸಿ
  1. ಮೂಕಜ್ಜಿ ಬದುಕು ಸಾಹಿತ್ಯ - ೧೯೮೮
  2. ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ - ೧೯೯೨
  3. ತೇರು -೧೯೯೩
  4. ಸಾವಿರ ಕೀರ್ತನೆಗಳು - ೨೦೦೦
  5. ಅಲೆಯೊಸಗೆ - ೨೦೦೧
  6. ಕರಾವಳಿಯ ಜನಪದ ಕತೆಗಳು
  7. ಕರಾವಳಿ ಮದುವೆ ಹಾಡುಗಳು

ಇತರ ಕೃತಿಗಳು

ಬದಲಾಯಿಸಿ
  • ಚಿತ್ತಾರ ಬರೆದ ಬದುಕು ೧೯೯೧
  • ನಮ್ಮ ಹೆಣ್ಣು ಮಗು ೧೯೯೨
  • ಭಾರತೀಯ ಸ್ತ್ರೀವಾದ:ಒ೦ದು ಸ೦ಕಥನ
  • ಅಧ್ಯಯನ ಗ್ರ೦ಥ-ನಮ್ಮ ಹೆಣ್ಣು ಮಗು
  • ಕಾದ೦ಬರಿ-ಅಲೈ ಓಶೈ
  • ಸಿರಿಕತೆ ೧೯೯೪

ಬಿಡಿ ಲೇಖನಗಳು

ಬದಲಾಯಿಸಿ
  • ಸಾಮೂಹಿಕ ವಿವಾಹ:ಒಂದು ಸಾಮಾಜಿಕ ಅಧ್ಯಯನ - ೧೯೯೨

ಸಂಶೋಧನಾ ಯೋಜನೆಗಳು

ಬದಲಾಯಿಸಿ
  • ಖಾರ್ವಿ ಸಮುದಾಯ ಆರ್ಥಿಕ - ಸಾಮಾಜಿಕ ಅಧ್ಯಯನ
  • ಕುಡುಬಿಯರು
  • ಕಾಡ್ಯನಾಟ
  • ಪಾಣರಾಟ
  • ಕೋಟ ಪರಿಸರದ ಜೀವನಾವರ್ತನ ಸಂಬಂಧಿ ಆಚರಣಾತ್ಮಕ ಹಾಡುಗಳು
  • ಸಾಕ್ಷ್ಯಚಿತ್ರ ನಿರ್ದೇಶನ

ಪ್ರಶಸ್ತಿಗಳು

ಬದಲಾಯಿಸಿ
  • 'ಮೂಕಜ್ಜಿ ಬದುಕು ಸಾಹಿತ್ಯ' ಅತ್ಯುತ್ತಮ ಕೃತಿಯೆಂಬುದಕ್ಕೆ ೧೯೯೦ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪೀಟರ್ ಜೆ.ಕ್ಲಾಸ್ 'ಮಹಿಳಾ ಜಾನಪದ ಪ್ರಶಸ್ತಿ'
  • 'ಚಿತ್ತಾರ ಬರೆದ ಬದುಕು' ಕೃತಿಗೆ ೧೯೯೦ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ 'ಉತ್ತಮ ಕೃತಿ' ಬಹುಮಾನ
  • ೧೯೯೨ರಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ ಪುರಸ್ಕಾರ
  • ೧೯೯೩ರಲ್ಲಿ 'ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ' ಗ್ರಂಥಕ್ಕೆ ಗು೦ಡ್ಮಿ ಜಾನಪದ ಪ್ರಶಸ್ತಿ[]
  • ೧೯೯೪ರಲ್ಲಿ 'ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ' ಗ್ರಂಥಕ್ಕೆ ಆರ್ಯಭಟ ಪ್ರಶಸ್ತಿ[]
  • ೧೯೯೪ರಲ್ಲಿ ಕಾಂತಾವರ ಕನ್ನಡ ಸಂಘದಿಂದ 'ಸಂಸ್ಕೃತಿ ಸಂಶೋಧಕಿ' ಪುರಸ್ಕಾರ

ಇತರ ಗೌರವಗಳು

ಬದಲಾಯಿಸಿ
  • 'ಕಾಡ್ಯನಾಟ: ಪಠ್ಯ ಮತ್ತು ಪ್ರದರ್ಶನ' ಎಂಬ ಕೃತಿ ಇಂಗ್ಲಿಷ್ ಭಾಷೆಗೆ 'Kadayanata: Text and Performance' ಎಂದು ಅನುವಾದಗೊಂಡಿದೆ
  • ೧೯೯೨ ಮಹಿಳಾನಿಷ್ಠ ಜಾನಪದ ಕಮ್ಮಟದ, ಧರ್ಮಸ್ಥಳದಲ್ಲಿ ನಡೆದ ಮಹಿಳಾ ಜಾನಪದ ಕಲೆಗಳ ತರಬೇತಿ ಕಮ್ಮಟದ ಸಂಚಾಲಕಿಯಾಗಿ ಕಾರ್ಯನಿರ್ವಹಣೆ
  • ಸ್ತ್ರೀಸ್ವಾಸ್ಥ್ಯ ಕಮ್ಮಟದ ನಿರ್ದೇಶಕಿಯಾಗಿ ಕಾರ್ಯನಿರ್ವಹಣೆ
  • ಕುಂದಾಪುರದ ಸ್ಪಂದನ ಸಾಹಿತ್ಯಿಕ ಸಾಮಾಜಿಕ ವೇದಿಕೆಯ ಸ್ಥಾಪಕ ಕಾರ್ಯದರ್ಶಿ
  • ಕುಂದಾಪುರದ ಪ್ರಾದೇಶಿಕ ವ್ಯಾಸಾಂಗದ ಪ್ರಕಾಶಕಿ
  • ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಕುಂದಾಪುರ ತಾಲ್ಲೂಕು ಪ್ರತಿನಿಧಿ

ಉಲ್ಲೇಖ

ಬದಲಾಯಿಸಿ
  1. ಚ೦ದ್ರಗಿರಿ ನಾಡೋಜ ಡಾ.ಸಾ.ರಾ. ಅಬೂಬಕ್ಕರ್ ಅಭಿನ೦ದನಾ ಗ್ರ೦ಥ, ಸ೦ಪಾದಕರು ಡಾ.ಸಬೀಹಾ, ಪ್ರಕಾಶಕರು ಸಿರಿವರ ಪ್ರಕಾಶನ ಬೆ೦ಗಳೂರು, ಪ್ರಥಮ ಮುದ್ರಣ, ೨೦೦೯ ಪುಟ ಸ್೦ಖ್ಯೆ-೩೯೭
  2. ಚ೦ದ್ರಗಿರಿ ನಾಡೋಜ ಸಾ. ರಾ. ಅಬೂಬಕ್ಕರ್ ಅಭಿನ೦ದನಾ ಗ್ರ೦ಥ, ಸ೦ಪಾದಕರು ಡಾ.ಸಬೀಹಾ,ಪ್ರಕಾಶಕರು ಸಿರಿವರ ಪ್ರಕಾಶನ ಬೆ೦ಗಳೂರು, ಪ್ರಥಮ ಮುದ್ರಣ,೨೦೦೯ಪುಟ ಸ೦ಖ್ಯೆ-೩೯೭
  3. ಚ೦ದ್ರಗಿರಿ ನಾಡೋಜ ಸಾ. ರಾ. ಅಬೂಬಕ್ಕರ್ ಅಭಿನ೦ದನಾ ಗ್ರ೦ಥ, ಸ೦ಪಾದಕರು ಡಾ.ಸಬೀಹಾ,ಪ್ರಕಾಶಕರು ಸಿರಿವರ ಪ್ರಕಾಶನ ಬೆ೦ಗಳೂರು, ಪ್ರಥಮ ಮುದ್ರಣ,೨೦೦೯ಪುಟ ಸ೦ಖ್ಯೆ-೩೯೭
  4. ಚ೦ದ್ರಗಿರಿ ನಾಡೋಜ ಸಾ. ರಾ. ಅಬೂಬಕ್ಕರ್ ಅಭಿನ೦ದನಾ ಗ್ರ೦ಥ, ಸ೦ಪಾದಕರು ಡಾ.ಸಬೀಹಾ, ಪ್ರಕಾಶಕರು ಸಿರಿವರ ಪ್ರಕಾಶನ ಬೆ೦ಗಳೂರು,ಪ್ರಥಮ ಮುದ್ರಣ,೨೦೦೯ಪುಟ ಸ೦ಖ್ಯೆ-೩೯೭