ಕೆ. ಆರ್. ಆರ್ಎಮ್ ಕರಿಯಾ ಮಾಣಿಕಂ ಅಂಬಲಂ

ಕೆ. ಆರ್. ಆರ್ಎಮ್ ಕರಿಯಾ ಮಾಣಿಕಂ ಅಂಬಲಂ ಇವರು ಒಬ್ಬ ಭಾರತೀಯ ರಾಜಕಾರಣಿ, ಸಮಾಜ ಸೇವಕ ಮತ್ತು ಮಾಜಿ ಶಾಸಕಾಂಗ ಸಭೆಯ ಸದಸ್ಯರು.

ವೈಯಕ್ತಿಕ ಜೀವನ

ಬದಲಾಯಿಸಿ

ಅಂಬಲಂ ಇವರು ರಾಮಸಾಮಿ ಅಂಬಲಂ ಅವರ ಒಬ್ಬನೇ ಮಗ. ಇವರು ತಮಿಳುನಾಡಿನ ಶಿವಗಂಗೈ ಜಿಲ್ಲೆ, ದೇವಕೊಟ್ಟೈ ತಾಲೂಕಿನ ಕಪ್ಪಲ್ಲೂರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಇವರಿಗೆ ಒಬ್ಬ ಮಗ ಮತ್ತು ಮೂವರು ಹೆಣ್ಣುಮಕ್ಕಳು.[೧]

ರಾಜಕೀಯ

ಬದಲಾಯಿಸಿ

ಅಂಬಲಂ ೧೦೦ಕ್ಕೂ ಹೆಚ್ಚು ಹಳ್ಳಿಗಳು ಮತ್ತು ಕೆಲವು ಪಟ್ಟಣಗಳಿಗೆ ಜನಪ್ರಿಯ ನಾಯಕರಾಗಿ ಕಾರ್ಯನಿರ್ವಹಿಸಿದರು. ಇವರು ಪಸುಂಪೊನ್ ಮುತ್ತುರಾಮಲಿಂಗಂ ಥೇವರ್ ಅವರ ಆತ್ಮೀಯ ಸ್ನೇಹಿತರಾಗಿದ್ದರು.

೧೯೫೭ರಲ್ಲಿ ತಮಿಳುನಾಡಿನ ವಿಧಾನಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಲ್ಕು ಬಾರಿ ಆಯ್ಕೆಯಾದರು.[೨][೩] ೧೯೬೨ ಮತ್ತು ೧೯೬೭ರ ಚುನಾವಣೆಗಳಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಯಾದರು.[೪][೫] ೧೯೭೭ರ ಚುನಾವಣೆಯಲ್ಲಿ ತಿರುವಾಡನೈಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ನೇಮಕಗೊಂಡರು.

ಅವರ ಮರಣದ ನಂತರ, ಕರೂರ್ ನಾಡು ಮತ್ತು ಕಪ್ಪಲ್ಲೋರ್ ನಾಡಿನಲ್ಲಿ ಗ್ರಾಮದ ಜನರು ಕರೂರ್ ಮತ್ತು ಕಣ್ಣಂಕುಡಿ ಎಂಬ ಎರಡು ಕಂಚಿನ ಪ್ರತಿಮೆಯನ್ನು ಸ್ಥಾಪಿಸಿದರು.

ಉಲ್ಲೇಖಗಳು

ಬದಲಾಯಿಸಿ
  1. "Congress MLA creates a record of sorts in southern districts". The Hindu. 14 May 2006. Archived from the original on 23 February 2014. Retrieved 21 February 2013.
  2. Jaishankar, C. (14 May 2006). "Congress MLA creates a record of sorts in southern districts". The Hindu. Archived from the original on 23 February 2014. Retrieved 24 February 2012.
  3. "Statistical Report on General Election, 1957, to the Legislative Assembly of Madras" (PDF). Election Commission of India, New Delhi. Retrieved 24 February 2012.
  4. "Statistical Report on General Election, 1962, to the Legislative Assembly of Madras" (PDF). Election Commission of India, New Delhi. Retrieved 24 February 2012.
  5. "Statistical Report on General Election, 1967, to the Legislative Assembly of Madras" (PDF). Election Commission of India, New Delhi. Retrieved 24 February 2012.