ಗರ್ಭಾ (ಗುಜರಾತಿನಲ್ಲಿ ಗರಾಬಾ) ಎಂಬುದು ಭಾರತದ ಗುಜರಾತ್ ರಾಜ್ಯದಲ್ಲಿ ಹುಟ್ಟಿದ ಒಂದು ನೃತ್ಯದ ಪ್ರಕಾರ . ಗರ್ಭಾ ಮತ್ತು ದೀಪ್ (ಒಂದು ಸಣ್ಣ ಸುಟ್ಟ ಜೇಡಿಮಣ್ಣಿನ ದೀಪ) ಎಂಬುದು ಸಂಸ್ಕೃತ ಪದದಿಂದ ಬಂದಿದೆ. ಅನೇಕ ಸಾಂಪ್ರದಾಯಿಕ ಹಬ್ಬಗಳನ್ನು ಕೇಂದ್ರ ದೀಪದ ದೀಪ ಅಥವಾ ಶಕ್ತಿ ದೇವತೆಯ ಪ್ರತಿಮೆ ಅಥವಾ ದೇವತೆಯ ಚಿತ್ರವನ್ನಿಟ್ಟು ಅದರ ಸುತ್ತ ಗರ್ಭಾ ನೃತ್ಯವನ್ನು ಮಾಡಲಾಗುತ್ತದೆ. ಗರ್ಭಾದ ವೃತ್ತಾಕಾರದ ಮತ್ತು ಸುರುಳಿಯಾಕಾರದ ಅಂಕಿ-ಅಂಶಗಳು ಇತರ ಆಧ್ಯಾತ್ಮಿಕ ನೃತ್ಯಗಳಿಗೆ ಹೋಲುತ್ತವೆ, ಅಂದರೆ ಸೂಫಿ ಸಂಸ್ಕೃತಿಗೆ ಹೋಲಿಕೆವಿದೆ. ಗರ್ಭಾ ನೃತ್ಯವನ್ನು ಒಂಬತ್ತು ದಿನಗಳ ಉತ್ಸವವಾದ ನವರಾತ್ರಿ ಸಮಯದಲ್ಲಿ ಮಾಡಲಾಗುತ್ತದೆ. []

ವ್ಯುತ್ಪತ್ತಿಶಾಸ್ತ್ರ

ಬದಲಾಯಿಸಿ

ಗರ್ಭಾ ಪದವು ಗರ್ಭಾಶಯದ ಸಂಸ್ಕೃತ ಪದದಿಂದ ಬಂದಿದೆ ಹಾಗೂ ಇದು ಗರ್ಭಾವಸ್ಥೆಯನ್ನೂ ಸೂಚಿಸುತ್ತದೆ. ಸಾಂಪ್ರದಾಯಿಕವಾಗಿ ಈ ನೃತ್ಯವನ್ನು ಮಣ್ಣಿನ ದೀಪದ ಸುತ್ತಲೂ ಬೆಳಕಿನ ಒಳಭಾಗದಲ್ಲಿ ಗರ್ಭಾ ನೃತ್ಯವನ್ನು ಮಾಡಲಾಗುತ್ತದೆ. ಮಧ್ಯದಲ್ಲಿರಿಸಿದ ಮಣ್ಣಿನ ದೀಪವನ್ನು ಗರ್ಭಾ ದೀಪ್ ಎಂದು ಕರೆಯುತ್ತಾರೆ. ಈ ದೀಪವು ಜೀವನದ ನಿರ್ಧಿಷ್ಟವಾದ ಗರ್ಭಾಶಯದಲ್ಲಿನ ಭ್ರೂಣವನ್ನು ಪ್ರತಿನಿಧಿಸುತ್ತದೆ. ಹೀಗೆ ನೃತ್ಯಗಾರರು ದೈವಿಕತೆಯ ಸ್ತ್ರೀ ರೂಪವಾದ ದುರ್ಗಾ ದೇವಿಯನ್ನು ಗೌರವಿಸುತ್ತಾರೆ. ಸಮಯದ ಹಿಂದೂ ದೃಷ್ಡಿಕೋನದ ಸಂಕೇತವಾಗಿ ಈ ನೃತ್ಯವನ್ನು ವೃತ್ತಾಕಾರದಲ್ಲಿ ನಡೆಸಲಾಗುತ್ತದೆ. ನೃತ್ಯಗಾರರು ವೃತ್ತಾಕಾರದಲ್ಲಿ ಸುತ್ತುವುದು ,ಇದು ಹಿಂದೂ ಧರ್ಮದ ಸಮಯದ ಚಕ್ರವರ್ತಿಯಾಗಿದೆ. ಗರ್ಭಾ ದೀಪ್ ಮತ್ತೊಂದು ಸಾಂಕೇತಿಕ ವ್ಯಾಖ್ಯಾವನ್ನು ಹೊಂದಿದೆ. ಎಲ್ಲಾ ಮಾನವರು ದೇವಿಯ ದೈವಿಕ ಶಕ್ತಿಯನ್ನು ಅವುಗಳೊಳಗೆ ಹೊಂದಿದ್ದಾರೆ ಎಂಬ ಸತ್ಯವನ್ನು ಗೌರವಾರ್ಥವಾಗಿ ಈ ನೃತ್ಯವು ಸೂಚಿಸುತ್ತದೆ. ಗರ್ಭಾ ಈಗ ವಿಶ್ವದ್ಯಾಂತ ಮೆಚ್ಚುಗೆ ಪಡೆದಿದೆ.[]

ಗರ್ಭಾ ಡ್ರೆಸ್ಸಿಂಗ್

ಬದಲಾಯಿಸಿ
 
ಸಾಂಪ್ರದಾಯಿಕ ಜಾನಪದ ನೃತ್ಯ ಗರ್ಭಾ ಉಡುಗೆ

ಪುರುಷರ ಸಾಂಪ್ರದಾಯಿಕ ಉಡುಪು - ಕೆಡಿಯು, ಮಹಿಳೆಯರ ಸಾಂಪ್ರದಾಯಿಕ ಉಡುಪು - ಚನಿಯ ಚೋಲಿ. ಆಧುನಿಕ ಗರ್ಭಾ ಕೂಡ ದಾಂಡಿಯಾ ರಾಸ್ ನಿಂದ ಪ್ರಭಾವಿತವಾಗಿದೆ. ಈ ಎರಡೂ ನೃತ್ಯಗಳ ವಿಲೀನವು ಇಂದು ಕಂಡುಬರುವ ಉನ್ನತ ಶಕ್ತಿಯ ನೃತ್ಯವನ್ನು ರೂಪಿಸಿದೆ. ಗರ್ಭಾವನ್ನು ಪ್ರದರ್ಶಿಸುವಾಗ ಪುರುಷರು ಮತ್ತು ಮಹಿಳೆಯರು ಇಬ್ಬರೂ ವರ್ಣರಂಜಿತ ವೇಷಭೂಷಣಗಳನ್ನು ಧರಿಸುತ್ತಾರೆ. ಹೆಣ್ಣುಮಕ್ಕಳು ಮತ್ತು ಮಹಿಳೆಯರು ಚನಿಯಾ ಚೋಲಿಯನ್ನು ಧರಿಸುತ್ತಾರೆ. ಇದು ಚೋಲಿಯೊಂದಿಗೆ ಮೂರು ತುಂಡು ಉಡುಗೆ,ಕಸೂತಿ ಮತ್ತು ವರ್ಣರಂಜಿತ ಕುಪ್ಪಸ,ಧರಿಸಿ,ಸ್ಕರ್ಟ್-ತರಹದ ಬಾಟಮ್ ಮತ್ತು ದುಪಟ್ಟ ,ಇದನ್ನು ಸಾಂಪ್ರದಾಯಿಕವಾಗಿ ಗುಜರಾತಿನಲ್ಲಿ ಧರಿಸಲಾಗುತ್ತದೆ. ಚನಿಯಾ ಚೋಲಿಗಳನ್ನು ಮಣಿಗಳು,ಚಿಪ್ಪುಗಳು,ಕನ್ನಡಿಗಳು,ನಕ್ಷತ್ರಗಳು,ಕಸೂತಿ ಕೆಲಸ,ಮತಿ ಇತ್ಯಾದಿಗಳಿಂದ ಅಲಂಕರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಮಹಿಳೆಯರು ತಮ್ಮನ್ನು ಜುಂಕಾ(ದೊಡ್ಡ ಕಿವಿಯೋಲೆ),ನೆಕ್ಲೇಸ್,ಬಿಂದಿ,ಬಜುಬಂದ್,ಚೂಡಾಗಳು ಮತ್ತು ಬಳೆಗಳನ್ನು ಧರಿಸುತ್ತಾರೆ. ಹುಡುಗರು ಮತ್ತು ಪುರುಷರು ಕಾಫ್ನಿ ಪೈಜಾಮಗಳನ್ನು ಘಾಗ್ರಾದೊಂದಿಗೆ ಧರಿಸುತ್ತಾರೆ. ಸಣ್ಣ ಸುತ್ತಿನ ಕುರ್ತಾ-ಬಂಧಿನಿ ದುಪಟ್ಟ,ಕಡಾ ಮತ್ತು ಪಗಡಿ ಧರಿಸುತ್ತಾರೆ. ಭಾರತದ ಯುವಕರಲ್ಲಿ,ಅದರಲ್ಲೂ ನಿರ್ದಿಷ್ಟವಾಗಿ,ಗುಜರಾತ್ ನವರು ಗರ್ಭಾದ ಮೇಲೆ ಅಪಾರ ಅಸಕ್ತಿಯನ್ನು ಹೊಂದಿದ್ದಾರೆ. ಗರ್ಭಾ ನೃತ್ಯವು ಯುನೈಟೆಡ್ ಸ್ಟೇಟ್ಸ್ ನಲ್ಲಿಯೂ ಜನಪ್ರಿಯವಾಗಿದೆ. ಅಲ್ಲಿ ೨೦ ಕ್ಕಿಂತ ಹೆಚ್ಚು ವಿಶ್ವವಿದ್ಯಾನಿಲಯಗಳು ವೃತ್ತಿಪರ ನೃತ್ಯ ಸಂಯೋಜನೆಯೊಂದಿಗೆ ಪ್ರತೀ ವರ್ಷ ದೊಡ್ಡ ಪ್ರಮಾಣದ ಗರ್ಭಾ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಕೆನಡಾದ ಟೊರೊಂಟೊ ನಗರವು ಈಗ ಉತ್ತರ ಅಮೇರಿಕಾದ ಅತಿದೊಡ್ಡ ವಾರ್ಷಿಕ ಗರ್ಭಾ ಸ್ಪರ್ಧೆಯನ್ನು ಆಯೋಜಿಸುತ್ತದೆ. ಯುನೈಟೆಡ್ ಕಿಂಗ್ಡಮ್ ನಲ್ಲಿಯೂ ಗರ್ಭಾ ಜನಪ್ರಿಯವಾಗಿದೆ. ಅಲ್ಲಿ ಅವರು ತಮ್ಮದೇ ಆದ ಗರ್ಭಾ ನೈಟ್ಸ್ ಗಳನ್ನು ನಡೆಸುತ್ತಾರೆ.[]

ಸಂಪ್ರದಾಯ

ಬದಲಾಯಿಸಿ

ಗರ್ಭಾ ನೃತ್ಯವು ಗುಜರಾತ್ ನ ಜಾನಪದ ನೃತ್ಯವಾಗಿದ್ದು,ಈ ನೃತ್ಯವನ್ನು ನವರಾತ್ರಿಯ ಸಮಯದಲ್ಲಿ ಮಾಡಲಾಗುತ್ತದೆ. ಗರ್ಭಾ ಹಾಡುಗಳು ಸಾಮಾನ್ಯವಾಗಿ ಒಂಬತ್ತು ವಿಶೇಷ ದೇವತೆಗಳ ಬಗ್ಗೆ ಇರುತ್ತವೆ. ಈ ನೃತ್ಯದಲ್ಲಿ ಸಾಂಪ್ರದಾಯಿಕ ಉಡುಪುಗಳು ಕೆಂಪು, ಗುಲಾಬಿ, ಹಳದಿ, ಕಿತ್ತಳೆ ಮತ್ತು ಗಾಢವಾದ ಬಣ್ಣದ ಚನಿಯಾ ಚೋಲಿ ಅಥವಾ ಘಾಗ್ರಾ ಚೋಲಿ, ಅಬ್ಲಾ(ದೊಡ್ಡ ಕನ್ನಡಿಗಳು),ದಪ್ಪ ಗುಜರಾತಿ ಗಡಿಗಳೊಂದಿಗೆ ದುಪಟ್ಟ ಧರಿಸುವುದು ಅವರ ಸಂಪ್ರದಾಯ. ಮಹಿಳೆಯರು ಎರಡು ಮೂರು ನೆಕ್ಲೇಸ್ ಗಳು,ಹೊಳೆಯುವ ಬಳೆಗಳು,ಸೊಂಟದ ಪಟ್ಟಿಗಳು,ದೊಡ್ಡದಾದ ಕಿವಿಯೋಲೆಗಳನ್ನು ಧರಿಸುವುದು ಅವರ ಸಂಪ್ರದಾಯ.[]

ಉಲ್ಲೇಖಗಳು

ಬದಲಾಯಿಸಿ