ಕ್ಯಾಸಿನಿ-ಹೈಜಿನ್ಸ್

ಕ್ಯಾಸಿನಿ-ಹೈಜಿನ್ಸ್
ಶನಿ ಕಕ್ಷೆಯೊಳಗೆ ಸೇರಿದ ಈ ಮುಖ್ಯ ಎಂಜಿನ್, ಉರಿದ ನಂತರ ಪರಿಭ್ರಮಣ ಪ್ರಾರಂಭಿಸಿದೆ,ಇಲ್ಲಿಯ ಕ್ಯಾಸಿನಿಯ ಅಳವಡಿಕೆ ಸಂದರ್ಭವು ಕಲಾವಿದರ ಒಂದು ಪರಿಕಲ್ಪನೆಯಾಗಿದೆ. ಬಾಹ್ಯಾಕಾಶ ನೌಕೆ ಸಮತಲದಿಂದ ಹೊರ ಚಲಿಸುವ ಸಮಯದಲ್ಲಿ ಬಲಕ್ಕೆ (ಸ್ಯಾಟರ್ನ್ ಸಂಬಂಧಿಸಿದಂತೆ) ತನ್ನ ಬಾಹ್ಯಾಕಾಶ ವೇಗವನ್ನು ಕಡಿಮೆ ಮಾಡಲು ಉರುವಲು ಉಪಯೋಗಿಸಿದೆ ಮತ್ತು ಉಪನೌಕೆ ಕೇವಲ ಶನಿಯ ಬಳೆ ದಾಟಿದೆ.
 • 1997, ಅಕ್ಟೋಬರ್‌ 15=ಕ್ಯಾಸಿನಿ ಮತ್ತು ಹ್ಯುಜೆನ್ಸ್‌ ನೌಕೆಯ ಉಡಾವಣೆ
 • 2004, ಜುಲೈ 1=ಶನಿಗ್ರಹದ ಕಕ್ಷೆ ಪ್ರವೇಶಿಸಿದ ನೌಕೆ
 • 2004, ಡಿಸೆಂಬರ್‌ 24=ಕ್ಯಾಸಿನಿಯಿಂದ ಬೇರ್ಪಟ್ಟ ಹ್ಯುಜೆನ್ಸ್‌
 • 2005,ಜನವರಿ 14=ಮೂರು ವಾರಗಳ ಪ್ರಯಾಣದ ನಂತರ ಟೈಟಾನ್‌ನಲ್ಲಿ ಯಶಸ್ವಿಯಾಗಿ ಇಳಿದ ಹ್ಯುಜೆನ್ಸ್‌
 • 2008, ಜೂನ್‌ 1=ಶನಿಗ್ರಹದ ಪ್ರಾಥಮಿಕ ಅಧ್ಯಯನ ಮುಕ್ತಾಯಗೊಳಿಸಿದ ಕ್ಯಾಸಿನಿ
 • 2010, ಫೆಬ್ರುವರಿ 3=‘ಕ್ಯಾಸಿನಿ–ಹ್ಯುಜೆನ್ಸ್‌’ ಯೋಜನೆಯನ್ನು 2017ರವರೆಗೆ ವಿಸ್ತರಿಸಿದ ನಾಸಾ
 • 2017 ಸೆಪ್ಟೆಂಬರ್‌=ಅಧ್ಯಯನ ಸ್ಥಗಿತಗೊಳಿಸಲಿರುವ ಕ್ಯಾಸಿನಿಯು ಶನಿಗ್ರಹಕ್ಕೆ ಅಪ್ಪಳಿಸಲಿದೆ. ಶನಿಗ್ರಹದ ಬಗ್ಗೆ ನೌಕೆಯು ಅದುವರೆಗೆ ಕಲೆ ಹಾಕಿರುವ ಮಾಹಿತಿಗಳು, ಸಂಕೇತ ಲಭ್ಯವಿರುವವರೆಗೆ ಅದಕ್ಕೂ ಮುನ್ನ ಭೂಮಿಗೆ ರವಾನೆಯಾಗಲಿವೆ.
ಕ್ಯಾಸಿನಿ-ಹೈಜಿನ್ಸ್-ಚಲನೆಯಲ್ಲಿ
.

ಶನಿ ಗ್ರಹ ಅನ್ವೇಶಣೆಯ ನೌಕೆಸಂಪಾದಿಸಿ

 • ಕ್ಯಾಸಿನಿ-ಹೈಜಿನ್’, ಶನಿ ಗ್ರಹಕ್ಕೆ ಕಳುಹಿಸುತ್ತಿರುವ ಒಂದು ಮಾನವರಹಿತ ಬಾಹ್ಯಾಕಾಶ ನೌಕೆ. ಇದು ಒಂದು ಪ್ರಮುಖ ದರ್ಜೆಯ ನಾಸಾ-ಇಎಸ್ಎ-ಎಎಸ್ಐ ಅಸ್ತರೋಬಾಟ್ (ರೋಬಾಟ್) ಬಾಹ್ಯಾಕಾಶ ನೌಕೆ. ಕ್ಯಾಸಿನಿ ನೌಕೆಯು ಶನಿಗ್ರಹಕ್ಕೆ ಭೇಟಿಕೊಡುತ್ತಿರುವ ನಾಲ್ಕನೇ ತನಿಖೆಯ ನೌಕೆ ಮತ್ತು ಶನಿ ಕಕ್ಷೆಯನ್ನು ಪ್ರವೇಶಿಸಿದ ಮೊದಲ ವಾಹನ, 2004 ರಲ್ಲಿ ತಲುಪಿದ ನಂತರ ಇದು ಗ್ರಹ ಮತ್ತು ಅದರ ಅನೇಕ ನೈಸರ್ಗಿಕ ಉಪಗ್ರಹಗಳ ಅಧ್ಯಯನª ಉದ್ದೇಶವನ್ನು 2016 ರ ವರಗೂ ನಡೆಸುತ್ತಿದೆ [೧]
 • 1980 ರಲ್ಲಿ ಈ ವಾಹನದ ಅಭಿವೃದ್ಧಿಯನ್ನು ಆರಂಭಿಸಿದರು. ಇದರ ವಿನ್ಯಾಸ ಒಂದು ಸ್ಯಾಟರ್ನ್ ಆರ್ಬೈಟರ್ (ಕ್ಯಾಸಿನಿ) ಮತ್ತು ಚಂದ್ರ ಟೈಟಾನ್ ಲ್ಯಾಂಡರ್ (ಹೈಜಿನ್) ಈ ಎರಡನ್ನೂ ಒಳಗೊಂಡಿದೆ. ಈ ಎರಡು ಬಾಹ್ಯಾಕಾಶ ನೌಕೆಗಳಿಗೆ ಖಗೋಳಶಾಸ್ತ್ರಜ್ಞರಾದ ಜಿಯೋವಾನಿ ಕ್ಯಾಸಿನಿ ಮತ್ತು ಕ್ರಿಸ್ಟಿಯಾನ್ ಹ್ಯುಗೆನ್ಸ್ ಹೆಸರನ್ನಿಡಲಾಗಿದೆ. ಈ ನೌಕೆಯನ್ನು ಅಕ್ಟೋಬರ್ 15, 1997 ರಂದು ಉಡಾಯಿಸಲಾಯಿತು. ಟೈಟಾನ್ ಐವಿಬಿ ಸೆಂಟಾರ್ ನೌಕೆಯಲ್ಲಿ ಮತ್ತು ಕಕ್ಷೆಯ ಭೂಮಿಯ, ಶುಕ್ರ ಮತ್ತು ಗುರುಗಳ ಆಖಾಶನೌಕೆಯ ತಂತ್ರ ಒಳಗೊಂಡ ಒಂದು ಅಂತರ್ ಗ್ರಹ ಯಾತ್ರೆ., ಅದು ಸುಮಾರು ಜುಲೈ 1, 2004 ರಂದು ಶನಿ ಗ್ರಹದ ಕಕ್ಷೆಯನ್ನು ಪ್ರವೇಶಿಸಿತು. ಡಿಸೆಂಬರ್ 25, 2004 ರಂದು ಹೈಜಿನ್ ಉಪಗ್ರಹ ಪ್ರತ್ಯೇಕಿಸಿಕೊಂಡು ಶನಿಯ ಚಂದ್ರ ಟೈಟಾನ್ ಮೇಲೆ ಜನವರಿ 14, 2005 ರಂದು ಇಳಿಯಿತು. ಇದು ಯಶಸ್ವಿಯಾಗಿ ದತ್ತಗಙಳನ್ನು (ಡೇಟಾ ರಿಲೇ) ಪರಿಭ್ರಮಕವನ್ನು ಬಳಸಿಕೊಂಡು ಭೂಮಿಗೆ ಕಳಿಸುತ್ತಿದೆ. ಇದುವರೆಗಿನ ಆಕಾಶನವಕೆಗಳಲ್ಲಿ ಹೊರ ಸೌರವ್ಯೂಹದಲ್ಲಿ ಇಳಿದ ಇದು ಈಡೇರಿಸಲ್ಪಟ್ಟ.ಮೊದಲ ನೌಕಾ ಅವತರಣ (ಲ್ಯಾಂಡಿಂಗ್).[೨]

ಅಂತಿಮ ಹಂತದಲ್ಲಿ ಕ್ಯಾಸಿನಿ ನೌಕೆಸಂಪಾದಿಸಿ

 • 20 ಸೆಪ್ಟಂಬರ್ 2016:
 • ಹನ್ನೆರಡು ವರ್ಷಗಳಿಂದ ಶನಿಗ್ರಹ, ಅದರ ಸುತ್ತಲಿನ ಉಂಗುರಗಳು ಮತ್ತು ಉಪಗ್ರಹಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ನಾಸಾ ನಿರ್ಮಿತ ‘ಕ್ಯಾಸಿನಿ’ ನೌಕೆಯು ತನ್ನ ಯಾತ್ರೆಯ ಅಂತಿಮ ಹಂತಕ್ಕೆ ತಲುಪಿದೆ. 2017ರ ಸೆಪ್ಟೆಂಬರ್‌ ತಿಂಗಳಲ್ಲಿ ನೌಕೆಯು ತನ್ನ ಐತಿಹಾಸಿಕ ಯಾತ್ರೆಗೆ ಮಂಗಳಹಾಡುವ ಸಾಧ್ಯತೆ ಇದೆ. ಅದಕ್ಕೂ ಮೊದಲಿನ ಒಂದು ವರ್ಷದ ಅವಧಿಯಲ್ಲಿ ನೌಕೆಯು ಶನಿಗ್ರಹದ ಇನ್ನಷ್ಟು ಸನಿಹಕ್ಕೆ ತೆರಳಿ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲಿದೆ. ಈ ಅವಧಿಯಲ್ಲಿ ಅದು ಮಹತ್ವದ ಎರಡು ಕಾರ್ಯಗಳನ್ನು ನಿಭಾಯಿಸಲಿದೆ.
 • ಉಂಗುರದ ಅಧ್ಯಯನ: ಈ ವರ್ಷದ ನವೆಂಬರ್‌ 30ರಂದು ನೌಕೆಯು ಈಗಿನ ಕಕ್ಷೆಯಿಂದ ಶನಿಗ್ರಹದ ಪ್ರಮುಖ ಉಂಗುರಗಳ ಹೊರಭಾಗದ ಕಕ್ಷೆಗೆ ವರ್ಗಾವಣೆ ಹೊಂದಲಿದೆ. 20 ಸರಣಿಗಳ ಈ ಕಕ್ಷೆಯನ್ನು ಎಫ್‌ –ಉಂಗುರ ಕಕ್ಷೆ ಎಂದು ಕರೆಯಲಾಗಿದೆ.

ಕೊನೆಯ ಹಂತಸಂಪಾದಿಸಿ

 
ಕ್ಯಾಸಿನಿ-ಹೈಜಿನ್ಸ್ಜೋಡನಣೆ (assembly)
 • ಈ ಕಕ್ಷೆಯಲ್ಲಿ ಸುತ್ತು ಹಾಕುವ ಸಂದರ್ಭದಲ್ಲಿ ನೌಕೆಯು ಶನಿಗ್ರಹದ ವಿಲಕ್ಷಣ ಸರಪಣಿ ಮತ್ತು ಹೆಣಿಕೆ ರಚನೆ ಹೊಂದಿರುವ ಎಫ್‌–ಉಂಗುರದ ಕೇಂದ್ರದಿಂದ 7,800 ಕಿ.ಮೀ ದೂರದಲ್ಲಿ ಹಾದುಹೋಗಲಿದೆ ಎಂದು ನಾಸಾ ಹೇಳಿದೆ. ಕ್ಯಾಸಿನಿ ನೌಕೆಯು ತನ್ನ ಸೇವೆಯನ್ನು ಸ್ಥಗಿತಗೊಳಿಸುವುದಕ್ಕೂ ಕೆಲವೇ ತಿಂಗಳುಗಳ ಮುನ್ನ ಮತ್ತೊಂದು ಮಹತ್ವದ ಸಾಧನೆ ಮಾಡಲಿದೆ. ಈ ಹಂತವನ್ನು ನಾಸಾ ವಿಜ್ಞಾನಿಗಳು ‘ಗ್ರ್ಯಾಂಡ್‌ ಫಿನಾಲೆ’ ಎಂದು ಕರೆದಿದ್ದಾರೆ. ಮುಂದಿನ ವರ್ಷದ ಏಪ್ರಿಲ್‌ನಿಂದ ಈ ಹಂತ ಆರಂಭವಾಗಲಿದೆ. ಕ್ಯಾಸಿನಿಯು ಶನಿಗ್ರಹದ ಅತ್ಯಂತ ದೊಡ್ಡ ಉಪಗ್ರಹ ಟೈಟಾನ್‌ನ ಸಮೀಪ ಹೋಗುತ್ತದೆ. ಆಗ ಉಪಗ್ರಹವು ನೌಕೆಯ ಕಕ್ಷೆಗೆ ಹೊಸ ರೂಪಕೊಡಲಿದೆ.
 • ಇದರಿಂದಾಗಿ ಕ್ಯಾಸಿನಿಯು ಉಂಗುರಗಳ ಹಾಗೂ ಶನಿಗ್ರಹದ ನಡುವೆ ಹಾದುಹೋಗಲಿದೆ (ಉಂಗುರ ಮತ್ತು ಗ್ರಹದ ನಡುವಣ ಅಂತರ 2,400 ಕಿ.ಮೀ). ನೌಕೆಯು 22 ಬಾರಿ ಈ ಅಂತರದಲ್ಲಿ ಹಾದು ಹೋಗುವ ನಿರೀಕ್ಷೆ ಇದೆ. 2017ರ ಏಪ್ರಿಲ್‌ 27ರಂದು ಮೊದಲ ಸಲ ಕ್ಯಾಸಿನಿಯು ಶನಿಗ್ರಹ ಮತ್ತು ಉಂಗುರಗಳ ಮಧ್ಯೆ ಸಂಚರಿಸಲಿದೆ.

ಮಾಹಿತಿ ಸಂಗ್ರಹಸಂಪಾದಿಸಿ

 • ಈ ಸಮಯದಲ್ಲಿ ನೌಕೆಯು ಅತ್ಯಂತ ಸನಿಹದಿಂದ ಶನಿಗ್ರಹದ ಅಧ್ಯಯನ ನಡೆಸಲಿದೆ. ಗ್ರಹದ ಕಾಂತ ಮತ್ತು ಗುರುತ್ವಾಕರ್ಷಣೆ ಕ್ಷೇತ್ರವನ್ನು ಅಳೆಯಲಿದೆ. ಅಲ್ಲದೇ ಗ್ರಹದ ವಾತಾವರಣಕ್ಕೆ ಸಂಬಂಧಿಸಿದ ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕಲಿದೆ. ಶನಿಗ್ರಹದ ಒಳ ರಚನೆ, ಉಂಗುರಗಳ ಒಟ್ಟು ದ್ರವ್ಯರಾಶಿಯ ಬಗ್ಗೆ ಹೆಚ್ಚಿನ ಒಳನೋಟ ನೀಡಲಿದೆ ಎಂಬುದು ವಿಜ್ಞಾನಿಗಳ ನಿರೀಕ್ಷೆ. ಅಂತಿಮವಾಗಿ ಇದರಿಂದ ಉಂಗುರಗಳ ವಯಸ್ಸನ್ನು ಲೆಕ್ಕಹಾಕಬಹುದು ಎಂಬುದು ಅವರ ಲೆಕ್ಕಾಚಾರ. ಇದರ ಜೊತೆಗೆ, ಪ್ರಮುಖ ಉಂಗುರಗಳಲ್ಲಿರುವ ದೂಳಿನ ಗಾತ್ರದ ಕಣಗಳು, ಶನಿಗ್ರಹದ ಹೊರ ವಾತಾವರಣದ ಮಾದರಿಗಳ ವಿಶ್ಲೇಷಣೆಯನ್ನೂ ಮಾಡಲಿದೆ.
 • ಕ್ಯಾಸಿನಿ ಜೊತೆ ಹ್ಯುಜೆನ್ಸ್‌:
 • ‘ಕ್ಯಾಸಿನಿ’ ನೌಕೆಯೊಂದಿಗೆ ಹ್ಯುಜೆನ್ಸ್‌ ಎಂಬ ಮತ್ತೊಂದು ನೌಕೆಯನ್ನು ಅಳವಡಿಸಲಾಗಿತ್ತು. ಕ್ಯಾಸಿನಿ ಶನಿಗ್ರಹದ ಅಧ್ಯಯನ ನಡೆಸಿದರೆ, ಹ್ಯುಜೆನ್ಸ್‌ಗೆ ಶನಿಗ್ರಹದ ದೊಡ್ಡ ಉಪಗ್ರಹ ಟೈಟಾನ್‌ನ ಅಧ್ಯಯನದ ಹೊಣೆ ಹೊರಿಸಲಾಗಿತ್ತು.

ಕ್ಯಾಸಿನಿ ಜೊತೆ ಹ್ಯುಜೆನ್ಸ್‌ ಯಾತ್ರೆಹ ಹಂತಗಳುಸಂಪಾದಿಸಿ

‘ಕ್ಯಾಸಿನಿ’ ನೌಕೆಯೊಂದಿಗೆ ಹ್ಯುಜೆನ್ಸ್‌ ಎಂಬ ಮತ್ತೊಂದು ನೌಕೆಯನ್ನು ಅಳವಡಿಸಲಾಗಿತ್ತು. ಕ್ಯಾಸಿನಿ ಶನಿಗ್ರಹದ ಅಧ್ಯಯನ ನಡೆಸಿದರೆ, ಹ್ಯುಜೆನ್ಸ್‌ಗೆ ಶನಿಗ್ರಹದ ದೊಡ್ಡ ಉಪಗ್ರಹ ಟೈಟಾನ್‌ನ ಅಧ್ಯಯನದ ಹೊಣೆ ಹೊರಿಸಲಾಗಿತ್ತು.

 • 1997, ಅಕ್ಟೋಬರ್‌ 15: ಕ್ಯಾಸಿನಿ ಮತ್ತು ಹ್ಯುಜೆನ್ಸ್‌ ನೌಕೆಯ ಉಡಾವಣೆ
 • 2004, ಜುಲೈ 1: ಶನಿಗ್ರಹದ ಕಕ್ಷೆ ಪ್ರವೇಶಿಸಿದ ನೌಕೆ
 • 2004, ಡಿಸೆಂಬರ್‌ 24:ಕ್ಯಾಸಿನಿಯಿಂದ ಬೇರ್ಪಟ್ಟ ಹ್ಯುಜೆನ್ಸ್‌
 • 2005,ಜನವರಿ 14: ಮೂರು ವಾರಗಳ ಪ್ರಯಾಣದ ನಂತರ ಟೈಟಾನ್‌ನಲ್ಲಿ ಯಶಸ್ವಿಯಾಗಿ ಇಳಿದ ಹ್ಯುಜೆನ್ಸ್‌
 • 2008, ಜೂನ್‌ 1: ಶನಿಗ್ರಹದ ಪ್ರಾಥಮಿಕ ಅಧ್ಯಯನ ಮುಕ್ತಾಯಗೊಳಿಸಿದ ಕ್ಯಾಸಿನಿ
 • 2010, ಫೆಬ್ರುವರಿ 3:‘ಕ್ಯಾಸಿನಿ–ಹ್ಯುಜೆನ್ಸ್‌’ ಯೋಜನೆಯನ್ನು 2017ರವರೆಗೆ ವಿಸ್ತರಿಸಿದ ನಾಸಾ
 • 2017 ಸೆಪ್ಟೆಂಬರ್‌:ಅಧ್ಯಯನ ಸ್ಥಗಿತಗೊಳಿಸಲಿರುವ ಕ್ಯಾಸಿನಿಯು ಶನಿಗ್ರಹಕ್ಕೆ ಅಪ್ಪಳಿಸಲಿದೆ. ಶನಿಗ್ರಹದ ಬಗ್ಗೆ ನೌಕೆಯು ಅದುವರೆಗೆ ಕಲೆ ಹಾಕಿರುವ ಮಾಹಿತಿಗಳು, ಸಂಕೇತ ಲಭ್ಯವಿರುವವರೆಗೆ ಅದಕ್ಕೂ ಮುನ್ನ ಭೂಮಿಗೆ ರವಾನೆಯಾಗಲಿವೆ.

[೩]

ಕ್ಯಾಸಿನಿ ಜೊತೆ ಹ್ಯುಜೆನ್ಸ್‌ ಯಾತ್ರೆಹ ಹಂತಗಳುಸಂಪಾದಿಸಿ

‘ಕ್ಯಾಸಿನಿ’ ನೌಕೆಯೊಂದಿಗೆ ಹ್ಯುಜೆನ್ಸ್‌ ಎಂಬ ಮತ್ತೊಂದು ನೌಕೆಯನ್ನು ಅಳವಡಿಸಲಾಗಿತ್ತು. ಕ್ಯಾಸಿನಿ ಶನಿಗ್ರಹದ ಅಧ್ಯಯನ ನಡೆಸಿದರೆ, ಹ್ಯುಜೆನ್ಸ್‌ಗೆ ಶನಿಗ್ರಹದ ದೊಡ್ಡ ಉಪಗ್ರಹ ಟೈಟಾನ್‌ನ ಅಧ್ಯಯನದ ಹೊಣೆ ಹೊರಿಸಲಾಗಿತ್ತು.

 • 1997, ಅಕ್ಟೋಬರ್‌ 15: ಕ್ಯಾಸಿನಿ ಮತ್ತು ಹ್ಯುಜೆನ್ಸ್‌ ನೌಕೆಯ ಉಡಾವಣೆ

2004, ಜುಲೈ 1: ಶನಿಗ್ರಹದ ಕಕ್ಷೆ ಪ್ರವೇಶಿಸಿದ ನೌಕೆ 2004, ಡಿಸೆಂಬರ್‌ 24:ಕ್ಯಾಸಿನಿಯಿಂದ ಬೇರ್ಪಟ್ಟ ಹ್ಯುಜೆನ್ಸ್‌

 • 2005,ಜನವರಿ 14: ಮೂರು ವಾರಗಳ ಪ್ರಯಾಣದ ನಂತರ ಟೈಟಾನ್‌ನಲ್ಲಿ ಯಶಸ್ವಿಯಾಗಿ ಇಳಿದ ಹ್ಯುಜೆನ್ಸ್‌
 • 2008, ಜೂನ್‌ 1: ಶನಿಗ್ರಹದ ಪ್ರಾಥಮಿಕ ಅಧ್ಯಯನ ಮುಕ್ತಾಯಗೊಳಿಸಿದ ಕ್ಯಾಸಿನಿ
 • 2010, ಫೆಬ್ರುವರಿ 3:‘ಕ್ಯಾಸಿನಿ–ಹ್ಯುಜೆನ್ಸ್‌’ ಯೋಜನೆಯನ್ನು 2017ರವರೆಗೆ ವಿಸ್ತರಿಸಿದ ನಾಸಾ
 • 2017 ಸೆಪ್ಟೆಂಬರ್‌:ಅಧ್ಯಯನ ಸ್ಥಗಿತಗೊಳಿಸಲಿರುವ ಕ್ಯಾಸಿನಿಯು ಶನಿಗ್ರಹಕ್ಕೆ ಅಪ್ಪಳಿಸಲಿದೆ. ಶನಿಗ್ರಹದ ಬಗ್ಗೆ ನೌಕೆಯು ಅದುವರೆಗೆ ಕಲೆ ಹಾಕಿರುವ ಮಾಹಿತಿಗಳು, ಸಂಕೇತ ಲಭ್ಯವಿರುವವರೆಗೆ ಅದಕ್ಕೂ ಮುನ್ನ ಭೂಮಿಗೆ ರವಾನೆಯಾಗಲಿವೆ.

[೩]

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

 1. "CASSINI-HUYGENS". Archived from the original on 2017-09-21. Retrieved 2016-09-20.
 2. Mapping Saturn’s Moons
 3. ೩.೦ ೩.೧ "ಅಂತಿಮ ಹಂತದಲ್ಲಿ 'ಕ್ಯಾಸಿನಿ' ಯಾತ್ರೆ". Archived from the original on 2016-09-21. Retrieved 2016-09-20.