ಖಾಸಗಿ ಷೇರುಗಳು
ಹಣಕಾಸು ಸಂಬಂಧಿಸಿದಂತೆ ಖಾಸಗಿ ಷೇರು ಗಳೆಂದರೆ ಚಾಲ್ತಿಯಲ್ಲಿರುವ ಕಂಪನಿಗಳ ಷೇರು ಬಂಡವಾಳ ಪತ್ರಗಳನ್ನು, ಆ ಕಂಪನಿಯ ಆಸ್ತಿಯಾಗಿ ಪರಿಗಣಿಸಿದ ಷೇರುಗಳಾಗಿದ್ದು, ಅವುಗಳನ್ನು ಷೇರು ವಿನಿಮಯ ಕೇಂದ್ರದಲ್ಲಿ ಸಾರ್ವಜನಿಕವಾಗಿ ಪಡೆಯಲಾಗುವುದಿಲ್ಲ. ಖಾಸಗಿ ಷೇರುಗಳೆಂದರೆ ಅಸ್ತಿತ್ವದಲ್ಲಿರುವ ಕಂಪನಿಗಳ ದೈನಂದಿನ ಉತ್ಪಾದನಾ ಚಟುವಟಿಕೆಗಳಿಗೆ ಅಗತ್ಯ ಬಂಡವಾಳ ಹೂಡಿಕೆಯನ್ನು ಷೇರುಗಳ ಮೂಲಕ ಮಾಡುವುದು ಅಥವಾ ಕಾರ್ಯೋನ್ಮುಖ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವಿಕೆ ಎಂದು ಹೇಳಬಹುದು. ಪ್ರಾಥಮಿಕವಾಗಿ ಸಾಂಸ್ಥಿಕ ಹೂಡಿಕೆದಾರರಿಂದ ಖಾಸಗಿ ಷೇರುಗಳ ಬಂಡವಾಳ ಸಂಗ್ರಹಿಸಲಾಗುತ್ತದೆ. ವಿವಿಧ ಪ್ರಕಾರ ಮತ್ತು ರೀತಿಯ ಖಾಸಗಿ ಷೇರುಗಳಿವೆ. ಖಾಸಗಿ ಷೇರುಗಳು ಎಂಬ ಪದವನ್ನು ವಿವಿಧ ದೇಶಗಳಲ್ಲಿ ಬೇರೆಬೇರೆ ಅರ್ಥದಲ್ಲಿ ಬಳಸಿಕೊಳ್ಳುತ್ತಾರೆ. ಈ ಪದಕ್ಕೆವಿಶಾಲ ವ್ಯಾಪ್ತಿಯ ಅರ್ಥ ವ್ಯಾಖ್ಯಾನವಿದೆ.[೧]
ನಿಯಂತ್ರಿತ ಖರೀದಿ(ಕಂಪನಿಯ ಮೇಲೆ ನಿಯಂತ್ರಣ ಸಾಧಿಸಲು ಕೊಳ್ಳುವಿಕೆ)ಗಳು, ಸಾಹಸೋದ್ಯಮದ ಬಂಡವಾಳ, ಅಭಿವೃದ್ಧಿಪರ ಬಂಡವಾಳ, ಆಪತ್ಕಾಲೀನ ಬಂಡವಾಳ ಹೂಡಿಕೆ ಮತ್ತು ಮಧ್ಯಮಾವಧಿ ಬಂಡವಾಳಗಳು ಖಾಸಗಿ ಷೇರುಗಳ ಹೂಡಿಕೆಯ ಸಾಮಾನ್ಯ ವಿಧಾನಗಳಲ್ಲಿ ಒಳಗೊಂಡಿವೆ. ವಿಶೇಷ ನಿಯಂತ್ರಿತ ಖರೀದಿಯಲ್ಲಿ, ಖಾಸಗಿ ಷೇರುಹೂಡಿಕೆಯ ಸಂಸ್ಥೆಯು ಅಸ್ತಿತ್ವದಲ್ಲಿರುವ ಅಥವಾ ಉತ್ತಮ ಸ್ಥಿತಿಯಲ್ಲಿರುವ ಸಂಸ್ಥೆಯ ಬಹುಪಾಲು ಷೇರುಗಳನ್ನು ಖರೀದಿಸುತ್ತದೆ. ಇದು ಸಾಹಸೋದ್ಯಮ ಬಂಡವಾಳ ಅಥವಾ ಅಭಿವೃದ್ಧಿ ಬಂಡವಾಳದಿಂದ ಭಿನ್ನವಾಗಿದೆ.ಹಣಕಾಸಿನ ಸಂಸ್ಥೆಗಳು ಸಣ್ಣ ಪ್ರಮಾಣದ ಅಥವಾ ಅಸ್ತಿತ್ವಕ್ಕೆ ಬರುತ್ತಿರುವ ಹೊಸ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತದೆ. ತೀರಾ ವಿರಳವಾಗಿ ನಿಯಂತ್ರಣ ಸಾಧಿಸಲು ಬಹುಪಾಲು ಖಾಸಗಿ ಷೇರುಗಳನ್ನು ಖರೀದಿಸುತ್ತದೆ.
ಖಾಸಗಿ ಷೇರುಗಳ ಪ್ರಕಾರಗಳು
ಬದಲಾಯಿಸಿಈ ಕೆಳಗಿನ ಶಾಖೆಗಳಲ್ಲಿ ಖಾಸಗಿ ಷೇರುಗಳ ಹೂಡಿಕೆಯನ್ನು ವಿಂಗಡಿಸಲಾಗಿದೆ:
ನಿಯಂತ್ರಣ ಖರೀದಿ(ನಿಯಂತ್ರಿತ ಖರೀದಿ)
ಬದಲಾಯಿಸಿನಿಯಂತ್ರಣ ಖರೀದಿ , LBO ಅಥವಾ ಷೇರು ಕೊಳ್ಳುವಿಕೆ ಎಂದರೆ ಹಣಕಾಸಿನ ಹಲವು ವಿಧಾನಗಳನ್ನು ಬಳಸುವುದಾಗಿದೆ. ಕಂಪನಿ, ವ್ಯಾಪಾರದ ಘಟಕ ಅಥವಾ ವ್ಯಾಪಾರದ ಆಸ್ತಿಗಳನ್ನು ಖರೀದಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಪ್ರಸ್ತುತ ಷೇರುದಾರರೇ ವ್ಯವಹಾರದ ಭಾಗವಾಗಿ ಹೂಡಿಕೆ ಮಾಡುವುದಾಗಿದೆ. ಈ ರೀತಿಯ ವ್ಯವಹಾರಗಳಲ್ಲಿರುವ ಕಂಪನಿಗಳು ತಮಗೆ ಬೇಕಾಗುವ ಹಣದ ಹರಿವು ಮತ್ತು ಅವುಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುತ್ತವೆ.[೨]
ಸ್ವಾಧೀನಪಡಿಸಲು ಬೇಕಾದ ಎಲ್ಲಾ ಬಂಡವಾಳಕ್ಕೆ ಹೊಣೆಗಾರನಾಗದೇ ಕೇವಲ ಸ್ವಾಧೀನ ಪ್ರಕ್ರಿಯೆಗೆ ಮಾತ್ರ ಒಪ್ಪಿಗೆ ನೀಡುವ ಹಣಕಾಸು ಪ್ರಾಯೋಜಕನನ್ನು ನಿಯಂತ್ರಿತ ಖರೀದಿ ಒಳಗೊಂಡಿದೆ. ಈ ಕಾರ್ಯಕ್ಕೆ, ಹಣಕಾಸು ಪ್ರಾಯೋಜಕರು ಬಡ್ಡಿ ಮತ್ತು ಮೂಲಧನದ ಪಾವತಿಗಾಗಿ, ಸ್ವಾಧೀನಪಡಿಸಲು ಬೇಕಾದ ಹಣ ಹೊಂದಿಸಲು ಸಾಲ ಪಡೆಯುವರು.[೩] LBOದಲ್ಲಿ ಕಂಪನಿ ಸ್ವಾಧೀನಕ್ಕೆ ಮಾಡಿದ ಸಾಲವು ಕೆಲವೊಮ್ಮೆ ಮರುಪಾವತಿಸದ ಹಣಕಾಸು ನೆರವು ನೀಡುವ ಪ್ರಾಯೋಜಕರದಾಗಿರುತ್ತದೆ. ಹಣಕಾಸು ಪ್ರಾಯೋಜಕರಿಂದ ಹೂಡಿದ ಇತರ ಯಾವುದೇ ಬಂಡವಾಳದಲ್ಲಿ ಯಾವ ರೀತಿಯ ಹಕ್ಕನ್ನೂ ಹೊಂದಿರುವುದಿಲ್ಲ. ಹಾಗಾಗಿ, LBO ವ್ಯವಹಾರಗಳಲ್ಲಿರುವ ಲಾಭದಲ್ಲಿ ಪಾಲು ದೊರೆಯುವುದರಿಂದ ವಿಶೇಷವಾಗಿ ಮಿತ ನಿಧಿಯುಳ್ಳ ಹೂಡಿಕೆದಾರರು ಮತ್ತು ಪಾಲುದಾರರಿಗೆ ಆಕರ್ಷಣೀಯವಾಗಿದೆ. ಆದರೆ ಇದರಲ್ಲಿ ಲಾಭದ ಮರುಪಾವತಿ ಸೀಮಿತವಾಗಿರುವುದು. ಈ ರೀತಿಯ ಹಣಕಾಸು ರಚನೆಯು ಎರಡು ರೀತಿಯಲ್ಲಿ LBOನ ಹಣಕಾಸು ಪ್ರಾಯೋಜಕರಿಗೆ ಅನುಕೂಲ ಮಾಡುತ್ತದೆ: (1) ಸ್ವಾಧೀನಕ್ಕೆ ಬೇಕಾದ ಬಂಡವಾಳದ ಭಾಗವನ್ನು ಮಾತ್ರ ಹೂಡಿಕೆದಾರರು ಒದಗಿಸಬೇಕಾಗುತ್ತದೆ, ಇದರಿಂದ(2) ಹೂಡಿಕೆದಾರರಿಗೆ ಆದಾಯ ಅಧಿಕವಾಗುವುದು (ಸ್ವತ್ತಿನ ಮೇಲಿನ ಆದಾಯವು ಸಾಲಕ್ಕಿಂತ ಹೆಚ್ಚಿರುವವರೆಗೆ).[೪]
ಹಣಕಾಸಿನ ಪರಿಸ್ಥಿತಿ ಮತ್ತು ಸ್ವಾಧೀನಪಡಿಸುವಿಕೆ ಮೊತ್ತದ ಪ್ರಮಾಣ, ಮಾರುಕಟ್ಟೆ ನಿಬಂಧನೆಗಳು, ಸಾಲದ ಅವಧಿ ವಿಸ್ತರಣೆಗೆ ಸಾಲದಾತರ ಒಪ್ಪಿಗೆ ಇವೆಲ್ಲವುಗಳು ಪೂರ್ವ ನಿರ್ಧಾರಿತವಾಗಿರುತ್ತವೆ.(LBOಯ ಹಣಕಾಸು ಪ್ರಾಯೋಜಕರುಗಳು ಮತ್ತು ಕಂಪನಿ ಎರಡನ್ನು ಸ್ವಾಧೀನಪಡಿಸಿಕೊಳ್ಳಲು)ಖರೀದಿ ವೆಚ್ಚ ಭರಿಸಲು ಕಂಪನಿಯ ಸಾಮರ್ಥ್ಯದ ಮೇಲೆ ನಿಯಂತ್ರಿತ ಖರೀದಿ ಬೆಲೆಯನ್ನು ನಿಗದಿಗೊಳಿಸಲಾಗುತ್ತೆ.ಖರೀದಿ ಪ್ರಮಾಣದ ಪ್ರತಿಶತ ಮತ್ತು, ಬಂಡವಾಳಕ್ಕಾಗಿ ಬಳಸಿದ ಸಾಲದ ಪ್ರಮಾಣವು ವ್ಯತ್ಯಾಸಗೊಳ್ಳುತ್ತದೆ. ಸಾಮಾನ್ಯವಾಗಿ LBOಯ ಸಾಲ ಒದಗಿಸುವ ಪ್ರಮಾಣವು ಖರೀದಿ ಬೆಲೆಯ 60%-90%ರ ವ್ಯಾಪ್ತಿಯಲ್ಲಿರುತ್ತದೆ. ಆದರೂ ನಿರ್ದಿಷ್ಟ ಅವಧಿಯಲ್ಲಿ ಸಾಲದ ಅನುಪಾತವು ಹಿಂದಿನ ಸರಾಸರಿಗಿಂತ ಹೆಚ್ಚು ಅಥವಾ ಕಡಿಮೆ ಆಗಿರಬಹುದು.[೫] ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ 2000-2005ರ ಅವಧಿಯಲ್ಲಿ LBOಗಳ ಒಟ್ಟು ಖರೀದಿ ದರದ 59.4% ಮತ್ತು 67.9%ರಷ್ಟು ಸರಾಸರಿ ಸಾಲವಿರುತ್ತದೆ.[೬]
ಸಾಹಸೋದ್ಯಮ ಬಂಡವಾಳ
ಬದಲಾಯಿಸಿಸಾಹಸೋದ್ಯಮ ಬಂಡವಾಳ [೭] ವು ಖಾಸಗಿ ಷೇರುಗಳ ಒಂದು ಭಾಗವಾಗಿದ್ದು, ಇನ್ನೂ ಅಸ್ತಿತ್ವ ಕಾಣದ, ಆರಂಭವಾಗುತ್ತಿರುವ, ಅಭಿವೃದ್ಧಿ ಹೊಂದುತ್ತಿರುವ ಕಂಪನಿಗಳಲ್ಲಿ, ಅಥವಾ ಅವುಗಳ ವ್ಯಾಪಾರದ ವಿಸ್ತರಣೆಗಾಗಿ ಹೊಣೆಗಾರಿಕೆ ಮೀರಿ ಬಂಡವಾಳ ಹೂಡಿಕೆ ಮಾಡುವುದಾಗಿದೆ. ಹೆಚ್ಚಾಗಿ ಸಾಹಸೋದ್ಯಮ ಬಂಡವಾಳವೆಂದರೆ ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿರುವ, ಹೊಸ ತಂತ್ರಜ್ಞಾನದ ಅಳವಡಿಕೆ, ಹೊಸ ಮಾರುಕಟ್ಟೆ ಅವಿಷ್ಕಾರ ಮತ್ತು ಹೊಸ ಉತ್ಪನ್ನಗಳಲ್ಲಿ ಹಣ ತೊಡಗಿಸುವುದಾಗಿದೆ.[೮][೯]
ಸಾಹಸೋದ್ಯಮ ಬಂಡವಾಳವನ್ನು ಪ್ರಾರಂಭವಾಗುತ್ತಿರುವ ಕಂಪನಿಗಳು ಅಸ್ತಿತ್ವಕಂಡುಕೊಳ್ಳುವ ಹಂತದವರೆಗೆ ವಿಂಗಡಿಸಲಾಗುತ್ತದೆ. ಅಭಿವೃದ್ಧಿಪರ ಬಂಡವಾಳವನ್ನು ಕಂಪನಿಯ ಉಜ್ವಲ ಭವಿಷ್ಯಕ್ಕಾಗಿ ವಿನಿಯೋಗಿಸಲಾಗುತ್ತದೆ.ಆದಾಯ ಗಳಿಸುವ ಮತ್ತು ಪ್ರತಿಫಲದ ನೀರಿಕ್ಷೆಗಾಗಿ ಇನ್ನೂ ಹೆಚ್ಚು ಪ್ರಮಾಣದ ಹಣದ ಹರಿವಿಗೆ ಅನುವು ಮಾಡಿಕೊಡುತ್ತದೆ. ಈಗಾಗಲೇ ಹೂಡಿದ ಅಸ್ತಿತ್ವದಲ್ಲಿರುವ ಬಂಡವಾಳದ ವಿಸ್ತರಣಗೆ ಹೆಚ್ಚಾಗಿ ಇದನ್ನು ಬಳಸಲಾಗುವುದು.[೧೦]
ವಾಣಿಜ್ಯೋದ್ಯಮಿಗಳು ಕೆಲವೊಮ್ಮೆ ಕಂಪನಿಗಳು ಅಸ್ತಿತ್ವಕ್ಕೆ ಬರುವ ಹಂತದಲ್ಲಿ ಬಂಡವಾಳದ ಅಗತ್ಯವಿರುವ ಉತ್ಪನ್ನಗಳು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಾರೆ. ಹಲವು ವಾಣಿಜ್ಯೋದ್ಯಮಿಗಳು ಯೋಜನೆಗಳಿಗೆ ಅಗತ್ಯವಿರುವ ಹಣಕಾಸನ್ನು ಹೊಂದಿರುವುದಿಲ್ಲ. ಅವರು ಹೊರಗಡೆಯಿಂದ ನಿಧಿ ಸಂಗ್ರಹಿಸುತ್ತಾರೆ.[೧೧] ಸಾಹಸೋದ್ಯಮ ಬಂಡವಾಳ ಹೂಡಿಕೆದಾರರು ಕಂಪನಿಗಳಿಗೆ ವೆಚ್ಚದಾಯಕ ಬಂಡವಾಳ ಮೂಲಗಳಿಂದ ನಿಧಿ ಸಂಗ್ರಹಣೆಯ ಅಪಾಯ ತಡೆಯಲು ಉತ್ತಮ ಲಾಭ ಗಳಿಸುವ ಅಗತ್ಯವಿದೆ. ಸಾಲದಂತಹ ಕಡಿಮೆ ವೆಚ್ಚದ ಹಣಕಾಸು ಮೂಲಗಳಿಂದ ಪಡೆದ ನಿಧಿ, ದೊಡ್ಡ ಪ್ರಮಾಣದ ವ್ಯವಹಾರಗಳಿಗೆ ಸಾಹಸೋದ್ಯಮ ಬಂಡವಾಳ ಸೂಕ್ತವಾಗಿದೆ. ಸಾಹಸೋದ್ಯಮ ಬಂಡವಾಳವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳೊಂದಿಗೆ ಹೆಚ್ಚಿನ ಸಂಬಂಧ ಹೊಂದಿದೆ.ಸಾಹಸೋದ್ಯಮ ಬಂಡವಾಳವು ಇತರ ಸಾಂಪ್ರದಾಯಿಕ ವ್ಯವಹಾರಗಳಲ್ಲಿಯೂ ಹೂಡಿಕೆ ಕಂಡಿದೆ.[೮][೧೨]
ಪ್ರಗತಿಪರ ಬಂಡವಾಳ
ಬದಲಾಯಿಸಿಪ್ರಗತಿಪರ ಬಂಡವಾಳ ವೆಂದರೆ ಕಂಪನಿಯ ವಿಸ್ತರಣೆ ಅಥವಾ ಪುನಾರಚನೆಯ ಪ್ರಕ್ರಿಯೆ,ಎಂದು ಪರಿಗಣಿತವಾಗಿದೆ. ಹೊಸ ಮಾರುಕಟ್ಟೆ ಪ್ರವೇಶಿಸಲು ಅಥವಾ ವ್ಯಾಪಾರದ ವ್ಯವಸ್ಥೆಯನ್ನು ಬದಲಿಸದೆ ಪ್ರಮುಖ ಕಂಪನಿಯ ಸ್ವಾಧೀನಕ್ಕೆ ಅಸ್ತಿತ್ವ ಹೊಂದಿರುವ ಕಂಪನಿಗಳಲ್ಲಿ ಅಲ್ಪಪ್ರಮಾಣದ ಹೂಡಿಕೆಯಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ]
ಕೆಲವೊಮ್ಮೆ ಕಂಪನಿಗಳು ತಮ್ಮ ಅಸ್ತಿತ್ವದ ಸಮಯದಲ್ಲಿ ಬದಲಾವಣೆಗೆ ಬೇಕಾದ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಪ್ರಗತಿಯ ಬಂಡವಾಳವನ್ನು ಆಶ್ರಯಿಸುತ್ತದೆ. ಈ ಕಂಪನಿಗಳು ಸಾಹಸೋದ್ಯಮ ಬಂಡವಾಳ ಹೂಡಿಕೆದಾರರು ಹೂಡಿಕೆ ಮಾಡಿದ ಕಂಪನಿಗಳಿಗಿಂತ ಹೆಚ್ಚು ಪಕ್ವವಾಗಿದ್ದು, ಲಾಭ ಮತ್ತು ಮುಂದುವರೆಯುವ ಸಾಮರ್ಥ್ಯ ಹೊಂದಿದೆ. ಆದರೆ ಕಂಪನಿಯ ಪ್ರಮುಖ ವಿಸ್ತರಣೆ, ಸ್ವಾಧೀನತೆ ಅಥವಾ ಇತರ ಹೂಡಿಕೆಗಳಿಗೆ ಹಣವನ್ನು ಹೊಂದಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಪ್ರಗತಿಪರ ಬಂಡವಾಳ ಹೂಡಿಕೆಯು ಕಂಪನಿ ತನ್ನ ಆಯವ್ಯಯ ಪಟ್ಟಿಯಲ್ಲಿ ಹೊಣೆಗಾರಿಕೆಯನ್ನು (ಅಥವಾ ಸಾಲ) ಕಡಿಮೆ ಮಾಡುವುದರಿಂದ ಆಯವ್ಯಯಪಟ್ಟಿ (balance sheet) ಮೇಲೆ ಪರಿಣಾಮ ಉಂಟಾಗುತ್ತದೆ.[೧೩] ಸಾರ್ವಜನಿಕ ಷೇರುಗಳಲ್ಲಿ ಖಾಸಗಿ ಹೂಡಿಕೆ ಅಥವಾ PIPEs ಸಾರ್ವಜನಿಕವಾಗಿ ವ್ಯವಹಾರ ನಡೆಸುವ ಕಂಪನಿಯಲ್ಲಿ ಪ್ರಗತಿಪರ ಬಂಡವಾಳ ಹೂಡಿಕೆ ಮಾಡುವ ಒಂದು ಪ್ರಕಾರವಾಗಿದೆ. PIPE ಹೂಡಿಕೆಗಳನ್ನು ಪರಿವರ್ತನೀಯ ಅಥವಾ ಅರ್ಹ ಬಂಡವಾಳ ಪತ್ರಗಳ ರೂಪದಲ್ಲಿ ಮಾಡಲಾಗುವುದು.[೧೪][೧೫]
ಸಂಕಟದ ಮತ್ತು ವಿಶೇಷ ಸಂದರ್ಭಗಳು
ಬದಲಾಯಿಸಿನಷ್ಟ,ಸಂಕಟದ ಅಥವಾ ವಿಶೇಷ ಸಂದರ್ಭಗಳು ಅರ್ಥಿಕವಾಗಿ ನಷ್ಟಗೊಂಡ ಕಂಪನಿಗಳ ಷೇರು ಬಂಡವಾಳ ಮತ್ತು ಸಾಲಪತ್ರಗಳಲ್ಲಿ ಹೂಡಿಕೆಯನ್ನು ಉಲ್ಲೇಖಿಸುವ ಒಂದು ಪ್ರಮುಖ ವರ್ಗವಾಗಿದೆ.[೧೬][೧೭][೧೮] "ನಷ್ಟ" ಅನುಭವಿಸುತ್ತಿರುವ ಕಂಪನಿ ವರ್ಗವು ಎರಡು ಪ್ರಮುಖ ಕಾರ್ಯನೀತಿಯನ್ನು ಒಳಗೊಂಡಿದೆ:
- "ಹಣಕಾಸಿನ ನಷ್ಟ ನಿಯಂತ್ರಿಸಲು " ಅಥವಾ "ಸ್ವಾಧೀನಪಡಿಸಿಕೊಳ್ಳಲು ಸಾಲ" ವಿಧಾನಗಳಲ್ಲಿ ಷೇರು ಬಂಡವಾಳ ನಿಯಂತ್ರಣದಡಿ ಸಂಸ್ಥೆಯನ್ನು ಹೊಸದಾಗಿ ಪ್ರಾರಂಭಿಸುವುದರಿಂದ ಅಸ್ತಿತ್ವ ಕಂಡುಕೊಳ್ಳಬಹುದು ಎಂಬ ನಂಬಿಕೆಯ ಮೇಲೆ ಸಾಲಪತ್ರಗಳಬಗ್ಗೆ ಹೂಡಿಕೆದಾರರು ಮರು ಯೋಜನೆಗೆ ಯೋಜಿಸುತ್ತಾರೆ.[೧೯]
- "ವಿಶೇಷ ಸಂದರ್ಭಗಳು" ಅಥವಾ "ಪರಿಷ್ಕರಣೆ" ವಿಧಾನಗಳಲ್ಲಿ ಕೆಲವೊಮ್ಮೆ ಕಂಪನಿ ನಡೆಸುವ ಅಥವಾ ಹಣಕಾಸಿನ ಸವಾಲುಗಳನ್ನು ಎದುರಿಸಲು ಹೂಡಿಕೆದಾರರು ಕಂಪನಿಗೆ ಸಾಲ ಮತ್ತು ಷೇರು ಬಂಡವಾಳಗಳನ್ನು ಒದಗಿಸುವುದರ ಮೂಲಕ "ಹಣಕಾಸಿನ ಸಮಸ್ಯೆಗಳಿಂದ ರಕ್ಷಿಸುತ್ತಾರೆ".[೨೦]
ಈ ಖಾಸಗಿ ಷೇರುಗಳ ಕಾರ್ಯವಿಧಾನಗಳಲ್ಲದೆ, ಕಂಪನಿಯು ಭಧ್ರತಾ ನಿಧಿಗಳು ನಷ್ಟ ಅನುಭವಿಸುವ ಕಂಪನಿ ಹೊರಡಿಸಿದ ಸಾಲಪತ್ರ ಮತ್ತು ಬಾಂಡ್‌ಗಳ ಸಕ್ರಿಯೆ ವ್ಯವಹಾರ ಸೇರಿದಂತೆ ವಿವಿಧ ನಷ್ಟ ಪರಿಹಾರ ಬಂಡವಾಳ ಹೂಡಿಕೆ ವಿಧಾನಗಳನ್ನು ಬಳಸಿಕೊಳ್ಳುತ್ತದೆ.
ಮಧ್ಯಮ ತರಗತಿಯ ಬಂಡವಾಳ
ಬದಲಾಯಿಸಿಮಧ್ಯಮ ಬಂಡವಾಳ ದೊಡ್ಡ ಪ್ರಮಾಣದ ಕಂಪನಿಯ ಬಂಡವಾಳ ರಚನೆಯಲ್ಲಿ ಸಾಮಾನ್ಯ ಷೇರು ಬಂಡವಾಳದ ಅತ್ಯಲ್ಪ ಪ್ರಮಾಣ ಪ್ರತಿನಿಧಿಸುವ ಅಧೀನ ಸಾಲ ಅಥವಾ ಆದ್ಯತಾ ಷೇರು ಬಂಡವಾಳವಾಗಿದೆ. ಈ ಹಣಕಾಸು ಸಂಗ್ರಹಣೆ ನಿಯಂತ್ರಣ ಖರೀದಿ ಅಥವಾ ಪ್ರಮುಖ ವ್ಯಾಪಾರ ವಿಸ್ತರಣೆಗೆ ಬೇಕಾದ ಅಗತ್ಯ ಷೇರು ಬಂಡವಾಳದ ಮೊತ್ತ ಕಡಿಮೆಮಾಡಲು ಖಾಸಗಿ ಷೇರುಗಳನ್ನು ಹೂಡಿಕೆದಾರು ಹೆಚ್ಚಾಗಿ ಬಳಸುತ್ತಾರೆ. ಮಧ್ಯಮ ತರಗತಿಯ ಬಂಡವಾಳವನ್ನು ಹೆಚ್ಚು ಆದಾಯ ತರುವ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಾಗದ ಕಂಪನಿಗಳು ಹೆಚ್ಚಾಗಿ ಬಳಸಿಕೊಳ್ಳುತ್ತವೆ. ಇದು ಬ್ಯಾಂಕ್ ಸಾಲಗಳ ಮೂಲಕ ಸಾಂಪ್ರದಾಯಿಕ ಸಾಲಗಾರರು ನೀಡಬಹುದಾದ ಮೊತ್ತಕ್ಕಿಂತ ಹೆಚ್ಚು ಸಾಲ ಮಾಡಲು ಇಂತಹ ಕಂಪನಿಗಳಿಗೆ ಅನುಮತಿಸುವುದು.[೨೧] ಮಧ್ಯಮ ಅವಧಿಯ ಸಾಲಪತ್ರ ಹೊಂದಿರುವವವರು ತಮ್ಮ ಹೂಡಿಕೆಯ ಹೆಚ್ಚಿನ ಅಪಾಯಕ್ಕಾಗಿ ಪರಿಹಾರ ರೂಪದಲ್ಲಿ ಸುರಕ್ಷಿತತೆ ಅಥವಾ ಇತರ ಹಿರಿಯ ಸಾಲಗಾರರಿಗಿಂತ ಹೆಚ್ಚು ಆದಾಯ ಪಡೆಯುತ್ತಾರೆ.[೨೨][೨೩]
ದ್ವಿತೀಯ ಹಂತದ ಬಂಡವಾಳ ಹೂಡಿಕೆಗಳು
ಬದಲಾಯಿಸಿದ್ವಿತೀಯ ಹಂತದ ಬಂಡವಾಳ ಹೂಡಿಕೆ ಗಳೆಂದರೆ ಅಸ್ತಿತ್ವದಲ್ಲಿರುವ ಖಾಸಗಿ ಷೇರುಗಳಲ್ಲಿ ಬಂಡವಾಳ ಹೂಡಿಕೆ. ಈ ವ್ಯವಹಾರಗಳು ಅಸ್ತಿತ್ವದಲ್ಲಿರುವ ಸಾಂಸ್ಥಿಕ ಹೂಡಿಕೆದಾರರು ನೇರ ಬಂಡವಾಳ ಖರೀದಿಸುವಂತೆ ಮಾಡುವಂತೆ ಮಾಡುತ್ತದೆ. ಇದರ ಮೂಲಕ ಖಾಸಗಿಯವರ ಸ್ವಾಧೀನದಲ್ಲಿರುವ ಕಂಪನಿಗಳಲ್ಲಿ ನೇರ ಬಂಡವಾಳ ಹೂಡಿಕೆಯ ಖಾಸಗಿ ಷೇರುಗಳ ನಿಧಿಯ ಬಡ್ಡಿ ಅಥವಾ ನೇರ ಹೂಡಿಕೆಗಳ ಮಾರಾಟದಲ್ಲಿ ತೊಡಗಿರುತ್ತದೆ.[೨೪] ಖಾಸಗಿ ಷೇರುಗಳನ್ನು ಖರೀದಿಸಿ, ತಮ್ಮ ಬಳಿ ಇಟ್ಟುಕೊಳ್ಳುವ ಹೂಡಿಕೆದಾರರಿಗೆ ದೀರ್ಘಾವಧಿಯ ಬಂಡವಾಳ ಹೂಡಿಕೆಯ ಉದ್ದೇಶವಿರುತ್ತದೆ. ಮೂಲತಃ ಅವುಗಳು ಕೂಡಲೇ ನಗದೀಕರಣ ಸಾಮರ್ಥ್ಯ ಹೊಂದಿರುವುದಿಲ್ಲ. ವಿಶೇಷವಾಗಿ ಹೊಸಬರಾದ ಈ ಹೂಡಿಕೆದಾರರಿಗೆ ಆ ಅವಧಿಯನ್ನು ನವೀಕರೀಸುವ ಸಾಮರ್ಥ್ಯದೊಂದಿಗೆ ದ್ವಿತೀಯ ಹಂತದ ಬಂಡವಾಳ ಹೂಡಿಕೆಗೆ ಅವಕಾಶ ಒದಗಿಸುತ್ತದೆ. ದ್ವಿತೀಯ ಹಂತದ ಬಂಡವಾಳ ಹೂಡಿಕೆಯು ವಿವಿಧ ಪ್ರಕಾರದ ಹಣದ ಹರಿವನ್ನು ಹೊಂದಿರುತ್ತದೆ. ಹೊಸ ಖಾಸಗಿ ಷೇರುಗಳ ನಿಧಿಗಳಲ್ಲಿ ಹೂಡಿಕೆಯ ಜೆ-ಕುವ್ ಪ್ರಭಾವವು ಇಳಿಕೆಯಾಗುವುದು.[೨೫][೨೬] ಕೆಲವೊಮ್ಮೆ ದ್ವಿತೀಯ ಹಂತದ ಮಾರುಕಟ್ಟೆಯಲ್ಲಿನ ಬಂಡವಾಳ ಹೂಡಿಕೆಯನ್ನು ಇತರರ ನಿಧಿಗಳ ಮೂಲಕ ಮಾಡಲಾಗುತ್ತದೆ. ದ್ವಿತೀಯ ಹಂತದ ವ್ಯವಹಾರಗಳ ಮೂಲಕ ನಿಧಿಗಳ ನಿಧಿಗೆ ಸಮಾನ ಖಾಸಗಿ ಷೇರುಗಳ ನಿಧಿ ಬಡ್ಡಿಯನ್ನು ದೊಡ್ಡ ಪ್ರಮಾಣ ಸಾಂಸ್ಥಿಕ ಹೂಡಿಕೆದಾರರು ಖರೀದಿಸುತ್ತಾರೆ.[೨೭] ಖಾಸಗಿ ಷೇರುಗಳ ಬಂಡವಾಳ ಹೂಡಿಕೆಯ ಮಾರಾಟಗಾರರು ಕೇವಲ ನಿಧಿಯಲ್ಲಿರುವ ಬಂಡವಾಳವನ್ನಷ್ಟೆ ಮಾರಾಟ ಮಾಡದೆ, ತಮ್ಮ ಬದ್ಧತೆಯನ್ನೂ ಮಾರಾಟ ಮಾಡುತ್ತಾರೆ.
ಇತರ ಕಾರ್ಯವಿಧಾನತಂತ್ರಗಳು
ಬದಲಾಯಿಸಿಇತರ ಕಾರ್ಯವಿಧಾನಗಳು ಖಾಸಗಿ ಷೇರುಗಳಿಗೆ ಅಥವಾ ಮಾರುಕಟ್ಟೆಯ ಕಾರ್ಯವಿಧಾನಕ್ಕೆ ಸಮೀಪವಾಗಿದ್ದು, ಈ ಕೆಳಗಿನವುಗಳನ್ನು ಒಳಗೊಂಡಿದೆ:
- ಸ್ತಿರಾಸ್ಥಿ ವ್ಯವಹಾರ : ಖಾಸಗಿ ಷೇರುಗಳ ಪ್ರಕಾರ, ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯು ತುಂಬಾ ಅಪಾಯಕಾರಿಯಾಗಿದೆ. ಇದು ಸಾಂಪ್ರದಾಯಿಕ ಸ್ತಿರಾಸ್ಥಿ ವ್ಯವಹಾರದಲ್ಲಿ ಬಂಡವಾಳ ಹೂಡಿಕೆಗಿಂತ ನಿಯಂತ್ರಣ ಖರೀದಿಗೆ ಹೆಚ್ಚು ಹೋಲುವ ಬಂಡವಾಳ "ಮೌಲ್ಯಾಧಾರಿತ" ಮತ್ತು ಲಾಭವಕಾಶದ ನಿಧಿಗಳನ್ನು ಒಳಗೊಂಡಿದೆ. ಖಾಸಗಿ ಷೇರುಗಳಲ್ಲಿ ಹೂಡಿಕೆ ಮಾಡಿದ ನಿರ್ದಿಷ್ಟ ಹೂಡಿಕೆದಾರರು ಸ್ತಿರಾಸ್ಥಿ ವ್ಯವಹಾರವನ್ನು ಪ್ರತ್ಯೇಕ ವರ್ಗದ ಆಸ್ತಿ ವ್ಯವಹಾರದಂತೆ ಪರಿಗಣಿಸಿದ್ದಾರೆ.
- ಮೂಲ ಸೌಕರ್ಯ : ವಿವಿಧ ಸಾರ್ವಜನಿಕರಿಗೆ ಸಂಬಂಧಿಸಿದ ಯೋಜನೆಗಳಲ್ಲಿ (ಉದಾ., ಸೇತುವೆಗಳು, ಸುರಂಗಮಾರ್ಗಗಳು, ಸುಂಕದ ರಸ್ತೆಗಳು, ವಿಮಾನ ನಿಲ್ದಾಣಗಳು, ಸಾರ್ವಜನಿಕ ಸಂಪರ್ಕ ಸಾರಿಗೆಗಳು ಮತ್ತು ಇತರ ಸಾರ್ವಜನಿಕ ಕೆಲಸಗಳು) ಹೂಡಿಕೆಯು ಸರಕಾರಿ ಅಸ್ತಿತ್ವದ ಭಾಗಿತ್ವದಲ್ಲಿ ಖಾಸಗೀಕರಣದ ಒಂದು ಭಾಗವಾಗಿರುತ್ತದೆ.[೨೮][೨೯][೩೦]
- ಇಂಧನ ಮತ್ತು ಶಕ್ತಿ ಸಂಪನ್ಮೂಲಗಳು : ಇಂಧನ ಹೊರತೆಗೆಯುವಿಕೆ, ಉತ್ಪಾದನೆ, ಸಂಸ್ಕರಣೆ ಮತ್ತು ವಿತರಣೆ (ಇಂಧನ) ಅಥವಾ ವಿದ್ಯುಚ್ಛಕ್ತಿಯ (ಶಕ್ತಿ ಸಂಪನ್ಮೂಲ)ಗಳಲ್ಲಿ ತೊಡಗಿರುತ್ತವೆ. ಉತ್ಪಾದನೆ ಮತ್ತು ರವಾನೆಯಲ್ಲಿರುವ ಕಂಪನಿಗಳು ಸೇರಿದಂತೆ ಶಕ್ತಿ ಸಂಪನ್ಮೂಲಗಳ ಉತ್ಪಾದನೆ ಮತ್ತು ಮಾರಾಟದಲ್ಲಿರುವ ವಿವಿಧ ಕಂಪನಿಗಳು (ಆಸ್ತಿಯನ್ನು ಹೊರತು ಪಡಿಸಿ) ಮಾಡುವ ಹೂಡಿಕೆ ಇದಾಗಿದೆ.
- ವಾಣಿಜ್ಯ ಬ್ಯಾಂಕಿಂಗ್ : ಖಾಸಗಿ ಅಥವಾ ಸಾರ್ವಜನಿಕ ಅಧೀನದಲ್ಲಿರುವ ಕಂಪನಿಗಳ ನೋಂದಾವಣಿಯಾಗದ ಬಂಡವಾಳ ಪತ್ರಗಳಲ್ಲಿ ಹಣಕಾಸು ಸಂಸ್ಥೆಗಳು ಮಾಡುವ ಹೂಡಿಕೆಯು ಖಾಸಗಿ ಷೇರುಗಳ ರೂಪದ ಹೂಡಿಕೆಯಾಗಿದೆ.[೩೧]
ಇತಿಹಾಸ ಮತ್ತು ಮುಂದಿನ ಅಭಿವೃದ್ದಿ
ಬದಲಾಯಿಸಿHistory of private equity and venture capital | |
Early history | |
ಆರಂಭಿಕ ಇತಿಹಾಸ ಮತ್ತು ಸಾಹಸೋದ್ಯಮ ಬಂಡವಾಳದ ಅಭಿವೃದ್ಧಿ
ಬದಲಾಯಿಸಿಅಮೆರಿಕನ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ARDC) ಮತ್ತು J.H. ವಿಟ್ನಿ & ಕಂಪನಿ ಎಂಬ ಸಾಹಸೋದ್ಯಮ ಬಂಡವಾಳ ಸಂಸ್ಥೆಗಳ ಉಗಮದಿಂದ, 1946ರಲ್ಲಿ ಖಾಸಗಿ ಷೇರುಗಳ ಉದ್ಯಮ ಪ್ರಾರಂಭವಾಯಿತು .[೩೨] ಎರಡನೇ ಮಹಾಯುದ್ಧದ ಮೊದಲು, ಸಾಹಸೋದ್ಯಮ ಬಂಡವಾಳ ಹೂಡಿಕೆಗಳು (ಮೊದಲು "ಅಭಿವೃದ್ಧಿ ಪರ ಬಂಡವಾಳ" ಎನ್ನುವ) ಪ್ರಮುಖವಾಗಿ ಶ್ರೀಮಂತ ವ್ಯಕ್ತಿಗಳು ಮತ್ತು ಕುಟುಂಬಗಳು ತೊಡಗಿಸಿಕೊಳ್ಳುವ ಕ್ಷೇತ್ರವಾಗಿತ್ತು. "ಸಾಹಸೋದ್ಯಮ ಬಂಡವಾಳಶಾಹಿ ವ್ಯವಸ್ಥೆಯ ಪಿತಾಮಹ"[೩೩] ಮತ್ತು INSEAD ಸ್ಥಾಪಕ ಜಾರ್ಜಿಸ್ ಡೊರಿಯಟ್ IIನೇ ಮಹಾಯುದ್ಧದಿಂದ ಹಿಂದಿರುಗಿದ ಸೈನಿಕರು ನಡೆಸುತ್ತಿದ್ದ ವ್ಯವಹಾರಕ್ಕೆ ಖಾಸಗಿ ವಲಯದ ಹೂಡಿಕೆ ಆಕರ್ಷಣೆಗೆ ಸಾಂಸ್ಥಿಕ ಹೂಡಿಕೆದಾರರಿಂದ ಬಂಡವಾಳ ಶೇಖರಿಸಿ, ARDCನ್ನು ಸ್ಥಾಪಿಸಿದರು.
1957ರಲ್ಲಿ ಡಿಜಿಟಲ್ ಇಕ್ವಿಪ್‌ಮೆಂಟ್ ಕಾರ್ಪೋರೇಷನ್‌ನಲ್ಲಿ (DEC) $70,000ರಷ್ಟು ಬಂಡವಾಳ ಹೂಡಿಕೆದರು. 1968ರಲ್ಲಿ ಕಂಪನಿ's ಪ್ರಾಥಮಿಕ ಸಾರ್ವಜನಿಕ ಹಂಚಿಕೆಯ ನಂತರ ಅದರ ಮೌಲ್ಯ $355 ದಶಲಕ್ಷವಾಗಿತ್ತು.ಹೀಗಾಗಿ ARDC ಮೊದಲ ಪ್ರಮುಖ ಸಾಹಸೋದ್ಯಮ ಬಂಡವಾಳ ಹೂಡಿಕೆ ಸಂಸ್ಥೆಯಾಗಿ ಯಶಸ್ವಿಯಾಯಿತು (ಹೂಡಿಕೆಯ 500 ಪಟ್ಟುಹೆಚ್ಚು ಆದಾಯ ಮತ್ತು 101%ರಷ್ಟು ವಿಶ್ಲೇಷಿಸಿದ ಆದಾಯ ದರವಾಗಿತ್ತು).[೩೪] 1959ರಲ್ಲಿ ಫೇರ್‌ಚೈಲ್ಡ್ ಸೆಮಿಕಂಡಕ್ಟರ್‌ಗೆ (ಮೊದಲ ವಾಣಿಜ್ಯ ಕಾರ್ಯನಿರ್ವಹಿಸಬಹುದಾದ ಅಂತರ್ಗತ ವಿದ್ಯುನ್ಮಂಡಲ) ಮೊದಲ ಸಾಹಸೋದ್ಯಮ ಬಂಡವಾಳ ಹೂಡಿಕೆ ಮಾಡಲಾಯಿತು. ಈ ಕಂಪನಿಯು ನಂತರ ವೆನ್‌ರಾಕ್ ಎಸೋಸಿಯೆಟ್ಸ್ ಆಗಿ ಬದಲಾಯಿತು.[೩೫]
ನಿಯಂತ್ರಣ ಖರೀದಿಯ ಉಗಮ
ಬದಲಾಯಿಸಿಮ್ಯಾಕ್ಲೀನ್ ಸಾಲದ ಮೂಲಕ $42 ದಶಲಕ್ಷ ಮತ್ತು ಆದ್ಯತಾ ಷೇರುಗಳ ವಿತರಿಸುವ ಮೂಲಕ $7 ದಶಲಕ್ಷ ಸಂಗ್ರಹಿಸಿತು. 1955ರ ಜನವರಿಯಲ್ಲಿ ಪಾಸ್-ಅಟ್ಲಾಂಟಿಕ್ ಸ್ಟೀಮ್‌ಶಿಪ್ ಕಂಪನಿ ಮತ್ತು ಮೇ ನಲ್ಲಿ[೩೬] (0}ವಾಟರ್‌ಮ್ಯಾನ್ ಸ್ಟೀಮ್‌ಶಿಪ್ ಕಾರ್ಪೋರೇಷನ್‌ನ್ನು ಮ್ಯಾಕ್‌ಲೀನ್ ಇಂಡಸ್ಟ್ರೀಸ್, Inc. ಮೊದಲ ನಿಯಂತ್ರಣ ಖರೀದಿ ವಿಧಾನದ ಮೂಲಕ ಸ್ವಾಧೀನ ಪಡಿಸಿಕೊಂಡಿತು. ವ್ಯವಹಾರ ಪೂರ್ಣಗೊಂಡಾಗ $20 ದಶಲಕ್ಷದಷ್ಟು ವಾಟರ್‌ಮ್ಯಾನ್ ಕಂಪನಿಗೆ ಸೇರಿದ ಹಣ ಮತ್ತು ಆಸ್ತಿಯನ್ನುಅಷ್ಟೇ ಮೊತ್ತದ ಸಾಲದ ಮರುಪಾವತಿಗಾಗಿ ಬಳಸಲಾಯಿತು.[೩೭] ಮ್ಯಾಕ್‌ಲೀನ್ ವ್ಯವಹಾರದಲ್ಲಿ ಬಳಸಿದಂತೆ, ಉದ್ಯಮದ ಆಸ್ತಿಯಲ್ಲಿನ ಹೂಡಿಕೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಂಡವಾಳದಂತೆ ಸಾರ್ವಜನಿಕವಾಗಿ ವಹಿವಾಟಾಗುವ ಷೇರು ಬಂಡವಾಳ ಕಂಪನಿಗಳ ಬಳಕೆಯು ಹೊಸ ವಿಧಾನವಾಗಿತ್ತು. ವಾರನ್ ಬಫೆಟ್ (ಬೆರ್ಕ್‌ಶೈರ್ ಹಾಥ್‌ವೇ) ಮತ್ತು ವಿಕ್ಟರ್ ಪೊಸ್ನರ್‌ರ (DWG ಕಾರ್ಪೋರೇಷನ್) ಬಳಕೆಯಿಂದ ಇದು ಜನಪ್ರಿಯವಾಯಿತು. ನಂತರ ನೆಲ್ಸನ್ ಪೆಲ್ಟ್ಸ್ (ಟ್ರೀರ್ಕ್),ಸೌಲ್ ಸ್ಟೈನ್‌ಬರ್ಗ್ (ರಿಲಯನ್ಸ್ ಇನ್ಸುರೆನ್ಸ್) ಮತ್ತು ಗೆರ್ರಿ ಶ್ವರ್ಟ್ಸ್ (ಒನೆಕ್ಸ್ ಕಾರ್ಪೋರೇಷನ್) ಈ ವಿಧಾನವನ್ನು ಅಳವಡಿಸಿಕೊಂಡರು. ಈ ಬಂಡವಾಳ ಹೂಡಿಕೆ ಮಾಧ್ಯಮಗಳು ಹೆಚ್ಚು ಸಾಂಪ್ರದಾಯಿಕ ನಿಯಂತ್ರಣ ಖರೀದಿಗಾಗಿ ಅದೇ ರೀತಿಯ ಕಾರ್ಯತಂತ್ರ ಬಳಸಿ, ಅದೇ ರೀತಿಯ ಕಂಪನಿಗಳನ್ನು ಗುರಿಯಾಗಿಸುತ್ತದೆ. ನಂತರ ಇವುಗಳನ್ನು ಖಾಸಗಿ ಷೇರು ಬಂಡವಾಳ ಸಂಸ್ಥೆಗಳ ಮುನ್ನಡೆಸುವವರು ಎಂದು ಪರಿಗಣಿಸಲಾಗುವುದು. ಪೊಸ್ನರ್ ಅವರು "ನಿಯಂತ್ರಣ ಖರೀದಿ" ಅಥವಾ "LBO" ಎಂಬ ಪದ ಬಳಸಿದರು[೩೮]
1980ರ ದಶಕದಲ್ಲಿ ನಿಯಂತ್ರಣ ಖರೀದಿಯು ಏರಿಕೆಯ ಹಂತದಲ್ಲಿದ್ದು, ಹಲವು ಉದ್ಯಮಕ್ಕೆ ಹಣಕಾಸು ಒದಗಿಸುವವರನ್ನು ರೂಪುಗೊಳ್ಳುವಂತೆ ಮಾಡಿತು. ಅವರಲ್ಲಿ ಪ್ರಮುಖರಾದವರು ಜೆರೋಮ್ ಕೋಹ್ಲ್‌ಬರ್ಗ್, Jr. ಮತ್ತು ಅವರ ನಂತರದ ಹಿತೈಷಿ ಹೆನ್ರಿ ಕ್ರಾವಿಸ್. ಆ ಸಮಯದಲ್ಲಿ ಕೋಹ್ಲ್‌ಬರ್ಗ್ ಮತ್ತು ಕ್ರಾವಿಸ್‌ರು ತನ್ನ ಸೋದರಸಂಬಂಧಿ ಜಾರ್ಜ್ ರಾಬರ್ಟ್ಸ್‌ರೊಂದಿಗೆ ಬಿಯರ್ ಸ್ಟ್ರೀಮ್ಸ್‌ಗಾಗಿ "ಬೂಟ್‌ಸ್ಟ್ರಾಪ್" ಹೂಡಿಕೆ ಕುರಿತು ವಿವರಿಸುವ ಸರಣಿ ಕಾರ್ಯ ಪ್ರಾರಂಭಿಸಿದರು. ಈ ಕಂಪನಿಗಳಲ್ಲಿ ಹಲವು ಕಾರ್ಯಸಾಧು ಅಥವಾ ಆಕರ್ಷಣೀಯ ಅಸ್ತಿತ್ವ ಹೊಂದಿರಲಿಲ್ಲ. ಹಾಗಾಗಿ ಅದರ ಸ್ಥಾಪಕರು ಅದನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಕಷ್ಟವಾಗಿತ್ತು.ಅಲ್ಲದೇ ತಮ್ಮ ಎದುರಾಳಿಗಳಿಗೆ ಅದನ್ನು ಮಾರುವುದು ಸಹ ಇಷ್ಟವಿರಲಿಲ್ಲ. ಹಾಗಾಗಿ [[ಹಣಕಾಸಿನ ಖರೀದಿದಾರರಿಗೆ{/00}]](ಅಥವಾ ಸಾರ್ವಜನಿಕ ಬಂಡವಾಳದಾರರಿಗೆ) ಅದನ್ನು ಮಾರಾಟ ಮಾಡುವುದು ಉತ್ತಮ ಎನಿಸಬಹುದು. 1964ರಲ್ಲಿ ಆರ್ಕಿನ್ ಎಕ್ಸ್‌ಟರ್ಮೈನೇಟಿಂಗ್ ಕಂಪನಿಯು ಸ್ವಾಧೀನ ವಿಧಾನಕ್ಕೆ ಸೇರಿದ ಮೊದಲ ನಿಯಂತ್ರಣ ಖರೀದಿಯ ವ್ಯವಹಾರ ಎನಿಸಿದೆ.[೩೯]. ನಂತರದ ವರ್ಷದಲ್ಲಿ ಮೂರು ಬಿಯರ್ ಸ್ಟ್ರೀಮ್ಸ್ ಬ್ಯಾಂಕರ್‌ಗಳು ಸ್ಟೆರ್ನ್ ಮೆಟಲ್ಸ್‌ನಲ್ಲಿ ಬಂಡವಾಳ ಹೂಡಿ ಥೋಂಪ್ಸನ್ ವೈರ್, ಈಗಲ್ ಮೋಟರ್ಸ್ ಮತ್ತು ಬ್ಯಾರೊವ್ಸ್ ಸೇರಿದಂತೆ ಸ್ಟೆರ್ನ್ ಮೆಟಲ್ಸ್ (1965), ಇನ್‌ಕಾಮ್ (ರಾಕ್‌ವುಡ್ ಇಂಟರ್ನ್ಯಾಷನಲ್‌ನ ಒಂದು ವಿಭಾಗ, 1971), ಕೋಬಲರ್ಸ್ ಇಂಡಸ್ಟ್ರೀಸ್ (1971), ಮತ್ತು ಬೋರೆನ್ ಕ್ಲೇ (1973)ಯ ಖರೀದಿಯ ಸರಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.[೪೦] 1976ರ ಹೊತ್ತಿಗೆ ಕ್ರಾವಿಸ್ ಮತ್ತು ರಾಬರ್ಟ್ಸ್ ಕಂಪನಿಯಿಂದ ವಿದಾಯ ಹೇಳಿದಬಿಯರ್ ಸ್ಟೆರ್ನ್ಸ್ ಮತ್ತು ಕೋಹ್ಲ್‌ಬರ್ಗ್‌ರ ನಡುವೆ ಆ ವರ್ಷ ಕೋಲ್‌ಬರ್ಗ್ ಕ್ರಾವಿಸ್ ರಾಬರ್ಟ್ಸ್‌ಕಂಪನಿಯ ಹುಟ್ಟು ಆತಂಕ ನಿರ್ಮಿಸಿತು.
1980ರ ದಶಕದಲ್ಲಿ ಖಾಸಗಿ ಷೇರುಗಳು
ಬದಲಾಯಿಸಿ1982ರ ಜನವರಿಯಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಖಜಾನೆ ಖಾತೆ ಮಾಜಿ ಸಚಿವ ವಿಲಿಯಂ ಸಿಮೊನ್ ಮತ್ತು ಹೂಡಿಕೆದಾರರ ಸಮೂಹವು ಶುಭಾಶಯ ಪತ್ರಗಳ ತಯಾರಕರಾದ ಗಿಬ್ಸನ್ ಗ್ರೀಟಿಂಗ್ಸ್‌ನ್ನು $80 ದಶಲಕ್ಷಕ್ಕೆ ಖರೀದಿಸಿದ್ದರು. ಒಂದು ವದಂತಿ ಪ್ರಕಾರ ಇದರಲ್ಲಿ ಹೂಡಿಕೆದಾರರ ಪಾಲು $1 ದಶಲಕ್ಷ ಮಾತ್ರ ಎಂದು ವರದಿಯಾಗಿತ್ತು. 1983ರ ಮಧ್ಯಭಾಗದಲ್ಲಿ ವ್ಯವಹಾರ ನಡೆಯುವ ಹದಿನಾರು ತಿಂಗಳ ಮೊದಲು, ಗಿಬ್ಸನ IPO ಮೂಲಕ $290, ಮತ್ತು ಸಿಮೊನ್ $66 ದಶಲಕ್ಷ ಸಂಗ್ರಹಿಸಿದ್ದರು.[೪೧] ಗಿಬ್ಸನ್ ಗ್ರೀಟಿಂಗ್ಸ್‌ನ ಬಂಡವಾಳ ಹೂಡಿಕೆಯಿಂದ ದೊರೆತ ಯಶಸ್ಸು, ನಿಯಂತ್ರಣ ಖರೀದಿಯಲ್ಲಾದ ಏರಿಕೆಯ ಬಗ್ಗೆ ಮಾಧ್ಯಮದ ಗಮನ ಸೆಳೆಯಿತು. 1979 ಮತ್ತು 1989ರ ನಡುವೆ $250 ದಶಲಕ್ಷಕ್ಕಿಂತ ಹೆಚ್ಚು ಮೌಲ್ಯದ 2,000ಕ್ಕಿಂತಲೂ ಹೆಚ್ಚು ನಿಯಂತ್ರಣ ಖರೀದಿಗಳು ವರದಿಯಾದವು.ಎಂದು ಅಂದಾಜಿಸಲಾಗಿದೆ[೪೨]
1980ರ ದಶಕದಲ್ಲಿ, ವಿಶೇಷವಾಗಿ ಕಂಪನಿಯು ಎದುರಾಳಿ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವಿಕೆ, ಆಸ್ತಿ ವಿಂಗಡಣೆ, ಪ್ರಮುಖ ಕಾರ್ಯ ಸ್ಥಗಿತ ಅಥವಾ ಇತರ ಪ್ರಮುಖ ಉದ್ಯಮದ ಆರಂಭದಂತಹ ಲಕ್ಷಣಗಳನ್ನು ಒಳಗೊಂಡಿರುವ, ಹಲವು ಖಾಸಗಿ ಷೇರುಗಳ ಮೂಲಕ ಬಂಡವಾಳ ಹೂಡಿಕೆಗಾಗಿ ಸ್ವಾಧೀನಪಡಿಸಿಕೊಂಡ ಕಂಪನಿಗಳು ಮತ್ತು ಮಾದ್ಯಮಗಳಿಗೆ "ಉದ್ಯಮ ದಾಳಿ" ಎಂದು ಹೆಸರಿಸಿದರು. ಕಾರ್ಲ್ ಇಕಾಹ್ನ್, ವಿಕ್ಟರ್ ಪೊಸ್ನರ್, ನೆಲ್ಸನ್ ಪೆಲ್ಟ್ಸ್, ರಾಬರ್ಟ್ M. ಬಾಸ್, T. ಬೂನ್ ಪಿಕನ್ಸ್, ಹರೋಲ್ಡ್ ಕ್ಲಾರ್ಕ್ ಸಿಮೊನ್ಸ್, ಕಿರ್ಕ್ ಕೆರ್ಕೊರಿಯನ್, ಸರ್ ಜೇಮ್ಸ್ ಗೋಲ್ಡ್‌ಸ್ಮಿತ್, ಸೌಲ್ ಸ್ಟೈನ್‌ಬರ್ಗ್ ಮತ್ತು ಅಶರ್ ಈಡಲ್‌ಮ್ಯಾನ್ 1980ನೇ ದಶಕದಲ್ಲಿ ಒತ್ತಾಯದ ಮೂಲಕ ಉದ್ಯಮ ವಶಪಡಿಸಿಕೊಳ್ಳುವವರಲ್ಲಿ ಅತಿ ಹೆಚ್ಚು ಗುರುತಿಸಿಕೊಂಡವರಾಗಿದ್ದಾರೆ. 1985ರಲ್ಲಿ TWAಯನ್ನು ಸ್ವಾಧೀನಪಡಿಸಿಕೊಂಡ ನಂತರ ಕಾರ್ಲ್ ಇಕಾಹ್ನ್ ನಿರ್ದಯಿ ಉದ್ಯಮ ಆಕ್ರಮಣಕಾರನಾಗಿ ಹೆಸರುವಾಸಿಯಾದನು.[೪೩][೪೪] ಹೆಚ್ಚಿನ ಉದ್ಯಮ ಸ್ವಾಧೀನದಾರರುಮೈಕಲ್ ಮಿಲ್ಕನ್‌ರ ಬಂಡವಾಳ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಒಂದು ಬಾರಿಯಾದರೂ ಗ್ರಾಹಕರಾಗಿದ್ದವರು. ಕಂಪನಿಯನ್ನು ಖರೀದಿಸಲು ಹೆಚ್ಚು ಬಡ್ಡಿಯ ಸಾಲ ಒದಗಿಸಿ, ಅದನ್ನು ಸ್ವಾಧೀನಪಡಿಸಿಕೊಳ್ಳಲು, ವಶಪಡಿಸಿಕೊಳ್ಳುವವರ ಆ ಕ್ರಮಬದ್ಧ ಪ್ರಯತ್ನಕ್ಕೆ ಡ್ರೆಕ್ಸೆಲ್ ಬರ್ನ್‌ಹಾಮ್ ಲಂಬರ್ಟ್ ಬಂಡವಾಳ ಸಂಗ್ರಹಿಸಲು ಸಹಾಯ ಮಾಡುವರು.
1980ರ ಅಂತ್ಯಕ್ಕೆ ಪ್ರಮುಖ ಖರೀದಿಯು ತನ್ನ ಮಹತ್ತ್ವಾಕಾಂಕ್ಷೆಯನ್ನು ಸಾಬೀತುಪಡಿಸಿತು. ವ್ಯವಹಾರದ ಅತ್ಯುನ್ನತ ಮಟ್ಟ ತಲುಪಿ, ಹಿಂದಿನ ದಶಕದಲ್ಲಾದ ಆರ್ಥಿಕ ಅಭಿವೃದ್ಧಿಯ ಅಂತ್ಯದ ಸಂಕೇತವಾಯಿತು. 1989ರಲ್ಲಿ RJR ನಬಿಸ್ಕೊವನ್ನು $31.1 ಶತಕೋಟಿ ಮೊತ್ತಕ್ಕೆ ಸ್ವಾಧೀನ ಪಡಿಸಿಕೊಂಡಾಗ KKR ಮುಚ್ಚಿಹೋಯಿತು. ಸುಮಾರು 17 ವರ್ಷಗಳ ಇತಿಹಾಸದಲ್ಲಿ ಅತಿ ದೊಡ್ಡ ನಿಯಂತ್ರಣ ಖರೀದಿ ಇದಾಗಿದೆ. ಬರ್ಬಾರಿಯನ್ಸ್ ಎಟ್ ದಿ ಗೇಟ್: ದಿ ಫಾಲ್ ಆಫ್ RJR ನಬಿಸ್ಕೊ ಎಂಬ ಪುಸ್ತಕದಲ್ಲಿ (ನಂತರ ಚಲನಚಿತ್ರ ಮಾಡಲಾಯಿತು) ಈ ಘಟನೆಯನ್ನು ವಿವರಿಸಲಾಗಿತ್ತು. ಪ್ರತಿ ಷೇರಿಗೆ $75 ನೀಡಿ RJR ನಬಿಸ್ಕೊ ಪ್ರೈವೇಟ್‌ನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಶೀರ್ಸೊನ್ ಲೆಹ್ಮಾನ್ ಹಟ್ಟನ್(/0), ಬೆಲೆಯನ್ನು ಅನಾಯಾಸವಾಗಿ ಹೆಚ್ಚಿಸಿ ಪ್ರತಿ ಷೇರಿಗೆ $109ರಷ್ಟನ್ನು ನೀಡಿ RJR ನಬಿಸ್ಕೊನ್ನು KKR ಸ್ವಾಧೀನಪಡಿಸಿಕೊಂಡಿತು. ತ್ವರಿತ ಸಂಧಾನಗಳು ಮತ್ತು ಕಂಪನಿಗಳ ಕುದುರೆ ವ್ಯಾಪಾರವು ಶೀರ್ಸೊನ್ ಲೆಹ್ಮಾನ್ ಹಟ್ಟನ್ ಮತ್ತು ನಂತರ ಫೋರ್ಸ್ಟ್‌ಮ್ಯಾನ್ ಲಿಟಲ್ ಆಂಡ್ ಕಂ. ವಿರುದ್ಧ KKR ಪ್ರತ್ಯೇಕ ವಿಭಾಗವಾಯಿತು.ವ್ಯವಹಾರದಲ್ಲಿ ತೊಡಗಿರುವವರಿಗೆ ಸಲಹೆ ಮತ್ತು ಹಣಕಾಸು ಒದಗಿಸುವ ಮೊರ್ಗನ್ ಸ್ಟಾನ್ಲೀ, ಗೋಲ್ಡ್ ಸಾಚ್ಸ್, ಸೋಲೊಮನ್ ಬ್ರದರ್ಸ್ ಮತ್ತು ಮೆರಿಲ್ ಲಿಂಚ್ ಸೇರಿದಂತೆ ಹಲವರು ಆ ಸಮಯದಲ್ಲಿ ಪ್ರಮುಖ ಬ್ಯಾಂಕಿಂಗ್ ವ್ಯವಹಾರ ನಡೆಸುವವರಾಗಿದ್ದರು. ಶೀರ್ಸನ್ ಲೆಹ್ಮಾನ್‌ನ ಮೂಲ ಬಿಡ್ (ಬೆಲೆ) ನಂತರ RJR ನಬಿಸ್ಕೊಯ ಆಡಳಿತ ಮಂಡಳಿಯ ಅನೂಮೋದನೆಯಿಲ್ಲದೆ KKR ತ್ವರಿತವಾಗಿ, RJR ನಬಿಸ್ಕೊ ಕಂಪನಿಯ ಪ್ರತಿ ಷೇರಿಗೆ $90 ದರದ ಪ್ರಸ್ತಾಪ ಮುಂದಿಟ್ಟಿತು. ಶೀರ್ಸನ್ ಲೆಹ್ಮಾನ್ ಮತ್ತು ಸೋಲೊಮನ್ ಬ್ರದರ್ಸ್ ಇರುವ RJRನ ಆಡಳಿತ ಮಂಡಳಿಯು ಕ್ರಾವಿಸ್‌ನಿಂದ ಎದುರಾಗುವ ಪೈಪೋಟಿ ಎದುರಿಸಲು ಪ್ರತಿ ಷೇರಿಗೆ $112ರಷ್ಟು ಬಿಡ್ ಸಲ್ಲಿಸಿದರು. ಡಾಲರ್‌ನ ಬೆಲೆ ಕಡಿಮೆ ಇರುವಾಗ, KKRರ $109ರ ಅಂತಿಮ ಬಿಡ್ RJR ನಬಿಸ್ಕೊನ ನಿರ್ದೇಶಕರ ಮಂಡಳಿಯಿಂದ ಅಂಗೀಕರಿಸಲ್ಪಟ್ಟಿತು.[೪೫] RJR ನಬಿಸ್ಕೊ $31.1 ಶತಕೋಟಿ ಮೌಲ್ಯದ ಈ ವ್ಯವಹಾರವು, ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಮಾಣದ ನಿಯಂತ್ರಣ ಖರೀದಿಯಾಗಿದೆ. 2006 ಮತ್ತು 2007ರಲ್ಲಿ ನಿಯಂತ್ರಣ ಖರೀದಿ ವ್ಯವಹಾರಗಳ ಸಂಖ್ಯಾ ಗುರಿ ಪೂರ್ಣಗೊಂಡಿತು. ಇದು ಮೊದಲ ಬಾರಿಗೆ RJR ನಬಿಸ್ಕೊನ ನಿಯಂತ್ರಣ ಖರೀದಿ ದರಕ್ಕಿಂತ ಹೆಚ್ಚಾಗಿತ್ತು. ಆದರೆ ಹಣದುಬ್ಬರಕ್ಕೆ ಹೋಲಿಸಿದಾಗ, 2006–2007 ನಡುವಿನ ಅವಧಿಯಲ್ಲಾದ ಯಾವುದೇ ನಿಯಂತ್ರಣ ಖರೀದಿಗಳು RJR ನಬಿಸ್ಕೊನನ್ನು ಮೀರಿಸಲಿಲ್ಲ.
1980ರ ಅಂತ್ಯಕ್ಕೆ ರಾಬರ್ಟ್ ಕಾಂಪ್ಯೂನ, 1988ರಲ್ಲಿ ಫೆಡರೇಟೆಡ್ ಡಿಪಾರ್ಟ್‌ಮೆಂಟ್ ಸ್ಟೋರ್ಸ್‌ನ ಖರೀದಿ, 1986ರಲ್ಲಿ ರೆವ್ಕೊ ಡ್ರಗ್ ಸ್ಟೋರ್ಸ್, ವಾಲ್ಟರ್ ಇಂಡಸ್ಟ್ರೀಸ್, FEB ಟ್ರಕ್ಕಿಂಗ್ ಆಂಡ್ ಈಟನ್ ಲಿಯೊನಾರ್ಡ್‌ನ ಖರೀದಿ ಸೇರಿದಂತೆ ಹಲವು ದೊಡ್ಡ ಮೊತ್ತದ ಖರೀದಿಗಳಿಂದಾದ ದಿವಾಳಿತನದಿಂದ ಖರೀದಿ ಮಾರುಕಟ್ಟೆಯಲ್ಲಿ ಹೆಚ್ಚಳ ಕಂಡಿತು. ಇದಲ್ಲದೆ, 1990ರಲ್ಲಿ KKR ಮರುಬಂಡವಾಳ ಸಂಗ್ರಹಣೆಗಾಗಿ ಹೊಸ ಷೇರುಗಳ ಮೂಲಕ $1.7 ಶತಕೋಟಿ ಸಂಗ್ರಹಣೆಯಾಯಿತು.ಇದಕ್ಕೆ ಕಾರಣವಾದ RJR ನಬಿಸ್ಕೊನ ವ್ಯವಹಾರದಿಂದಾದ ತೊಂದರೆಯ ವಿಷಯ ಬಹಿರಂಗಗೊಂಡಿತು.[೪೬]
ಡ್ರೆಕ್ಸೆಲ್ ಬರ್ನ್‌ಹಾಮ್ ಲಂಬರ್ಟ್ ಒಂದು ಬಂಡವಾಳ ಹೂಡಿಕೆ ಬ್ಯಾಂಕ್ ಆಗಿದ್ದು, ಅತಿ ಹೆಚ್ಚು ಬಡ್ಡಿಯ ಸಾಲದ ಖಾತ್ರಿಯೋಜನೆಯಡಿ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಇದರಿಂದಾಗಿ 1980ರ ದಶಕದಲ್ಲಿ ಖಾಸಗಿ ಷೇರುಗಳಲ್ಲಿ ಆದ ಅಭಿವೃದ್ಧಿಯಲ್ಲಿ ಇದು ಪ್ರಮುಖ ಪಾತ್ರ ವಹಿಸಿತು.
ಷೇರು ಮಾರುಕಟ್ಟೆಯ ಮೂರು ಮತ್ತು ಸ್ಟಾಕ್ ಪರಿವರ್ತನೆಯ ಮೂರು ನಿಯಮಗಳನ್ನು ವಿಧಿಸಿ ಆರು ಗಂಭೀರ ಅಪರಾಧಗಳಿಗೆ ನೊಲೊ ಕೆಂಟೆಂಡರ್ (ಯಾವುದೇ ಸ್ಪರ್ಧೆ ಇಲ್ಲ) ವಿಷಯವನ್ನು ಸರಕಾರ ಸಮರ್ಥಿಸಿ, ಡ್ರೆಕ್ಸಲ್‌ರೊಂದಿಗೆ ಒಪ್ಪಂದ ಮಾಡಿಕೊಂಡಿತು.[೪೭] ಡ್ರೆಕ್ಸಲ್ ಕಂಪನಿಯು $650 ದಶಲಕ್ಷ ದಂಡ ಪಾವತಿಸಲು ಒಪ್ಪಿಕೊಂಡಿತು. ಆ ಸಮಯದಲ್ಲಿ ಇದು ಸುರಕ್ಷತಾ ಕಾನೂನುಗಳಡಿ ಸಂಗ್ರಹಿಸಿದ ಅತಿ ಹೆಚ್ಚು ದಂಡದ ಮೊತ್ತವಾಗಿತ್ತು. 1989ರ ಮಾರ್ಚ್‌ನಲ್ಲಿ ಮಿಲ್ಕನ್ ತಮ್ಮ ಮೇಲಿನ ದೋಷಾರೋಪಣೆಯ ನಂತರ ಸಂಸ್ಥೆಯಿಂದ ಹೊರನಡೆದರು.[೪೮][೪೯] 1990ರ ಫೆಬ್ರವರಿ 13ರಂದು U.S. ಷೇರು ಮತ್ತು ವಿನಿಮಯ ಆಯೋಗ (SEC), ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರ ಮತ್ತು ಫೆಡರಲ್ ರಿಸರ್ವ್, ಡ್ರೆಕ್ಸೆಲ್ ಬರ್ನ್‌ಹಾಮ್ ಲಂಬರ್ಟ್‌ಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಖಜಾನೆ ಇಲಾಖೆ ಸಚಿವ ನಿಕೋಲಸ್ F. ಬ್ರ್ಯಾಡಿ ಸಲಹೆಮಾಡಿದ ನಂತರ ಅಧ್ಯಾಯ 11ರಲ್ಲಿ ದಿವಾಳಿತನದ ರಕ್ಷಣಾ ಕ್ರಮವಾಗಿ ಅದನ್ನು ಅಧಿಕೃತವಾಗಿ ದಾಖಲಿಸಲಾಯಿತು.[೪೮]
2005-2007 ದೊಡ್ಡ ಪ್ರಮಾಣದ ಖರೀದಿ ಕಾಲ
ಬದಲಾಯಿಸಿಬಡ್ಡಿದರದಲ್ಲಿ ಇಳಿಕೆ, ಸಾಲದ ಮಾನದಂಡ ಸಡಿಲಿಕೆ ಮತ್ತು ಸಾರ್ವಜನಿಕವಾಗಿ ವ್ಯವಹಾರ ನಡೆಸುವ ಕಂಪನಿಗಳ ಆಡಳಿತದಲ್ಲಿನ ಬದಲಾವಣೆಯಿಂದ (ವಿಶೇಷವಾಗಿ ಸರ್ಬನಸ್-ಆಕ್ಸ್‌ಲಿ ಕಾಯಿದೆ) ಖಾಸಗಿ ಷೇರುಗಳ ಪ್ರಮಾಣದಲ್ಲಿ ಹೆಚ್ಚಿನ ಏರಿಕೆ ಕಾಣುವಂತಾಯಿತು. 2002ರಲ್ಲಿ ಡೆಕ್ಸ್ ಮೀಡಿಯಾದ ಖರೀದಿಯು ಬಹು-ಶತಕೋಟಿ ಡಾಲರ್‌ನ U.S. ಖರೀದಿಯಿಂದ ಎರಡನೇ ಬಾರಿ ಹೆಚ್ಚು ಬಡ್ಡಿಯ ಸಾಲದ ಹಣಕಾಸು ಮತ್ತು ದೊಡ್ಡ ಪ್ರಮಾಣದ ವ್ಯವಹಾರ ಪೂರ್ಣಗೊಂಡಿತು. 2005ರಲ್ಲಿ ಟಾಯ್ಸ್ "R" ಅಸ್[೫೦], ದಿ ಹರ್ಟ್ಸ್ ಕಾರ್ಪೋರೇಷನ್ [೫೧][೫೨], ಮೆಟ್ರೊ-ಗೋಲ್ಡ್‌ವಿನ್-ಮೇಯರ್[೫೩] ಮತ್ತು ಸನ್‌ಗಾರ್ಡ್[೫೪] ನ ಸ್ವಾಧೀನಪಡಿಸಿಕೊಳ್ಳುವಿಕೆ ಸೇರಿದಂತೆ, 2004 ಮತ್ತು 2005ರ ಅವಧಿಯಲ್ಲಿ ಪ್ರಮುಖ ಕಂಪನಿಗಳ ಖರೀದಿಗಳು ಸಾಮಾನ್ಯವಾಗಿದ್ದವು.
2005 ಕೊನೆ ಮತ್ತು 2006 ಪ್ರಾರಂಭದಲ್ಲಿ ಹೊಸ "ದೊಡ್ಡ ಪ್ರಮಾಣದ ಖರೀದಿ" ದಾಖಲೆ ಸೃಷ್ಟಿಯಾಯಿತು. ಇಸವಿ 2006ರ ಪ್ರಾರಂಭದಿಂದ 2007 ಮಧ್ಯಭಾಗದವರೆಗೆ 18 ತಿಂಗಳ ಅವಧಿಯಲ್ಲಿ ಅಂದರೆ, 2007 ಕೊನೆಯೊಳಗೆ ಹತ್ತು ಅತ್ಯುತ್ತಮ ಖರೀದಿಗಳಲ್ಲಿ ಒಂಬತ್ತು ಖರೀದಿಗಳು ಪ್ರಕಟವಾಗಿದ್ದವು. 2006ರಲ್ಲಿ ಖಾಸಗಿ ಷೇರು ಬಂಡವಾಳ ಸಂಸ್ಥೆಗಳು $375 ಶತಕೋಟಿಗೆ 654 U.S. ಕಂಪನಿಗಳನ್ನು ಖರೀದಿಸಿದ್ದವು. ಇದು 2003ರಲ್ಲಿ ಕೊನೆಗೊಂಡ ವ್ಯವಹಾರಗಳ 18 ಪಟ್ಟು ಹೆಚ್ಚಾಗಿತ್ತು.[೫೫] ಅದಲ್ಲದೆ U.S. ಮೂಲದ ಖಾಸಗಿ ಷೇರು ಬಂಡವಾಳ ಸಂಸ್ಥೆಗಳು 322 ಬಂಡವಾಳ ನಿಧಿಗಳಿಗೆ ಹೂಡಿಕೆದಾರರ ಬದ್ಧತೆ ಹಕ್ಕಿನೊಂದಿಗೆ $215.4 ಶತಕೋಟಿ ಬಂಡವಾಳ ಸಂಗ್ರಹಿಸಿದವು. ಇದು 2000ರಲ್ಲಿ ದಾಖಲಾದ 22%ನ್ನು ಮೀರಿ, 2005ರಲ್ಲಿ ಒಟ್ಟು ಬಂಡವಾಳ ಸಂಗ್ರಹಣೆಗಿಂತ 33%ದಷ್ಟು ಹೆಚ್ಚಿತ್ತು.[೫೬] ನಂತರದ ಸಾಲದ ಪ್ರಮಾಣವು ಮಾರುಕಟ್ಟೆಗಳಲ್ಲಿರುವ ಏರು-ಪೇರು ಮೀರಿ, 415 ಬಂಡವಾಳ ನಿಧಿಗಳಲ್ಲಿನ ಹೂಡಿಕೆಯೊಂದಿಗೆ $302 ಶತಕೋಟಿ ಖರೀದಿಯು ಹೊಸ ದಾಖಲೆಗೆ ಸೃಷ್ಟಿಯಾಯಿತು.[೫೭] 2006ಯಿಂದ 2007ರ ಅವಧಿಯಲ್ಲಿ ಪೂರ್ಣಗೊಂಡ ಪ್ರಮುಖ ಖರೀದಿಗಳಲ್ಲಿ ಈ ಕೆಳಗಿನವು ಸೇರಿಕೊಂಡಿದೆ: ಇಕ್ವಿಟಿ ಆಫೀಸ್ ಪ್ರಾಪರ್ಟೀಸ್, HCA[೫೮], ಅಲಿಯನ್ಸ್ ಬೂಟ್ಸ್[೫೯] ಮತ್ತು TXU[೬೦].
2007ರ ಜುಲೈಯಲ್ಲಿ ಅಡಮಾನ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿದ ಗೊಂದಲವು ನಿಯಂತ್ರಿತ ಹಣಕಾಸು ಮತ್ತು ಹೆಚ್ಚು ಬಡ್ಡಿದರದ ಸಾಲದ ಮಾರುಕಟ್ಟೆಗಳಲ್ಲಿಯೂ ಪ್ರಭಾವ ಬೀರಿತು.[೬೧][೬೨] ದೊಡ್ಡ ಪ್ರಮಾಣದ ನಿಯಂತ್ರಣ ಖರೀದಿಯ ಹಣಕಾಸಿಗೆ ಹೆಚ್ಚಾಗಿ ಲಭ್ಯವಾಗುವ PIK ಮತ್ತು PIK ಟಾಗಲ್ (ಬಡ್ಡಿ "P ayable I n K ind") ಮತ್ತು ಕರಾರಿನ ಮೇಲೆ ಸಾಲ ಸೇರಿದಂತೆ, 2007ರ ಮೊದಲಾರ್ಧದಲ್ಲಿ ವಿತರಕರ ಸ್ನೇಹಿ ಬೆಳವಣಿಗೆಗಳಿಂದ ಮಾರುಕಟ್ಟೆ ಚುರುಕಾದವು. 2007ರ ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಮಾರುಕಟ್ಟೆಯೊಳಗೆ ಕೆಲವು ಬಂಡವಾಳ ಪತ್ರಗಳ ವಿತರಕರ ಪ್ರವೇಶದೊಂದಿಗೆ ಹೆಚ್ಚಿನ ಬಡ್ಢಿದರ ಮತ್ತು ನಿಯಂತ್ರಿತ ಸಾಲದ ಮಾರುಕಟ್ಟೆಗಳಲ್ಲಿ ಬಂಡವಾಳ ಪತ್ರಗಳ ವಿತರಣೆ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡಿತು. ಅನಿರ್ದಿಷ್ಟ ಮಾರುಕಟ್ಟೆ ಪರಿಸ್ಥಿತಿಗಳಿಂದ ವರ್ಷದ ಕೊನೆಯ ಮೂರು ತಿಂಗಳವರೆಗೆ ಹಲವು ಕಂಪನಿಗಳು ಮತ್ತು ಬಂಡವಾಳ ಹೂಡಿಕೆ ಬ್ಯಾಂಕ್‌ಗಳು ಸಾಲ ವಿತರಿಸುವ ತಮ್ಮ ಯೋಜನೆಗಳನ್ನು ತಡೆಹಿಡಿಯಲು ಆಗಿನ ಆರ್ಥಿಕ ಕುಸಿತವೇ ಕಾರಣವಾಯಿತು. ಆದರೂ 2007ರ ಕಾರ್ಮಿಕ ದಿನದ ನಂತರ ಮಾರುಕಟ್ಟೆಯಲ್ಲಿನ ನಿರೀಕ್ಷಿತ ಚೇತರಿಕೆ ಕಾಣಲಿಲ್ಲ. ಆಗ ಮಾರುಕಟ್ಟೆ ಮೇಲಿನ ವಿಶ್ವಾಸದ ಕೊರತೆಯು ಖರೀದಿ ವ್ಯವಹಾರಗಳ ಬೆಲೆ ನಿಗದಿಯನ್ನು ತಡೆದವು. ಸಪ್ಟೆಂಬರ್ ಅಂತ್ಯದ ವೇಳೆಗೆ ಸಿಟಿಗ್ರೂಪ್ ಮತ್ತು UBS AG ಸಾಲದಿಂದ ನಷ್ಟ ಅನುಭವಿಸಿದವು.ಇದರಿಂದಾಗಿ ಪ್ರಮುಖ ಬಂಡವಾಳ ಪತ್ರಗಳ ಬೆಲೆ ಇಳಿಕೆಯ ಪ್ರಕಟಣೆ ಸೇರಿದಂತೆ ಪ್ರಮುಖ ಸಾಲ ಬಂಡವಾಳ ವಲಯದ ಪರಿಸ್ಥಿತಿ ಕುಸಿತಗೊಂಡಿತ್ತು. ನಿಯಂತ್ರಿತ ಹಣಕಾಸು ಮಾರುಕಟ್ಟೆಗಳ ವ್ಯವಹಾರವು ನಿಂತುಹೋಗುವ ಸ್ಥಿತಿಗೆ ಬಂದಿತು.[೬೩] 2007ರ ಕೊನೆ ಮತ್ತು 2008 ಪ್ರಾರಂಭ ಹೊತ್ತಿಗೆ ಸಾಲದ ಮಾನದಂಡಗಳನ್ನು ಬಿಗಿಗೊಳಿಸಲಾಯಿತು. ಆಗ"ದೊಡ್ಡ ಪ್ರಮಾಣದ ಖರೀದಿ"ಯ ಕಾಲವು ಕೊನೆಯ ಹಂತ ತಲುಪಿತ್ತು. ನಂತರ ಖಾಸಗಿ ಷೇರುಗಳು ಮತ್ತು ಸಕ್ರಿಯ ಆಸ್ತಿ ಪ್ರಕಾರವನ್ನು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗಾಗಿ ಬಳಸಿಕೊಳ್ಳಲಾಯಿತು. ಹೂಡಿಕೆದಾರರು ಬದ್ಧರಾದ ಬಂಡವಾಳದ ನೂರಾರು ಶತಕೋಟಿ ಡಾಲರ್‌ನೊಂದಿಗೆ ಖಾಸಗಿ ಷೇರು ಬಂಡವಾಳ ಸಂಸ್ಥೆಗಳು ಹೊಸ ಮತ್ತು ವಿವಿಧ ವ್ಯವಹಾರಗಳಲ್ಲಿ ಬಂಡವಾಳ ಹೂಡಿಕೆಗೆ ಎದುರುನೋಡುತ್ತಿವೆ.
ಖಾಸಗಿ ಷೇರುಗಳಲ್ಲಿ ಬಂಡವಾಳ ಹೂಡಿಕೆ
ಬದಲಾಯಿಸಿಹೂಡಿಕೆದಾರರು ಅಥವಾ ಸಂಸ್ಥೆಗಳು ಖಾಸಗಿ ಷೇರುಗಳಿಂದ ಬಂಡವಾಳ ಸಂಗ್ರಹವಾಗಿದ್ದರೂ ಸಹ, 1970ನೇ ದಶಕದಲ್ಲಿ ಖಾಸಗಿ ಷೇರುಗಳನ್ನು ಆಸ್ತಿಯ ಒಂದು ಶಾಖೆಯನ್ನಾಗಿ ವಿಂಗಡಿಸಲಾಯಿತು. ಇದರಲ್ಲಿ ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿ ವಿವಿಧ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ನಿಗದಿಪಡಿಸುತ್ತಾರೆ. ಹಲವು ಸಾಂಸ್ಥಿಕ ಹೂಡಿಕೆದಾರರಿಗೆ, ಸಾಂಪ್ರದಾಯಿಕ ಆಸ್ತಿ (ಉದಾ. ಸಾರ್ವಜನಿಕ ಷೇರುಗಳು ಮತ್ತು ಬಾಂಡ್‌ಗಳು) ಮತ್ತು ಇತರ ಬದಲಿ ಆಸ್ತಿಗಳನ್ನು (ಉದಾ., ಭಧ್ರತಾ ನಿಧಿಗಳು, ಸ್ತಿರಾಸ್ಥಿ ವ್ಯವಹಾರ, ವ್ಯಾಪಾರದ ಸರಕುಗಳು) ಒಳಗೊಂಡಿರುವ ಖಾಸಗಿ ಷೇರುಗಳಲ್ಲಿ ಬಂಡವಾಳ ಹೂಡಿಕೆಯು ಆಸ್ತಿ ಹಂಚಿಕೆಯ ಒಂದು ಭಾಗವಾಗಿದೆ.
ವೃತ್ತಿಪರ ಅನುಭವ, ಅಗತ್ಯ ಸಂಪನ್ಮೂಲ ಮತ್ತು ಬಂಡವಾಳ ಹೂಡಿಕೆಯ ನಿರ್ವಹಣೆಯ ಕೊರತೆಯಿಂದಾಗಿ ಹೆಚ್ಚಿನ ಸಾಂಸ್ಥಿಕ ಹೂಡಿಕೆದಾರರು ಖಾಸಗಿ ಕಂಪನಿಗಳಲ್ಲಿ ನೇರ ಹೂಡಿಕೆ ಮಾಡುವುದಿಲ್ಲ. ಅದರ ಬದಲು, ಖಾಸಗಿ ಷೇರುಗಳ ನಿಧಿ ಮೂಲಕ ಸಾಂಸ್ಥಿಕ ಹೂಡಿಕೆದಾರರು ಪರೋಕ್ಷ ಹೂಡಿಕೆ ಮಾಡುತ್ತಾರೆ. ಕೆಲವು ನಿರ್ದಿಷ್ಟ ಸಾಂಸ್ಥಿಕ ಹೂಡಿಕೆದಾರರು ಖಾಸಗಿ ಷೇರುಗಳು ನಿಧಿಗಳ ಪೋರ್ಟ್‌ಪೋಲಿಯೊದಲ್ಲಿ ತಮ್ಮ ಹೂಡಿಕೆಯನ್ನು ವಿತರಿಸುತ್ತಾರೆ, ಇತರರು ಒಂದೇ ನಿಧಿಯಲ್ಲಿ ಹೂಡಿಕೆ ಮಾಡುವುದಕಿಂತ ನಿಧಿಗಳ ನಿಧಿನಲ್ಲಿ ಹೂಡಿಕೆ ಮಾಡಿ, ಪೋರ್ಟ್‌ಪೋಲಿಯೊದಲ್ಲಿ ಬಂಡವಾಳವನ್ನು ವಿತರಿಸುತ್ತಾರೆ.
ಖಾಸಗಿ ಷೇರುಗಳ ಬಂಡವಾಳ ಹೂಡಿಕೆಗೆ ಬರುವ ಆದಾಯವು ಈ ಕೆಳಗಿನ ಒಂದು ಅಥವಾ ಮೂರು ಅಂಶಗಳ ಹೊಂದಾಣಿಕೆಯಿಂದ ರಚನೆಯಾಗಿರುತ್ತದೆ: ಕಾರ್ಯಚರಣೆಯಿಂದ ಹಣದ ಹರಿವಿನ ಮೂಲಕ ಸಾಲ ಮರುಪಾವತಿ ಅಥವಾ ಹಣ ಸಂಗ್ರಹಣೆ, ಬಂಡವಾಳ ಹೂಡಿಕೆಯ ಸಮಯದಲ್ಲಿ ಆದಾಯವನ್ನು ಹೆಚ್ಚಿಸುವ ಕಾರ್ಯಚರಣೆ ಅಭಿವೃದ್ಧಿ ಮತ್ತು ಮೊದಲು ಪಾವತಿಸಿದಕ್ಕಿಂತ ಹೆಚ್ಚಿನ ಆದಾಯಕ್ಕಾಗಿ ಬಹುವಿಭಾಗ ವಿಸ್ತರಣೆ, ವ್ಯಾಪಾರದ ಮಾರಾಟ. ಸಾಂಸ್ಥಿಕ ಹೂಡಿಕೆದಾರರಿಗೆ ಆಸ್ತಿ ವರ್ಗದಂತೆ ಖಾಸಗಿ ಷೇರುಗಳ ಪ್ರಮುಖಾಂಶವಾಗಿದ್ದು, ಬಂಡವಾಳ ಹೂಡಿಕೆಯು ಸ್ವಲ್ಪ ಸಮಯದ ನಂತರ ನಗದಾಗುವುದು. ಇದು ಬಂಡವಾಳ ಹೂಡಿಕೆ ವಿಧಾನವನ್ನು ಆಧರಿಸಿದೆ. ಖಾಸಗಿ ಷೇರುಗಳಲ್ಲಿ ಬಂಡವಾಳ ಹೂಡಿಕೆಗಳು ಈ ಕೆಳಗಿನ ಒಂದು ವಿಧಾನದಲ್ಲಿ ನಗದಾಗುವುದು:
- ಪ್ರಾಥಮಿಕ ಸಾರ್ವಜನಿಕ ಹಂಚಿಕೆ (IPO ) - ಸ್ವಲ್ಪ ಸಮಯದ ಮೇಲೆ ಹೆಚ್ಚುವರಿ ಷೇರುಗಳನ್ನು ಮಾರಾಟ ಮಾಡುವಂತೆ ಹಣಕಾಸು ಪ್ರಾಯೋಜಕರಿಗೆ ತಕ್ಷಣ ಭಾಗಶಃ ನಗದರೂಪದಲ್ಲಿ ಬಂಡವಾಳವನ್ನು ಒದಗಿಸಲು, ಕಂಪನಿಯ ಷೇರುಗಳನ್ನು ಕೊಳ್ಳಲು ಸಾರ್ವಜನಿಕರನ್ನು ಆಹ್ವಾನಿಸುವುದಾಗಿದೆ;
- ವಿಲೀನ ಅಥವಾ ಸ್ವಾಧೀನಪಡಿಸಿಕೊಳ್ಳುವಿಕೆ - ಒಂದು ಕಂಪನಿಯನ್ನು ಇನ್ನೊಂದು ಕಂಪನಿಯ ನಗದು ಅಥವಾ ಷೇರುಗಾಗಿ ಮಾರಾಟ ಮಾಡುವುದಾಗಿದೆ;
- ಮತ್ತೆಬಂಡವಾಳವಾಗಿ ಪರಿವರ್ತಿಸುವಿಕೆ - ಷೇರುದಾರರು ಮತ್ತು ಅದರ ಖಾಸಗಿ ಷೇರುಗಳ ನಿಧಿಗಳಿಗೆ ಕಂಪನಿಯು ಹಣದಿಂದ ಅಥವಾ ಸಾಲವನ್ನು ಸಂಗ್ರಹಿಸಿ ಅಥವಾ ನಿಧಿಗಳಿಗೆ ಇತರ ಬಂಡವಾಳ ಪತ್ರಗಳನ್ನು ವಿತರಿಸುವ ಮೂಲಕ ನಗದನ್ನು ಹಂಚಲಾಗುತ್ತದೆ (ಈ ಸಂದರ್ಭದಲ್ಲಿ ಹಣಕಾಸು ಪ್ರಾಯೋಜಕ).
ಖಾಸಗಿ ಷೇರು ಮಾರುಕಟ್ಟೆಯಲ್ಲಿ ದ್ರವತೆ
ಬದಲಾಯಿಸಿದ್ವಿತೀಯ ಹಂತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಖಾಸಗಿ ಷೇರುಗಳು (ಕೆಲವೊಮ್ಮೆ ದ್ವಿತೀಯ ಹಂತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಖಾಸಗಿ ಷೇರುಗಳು ಎಂದು ಕರೆಯುತ್ತಾರೆ) ಖಾಸಗಿ ಷೇರುಗಳು ಮತ್ತು ಇತರ ಬದಲಿ ಬಂಡವಾಳ ಹೂಡಿಕೆ ನಿಧಿಗಳಿಗೆ ಮೊದಲೇ ಅಸ್ತಿತ್ವದಲ್ಲಿರುವ ಹೂಡಿಕೆದಾರರ ಬದ್ಧತೆಗಳ ಖರೀದಿ ಮತ್ತು ಮಾರಾಟವನ್ನು ಉಲ್ಲೇಖಿಸುತ್ತದೆ. ಖಾಸಗಿ ಷೇರುಗಳ ನಿಧಿ ಬಂಡವಾಳ ಹೂಡಿಕೆಯ ಮಾರಾಟಗಾರರು ಕೇವಲ ನಿಧಿಯಲ್ಲಿರುವ ಬಂಡವಾಳವನ್ನಷ್ಟೆ ಮಾರಾಟ ಮಾಡದೆ, ನಿಧಿಯಲ್ಲಿರುವ ತಮ್ಮ ಬದ್ಧತೆಯನ್ನು ಮಾರಾಟ ಮಾಡುತ್ತಾರೆ. ಖಾಸಗಿ ಷೇರುಗಳನ್ನು ಖರೀದಿಸಿ, ತಮ್ಮ ಬಳಿ ಇಟ್ಟುಕೊಳ್ಳುವ ಹೂಡಿಕೆದಾರರಿಗೆ ದೀರ್ಘಾವಧಿಯ ಬಂಡವಾಳ ಹೂಡಿಕೆಯ ಉದ್ದೇಶಕ್ಕಾಗಿ, ಮೂಲತಃ ಅವುಗಳು ಆಸ್ತಿ ವರ್ಗವು ದ್ರವತೆಯನ್ನು ಹೊಂದಿರುವುದಿಲ್ಲ. ಖಾಸಗಿ ಷೇರುಗಳ ಬಂಡವಾಳದ ಪ್ರಮುಖ ಭಾಗವನ್ನು ಸಾರ್ವಜನಿಕ ಮಾರುಕಟ್ಟೆ ನೋಂದಾಯಿಸಲಾಗಿರುವುದಿಲ್ಲ; ಹಾಗಾಗಿ, ಖಾಸಗಿ ಷೇರುಗಳ ಮಾರಾಟಗಾರರಿಗೆ ಚುರುಕಿನ, ಅಸ್ತಿತ್ವ ಹೊಂದಿದ ದ್ವಿತೀಯ ಹಂತದ ಮಾರುಕಟ್ಟೆ ಲಭ್ಯವಾಗುವುದು.
ಏರಿಕೆ ಕಾಣುತ್ತಿರುವ ದ್ವಿತೀಯ ಹಂತದ ಷೇರು ಬಂಡವಾಳಗಳು ಇತರ ಖಾಸಗಿ ಷೇರುಗಳ ಬಂಡವಾಳ ಹೂಡಿಕೆಗಳೊಂದಿಗೆ ಯಾವುದೇ ಸಂಬಂಧವಿರದ ಹಣದ ಹರಿವಿಗೆ ಸಂಬಂಧಿಸಿದ ವಿಭಿನ್ನ ಆಸ್ತಿಯ ವರ್ಗವೆಂದು ಪರಿಗಣಿಸಲಾಗಿದೆ. ಇದರ ಪರಿಣಾಮವಾಗಿ ಹೂಡಿಕೆದಾರರು ದ್ವಿತೀಯ ಹಂತದ ಬಂಡವಾಳ ಹೂಡಿಕೆಗಳಿಗೆ ಖಾಸಗಿ ಷೇರುಗಳಲ್ಲಿ ಹೂಡಿಕೆ ಕಾರ್ಯಕ್ರಮವನ್ನು ವಿತರಿಸಲು ಬಂಡವಾಳವನ್ನು ಹಂಚುತ್ತಾರೆ. ಖಾಸಗಿ ಷೇರುಗಳಿಗೆ ಭಾರಿ ಬೇಡಿಕೆಯಿಂದಾಗಿ, ತಮ್ಮ ಖಾಸಗಿ ಷೇರುಗಳ ಪ್ರಮಾಣ ಹೆಚ್ಚಿಸಲು ಮತ್ತು ವಿತರಿಸಲು ಎದುರು ನೋಡುತ್ತಿರುವ ಹೂಡಿಕೆದಾರರು ದ್ವಿತೀಯ ಹಂತದ ಬಂಡವಾಳ ಹೂಡಿಕೆಗಳ ಮೌಲ್ಯದ ಬಗ್ಗೆ ಬದ್ಧರಾಗಿರುತ್ತಾರೆ.
ದೀರ್ಘಾವಧಿಯ ಸಮಸ್ಯೆ, ಪಾರದರ್ಶಕತೆಯ ಕೊರತೆ, ಅನಿಯಮಿತ ನಿಯಂತ್ರಣ, ನಗದೀಕರಣವಾಗದ ಮತ್ತು ಹೆಚ್ಚು ಬಂಡವಾಳ ಹೂಡಿಕೆ ಬಯಸುವ ನಿಧಿಗಳು ಹೂಡಿಕೆದಾರರನ್ನು ಹಿಂದೇಟು ಹಾಕುವಂತೆ ಮಾಡುತ್ತವೆ. ನಗದೀಕರಣರಹಿತ ಹೂಡಿಕೆಯ ರಚನಾತ್ಮಕ ಅಡೆತಡೆಗಳನ್ನು ಗಮನಿಸಿ ಖಾಸಗಿ ಷೇರುಗಳ ಪ್ರವೇಶವನ್ನು ಹೂಡಿಕೆದಾರರು ತಡೆಹಿಡಿಯುತ್ತಾರೆ.
ದ್ವಿತೀಯ ಹಂತದ ವ್ಯವಹಾರಗಳನ್ನು ಎರಡು ಪ್ರಮುಖ ವಿಭಾಗವಾಗಿ ವಿಂಗಡಿಸಬಹುದು. ಅವುಗಳೆಂದರೆ:
- ನಿಯಮಿತ ಪಾಲುದಾರಿಕೆ ಹೊಣೆಗಾರಿಕೆಯ ಮಾರಾಟ - ಇದು ಸಾಮಾನ್ಯ ದ್ವಿತೀಯ ಹಂತದ ವ್ಯವಹಾರವಾಗಿದೆ. ನಿಧಿ(ಗಳು)ಗಳಲ್ಲಿನ ಹೂಡಿಕೆದಾರರ ನಿಯಮಿತ ಹೊಣೆಗಾರಿಕೆಯ ವರ್ಗಾವಣೆ ಮೂಲಕ ಖಾಸಗಿ ಷೇರುಗಳ ನಿಧಿಯಲ್ಲಿ ಹೂಡಿಕೆದಾರರ ಹೊಣೆಗಾರಿಕೆ ಅಥವಾ ವಿವಿಧ ನಿಧಿಗಳಲ್ಲಿನ ಷೇರು ಮಾರಾಟವನ್ನು ಈ ವರ್ಗವು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಖಾಸಗಿ ಷೇರುಗಳ ನಿಧಿಗಳ ಎಲ್ಲಾ ಪ್ರಕಾರಗಳನ್ನು (ಉದಾ., ಖರೀದಿ, ಹೆಚ್ಚುವರಿ ಷೇರುಗಳು, ಸಾಹಸೋದ್ಯಮ ಬಂಡವಾಳ, ಮಧ್ಯಮ, ಹಳೆಯ ಮತ್ತು ಸ್ತಿರಾಸ್ಥಿ ವ್ಯವಹಾರ ಒಳಗೊಂಡಿರುತ್ತದೆ) ದ್ವಿತೀಯ ಹಂತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ. ನಿಯಮಿತ ಪಾಲುಗಾರಿಕೆ ಹೊಣೆಗಾರಿಕೆಯ ವರ್ಗಾವಣೆಯು ಹೂಡಿದ ಬಂಡವಾಳ ನಗದೀಕರಿಸಲು, ಹಾಗೆಯೇ ನಿಧಿಗೆ ಬಾಕಿ ಮೊತ್ತದ ಬಿಡುಗಡೆ ವೇಳೆ ಹೂಡಿಕೆದಾರಿಗೆ ಅನುಮತಿ ನೀಡುವುದು.
- ನೇರ ಹೊಣೆಗಾರಿಕೆಯ ಮಾರಾಟ – ದ್ವೀತಿಯ ಹಂತದ ನೇರ ಬಂಡವಾಳ ಅಥವಾ ಸಂಶ್ಲೇಷಿತ ದ್ವೀತಿಯ ಹಂತದ ಬಂಡವಾಳವು ನಿಧಿಯಲ್ಲಿರುತ್ತದೆ.ಇದು ನಿಯಮಿತ ಪಾಲುಗಾರಿಕೆಯ ಹೊಣೆಗಾರಿಕೆಗಳಿಗಿಂತ ಈಗಿರುವ ಕಂಪನಿಗಳಲ್ಲಿ ನೇರ ಹೂಡಿಕೆಗಳ ಮಾರಾಟ ಉಲ್ಲೇಖಿಸುತ್ತದೆ. ಈ ಬಂಡವಾಳ ಹೂಡಿಕೆ ಉದ್ಯಮದ ಅಭಿವೃದ್ಧಿ ಕಾರ್ಯಕ್ರಮಗಳು ಅಥವಾ ದೊಡ್ಡ ಪ್ರಮಾಣದ ಹಣಕಾಸು ಸಂಸ್ಥೆಗಳಿಂದ ಹುಟ್ಟಿಕೊಂಡವು.
ಖಾಸಗಿ ಷೇರು ಬಂಡವಾಳ ಸಂಸ್ಥೆಗಳು
ಬದಲಾಯಿಸಿಪ್ರೈವೇಟ್ ಇಕ್ವಿಟಿ ಇಂಟರ್ನ್ಯಾಷನಲ್[೬೪] ಎಂಬ ಕೈಗಾರಿಕಾ ಪತ್ರಿಕೆಯಂತೆಯ 2009 ಕ್ರಮಾಂಕದ ಪ್ರಕಾರ (PEI ಮೀಡಿಯಾದಿಂದ ಪ್ರಕಟಗೊಳ್ಳುವ PEI 300), ವಿಶ್ವದ ದೊಡ್ಡ ಖಾಸಗಿ ಷೇರುಗಳ ಸಂಸ್ಥೆ TPG ಆಗಿದ್ದು, ಇದು ಐದು ವರ್ಷಗಳ ಅವಧಿಯಲ್ಲಿ ಖಾಸಗಿ ಷೇರುಗಳ ನೇರ ಬಂಡವಾಳ ಹೂಡಿಕೆಯನ್ನು ಆಧರಿಸಿದೆ. PEI 300ಕ್ರಮಾಂಕದಂತೆ, ವಿಶ್ವದ 10 ಭಾರಿ ದೊಡ್ಡ ಪ್ರಮಾಣದ ಖಾಸಗಿ ಷೇರು ಬಂಡವಾಳ ಸಂಸ್ಥೆಗಳು ಈ ಕೆಳಗಿನಂತಿವೆ:
- TPG
- ಗೋಲ್ಡ್‌ಮ್ಯಾನ್ ಸ್ಯಾಚ್ಸ್ ಕ್ಯಾಪಿಟಲ್ ಪಾರ್ಟ್ನರ್ಸ್
- ದಿ ಕಾರ್ಲಿಲ್ ಗ್ರೂಪ್
- ಕೋಲ್‌ಬರ್ಗ್ ಕ್ರಾವಿಸ್ ರಾಬರ್ಟ್ಸ್
- ಅಪೋಲೊ ಗ್ಲೋಬಲ್ ಮ್ಯಾನೇಜ್‌ಮೆಂಟ್
- ಬೇನ್ ಕ್ಯಾಪಿಟಲ್
- CVC ಕ್ಯಾಪಿಟಲ್ ಪಾರ್ಟ್ನರ್ಸ್
- ದಿ ಬ್ಲಾಕ್‌ಸ್ಟೋನ್ ಗ್ರೂಪ್
- ವಾರ್‌ಬರ್ಗ್ ಪಿನ್ಸಸ್
- ಅಪ್ಯಾಕ್ಸ್ ಪಾರ್ಟ್ನರ್ಸ್
ಖಾಸಗಿ ಷೇರು ಬಂಡವಾಳ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆ ಮುಂದುವರಿಸುವುದರಿಂದ, ಹೆಚ್ಚಾಗಿ ಸಂಸ್ಥೆಯ ಖಾಸಗಿ ಷೇರುಗಳು ನಿಧಿಗಳ ಸಂಗ್ರಹಣೆ ಮತ್ತು ವಿತರಣೆಯ ಮಾನದಂಡ ಸುಲಭವಾಗುತ್ತದೆ. ಕಂಪನಿಗಳು ಖರೀದಿಸಿದ ಒಟ್ಟು ಮೌಲ್ಯದಲ್ಲಿ ಇತರ ಮಾನದಂಡಗಳೂ ಒಳಗೊಂಡಿರುತ್ತದೆ ಅಥವಾ ಸಂಸ್ಥೆಯ ಸಕ್ರಿಯ ಬಂಡವಾಳದ ಅಂದಾಜು ಪ್ರಮಾಣ ಮತ್ತು ಹೊಸ ಬಂಡವಾಳ ಹೂಡಿಕೆಗೆ ಲಭ್ಯವಿರುವ ಬಂಡವಾಳ ಶೇಖರಿಸಲಾಗುವುದು. ಪ್ರಮಾಣದ ಮಟ್ಟವನ್ನು ಕೇಂದ್ರೀಕರಿಸುವ ಯಾವುದೇ ಪಟ್ಟಿಯು ಈ ನಿಧಿಗಳು ಅಥವಾ ನಿರ್ವಾಹಣಾ ಬಂಡವಾಳಕ್ಕೆ ಸಂಬಂಧಿಸಿದ ಕಾರ್ಯದ ಬಗ್ಗೆ ಯಾವುದೇ ಸೂಚನೆ ನೀಡುವುದಿಲ್ಲ.
ಇದಲ್ಲದೆ, ಪ್ರೆಕಿನ್‌ಯು (ಈ ಹಿಂದೆ ಪ್ರೈವೇಟ್ ಷೇರ್ಸ್ ಇಂಟಲಿಜೆನ್ಸ್ ಎಂದು ಕರೆಯುತ್ತಿದ್ದರು) ಸ್ವತಂತ್ರ ಅಂಕಿಅಂಶ ಒದಗಿಸುವ ಸಂಸ್ಥೆಯಾಗಿದೆ.ಅಲ್ಲದೇ 25ನೇ ದೊಡ್ಡ ಖಾಸಗಿ ಷೇರುಗಳ ಬಂಡವಾಳ ನಿರ್ವಾಹಣಾ ಸಂಸ್ಥೆಯಾಗಿದೆ. ಆ ದೊಡ್ಡ ಸಂಸ್ಥೆಗಳ ಕ್ರಮಾಂಕವು ಅಲ್ಫಿನ್ವೆಸ್ಟ್ ಪಾರ್ಟ್‌ನರ್ಸ್, AXA ಖಾಸಗಿ ಷೇರುಗಳು, AIG ಇನ್ವೆಷ್ಟ್‌ಮೆಂಟ್ಸ್, ಗೋಲ್ಡ್ ಸಾಚ್ಸ್ ಪ್ರೈವೇಟ್ ಷೇರ್ಸ್ ಗ್ರೂಪ್ ಮತ್ತು ಪಂಥೋನ್ ವೆಂಚರ್ಸ್ ಒಳಗೊಂಡಿದೆ.
ಖಾಸಗಿ ಷೇರುಗಳ ನಿಧಿಗಳು
ಬದಲಾಯಿಸಿಈ sectionಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (August 2009) |
ಯೋಜನೆಗಳಿಗೆ ಖಾಸಗಿ ಷೇರುಗಳ ಸಂಗ್ರಹಣೆಯು ಹೂಡಿಕೆದಾರರು ತಮ್ಮ ನಿಧಿಗಳಿಂದ ಬಂಡವಾಳ ಬಯಸುವ ಖಾಸಗಿ ಷೇರು ಸಂಸ್ಥೆಗಳ ಚಟುವಟಿಕೆಗಳನ್ನು ಸಂಕೇತಿಸುತ್ತದೆ. ಹೂಡಿಕೆದಾರರು ಸಂಸ್ಥೆಯಲ್ಲಿ ಹೂಡಿಕೆದಾರರಾಗಿಲ್ಲದೆ, ನಿಧಿಯಲ್ಲಿ ನಿಯಮಿತ ಪಾಲುದಾರರಾಗುವ ಮೂಲಕ ಸಂಸ್ಥೆಯ ನಿರ್ದಿಷ್ಟ ನಿಧಿಯಲ್ಲಿ ಹೂಡಿಕೆ ಮಾಡುವರು. ಇದರ ಪರಿಣಾಮ, ಸಂಸ್ಥೆ ಹೂಡಿಕೆ ಮಾಡಿದ ನಿರ್ದಿಷ್ಟ ನಿಧಿಯಿಂದ ಬಂದ ಲಾಭ ಮಾತ್ರ ಹೂಡಿಕೆದಾರರಿಗೆ ದೊರೆಯುತ್ತದೆ.
- ನಿಧಿಗಳ ನಿಧಿಗಳು. ಖಾಸಗಿ ಷೇರುಗಳು ಒಂದು ರೀತಿಯ ನಿಧಿಗಳಾಗಿದ್ದು, ಅವುಗಳು ಹೆಚ್ಚಾಗಿ ದೊಡ್ಡ ಸಂಖ್ಯೆಯ ವಿವಿಧ ಪ್ರಕಾರ ಮತ್ತು ಪ್ರಾದೇಶಿಕ ಗಮನದ ಮಾಧ್ಯಮಗಳಿಗೆ ಬಹಿರಂಗಗೊಳಿಸಿ ಕಡಿಮೆ ಅಪಾಯ ಬಯಸುವ ಹೂಡಿಕೆದಾರರಿಗೆ ಒದಗಿಸದೆ ಇತರ ಖಾಸಗಿ ಷೇರು ನಿಧಿಗಳಲ್ಲಿ ಹೂಡಿಕೆ ಮಾಡುತ್ತವೆ. ಪ್ರೆಕಿನ್ ಲಿ.ನ (ಹಿಂದೆ ಪ್ರೈವೇಟ್ ಷೇರ್ಸ್ ಇಂಟಲಿಜೆನ್ಸ್ ಎಂದು ಕರೆಯುವ) ಅಂಕಿಅಂಶದ ಪ್ರಕಾರ 2006ರಲ್ಲಿ ಖಾಸಗಿ ಷೇರುಗಳ ನಿಧಿ ಸಂಗ್ರಹಿಸಲು 14%ರಷ್ಟು ಜಾಗತಿಕ ಹೊಣೆಗಾರಿಕೆಯನ್ನು ನಿಧಿ ಪೂರ್ಣಗೊಳಿಸಿದೆ.
- ಹೆಚ್ಚುವರಿ ಉಳಿತಾಯ ಮೂಲದ ಹೂಡಿಕೆದಾರರು. ಕಾನೂನಿನ ಪ್ರಕಾರ ಹೆಚ್ಚಾಗಿ ಹೂಡಿಕೆದಾರರಿಗೆ ಹೆಚ್ಚುವರಿ ಉಳಿತಾಯದ ಅಗತ್ಯವಿರುತ್ತದೆ. ಆಗಿನಿಂದ ಖಾಸಗಿ ಷೇರುಗಳ ನಿಧಿಗಳು ಸಾಮಾನ್ಯ ಮ್ಯುಚುವಲ್ ಫಂಡ್‌ಗಿಂತ ಕಡಿಮೆ ನಿಯಂತ್ರಣ ಹೊಂದಿರುತ್ತದೆ. ಉದಾಹರಣೆಗೆ USನಲ್ಲಿ ಅನುಮೋದಿತ ಹೂಡಿಕೆದಾರರಾಗಲು ಹೂಡಿಕೆದಾರರಿಗೆ ಹೆಚ್ಚಿನ ನಿಧಿ ಠೇವಣಿ ಅಗತ್ಯವಿದೆ. ಅದೆಂದರೆ ಎರಡು ವರ್ಷದಲ್ಲಿ $1 ದಶಲಕ್ಷ ಉಳಿತಾಯ, $200,000ರಷ್ಟು ವೈಯಕ್ತಿಕ ಆದಾಯ, ಅಥವಾ $300,000ರ ಜಂಟಿ ಆದಾಯ (ಗಂಡ ಯಾ ಹೆಂಡತಿಯೊಂದಿಗೆ) ಮತ್ತು ಇದೇ ರೀತಿಯ ಆದಾಯ ಮುಂದುವರಿಯುವ ನಿರೀಕ್ಷೆ.
ಬಂಡವಾಳ ಶೇಖರಣೆ ವಿಧಾನವು ಕಳೆದ ಕೆಲವು ವರ್ಷಗಳಿಂದ ವಿವಿಧ ಶಾಖೆಗಳಾಗಿ ಬೆಳೆಯುತ್ತಿದೆ. ಹಾಗಾಗಿ ಸರಾಸರಿ ನಿಧಿಗಳಲ್ಲಿ ಹೆಚ್ಚಿನ ಸಂಖ್ಯೆ ಹೂಡಿಕೆದಾರರಿದ್ದಾರೆ. 2004ರ ಅಂಕಿ ಅಂಶದ ಪ್ರಕಾರ ಸರಾಸರಿ ಖಾಸಗಿ ಷೇರುಗಳ ನಿಧಿಯಲ್ಲಿ 26 ದೊಡ್ಡ ಪ್ರಮಾಣದ ಹೂಡಿಕೆದಾರರಿದ್ದರು. ಈ ಅಂಕಿಅಂಶವು ಪ್ರೆಕಿನ್ ಲಿ.ನ (ಹಿಂದೆ ಪ್ರೈವೇಟ್ ಷೇರ್ಸ್ ಇಂಟಲಿಜೆನ್ಸ್ ಎಂದು ಕರೆಯುವ)ಅಧ್ಯಯನದ ಅಂಕಿಅಂಶದ ಪ್ರಕಾರದ ಪ್ರಕಾರ 42ಕ್ಕೆ ಏರಿತು.
ಖಾಸಗಿ ಷೇರುಗಳ ನಿಧಿಮೊತ್ತದ ಪ್ರಭಂಧಕರು ಒಟ್ಟು 1–5%ರೊಳಗಿನ ಬಂಡವಾಳ ಒದಗಿಸಿ ತಮ್ಮದೇ ಆದ ಮಾಧ್ಯಮಗಳಲ್ಲಿ ಹೂಡಿಕೆ ಮಾಡುತ್ತಾರೆ.
ಹೆಚ್ಚಾಗಿ ಖಾಸಗಿ ಷೇರುಗಳು ನಿಧಿ ಉಸ್ತುವರಿದಾರರು ತಮ್ಮ ಮಾಧ್ಯಮಗಳಿಗೆ (ಗ್ರಾಹಕರಿಗೆ) ಬಂಡವಾಳ ಸಂಗ್ರಹಿಸುವ ಬದಲು ದಲ್ಲಾಳಿಗಳ ನೇಮಿಸಿ ಬಂಡವಾಳ ಸಂಗ್ರಹಣೆ ಕಾರ್ಯಕ್ಕೆ ಬಳಸಿಕೊಳ್ಳುತ್ತಾರೆ. ನೇಮಕಗೊಂಡ ದಲ್ಲಾಳಿಗಳ ಸೇವೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಏರಿಕೆ ಕಾಣುತ್ತಿದೆ. ಪ್ರೆಕಿನ್ ಲಿ.ನ (ಹಿಂದೆ ಪ್ರೈವೇಟ್ ಷೇರ್ಸ್ ಇಂಟಲಿಜೆನ್ಸ್ ಎಂದು ಕರೆಯುವ) 2006ರ ಅಂತ್ಯದ ವೇಳೆಗೆ 40%ರಷ್ಟು ಏರಿಕೆ ಕಂಡಿದೆ. ನೇಮಕಗೊಂಡ ದಲ್ಲಾಳಿಗಳು ಸಂಭಾವ್ಯ ಹೂಡಿಕೆದಾರರನ್ನು ನಿಧಿ ಪ್ರಬಂಧಕರ ಪರವಾಗಿ ಸಂಪರ್ಕ ಮಾಡುವರು. ಬಂಡವಾಳ ಸಂಗ್ರಹಿಸಲು ಅವರು ಸುಮಾರು 1%ದಷ್ಟು ಶುಲ್ಕ ಪಡೆಯುವರು.
ಬಂಡವಾಳ ಸಂಗ್ರಹಿಸಲು ಖಾಸಗಿ ಷೇರು ಖರೀದಿ ಸಂಸ್ಥೆಯು ವ್ಯಯಿಸುವ ಸಮಯವು ಹೂಡಿಕೆದಾರರ ಹೊಣೆಗಾರಿಕೆಯ ಮೇಲೆ ಬದಲಾಗುತ್ತದೆ. ಇದು ಪ್ರಸ್ತುತ ಮಾರುಕಟ್ಟೆ ಸ್ಥಿತಿಗತಿ ಮತ್ತು ಹಿಂದಿನ ಸಂಸ್ಥೆಯ ಬಂಡವಾಳ ಶೇಖರಣೆಯ ದಾಖಲೆಯನ್ನು ಅವಲಂಬಿಸಿದೆ. ಸಂಸ್ಥೆಗಳು ಉದ್ದೇಶಿತ ಬಂಡವಾಳ ಸಂಗ್ರಹಣೆ ಪ್ರಮಾಣ ತಲುಪಲು ಕಡಿಮೆ ಎಂದರೂ ಒಂದರಿಂದ ಎರಡು ತಿಂಗಳು ಕಾಯಬೇಕಾಗುತ್ತದೆ. ಈಗಾಗಲೇ ಇರುವ ಹೂಡಿಕೆದಾರರಿಂದ ತಮ್ಮ ಹಿಂದಿನ ನಿಧಿಗಳಲ್ಲಿನ ಹೊಣೆಗಾರಿಕೆಯ ಅಥವಾ ಹೂಡಿಕೆದಾರರ ಆದಾಯದ ಪ್ರಮಾಣದ ಮೇಲೆ ನಿಧಿ ಸಂಗ್ರಹಿಸಲಾಗುವುದು. ಇತರ ಬಂಡವಾಳ ನಿರ್ವಾಹಕರು ಬಂಡವಾಳ ಸಂಗ್ರಹಣೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಏಕೆಂದರೆ ಈ ಬಂಡವಾಳ ಸಂಗ್ರಹಣೆ ಪ್ರಕ್ರಿಯೆ ಜಟಿಲವಾಗಿರುತ್ತದೆ (ಸದ್ಯ ಐರೋಪ್ಯ ಸಾಹಸೋದ್ಯಮ ನಿಧಿ ನಿರ್ವಾಹಕರಿದ್ದಂತೆ). ಕಾಮಗಾರಿಯೊಂದಕ್ಕೆ ಬಂಡವಾಳ ಸಂಗ್ರಹಿಸಲು ಎರಡು ವರ್ಷಗಳ ಕಾಲದ ದಾರಿ ಕ್ರಮಿಸಬೇಕಾಯಿತು, ಎನ್ನುವುದು ನೀವು ಕೇಳದ ವಿಷಯವಾಗಿರಬಹುದು. ಹೆಚ್ಚಿನ ನಿಧಿ ಪ್ರಬಂಧಕರು ಬಂಡವಾಳ ಸಂಗ್ರಹಣೆಯನ್ನು ಒಂಬತ್ತರಿಂದ ಹದಿನೈದು ತಿಂಗಳೊಳಗೆ ಪೂರ್ಣಗೊಳಿಸುತ್ತಾರೆ.
ಒಮ್ಮೆ ನಿಧಿ ಸಂಗ್ರಹಣೆ ಉದ್ದೇಶಿತ ಗುರಿ ತಲುಪಿದಾಗ, ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಈ ಹಂತದ ನಂತರ ಹೊಸ ಹೂಡಿಕೆದಾರು ದ್ವಿತೀಯ ಹಂತದ ಮಾರುಕಟ್ಟೆಯಲ್ಲಿ ನಿಧಿಯ ಹೊಣೆಗಾರಿಕೆಯನ್ನು ಖರೀದಿಸದ ಹೊರತು, ನಿಧಿಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ.
ಉದ್ಯಮದ ಗಾತ್ರ - ಬಂಡವಾಳ ಹೂಡಿಕೆ ಚಟುವಟಿಕೆ
ಬದಲಾಯಿಸಿಜಾಗತಿಕ ಮಟ್ಟದಲ್ಲಿ, 2007ರಲ್ಲಿ ಖಾಸಗಿ ಷೇರುಗಳ ದಾಖಲೆಯ ಪ್ರಮಾಣ ಗಮನಿಸಿದರೆ $686 ಶತಕೋಟಿ ಮೊತ್ತ ದಾಟಿತ್ತು. ಇದು ಹಿಂದಿನ ವರ್ಷದ ಮೂರನೇ ಒಂದು ಭಾಗವಾಗಿದ್ದು, 2005ರಲ್ಲಿ ಹೂಡಿಕೆ ಮಾಡಿದ ಒಟ್ಟು ಹೂಡಿಕೆಯ ದುಪ್ಪಟ್ಟಾಗಿತ್ತು. 2007ರಲ್ಲಿ ಖಾಸಗಿ ಷೇರುಗಳ ನಿಧಿಯ ಸಂಗ್ರಹಣೆಯು 2006ರ ಮೊತ್ತಕ್ಕಿಂತ 10% ಹೆಚ್ಚಾಗಿ, $494 ಶತಕೋಟಿಗೇರಿತು. ಹಣಕಾಸು ಮಾರುಕಟ್ಟೆಗಳಲ್ಲಿನ ಗೊಂದಲ ಹೊರತುಪಡಿಸಿದರೆ, ಹಣಕಾಸಿನ ಚಟುವಟಿಕೆಗಳು ವರ್ಷದ ಮೊದಲಾರ್ಧ ಮತ್ತು ಉತ್ತರಾರ್ಧದಲ್ಲಿ ಸಮನಾಗಿ ಮುಂದುವರಿದವು. ಖರೀದಿಯಿಂದಾಗಿ ಬಂಡವಾಳದಾರರ ಹೂಡಿಕೆಯ ಪ್ರಮಾಣ 89%ರಷ್ಟು ಏರಿಕೆ ಕಂಡಿತು, ಇದು 2000ಗಿಂತ ಐದು ಪಟ್ಟು ಹೆಚ್ಚಾಗಿತ್ತು. 2007ರ ಮೊದಲಾರ್ಧಕ್ಕೆ ಹೋಲಿಸಿದಾಗ 2008ರಲ್ಲಿ ಹಣಕಾಸಿನ ಬಿರುಸಿನ ಚಟುವಟಿಕೆಗಳಲ್ಲಿ ಕುಸಿತ ಕಂಡುಬಂದಿತು. ಸಾಲದ ಮಾರುಕಟ್ಟೆಗಳಲ್ಲಿನ ಕುಸಿತವು ಷೇರು ಸಂಗ್ರಹಣೆಯಲ್ಲಿ ಸಣ್ಣ ಮಟ್ಟದ ಕುಸಿತಕ್ಕೂ (sub-prime crisis) ಕಾರಣವಾಯಿತು. ಇದರಿಂದಾಗಿ ಖಾಸಗಿ ಷೇರುಗಳ ಹಣಕಾಸಿನಲ್ಲಿ ಇಳಿಕೆ ಉಂಟಾಯಿತು. ಖಾಸಗಿ ಷೇರುಗಳ ವ್ಯವಹಾರಗಳ ಪೂರ್ಣಗೊಳಿಸಲು ಬ್ಯಾಂಕುಗಳಿಂದ ಸಾಲ ಪಡೆಯಲು ಖಾಸಗಿ ಷೇರು ಬಂಡವಾಳ ಖರೀದಿ ಸಂಸ್ಥೆಗಳಿಗೆ ಕಷ್ಟವಾಯಿತು.
2008ರ ಹಣಕಾಸಿನ ಕುಸಿತದಿಂದಾಗಿ, ಖಾಸಗಿ ಷೇರುಗಳಲ್ಲಿ ಬಂಡವಾಳ ಹೂಡಿಕೆ ಚಟುವಟಿಕೆಯು ದಿಢೀರ ಕುಸಿತ ಕಂಡಿತು. ಜಾಗತಿಕ ಮಟ್ಟದಲ್ಲಿ 2008ರ ಹೊತ್ತಿಗೆ ಸುಮಾರು $190 ಶತಕೋಟಿಯನ್ನು ಖಾಸಗಿ ಷೇರುಗಳಲ್ಲಿ ಹೂಡಿಕೆ ಮಾಡಲಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು 40%ರಷ್ಟು ಕಡಿಮೆಯಾಗಿದೆ. ಬಂಡವಾಳ ನಗದೀಕರಣ ಕಡಿಮೆಯಾಗಿ, ವರ್ಷದ ಮೊದಲಾರ್ಧದಲ್ಲಿ ಬಂಡವಾಳ ಹೂಡಿಕೆ ಚಟುವಟಿಕೆ ಮಂದಗತಿಯಾಯಿತು. ಬಂಡವಾಳ ಮಾರುಕಟ್ಟೆಗಳ ಕುಸಿತದಿಂದ ಹೂಡಿಕೆದಾರರು ಬಹಳ ಕಷ್ಟ ಅನುಭವಿಸಿದರು. 2008ರಲ್ಲಿ ಖರೀದಿಯ ಒಟ್ಟು ಬಂಡವಾಳ ಹೂಡಿಕೆಯ ಪಾಲಿನಲ್ಲಿ 41%ರಷ್ಟು ಕುಸಿತ ಕಂಡಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 89%ರಷ್ಟು ಕಡಿಮೆಯಾಗಿತ್ತು. ಸಾಲದ ಮಾರುಕಟ್ಟೆಯಲ್ಲಿ ಕುಸಿತ ಉಂಟಾಗಿ ಖಾಸಗಿ ಷೇರುಗಳ ವ್ಯವಹಾರ ಪೂರ್ಣಗೊಳಿಸಲು ಬ್ಯಾಂಕುಗಳಿಂದ ಸಾಲ ಪಡೆಯಲು ಖಾಸಗಿ ಷೇರು ಬಂಡವಾಳ ಸಂಸ್ಥೆಗಳಿಗೆ ಕಷ್ಟವಾಯಿತು. ಸಂಸ್ಥೆಗಳ ಚಿಕ್ಕ ಪ್ರಮಾಣದ ವ್ಯವಹಾರ ಮತ್ತು ಕಡಿಮೆ ನಿಯಂತ್ರಣದಿಂದಾಗಿ 2009ರ ಮೊದಲಾರ್ಧದಲ್ಲಿ ಹಣಕಾಸಿನ ಚಟುವಟಿಕೆಯಲ್ಲಿ ಮತ್ತೆ ಕುಸಿತ ಕಂಡಿತು. ದೊಡ್ಡ ಪ್ರಮಾಣದ ಖರೀದಿಗಳು ಕಡಿಮೆಯಾದ್ದರಿಂದ, ಬಂಡವಾಳ ಹೂಡಿಕೆಗಳು ಈ 12 ವರ್ಷಗಳಲ್ಲಿ ಅತ್ಯಂತ ಕೆಳಮಟ್ಟ ತಲುಪಿ, 2009ರ ಮೊದಲಾರ್ಧ $24 ಶತಕೋಟಿಗೆ ಕುಸಿದಿತ್ತು. 2008ರ ಮೊದಲಾರ್ಧದಲ್ಲಿದ್ದ ಪ್ರಮಾಣದ ಆರನೇ ಒಂದು ಭಾಗದಷ್ಟು ಕುಸಿತ ಉಂಟಾಯಿತು.
ಭೌಗೋಳಿಕವಾಗಿ 2007ರಲ್ಲಿ ಉತ್ತರ ಅಮೆರಿಕದ ಖಾಸಗಿ ಷೇರುಗಳಲ್ಲಿನ ಜಾಗತಿಕ ಹೂಡಿಕೆಯು 71%ರಷ್ಟಿದೆ ಎಂದು ಅಂದಾಜಿಸಲಾಗಿದೆ (2000ರಲ್ಲಿ 66%ರಷ್ಟು ಏರಿಕೆ ಕಂಡುಬಂದಿದೆ). 2000 ಮತ್ತು 2007ರ ಅವಧಿಯಲ್ಲಿ ಬಂಡವಾಳ ಹೂಡಿಕೆಯು 20%ರಿಂದ 15%ಕ್ಕೆ ಕುಸಿತ ಕಂಡಿದೆ. ಇದು ಯುರೋಪ್‌ಗಿಂತ ಹೆಚ್ಚು, USನ ಖರೀದಿ ಮಾರುಕಟ್ಟೆ ಚಟುವಟಿಕೆಗಳ ಮೇಲೆ ಭಾರಿ ಪ್ರಭಾವ ಬೀರಿತು. 2000 ಮತ್ತು 2007ರ ನಡುವಿನ ಅವಧಿಯಲ್ಲಿ ಏಷ್ಯಾ-ಫೆಸಿಫಿಕ್ ಪ್ರದೇಶದಲ್ಲಿ ಏರಿಕೆ ಕಂಡುಬಂದರೂ ಸಹ, ಮಾರುಕಟ್ಟೆಗಳ ಬಂಡವಾಳ ಸಂಗ್ರಹಣೆ ಚಟುವಟಿಕೆಯು ಅಸ್ತಿತ್ವವದೊಂದಿಗೆ ಸಮನಾಗಿತ್ತು. ಈ ಪ್ರದೇಶದ ಬಂಡವಾಳ ಹೂಡಿಕೆಯ ಭಾಗವು ಬದಲಾಗದೆ, ಸುಮಾರು 12%ರಲ್ಲಿಯೇ ಉಳಿದಿತ್ತು.[೬೫]
ಉದ್ಯಮದ ಗಾತ್ರ - ನಿಧಿ ಸಂಗ್ರಹಣಾ ಕಾರ್ಯಚಟುವಟಿಕೆ
ಬದಲಾಯಿಸಿ2008ರ ಅಂತ್ಯಕ್ಕೆ ಖಾಸಗಿ ಆಡಳಿತದಡಿ ಕಾರ್ಯನಿರ್ವಹಿಸುವ ಖಾಸಗಿ ಷೇರುಗಳ ನಿಧಿಗಳು $2.5 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ (ನಕ್ಷೆ 3). ಮೌಲ್ಯ ಕುಸಿಯುತ್ತಿರುವ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲು ಇಚ್ಚಿಸದ ಸಂಸ್ಥೆಗಳಿಂದಾಗಿ, 2008ರ ಮೊದಲಾರ್ಧ ನಿಧಿ ಸಂಗ್ರಹಣೆ ಚಟುವಟಿಕೆಯಲ್ಲಿ 15%ರಷ್ಟು ಏರಿಕೆ ಮತ್ತು ನಗದುಗೊಳಿಸದ ಬಂಡವಾಳ ಹೂಡಿಕೆಯಲ್ಲಿಯೂ ಏರಿಕೆ ಕಂಡುಬಂದಿತು. ಸಂಸ್ಥೆಯ ಆಡಳಿತದಡಿ ಒಟ್ಟು ಆಸ್ತಿಯ 40%ರಷ್ಟು ಅಥವಾ $1 ಲಕ್ಷ ಕೋಟಿ ನಿಧಿಯು ಬಂಡವಾಳ ಹೂಡಿಕೆಗಾಗಿ ಲಭ್ಯವಿದ್ದು, ಇದರ ಪರಿಣಾಮ 2006 ಮತ್ತು 2008ರ ನಡುವಿನ ಅವಧಿಯಲ್ಲಿ ಹೆಚ್ಚಿನ ನಿಧಿಸಂಗ್ರಹಣೆ ಕಂಡುಬಂದಿತು.[೬೬]
ಹಣಕಾಸು ಚಟುವಟಿಕೆ ಕುಸಿತ ಮತ್ತು ಖಾಸಗಿ ಷೇರುಗಳಲ್ಲಿ ಬಂಡವಾಳ ಹೂಡಿಕೆಯ ಇಳಿಕೆ ಹೊರತುಪಡಿಸಿ, 2008ರಲ್ಲಿ ಬಂಡವಾಳ ಸಂಗ್ರಹಣೆ ಮಟ್ಟಗಳಲ್ಲಿ ಕೇವಲ 8%ರಷ್ಟು ಮಾತ್ರ ಕುಸಿತ ಕಂಡಿತು. ಒಟ್ಟು $450 ಶತಕೋಟಿ ಸಂಗ್ರಹಗೊಂಡಿತು. ಇದರಿಂದಾಗಿ ಹಣಕಾಸು ಚಟುವಟಿಕೆಗಳಲ್ಲಿ ಚೇತರಿಕೆ ಕಾಣಿಸಿಕೊಂಡಿತು. 2009ರ ಮೊದಲಾರ್ಧದಲ್ಲಿ ಬಂಡವಾಳ ಸಂಗ್ರಹಣೆಯಲ್ಲಿ ತೀವ್ರ ಕುಸಿತ ಕಂಡು ಬಂದು, $100 ಶತಕೋಟಿಗಿಂತಲೂ ಕಡಿಮೆ ಮೊತ್ತ ಸಂಗ್ರಹವಾಗಿತ್ತು. 2008ರ ಇದೇ ಅವಧಿಯಲ್ಲಿ ಹೋಲಿಸಿದರೆ ಮೂರನೇ ಎರಡರಷ್ಟು ಕುಸಿತ ಕಂಡಿತ್ತು. ಬಂಡವಾಳ ಹೂಡಿಕೆ ಗಾತ್ರದ ಇಳಿಕೆ ಮತ್ತು ಆರ್ಥಿಕ ಕುಸಿತವು ಖಾಸಗಿ ಷೇರುಗಳ ಹಿಡುವಳಿಯಲ್ಲಿದ್ದ ಷೇರುಗಳ ಖರೀದಿ ಮತ್ತು ಮಾರಾಟದ ಪರಿಣಾಮ, ಇದು ದ್ವಿತೀಯ ಹಂತದ ಮಾರುಕಟ್ಟೆಯಲ್ಲಿ ಖಾಸಗಿ ಷೇರುಗಳ ಮೌಲ್ಯಗಳಲ್ಲಿ ಏರಿಕೆ ತೋರಿತು.
ಭೌಗೋಳಿಕ ದೃಷ್ಟಿಕೋನಗಳಿಂದ ಗಮನಿಸಿದರೆ 2007ರಲ್ಲಿ ಉತ್ತರ ಅಮೆರಿಕ 65%ರಷ್ಟು ಬಂಡವಾಳ ಶೇಖರಿಸಿದೆ ಎಂದು ಅಂದಾಜಿಸಲಾಗಿದೆ. (68%ರಿಂದ ಇಳಿಕೆ ಕಂಡುಬಂದಿದೆ). 2000 ಮತ್ತು 2007 ರ ಅವಧಿಯಲ್ಲಿ, ಯುರೋಪ್‌ನ ನಿಧಿಗಳ ಹಂಚಿಕೆಯು 25%ರಿಂದ 22%ಕ್ಕೆ ಇಳಿಯಿತು. ಇದು ಯುರೋಪ್‌ಗಿಂತ USನ ಬಂಡವಾಳ ಖರೀದಿ ಮಾರುಕಟ್ಟೆ ಚಟುವಟಿಕೆಗಳಿಂದ ಹೆಚ್ಚು ಪ್ರಭಾವಕ್ಕೊಳಗಾಯಿತು. 2000 ಮತ್ತು 2007ರ ಅವಧಿಯಲ್ಲಿ ಏಷ್ಯಾ-ಫೆಸಿಫಿಕ್ ಪ್ರದೇಶ ಮತ್ತು ಅಭಿವೃದ್ಧಿಹೊಂದುತ್ತಿರುವ ಚೀನಾ, ಸಿಂಗಪೂರ್, ಸೌತ್ ಕೊರಿಯಾ, ಮತ್ತು ಭಾರತದಲ್ಲಿನ ಬಂಡವಾಳ ಹೂಡಿಕೆಯಲ್ಲಿ ಏರಿಕೆ ಕಂಡುಬಂದಿದೆ. ಈ ಅವಧಿಯಲ್ಲಿ ಏಷ್ಯಾ-ಫೆಸಿಫಿಕ್ ಪ್ರದೇಶದ ಬಂಡವಾಳ ಶೇಖರಣೆಯ ಪಾಲು 6%ಯಿಂದ 10%ಕ್ಕೆ ಏರಿಕೆ ಕಂಡಿತು.[೬೭]
ಖಾಸಗಿ ಷೇರುಗಳ ನಿಧಿಯ ಕಾರ್ಯನಿರ್ವಹಣೆ
ಬದಲಾಯಿಸಿಖಾಸಗಿ ಬಂಡವಾಳ ಷೇರು ಖರೀದಿ ಸಂಸ್ಥೆಗಳು ಯಾವುದೇ ಸಾರ್ವಜನಿಕರ ಹೂಡಿಕೆ ಇಲ್ಲದೆ, ತಮ್ಮದೇ ಆದ ಬಂಡವಾಳದೊಂದಿಗೆ ಕಾರ್ಯನಿರ್ವಹಿಸಿದ್ದರಿಂದ ಖಾಸಗಿ ಷೇರುಗಳ ನಿಧಿಗಳ ಹಿಂದಿನ ಕಾರ್ಯನಿರ್ವಹಣೆಯನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ನಿಧಿಗಳ ನಿರ್ವಹಣೆಯ ಜ್ಞಾನವಿರುವ ಸಮೂಹಗಳು ಮಾತ್ರ ಹೂಡಿಕೆಯಲ್ಲಿ ತೊಡಗಿರುವ ಸಂಸ್ಥೆಗಳಾಗಿರುತ್ತವೆ. ಶೈಕ್ಷಣಿಕ ಸಂಸ್ಥೆಗಳು (CEPRES ಸೆಂಟರ್ ಆಫ್ ಪ್ರೈವೇಟ್ ಇಕ್ವಿಟಿ ರಿಸರ್ಚ್) ತಮ್ಮನ್ನು ಇತರ ಸಂಸ್ಥೆಗಳೊಂದಿಗೆ ಹೋಲಿಕೆ ಮಾಡುವ ಸಂಸ್ಥೆಗಳು ಮತ್ತು ಮಾರುಕಟ್ಟೆ ಮಾನದಂಡಗಳ ರಚನೆಯಲ್ಲಿನ ಕಠಿಣ ಸವಾಲುಗಳನ್ನು ಎದುರಿಸುತ್ತದೆ.
ಅಮೆರಿಕಾ ಸಂಯುಕ್ತ ಸಂಸ್ಥಾನದ ನಿರ್ಧಿಷ್ಟ ರಾಜ್ಯಗಳಲ್ಲಿ ಸ್ವಾವಲಂಬಿ ಮಾಹಿತಿ ಕಾಯಿದೆಯನ್ನು (FOIA) ಲಭ್ಯವಿರುವ ಅಂಕಿಸಂಖ್ಯೆ ಆಧಾರದ ಮೇಲೆ ನಿರ್ದಿಷ್ಟ ಕಾರ್ಯನಿರ್ವಹಣೆ ಮೇಲೆ ನಿಗಾವಹಿಸಲು ಜಾರಿ ಮಾಡಲಾಗಿದೆ. ವಿಶೇಷವಾಗಿ, FOIAವು ತನ್ನ ವೆಬ್‌ಸೈಟ್‌ನಲ್ಲಿ ನೇರವಾಗಿ ಖಾಸಗಿ ಷೇರುಗಳ ಕಾರ್ಯನಿರ್ವಹಣೆಯ ಅಂಕಿಅಂಶ ಪ್ರಕಟಿಸಲು ನಿರ್ದಿಷ್ಟ ಸಾರ್ವಜನಿಕ ಸಂಸ್ಥೆಯ ಅಗತ್ಯವನ್ನು ಒತ್ತಿ ಹೇಳುತ್ತದೆ.[೬೮] 2007ರಲ್ಲಿ ಡೇವಿಡ್ ವಾಲ್ಕರ್‌ರ ಗೈಡ್‌ಲೈನ್ಸ್ ಫಾರ್ ಡಿಸ್‌ಕ್ಲೋಸರ್ ಆಂಡ್ ಟ್ರಾನ್‌ಸ್ಪರೆಂನ್ಸಿ ಇನ್ ಪ್ರೈವೇಟ್ ಷೇರ್ಸ್‌ನ ಪ್ರಕಟಣೆಯ ನಂತರ, ಖಾಸಗಿ ಷೇರುಗಳಿಗೆ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾದ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೆಚ್ಚಿನ ದತ್ತಾಂಶ ಲಭ್ಯವಾಗುತ್ತಿದ್ದವು.[೬೯]
ಕಳೆದ ಕೆಲವು ವರ್ಷಗಳಿಂದ ಖಾಸಗಿ ಷೇರುಗಳ ಉದ್ಯಮದ ಕಾರ್ಯನಿರ್ವಹಣೆಯು ವಿವಿಧ ರೀತಿಯ ನಿಧಿಗಳ ನಡುವೆ ವ್ಯತ್ಯಾಸ ತೋರುತ್ತಿದೆ. ಸಾರ್ವಜನಿಕ ಷೇರುಗಳಂತಹ ಇತರ ಆಸ್ತಿ ಪ್ರಕಾರಗಳಿಗೆ ಹೋಲಿಸಿದರೆ, ಇತ್ತೀಚಿನ ವರ್ಷಗಳಲ್ಲಿ (ಉದಾ. 2003-2007) ಖರೀದಿ ಮತ್ತು ಸ್ತಿರಾಸ್ಥಿ ವ್ಯವಹಾರ ನಿಧಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಹಿಂದಿನ ಇತರ ನಿಧಿ ಬಂಡವಾಳ ಹೂಡಿಕೆ ಗಮನಿಸಿದರೆ, ಅದರಲ್ಲೂ ಸಾಹಸೋದ್ಯಮ ಬಂಡವಾಳವು ಅಷ್ಟೇನು ಉತ್ತಮ ಕಾರ್ಯನಿರ್ವಹಣೆ ತೋರಿಸಲಿಲ್ಲ.
ಪ್ರತಿ ಬಂಡವಾಳ ಹೂಡಿಕೆ ಪ್ರಕಾರದಲ್ಲಿ ವ್ಯವಸ್ಥಾಪಕರ ಆಯ್ಕೆಯು (ಉದಾ., ಸರಾಸರಿ ಕಾರ್ಯನಿರ್ವಹಣೆಗಿಂತ ಹೆಚ್ಚು ಆದಾಯ ಗಳಿಸುವ ಸಾಮರ್ಥ್ಯವಿರುವ ಖಾಸಗಿ ಷೇರು ಬಂಡವಾಳ ಸಂಸ್ಥೆಗಳನ್ನು ಗುರುತಿಸುವುದು) ಹೂಡಿಕೆದಾರರ ಕಾರ್ಯನಿರ್ವಹಣೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ). ಹಿಂದಿನ ಅಥವಾ ಮೊದಲಿನ ಪದ್ಧತಿಯಂತೆ ಮೇಲ್ಮಟ್ಟದ ಮತ್ತು ಕೆಳದರ್ಜೆಯ ಕ್ವಾರ್ಟೈಲ್ ವ್ಯವಸ್ಥಾಪಕರ ಕಾರ್ಯನಿರ್ವಹಣೆಯು ನಾಟಕೀಯವಾಗಿ ಬದಲಾಗುವುದು. ಇದರಿಂದಾಗಿ ಹೊಸ ಖಾಸಗಿ ಷೇರುಗಳ ನಿಧಿಯ ನಿರೀಕ್ಷಿತ ಕಾರ್ಯನಿರ್ವಹಣೆ ಸಾಧಿಸುವ ಬದಲು ಸಾಂಸ್ಥಿಕ ಹೂಡಿಕೆದಾರರು ವ್ಯವಹಾರ ವಿಸ್ತರಣೆಯಲ್ಲಿ ತೊಡಗಿಕೊಳ್ಳುವರು.
ಖಾಸಗಿ ಷೇರುಗಳ ನಿಧಿಗಳಲ್ಲಿ ಬಂಡವಾಳ ಹೂಡಿಕೆ ಹಿಂಪಡೆದು, ಸ್ವಲ್ಪ ಸಮಯದ ನಂತರ, ಮತ್ತೆ ಹೂಡಿಕೆ ಮಾಡಿ ಕ್ರಮೇಣ ನಗದುಗೊಳಿಸುವುದರಿಂದ ಖಾಸಗಿ ಷೇರುಗಳ ಕಾರ್ಯನಿರ್ವಹಣೆಯನ್ನು ಸಾರ್ವಜನಿಕ ಷೇರುಗಳೊಂದಿಗೆ ಹೋಲಿಸುವುದು ಒಂದು ಸವಾಲಾಗಿದೆ. 1994ರಲ್ಲಿ ಮೊದಲ ಬಾರಿಗೆ ಲಾಂಗ್ ಮತ್ತು ನಿಕಲ್ಸ್ ಸೂಚ್ಯಂಕ ಹೋಲಿಕೆಯ ವಿಧಾನವನ್ನು (ICM) ಪ್ರಕಟಿಸಲಾಯಿತು. ಸಾರ್ವಜನಿಕ ಮಾರುಕಟ್ಟೆಯಲ್ಲಿ ಸಮಾನತೆ ಸಾಧಿಸುವುದು ಅಥವಾ ಲಾಭದಾಯಕತೆಯ ಸೂಚ್ಯಂಕದ ಮೂಲಕ ಇನ್ನೊಂದು ವಿಧಾನದಿಂದ ಗಳಿಕೆಯ ಸಾಧ್ಯತೆ ಇದೆ. ಲಾಭಾಂಶ ಸೂಚ್ಯಂಕದಂತೆ ಸಾರ್ವಜನಿಕ ಬಂಡವಾಳ ಹೂಡಿಕೆಯಲ್ಲಿಯ ಬಂಡವಾಳ ಶೇಖರಣೆಯು ಖಾಸಗಿ ಷೇರುಗಳ ನಿಧಿ ಬಂಡವಾಳ ಹೂಡಿಕೆಗಳ ಪಟ್ಟಿಯಿಂದ ಉದ್ದೇಶಿತ ಲಾಭ ಗಳಿಸಲು ಸಾಧ್ಯವಾಗುತ್ತದೆ.[೭೦] ಡ್ರೇಸನ್ ಮತ್ತು ಇತರರು ಅಲ್ಫಾ ಮತ್ತು ಬೀಟಾಗೆ ಏಕಕಾಲಕ್ಕೆ ಪರಿಸ್ಥಿತಿ ಅಂದಾಜುಗಳ ಸಾಮಾನ್ಯಗೊಳಿಸಿದ ವಿಧಾನ ಬಳಸಿದ್ದಾರೆ. ಎ ನ್ಯೂ ಮೆಥೆಡ್ ಟು ಎಸ್ಟಿಮೇಟ್ ರಿಸ್ಕ್ ಆಂಡ್ ರಿಟರ್ನ್ ಆಫ್ ನಾನ್-ಟ್ರೇಡೆಡ್ ಮೆತಡ್ ಟೂ ಎಸ್ಟಿಮೇಟ್ ರಿಸ್ಕ್ ಆಂಡ್ ರಿಟರ್ನ್ ಆಫ್ ನಾನ್-ಟ್ರೇಡೆಡ್ ಅಸೆಟ್ಸ್ ಫ್ರಮ್ ಕ್ಯಾಶ್ ಫ್ಲೋವ್ಸ್: ದಿ ಕೇಸ್ ಆಫ್ ಪ್ರೈವೇಟ್ ಷೇರ್ಸ್ ಫಂಡ್ಸ್‌ನ್ನು ಇತ್ತೀಚಿಗೆ ಪ್ರಕಟಿಸಿದರು. ಈ ಪದ್ದತಿಯು ಅಂದಾಜುಗಳ ಮೇಲೆ ನಂಬಿಕೆ ಇರಿಸಿದೆ. ಆದರೆ ಈ ಹಿಂದೆ ಲಭ್ಯವಿರದ ಅಥವಾ ವಿಶ್ವಾಸಾರ್ಹವಲ್ಲದ ಆದಾಯದಲ್ಲಿರುವ ಹೊಣೆಗಾರಿಕೆ ಲೆಕ್ಕಹಾಕಲು ಅನುಮತಿಸುತ್ತದೆ.
ಇದನ್ನೂ ನೋಡಿರಿ
ಬದಲಾಯಿಸಿ- ಖಾಸಗಿ ಷೇರುಗಳು ಮತ್ತು ಸಾಹಸೋದ್ಯಮ ಬಂಡವಾಳ ಇತಿಹಾಸ
- ಖಾಸಗಿ ಷೇರುಗಳ ಸಂಸ್ಥೆ / ಹಣಕಾಸು ಪ್ರಾಯೋಜಕ
- ಖಾಸಗಿ ಷೇರುಗಳ ನಿಧಿ
- ಖಾಸಗಿ ಷೇರುಗಳ ದ್ವಿತೀಯ ಹಂತದ ಮಾರುಕಟ್ಟೆ (ದ್ವಿತೀಯ ಹಂತದ ಬಂಡವಾಳ ಹೂಡಿಕೆಗಳು)
- ಸಾರ್ವಜನಿಕ ಷೇರುಗಳಲ್ಲಿ ಖಾಸಗಿ ಹೂಡಿಕೆ
- ಸಾರ್ವಜನಿಕವಾಗಿ ಖಾಸಗಿ ಷೇರುಗಳು
- ಜಾಗತಿಕ ಸಾಹಸೋದ್ಯಮ ಬಂಡವಾಳ ಮತ್ತು ಖಾಸಗಿ ಷೇರುಗಳ ದೇಶದ ಆಕರ್ಷಣೆ ಸೂಚಿಕೆ Archived 2010-03-11 ವೇಬ್ಯಾಕ್ ಮೆಷಿನ್ ನಲ್ಲಿ.
ಸಂಸ್ಥೆಗಳು
ಬದಲಾಯಿಸಿ- ಖಾಸಗಿ ಷೇರುಗಳ ಮಂಡಳಿ - ಖಾಸಗಿ ಷೇರು ಉದ್ಯಮಕ್ಕಾಗಿ ವಕೀಲರ ಸಂಸ್ಥೆ
- ಇನ್ಸ್ಟಿಟ್ಯುಶನಲ್ ಲಿಮಿಟೆಡ್ ಪಾರ್ಟ್ನರ್ಸ್ ಅಸೋಸಿಯೆಷನ್ - ಖಾಸಗಿ ಷೇರುಗಳಲ್ಲಿ ಹೂಡಿಕೆದಾರರಿಗೆ ವಕೀಲರ ಸಂಸ್ಥೆ
ಟಿಪ್ಪಣಿಗಳು
ಬದಲಾಯಿಸಿ- ↑ ಹಲವು ಪದಗಳ ಅಮೆರಿಕಾದ ವ್ಯಾಖ್ಯಾನಗಳಿಗಾಗಿ ಈ ಲೇಖನವನ್ನು ಬಳಸಲಾಗಿದೆ. ದಿ ಬ್ರಿಟಿಷ್ ವೆಂಚರ್ ಕ್ಯಾಪಿಟಲ್ ಅಸೋಸಿಯೆಷನ್ ಪರಿಭಾಷೆಯಲ್ಲಿನ ವ್ಯತ್ಯಾಸವನ್ನು ಒಳಗೊಂಡಿರುವ ಖಾಸಗಿ ಷೇರುಗಳ ಪರಿಚಯ Archived 2016-01-05 ವೇಬ್ಯಾಕ್ ಮೆಷಿನ್ ನಲ್ಲಿ. ಎನ್ನುವುದನ್ನು ಒದಗಿಸುತ್ತದೆ.
- ↑ ದಿ ಬ್ಯಾಲೆನ್ಸ್ ಬಿಟ್ವಿನ್ ಡೆಟ್ ಆಂಡ್ ಆಡೆಡ್ ವ್ಯಾಲ್ಯೂ Archived 2012-02-29 ವೇಬ್ಯಾಕ್ ಮೆಷಿನ್ ನಲ್ಲಿ.. 2006ರ ಸಪ್ಟೆಂಬರ್ 29ರ ಫೈನಾನ್ಶಿಯಲ್ ಟೈಮ್ಸ್
- ↑ ನೋಟ್ ಆನ್ ಲಿವರೇಜಡ್ ಬೈಔಟ್. ಟಕ್ ಸ್ಕೂಲ್ ಆಫ್ ಬ್ಯಸಿನೆಸ್ ಎಟ್ ಡ್ಯಾರ್‌ಮೌತ್: ಸೆಂಟರ್ ಫಾರ್ ಪ್ರೈವೇಟ್ ಇಕ್ವಿಟಿ ಆಂಡ್ ಎಂಟರ್‌ಪ್ರಿನರ್‌ಶಿಪ್, 2002. 2009-02-20ರಂದು ಪ್ರಾರಂಭವಾಯಿತು.
- ↑ ಉಲ್ಫ್ ಅಕ್ಸೆಲ್ಸನ್, ಟಿಮ್ ಜೆಂಕಿನ್ಸನ್, ಪರ್ ಸ್ಟ್ರೊಮ್‌ಬರ್ಗ್ ಮತ್ತು ಮೈಕಲ್ S. ವೆಯಿಸ್‌ಬ್ಯಾಚ್. ಲಿವರೇಜ್ ಆಂಡ್ ಪ್ರೈಸಿಂಗ್ ಇನ್ ಬೈಔಟ್ಸ್: ಎನ್ ಎಂಪೈರಿಕಲ್ ಎನಾಲಿಸಿಸ್. ಆಗಸ್ಟ್ 28, 2006.
- ↑ ಸ್ಟೀವನ್ N. ಕಲ್ಪನ್ ಮತ್ತು ಪರ್ ಸ್ಟ್ರೋಮ್‌ಬರ್ಗ್. ಲಿವರೇಜ್ ಬೈಔಟ್ಸ್ ಆಂಡ್ ಪ್ರೈವೇಟ್ ಇಕ್ವಿಟಿ Archived 2017-08-11 ವೇಬ್ಯಾಕ್ ಮೆಷಿನ್ ನಲ್ಲಿ., ಸೋಶಿಯಲ್ ಸೈನ್ಸ್ ರಿಸರ್ಚ್ ನೆಟ್ವರ್ಕ್, ಜೂನ್ 2008
- ↑ ಟ್ರೆನ್ವಿತ್ ಗ್ರೂಪ್ "M&A ರಿವ್ಯೂ" (2006ರ ಎರಡನೇ ತ್ರೈಮಾಸಿಕ)
- ↑ ಯುನೈಟೆಡ್ ಕಿಂಗ್‌ಡಮ್‌ನಲ್ಲಿ, ಖಾಸಗಿ ಷೇರುಗಳಂತೆ ಒಟ್ಟು ಆಸ್ತಿ ವರ್ಗ ಮತ್ತು ಬಂಡವಾಳ ಹೂಡಿಕೆ ವಿಧಾನವನ್ನು ವಿವರಿಸುವ ಖಾಸಗಿ ಷೇರುಗಳ ಬದಲು ಸಾಹಸೋದ್ಯಮ ಬಂಡವಾಳವನ್ನು ಹೆಚ್ಚಾಗಿ ಬಳಸುತ್ತಾರೆ.
- ↑ ೮.೦ ೮.೧ ಜೋಸೆಫ್ W. ಬರ್ಟ್‌ಲೆಟ್. "ವಾಟ್ ಇಸ್ ವೆಂಚರ್ ಕ್ಯಾಪಿಟಲ್?" Archived 2008-02-28 ವೇಬ್ಯಾಕ್ ಮೆಷಿನ್ ನಲ್ಲಿ. ಖಾಸಗಿ ಷೇರುಗಳ ವಿಶ್ವಕೋಶ. 2009-02-20ರಂದು ಪ್ರಾರಂಭವಾಯಿತು.
- ↑ ಜೋಶು ಲರ್ನರ್. ಸಮ್‌ಥಿಂಗ್ ವೆಂಚರ್ಡ್, ಸಮ್‌ಥಿಂಗ್ ಗೈನ್ಡ್ Archived 2015-10-17 ವೇಬ್ಯಾಕ್ ಮೆಷಿನ್ ನಲ್ಲಿ.. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್, 2000ರ ಜುಲೈ 24. 2009-02-20 ಪ್ರವೇಶಿಸಲಾಗಿದೆ.
- ↑ ಎ ಕಿಂಕ್ ಇನ್ ವೆಂಚರ್ ಕ್ಯಾಪಿಟಲ್‌ಸ್ ಗೋಲ್ಡ್ ಚೈನ್. ನ್ಯೂಯಾರ್ಕ್ ಟೈಮ್ಸ್, 2006ರ ಅಕ್ಟೋಬರ್ 7
- ↑ ಪೌಲ್ A. ಗೋಂಪರ್ಸ್. ದಿ ರೈಸ್ ಆಂಡ್ ಫಾಲ್ ಆಫ್ ವೆಂಚರ್ ಕ್ಯಾಪಿಟಲ್ Archived 2011-09-27 ವೇಬ್ಯಾಕ್ ಮೆಷಿನ್ ನಲ್ಲಿ.. ಗ್ರ್ಯಾಚುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್ ಯುನಿವರ್ಸಿಟಿ ಆಫ್ ಚಿಕಾಗೊ. 2009-02-20ರಂದು ಪ್ರಾರಂಭವಾಯಿತು.
- ↑ ದಿ ಪ್ರಿನ್ಸಿಪಲ್ಸ್ ಆಫ್ ವೆಂಚರ್ ಕ್ಯಾಪಿಟಲ್ Archived 2013-08-01 ವೇಬ್ಯಾಕ್ ಮೆಷಿನ್ ನಲ್ಲಿ.. ನ್ಯಾಷನಲ್ ವೆಂಚರ್ ಕ್ಯಾಪಿಟಲ್ ಅಸೋಸಿಯೇಷನ್. 2009-02-20ರಂದು ಪ್ರಾರಂಭವಾಯಿತು.
- ↑ ಡ್ರೈವಿಂಗ್ ಗ್ರೋಥ್: ಹೌ ಪ್ರೈವೇಟ್ ಇಕ್ವಿಟಿ ಇನ್ವೆಸ್ಟ್‌ಮೆಂಟ್ಸ್ ಸ್ಟ್ರೆಂಥನ್ ಅಮೆರಿಕನ್ ಕಂಪನೀಸ್ Archived 2015-11-07 ವೇಬ್ಯಾಕ್ ಮೆಷಿನ್ ನಲ್ಲಿ.. ಪ್ರೈವೇಟ್ ಇಕ್ವಿಟಿ ಕೌಂಸಿಲ್. 2009-02-20ರಂದು ಪ್ರಾರಂಭವಾಯಿತು.
- ↑ ಸಾರ್ವಜನಿಕ ಷೇರುಗಳು ಖಾಸಗಿ ಷೇರುಗಳೊಂದಿಗೆ ಮಿಶ್ರವಾದಾಗ; ಹಣಕಾಸು ನೀತಿಯು ಹೆಚ್ಚಾಗುವುದು ಮತ್ತು ಅಭಿವೃದ್ಧಿಯನ್ನು ಬಯಸುವುದು. ನ್ಯೂಯಾರ್ಕ್ ಟೈಮ್ಸ್, 2004 ಜೂನ್ 5
- ↑ ಗ್ರೆಚ್ಛನ್ ಮೊರ್ಗನ್ಸನ್ ಮತ್ತು ಜೆನ್ನಿ ಅಂಡರ್ಸನ್. ಸಿಕ್ರೇಟ್ ಇನ್ ದಿ ಪೈಪ್‌ಲೈನ್. ನ್ಯೂಯಾರ್ಕ್ ಟೈಮ್ಸ್, 2006 ಅಗಸ್ಟ್ 13
- ↑ ದಿ ಟರ್ನೆರೌಂಡ್ ಬ್ಯುಸಿನೆಸ್ Archived 2013-06-12 ವೇಬ್ಯಾಕ್ ಮೆಷಿನ್ ನಲ್ಲಿ.. AltAssets 2001ಅಗಸ್ಟ್ 24
- ↑ ಗೈಡ್ ಟು ಡಿಸ್ಟ್ರೇಸ್ಡ್ ಡೆಟ್. ಪ್ರೈವೇಟ್ ಇಕ್ವಿಟಿ ಇಂಟರ್ನ್ಯಾಷನಲ್, 2007. 2009-02-20 ಪ್ರಾರಂಭವಾಗುವುದು.
- ↑ ಡಿಸ್ಟ್ರೇಸ್ ಇನ್ವೆಸ್ಟರ್ಸ್ ಟೇಕ್ ಪ್ರೈವೇಟ್ ಷೇರ್ಸ್ ಕೋಸ್. ರಾಯಿಟರ್ಸ್ 2007 ಅಗಸ್ಟ್ 9
- ↑ ಬ್ಯಾಡ್ ನ್ಯೂಸ್ ಇಸ್ ಗೂಡ್ ನ್ಯೂಸ್: 'ಡಿಸ್ಟ್ರೇಸ್ಡ್ ಫಾರ್ ಕಂಟ್ರೋಲ್' ಇನ್‌ವೆಸ್ಟಿಂಗ್. ವಾರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್: ನಾಲೆಡ್ಜ್ @ ವಾರ್ಟನ್, 2006ರ ಎಪ್ರಿಲ್ 26 . 2009-02-20 ಪ್ರಾರಂಭವಾಯಿತು.
- ↑ ಡಿಸ್ಟ್ರೇಸ್ಡ್ ಪ್ರೈವೇಟ್ ಷೇರ್ಸ್: ಸ್ಪಿನ್ನಿಂಗ್ ಹೇ ಗೋಲ್ಡ್ Archived 2017-10-16 ವೇಬ್ಯಾಕ್ ಮೆಷಿನ್ ನಲ್ಲಿ.. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್: ವರ್ಕಿಂಗ್ ನಾಲೆಡ್ಜ್, 2004 ಫೆಬ್ರುವರಿ 16. 2009-02-20 ಪ್ರಾರಂಭವಾಗುತ್ತದೆ.
- ↑ ಮಾರ್ಕ್ಸ್, ಕೆನ್ನತ್ H. ಮತ್ತು ರಾಬಿನ್ಸ್, ಲಾರ್ರಿ E. ದಿ ಹ್ಯಾಂಡ್‌ಬುಕ್ ಆಫ್ ಫೈನಾನ್ಸಿಂಗ್ ಗ್ರೋಥ್: ಸ್ಟ್ರೇಟಜೀಸ್ ಆಂಡ್ ಕ್ಯಾಪಿಟಲ್ ಸ್ಟ್ರಕ್ಚರ್. 2005
- ↑ ಮೆಸ್ ಲುಕಿಂಗ್ ಅಪ್; ಇಟ್ಸ್ ನಾಟ್ ಎ ಲಾಂಗ್ ವೇ ಡೌನ್. ರಾಯಿಟರ್ಸ್ ಬೈಔಟ್ಸ್, 2006 ಮೇ 11, ಕ್ಯಾಶ್ಡ್
- ↑ ಎ ಹೈಯರ್ ಯೀಲ್ಡ್ Archived 2010-11-12 ವೇಬ್ಯಾಕ್ ಮೆಷಿನ್ ನಲ್ಲಿ.. ಸ್ಮಾರ್ಟ್ ಬ್ಯುಸಿನೆಸ್ ಆನ್‌ಲೈನ್, ಅಗಸ್ಟ್ 2009
- ↑ ದಿ ಪ್ರೈವೇಟ್ ಷೇರ್ಸ್ ಸೆಕಂಡರಿಸ್ ಮಾರ್ಕೆಟ್, ಎ ಕಂಪ್ಲೀಟ್ ಗೈಡ್ ಟು ಇಟ್ಸ್ ಸ್ಟ್ರಕ್ಚರ್, ಆಪರೇಶನ್ ಆಂಡ್ ಪರ್ಫಾರ್ಮೆನ್ಸ್ ದಿ ಪ್ರೈವೇಟ್ ಷೇರ್ಸ್ ಸೆಕಂಡರಿಸ್ ಮಾರ್ಕೆಟ್, 2008
- ↑ ಗ್ರ್ಯಾಬನ್ವಾರ್ಟರ್, ಅಲ್ರಿಚ್. ಎಕ್ಸ್‌ಪೋಸ್ಡ್ ಟು ದಿ ಜೆ-ಕರ್ವ್: ಅಂಡರ್‌ಸ್ಟಾಂಡಿಂಗ್ ಆಂಡ್ ಮ್ಯಾನೇಜಿಂಗ್ ಪ್ರೈವೇಟ್ ಷೇರ್ಸ್ ಫಂಡ್ ಇನ್ವೆಸ್ಟ್‌ಮೆಂಟ್ಸ್, 2005
- ↑ ಎ ಡಿಸ್ಕಶನ್ ಆನ್ ದಿ ಜೆ-ಕರ್ವ್ ಇನ್ ಪ್ರೈವೇಟ್ ಷೇರ್ಸ್ Archived 2013-06-12 ವೇಬ್ಯಾಕ್ ಮೆಷಿನ್ ನಲ್ಲಿ.. AltAssets, 2006
- ↑ ಎ ಸೆಕೆಂಡರಿ ಮಾರ್ಕೆಟ್ ಫಾರ್ ಪ್ರೈವೇಟ್ ಇಕ್ವಿಟಿ ಇಸ್ ಬೋರ್ನ್ Archived 2009-05-29 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಇಂಡಸ್ಟ್ರಿ ಸ್ಟ್ಯಾಂಡರ್ಡ್, 28 ಅಗಸ್ಟ್ 2001
- ↑ ಇನ್ವೆಸ್ಟರ್ಸ್ ಸ್ಕ್ರ್ಯಾಂಬಲ್ ಫಾರ್ ಇನ್‌ಪ್ರಾಸ್ಟ್ರಕ್ಚರ್ (ಫೈನಾನ್ಶಿಯಲ್ ನ್ಯೂಸ್, 2008)
- ↑ ಇಸ್ ಇಟ್ ಟೈಮ್ ಟು ಅಡ್ ಎ ಪಾರ್ಕಿಂಗ್ ಲಾಟ್ ಟು ಯುವರ್ ಪೋರ್ಟ್‌ಪೋಲಿಯೊ? (ನ್ಯೂಯಾರ್ಕ್ ಟೈಮ್ಸ್, 2006
- ↑ [ಬೈಔಟ್ ಫರ್ಮ್ಸ್ ಪುಟ್ ಎನರ್ಜಿ ಇನ್‌ಫ್ರಾಸ್ಟ್ರಕ್ಚರ್ ಇನ್ ಪೈಪ್‌ಲೈನ್] (MSN ಮನಿ, 2008)
- ↑ "ಮರ್ಜೆಂಟ್ ಬ್ಯಾಂಕಿಂಗ್: ಪಾಸ್ಟ್ ಆಂಡ್ ಪ್ರಸೆಂಟ್". Archived from the original on 2017-12-07. Retrieved 2009-12-29.
- ↑ ವಿಲ್ಸನ್, ಜಾನ್. ದಿ ನ್ಯೂ ವೆಂಚರ್ಸ್, ಇನ್‌ಸೈಡ್ ದಿ ಹೈ ಸ್ಟಾಕ್ಸ್ ವರ್ಲ್ಡ್ ಆಫ್ ವೆಂಚರ್ ಕ್ಯಾಪಿಟಲ್.
- ↑ WGBH ಪಬ್ಲಿಕ್ ಬೋರ್ಡ್‌ಕಾಸ್ಟಿಂಗ್ ಸರ್ವೀಸ್, “ವೊ ಮೇಡ್ ಅಮೆರಿಕ?"-ಜಾರ್ಜಿಸ್ ಡೊರಿಯಟ್”
- ↑ "ಜೋಸೆಫ್ W. ಬರ್ಟ್‌ಲೆಟ್, "ವಾಟ್ ಇಸ್ ವೆಂಚರ್ ಕ್ಯಾಪಿಟಲ್?"". Archived from the original on 2008-02-28. Retrieved 2009-12-29.
- ↑ U.S. ಷೇರು ಮತ್ತು ವಿನಿಮಯ ಆಯೋಗದ ಜನರಲ್ ಕೌಂಸೆಲ್ ಆಗಿರುವ ಬ್ರೈನ್ G. ಕಾರ್ಟ್‌ರೈಟ್‌ರ ಭಾಷಣ ದಿ ಫ್ಯುಚರ್ ಆಫ್ ಸೆಕ್ಯುರಿಟಿಸ್ ರೆಗ್ಯುಲೇಷನ್ಸ್. ಯುನಿವರ್ಸಿಟಿ ಆಫ್ ಪೆನ್ಸಿಲ್ವನಿಯಾ ಲಾ ಸ್ಕೂಲ್ ಇನ್‌ಸ್ಟಿಟ್ಯುಟ್ ಫಾರ್ ಲಾ ಆಂಡ್ ಇಕನಾಮಿಕ್ಸ್ ಫಿಲಾದೆಲ್ಫಿಯಾ, ಪೆನ್ಸಿಲ್ವನಿಯಾ. ಅಕ್ಟೋಬರ್ 24, 2003.
- ↑ 1955 ಜನವರಿ 21ರಲ್ಲಿ ವಾಟರ್‌ಮ್ಯಾನ್ ಸ್ಟೀಮ್‌ಶಿಪ್ ಕಾರ್ಪೋರೇಷನ್‌ಯಿಂದ ಮ್ಯಾಕ್‌ಲೀನ್ ಇಂಡಸ್ಟ್ರೀಸ್, Inc. ಪಾನ್ ಅಟ್ಲಾಂಟಿಕ್ ಸ್ಟೀಮ್‌ಶೀಪ್ ಕಾರ್ಪೋರೇಶನ್ ಆಂಡ್ ಗಲ್ಫ್ ಫ್ಲೋರಿಡಾ ಟರ್ಮಿನಲ್ ಕಂಪನಿ, Inc. ಷೇರುಗಳನ್ನು ಖರೀದಿಸಿತು. ಅದೇ ವರ್ಷ ಮೇಯಲ್ಲಿ ಮ್ಯಾಕ್‌ಲೀನ್ ಇಂಡಸ್ಟ್ರೀಸ್, Inc. ವಾಟರ್‌ಮ್ಯಾನ್ ಸ್ಟೀಮ್‌ಶಿಪ್ ಕಾರ್ಪೋರೇಷನ್‌ರ ಸ್ಥಾಪಕರು ಮತ್ತು ಇತರ ಷೇರುದಾರರಿಂದ ಸಾಮಾನ್ಯ ಷೇರುಗಳ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಪೂರ್ಣಗೊಳಿಸಿತು.
- ↑ ಮಾರ್ಕ್ ಲೆವಿನ್ಸನ್, ದಿ ಬಾಕ್ಸ್, ಹೌ ದಿ ಶಿಪ್ಪಿಂಗ್ ಕಂಟೈನರ್ ಮೇಡ್ ದಿ ವರ್ಲ್ಡ್ ಸ್ಮಾಲರ್ ಆಂಡ್ ದಿ ವರ್ಲ್ಡ್ ಇಕಾನಮಿ ಬಿಗ್ಗರ್ , ಪುಟ ಸಂಖ್ಯೆ. 44-47 (ಪ್ರೈಸ್‌ಟನ್ ಯುನಿವರ್ಸಿಟಿ ಪ್ರೆಸ್ 2006). ICC ಪ್ರಕರಣ ಸಂ. MC-F-5976ರಲ್ಲಿ ಈ ವ್ಯವಹಾರದ ವಿವರ, ಮ್ಯಾಕ್‌ಲೀನ್ ಟ್ರಕಿಂಗ್ ಕಂಪನಿ ಆಂಡ್ ಪ್ಯಾನ್-ಅಟ್ಲಾಂಟಿಕ್ ಅಮೆರಿಕನ್ ಸ್ಟೀಮ್‌ಶಿಪ್ ಕಾರ್ಪೋರೇಶನ್--ಇನ್ವೆಸ್ಟಿಗೇಶನ್ ಆಫ್ ಕಂಟ್ರೋಲ್ , ಜುಲೈ 8, 1957.
- ↑ ಟ್ರೆಹಾನ್, R. ((2006) ದಿ ಹಿಸ್ಟರಿ ಆಫ್ ಲಿವರೇಜಡ್ ಬೈಔಟ್ಸ್ . 2006 ಡಿಸೆಂಬರ್ 2 2008 ಮೇ 22ರಂದು ಪ್ರಾರಂಭವಾಯಿತು
- ↑ ದಿ ಹಿಸ್ಟರಿ ಆಫ್ ಪ್ರೈವೇಟ್ ಷೇರ್ಸ್ (ಇನ್ವಿಸ್ಟ್‌ಮೆಂಟ್ಸ್ U, ದಿ ಆಕ್ಸ್‌ಫರ್ಡ್ ಕ್ಲಬ್
- ↑ ಬರೋಫ್, ಬ್ರೆನ್. ಬರ್ಬಾರಿಯನ್ಸ್ ಎಟ್ ದಿ ಗೇಟ್. ನ್ಯೂಯಾರ್ಕ್ : ಹಾರ್ಪರ್ & ರೋವ್, 1990, ಪು. 133-136
- ↑ ಟೇಲರ್, ಅಲೆಕ್ಸಾಂಡರ್ L. "ಬೈಔಟ್ ಬಿಂಗ್ Archived 2013-08-22 ವೇಬ್ಯಾಕ್ ಮೆಷಿನ್ ನಲ್ಲಿ.". TIME ನಿಯತಕಾಲಿಕೆ, 1984 ಜುಲೈ 16.
- ↑ ಒಲ್ಪರ್, T. ಮತ್ತು ಟಿಟ್ಮಾನ್, S. "ದಿ ಡಿಟರ್ಮೈಂಡ್ಸ್ ಆಫ್ ಲೆವೆರೇಜ್ಡ್ ಬೈಔಟ್ ಆಕ್ಟಿವಿಟಿ: ಫ್ರೀ ಕ್ಯಾಶ್ ಫ್ಲೋ vs. ಫೈನಾನ್ಶಿಯಲ್ ಡಿಸ್ಟ್ರೇಸ್ ಕಾಸ್ಟ್ಸ್." ಜರ್ನಲ್ ಆಫ್ ಫೈನಾನ್ಸ್, 1993.
- ↑ ಬರ್ಬರಾ ಕಿವಿಯಟ್‌ರವರ 10 ಕ್ವೇಶನ್ಸ್ ಫಾರ್ ಕಾರ್ಲ್ ಇಕಾಹ್ನ್ Archived 2013-05-29 ವೇಬ್ಯಾಕ್ ಮೆಷಿನ್ ನಲ್ಲಿ. TIME ನಿಯತಕಾಲಿಕೆ, 2007ರ ಫೆಬ್ರುವರಿ 15
- ↑ ಎಲೈನ್ X. ಗ್ರಾಂಟ್‌ರ TWA - ಡೆತ್ ಆಫ್ ಎ ಲೆಜಂಡ್ Archived 2008-11-21 ವೇಬ್ಯಾಕ್ ಮೆಷಿನ್ ನಲ್ಲಿ. St ಲೂಯಿಸ್ ನಿಯತಕಾಲಿಕೆ, ಅಕ್ಟೋಬರ್ 2005
- ↑ ಗೇಮ್ ಆಫ್ ಗ್ರೀಡ್ Archived 2005-03-13 ವೇಬ್ಯಾಕ್ ಮೆಷಿನ್ ನಲ್ಲಿ. (TIME ನಿಯತಕಾಲಿಕೆ, 1988)
- ↑ ವೇಲಸ್, ಅನಿಸ್ C. "ನಬಿಸ್ಕೊ ರಿಫೈನೆನ್ಸ್ ಪ್ಲಾನ್ ಸೆಟ್." ದಿ ನ್ಯೂಯಾರ್ಕ್ ಟೈಮ್ಸ್, 1990 ಜುಲೈ 16.
- ↑ Stone, Dan G. (1990). April Fools: An Insider's Account of the Rise and Collapse of Drexel Burnham. New York City: Donald I. Fine. ISBN 1556112289.
- ↑ ೪೮.೦ ೪೮.೧ ಡೆನ್ ಆಫ್ ಥೀವ್ಸ್ . ಸ್ಟಿವರ್ಟ್, J. B. ನ್ಯೂಯಾರ್ಕ್: ಸಿಮನ್ ಆಂಡ್ ಶುಸ್ಟರ್, 1991. ISBN 0-671-63802-5.
- ↑ ನ್ಯೂ ಸ್ಟ್ರೀಟ್ ಕ್ಯಾಪಿಟಲ್ Inc. - ReferenceForBusiness.comನಲ್ಲಿ ನ್ಯೂ ಸ್ಟ್ರೀಟ್ ಕ್ಯಾಪಿಟಲ್ Incಬಗ್ಗೆ ಇರುವ ಕಂಪನಿ ಪರಿಚಯ, ಮಾಹಿತಿ, ವ್ಯವಹಾರ ವಿವರ, ಇತಿಹಾಸ, ಹಿನ್ನಲೆ ಮಾಹಿತಿ
- ↑ ಸೋರ್ಕಿನ್, ಅಂಡ್ರೊ ರೋಸ್ ಮತ್ತು ರೋಜೋನ್, ಟ್ರ್ಯಾಸಿ. "ತ್ರಿ ಫರ್ಮ್ಸ್ ಆರ್ ಸೇಡ್ ಟು ಬೈ ಟಾಯ್ಸ್ 'R' ಅಸ್ ಫಾರ್ $6 ಬಿಲಿಯನ್ ." ನ್ಯೂಯಾರ್ಕ್ ಟೈಮ್ಸ್, 2005 ಮಾರ್ಚ್ 17.
- ↑ ಅಂಡ್ರೊ ರೋಸ್, ಸೊರ್ಕಿನ್, ಮತ್ತು ಡ್ಯಾನಿ ಹಕೀಮ್. "ಫೋರ್ಡ್ ಸೇಡ್ ಟು ಬಿ ರೇಡಿ ಟು ಪರ್ಸ್ಯು ಎ ಹರ್ಟ್ಸ್ ಸೇಲ್." ನ್ಯೂಯಾರ್ಕ್ ಟೈಮ್ಸ್, 2005 ಸಪ್ಟೆಂಬರ್ 8
- ↑ ಪೀಟರ್ಸ್, ಜರಮಿ W. "ಫೋರ್ಡ್ ಕಂಪ್ಲೀಟ್ಸ್ ಸೇಲ್ ಆಫ್ ಹರ್ಟ್ಸ್ ಟು 3 ಫರ್ಮ್ಸ್." ನ್ಯೂಯಾರ್ಕ್ ಟೈಮ್ಸ್, 2005 ಸಪ್ಟೆಂಬರ್ 13
- ↑ ಸೋರ್ಕಿನ್, ಅಂಡ್ರೋವ್ ರೋಸ್."ಸೋನಿ-ಲೆಡ್ ಗ್ರೂಪ್ ಮೇಕ್ಸ್ ಎ ಲೇಟ್ ಬಿಡ್ ಟು ವ್ರೆಸ್ಟ್ MGM ಫ್ರಮ್ ಟೈಮ್ ವಾರ್ನರ್." ನ್ಯೂಯಾರ್ಕ್ ಟೈಮ್ಸ್, 2004 ಸಪ್ಟೆಂಬರ್ 14
- ↑ "ಕ್ಯಾಪಿಟಲ್ ಫರ್ಮ್ಸ್ ಎಗ್ರಿ ಟು ಬೈ ಸನ್‌ಗಾರ್ಡ್ ಡಾಟಾ ಇನ್ ಕ್ಯಾಶ್ ಡೀಲ್." ಬ್ಲೂಮ್‌ಬರ್ಗ್ L.P., 2005 ಮಾರ್ಚ್ 29
- ↑ ಸ್ಯಾಮುಲ್ಸನ್, ರಾಬರ್ಟ್ J. "ದಿ ಪ್ರೈವೇಟ್ ಇಕ್ವಿಟಿ ಬೂಮ್". ದಿ ವಾಷಿಂಗ್ಟನ್ ಪೋಸ್ಟ್, 2007 ಮಾರ್ಚ್ 15.
- ↑ ಡೌ ಜೋನ್ಸ್ ಪ್ರೈವೇಟ್ ಇಕ್ವಿಟಿ ಎನಾಲಿಸ್ಟ್ ಆಸ್ ರೆಫರೆನ್ಸಡ್ ಇನ್ U.S. ಪ್ರೈವೇಟ್-ಇಕ್ವಿಟಿ ಫಂಡ್ಸ್ ಬ್ರೇಕ್ ರೆಕಾರ್ಡ್ ಅಸೋಸಿಯೆಟೆಡ್ ಪ್ರೆಸ್, 2007ರ ಜನವರಿ 11.
- ↑ ಡೌ ಡೌ ಜೋನ್ಸ್ ಪ್ರೈವೇಟ್ ಇಕ್ವಿಟಿ ಎನಾಲಿಸ್ಟ್ ಆಸ್ ರೆಫರೆನ್ಸಡ್ ಇನ್ ಪ್ರೈವೇಟ್-ಇಕ್ವಿಟಿ ಫಂಡ್ ರೈಸಿಂಗ್ ಅಪ್ ಇನ್ 2007: ರಿಪೋರ್ಟ್, ರಾಯಿಟರ್ಸ್, 2008 ಜನವರಿ 8.
- ↑ ಸೋರ್ಕಿನ್, ಅಂಡ್ರೋವ್ ರೋಸ್."HCA ಬೈಔಟ್ ಹೈಲೈಟ್ಸ್ ಎರಾ ಆಫ್ ಗೋಯಿಂಗ್ ಪ್ರೈವೇಟ್." ನ್ಯೂಯಾರ್ಕ್ ಟೈಮ್ಸ್, 2006 ಜುಲೈ 25.
- ↑ ವರ್ಡಿಜಿಯರ್, ಜುಲಿಯಾ. "ಇಕ್ವಿಟಿ ಫರ್ಮ್ಸ್ ವಿನ್ಸ್ ಬಿಡ್ಡಿಂಗ್ ಫಾರ್ ಎ ರಿಟೈಲರ್, ಅಲಿಯನ್ಸ್ ಬೂಟ್ಸ್." ನ್ಯೂಯಾರ್ಕ್ ಟೈಮ್ಸ್, 2007 ಎಪ್ರಿಲ್ 25
- ↑ ಲೊಂಕೆವಿಚ್, ಡ್ಯಾನ್ ಮತ್ತು ಕ್ಲಂಪ್, ಎಡ್ವರ್ಡ್. KKR, ಟೆಕ್ಸಸ್ ಪೆಸಿಫಿಕ್ ವಿಲ್ ಎಕ್ವಾರ್ TXU ಫಾರ್ $45 ಬಿಲಿಯನ್ ಬ್ಲೂಮ್‌ಬರ್ಗ್, 2007 ಫೆಬ್ರುವರಿ 26.
- ↑ ಸೋರ್ಕಿನ್, ಅಂಡ್ರೋವ್ ರೋಸ್ ಮತ್ತು ಡೆ ಲಾ ಮೆರ್ಸೆಡ್, ಮೈಕಲ್ J. "ಪ್ರೈವೇಟ್ ಇಕ್ವಿಟಿ ಇನ್ವೆಸ್ಟರ್ಸ್ ಹಿಂಟ್ ಎಟ್ ಕೂಲ್ ಡೌನ್." ನ್ಯೂಯಾರ್ಕ್ ಟೈಮ್ಸ್, 2007 ಜೂನ್ 26
- ↑ ಸೋರ್ಕಿನ್, ಅಂಡ್ರೋವ್ ರೋಸ್. "ಸಾರ್ಟಿಂಗ್ ತ್ರೂ ದಿ ಬೌಔಟ್ ಫ್ರಿಜ್‌ಔಟ್." ನ್ಯೂಯಾರ್ಕ್ ಟೈಮ್ಸ್, 2007 ಅಗಸ್ಟ್ 12.
- ↑ ಟರ್ಮೊಯಿಲ್ ಇನ್ ದಿ ಮಾರ್ಕೆಟ್ಸ್‌ದಿ ಇಕನಾಮಿಸ್ಟ್ 2007 ಜುಲೈ 27
- ↑ ಪ್ರೈವೇಟ್ ಇಕ್ವಿಟಿ ಇಂಟರ್ನ್ಯಾಷನಲ್‌ಯಿಂದ ಟಾಪ್ 300 PE ಫಂಡ್ಸ್
- ↑ "Private Equity 2008.pdf" (PDF). Archived from the original (PDF) on 2011-01-12. Retrieved 2009-12-29.
- ↑ ಖಾಸಗಿ ಷೇರುಗಳ ವರದಿ, 2009 Archived 2020-03-14 ವೇಬ್ಯಾಕ್ ಮೆಷಿನ್ ನಲ್ಲಿ. (PDF). IFSL.
- ↑ ಖಾಸಗಿ ಷೇರುಗಳು ವರದಿ, 2008 Archived 2011-01-12 ವೇಬ್ಯಾಕ್ ಮೆಷಿನ್ ನಲ್ಲಿ. (PDF). IFSL.
- ↑ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, FOIAವು ರಾಜ್ಯ ಮಟ್ಟದಲ್ಲಿ ಶಾಸಕಾಂಗವನ್ನು ಹೊಂದಿರುತ್ತದೆ, ಹಾಗಾಗಿ ಖಾಸಗಿ ಷೇರುಗಳ ಕಾರ್ಯನಿರ್ವಹಣೆಯ ದತ್ತಾಂಶವನ್ನು ವಿವರವಾಗಿ ಬಹಿರಂಗಪಡಿಸುವುದು. ಖಾಸಗಿ ಷೇರುಗಳ ಮಾಹಿತಿಯನ್ನು ಬಹಿರಂಗಪಡಿಸುವ ಕಾರ್ಯವನ್ನು ನಿರ್ವಹಿಸುವ ಸಂಸ್ಥೆಗಳಿಗೆ ಉದಾಹರಣೆಯೆಂದರೆ CalPERS, CalSTRS and ಪೆನ್ನಸಿಲ್ವಾನಿಯಾ ಸ್ಟೇಟ್ ಎಂಪ್ಲೋಯಿಸ್ ರಿಟೈರ್‌ಮೆಂಟ್ ಸಿಸ್ಟಮ್ ಮತ್ತು ಒಹಿಯೊ ಬ್ಯುರೊ ಆಫ್ ವರ್ಕರ್ಸ್ ಕಾಂಪೆಂಸೇಶನ್
- ↑ "ಗೈಡ್‌ಲೈನ್ಸ್ ಫಾರ್ ಡಿಸ್‌ಕ್ಲೋಸರ್ ಆಂಡ್ ಟ್ರಾನ್‌ಸ್ಪರೆನ್ಸಿ ಇನ್ ಪ್ರೈವೇಟ್ ಇಕ್ವಿಟಿ" (PDF). Archived from the original (PDF) on 2008-07-04. Retrieved 2009-12-29.
- ↑ ಲಾಭದಾಯಕತೆ ಸೂಚಿಕೆಯ ಪರಿವೀಕ್ಷಣೆಗೆ ಫಲಿಪೌ ಮತ್ತು ಗೋಟ್ಟ್‌ಚಾಲ್ಗ್‌ಸ್‌ರ 2007 ಪತ್ರಿಕೆ, ಖಾಸಗಿ ಷೇರುಗಳ ನಿಧಿಗಳ ಕಾರ್ಯನಿರ್ವಹಣೆ ನೋಡಿ
ಉಲ್ಲೇಖಗಳು
ಬದಲಾಯಿಸಿ- Cendrowski, Harry; Martin, James P.; Petro, Louis W. (2008). Private Equity: History, Governance, and Operations. Hoboken: John Wiley & Sons. ISBN 0-470-17846-9.
- Maxwell, Ray (2007). Private Equity Funds: A Practical Guide for Investors. New York: John Wiley & Sons. ISBN 0-470-02818-6.
{{cite book}}
: Check|isbn=
value: checksum (help) - Leleux, Benoit (2006). Growth at All Costs: Private Equity as Capitalism on Steroids. Basingstoke: Palgrave Macmillan. ISBN 1-403-98634-7.
{{cite book}}
: Unknown parameter|coauthors=
ignored (|author=
suggested) (help) - Fraser-Sampson, Guy (2007). Private Equity as an Asset Class. Hoboken, NJ: John Wiley & Sons. ISBN 0-470-06645-8.
- Bassi, Iggy (2006). Structuring European Private Equity. London: Euromoney Books. ISBN 1-843-74262-4.
{{cite book}}
: Unknown parameter|coauthors=
ignored (|author=
suggested) (help) - Thorsten, Gröne (2005). Private Equity in Germany — Evaluation of the Value Creation Potential for German Mid-Cap Companies. Stuttgart: Ibidem-Verl. ISBN 3-898-21620-9.
- Rosenbaum, Joshua (2009). Investment Banking: Valuation, Leveraged Buyouts, and Mergers & Acquisitions. Hoboken, NJ: John Wiley & Sons. ISBN 0-470-44220-4.
{{cite book}}
: Unknown parameter|coauthors=
ignored (|author=
suggested) (help) - Lerner, Joshua (2000). Venture Capital and Private Equity: A Casebook. New York: John Wiley & Sons. ISBN 0-471-32286-5.
- Grabenwarter, Ulrich; Tom Weidig (2005). Exposed to the J Curve: Understanding and Managing Private Equity Fund Investments. London: Euromoney Institutional Investor. ISBN 1-84374-149-0.
{{cite book}}
: CS1 maint: multiple names: authors list (link)