ಕ್ಯೂರಿಯಾಸಿಟಿ (ರೋವರ್)

ಕ್ಯೂರಿಯಾಸಿಟಿಯು ಕಾರ್ ಗಾತ್ರದ ಮಂಗಳ ರೋವರ್ ಆಗಿದ್ದು, ನಾಸಾದ ಮಂಗಳ ಸೈನ್ಸ್ ಲ್ಯಾಬೊರೇಟರಿ ಮಿಷನ್‌ನಭಾಗವಾಗಿ ಮಂಗಳದ ಮೇಲೆ ಗೇಲ್ ಕುಳಿಯನ್ನು ಅನ್ವೇಷಿಸಲು ವಿನ್ಯಾಸಗೊಳಿಸಲಾಗಿದೆ ಕ್ಯೂರಿಯಾಸಿಟಿಯನ್ನು ನವೆಂಬರ್ 26, 2011 ರಂದು 15:02:00 ಯುಟಿಸಿ ಕ್ಕೆ ಕೇಪ್ ಕೆನವೆರಲ್ನಿಂದ ಉಡಾವಣೆ ಮಾಡಲಾಯಿತು ಮತ್ತು ಆಗಸ್ಟ್ 6, 2012 ರಂದು 05:17:57 ಯುಟಿಸಿ ರಂದು ಮಂಗಳ ಗ್ರಹದ ಗೇಲ್ ಕ್ರೇಟರ್‌ನೊಳಗಿನ ಅಯೋಲಿಸ್ ಪಾಲಸ್‌ನಲ್ಲಿ ಇಳಿಯಿತು.

ರೋವರ್ ಉಡಾವಣೆ

ಬದಲಾಯಿಸಿ
ಕ್ಯೂರಿಯಸಿಟಿ ರೋವರ್
.
 
ಕ್ಯೂರಿಯಾಸಿಟಿ ಸ್ವಯಂ ಫೋಟೊ
  • ಉಪಗ್ರಹ :ಮಾರ್ಸ್ ಕ್ಯೂರಿಯಸಿಟಿ ರೋವರ್
  • ಉಪಗ್ರಹದ ಇಂಧನ: ಪರಮಾಣು
  • ಕಳುಹಿಸಿದ ದೇಶ : ಅಮೇರಿಕ
  • ಸಂಸ್ಥೆಯ ಹೆಸರು : ನಾಸಾ
  • ಉಡಾವಣೆ ದಿನ : 26-11-2011
  • ತಲುಪುವ ಗ್ರಹ : ಮಂಗಳ
  • ತಲುಪಿದ ದಿನ : 6-8-2012
  • ಸಮಯ : 11.00
  • ಕ್ರಮಿಸಿದ ದೂರ : 3500 ಲಕ್ಷ ಮೈಲಿ
  • ವೆಚ್ಚ : 2.5 ಬಿಲಿಯನ್ ಡಾಲರ್

.

  • ನಾಸಾ ಕ್ಯೂರಿಯಸಿಟಿ ರೋವರ್‍ನ್ನು ಹೊತ್ತ ನೌಕೆಯನ್ನು 8 ತಿಂಗಳ ಹಿಂದೆಯೇ ಉಡಾವಣೆ ಮಾಡಲಾಗಿತ್ತು. ಈ ನೌಕೆ ಬರೋಬ್ಬರಿ 3,500 ಲಕ್ಷ ಮೈಲಿ ದೂರ ಕ್ರಮಿಸಿ 6-8-2016 ದಂದು (ಸೋಮವಾರ) ಮುಂಜಾನೆ ಮಂಗಳನ ಮೇಲೆ ಯಶಸ್ವಿಯಾಗಿ ಇಳಿಯಿತು. ಈ ಮೂಲಕ ಕೆಂಪು ಕಾಯದ (ಮಂಗಳ) ಬಗೆಗಿರುವ ಕುತೂಹಲಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ `ನಾಸಾ’ (NASA ) ವಿಜ್ಞಾನಿಗಳು ಮಹತ್ವದ ಮುನ್ನಡೆ ಸಾಧಿಸಿದ್ದಾರೆ ಎನ್ನಬಹುದಾಗಿದೆ.
  • ಸೋಮವಾರ ಬೆಳಗ್ಗೆ ಭಾರತೀಯ ಕಾಲಮಾನ 11 ಗಂಟೆಗೆ ಸರಿಯಾಗಿ ‘ಕ್ಯೂರಿಯಾಸಿಟಿ ರೋವರ್’ ಉಪಗ್ರಹ, ಮಂಗಳ ಗ್ರಹದಲ್ಲಿ ಪದಾರ್ಪಣೆ ಮಾಡಿತು. ಈ ದೃಶ್ಯಗಳನ್ನು ನಾಸಾ ಸಹಕಾರದೊಂದಿಗೆ ಡಿಸ್ಕವರಿ ವೆಬ್‌ಸೈಟ್ ನೇರ ಪ್ರಸಾರ ಮಾಡಿತ್ತು. ಜಗತ್ತಿನಾದ್ಯಂತ ಎರಡು ಲಕ್ಷಕ್ಕೂ ಅಧಿಕ ಕಂಪ್ಯೂಟರುಗಳಲ್ಲಿ ಆಸಕ್ತರು ಇದನ್ನು ವೀಕ್ಷಿಸಿದರು. ವಿಶ್ವದ ಹಲವು ಪ್ರಮುಖ ನಗರಗಳಲ್ಲಿ ದೊಡ್ಡ ಪರದೆಗಳಲ್ಲಿ ನೇರ ಪ್ರಸಾರವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು.
  • ಮಾನವನ ಪಾಲಿಗೆ ಭೂಮಿಯನ್ನು ಹೊರತುಪಡಿಸಿ ಗ್ರಹಗಳು ಸೇರಿದಂತೆ ಇತರೆಲ್ಲ ಆಕಾಶ ಕಾಯಗಳು ಇಂದಿಗೂ ನಿಗೂಢ. ಯಾವುದನ್ನೂ ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಆದರೂ ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ಮುಂದುವರಿಯುತ್ತಿವೆ. ಅದೇ ಸಾಲಿನಲ್ಲಿ ನಾಸಾ ಈಗ ಐತಿಹಾಸಿಕ ಯಶಸ್ಸನ್ನು ಈ ದಿನ 6-8-2016 ರಂದು ದಾಖಲಿಸಿದೆ.
  • ಕ್ಯೂರಿಯಾಸಿಟಿ ನಾಸಾದ ಮಾರ್ಸ್ ಸೈನ್ಸ್ ಲ್ಯಾಬೊರೇಟರಿ ಮಿಷನ್ (ಒSಐ) ಭಾಗವಾಗಿ ಮಾರ್ಸ್ ಗೇಲ್ ಕ್ರೇಟರ್ ಅನ್ವೇಷಿಸುವ ಒಂದು ಕಾರು ಗಾತ್ರದ ರೋಬಾಟ್ ರೋವರ್ ಆಗಿದೆ. ಅಕ್ಟೋಬರ್ 6, 2016 ರಕ್ಕೆ , ಕ್ಯೂರಿಯಾಸಿಟಿ ಆಗಸ್ಟ್ 6, 2012 ರಂದು ಇಳಿದ ದಿನದಿಂದ 1481 sಸೋಲ್ಗಳ (ಅಂದರೆ 1522 ಒಟ್ಟು ದಿನಗಳು)ಕಾಲ ಮಂಗಳದಲ್ಲಿದೆ. (ವಿವರ ಚಿತ್ರ:[[೨]])
  • ಕ್ಯೂರಿಯಾಸಿಟಿಯನ್ನು ನವೆಂಬರ್ 26, 2011 ರಂದು, 15:02 ಯುಟಿಸಿ (ಗ್ರೀ.ಮೀ.ಟೈ.) ಸಮುಯಕ್ಕೆ ಎಂಎಸ್’ಎಲ್’ ಗಗನನೌಕೆಯಲ್ಲಿ, ಕನವರೆಲ್ ಉಡಾವಣೆ ಕೇಂದ್ರದಿಂದ ಉಡಾಯಿಸಲಾಗಿತ್ತು ಮತ್ತು ಆಗಸ್ಟ್ 6, 2012, ಯುಟಿಸಿ (ಗ್ರೀ.ಮೀ.ಟೈ.) ಕ್ಕೆ ಮಂಗಳದ ಮೇಲೆ ಗೇಲ್ ಕ್ರೇಟರ್ ರಲ್ಲಿ ಆಯಿಲೊಸ್ ಪಾಲಸ್ ನಲ್ಲಿ ಇಳಿಯಿತು.. [1] [12] ಬ್ರಾಡ್ಬರಿ (ಲ್ಯಾಂಡಿಂಗ್ ಸೈಟ್) ಇಳಿದ ಜಾಗ ನಿಲುಗಡೆ ಗುರಿಯ ಕೇಂದ್ರಕ್ಕಿಂತ 2.4 ಕಿ.ಮಿ (1.5 ಮೈಲಿ) ಕಡಿಮೆ ಇತ್ತು. ಇದು ರೋವರ್ ನ 563.000.000 ಕಿ.ಮಿ (350,000,000 ಮೈಲಿ) ಪ್ರಯಾಣದ ನಂತರ ಆದ ವ್ಯತ್ಯಾಸ ಆಗಿತ್ತು.
  • ರೋವರ್ ಮಂಗಳದ ಹವಾಮಾನ ಮತ್ತು ಭೂವಿಜ್ಞಾನ ತನಿಖೆಯ ಗುರಿಗಳನ್ನು ಸೇರಿವೆ:; ಗೇಲ್ ಕ್ರೇಟರ್ ಒಳಗೆ ಆಯ್ಕೆ ಕ್ಷೇತ್ರದಲ್ಲಿ ಇದುವರೆಗೆ ನೀರಿನ ಪಾತ್ರ ತನಿಖೆ ಸೇರಿದಂತೆ ಸೂಕ್ಷ್ಮಜೀವಿಯ ಬದುಕಲು ಅನುಕೂಲಕರವಾಗಿರುವ ವಾತಾವರಣ ನೀಡಿತ್ತೇ ಎಂಬುದರ ಮೌಲ್ಯಮಾಪನ; ಮತ್ತು ಭವಿಷ್ಯದ ಮಾನವ ಪರಿಶೋಧನೆ ತಯಾರಿಯಲ್ಲಿ ಗ್ರಹದ ವಾಸಯೋಗ್ಯವಾಗಿರುವ ಸಾಧ್ಯತೆಯ ಅಧ್ಯಯನಗಳು.
  • ಕ್ಯೂರಿಯಾಸಿಟಿಯ ವಿನ್ಯಾಸ ಯೋಜನೆ ಮಂಗಳ 2020ರ ರೋವರ್ ಯಾನಕ್ಕೆ ಆಧಾರವನ್ನು ಪೂರೈಸುತ್ತದೆ. ಡಿಸೆಂಬರ್ 2012 ರಲ್ಲಿ, ಕ್ಯೂರಿಯಾಸಿಟಿಯ ಎರಡು ವರ್ಷದ ಮಿಷನ್ /ಕಾರ್ಯ ಕ್ರಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸಲಾಯಿತು.[][][]

ಕ್ಯೂರಿಯಾಸಿಟಿಯ ವಿನ್ಯಾಸ ಯೋಜನೆ

ಬದಲಾಯಿಸಿ
  • ಕ್ಯೂರಿಯಾಸಿಟಿಯ ವಿನ್ಯಾಸ ಯೋಜನೆ ಮಂಗಳ 2020ರ ರೋವರ್ ಯಾನಕ್ಕೆ ಆಧಾರವನ್ನು ಪೂರೈಸುತ್ತದೆ. ಡಿಸೆಂಬರ್ 2012 ರಲ್ಲಿ, ಕ್ಯೂರಿಯಾಸಿಟಿಯ ಎರಡು ವರ್ಷದ ಮಿಷನ್ /ಕಾರ್ಯ ಕ್ರಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸಲಾಯಿತು.
  • ವಿಶೇಷಣಗಳು
  • ಕ್ಯೂರಿಯಾಸಿಟಿ ರೋವರ್ ಸುರಕ್ಷಿತವಾಗಿ ಬಾಹ್ಯಾಕಾಶ ಕ್ರಮಿಸಿ ಮಂಗಳನ ಮೇಲ್ಮೈ ಮೇಲೆ ಮೃದುವಾದ ಇಳಿತಕ್ಕೆ (ಲ್ಯಾಂಡಿಂಗ್) ಭೂಮಿಯಿಂದ ತಲುಪಿಸುವ ಏಕೈಕ ಉದ್ದೇಶಿತಕಾರ್ಯ ಹೊಂದಿದ್ದ 3,893 ಕೆಜಿ (8,583 ಪೌಂಡು) ಕ್ಯೂರಿಯಾಸಿಟಿಯು, ಮಂಗಳ ವಿಜ್ಞಾನ ಪ್ರಯೋಗಾಲಯದ ಬಾಹ್ಯಾಕಾಶ-ವಾಹಕದ (ಎಂ.ಎಸ್.ಎಲ್) ದ್ರವ್ಯರಾಶಿಯ ಪ್ರತಿಶತ 23 (ಶೇ) ಇತ್ತು. ಎಂ.ಎಸ್.ಎಲ್ ನ ಉಳಿದ ಭಾರವನ್ನು ಸಮೂಹ ಈ ಕಾರ್ಯ ನಡೆಸುವ ಪ್ರಕ್ರಿಯೆಯಲ್ಲಿ ವಿಸರ್ಲಿಸಸಲಾಗಿದೆ.
  • ಆಯಾಮಗಳು:
  • ಕ್ಯೂರಿಯಾಸಿಟಿ 899 ಕೆಜಿ (1,982 ಪೌಂಡು) 80 ಕೆ.ಜಿ. (180 ಪೌಂಡು) ವೈಜ್ಞಾನಿಕ ಸಲಕರಣೆ ಸಮೂಹ ಸೇರಿದಂತೆ; ರೋವರ್ ಉದ್ದ 2.9 ಮೀ (9.5 ಅಡಿ); 2. 2 ಮೀ (7.2 ಅಡಿ) ಎತ್ತರ. . 2.7 ಮೀ (8.9 ಅಡಿ). ಅಗಲವಿದೆ; [21]

ಶಕ್ತಿ - ಇಂಧನ

ಬದಲಾಯಿಸಿ
 
ಇಂಧನ ವಿಕಿರಣ ಐಸೊಟೊಪ್‍ನ ಜನರೇಟರ್ (Fueling of the MSL MMRTG 001)
  • ವಿಕಿರಣ ಐಸೋಟೋಪ್ ಶಕ್ತಿ ಮೂಲವು ಜನರೇಟರ್ ಗ್ರ್ಯಾಫೈಟ್ ಶೆಲ್ ಒಳಗೆ ಹೋಗುತ್ತದೆ. ಕ್ಯೂರಿಯಾಸಿಟಿಯು ಶಕ್ತಿಯನ್ನು ಒಂದು ವಿಕಿರಣ ಐಸೋಟೋಪ್ ಥರ್ಮೋಎಲೆಕ್ಟ್ರಿಕ್ಜ ನರೇಟರ್ ನಿಂದ ಪಡೆಯುವುದು. ಇದು ಹಿಂದಿನ 1976 ರ ಯಶಸ್ವಿ ವೈಕಿಂಗ್ 1 ಮತ್ತು ವೈಕಿಂಗ್ 2 ಮಾರ್ಸ್ ಲ್ಯಾಂಡರ್ಸ್ ಹಾಗೆಯೇ ಪಡೆಯುವುದು.
  • ಕ್ಯೂರಿಯಾಸಿಟಿ ಮಲ್ಟಿ ಮಿಷನ್ ವಿಕಿರಣಶೀಲ ಐಸೋಟೋಪು ಉಷ್ಣವಿದ್ಯುತ್ತಿನ ಉತ್ಪಾದಕ (ಒಒಖಖಿಉ), ಶಕ್ತಿ ಇಲಾಖೆಯು ವಿನ್ಯಾಸಗೊಳಿಸಿದೆ. ಆರ್.ಟಿ.ಜಿ. ತಂತ್ರಜ್ಞಾನ ಆಧರಿಸಿ, ಇದು ಹೆಚ್ಚು ಹೊಂದಿಕೊಳ್ಳುವ ಮತ್ತು ಅಚ್ಚುಕಟ್ಟಾದ ಅಭಿವೃದ್ಧಿ ಹೊಂದಿದ ತಾಂತ್ರಕ ವಸ್ತು. ಈ ಮಿಷನ್ ಆರಂಭದಲ್ಲಿ ಉಷ್ಣ ವಿದ್ಯುತ್ ಸುಮಾರು 2,000 ವ್ಯಾಟ್ ನಿಂದ 125 ವ್ಯಾಟ್ ವಿದ್ಯುತ್ ಶಕ್ತಿಯನ್ನು ತಯಾರಿಸುತ್ತದೆ. ಅದರ ಪ್ಲುಟೋನಿಯಂ ಇಂಧನ ಕೊಳೆಯುತ್ತಿದ್ದಂತೆ ಎಮ್.ಎಮ್.ಆರ್.ಟಿ.ಜಿ ಕಾಲಾನಂತರದಲ್ಲಿ ಕಡಿಮೆ ವಿದ್ಯುತ್ ಉತ್ಪಾದಿಸುತ್ತದೆ. ಏಕೆಂದರೆ 14 ವರ್ಷಗಳು ಅದರ ಕನಿಷ್ಠ ಜೀವಮಾನ, ವಿದ್ಯುತ್ ವಿದ್ಯುತ್ ಉತ್ಪಾದನೆ 100 ವ್ಯಾಟ್ ಗೂ ಕಡಿಮೆ ಮಾಡುವುದು. ವಿದ್ಯುತ್ ಮೂಲ 9 ಎಮ್ಜೆ (2.5 ಕಿಲೋವ್ಯಾಟ್ ಗಂಟೆಗಳ) ಪ್ರತಿ ದಿನ, ಉತ್ಪಾದಿಸುತ್ತದೆ. ಇದು ಪ್ರತಿ ದಿನ ಮಾರ್ಸ್ ಪರ್ಯಟಕಗಳ ಸೌರ ಫಲಕಗಳು, ತಯಾರಿಸುತ್ತಿದ್ದುದಕ್ಕಿಂತ ಸುಮಾರು 2.1 ಎಮ್ಜೆ ಯಷ್ಟು (0.58 kWh ಗೆ) ಹೆಚ್ಚು ಉತ್ಪಾದಿಸುತ್ತದೆ. ಎಲೆಕ್ಟ್ರಿಕಲ್ ಔಟ್ಪುಟ್ ಎರಡು ರೀಚಾರ್ಜ್ ಲಿಥಿಯಂ ಅಯಾನ್ ಬ್ಯಾಟರಿಗಳು ಒದಗಿಸುತ್ತವೆ. ಈ ಬೇಡಿಕೆ ತಾತ್ಕಾಲಿಕವಾಗಿ ಜನರೇಟರ್ ನ ಸ್ಥಿರ ಔಟ್ಪುಟ್ ಮಟ್ಟ ಮೀರಿದಾಗ ರೋವರ್ ಚಟುವಟಿಕೆಗಳನ್ನು ಗರಿಷ್ಠ ಶಕ್ತಿಯ ಬೇಡಿಕೆಗಳನ್ನು ಪೂರೈಸಲು ವಿದ್ಯುತ್ ಉಪವ್ಯವಸ್ಥೆಯನ್ನು ಶಕ್ತಗೊಳಿಸುತ್ತದೆ. ಪ್ರತಿ ಬ್ಯಾಟರಿ 42 ಆಂಪಿಯರ್-ಗಂಟೆಗಳ ಸಾಮರ್ಥ್ಯ ಹೊಂದಿದೆ.

ಶಾಖ ನಿರಾಕರಣೆ ವ್ಯವಸ್ಥೆ

ಬದಲಾಯಿಸಿ
  • ಲ್ಯಾಂಡಿಂಗ್ ಸೈಟ್ ನಲ್ಲಿ ತಾಪಮಾನ -127 ರಿಂದ 40 ಲಿ ಸಿ (-197 ಗೆ 104 ಲಿ ಈ) ಬದಲಾಗಬಹುದು; ಆದ್ದರಿಂದ, ಉಷ್ಣ ವ್ಯವಸ್ಥೆ ಮಂಗಳದ ವರ್ಷಗಳ ಕಾಲ ರೋವರ್ ಬೆಚ್ಚಗಾಗಲು ಸಹಕರಿಸುತ್ತದೆ. ಉಷ್ಣ ವ್ಯವಸ್ಥೆಯ ಸಮತೋಲನ ಹಲವಾರು ರೀತಿಯಲ್ಲಿ ನೆಡೆಯುತ್ತದೆ. ನಿಷ್ಕ್ರಿಯವಾಗುವಿಕೆ? ಮತ್ತು ವಿದ್ಯುತ್ ಶಾಖೋತ್ಪಾದಕಗಳನ್ನು ಆಯಕಟ್ಟಿನ ಪ್ರಮುಖ ಸ್ಥಾನಗಳಲ್ಲಿ ಇರಿಸುವ ಮೂಲಕ ಆಗುವುದು. ; ಹಾಗು ರೋವರ್ ಶಾಖ ನಿರಾಕರಣೆ ವ್ಯವಸ್ಥೆ ಬಳಸಿಕೊಂಡು. ಈ ಕ್ರಮ ರೋವರ್ ದೇಹದ ಸೂಕ್ಷ್ಮ ಘಟಕಗಳನ್ನು ಸೂಕ್ತ ತಾಪಮಾನದಲ್ಲಿ ಇರಿಸಲಾಗುತ್ತದೆ. ಆದ್ದರಿಂದ 60 ಮೀ (200 ಅಡಿ) ಕೊಳವೆಗಳ ಮೂಲಕ ಪಂಪ್ ದ್ರವ ಬಳಸುತ್ತದೆ. ಯಾವಾಗ ರೋವರ್ ತುಂಬಾ ಬಿಸಿಯಾಗಿ ಮಾರ್ಪಡುವುದೋ ಆಗ ದ್ರವ ಲೂಪ್ ಹೆಚ್ಚುವರಿ ಶಾಖ ತಿರಸ್ಕರಿಸುವ ವ್ವಸ್ಥೆಹೊಂದಿದೆ.
 
ಭೂಮಿಗೂ ಕ್ಯೂರಿಯಾಸಿಟಿಗೂ ಸಂಪರ್ಕ ವ್ಯವಸ್ಥೆ (Curiosity speaks and orbiters listen
  • ಕಂಪ್ಯೂಟರ್: ಎರಡು ಒಂದೇ ಬಗೆಯ ವಾಹಕ ರೋವರ್ ಕಂಪ್ಯೂಟರ್ ಎಂಬ, ರೋವರ್ ಕಂಪ್ಯೂಟರ್ ಎಲಿಮೆಂಟ್ ಸ್ಥಳದಿಂದ ತೀವ್ರ ವಿಕಿರಣ ಸಹಿಸಿಕೊಂಳ್ಳುವಮತಿದೆ. ವಿಕಿರಣ ಅಥವಾ ರೇಡಿಯೇಶನ್ ವಿರುದ್ಧ ರಕ್ಷಿಸಲು ಗಟ್ಟಿಯಾದ ಮೆಮೊರಿ ಹೊಂದಿರುತ್ತವೆ. ಪ್ರತಿ ಕಂಪ್ಯೂಟರ್ 256 ಕೆಬಿ ಮೆಮೊರಿ ಹೊಂದಿದೆ. ಮತ್ತು 2 ಜಿಬಿ ಫ್ಲಾಶ್ ಮೆಮೊರಿ ಹೊಂದಿದೆ.
  • ಸಂಪರ್ಕ:. ಕ್ಯೂರಿಯಾಸಿಟಿ ಅನೇಕ ಸಾಧನಗಳ ಮೂಲಕ ಗಮನಾರ್ಹ ದೂರಸಂಪರ್ಕ ಪುನರುಕ್ತಿಯ ವ್ಯವಸ್ಥೆ ಅಳವಡಿಸಿರಲಾಗಿದೆ. ಒಂದು ಎಕ್ಷ್ ಬ್ಯಾಂಡ್ ಟ್ರಾನ್ಸ್ಮಿಟರ್ ಮತ್ತು ರಿಸೀವರ್ ಭೂಮಿಗೆ ನೇರವಾಗಿ ಸಂವಹನ ಮಾಡಬಹುದು ಮತ್ತು ಮಂಗಳ ಕಕ್ಷಾಗಾಮಿಗಳು ಸಂವಹಿಸಲು ಹೊಸ ಯು.ಎಚ್.ಎಫ್. ಎಲೆಕ್ಟ್ರಾ ಲೈಟ್ ಸಾಫ್ಟ್ವೇರ್ ನಿರ್ಧಾರಿತ ರೇಡಿಯೋ ಇವೆ. ಕ್ಯೂರಿಯಾಸಿಟಿ ಭೂಮಿಗೆ ನೇರವಾಗಿ 32 ಕೆಬಿಟ್/ಸೆ.ನs ವೇಗದಲ್ಲಿ ಸಂವಹನ ಮಾಡಬಹುದು. ಆದರೆ ಡೇಟಾ ವರ್ಗಾವಣೆ ಬೃಹತ್ ಮಂಗಳ ಬೇಹುಗಾರಿಕಾ ಪರಿಭ್ರಮಕವನ್ನು ಮತ್ತು ಒಡಿಸ್ಸಿ ಪರಿಭ್ರಮಕದ ಮೂಲಕವೇ ಪ್ರಸಾರ ಮಾಡಬೇಕು.

[][][http://[]

  • ಮಂಗಳನ ಅಂಗಳದಲ್ಲಿ ಪಿರಮಿಡ್ ಆಕಾರದ ರಚನೆಗಳು ಪತ್ತೆಯಾಗಿವೆ. ಅಮೆರಿಕದ ಬಾಹ್ಯಾಕಾಶ ಕೇಂದ್ರ ನಾಸಾ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ನೌಕೆಯು ಕೆಂಪು ಗ್ರಹದದಲ್ಲಿ ಪಿರಮಿಡ್‌ನಂತಹ ರಚನೆ ಪತ್ತೆಮಾಡಿದ್ದು ಫೋಟೋ ರವಾನಿಸಿದೆ. ಮಂಗಳನಲ್ಲಿ ಹಿಂದೆ ಜೀವಿಗಳು ಇದ್ದರಿಬಹದು ಎಂಬ ವಾದಕ್ಕೆ ಮತ್ತಷ್ಟು ಇದು ಮತ್ತಷ್ಟು ಪುಷ್ಟಿ ನೀಡಿದೆ. ಮೇ 7ರಂದೇ ತೆಗೆದಿರುವ ಚಿತ್ರವನ್ನು ಇದೀಗ ಬಹಿರಂಗ ಮಾಡಲಾಗಿದೆ
  • ಕ್ಯೂರಿಯಾಸಿಟಿ ರೋವರ್‌ನಲ್ಲಿರುವ ಮಾಸ್ಟರ್ ಕ್ಯಾಮೆರಾ ಪಿರಮಿಡ್‌ನ ಚಿತ್ರವನ್ನು ಸ್ಪಷ್ಟವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಪಿರಮಿಡ್ ಮನುಷ್ಯ ನಿರ್ಮಿತ ಹೌದೋ ಅಲ್ಲವೋ ಎಂಬುದನ್ನು ಕಂಡುಹಿಡಿಯುವುದು ವಿಜ್ಞಾನಿಗಳ ಮುಂದಿನ ಸವಾಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಇದುವರೆಗೂ ಮಂಗಳನ ಅಂಗಳದಲ್ಲಿ ಸೆರೆಹಿಡಿದುರುವ ರಚನೆಗಳಲ್ಲಿ ಪಿರಮಿಡ್ ಮಹತ್ವದ್ದು ಎಂದು ನಾಸಾ ತಿಳಿಸಿದೆ. ಇದಲ್ಲೂ ಮೊದಲು ಮಂಗಳನ ಮಣ್ಣಿನಲ್ಲಿ ಮಂಜುಗಡ್ಡೆ ಮತ್ತು ನೀರಿನ ಅಂಶ ಇದೆ ಎಂದು ಹೇಳಲಾಗಿತ್ತು. ಮಂಗಳ ಗ್ರಹದ ವಾತಾವರಣ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಅಮೆರಿಕದ ಕ್ಯೂರಿಯಾಸಿಟಿ ರೋವರ್ ಮತ್ತು ಭಾರತದ ಮಂಗಳಯಾನ ನಿರಂತರ ಸಂಶೋಧನೆಯಲ್ಲಿ ತೊಡಗಿವೆ. ಮಂಗಳ ಗ್ರಹದ ಮೇಲೆ ಆಗುತ್ತಿರುವ ಬದಲಾವಣೆಗಳ ಚಿತ್ರವನ್ನು ಆಗಾಗ ರವಾನಿಸುತ್ತಿವೆ.
  • ಮಂಗಳನ ಅಂಗಳದಲ್ಲಿ ಪಿರಮಿಡ್ ಹೇಗಿದೆ ವಿಡಿಯೋ ನೋಡಿ:[[೩]]

ಬೃಹತ್ ಗಾತ್ರದ ಕೆರೆ

ಬದಲಾಯಿಸಿ
  • ಮಂಗಳ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ಎಂಬ ಚರ್ಚೆ ಮತ್ತು ಸಂಶೋಧನೆಗಳು ನಡೆಯುತ್ತಿರುವ ಬೆನ್ನಲ್ಲೇ ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹದಲ್ಲಿ ಹಿಂದೆ ಕೆರೆಯೊಂದಿತ್ತು ಎಂಬುದನ್ನು ಕಂಡುಹಿಡಿದಿದೆ. ಮಂಗಳನ ಅಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹದಲ್ಲಿ ಬೃಹತ್ ಗಾತ್ರದ ಕೆರೆಯೊಂದಿತ್ತು ಎಂಬ ಮಾಹಿತಿಯನ್ನು ದೃಢಪಡಿಸಿದೆ. ಕೆಂಪು ಗ್ರಹ ಒಂದು ಕಾಲದಲ್ಲಿ ಮಾನವ ವಾಸಯೋಗ್ಯವಾಗಿತ್ತು ಎಂದು ಹೇಳಿದೆ. 154 ಕಿ.ಮೀ. ಅಗಲದ ದೊಡ್ಡ ಕುಳಿಯೊಂದು ಕ್ಯೂರಿಯಾಸಿಟಿ ಕಣ್ಣಿಗೆ ಬಿದ್ದಿದೆ. ಕೆರೆ ಎಂದು ಕರೆಯಲಾಗಿರುವ ಕುಳಿಯಲ್ಲಿ ನೀರಿನಂಶವಿರುವ ಕೆಸರು ಪತ್ತೆಯಾಗಿರುವುದು ಸಂಶೋಧನೆಗೆ ಮತ್ತಷ್ಟು ಪುಷ್ಠಿ ನೀಡಿದೆ. 3.5 ಶತಕೋಟಿ ವರ್ಷದಷ್ಟು ಹಳೆಯದಾದ ಕೆರೆ ಇದಾಗಿದೆ ಎಂದು ಹೇಳಲಾಗಿದೆ. 2012 ರ ಆಗಸ್ಟ್ ನಲ್ಲಿ ಮಂಗಳನ ಮೇಲೆ ಇಳಿದಿರುವ ಕ್ಯೂರಿಯಾಸಿಟಿ ಅನೇಕ ಅಂಶಗಳನ್ನು ಕಂಡುಕೊಳ್ಳುತ್ತ ಮುಂದೆ ಸಾಗುತ್ತಿದೆ. ಪರ್ವತವೊಂದಕ್ಕೆ ತಾಗಿಕೊಂಡಂತೆ ಕೆರೆ ನಿರ್ಮಾಣವಾಗಿತ್ತು. ಕೆಸರಿನ ಅಂಶವು ಕಂಡುಬಂದಿರುವುದರಿಂದ ಸಂಶೋಧನೆಗೆ ಮತ್ತಷ್ಟು ಮುನ್ನಡೆ ಸಿಗಲಿದೆ ಎಂದು ನಾಸಾ ತಿಳಿಸಿದೆ.
  • ಮಂಗಳನ ಅಂಗಳದಲ್ಲಿ ಜೀವ ಕಣ ಹಾಗೂ ಇನ್ನಿತರ ಮಾಹಿತಿ ಕಲೆ ಹಾಕಲು ಭಾರತದ ಇಸ್ರೋ ನಿರ್ಮಿತ ಮಾರ್ಸ್ ಆರ್ಬಿಟರ್ ನೌಕೆ (MOM) ಮಂಗಳದ ಕಕ್ಷೆ ಸೇರುತ್ತಿದ್ದಂತೆ ಅಮೆರಿಕದ ಪ್ರತಿಸ್ಪರ್ಧಿ ನಾಸಾದ ಕ್ಯೂರಿಯಾಸಿಟಿ ನೌಕೆಯಿಂದ ಸ್ವಾಗತ ಸಿಕ್ಕಿದೆ. 'ಮಾಮ್' ಯಶಸ್ಸಿಗೆ 'ಕ್ಯೂರಿಯಾಸಿಟಿ' ಶುಭ ಹಾರೈಸಿದೆ. (ಅತಿ ಕಡಿಮೆ ವೆಚ್ಚದಲ್ಲಿ ಅತ್ಯಂತ ತ್ವರಿತವಾಗಿ ಮಂಗಳನ ಕಕ್ಷೆಗೆ ನೌಕೆ ಸೇರಿಸಿದ ಇಸ್ರೋ ವಿಜ್ಞಾನಿಗಳ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. [MOM ನಿರಾಶೆಗೊಳಿಸುವುದಿಲ್ಲ)[]
 
ಮೌಂಟ್ ಶಾರ್ಪ್ ಕ್ಯೂ-ರೋವರ್‍ನಿಂದ ನೋಟ;

ಮಂಗಳನ ಅಂಗಳಕ್ಕೆ

ಬದಲಾಯಿಸಿ
  • ನಾಸಾದ ಮೊಬೈಲ್ ಪ್ರಯೋಗಾಲಯ ಹೊತ್ತ ಶೋಧಕ ಕ್ಯೂರಿಯಾಸಿಟಿ ಯಶಸ್ವಿಯಾಗಿ ಕೆಂಪು ಗ್ರಹ ಮಂಗಳನ ಅಂಗಳಕ್ಕೆ ಇಳಿದಿದೆ. ಭೂಮಿಯಿಂದ ಸುಮಾರು ಎಂಟು ತಿಂಗಳ ಪಯಣವನ್ನು ಮುಗಿಸಿ ಕೆಂಪು ಗ್ರಹದ ಮೇಲೆ ಕ್ಯೂರಿಯಾಸಿಟಿ ಇಳಿಯುತ್ತಿದ್ದಂತೆ ನಾಸಾದ ವಿಜ್ಞಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಪೂರ್ಣ ಪ್ರಮಾಣದ ಸುಸಜ್ಜಿತ ಮೊಬೈಲ್ ಪ್ರಯೋಗಾಲಯ ಹೊತ್ತ 'ಕ್ಯೂರಿಯಾಸಿಟಿ ರೋವರ್' ಮಂಗಳವಾರ (ಆ.6) ಬೆಳಗ್ಗೆ ನಿಗದಿತ ಸಮಯಕ್ಕೆ ಸರಿಯಾಗಿ ಇಳಿದಿದೆ.
  • ಲಾಸ್ ಏಂಜಲೀಸ್ ನಲ್ಲಿರುವ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ ಇಂಜಿನಿಯರ್ ಗಳು ಈ ಶೋಧ ನೌಕೆಯನ್ನು ಇಳಿಸುವ ಕಾರ್ಯದಲ್ಲಿ ತೊಡಗಿದ್ದರು. ಒಂದು ಟನ್ ತೂಕದ, ಆರು ಚಕ್ರಗಳಿರುವ, 17 ಕೆಮೆರಾ ಹೊಂದಿರುವ ಅಣುಶಕ್ತಿ ಚಾಲಿತ ಈ ವಾಹನವನ್ನು ಕರಾರುವಾಕ್ಕಾಗಿ ಇಳಿಸುವ ಪ್ರಕ್ರಿಯೆ ಅಷ್ಟು ಸುಲಭದ ಮಾತಲ್ಲ. ಸುಮಾರು 2.5 ಬಿಲಿಯನ್ ಡಾಲರ್ ಮೌಲ್ಯದ ಈ ಯೋಜನೆ ಹಿಂದೆ ಸುಮಾರು 30 ವರ್ಷದ ಪರಿಶ್ರಮ ಅಡಗಿದೆ. ಮಂಗಳನ ವಾತಾವರಣ ನೌಕೆಯನ್ನು ಇಳಿಸಲು ಸೂಕ್ತವಾಗಿದ್ದು, ಎಲ್ಲ ತಾಂತ್ರಿಕ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Curiosity and surrounding area as viewed by Mars Reconnaissance Orbiter
ಕ್ಯೂರಿಯಾಸಿಟಿ ಮಂಗಳನಲ್ಲಿ ಇಳಿದ ನೆಲ;ಅದರ ಅಕ್ಕಪಕ್ಕದ ಪ್ರದೇಶ, ಕೆಳಗಿನ ಜಾರು-ಪಟ್ಟಿ ಸರಿಸಿ ನೋಡಿ.ಎಡದಲ್ಲಿ ಉತ್ತರ ದಿಕ್ಕು: ಮಂಗಳನ ಅಂಗಳ:ಅದರಲ್ಲಿರುವ ಎಂ.ಆರ್.ಒ ದಿಂದ ತೆಗೆದ ಫೋಟೊ.

ಕ್ಯೂರಿಯಾಸಿಟಿ-ಹೊಸ ತಾಣದತ್ತ

ಬದಲಾಯಿಸಿ
  • 5 Oct, 2016
  • ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ಕಳುಹಿಸಿರುವ ‘ಕ್ಯೂರಿಯಾಸಿಟಿ’ ರೋವರ್‌, ಈಗ ಅಂಗಾರಕನ ಅಂಗಳದಲ್ಲಿ ಹೊಸ ಸ್ಥಳದ ಶೋಧನೆಗೆ ಮುಂದಡಿ ಇಟ್ಟಿದೆ.ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ಕಳುಹಿಸಿರುವ ‘ಕ್ಯೂರಿಯಾಸಿಟಿ’ ರೋವರ್‌, ಈಗ ಅಂಗಾರಕನ ಅಂಗಳದಲ್ಲಿ ಹೊಸ ಸ್ಥಳದ ಶೋಧನೆಗೆ ಮುಂದಡಿ ಇಟ್ಟಿದೆ. ಮಂಗಳ ಗ್ರಹದ ಪ್ರಾಚೀನ ಜಲಭರಿತ ವಾತಾವರಣ ಮತ್ತು ಅಲ್ಲಿ ಇದ್ದಿರಬಹುದಾದ ಜೀವಿಗಳ ಅಸ್ತಿತ್ವದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುವುದಕ್ಕಾಗಿ ಮತ್ತೊಂದು ಎತ್ತರದ ಪ್ರದೇಶದತ್ತ ಅದು ಪ್ರಯಾಣ ಆರಂಭಿಸಿದೆ.
  • ಹೊಸದಾಗಿ ಗುರುತಿಸಲಾಗಿರುವ ಪ್ರದೇಶವು ರೋವರ್‌ ಈಗ ಇರುವ ಸ್ಥಳಕ್ಕಿಂತ ಎರಡೂವರೆ ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ಖನಿಜಾಂಶಗಳಿಂದ ಕೂಡಿದೆ. ದಿಬ್ಬದ ರಚನೆ ಹೊಂದಿರುವ ಈ ಜಾಗದಲ್ಲಿ ಕಬ್ಬಿಣದ ಆಕ್ಸೈಡ್‌, ಹೆಮಟೈಟ್‌ ಅಂಶಗಳು ಹೇರಳವಾಗಿವೆ. ಮಣ್ಣಿನ ಅಂಶ ಹೆಚ್ಚಾಗಿರುವ ಶಿಲಾ ಬಂಡೆಯೂ ಇಲ್ಲಿದೆ. ಮೌಂಟ್‌ ಶಾರ್ಪ್‌ನ (ಕ್ಯೂರಿಯಾಸಿಟಿ ರೋವರ್‌ ಇಳಿದಿರುವ ಗೇಲ್‌ ಕುಳಿಯಲ್ಲಿ ಈ ಶಿಖರ ಇದೆ) ಕೆಳಭಾಗದಲ್ಲಿರುವ ಈ ಪ್ರದೇಶಗಳು ರೋವರ್‌ನ ಪ್ರಮುಖ ಶೋಧ ತಾಣಗಳಾಗಿವೆ. ಪದರ ಪದರವಾಗಿರುವ ದಿಬ್ಬಗಳನ್ನು ಒಳಗೊಂಡಿರುವ ಈ ಸ್ಥಳಗಳಲ್ಲಿನ ಮಾದರಿಗಳನ್ನು ಸಂಗ್ರಹಿಸಿ, ಪ್ರಾಚೀನ ಕಾಲದಲ್ಲಿ ಮಂಗಳಗ್ರಹದಲ್ಲಿ ಇದ್ದಿರಬಹುದಾದ ವಾತಾವರಣದ ಬಗ್ಗೆ ಅದು ಅಧ್ಯಯನ ನಡೆಸುತ್ತಿದೆ. 2012ರ ಆಗಸ್ಟ್‌ನಲ್ಲಿ ಮಂಗಳ ಗ್ರಹದಲ್ಲಿ ಇಳಿದಿರುವ ‘ಕ್ಯೂರಿಯಾಸಿಟಿ’, ಇದುವರೆಗೆ 1.80 ಲಕ್ಷ ಚಿತ್ರಗಳನ್ನು ಭೂಮಿಗೆ ರವಾನಿಸಿದೆ.[]

ಶಿಯಾಪರೆಲ್ಲಿ-ಮಂಗಳ ಅಧ್ಯಯನಕ್ಕೆ ಹಿನ್ನಡೆ

ಬದಲಾಯಿಸಿ
  • ಕೆಂಪು ಗ್ರಹದಲ್ಲಿ ಜೀವಿಗಳಿವೆಯೇ ಅಥವಾ ಅದು ಜೀವ ಪೋಷಕವಾಗಿತ್ತೇ ಎಂಬುದನ್ನು ಪತ್ತೆ ಹಚ್ಚಲು ರೋವರ್‌ ಅನ್ನು ಕಳುಹಿಸುವುದಕ್ಕೂ ಮುನ್ನ ಇಎಸ್‌ಎ ಪ್ರಯೋಗಾರ್ಥವಾಗಿ ಕಳುಹಿಸಿದ್ದ ಪುಟ್ಟ ನೌಕೆ ‘ಶಿಯಾಪರೆಲ್ಲಿ’, ಮಂಗಳನ ಮೇಲೆ ಯಶಸ್ವಿಯಾಗಿ ಇಳಿದಿರುವುದರ ಬಗ್ಗೆ ಶಂಕೆ ಮೂಡಿದೆ. ನೌಕೆಗೆ ಏನಾಗಿರಬಹುದು ಎಂಬುದರ ಬಗ್ಗೆ ಸ್ವತಃ ಇಎಸ್‌ಎ ವಿಜ್ಞಾನಿಗಳಿಗೆ ಮಾಹಿತಿ ಇಲ್ಲ. ನೌಕೆಯು ಇದುವರೆಗೆ ಯಾವುದೇ ಸಂಕೇತವನ್ನು ಭೂಮಿಗೆ ರವಾನಿಸಿಲ್ಲ. ಮಂಗಳ ಗ್ರಹದಲ್ಲಿ ಇಳಿಸುವ ಉದ್ದೇಶಕ್ಕಾಗಿ ನಿರ್ಮಿಸಿದ್ದ ‘ಶಿಯಾಪರೆಲ್ಲಿ’ ನೌಕೆ ಏಳು ತಿಂಗಳ ಪ್ರಯಾಣದ ನಂತರ ಬುಧವಾರ (ಅ.19) ಮಂಗಳನ ವಾತಾವರಣವನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು. ಆದರೆ, ಅದು ಮಂಗಳನ ಮೇಲ್ಮೈಯನ್ನು ಸ್ಪರ್ಶಿಸುವುದಕ್ಕೂ ಮುನ್ನ ಭೂಮಿಯ ಸಂಪರ್ಕವನ್ನು ಕಳೆದುಕೊಂಡಿತ್ತು. ನೌಕೆ ಮಂಗಳ ಗ್ರಹದಲ್ಲಿ ಇಳಿದಿರುವುದು ದೃಢ. ಆದರೆ, ಅದು ಯಾವ ಸ್ಥಿತಿಯಲ್ಲಿದೆ ಎಂಬ ಮಾಹಿತಿ ಇಲ್ಲ ಎಂದು ಯುರೋಪ್‌ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ಸೌರ ಮತ್ತು ಗ್ರಹೀಯ ಯೋಜನೆಗಳ ಮುಖ್ಯಸ್ಥ ಆ್ಯಂಡ್ರಿಯಾ ಅಕೊಮಜೊ ಹೇಳಿದ್ದಾರೆ.[]

ಹೆಚ್ಚಿನ ಓದು

ಬದಲಾಯಿಸಿ

[[೪]]

  • ಶಿಯಾಪರೆಲ್ಲಿ;ಮಂಗಳ ಅಧ್ಯಯನಕ್ಕೆ ಹಿನ್ನಡೆ:[[೫]]

ಉಲ್ಲೇಖ

ಬದಲಾಯಿಸಿ
  1. [೧]
  2. "Impressive' Curiosity landing only 1.5 miles off, NASA say
  3. "Overview". JPL, NASA.August 16, 2012.
  4. "Mars Science Laboratory: Mission: Rover: Brains"
  5. Bajracharya, Max; Maimone, Mark W.; Helmick, Daniel (December 2008). "Autonomy for Mars rovers: past, present, and future"
  6. [mars.jpl.nasa.gov/msl/mission/technology/technologiesofbroadbenefit/power/ Mars Science Laboratory – Technologies of Broad Benefit: Power".NASA/April 23, 2011.]
  7. ಮಂಗಳನಲ್ಲಿ ಪಿರಮಿಡ್ ಕಂಡ ಕ್ಯೂರಿಯಾಸಿಟಿ-Thursday, June 25, 2015
  8. "ಹೊಸ ತಾಣದತ್ತ 'ಕ್ಯೂರಿಯಾಸಿಟಿ'". Archived from the original on 2016-10-05. Retrieved 2016-10-05.
  9. "ಶಿಯಾಪರೆಲ್ಲಿ-ಮಂಗಳ ಅಧ್ಯಯನಕ್ಕೆ ಹಿನ್ನಡೆ". Archived from the original on 2016-10-21. Retrieved 2016-10-21.