ಕ್ಷುದ್ರ ಅಗ್ನಿಮಂಥ
ಕ್ಷುದ್ರ ಅಗ್ನಿಮಂಥ | |
---|---|
Scientific classification | |
ಸಾಮ್ರಾಜ್ಯ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. phlomidis
|
Binomial name | |
Clerodendrum phlomidis |
ಕ್ಷುದ್ರ ಅಗ್ನಿಮಂಥ ಎನ್ನುವುದು ಲಾಮಿಯೇಸಿಯೆ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಜಾತಿಯಾಗಿದೆ. ಕ್ಲೆರೊಡೆಂಡ್ರಮ್ ಫ್ಲೋಮಿಡಿಸ್(Clerodendrum phlomidis) ಎನ್ನುವುದು ಇದರ ವೈಜ್ಞಾನಿಕ ಹೆಸರು. ಸಸ್ಯವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ಭಾರತ ಮತ್ತು ಶ್ರೀಲಂಕಾದಲ್ಲಿ ಬೆಳೆಯುವ ಸಾಮಾನ್ಯವಾದ ದೊಡ್ಡ ಪೊದೆಸಸ್ಯವಾಗಿದೆ.
ಸಾಮಾನ್ಯ ಹೆಸರು
ಬದಲಾಯಿಸಿ- ಸಂಸ್ಕೃತ ಹೆಸರು: ಅಗ್ನಿಮಂತ
- ಹಿಂದಿ ಹೆಸರು: ಉರ್ನಿ, ಅರ್ನಾ, ಅರ್ನಿ[೧]
ವಿವರಣೆ
ಬದಲಾಯಿಸಿಈ ಮೂಲಿಕೆ ಲ್ಯಾಮಿಯೇಸಿಯೆ ಕುಟುಂಬಕ್ಕೆ ಸೇರಿದೆ. ಎಲೆಗಳು ಅಂಡಾಕಾರವಾಗಿರುತ್ತದೆ. ಹೂಗಳು ಸಣ್ಣದಾಗಿ ದುಂಡಗಿರುತ್ತವೆ. ಹೂವುಗಳು ಆಗಸ್ಟ್ ನಿಂದ ಫೆಬ್ರವರಿಯ ಸಮಯದಲ್ಲಿ ಅರಳುತ್ತವೆ. ಹೂವುಗಳು ಬಿಳಿ ಅಥವಾ ಗುಲಾಬಿ ಬಣ್ಣದ್ದಾಗಿರುತ್ತವೆ ಮತ್ತು ಅವು ಬಹಳ ಪರಿಮಳಯುಕ್ತವಾಗಿವೆ.[೨]
ಉಪಯೋಗ
ಬದಲಾಯಿಸಿ- ದಶಮೂಲ ಔಷಧಗಳಲ್ಲಿ ಇದನ್ನು ಬಳಸುತ್ತಾರೆ.
- ಎಲೆಗಳನ್ನು ಪುಡಿಮಾಡಿ ಬಾಹ್ಯ ಊತದ ಚಿಕಿತ್ಸೆಗೆ ಬಳಸುತ್ತಾರೆ.
- ಬೇರಿನ ಕಷಾಯವನ್ನು ಅಗ್ನಿಮಾಂದ್ಯ,ಅಜೀರ್ಣ ಮತ್ತು ವಾತವಿಕಾರಗಳಲ್ಲಿ ಬಳಸುತ್ತಾರೆ.
ಉಲ್ಲೇಖ
ಬದಲಾಯಿಸಿ- ↑ http://www.efloraofgandhinagar.in/
- ↑ http://www.flowersofindia.net/catalog/slides/Arni.html
- ↑ http://www.planetayurveda.com/library/agnimantha-clerodendrum-phlomidis
- ↑ https://web.b.ebscohost.com/abstract?direct=true&profile=ehost&scope=site&authtype=crawler&jrnl=09736808&AN=89252750&h=%2fP7%2fDHadSFuuXyEwCSCj3cZVjf0JqdqTmg%2bmmp98eo9fnfYdOlI9oVx6YvAkI%2b8KEzxPRE4ej0m1ZmpyRuJK9Q%3d%3d&crl=f&resultNs=AdminWebAuth&resultLocal=ErrCrlNotAuth&crlhashurl=login.aspx%3fdirect%3dtrue%26profile%3dehost%26scope%3dsite%26authtype%3dcrawler%26jrnl%3d09736808%26AN%3d89252750