ಕೇಡಲ್ ಇವಾನ್ಸ್
ಕೇಡಲ್ ಲೀ ಇವಾನ್ಸ್ (1977 ಫೆಬ್ರವರಿ 14ರಲ್ಲಿ ಜನನ) ಆಸ್ಟ್ರೇಲಿಯನ್ ವೃತ್ತಿಪರ ಬೈಸಿಕಲ್ ರೇಸಿಂಗ್ ಸ್ಪರ್ಧಿ. ಇವರು UCI ಪ್ರೊಫೆಷನಲ್ ಕಾಂಟಿನೆಂಟಲ್ ತಂಡದ ಪರ ಸ್ಪರ್ಧಿಸುತ್ತಾರೆ.BMC Racing Team 2007ರಲ್ಲಿ ಇವಾನ್ಸ್ UCI ಪ್ರೊ ಟೂರ್(ರಸ್ತೆ ಬೈಸಿಕಲ್ ರೇಸುಗಳ ಸರಣಿ)ನಲ್ಲಿ ಜಯಗಳಿಸಿದ ಪ್ರಥಮ ಆಸ್ಟ್ರೇಲಿಯನ್ ಎನಿಸಿದರು. ಅವರು ಆಸ್ಟ್ರೇಲಿಯನ್ನರಾಗಿ ಅತ್ಯಧಿಕ ಟೂರ್ ಡೆ ಫ್ರಾನ್ಸ್ ಬೈಸಿಕಲ್ ರೇಸ್ ಸ್ಪರ್ಧೆಯ ಮುಕ್ತಾಯಗಳನ್ನು ಕಂಡಿದ್ದು, 2007 ಮತ್ತು 2008ರಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ರಸ್ತೆ ಸೈಕ್ಲಿಂಗ್‌ಗೆ 2001ರಲ್ಲಿ ಕಾಲಿಡುವ ಮುಂಚೆ, ಇವಾನ್ಸ್ ಚಾಂಪಿಯನ್ ಮೌಂಟನ್ ಬೈಕರ್(ಕಡಿದಾದ ಪ್ರದೇಶಗಳಲ್ಲಿ ಬೈಸಿಕಲ್ ರೇಸ್ ಸ್ಪರ್ಧಿ) ಆಗಿದ್ದರು. ಮೊದಲಿಗೆ ಡೈಮಂಡ್‌ಬ್ಯಾಕ್ MTB ತಂಡ,ನಂತರ ವೋಲ್ವೊ-ಕ್ಯಾನ್ನೊಡೇಲ್ MTB ತಂಡದ ಪರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಶ್ವ ಕಪ್‌ನ್ನು 1998 ಮತ್ತು 1999ರಲ್ಲಿ ಗೆದ್ದುಕೊಂಡರು ಹಾಗು ಸಿಡ್ನಿಯ 2000 ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಪುರುಷರ ಹಳ್ಳಿಗಾಡಿನ ಮೌಂಟೇನ್ ಬೈಕ್ ರೇಸ್‌ನಲ್ಲಿ 7ನೇ ಸ್ಥಾನ ಗಳಿಸಿದರು. ಅವರು ಸ್ವಿಜರ್‌ಲ್ಯಾಂಡ್‌ನ ಮೆಂಡ್ರಿಸಿಯೊನಲ್ಲಿ 2009ರ ಸೆಪ್ಟೆಂಬರ್ 27ರಂದು UCI ರಸ್ತೆ ವಿಶ್ವ ಚಾಂಪಿಯನ್‌ಶಿಪ್ ಸೈಕ್ಲಿಂಗ್ ಸ್ಪರ್ಧಾವಳಿಯಲ್ಲಿ ಜಯಗಳಿಸಿದ ಪ್ರಥಮ ಆಸ್ಟ್ರೇಲಿಯನ್ ಎನಿಸಿದರು.[೧] ಇವಾನ್ಸ್ ನಾರ್ದರ್ನ್ ಟೆರಿಟರಿಯ ಕ್ಯಾಥೆರಿನ್‌ನಲ್ಲಿ ಜನಿಸಿದರು. ಅವರು ಇಟಲಿಯ ಸಂಗೀತದ ಶಿಕ್ಷಕಿ ಚಿಯಾರ ಪ್ಯಾಸೆರಿನಿ ಅವರನ್ನು ವಿವಾಹವಾದರು. 2002ರ ಕೊನೆಯಲ್ಲಿ ಪ್ಯಾಸೆರನಿಯ ತಂದೆಯ ಸ್ನೇಹಿತರಿಂದ ಪರಿಚಯವಾದ ನಂತರ ಇವಾನ್ಸ್ ಪ್ಯಾಸೆರನಿಯನ್ನು ಭೇಟಿ ಮಾಡಿದರು. ತಂದೆಯ ಸ್ನೇಹಿತರು ಮಾಪೇಯಿ ತಂಡದ(ಆ ಸಮಯದ)ತರಬೇತಿ ಕೇಂದ್ರದ ಬಳಿ ಆಸ್ಟ್ರೇಲಿಯನ್ ಸ್ಪರ್ಧಿಯ ವಸತಿಗೆ ನೆರವಾಗಿದ್ದರು. ಇವಾನ್ಸ್ ವೇಲ್ಸ್‌ನಿಂದ ಬಂದ ತಮ್ಮ ಮುತ್ತಜ್ಜನಿಂದ ಅವರ ಕುಲನಾಮವನ್ನು ಆನುವಂಶಿಕವಾಗಿ ಪಡೆದರು. ಅವರ ಪ್ರಥಮ ಹೆಸರು ವೆಲ್ಶ್ ಮೂಲದ್ದೆಂದು ಕೂಡ ಅವರು ನಂಬಿದ್ದಾರೆ.[೨] ಇವಾನ್ಸ್ ತಮ್ಮ ಬಾಲ್ಯದ ವರ್ಷಗಳಲ್ಲಿ ವಿಕ್ಟೋರಿಯ ಮೆಲ್ಬರ್ನ್‌ನ ಎಲ್ತಾಮ್ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದರು.
ವೃತ್ತಿಜೀವನ
ಬದಲಾಯಿಸಿಆರಂಭದ ದಿನಗಳು
ಬದಲಾಯಿಸಿಇವಾನ್ಸ್ ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ MTB ತಂಡದ ಸ್ಪರ್ಧಿಯಾಗಿ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಮುಖ್ಯ ತರಬೇತುದಾರ ಹೈಕೊ ಸಲ್ಜ್‌ವೆಡಲ್ ಮತ್ತು MTB ತರಬೇತುದಾರ ಡೇಮಿಯನ್ ಗ್ರಂಡಿ ನೇತೃತ್ವದಲ್ಲಿ ಆರಂಭಿಸಿದರು.
ಅವರು 1997 ಮತ್ತು 1999ರ 23 ವಯೋಮಾನಕ್ಕಿಂತ ಕೆಳಗಿನವರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದರು ಹಾಗು 1995ರ ಕಿರಿಯರ ವಿಶ್ವ ರಸ್ತೆ ಟೈಮ್ ಟ್ರಯಲ್(ಅವಧಿಯೊಳಗೆ ಮುಗಿಸುವ ಬೈಸಿಕಲ್ ರೇಸ್ ಪರೀಕ್ಷೆ) ಚಾಂಪಿಯನ್‌ಶಿಪ್ ಮತ್ತು ಕಿರಿಯ ವಿಶ್ವ ಮೌಂಟೇನ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಗಳನ್ನು ಗೆದ್ದರು.
ಅವರು ಸಾಯಿಕೊ (2001), ಮಾಪೇಯಿ (2002) ಮತ್ತುಟೀಮ್ ಟೆಲಿಕಾಂ (2003–2004)ತಂಡಗಳ ಪರವಾಗಿ ಸ್ಪರ್ಧಿಸಿದರು.
2005ರಲ್ಲಿ ಅವರು ಡೆವಿಟಾಮಾನ್-ಲೊಟ್ಟೊಗೆ ಸೇರಿದರು ಮತ್ತು ಪ್ರಥಮ ಟೂರ್ ಡೆ ಫ್ರಾನ್ಸ್‌ನಲ್ಲಿ 8ನೇ ಸ್ಥಾನ ಗಳಿಸಿದರು. ಫಿಲ್ ಆಂಡರ್‌ಸನ್ ನಂತರ ಅಗ್ರ ಹತ್ತು ಸ್ಥಾನಗಳಲ್ಲಿ ಉಳಿದ(ಟಾಪ್ ಟೆನ್) ಪ್ರಥಮ ಆಸ್ಟ್ರೇಲಿಯನ್ ಎನಿಸಿದರು.
ಮುಂಚಿನ ಯಶಸ್ಸುಗಳಲ್ಲಿ ಟೂರ್ ಆಫ್ ಆಸ್ಟ್ರಿಯದ 2001 ಮತ್ತು 2004ರ ಆವೃತ್ತಿಗಳಲ್ಲಿ ಒಟ್ಟಾರೆ ಜಯಗಳು, 2005ರ ಡೈಚಿಲ್ಯಾಂಡ್ ಟೂರ್‌ನಲ್ಲಿ ಐದನೇ ಸ್ಥಾನ, 2002ರ ಟೂರ್ ಡೌನ್ ಅಂಡರ್‌ನಲ್ಲಿ ಒಂದು ಹಂತದ ಜಯ, 2006ರ ಟೂರ್ ಡೌನ್ ಅಂಡರ್‌ನ ಮೌಂಟೇನ್ಸ್ ಕ್ಲಾಸಿಫಿಕೇಷನ್‌ನಲ್ಲಿ ಜಯ, 2002ರ ಗಿರೊ ಡಿ ಇಟಾಲಿಯ(ಒಂದು ದಿನಕ್ಕಾಗಿ ಅವರು ಲೀಡರ್ಸ್ ಜರ್ಸಿ, ಮಗಾಲಿಯ ರೋಸಾ ವನ್ನು ಧರಿಸಿದ್ದರು) ಮತ್ತು 2002ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಟೈಮ್ ಟ್ರಯಲ್ ಚಾಂಪಿಯನ್ ಪಟ್ಟ ಸೇರಿವೆ.
2006
ಬದಲಾಯಿಸಿಇವಾನ್ಸ್ 2006ರಲ್ಲಿ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಂಡು, ಫ್ಲಾಯಿಡ್ ಲ್ಯಾಂಡಿಸ್ ಅನರ್ಹತೆ ನಂತರ ಟೂರ್ ಡೆ ಫ್ರಾನ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಅವರು ಸ್ಪೇನ್ ದೇಶದವರಾದ ಆಲ್ಬರ್ಟೊ ಕೊಂಟಡೋರ್ ಮತ್ತು ಅಲೆಜಾಂದ್ರೊ ವಲ್ವರ್ಡೆ ಅವರ ವಿರುದ್ಧ ಕೊನೆಯ ಹಂತದಲ್ಲಿ ಸೋಲಿಸುವ ಮೂಲಕಟೂರ್ ಡೆ ರೊಮಾಂಡಿಗೆದ್ದುಕೊಂಡರು. ಇದು ಲುಸಾನೆ ಸುತ್ತ 20 ಕಿಮೀಗಳ ಟೈಮ್ ಟ್ರಯಲ್(ಅವಧಿಯೊಳಗೆ ಮುಗಿಸುವ ರೇಸ್).
2007
ಬದಲಾಯಿಸಿಅವರು 2007ರ ಟೂರ್ ಡೆ ಫ್ರಾನ್ಸ್‌ನಲ್ಲಿ ಕೊಂಟಡೊರ್ ನಂತರ ರನ್ನರ್ ಅಪ್ ಸ್ಥಾನ ಗಳಿಸಿದರು. ಅವರು ಹಂತ 13 ಟೈಮ್ ಟ್ರಯಲ್‌ನಲ್ಲಿ ಜಯಗಳಿಸಿದರು ಹಾಗು ಹಂತ 19 ಟೈಮ್ ಟ್ರಯಲ್‌ನಲ್ಲಿ ಎರಡನೇ ಸ್ಥಾನ ಗಳಿಸಿದರು. ಇವಾನ್ಸ್ 2007 ವುಯೆಲ್ಟಾ ಎ ಎಸ್ಪಾನಾದಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಮತ್ತು ಅಂತಿಮ UCI ಪ್ರೊ ಟೂರ್ರೇಸ್ ಗಿರೊ ಡಿ ಲೊಂಬಾರ್ಡಿಯದಲ್ಲಿ ಆರನೇ ಸ್ಥಾನ ಗಳಿಸಿದರು ಹಾಗು 2007UCI ಪ್ರೊ ಟೂರ್‌ನಲ್ಲಿ 247 ಪಾಯಿಂಟ್‌ಗಳನ್ನು ಗಳಿಸಿ, ಡೆವೈಡ್ ರೆಬೆಲಿನ್ ಮತ್ತು ಆಲ್ಬರ್ಟೊ ಕೋಂಟಾಡೋರ್ ಅವರಿಗಿಂತ ಮುನ್ನಡೆ ಸಾಧಿಸಿದರು.
2006 ಮತ್ತು 2007ರಲ್ಲಿ ಅವರನ್ನು ಆಸ್ಟ್ರೇಲಿಯದ ವರ್ಷದ ಸೈಕ್ಲಿಸ್ಟ್ ಎಂದು ಹೆಸರಿಸಲಾಯಿತು.
2008
ಬದಲಾಯಿಸಿಇವಾನ್ಸ್ 2008 ಟೂರ್ ಡೆ ಫ್ರಾನ್ಸ್ ಜಯಗಳಿಸುವಲ್ಲಿ ನೆಚ್ಚಿನ ಆಟಗಾರರಾಗಿದ್ದರು. ಏಕೆಂದರೆ ಕೊಂಟಾಡೊರ್ ಅವರ ತಂಡವಾದ ಆಸ್ಟಾನಾವನ್ನು ಆಹ್ವಾನಿಸದೇ ಇದ್ದಿದ್ದರಿಂದ ಕೊಂಟಾಡೊರ್ ಅವರಿಗೆ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ಇವಾನ್ಸ್ 10ರಿಂದ 14ನೇ ಹಂತಗಳವರೆಗೆ ಹಳದಿ ಜರ್ಸಿಯನ್ನು ಹೊಂದಿದ್ದರು. ಆದಾಗ್ಯೂ,ಹಂತ 17ರ ಆಲ್ಪೆ ಡಿ ಹ್ಯೂಜ್ ಸಂದರ್ಭದಲ್ಲಿ, ತಂಡ CSC ಯ ಕಾರ್ಲೊಸ್ ಸಾಸ್ಟ್ರೆ ಇವಾನ್ಸ್ ಅವರಿಗಿಂತ 2 ನಿಮಿಷ, 15 ಸೆಕೆಂಡುಗಳಲ್ಲಿ ಮುನ್ನಡೆ ಗಳಿಸಿದರು. ಅಂತಿಮ ಹಂತದ ಟೈಮ್ ಟ್ರಯಲ್‌ನಲ್ಲಿ, ಇವಾನ್ಸ್ ಸಾಸ್ಟ್ರೆ ಅವರಿಗಿಂತ 1 ನಿಮಿಷ 34 ಸೆಕೆಂಡುಗಳನ್ನು ವೇಗವಾಗಿ ಸೈಕಲ್ ಸವಾರಿ ಮಾಡುವ ಅಗತ್ಯವಿತ್ತು. ಅವರು ಸಾಸ್ಟ್ರೆಯನ್ನು ಹಿಮ್ಮೆಟ್ಟಿಸಿ ಎರಡನೇ ಸ್ಥಾನ ಗಳಿಸಿದರೂ, ಟೂರ್ ಕೊನೆಯಲ್ಲಿ 58 ಸೆಕೆಂಡುಗಳಷ್ಟು ಹಿಂದುಳಿದರು. ಮುಂಭಾಗದ ಅಸ್ಥಿರಜ್ಜು ಛಿದ್ರತೆಯಿಂದ ಚೇತರಿಸಿಕೊಂಡ ಬಳಿಕ,[೩] ಇವಾನ್ಸ್ 245 ಕಿಮೀ ದೂರದ ಬೀಜಿಂಗ್ ಒಲಿಂಪಿಕ್ಸ್ ಪುರುಷರ ರಸ್ತೆ ರೇಸ್‌ನಲ್ಲಿ ಸ್ಪರ್ಧಿಸಿ 15ನೇ ಸ್ಥಾನ ಗಳಿಸಿದರು ಹಾಗು ಸಾಮ್ಯುಯೆಲ್ ಸಾಂಚೆಜ್ ಅವರಿಗಿಂತ 22 ಸೆಕೆಂಡುಗಳ ಕಾಲ ಹಿಂದುಳಿದರು.[೪]
ನಾಲ್ಕು ದಿನಗಳ ನಂತರ ಅವರು ರೋಡ್ ಟೈಮ್ ಟ್ರಯಲ್ಯಲ್ಲಿ ಐದನೇ ಸ್ಥಾನ ಗಳಿಸಿದರು.
ಸಾಮಾಜಿಕ ಕ್ರಿಯಾವಾದ
ಬದಲಾಯಿಸಿ2008ರಲ್ಲಿ, ಇವಾನ್ಸ್ ಟಿಬೆಟ್ ಧ್ವಜದೊಂದಿಗೆ ಸೈಕ್ಲಿಂಗ್ ಒಳಷರ್ಟನ್ನು ಧರಿಸಿ, ಟಿಬೆಟ್‌ಗೆ ಸ್ವಾಂತಂತ್ರ್ಯವನ್ನು ಬೆಂಬಲಿಸಿದರು.[೫][೬] ಅವರು ಹೇಳಿದ್ದು;
Trying to bring awareness of the Tibet movement is something someone in my position can do. I just feel really sorry for them. They don't harm anyone and they are getting their culture taken away from them. I don't want to see a repeat of what happened to Aboriginal culture [in Australia] happen to another culture.
2009
ಬದಲಾಯಿಸಿಇವಾನ್ಸ್ ಸೆಪ್ಟೆಂಬರ್ 27ರಂದು ಸ್ವಿಜರ್‌ಲ್ಯಾಂಡ್‌ನ ಮೆಂಡ್ರಿಸಿಯೊನಲ್ಲಿ ನಡೆದ ಪುರುಷರ ವಿಶ್ವ ಚಾಂಪಿಯನ್‌ಶಿಪ್ ರಸ್ತೆ ರೇಸ್‌ನಲ್ಲಿ ಜಯಗಳಿಸಿದರು. ವುಯೆಲ್ಟಾ ಎ ಎಸ್ಪಾನಾದಲ್ಲಿ ಮೂರನೇ ಸ್ಥಾನ ಗಳಿಸಿದ ಸ್ವಲ್ಪ ಕಾಲದಲ್ಲೇ ಈ ಜಯವು ಅವರಿಗೆ ಲಭಿಸಿತು. ಆ ಸಂದರ್ಭದಲ್ಲಿ ಅವರು ಆ ದಿನಕ್ಕಾಗಿ ನಾಯಕನ ಚಿನ್ನದ ಬಣ್ಣದ ಜರ್ಸಿಯನ್ನು ಧರಿಸಿದ್ದರು. ಆದರೂ ಅವರ ರೇಸ್‌ಗೆ ಸಿಯಾರಾ ನೆವಾಡಾ ಮೌಂಟನ್ ಫಿನಿಷ್(ಪರ್ವತದ ಮೇಲಿನ ರಸ್ತೆಯಲ್ಲಿ ರೇಸಿಂಗ್) ಮಾರ್ಗದಲ್ಲಿ ಯಾಂತ್ರಿಕ ದೋಷದಿಂದ ಅಡ್ಡಿಯಾಯಿತು. ಕಳಪೆ ತಂಡದ ಬೆಂಬಲ ಮತ್ತು ಆಟದಲ್ಲಿ ಕಳಪೆ ಫಾರಂನ ಸಂಯೋಗದಿಂದ ಅವರ 2009ರ ಟೂರ್ ಡೆ ಫ್ರಾನ್ಸ್ ಅಭಿಯಾನಕ್ಕೆ ಅಡ್ಡಿಯಾಯಿತು ಹಾಗು ಅವರು 30ನೇ ಸ್ಥಾನದಲ್ಲಿ ಮುಗಿಸಲು ಮಾತ್ರ ಸಮರ್ಥರಾದರು. ವಿಜೇತ ಆಲ್ಬರ್ಟೊ ಕಾಂಟಡೊರ್ ಅವರಿಗಿಂತ 45 ನಿಮಿಷಗಳಷ್ಟು ಹಿಂದುಳಿದರು. ಅವರು ಕ್ರಿಟೇರಿಯಂ ಡು ಡಾಫೈನ್ ಲಿಬೆರೆ ಮತ್ತು ಸೆಟ್ಟಿಮಾನ ಇಂಟರ್‌ನ್ಯಾಷನೇಲ್ ಕಾಪ್ಪಿ ಇ ಬರ್ಟಾಲಿಗಳಲ್ಲಿ ಕೂಡ ಜಯಗಳಿಸಿದರು. ಈ ಕ್ರೀಡಾಋತುವಿನಲ್ಲಿ ಇವಾನ್ಸ್ ಆಸ್ಟ್ರೇಲಿಯದ ಅತ್ಯಂತ ಯಶಸ್ವಿ ಸೈಕಲ್ ರೇಸ್ ಸ್ಪರ್ಧಿಯಾಗಿ, ಟೂರ್ ಡೆ ಫ್ರಾನ್ಸ್‌ನಲ್ಲಿ ಎರಡು ವೇದಿಕೆ ಸ್ಥಾನಗಳನ್ನು ಗಳಿಸಿದರು. ಅವರು ಎಲ್ಲ ಮೂರು ನಾಯಕರ ಜರ್ಸಿಗಳನ್ನು ಧರಿಸಿದ ಗಣ್ಯ ಸೈಕಲ್ ರೇಸ್ ಸ್ಪರ್ಧಿಗಳ ಗುಂಪಿಗೆ ಸೇರ್ಪಡೆಯಾದರು;2002ರಲ್ಲಿ ಗಿರೊ ಡಿ ಇಟಾಲಿಯ(ಟೂರ್ ಆಫ್ ಇಟಲಿ)ಯ ಮಾಗ್‌ಲಿಯ ರೋಸಾ ನಾಯಕರ ಜರ್ಸಿ, 2008ರ ಟೂರ್ ಡೆ ಫ್ರಾನ್ಸ್(ಟೂರ್ ಆಫ್ ಫ್ರಾನ್ಸ್)ನ ನಾಲ್ಕುದಿನಗಳ ಕಾಲ ಹಳದಿ ಬಣ್ಣದ ನಾಯಕರ ಜರ್ಸಿ ಮತ್ತು ವುಯೆಲ್ಟಾ ಎ ಎಸ್ಪಾನಾ(ಟೂರ್ ಆಫ್ ಸ್ಪೇನ್)ನಲ್ಲಿ 2009ರ ಚಿನ್ನದ ಬಣ್ಣದ ನಾಯಕರ ಜರ್ಸಿ.
2009ರ ಋತುವಿನ ಕೊನೆಯಲ್ಲಿ ಇವಾನ್ಸ್ 2010ರ ಪ್ರವಾಸಕ್ಕೆ ಉತ್ತಮವಾಗಿ ಬೆಂಬಲಿಸುವ ಹೊಸ ತಂಡಕ್ಕಾಗಿ ಹುಡುಕುತ್ತಿದ್ದಾರೆ ಎಂದು ಅತಿಯಾದ ಊಹಾಪೋಹ ಹರಡಿತ್ತು. ಇವಾನ್ಸ್ ವಿಶ್ವ ಚಾಂಪಿಯನ್ನರಾದ ನಂತರ, ತಂಡದ ಸಹಸ್ಪರ್ಧಿ ಫಿಲಿಪ್ ಗಿಲ್ಬರ್ಟ್ ಅವರಿಗೆ ಸಹಾಯ ನೀಡಲು ಪೂರ್ಣವಾಗಿ ಬದ್ಧರಾದಂತೆ ಕಂಡುಬಂತು. ಇದು ಇವಾನ್ಸ್ ಮತ್ತು ಸೈಲೆನ್ಸ್-ಲೊಟ್ಟೊ ನಡುವೆ ಸಂತೋಷದ ಸಂಬಂಧಕ್ಕೆ ಸಾಕ್ಷ್ಯ ಎಂದು ಅನೇಕ ಮಂದಿ ಭಾವಿಸಿದರು. ಆದಾಗ್ಯೂ,ಇವಾನ್ಸ್ ತಂಡದಿಂದ ನಿರ್ಗಮಿಸುತ್ತಿರುವುದು ನಂತರ ಬಹಿರಂಗವಾಯಿತು. ಹೊಸ ಸವಾಲುಗಳನ್ನು ಹುಡುಕುವುದಕ್ಕಾಗಿ ನಿರ್ಗಮಿಸುತ್ತಿದ್ದಾರೆಂದು ತಂಡವು ಅವರ ಕಾರಣವನ್ನು ಉದಾಹರಿಸಿತು.[೭] ಜೀವನಚರಿತ್ರೆ "ಕ್ಯಾಡೆಲ್ ಇವಾನ್ಸ್: ಕ್ಲೋಸ್ ಟು ಫ್ಲೈಯಿಂಗ್", ರಾಬ್ ಆರ್ನಾಲ್ಡ್ ಮತ್ತು ಇವಾನ್ಸ್ ಸಹಲೇಖನದಲ್ಲಿ, 2009ರ ನವೆಂಬರ್‌ನಲ್ಲಿ ಹಾರ್ಡಿ ಗ್ರಾಂಟ್ ಬುಕ್ಸ್ ಪ್ರಕಟಿಸಿತು.[೮]
2010
ಬದಲಾಯಿಸಿ2010ರಲ್ಲಿ, ಇವಾನ್ಸ್ BMC Racing Teamಗೆ ಸ್ಥಳಾಂತರಗೊಂಡರು[೯]
ಅದಾದ ನಂತರ ಅವರು 2010ರ ಫ್ಲೆಚೆ ವಾಲೋನೆನಲ್ಲಿ ಯಶಸ್ಸು ಮತ್ತು 2010 ಗಿರೊ ಡಿ`ಇಟಾಲಿಯದ 2ನೇ ಹಂತದ ನಂತರ ಮೆಗಾಲಿಯ ರೋಸ(ನಸುಗೆಂಪು ಜರ್ಸಿ)ವನ್ನು ಸಂಪಾದಿಸಿದರು. ಇವಾನ್ಸ್ ಗಿರೊ ಡಿ`ಇಟಾಲಿಯದ ಏಳನೇ ಹಂತವನ್ನು ಸಣ್ಣ ಗುಂಪಿನ ಮುಂಚೂಣಿಯಿಂದ ಪ್ರಭಾವಶಾಲಿ ಪೂರ್ಣ ಸಾಮರ್ಥ್ಯದಿಂದ ಗೆದ್ದುಕೊಂಡರು. ಇವಾನ್ಸ್ ಒಟ್ಟಾರೆ 5ನೆಯವರಾಗಿ ಪೂರ್ಣಗೊಳಿಸಿ, ಮೆಗಾಲಿಯ ರೊಸೊ ಪ್ಯಾಶನೆ(ಪಾಯಿಂಟ್ಸ್ ಕ್ಲಾಸಿಫಿಕೇಶನ್)ಮತ್ತು ಅಜ್ಜುರಿ ಡಿ ಇಟಾಲಿಯ ಕ್ಲಾಸಿಫಿಕೇಶನ್ ಗೆದ್ದುಕೊಂಡರು. ಹಿಂದಿನ ಹಂತದಲ್ಲಿ ಉಂಟಾದ ಅಪಘಾತದಿಂದ ಎಡ ಮೊಣಕೈನ ಮೂಳೆಯ ಸಣ್ಣ ಮುರಿತದೊಂದಿಗೆ ಸ್ಪರ್ಧಿಸುವ ಸಂದರ್ಭದಲ್ಲಿ 2010 ಟೂರ್ ಡೆ ಫ್ರಾನ್ಸ್‌ನ ಹಂತ ಒಂಭತ್ತರ ಹಳದಿ ಜರ್ಸಿಯನ್ನು ಹೊಂದಿದ್ದರು. ಹಂತ ಒಂಭತ್ತರ ಸಂದರ್ಭದಲ್ಲಿ ನಾಯಕರಿಗೆ ಗಮನಾರ್ಹ ವೇಳೆಯನ್ನು ಕಳೆದಿದ್ದರಿಂದ ಹಳದಿ ಜರ್ಸಿಯನ್ನು ಕಳೆದುಕೊಂಡರು ಮತ್ತು ಒಟ್ಟಾರೆ ಜಯಕ್ಕೆ ಗಂಭೀರ ಸ್ಪರ್ಧೆಯಿಂದ ಅವರನ್ನು ಹೊರಗಿಟ್ಟಿತು. 26ನೇ ಸ್ಥಾನದಲ್ಲಿ ಅವರು ಪ್ರವಾಸವನ್ನು ಮುಗಿಸಿದರು ಮತ್ತು ಆಲ್ಬರ್ಟೊ ಕೊಂಟಾಡರ್‌ಗಿಂತ 50 ನಿಮಿಷ ಮತ್ತು 27 ಸೆಕೆಂಡುಗಳು ಹಿಂದುಳಿದರು.[೧೦]
ವೃತ್ತಿಜೀವನದ ಮುಖ್ಯಾಂಶಗಳು
ಬದಲಾಯಿಸಿ- 2005
- ಪ್ರಥಮ ಹಂತ 7 ಡ್ಯುಚ್‌ಲ್ಯಾಂಡ್ ಟೂರ್
- 8ನೇ ಒಟ್ಟಾರೆ ಟೂರ್ ಡೆ ಫ್ರಾನ್ಸ್
- ನಾಲ್ಕನೇ ಹಂತ 16
- 8ನೇ ಒಟ್ಟಾರೆ ಟೂರ್ ಡೆ ಫ್ರಾನ್ಸ್
- 2007
- ಚಾಂಪಿಯನ್ UCI ಪ್ರೊ ಟೂರ್
- ಪ್ರಥಮ ಹಂತ 2 ITT ಟೆಸ್ಟ್ ಈವೆಂಟ್ ಬೀಜಿಂಗ್ 2008
- ಪ್ರಥಮ ಹಂತ 1 ಪಾರ್ಟ್ B TTT ಸೆಟ್ಟಿಮಾನಾ ಸಿಸಿಲಿಸ್ಟಿಕಾ ಇಂಟರ್‌ನ್ಯಾಶನೇಲ್ ಕಾಪ್ಪಿ-ಬಾರ್ಟಾಲಿ
- 2ನೇ ಒಟ್ಟಾರೆ ಟೂರ್ ಡೆ ಫ್ರಾನ್ಸ್
- ಪ್ರಥಮ ಹಂತ 13
- 2ನೇ ಒಟ್ಟಾರೆ ಕ್ರಿಟೇರಿಯಂ ಡು ಡಾಫೈನ್ ಲಿಬೇರೆ
- 4ನೇಒಟ್ಟಾರೆ ವಿಯೆಲ್ಟಾ ಎ ಎಸ್ಪಾನಾ
- 4ನೇ ಒಟ್ಟಾರೆ ಟೂರ್ ಡೆ ರೊಮಾಂಡಿ
- 6th ಗಿರೊ ಡಿ ಲೊಂಬಾರ್ಡಿಯ
- 4ನೇ ಒಟ್ಟಾರೆ ಟೂರ್ ಡೆ ರೊಮಾಂಡಿ
- 4ನೇಒಟ್ಟಾರೆ ವಿಯೆಲ್ಟಾ ಎ ಎಸ್ಪಾನಾ
- 2ನೇ ಒಟ್ಟಾರೆ ಟೂರ್ ಡೆ ಫ್ರಾನ್ಸ್
- ಪ್ರಥಮ ಹಂತ 1 ಪಾರ್ಟ್ B TTT ಸೆಟ್ಟಿಮಾನಾ ಸಿಸಿಲಿಸ್ಟಿಕಾ ಇಂಟರ್‌ನ್ಯಾಶನೇಲ್ ಕಾಪ್ಪಿ-ಬಾರ್ಟಾಲಿ
- ಪ್ರಥಮ ಹಂತ 2 ITT ಟೆಸ್ಟ್ ಈವೆಂಟ್ ಬೀಜಿಂಗ್ 2008
ರ್‌ನ್ಯಾಷನೇಲ್ ಡೈ ಕಾಪ್ಪಿ ಈ ಬರ್ಟಾಲಿ
- 2010
- ಪ್ರಥಮ ಲಾ ಫ್ಲೆಚೆ ವಾಲ್ಲೊನೆ
ಗ್ರಾಂಡ್ ಟೂರ್ ಜನರಲ್ ಕ್ಲಾಸಿಫಿಕೇಷನ್ ಫಲಿತಾಂಶಗಳ ಅನುಕ್ರಮ
ಬದಲಾಯಿಸಿಗ್ರ್ಯಾಂಡ್ ಟೂರ್ | 2002 | 2003 | 2004 | 2005 | 2006 | 2007 | 2008 | 2009 | 2010 |
---|---|---|---|---|---|---|---|---|---|
ಗಿರೊ | 14 | - | - | - | - | - | - | - | 5 |
ಪ್ರವಾಸ | - | - | - | 8 | 4 | 2 | 2 | 30 | 26 |
ವುಯೆಲ್ಟಾ | - | - | 60 | - | - | 4 | - | 3 | - |
ಉಲ್ಲೇಖಗಳು
ಬದಲಾಯಿಸಿ- ↑ "Aussie Evans wins road race title". BBC Sport. 2009-09-27. Retrieved 2009-09-28.
- ↑ Golwg. 21 (43). 10 July 2009.
{{cite journal}}
: Missing or empty|title=
(help) - ↑ Robert Lusetich (14 August 2008). "Fearless Cadel Evans fails to stand the test of time". The Australian. Archived from the original on 16 ಆಗಸ್ಟ್ 2008. Retrieved 4 ಜನವರಿ 2011.
- ↑ ಲಿಯೊ ಸ್ಕಿಲಿಂಗ್,ಆಸ್ಟ್ರೇಲಿಯನ್ ಸೈಕ್ಲಿಸ್ಟ್ ಮೈಕೇಲ್ ರೋಜರ್ಸ್ ನ್ಯಾರೋಲಿ ಮಿಸಸ್ ಮೆಡಲ್ ಇನ್ ಒಲಿಂಪಿಕ್ ರೋಡ್ ರೇಸ್ Archived 2008-09-19 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಆಸ್ಟ್ರೇಲಿಯನ್, 9 ಆಗಸ್ಟ್ 2008
- ↑ ಕೇಡಲ್ ಇವಾನ್ಸ್ ಸಪೋರ್ಟ್ ಫ್ರೀ ಟಿಬೆಟ್ Archived 2008-08-15 ವೇಬ್ಯಾಕ್ ಮೆಷಿನ್ ನಲ್ಲಿ., ಸ್ಫೋರ್ಟ್ (ನಿಯತಕಾಲಿಕೆಯ ತಾಣ.
- ↑ ಫೋಟೊ ಆಫ್ ಕೇಡಲ್ ಇವಾನ್ಸ್ ವಿತ್ ಫ್ಲಾಗ್ ಆಫ್ ಟಿಬೆಟ್ Archived 2008-08-01 ವೇಬ್ಯಾಕ್ ಮೆಷಿನ್ ನಲ್ಲಿ., Phayul.comತಾಣ.
- ↑ "Evans To Leave Silence-Lotto". Cycling News. 2009-10-31.
- ↑ Cadel Evans: Close To Flying. Hardie Grant Books. 2009-11-01. ISBN 978-1740666671.
- ↑ Cyclingnews.com (2009-10-01). "BMC confirms Evans signing". Cycling News. Retrieved 2009-10-01.
- ↑ www.letour.fr. "Tour de France - 2010". AMAURY SPORT ORGANISATION. Retrieved 2010-09-17.
ಬಾಹ್ಯ ಕೊಂಡಿಗಳು
ಬದಲಾಯಿಸಿ- Official website
- ಸೈಕ್ಲಿಂಗ್ ಫೆಡರೇಷನ್ ರೈಡರ್ ಪ್ರೊಫೈಲ್ Archived 2012-11-28 at Archive.is
- Cyclingnews.com ಇಂಟರ್ವ್ಯೂ
- 2006 ಟೂರ್ ಡೆ ಫ್ರಾನ್ಸ್ ಅಫಿಷಿಯಲ್ ರೈಡರ್ ಪ್ರೊಫೈಲ್
- ಕ್ಯಾಡೆಲ್ ಇವಾನ್ಸ್ ಪ್ರೊಫೈಲ್
- VeloNews.com ಇಂಟರ್ವ್ಯೂ: ಇವಾನ್ಸ್ ರೀಗೇನ್ಸ್ ಮ್ಯಾಗ್ಲಿಯ ರೋಸಾ, ಏಟ್ ಇಯರ್ಸ್ ಲೇಟರ್
ಟೆಂಪ್ಲೇಟು:World Road Racing Champions ಟೆಂಪ್ಲೇಟು:Giro d'Italia Maglia Ciclamino