ಗಜಾಸುರನು ಮಹಿಷಾಸುರನ ಮಗ. ತಪಸ್ಸು ಮಾಡಿ ಶಿವನ ಸಂಪ್ರೀತಿಗಳಿಸಿ ಅನೇಕ ವರಗಳನ್ನು ಪಡೆದು ದೇವತೆಗಳಿಗೆ ಹಿಂಸೆ ಕೊಡುತ್ತಿದ್ದ. ಈತನ ಕಾಟ ತಡೆಯಲಾರದೆ ದೇವತೆಗಳೆಲ್ಲ ಸೇರಿ ಶಿವನನ್ನು ಮೊರೆಹೊಕ್ಕರು. ದೇವತೆಗಳಿಗೆ ಅಭಯ ನೀಡಿದ ಶಿವ ಈತನ ಮೇಲೆ ಯುದ್ಧಕ್ಕೆ ಬಂದ. ಸ್ವಯಂ ಶಿವನೇ ತನ್ನ ಮೇಲೆ ಯುದ್ಧಕ್ಕೆ ಬಂದುದನ್ನು ಕಂಡ ಗಜಾಸುರ ತಾನು ಪರಶಿವನಿಂದಲೇ ಸಾಯಬೇಕೆಂದು ಸಂಕಲ್ಪಿಸಿ ಆವರೆಗೂ ದೇವತೆಗಳಿಗೆ ಹಿಂಸೆ ಕೊಡುತ್ತಿದ್ದುದಾಗಿಯೂ ತನ್ನನ್ನು ಕೊಂದು ತನ್ನ ಚರ್ಮವನ್ನು ಶಿವ ಧರಿಸುವುದಾದರೆ ತಾನು ಸಾಯಲು ಸಿದ್ಧವೆಂದೂ ತಿಳಿಸಿದಾಗ ಶಿವ ಅದಕ್ಕೆ ಸಮ್ಮತಿ ನೀಡಿ ದಾನವನ ಬಯಕೆಯನ್ನು ಈಡೇರಿಸಿದ.[][] ಮತ್ಸ್ಯ ಹಾಗೂ ಸ್ಕಾಂದಪುರಾಣಗಳಲ್ಲಿ ಇವನ ಉಲ್ಲೇಖವಿದೆ.

ಉಲ್ಲೇಖಗಳು

ಬದಲಾಯಿಸಿ
  1. "Matangari". shaivam.org. Retrieved May 6, 2012.
  2. Sivaramamurti, C. (1976). Śatarudrīya: Vibhūti of Śiva's Iconography. Delhi: Abhinav Publications. p. 100.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಜಾಸುರ&oldid=1242762" ಇಂದ ಪಡೆಯಲ್ಪಟ್ಟಿದೆ