ಪೋಲಾರ್ ಉಪಗ್ರಹ ಉಡಾವಣಾ ವಾಹನ-ಸಿ35
ಪಿಎಸ್ಎಲ್ವಿ-ಸಿ35
ಬದಲಾಯಿಸಿ- ದಿ.೨೬-೯-೨೦೧೬ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಕಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಸಾಧನೈಗೆದಿದೆ.
- ಶ್ರೀಹರಿಕೋಟಾ-ಉಡಾವಣಾ ಕೇಂದ್ರ:ಫೋಟೊ:[[೧]]
ಉಪಗ್ರಹಗಳು
ಬದಲಾಯಿಸಿ- 3 ಸ್ವದೇಶಿ ಹಾಗೂ 5 ವಿದೇಶಿ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಈ ಉಡಾವಣೆಯು ಇಸ್ರೋದ ಸುದೀರ್ಘಾವಧಿಯ ಕಾರ್ಯವಾಗಿದ್ದು, ಸುಮಾರು 2 ಗಂಟೆ, 15 ನಿಮಿಷಗಳ ಕಾಲ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೋ ಹೇಳಿದೆ. ಉಡಾವಣೆಯಾದ ಸುಮಾರು 17 ನಿಮಿಷಗಳ ಅವಧಿಯಲ್ಲಿ ಭಾರತದ ಬಹು ಉದ್ದೇಶಿತ ಪ್ರಮುಖ ಹವಾಮಾನ ಉಪಗ್ರಹ ಸ್ಕಾಟ್ಸ್ಯಾಟ್-1 ಅನ್ನು ಪಿಎಸ್ ಎಲ್ ವಿ ಕಕ್ಷೆಗೆ ಸೇರಿಸಿದ್ದು, ಈ ಉಪಗ್ರಹ ಸುಮಾರು 371 ಕೆಜಿ. ತೂಕ ಹೊಂದಿದೆ. ಈ ಸ್ಕಾಟ್ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ.ಸ್ಕಾಟ್ಸ್ಯಾಟ್-1 ಉಪಗ್ರಹವು ಓಶಿಯನ್ ಸ್ಯಾಟ್-2 ಯೋಜನೆಯ ಮುಂದುವರಿದ ಭಾಗವಾಗಿದ್ದು, ಹವಾಮಾನ ವರದಿ ಮತ್ತು ಮುನ್ಸೂಚನೆ, ಗಾಳಿಯ ದಿಕ್ಕು ಮತ್ತು ಚಲನೆ ಸೇರಿ ಹಲವು ಪ್ರಮುಖ ದತ್ತಾಂಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ.
ಎರಡು ಕಕ್ಷೆಗಳಲ್ಲಿ ಸ್ಥಾಪನೆ
ಬದಲಾಯಿಸಿ- ಬೆಂಗಳೂರಿನ ಪಿಇಎಸ್ ಯೂನಿವರ್ಸಿಟಿ ಸಹಭಾಗಿತ್ವದಲ್ಲಿ ನಿರ್ವಿುಸಿದ ಪಿಸ್ಯಾಟ್ ಉಪಗ್ರಹ ಕೂಡಾ ಕಕ್ಷೆಗೆ ಸೇರಲಿದೆ. ಉಳಿದ 7 ಉಪಗ್ರಹಗಳನ್ನು 689 ಕಿಮೀ. ಧ್ರುವ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ. ಸ್ಕಾಟ್ಸ್ಯಾಟ್-1ನ್ನು 730 ಕಿಮೀ. ಸೂರ್ಯ ಸಮಕಾಲಿಕ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ. ಬೆಳಗ್ಗೆ 11.25ರಿಂದ 11.28ರೊಳಗಿನ ಅವಧಿಯಲ್ಲಿ ಪಿಎಸ್ ಎಲ್ ವಿಯ ಎಂಜಿನ್ ಕೆಲ ಕ್ಷಣಗಳ ಕಾಲ ಸ್ಥಗಿತಗೊಂಡು ಮತ್ತೆ ಚಾಲನೆ ಪಡೆಯಲಿದೆ. ಇದು ತುಂಬಾ ಕ್ಲಿಷ್ಟಕರ ಕಾರ್ಯವಾಗಿದ್ದು, ಒಂದು ಕಕ್ಷೆಗೆ ಉಪಗ್ರಹವನ್ನು ಸೇರಿಸಿದ ಬಳಿಕ ಪಿಎಸ್‌ಎಲ್‌ವಿ ರಾಕೆಟ್‌ನ 4ನೇ ಸ್ಟೇಜ್ ಅಂದರೆ ಎಂಜಿನ್ ಅನ್ನು ಆಫ್ ಮಾಡಲಾಗುತ್ತದೆ. ಬಳಿಕ ಮತ್ತೆ ಎಂಜಿನ್ ಸ್ಟಾರ್ಟ್ ಮಾಡಿ ಮತ್ತೊಂದು ಕಕ್ಷೆಗೆ 7 ಉಪಗ್ರಹಗಳನ್ನು ಸೇರಿಸಲಾಗುತ್ತದೆ. ಹೀಗೆ ಭಾರೀ ಉಷ್ಣತೆ ಹೊಂದಿರುವ ರಾಕೆಟ್ ಅನ್ನು ಆಫ್ ಮಾಡಿ ಪುನಃ ಚಾಲೂ ಮಾಡುವುದು ಅತ್ಯಂತ ಕ್ಲಿಷ್ಟಕರ ಪ್ರಕ್ರಿಯೆ. [೧][೨]
- ನಕ್ಷೆ -ವಿವರ:[[https://web.archive.org/web/20160924163604/http://www.prajavani.net/news/article/2016/09/24/440112.html Archived 2016-09-24 ವೇಬ್ಯಾಕ್ ಮೆಷಿನ್ ನಲ್ಲಿ.]]
ಮುಖ್ಯ ಸಂಗತಿಗಳು
ಬದಲಾಯಿಸಿ- 1. ಪಿಎಸ್ಎಲ್ವಿ ಸಿ 35 (The PSLV-C35) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಎಸ್ಎಚ್ಎಆರ್( SHAR),ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ 9.12 26-9-2016 ರಂದು ಲಾಂಚ್ ಪ್ಯಾಡ್ ಬಿಡುಗಡೆ ಮಾಡಲಾಗಿದೆ. ಎಲ್ಲಾ ಎಂಟು ಉಪಗ್ರಹಗಳ ಒಟ್ಟು ತೂಕ ಸುಮಾರು 675 ಕೆಜಿ.
- 2. ಸ್ಕಾಟ್ ಸ್ಯಾಟ್ -1 (The SCATSAT-1) ಸುಮಾರು 17 ನಿಮಿಷಗಳ ನಂತರ, 730 ಕಿಮೀ ಪೋಲಾರ್ ಸೌರಸಂಯೋಜಿತ ಪ್ರದಕ್ಷಿನೆಯ (ಆರ್ಬಿಟ್) (ಎಸ್’ಎಸ್’ಒ) ಮೊದಲು ಬಿಡುಗಡೆ ಮಾಡಲಾಗುವುದು ಮತ್ತು ಉಳಿದ ಸುಮಾರು ಎರಡು ಗಂಟೆಗಳ ನಂತರ 689 ಕಿ.ಮೀ ನ ಕಡಿಮೆಯ ಕಕ್ಷೆಗೆ ಇಂಜೆಕ್ಟ್ ಮಾಡಲಾಗುತ್ತದೆ. ಇದು ಪಿಎಸ್ಎಲ್ವಿಯ ಇದುವರೆಗಿನ ಪಯಣಕ್ಕಿಂತ ಹೆಚ್ಚು ದೂರದ ಪಯಣ.
- 3. ಈ ಉದ್ದೇಶಕ್ಕಾಗಿ ಉಡಾವಣಾ ಎರಡು ಮರು ಪೂರಣ ದಹನ ಇಂಜಿನ್ ಇರುತ್ತದೆ. ಬಿಡುಗಡೆ ತಂಡದ ಎಂಜಿನಿಯರ್ಗಳು ಹಾರಾಟದ ಸಮಯದಲ್ಲಿ ಎರಡು ಬಾರಿ ಮುಚ್ಚಿ (ಇಂಧನ ಉರುವಲನ್ನು) ಮತ್ತೆ ನಾಲ್ಕನೇ ಮತ್ತು ಕೊನೆಯ ಹಂತದ ವಾಹನವನ್ನು ಮರುಪ್ರಾರಂಭಿಸುವರು. .
- 4. ಸ್ಕಾಟ್’ಸ್ಯಾಟ್ -1 ಜೊತೆಗೆ, ಇತರ ಪ್ರಥಮ್ ಮತ್ತು ಪಿಸ್ಯಾಟ್ ಗಳೆಂಬ ಎರಡು ಭಾರತದ ಎರಡು ಶೈಕ್ಷಣಿಕ ಉಪಗ್ರಹಗಳು; (ಎಲ್ಲಾ ಆಲ್ಜೀರಿಯಾ ದಿಂದ) ಆಲ್ಸಾಟ್ 1ಬಿ; ಆಲ್ಸಾಟ್ 2ಬಿ ಮತ್ತು ಆಲ್ಸ್ಯಾಟ-1ಎನ್; ಮತ್ತು ದಾರಿಸಂಶೋಧಕ -1 ಮತ್ತು Éನ್’ಎಲ್’ಎಸ್.19, ಯುಎಸ್’ಎ ಮತ್ತು ಕೆನಡಾ ದಿಂzದ (ಕ್ರಮವಾಗಿ).
- 5. ಇದು ಪಿಎಸ್ಎಲ್ವಿ ಸಂರಚನೆಯಲ್ಲಿ 15 ನೇ ಉಡಾವಣೆ.: ಘನ ಪಟ್ಟಿ-ಮೋಟಾರ್ಗಳನ್ನು ಬಳಕೆ ಎಕ್ಷ’ಎಲ್ ಜೋಡಣೆಯದ್ದು.
- 6. ಸ್ಕಾಟ್ ಸ್ಯಾಟ್ -1 ಮಿಷನ್ ಉದ್ದೇಶಗಳು : ಹವಾಮಾನ ಮುನ್ಸೂಚನೆಗಯ ಸೇವೆಗಳು, ಚಂಡಮಾರುತ ಪತ್ತೆ ಮತ್ತು ಟ್ರ್ಯಾಕಿಂಗ್ ಒದಗಿಸಲು ಸಹಾಯ ಮಾಡುವುದು. ಇದು 15 ವರ್ಷಗಳ ವಿನ್ಯಾಸ ಜೀವನ ಹೊಂದಿದೆ.
- 7. ಐದು ಕೆಜಿಯ ವಿದ್ಯಾರ್ಥಿ ಉಪಗ್ರಹ-ಪಿಸ್ಯಾಟ್ - 80ಎಂ/ ಪಿಕ್ಸೆಲ್ ರೆಸಲ್ಯೂಶನ್, 185 ಕಿಮೀ ಎಕ್ಸ್ , 135 ಕಿಮೀ. ಪ್ರದೇಶದ ಚಿತ್ರಣವನ್ನು ಹಿಡಿಯಲು ಒಂದು ಚಿತ್ರಣ ಕ್ಯಾಮೆರಾದ ಪೇಲೋಡ್ ಒಯ್ಯುತ್ತದೆ. ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು ವಿದ್ಯಾರ್ಥಿಗಳು ಉಪಗ್ರಹ ಅಭಿವೃದ್ಧಿಗೊಳಿಸಿದ್ದಾರೆ.
- 8. ಇತರ ವಿದ್ಯಾರ್ಥಿ ಉಪಗ್ರಹ, ಪ್ರಥಮ್, ಐಐಟಿ ಬಾಂಬೆ ಯಿಂದ ಅಭಿವೃದ್ಧಿಗೊಳಿಸಲಾಗಿದೆ.
- 9. ಪಿಎಸ್ಎಲ್ವಿ ಇಲ್ಲಿಯವರೆಗೆ ಚಂದ್ರಯಾನ -1 2008 ರ ಮತ್ತು 2013-14ರ ಮಾರ್ಸ್ ಮಿಷನ್ ಸೇರಿದಂತೆ ಇಸ್ರೋ 39 ದೂರದ ಸಂಜ್ಞೆಯನ್ನು ಉಪಗ್ರಹಗಳು ುಡಾವಣೆ ಮಾಡಿದೆ.
- 10. ಈ ವರ್ಗದಲ್ಲಿ ಉಡಾವಣಾ ಸೇವೆಗಳ ಬೇಡಿಕೆ ಹೆಚ್ಚುತ್ತಿದೆ. ಒಟ್ಟು ಜಾಗತಿಕ ಪ್ರವೃತ್ತಿಯ ವಿದೇಶಿ ವಾಣಿಜ್ಯ ಮತ್ತು ವಿಶ್ವವಿದ್ಯಾಲಯದ 74 ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿದೆ.
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-09-26. Retrieved 2016-09-26.
- ↑ "2 ಕಕ್ಷೆಗೆ 8 ಉಪಗ್ರಹಗಳ ಯಶಸ್ವಿ ಉಡಾವಣೆ". Archived from the original on 2016-09-27. Retrieved 2016-09-26.
- ↑ The PSLV-C35 will be launched from the first launch pad of Satish Dhawan Space Centre