ಕೊಡಗು (ಕೂರ್ಗ್) ಸಾಮ್ರಾಜ್ಯವು 16ನೇ ಶತಮಾನದಿಂದ 1834ರ[] ವರೆಗೆ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಸ್ವತಂತ್ರ ಸಾಮ್ರಾಜ್ಯವಾಗಿತ್ತು. [][clarification needed] ಇಕ್ಕೇರಿ ನಾಯಕರ ಶಾಖೆಯಿಂದ ಅದು ಆಳಲ್ಪಟ್ಟಿತ್ತು. ಸಾಮ್ರಾಜ್ಯವು 1780ರಿಂದ 1788ರ ವರೆಗೆ ನೆರೆಯ ಮೈಸೂರಿನಿಂದ ಆಕ್ರಮಿಸಲ್ಪಟ್ಟಿತ್ತು. ಆದರೆ ಬ್ರಿಟಿಷರಿಂದ ಕೊಡಗಿನ ರಾಜನನ್ನು ಪುನಃಸ್ಥಾಪನೆ ಮಾಡಲಾಯಿತು ಮತ್ತು ಅಕ್ಟೋಬರ್ 26, 1790ರಂದು ಬ್ರಿಟಿಷರಿಂದ ರಕ್ಷಿಸಲ್ಪಟ್ಟ ರಾಜ್ಯವಾಯಿತು. 1834ರಲ್ಲಿ ಅಂದಿನ ಕೊಡಗು ರಾಜನು ಬ್ರಿಟಿಷ್ ಅಧಿಪತ್ಯದ ವಿರುದ್ಧ ಬಂಡಾಯವೆದ್ದು ಕೊಡಗು ಯುದ್ಧವನ್ನು ಹುಟ್ಟು ಹಾಕಿದನು. ಈ ಬಂಡಾಯವನ್ನು ಬ್ರಿಟಿಷರು ಕ್ರೂರವಾಗಿ ದಮನಿಸಿದರು ಹಾಗೂ ಸಾಮ್ರಾಜ್ಯವನ್ನು ಸ್ವಾಧೀನಪಡಿಸಿ ಬ್ರಿಟಿಷ್ ಇಂಡಿಯಾದ ಪ್ರಾಂತ್ಯವನ್ನಾಗಿಸಿದರು.

A white mansion and, in the distance, a fortified palace atop a hill. Three men stand near a tent in the foreground. The mansion has a large rust-coloured shingled roof, pillared porches and open-air balconies on its four sides, and large box-like corner sections that extend out from the rest of the architecture.
1795ರ ಕೊಡಗಿನ ರಾಜನ ಅತಿಥಿಗೃಹದ ಜಲವರ್ಣ ಚಿತ್ರ. ಹಿನ್ನೆಲೆಯಲ್ಲಿ ಕೋಟೆಯಿದೆ.
ಸೋಮವಾರಪೇಟೆಯಲ್ಲಿರುವ ಕೊಡಗಿನ ರಾಜನ ಅರಮನೆಯ ಪೋರ್ಟಿಕೊ (ಮೇ 1853 X, p.48) []

ಆರಂಭಿಕ ಇತಿಹಾಸ

ಬದಲಾಯಿಸಿ

1808 ರಲ್ಲಿ ಬರೆಯಲಾದ ಕೊಡಗಿನ ಕೊಡಗಿನ ಆಡಳಿತಗಾರರ ರಾಜೇಂದ್ರನಾಮ ಎಂಬ ವಂಶಾವಳಿಯಲ್ಲಿ ಮೂಲದ ಬಗ್ಗೆ ಉಲ್ಲೇಖವಿಲ್ಲ. ಆದರೆ, ಇತಿಹಾಸಕಾರ ಲೂಯಿಸ್ ರೈಸ್ನು ಅದನ್ನೋದಿ ರಾಜ ವಂಶವು ಹಾಲೇರಿನಾರ್ಡಿ ಎಂಬಲ್ಲಿ ನೆಲೆಸಿದ ಇಕ್ಕೇರಿ ನಾಯಕರ ಸದಸ್ಯನೋರ್ವನಿಂದ ಬಂದಿರಬೇಕು ಎಂದು ತೀರ್ಮಾನಿಸಿದ.

ಅಲೆದಾಡುವ ಜಂಗಮ ಸನ್ಯಾಸಿಯ ( ಅಥವಾ ಲಿಂಗಾಯತ ಸನ್ಯಾಸಿ []) ವೇಷದಲ್ಲಿ ಉತ್ತರ ಕೊಡಗಿನ ದಕ್ಷಿಣ ಭಾಗದಲ್ಲಿರುವ ಹಾಲೇರಿ ಪಟ್ಟಣಕ್ಕೆ ಆತ ತಲುಪಿದ ಕೂಡಲೇ ಆತ ಹಲವು ಅನುಯಾಯಿಗಳನ್ನು ಆಕರ್ಷಿಸಿದ. ಅವರ ಸಹಾಯದಿಂದ ಅಥವಾ ಒಪ್ಪಿಗೆಯಿಂದ, ಆತ ಆ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡನು, ಮತ್ತು ಅದೇ ರೀತಿಯಿಂದ ಇಡೀ ರಾಜ್ವನ್ನು ಆಳಲು ತೊಡಗಿದನು. ವಂಶಾವಳಿಯ ಪ್ರಕಾರ [] 17ನೇ ಶತಮಾನದಿಂದ 19ನೇ ಶತಮಾನದ ಮಧ್ಯ ಭಾಗದ ವರೆಗೆ ಆಳಿದ ಕೊಡಗು ರಾಜರು:

17ನೇ ಶತಮಾನದ ಆರಂಭದಿಂದ 18ನೇ ಶತಮಾನದ ಮಧ್ಯಭಾಗದವರೆಗೆ ಕೂರ್ಗ್‌ನ ಆಡಳಿತಗಾರರು []
ಆಡಳಿತಗಾರ ಆಡಳಿತದ ಅವಧಿ
ವೀರ ರಾಜ ಗೊತ್ತಿಲ್ಲ
ಅಪ್ಪಾಜಿ ರಾಜಾ ಗೊತ್ತಿಲ್ಲ
ಮುದ್ದುರಾಜ I 1633–1687
ದೊಡ್ಡ ವೀರಪ್ಪ 1687–1736
ಚಿಕ್ಕ ವೀರಪ್ಪ 1736–1766
ಮುದ್ದು ರಾಜ II 1766–1770
ದೇವಪ್ಪ ರಾಜ 1770–1774
ಲಿಂಗ ರಾಜ 1774–1780
ದೊಡ್ಡ ವೀರ ರಾಜೇಂದ್ರ 1780–1809
ಲಿಂಗ ರಾಜ 1809–1820
ವೀರ ರಾಜ 1820–1834 (ಪದಚ್ಯುತ)

1633ರಿಂದ 1687ರ ವರೆಗೆ ಆಳಿದ ಕೊಡಗು ಅರಸ ಮುದ್ದು ರಾಜನು ಪ್ರಾರಂಭದಲ್ಲಿ ಹಾಲೇರಿ ಪಟ್ಟಣದಿಂದ ಆಡಳಿತ ನಡೆಸಿದನು. ನಂತರ ತನ್ನ ರಾಜಧಾನಿಯನ್ನು ಮಡಿಕೇರಿಗೆ ಸ್ಥಳಾಂತರಿಸಿದನು. 1681ರಲ್ಲಿ ಅಲ್ಲಿ ಬಲವಾದ ಕೋಟೆಯನ್ನು ಕಟ್ಟಿ ಅರಮನೆಯನ್ನು ನಿರ್ಮಿಸಿದನು. ಆತನ ಉತ್ತರಾಧಿಕಾರಿಯಾದ ದೊಡ್ಡ ವೀರಪ್ಪ (1687-1736) ನ ಆಡಳಿತದ ಪ್ರಾರಂಭದಲ್ಲಿ ಚಿಕ್ಕ ದೇವರಾಜ ಒಡೆಯರನ ಅಪ್ಪಣೆ ಮೇರೆಗೆ ಮೈಸೂರಿನ ಸೈನ್ಯವು ಪಿರಿಯಾಪಟ್ಟಣದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಿತು (ನಕ್ಷೆ 11 ನೋಡಿ). ಪಿರಿಯಾಪಟ್ಟಣವು ದೊಡ್ಡ ವೀರಪ್ಪನ ಬಂಧುಗಳಿಂದ ಆಳಲ್ಪಟ್ಟ ಪ್ರದೇಶವಾಗಿತ್ತು[] ವಿಜಯದಿಂದ ಉತ್ತೇಜನಗೊಂಡ ಮೈಸೂರು ಸೈನ್ಯವು ಶೀಘ್ರದಲ್ಲೇ ಕೊಡಗಿನ ಮೇಲೆ ದಾಳಿ ಮಾಡಿತು, ಆದರೆ, ಅದು ಸ್ವಲ್ಪ ಅಂತರವನ್ನಷ್ಟೇ ಮುನ್ನಡೆದಿತ್ತು. ಪಲುಪಾರೆ ಎಂಬಲ್ಲಿನ ಮೈದಾನದಲ್ಲಿ ರಾತ್ರಿ ವೇಳೆ ಬಿಡಾರ ಹೂಡಿದ್ದಾಗ ಕೊಡಗಿನ ಹೊಂಚು ದಾಳಿಯಿಂದ ಚಕಿತಗೊಂಡಿತ್ತು. ತರುವಾಯ ನಡೆದ ಹತ್ಯಾಕಾಂಡದಲ್ಲಿ ಮೈಸೂರು ಸೈನ್ಯವು 15,000 ಜವಾನರನ್ನು ಕಳೆದುಕೊಂಡಿತು ಮತ್ತು ಬದುಕಿ ಉಳಿದವರು ಕ್ರಿಪ್ರ ಹಿಮ್ಮೆಟ್ಟುವಿಕೆಯನ್ನು ಸೋಲಿಸಬೇಕಾಯಿತು. ಮುಂದಿನ ಬಹುತೇಕ ಎರಡು ದಶಕಗಳ ಕಾಲ, ಮೈಸೂರಿನ ಪಶ್ಚಿಮದ ಭಾಗಗಳು ಕೊಡಗಿನ ಸೈನ್ಯದ ದಾಳಿಗಳಿಗೆ ತುತ್ತಾಗುತ್ತಿದ್ದವು. ಏಳುಸಾವಿರ ಜಿಲ್ಲೆಯ ಗಡಿಯಲ್ಲಿ ಕೊಡಗು ಮತ್ತು ಮೈಸೂರಿನ ಪಡೆಗಳು ಹೋರಾಡುತ್ತಾ, ಸ್ಥಗಿತಗೊಂಡು, ಅಂತಿಮವಾಗಿ ತೆರಿಗೆಯನ್ನು ಹಂಚಿಕೊಳ್ಳುವ ವ್ಯವಸ್ಥೆಗೆ ಒಪ್ಪಿಕೊಂಡವು.[]

1724ರಲ್ಲಿ ಕೊಡಗು ಮತ್ತು ಮೈಸೂರಿನ ನಡುವೆ ಮತ್ತೆ ಹಗೆತನ ಶುರುವಾಯಿತು. ಕೊಡಗಿನ ಕಾಡಿನ ಬೆಟ್ಟ ಗುಡ್ಡಗಳಲ್ಲಿ ನಡೆಸುತ್ತಿದ್ದ ಗೆರಿಲ್ಲಾ ಯುದ್ಧದ ವಿಧಾನವನ್ನು ಬದಲಿಸಿದ ದೊಡ್ಡ ವೀರಪ್ಪನು, ಮೈಸೂರು ಸೈನ್ಯದ ವಿರುದ್ಧ ಬಯಲು ಪ್ರದೇಶದಲ್ಲಿ ದಾಳಿ ಮಾಡಿದನು. ಅನಿರೀಕ್ಷಿತ ದಾಳಿಯ ಮೂಲಕ ಪಿರಿಯಾಪಟ್ಟಣದಿಂದ ಅರಕಲಗೂಡಿನ ವರೆಗೆ ಆರು ಕೋಟೆಗಳನ್ನು ತ್ವರಿತವಾಗಿ ವಶಪಡಿಸುವಲ್ಲಿ ಆತ ಯಶಸ್ವಿಯಾದ. ಪರಿಣಾಮವಾಗಿ ಮೈಸೂರಿಗೆ 6,00,000 ಚಿನ್ನದ ಪಗೋಡಗಳ ಆದಾಯ ನಷ್ಟವಾಯಿತು. ಕೆಲವು ತಿಂಗಳ ಬಳಿಕ, 1724ರ ಸಪ್ಟೆಂಬರ್‌ನಲ್ಲಿ, ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣದಿಂದ ಕೊಡಗಿಗೆ ದೊಡ್ಡ ಸೈನ್ಯವನ್ನು ಕಳುಹಿಸಲಾಯಿತು. ಕಳುಹಿಸಲಾಯಿತು. ಮೈಸೂರಿನ ಸೈನ್ಯವು ಪಶ್ಚಿಮ ಪ್ರದೇಶದಲ್ಲಿ ಆಗಮಿಸುತ್ತಿದ್ದಂತೆ, ಕೊಡಗಿನ ಪಡೆ ಮತ್ತೆ ಗೆರಿಲ್ಲಾ ಯುದ್ಧತಂತ್ರಕ್ಕೆ ಮರಳಿ, ಶತ್ರುಗಳನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸುತ್ತದೆ. ಆದರೂ ಪ್ರತಿರೋಧದ ಕೊರತೆಯಿಂದ ಧೈರ್ಯ ಗಳಿಸಿಕೊಂಡ ಮೈಸೂರು ಪಡೆಯು, ನಂತರ ಕೊಡಗಿನ ಬೆಟ್ಟಗಳ ಮೇಲೆ ದಾಳಿ ಸಂಘಟಿಸುತ್ತದೆ. ಅಲ್ಲಿಯೂ ಅವರಿಗೆ ಪ್ರತಿರೋಧ ಎದುರಾಗಲಿಲ್ಲ. ಆದರೆ, ಆಕ್ರಮಣದ ಕೆಲವೇ ದಿನಗಳಲ್ಲಿ, ಮೈಸೂರು ಸೈನ್ಯಕ್ಕೆ 1690ರಲ್ಲಿ ಎದುರಾದ ಅವಮಾನಕಾರಿ ಹೊಂಚು ದಾಳಿಯ ಸೋಲಿನ [clarification needed] ನೆನಪಾಗಿ, ಭಯಭೀತರಾಗಿ ಹಿಮ್ಮೆಟ್ಟುತ್ತಾರೆ..[] ಕೊಡಗಿನ ಸೈನ್ಯವು ಮತ್ತೆ ಹೊರ ಠಾಣೆಗಳ ಮೇಲೆ ದಾಳಿ ಮಾಡುತ್ತದೆ. ಹೀಗೆ ಮುನ್ನಡೆ ಮತ್ತು ಹಿನ್ನಡೆ ಮುಂದುವರಿದಾಗ ಕೆಲ ತಿಂಗಳ ಬಳಿಕ ಮೈಸೂರು ಸೈನ್ಯವನ್ನು ಶ್ರೀರಂಗಪಟ್ಟಣಕ್ಕೆ ಮರಳಿ ಕರೆಸಲಾಗುತ್ತದೆ. ಹೀಗಾಗಿ ಈ ಪ್ರದೇಶವು ದುರ್ಬಲವಾಗಿ ಮತ್ತೆ ಕೊಡಗಿನ ಸೈನ್ಯದ ಸತತ ದಾಳಿಗೆ ಒಳಪಡುತ್ತದೆ.[] ಇತಿಹಾಸಕಾರ ಸಂಜಯ್ ಸುಬ್ರಹ್ಮಣ್ಯಂ ಪ್ರಕಾರ:

ಇಡೀ ಸಂಚಿಕೆಯು 18 ನೇ ಶತಮಾನದಲ್ಲಿ ಯುದ್ಧದ ಒಂದು ಅಂಶದ ಬಗ್ಗೆ ಅಪರೂಪದ ಒಳನೋಟವನ್ನು ನೀಡುತ್ತದೆ: (ಕೂರ್ಗ್) ಪಡೆಗಳು, ಅಶ್ವದಳದ ಕೊರತೆ, ಕನಿಷ್ಠ ಬಂದೂಕುಗಳೊಂದಿಗೆ, ಪ್ರತಿ ಪ್ರಮುಖ ಯುದ್ಧವನ್ನು ಕಳೆದುಕೊಂಡಿತು, ಆದರೆ ಎರಡು ಅಂಶಗಳಿಂದ ಯುದ್ಧವನ್ನು ಗೆದ್ದಿತು. ಮೊದಲನೆಯದಾಗಿ, ಭೂಪ್ರದೇಶ ಮತ್ತು ನಿಯತಕಾಲಿಕವಾಗಿ ಕಾಡಿನ ಬೆಟ್ಟದ ಕಡೆಗೆ ಹಿಮ್ಮೆಟ್ಟುವ ಸಾಧ್ಯತೆಯು ಅವರ ತುಲನಾತ್ಮಕವಾಗಿ ಬೃಹದಾಕಾರದ ಎದುರಾಳಿಗಳಿಗೆ ವ್ಯತಿರಿಕ್ತವಾಗಿ ಅವರಿಗೆ ಒಲವು ತೋರಿತು. ಎರಡನೆಯದಾಗಿ, ಒಡೆಯರ್ ಸಾಮ್ರಾಜ್ಯವು ಹಲವಾರು ತೆರೆದ ಗಡಿಗಳನ್ನು ಹೊಂದಿದ್ದ ಕಾರಣ ಮೈಸೂರು ಸೇನೆಯು ಈ ಪ್ರದೇಶದಲ್ಲಿ ಶಾಶ್ವತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ರಾಜನ ಮೊಮ್ಮಗ ಚಿಕ್ಕವೀರಪ್ಪ ಆತನ ಉತ್ತರಾಧಿಕಾರಿಯಾದನು. ಗಮನಾರ್ಹವಲ್ಲದ ಆತನ ಆಳ್ವಿಕೆಯು 1768ರ ವರೆಗೆ ಮುಂದುವರಿಯಿತು. 1768ರಲ್ಲಿ ಕೊಡಗನ್ನು ಮೈಸೂರಿನ ಹೊಸ ಸುಲ್ತಾನನಾದ ಹೈದರಾಲಿಯು ವಶಪಡಿಸಿಕೊಂಡನು.

ನಂತರದ ಇತಿಹಾಸ

ಬದಲಾಯಿಸಿ

1780ರಲ್ಲಿ, ಕೊಡಗಿನ ಮೇಲೆ ಮೈಸೂರಿನ ಹೈದರಾಲಿ ಆಕ್ರಮಣ ಮಾಡಿದನು ಮತ್ತು ರಾಜ್ಯವನ್ನು ಸ್ವಾಧೀನಪಡಿಸಿಕೊಂಡನು. ಎಂಟು ವರ್ಷಗಳ ಕಾಲ ಮಡಿಕೇರಿಯು ಮೈಸೂರಿನ ಭಾಗವಾಗಿತ್ತು. 1788ರಲ್ಲಿ, ಬ್ರಿಟಿಷ್ ಹಸ್ತಕ್ಷೇಪದ ಮೂಲಕ, ಕೊಡಗಿನ ರಾಜನು ತನ್ನ ರಾಜ್ಯವನ್ನು ಮರಳಿ ಪಡೆದರು. ಅವರೊಡನೆ ಒಪ್ಪಂದಕ್ಕೆ ಬರುವ ಮೂಲಕ ಅವನು ಕೊಡಗನ್ನು ಬ್ರಿಟಿಷರ ರಕ್ಷಣೆಯಡಿಗೆ ತಂದನು.

1790ರಿಂದ 1834ರ ವರೆಗೆ, ಕೊಡಗು ಬ್ರಿಟಿಷ್ ಭಾರತದ ನಿಯಂತ್ರಣಕ್ಕೊಳಪಟ್ಟ ರಾಜ್ಯವಾಗಿ ಉಳಿಯಿತು. 1834ರಲ್ಲಿ, ಕೊಡಗಿನ ಆಗಿನ ರಾಜನು ಬ್ರಿಟಿಷರಿಗೆ ತನ್ನ ನಿಷ್ಠೆಯನ್ನು ಬದಲಿಸಲು ಪ್ರಯತ್ನಿಸಿದನು. ಅದು ಕೊಡಗು ಯುದ್ಧಕ್ಕೆ ಕಾರಣವಾಯಿತು. ಅಂತಿಮವಾಗಿ ರಾಜ್ಯವನ್ನು ಬ್ರಿಟಿಷ್ ಸಂಸ್ಥಾನಕ್ಕೆ ಸೇರಿಸಿ ಕೊಡಗು ಪ್ರಾಂತ್ಯ ಮಾಡಲಾಯಿತು.

ಪರಂಪರೆ

ಬದಲಾಯಿಸಿ

ಇಂದಿನ ಮಡಿಕೇರಿಯನ್ನು ಹಿಂದೆ ಮುದ್ದುರಾಜ ಕೇರಿ ಎಂದು ಕರೆಯಲಾಗುತ್ತಿತ್ತು (ಅಂದರೆ ಮುದ್ದುರಾಜನ ಪಟ್ಟಣ). 1633-1687ರಲ್ಲಿ ಕೊಡಗನ್ನು ಆಳಿದ ಪ್ರಮುಖ ರಾಜ ಮುದ್ದುರಾಜನ ಹೆಸರನ್ನು ಅದಕ್ಕೆ ಇಡಲಾಯಿತು. ಇಂದಿನ ವಿರಾಜಪೇಟೆಯ ಹೆಸರು ವೀರರಾಜೇಂದ್ರಪೇಟೆಯಿಂದ ಬಂದಿದೆ. ಇದು ಹಾಲೇರಿಯ ರಾಜ ದೊಡ್ಡ ವೀರರಾಜೇಂದ್ರನಿಂದ ಸ್ಥಾಪಿಸಲ್ಪಟ್ಟ ಪಟ್ಟಣವಾಗಿದೆ. ಆತನ ಹೆಸರಿನಿಂದ ನಗರವು ಅದರ ಹೆಸರನ್ನು ಪಡೆದುಕೊಂಡಿದೆ. [] []

ಚಿಕ್ಕ ವೀರರಾಜೇಂದ್ರನು ಕೊಡಗಿನ ಕೊನೆಯ ದೊರೆ. ಕನ್ನಡ ಸಾಹಿತಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಆ ಅರಸನ ಜೀವನ ಮತ್ತು ಕಾಲವನ್ನು ಆಧರಿಸಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿಕವೀರ ರಾಜೇಂದ್ರ ಎಂಬ ಪುಸ್ತಕವನ್ನು ಬರೆದಿದ್ದಾರೆ. ದೊಡ್ಡ ವೀರರಾಜೇಂದ್ರ ರಾಜನು ನಾಲ್ಕನಾಡ್ ಅರಮನೆಯನ್ನು ನಿರ್ಮಿಸಿದನು. []

ಗ್ಯಾಲರಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  • Rice, Lewis (1878), "History of Coorg", Mysore and Coorg, A Gazetteer compiled for the Government, Volume 3, Coorg, Bangalore: Mysore Government Press. p. 427
  • Government of Coorg (1953), Handbook of Coorg Census-1951 (PDF), Assistant Commissioner and District Census Officer, Coorg
  1. "Portico of the Coorg Rajah's Palace at Somwaspett". The Wesleyan Juvenile Offering: A Miscellany of Missionary Information for Young Persons. Wesleyan Missionary Society. X: 48. May 1853. Retrieved 29 February 2016.
  2. ೨.೦ ೨.೧ ೨.೨ Richter, G. (2016). Manual of Coorg: a gazetteer of the natural features of the country and the social and political condition of its inhabitants. Forgotten Books. ISBN 978-1-333-86309-8. OCLC 980488785.
  3. ೩.೦ ೩.೧ Rice, Benjamin Lewis (1878). Mysore and Coorg, a gazetteer. p. 100. Retrieved 28 June 2018.
  4. ೪.೦ ೪.೧ ಉಲ್ಲೇಖ ದೋಷ: Invalid <ref> tag; no text was provided for refs named subrah212rice106
  5. ೫.೦ ೫.೧ ಉಲ್ಲೇಖ ದೋಷ: Invalid <ref> tag; no text was provided for refs named subrah-1989-pp218-219
  6. ೬.೦ ೬.೧ Mookonda, Kushalappa (10 January 2017). "The set-up of Kodagu's royal cemetery". Deccan Herarld. Retrieved 25 November 2021. ಉಲ್ಲೇಖ ದೋಷ: Invalid <ref> tag; name "DH1" defined multiple times with different content
  7. "On the Haleri trail". No. 17 August 2009. Deccan Herald. Retrieved 28 June 2018.