ಕೆ.ಟಿ.ರಾಠೋಡ(ಕುಬಾಸಿಂಗ ತಾರಾಸಿಂಗ ರಾಠೋಡ)ರು ವಿಧಾನ ಸಭೆಯ ಮಾಜಿ ಸದಸ್ಯರು, ಸಚಿವರು ಹಾಗೂ ರಾಜಕೀಯ ಧುರೀಣರು.[] ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡರು ಇವರ ಪುತ್ರರು.[]

ಕೆ.ಟಿ.ರಾಠೋಡ
ಜನನಬೇನಾಳ, ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ
ಬಾಳ ಸಂಗಾತಿಆಶಾದೇವಿ
ಮಕ್ಕಳು4

ಕೆ.ಟಿ.ರಾಠೋಡರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ

ಬದಲಾಯಿಸಿ

ರಾಠೋಡರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದು ಸ್ನಾತಕೊತ್ತರ ಕಲಾ ಪದವಿ(ಎಂ.ಎ)ಯೊಂದೊಗೆ ಎಲ್.ಎಲ್.ಬಿ. ಪೂರೈಸಿದ್ದಾರೆ.

ಬಂಜಾರಾ ಸಮಾಜ

ಬದಲಾಯಿಸಿ

ದೇವರಾಜ ಅರಸುರವರ ಬೆಂಬಲದೊಂದಿಗೆ ಕೆ.ಟಿ. ರಾಠೋಡರು ಬಂಜಾರಾ ಸಮಾಜಕ್ಕೆ ೧೯೭೦ರಲ್ಲಿ ಎಸ್‌ಸಿ ಮೀಸಲಾತಿ ಕಲ್ಪಿಸಲು ಕಾರಣೀಭೂತರಾದರು.[][]

ನಿರ್ವಹಿಸಿದ ಹುದ್ದೆ

ಬದಲಾಯಿಸಿ
  • ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.
  • ಕೆ.ಟಿ.ರಾಠೋಡರು 1981ರಲ್ಲಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೇಸ್ ಕಮೀಟಿಯ ಅಧ್ಯಕ್ಷರಾಗಿದ್ದವರು.
  • ಕೆ.ಟಿ.ರಾಠೋಡರವರು 1972ರಲ್ಲಿ ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿ, ನಂತರ ತೋಟಗಾರಿಕೆ ಮತ್ತು ಸಂಪುಟ ದರ್ಜೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ ಸಚಿವರಾಗಿ ಕಾರ್ಯನಿರ್ವಹಿಸಿದರು.
  • ಕೆ.ಟಿ.ರಾಠೋಡರವರು ಲಂಬಾಣಿ ಸಮುದಯದ ಪ್ರಪ್ರಥಮ ಸಚಿವರಾಗಿದ್ದರು.[]

ಕೆ.ಟಿ.ರಾಠೋಡರು 1993ರಲ್ಲಿ ಪರ್ಶಾವಾಯಿನಿಂದ ನಿಧನರಾದರು.

ಉಲ್ಲೇಖಗಳು

ಬದಲಾಯಿಸಿ