ಸಿದ್ದವಾಯ್ತು ವಿಶ್ವದ ಅತೀ ದೊಡ್ಡ ಟೆಲಿಸ್ಕೋಪ್; ಏಲಿಯನ್ ಹುಡುಕಾಟಕ್ಕೆ ಮತ್ತೆ ಚಾಲನೆ?
ನೈಋತ್ಯ ಚೀನಾದಲ್ಲಿ ನಿರ್ಮಿಸಲಾಗಿರುವ ಬೃಹತ್ ಟೆಲಿಸ್ಕೋಪ್‍ಗೆ 'ಫಾಸ್ಟ್' ಎಂದು ನಾಮಕರಣ ಮಾಡಲಾಗಿದ್ದು, ಇಂದು ಈ ಬೃಹತ್ ಟೆಲಿಸ್ಕೋಪ್‍ನ ಪ್ರಾಯೋಗಿಕ ಕಾರ್ಯಾಚರಣೆ ನಡೆಯಲಿದೆ. ಸುಮಾರು 500 ಮೀಟರ್ ಅಗಲವಿರುವ ಈ ಟೆಲಿಸ್ಕೋಪ್ 4.450 ಗಾಜಿನ ಪ್ಯಾನಲ್ ಗಳನ್ನು ಅಳವಡಿಸಲಾಗಿದ್ದು, ಪ್ರತಿ ಪ್ಯಾನಲ್ 11 ಮೀಟರ್ ಅಗಲವಿದೆ. ಚೀನಾ ಆಸ್ಟ್ರೋನಾಮಿಕಲ್ ಆಬ್ಸರೆವೆಟಿವ್ಸ್ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಈ ಬೃಹತ್ ಟೆಲಿಸ್ಕೋಪ್ ಅನ್ನು ನಿರ್ಮಿಸಿದೆ.
ಅನ್ಯಗ್ರಹ ಜೀವಿಗಳ ಸಂಶೋಧನೆಗಾಗಿ ನಿರ್ಮಿಸಲಾಗುತ್ತಿದ್ದ ವಿಶ್ವದ ಅತೀ ದೊಡ್ಡ ಟೆಲಿಸ್ಕೋಪ್ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಶೀಘ್ರದಲ್ಲೇ ತನ್ನ ಕಾರ್ಯಾರಂಭ ಮಾಡಲಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ.
ಅಮೆರಿಕದ ಅರ್ಥ್-2 ಕೆಪ್ಲರ್ ಟೆಲಿಸ್ಕೋಪ್‍ಗಿಂತಲೂ ಚೀನಾದ ಫಾಸ್ಟ್ ಬೃಹದಾಕಾರವಾಗಿದ್ದು, ಈ ರೇಡಿಯೋ ಟೆಲಿಸ್ಕೋಪ್ ಸುಮಾರು 30 ಫುಟ್ ಬಾಲ್ ಕ್ರೀಡಾಗಂಣದಷ್ಟು ದೊಡ್ಡದಾಗಿದೆ. ಈ ಬೃಹತ್ ಟೆಲಿಸ್ಕೋಪ್ ನಿರ್ಮಾಣ ಕುರಿತಂತೆ ಮಾತನಾಡಿರುವ ಚೀನಾ ಆಸ್ಟ್ರೋನಾಮಿಕಲ್ ಸೊಸೈಟಿ ಮುಖ್ಯಸ್ಥ ವು ಕ್ಸಿಯಾಂಗ್ ಪಿಂಗ್ ಅವರು, ಫಾಸ್ಟ್ ಟೆಲಿಸ್ಕೋಪ್ ಮುಖಾಂತರವಾಗಿ ನಮ್ಮ ಗ್ಯಾಲಕ್ಸಿಯಿಂದ ಹೊರಗಿರುವ ಜೀವರಾಶಿಗಳ ಅಥವಾ ಏಲಿಯನ್ ಗಳ ಕುರಿತು ಅಧ್ಯಯನ ಮಾಡಲು ನೆರವಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಬೃಹತ್ ಟೆಲಿಸ್ಕೋಪ್ ನಿರ್ಮಾಣ ಕಾರ್ಯ 2011ರಲ್ಲೇ ಆರಂಭವಾಗಿ 2012ರ ಅಂತ್ಯದ ವೇಳೆ ಪೂರ್ಣಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದರ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗಿತ್ತು. ಈ ಟೆಲಿಸ್ಕೋಪ್ ನಿರ್ಮಾಣಕ್ಕೆ ಸುಮಾರು 10 ಸಾವಿರ ಮಂದಿ ಶ್ರಮದಾನ ಮಾಡಿದ್ದು, ಟೆಲಿಸ್ಕೋಪ್ ಸಮೀಪದಲ್ಲೇ 5 ಕಿ.ಮೀ ವ್ಯಾಪ್ತಿಯಲ್ಲಿ ಇವರೆಲ್ಲರಿಗೂ ವಸತಿ ವ್ಯವಸ್ಥೆ ಮಾಡಲಾಗಿತ್ತಂತೆ.[೧]
ಭಾನುವಾರ, 25 ಸೆಪ್ಟಂಬರ್ 2016 ರಂದು ಚೀನಾದಲ್ಲಿ ಸ್ಥಾಪಿಸಲಾದ ಜಗತ್ತಿನ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್ ಪರೀಕ್ಷಾರ್ಥ ಕಾರ್ಯಾರಂಭ ಮಾಡಿದೆ.ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ಬಾಹ್ಯಾಕಾಶದಿಂದ ಮೊದಲ ಸಂದೇಶವನ್ನು ಸ್ವೀಕರಿಸಿತು. ದೂರದರ್ಶಕವು ಸದ್ಯ ಪರೀಕ್ಷಾ ಹಂತದಲ್ಲಿದ್ದು, ಮೂರು ವರ್ಷದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ. 4.5 ಕೋಟಿ ವರ್ಷಗಳ ಹಿಂದೆ ಗುಜಿಯೋ ಪ್ರಾಂತ್ಯದ ಪರ್ವತದಲ್ಲಿ ಇದ್ದ ಗುಹೆಯೊಂದು ಕುಸಿದುಬಿದ್ದು ಉಂಟಾಗಿರುವ ಬೃಹದಾಕಾರದ ಗುಳಿಯಲ್ಲಿ ಟೆಲಿಸ್ಕೋಪ್ ನಿರ್ಮಿಸಲಾಗಿದೆ.
ರೂ.1200 ಕೋಟಿ ವೆಚ್ಚದ ಈ ಟೆಲಿಸ್ಕೋಪ್‌ನ ತಟ್ಟೆ 30 ಫುಟ್ಬಾಲ್ ಮೈದಾನಗಳಷ್ಟು ವಿಶಾಲವಾಗಿದೆ. ಒಟ್ಟು 4,450 ಫಲಕಗಳನ್ನು ಜೋಡಿಸಲಾಗಿದ್ದು, ಪ್ರತಿ ಫಲಕವೂ ತ್ರಿಕೋನಾಕೃತಿಯಲ್ಲಿ 11 ಮೀಟರ್ ಉದ್ದವಿದೆ. ಸುಮಾರು 20 ವರ್ಷಗಳ ನಿರಂತರ ಶೋಧನೆಯ ನಂತರ ಟೆಲಿಸ್ಕೋಪ್ ಸ್ಥಾಪನೆಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಈ ಸ್ಥಳದ ಸುತ್ತಮುತ್ತ ಐದು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಜನವಸತಿ ಪ್ರದೇಶಗಳಿಲ್ಲ. ಈ ವ್ಯಾಪ್ತಿಯಲ್ಲಿ ಬೇರೆ ಯಾವ ರೀತಿಯ ರೇಡಿಯೊ ತರಂಗಗಳು ಕೆಲಸ ಮಾಡುವುದಿಲ್ಲ. ದೂರದ ಆಕಾಂಶಗಂಗೆಯಲ್ಲಿರುವ ನೈಸರ್ಗಿಕ ಜಲಜನಕ ಹಾಗೂ ಸಾಮಾನ್ಯ ಟೆಲಿಸ್ಕೋಪ್‌ಗಳ ಪತ್ತೆ ಮಾಡದ ಆಕಾಶಕಾಯಗಳನ್ನು ಇದು ಪತ್ತೆ ಮಾಡಲಿದೆ.
ಇದಕ್ಕಿಂತ ಹೆಚ್ಚಾಗಿ ಇನ್ನಿತರ ಆಕಾಶಕಾಯ, ಜನವಸತಿ ಪ್ರದೇಶಗಳಿಂದ ಹೊರಹೊಮ್ಮುವ ಸೂಕ್ಷಾತೀಸೂಕ್ಷ್ಮ ತರಂಗಗಳನ್ನು ಈ ಟೆಲಿಸ್ಕೋಪ್ ಗ್ರಹಿಸುವ ಸಾಮರ್ಥ್ಯ ಹೊಂದಿದೆ.[೪]
ಬ್ರಿಟಿಷ್ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ವಿಶೇಷವಾಗಿ ಮಾನವರಿಗಿಂತ ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಆ, ಯಾವುದೇ ಪರಕೀಯ ನಾಗರಿಕತೆಯು ನಮ್ಮ ಉಪಸ್ಥಿತಿ ಘೋಷಿಸುವ ವಿರುದ್ಧ ಎಚ್ಚರಿಕೆ ನೀಡಿದಾರೆ.
ಮುಂದುವರಿದ ನಾಗರಿಕತೆಯಿಂದ ನಮ್ಮ ಮೊದಲ ಸಂಪರ್ಕ ಸ್ಥಳೀಯ ಅಮೆರಿಕನ್ನರು ಮೊದಲ ಕ್ರಿಸ್ಟೋಫರ್ ಕೊಲಂಬಸ್ ಮತ್ತು ವಿಷಯಗಳನ್ನು ಎದುರಿಸಿದಕ್ಕೆ ಸಮನಾಗಿರುತ್ತದೆ. ಆಗಿರಬಹುದು "ಅದು ಮೂಲ ನಿವಾಸಿಗಳಿಗೆ ಒಳ್ಳೆದಾಗಲಿಲ್ಲ!", ಹಾಕಿಂಗ್ ಹೊಸ ಆನ್ಲೈನ್ ಚಿತ್ರದಲ್ಲಿ ಹೇಳಿದರು.[೫]
ಅನ್ಯಲೋಕದ ನಾಗರಿಕತೆಗಳು ನಮಗಿಂತ ಹೆಚ್ಚು ತಾಂತ್ರಿಕವಾಗಿ ಮುಂದುವರಿದಿರಬಹುದು' ಎಂದು ಸ್ಟೀಫನ್ ಹಾಕಿಂಗ್ ಹೇಳಿದ್ದಾರೆ. 'ನಾವು ಬ್ಯಾಕ್ಟೀರಿಯಾಗಳಿಗಿಂತ ಹೆಚ್ಚಿನ ಬೆಲೆಬಾಳುವವರಲ್ಲವೆಂದು ಅವರು ನೋಡಬಹುದು',ಎಂದು ಅವರು ಹೇಳಿದರು. ಅವರು ಯಾವುದೇ ಪರಕೀಯ ನಾಗರಿಕತೆಯವರಿಗೆ ನಮ್ಮ ಉಪಸ್ಥಿತಿ ಘೋಷಿಸುವ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಒಂದು ದಿನ ನಾವು ಗ್ಲೀಸಿ (Gliese) ಬ್ಯಾಟಲ್ 832c ಗ್ರಹದ ಒಂದು ಸಿಗ್ನಲ್ ಸ್ವೀಕರಿಸಬಹುದು, ಆದರೆ ನಾವು ಮತ್ತೆ ಉತ್ತರಿಸುವ ಬಗೆಗೆ ಜಾಗರೂಕರಾಗಿರಬೇಕು," ಅವರು ಹೇಳಿದರು.
"ಅವರು ಅಪಾರವಾಗಿ ಹೆಚ್ಚು ಶಕ್ತಿಶಾಲಿಗಳು ಆಗಿರಬಹುದು ಎಂದು ಮತ್ತು ನಾವು ಬ್ಯಾಕ್ಟೀರಿಯಾ ಕ್ಕಿಂತ ಹೆಚ್ಚು ಬೆಲೆಬಾಳುವವರಲ್ಲ ಎಂದು ನಮ್ಮನ್ನು ನೋಡಬಹುದು 'ಎಂದು ಹಾಕಿಂಗ್ ಎಚ್ಚರಿಕೆ ನೀಡಿದ್ದಾರೆ.
"ನಾನು ವಯಸ್ಸಾದಂತೆ ನನಗೆ ಹೆಚ್ಚು ಮನವರಿಕೆಯಾಗಿದೆ, ಈ ವಿಶ್ವದಲ್ಲಿ ನಾವು ಮಾತ್ರ ಇರುವವರಲ್ಲ ಎಂದು; ಆಶ್ಚರ್ಯಪಡುತ್ತಾ, ನಾನು ಹೊಸ ಜಾಗತಿಕ ಸಾದ್ಯತೆಯನ್ನು ಕಂಡುಹಿಡಿಯಲು ಈ ಜೀವಮಾನದಲ್ಲಿ ಒಂದು ಸಹಾಯವನ್ನು ಮಾಡಲು ಇಷ್ಟಪಡುತ್ತೇನೆ." ಅವರು ಹೇಳಿದರೆಂದು ಗಾರ್ಡಿಯನ್ ವರದಿ ಮಾಡಿದೆ. ಹಾಕಿಂಗ್ ಪ್ರತಿಕೂಲ ವಿದೇಶಿಯರ ಬಗ್ಗೆ ನಿರೀಕ್ಷೆಯೊಂದಿಗೆ ಎಚ್ಚರಿಕೆ ನೀಡಿರುವುದು ಇದೇ ಮೊದಲ ಬಾರಿ ಅಲ್ಲ.[೬]