ಕೈಟಿನ್ ಸಂಧಿಪದಿಗಳ, ವಲಯವಂತಗಳ ಮತ್ತು ಬಹುಪಾಲು ಬಗೆಯ ಶಿಲೀಂಧ್ರಗಳ ಶರೀರ ರಚನೆಯಲ್ಲಿ ಕಾಣಬರುವ ಪ್ರಮುಖ ಬಗೆಯ ಬಹುಶರ್ಕರ (ಪಾಲಿಸ್ಯಾಕರೈಡ್).

Structure of the chitin molecule, showing two of the N-acetylglucosamine units that repeat to form long chains in β-1,4 linkage.
A close-up of the wing of a sap beetle; the wing is composed of chitin.

ರಚಬೆ ಬದಲಾಯಿಸಿ

ಕವಲೊಡೆಯದ ಬಲು ಉದ್ದವಾದ ಸರಪಳಿಯಂತಿರುವ ಕೈಟಿನ್ ಅಣು ಎನ್-ಅಸಿಟೈಲ್-ಗ್ಲೂಕೋಸಮೈನಿನ (N-Acetylglucosamine|N-acetylglucosamine,) ಸಾವಿರಾರು ಘಟಕಗಳಿಂದ ರಚಿತವಾಗಿದೆ. ಈ ಘಟಕಗಳು β-1,4 ಗ್ಲೈಕೊಸಿಡಿಕ್ ಬಂಧಗಳಿಂದ ಪರಸ್ಪರ ಸೇರಿಕೊಂಡಿವೆ. ಸ್ವಾಭಾವಿಕವಾಗಿ ಕೈಟಿನ್ ಪ್ರೋಟೀನುಗಳೊಂದಿಗೆ ಕೂಡಿಕೊಂಡು ಗ್ಲೈಕೋ ಪ್ರೋಟೀನ್ ರೂಪದಲ್ಲಿ ಸ್ಥಿತವಾಗಿರುತ್ತದೆ.

ಲಕ್ಷಣಗಳು ಬದಲಾಯಿಸಿ

ಕೈಟಿನ್‍ನ ಸಂರಚನೆಯನ್ನು ೧೯೨೯ರಲ್ಲಿ ಆಲ್ಬರ್ಟ್ ಹಾಫ್‍ಮನ್ಪರಿಹರಿಸಿದ.[೧]

ಪೊಟಾಸಿಯಮ್ ಇಲ್ಲವೆ ಸೋಡಿಯಮ್ ಹೈಡ್ರಾಕ್ಸೈಡುಗಳೊಂದಿಗೆ ಕಾಯಿಸಿ ಅನಂತರ ಸಾರರಿಕ್ತ ಆಮ್ಲ ಮತ್ತು ಪ್ರಬಲವಾದ ಉತ್ಕರ್ಷಣಕಾರಿಯೊಂದಿಗೆ ವರ್ತಿಸುವುದರಿಂದ ಕೈಟಿನ್ನನ್ನು ಶುದ್ಧ ರೂಪದಲ್ಲಿ ಪಡೆಯಬಹುದು. ಶುದ್ಧರೂಪದ ಕೈಟಿನ್ ಬಣ್ಣವಿಲ್ಲದ ಪುಡಿಯಂತಿರುತ್ತದೆ; ನೀರಿನಲ್ಲಾಗಲಿ ಸಾರರಿಕ್ತ ಆಮ್ಲ ಇಲ್ಲವೆ ಕ್ಷಾರಗಳಲ್ಲಾಗಲೀ ಕರಗುವುದಿಲ್ಲ. ಆದರೆ ಸಾರ ಆಮ್ಲಗಳೊಂದಿಗೆ ಇಲ್ಲವೆ ಕೈಟಿನೇಸ್ ಎಂಬ ಕಿಣ್ವದೊಂದಿಗೆ ಸೇರಿಸಿ ಬಹುಕಾಲ ಇಟ್ಟರೆ ಜಲವಿಶ್ಲೇಷಣೆಗೊಳಗಾಗುತ್ತದೆ. ಕೈಟಿನ್ನಿನ ಸ್ವಾಭಾವಿಕ ಸಂಶ್ಲೇಷಣೆಗೆ UಆP-ಓ-ಅಸಿಟೈಲ್ ಗ್ಲೂಕೋಸಮೈನ್ ಎಂಬ ಪೂರ್ವಗಾಮಿ ಸಂಯುಕ್ತ ಹಾಗೂ ನಿರ್ದಿಷ್ಟ ಬಗೆಯ ಕಿಣ್ವ ಬೇಕು. ಅಲ್ಲದೆ ಅತ್ಯಲ್ಪ ಮೊತ್ತದಲ್ಲಿ ಮೊದಲೇ ತಯಾರಾದ ಈ ಬಹುಶರ್ಕರವಾಗಲೀ ಅದರಿಂದ ಉತ್ಪತ್ತಿಯಾಗುವ ಕಡಿಮೆ ಅಣುತೂಕದ ಡೆಕ್ಸ್‍ಟ್ರಿನ್ ಆಗಲಿ ಅವಶ್ಯಕ ಎಂದು ತೋರುತ್ತದೆ. ಇವು ಹೊಸ ಕೈಟಿನ್ ಅಣುಗಳ ಸಂಶ್ಲೇಷಣೆಗೆ ಮಾದರಿಗಳಾಗುತ್ತವೆ. ಬಸವನಹುಳು, ಭೂಮಿಯಲ್ಲಿ ವಾಸಿಸುವ ಬ್ಯಾಕ್ಟೀರಿಯ, ಎರೆಹುಳು ಮುಂತಾದ ಪ್ರಾಣಿಗಳಲ್ಲಿ ಕೈಟಿನ್ನನ್ನು ವಿಭಜಿಸುವ ಕಿಣ್ವವಾದ ಕೈಟನೇಸ್ ಎಂಬುದು ಕಂಡುಬರುತ್ತದೆ.

ಔಷಧವಾಗಿ ಬದಲಾಯಿಸಿ

ಕೈಟಿನ್ ಔಷಧವಾಗಿ ಮನುಷ್ಯರ ಗಾಯಗಳನ್ನು ಕ್ಷಿಪ್ರವಾಗಿ ಗುಣಪಡಿಸುವ ಶಕ್ತಿ ಹೊಂದಿರುವುದು ಕಂಡುಬಂದಿದೆ.[೨][೩][೪]

ಉಲ್ಲೇಖಗಳು ಬದಲಾಯಿಸಿ

  1. Hofmann hydrolyzed chitin using a crude preparation of the enzyme chitinase, which he obtained from the snail Helix pomatia. See:
    • A. Hofmann (1929) "Über den enzymatischen Abbau des Chitins und Chitosans" (On the enzymatic degradation of chitin and chitosan), Ph.D. thesis, University of Zurich (Zurich, Switzerland).
    • P. Karrer and A. Hofmann (1929) "Polysaccharide XXXIX. Über den enzymatischen Abbau von Chitin and Chitosan I," Helvetica Chimica Acta, 12 (1) : 616-637.
    • Nathaniel S. Finney and Jay S. Siegel (2008) "In Memorian: Albert Hofmann (1906-2008)," Chimia, 62 (5) : 444-447 ; see page 444. Available on-line at: University of Zurich Archived 2013-06-16 ವೇಬ್ಯಾಕ್ ಮೆಷಿನ್ ನಲ್ಲಿ.
  2. Bhuvanesh Gupta; Abha Arorab; Shalini Saxena; Mohammad Sarwar Alam (July 2008). "Preparation of chitosan–polyethylene glycol coated cotton membranes for wound dressings: preparation and characterization". Polymers for Advanced Technologies. 20: 58–65. doi:10.1002/pat.1280.[ಶಾಶ್ವತವಾಗಿ ಮಡಿದ ಕೊಂಡಿ]
  3. Morganti, P.; Tishchenko, G.; Palombo, M.; Kelnar, I.; Brozova, L.; Spirkova, M.; Pavlova, E.; Kobera, L.; Carezzi, F (2013), "Chitin Nanofibrils for Biomimetic Products: Nanoparticles and Nanocomposite Chitosan Films in Health Care", in Kim, See-Kwon (ed.), Marine Biomaterials. Characterization, Isolation and Application, CRC-Press, pp. 681–715
  4. Morganti P, Fabrizi G, et al. (2012). "Anti-aging activity of chitin nanofibrils complexes". The Journal of Nutrition, Health & Aging. 16 (3): 242–245. doi:10.1007/s12603-011-0358-0.

ಬಾಹ್ಯ ಸಂಪರ್ಕಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೈಟಿನ್&oldid=1124681" ಇಂದ ಪಡೆಯಲ್ಪಟ್ಟಿದೆ