ಕೆಂಡಸಂಪಿಗೆ (ಧಾರಾವಾಹಿ)
ಕೆಂಡಸಂಪಿಗೆ ಪ್ರಸುತ್ತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಆಗಸ್ಟ್ ೨೨, ೨೦೨೨ ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ಸಂಜೆ ೬:೩೦ ಗೆ ಪ್ರಸಾರವಾಗುತ್ತಿದೆ. ಪ್ರೇಕ್ಷಕರು ಕೆಂಡಸಂಪಿಗೆಯನ್ನು ವೂಟ್‌ನಲ್ಲಿ ಯಾವಾಗ ಬೇಕಾದರೂ ವೀಕ್ಷಣೆ ಮಾಡಬಹುದು. ಈ ಧಾರಾವಾಹಿಯನ್ನು ಮೇಘಾ ಶೆಟ್ಟಿ [೧] ನಿರ್ಮಾಣ ಮಾಡುತ್ತಿದ್ದಾರೆ.
ಕೆಂಡಸಂಪಿಗೆ (ಧಾರಾವಾಹಿ) | |
---|---|
ಶೈಲಿ | ದೈನಂದಿನ ಧಾರಾವಾಹಿ |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ಒಟ್ಟು ಸರಣಿಗಳು | ೧ |
ನಿರ್ಮಾಣ | |
ನಿರ್ಮಾಪಕ(ರು) | ಮೇಘಾ ಶೆಟ್ಟಿ |
ಸಮಯ | ೨೨ ನಿಮಿಷಗಳು |
ಪ್ರಸಾರಣೆ | |
ಮೂಲ ವಾಹಿನಿ | ಕಲರ್ಸ್ ಕನ್ನಡ (ವಿಯಾಕಾಂ ೧೮) |
Original airing | ೨೨ ಆಗಸ್ಟ್ ೨೦೨೨[೨] |
ಕಥೆ
ಬದಲಾಯಿಸಿಕಥಾ ನಾಯಕಿ ಸುಮನ ಬಡಕುಟುಂಬಕ್ಕೆ ಸೇರಿದ ತುಂಬಾ ಸರಳ ವ್ಯಕ್ತಿತ್ವದ ಹುಡುಗಿಯಾಗಿರುತ್ತಾಳೆ. ತನ್ನ ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ತನ್ನ ಕಾಲೋನಿ ಜನರಿಗೆ ಸಹಾಯ ಮಾಡುವುದರಲ್ಲಿ ಮುಂದಿರುತ್ತಾಳೆ. ಹೂ ಮಾರಾಟ ಮಾಡಿ ಜೀವನ ಸಾಗಿಸುತ್ತ ಇರುತ್ತಾಳೆ. ಇನ್ನೊಂದು ಕಡೆ ನಾಯಕನಾದ ಕಾರ್ಪೋರೇಟರ್ ತೀರ್ಥಂಕರ ಪ್ರಸಾದ್‍ನಿಗೆ ಶಾಸಕನಾಗುವುದು ಅಗತ್ಯವಾಗಿದೆ. ಅದಕ್ಕಾಗಿ ಸುಮನಾ ಕಾಲೋನಿಯ ಜನರ ಮತದ ಅವಶ್ಯಕತೆ ಇದೆ. ಇದಕ್ಕಾಗಿ ಅಲ್ಲಿನ ಜನರ ನಂಬಿಕೆ ಗಳಿಸಲು ಸುಮನಾಳಿಗೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ.
ಸುಮನಾಳ ತಮ್ಮ ರಾಜೇಶನಿಗೆ ಮುಂಗೋಪ ಹೆಚ್ಚು, ರಾಜೇಶ ಮತ್ತು ಸುಮನಾ ನೇರವಾಗಿ ಮಾತಾನಾಡುವುದಿಲ್ಲ. ರಾಜೇಶ ತೀರ್ಥನ ಬಳಿ ಕೆಲಸ ಮಾಡುತ್ತಾ ಇರುತ್ತಾನೆ. ಒಂದು ದಿನ ಹೀಗೆ ಪಕ್ಷದ ಪ್ತ್ರತಿಭಟನೆಯಲ್ಲಿ ಬಾಗಿಯಾಗುತ್ತಾನೆ. ಅಲ್ಲ್ಲಿ ನಾಟಕ ಮಾಡಲು ಹೋಗಿ ನಿಜವಾಗಿಯು ಪೆಟ್ರೋಲ್ ಹಚ್ಚಿಕೊಂಡು ಸಾಯುತ್ತಾನೆ. ಕಾಲೋನಿ ಜನರ ಕೋಪವನ್ನು ತಣಿಸಲು ನಾಯಕ ಸಾಮೂಹಿಕ ಮದುವೆ ಮಾಡುತ್ತೇನೆ ಎಂದು ಹೇಳುತ್ತಾನೆ. ಅಲ್ಲಿ ಸುಮನಾಳ ಮದುವೆ ಮಾಡಲು ನಿಶ್ಚಯಿಸುತ್ತಾನೆ. ಆದರೆ, ಸುಮನಾಳನ್ನು ಮದುವೆಯಾಗುವ ಗಂಡು ಓಡಿ ಹೋಗುತ್ತಾನೆ. ತನ್ನ ಪ್ರತಿಷ್ಟೆಯನ್ನು ಉಳಿಸಿಕೊಳ್ಳಲು ಮತ್ತು ಕಾಲೋನಿಯವರ ನಂಬಿಕೆ ಗಳಿಸಲು ಸುಮನಾಳನ್ನು ತಾನೇ ಮದುವೆಯಾಗುತ್ತಾನೆ. ಮದುವೆಯ ನಂತರ ತನ್ನ ಗಂಡನ ಮನೆಯಲ್ಲಿ ಸುಮನಾ ಹೇಗೆ ಬದುಕುತ್ತಾಳೆ, ಗಂಡನ ಮನೆಯವರ ತಿರಸ್ಕಾರವನ್ನು ಹೇಗೆ ಸಹಿಸಿಕೊಂಡು ಬದುಕುತ್ತಾಳೆ ಎಂಬುವುದರ ಮೇಲೆ ಕಥೆ ನಿರ್ಧಾರವಾಗಿದೆ.
ಕಲಾವಿದರು
ಬದಲಾಯಿಸಿಮುಖ್ಯ ಪಾತ್ರದಲ್ಲಿ
ಬದಲಾಯಿಸಿ- ಮಧುಮಿತ: ಕಥಾ ನಾಯಕಿಯಾಗಿ ಸುಮನಾಳ ಪಾತ್ರದಲ್ಲಿ. ರಾಜೇಶನ ಅಕ್ಕ ಮತ್ತು ತೀರ್ಥನಾ ಹೆಂಡತಿಯಾಗಿ
- ಕಾವ್ಯ ಶೈವ: ಸುಮನಾಳಾಗಿ (ಪಾತ್ರದಾರಿ ಬದಲಾಗುವ ಮುಂಚೆ)
- ಆಕಾಶ್ : ಕಥಾ ನಾಯಕ ತೀರ್ಥಂಕರ್ ಪ್ರಸಾದ್ ಪಾತ್ರದಲ್ಲಿ. ಕೇಶವಾ ಪ್ರಸಾದ್ ಮಗನಾಗಿ, ಸುಮನಾಳಾ ಗಂಡನಾಗಿ.
- ಅಮೃತ ರಾಮ್‌ಮೂರ್ತಿ[೩]: ಖಳನಾಯಕಿ ಸಾಧಾನ ಪಾತ್ರದಲ್ಲಿ. ಕೇಶವ ಪ್ರಸಾದ್ ದೊಡ್ಡ ಸೊಸೆಯಾಗಿ, ತೀರ್ಥನಾ ಅತ್ತಿಗೆಯಾಗಿ.
ಪೋಷಕ ಪಾತ್ರದಲ್ಲಿ
ಬದಲಾಯಿಸಿ- ಸುನೀಲ್[೪]: ರಾಜೇಶ್‌ನಾಗಿ, ಸುಮನಾಳ ತಮ್ಮನಾಗಿ
- ದೊಡ್ಡಣ್ಣ: ಕೇಶವಾ ಪ್ರಸಾದ್ ಪಾತ್ರಾದಲ್ಲಿ. ತೀರ್ಥನಾ ತಂದೆಯಾಗಿ.
- ನಿಸರ್ಗ ಮಂಜುನಾಥ್: ಜಾಹ್ನವಿ ಪಾತ್ರದಲ್ಲಿ. ಕೇಶವ ಪ್ರಸಾದ್ ಮಗಳಾಗಿ, ತೀರ್ಥನಾ ತಂಗಿಯಾಗಿ.
- ಚೈತ್ರ ರಾವ್ ಸಚಿನ್: ಕಾತ್ಯಾಯನಿ ಪಾತ್ರದಲ್ಲಿ. ಕೇಶವಾ ಪ್ರಸಾದ್ ಸೋದರಿಯಾಗಿ.
ಉಲ್ಲೇಖಗಳು
ಬದಲಾಯಿಸಿ- ↑ "ಹೊಸ ಧಾರಾವಾಹಿ ನಿರ್ಮಾಪಕಿಯಾದ ಮೇಘಾ ಶೆಟ್ಟಿ". Retrieved 13 ಮಾರ್ಚ್ 2022.
{{cite web}}
: zero width space character in|title=
at position 13 (help) - ↑ "ಆಗಸ್ಟ್ 22ರಿಂದ ಕಲರ್ಸ್ ಕನ್ನಡದಲ್ಲಿ ಹರಡಲಿದೆ ಕೆಂಡಸಂಪಿಗೆ ಘಮ! ಹೊಸ ಧಾರಾವಾಹಿ". Retrieved August 14, 2022.
- ↑ "ಅಮೃತಾ ರಾಮಮೂರ್ತಿ ಅಭಿಮಾನಿಗಳಿಗೆ ಸಿಹಿಸುದ್ದಿ- ಕೆಂಡಸಂಪಿಗೆ ಸೀರಿಯಲ್ ಮೂಲಕ ಕಮ್ ಬ್ಯಾಕ್". Archived from the original on ನವೆಂಬರ್ 28, 2022. Retrieved August 7, 2022.
- ↑ "ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಶನಿ ಖ್ಯಾತಿಯ ಸುನೀಲ್‌ರ ಪಾತ್ರ ಮುಗೀತಾ?". Retrieved September 20, 2022.