ಕೆಂಡಸಂಪಿಗೆ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಕೆಂಡಸಂಪಿಗೆ 2015ರಲ್ಲಿ ಬಿಡುಗಡೆಯಾದ ಭಾರತೀಯ ಕನ್ನಡ ಚಲನಚಿತ್ರ ಇದನ್ನು ಸುರೇಂದ್ರನಾಥ್ ಬರೆದಿದ್ದಾರೆ ,ದುನಿಯಾ ಸೂರಿ ಇದರ ನಿರ್ದೇಶಕರು. ಸಂತೋಷ್ ರೇವಾ (ವಿಕ್ಕಿ ವರುಣ್) ಮತ್ತು ಮನ್ವಿತಾ ಹರೀಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಇಬ್ಬರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.ರಾಜೇಶ್ ನಟರಂಗ, ಪ್ರಕಾಶ್ ಬೆಲಾವಾಡಿ ಮತ್ತು ಚಂದ್ರಿಕಾ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಂಡಸಂಪಿಗೆ
Directed byದುನಿಯಾ ಸೂರಿ
Screenplay byದುನಿಯಾ ಸೂರಿ
ರಾಜೇಶ್ ನಟರಂಗ
Story byಸುರೇಂದ್ರನಾಥ್
Produced byಪರಿಮಳ ಫಿಲ್ಮ್ ಫ್ಯಾಕ್ಟರಿ
Starringವಿಕ್ಕಿ ವರುಣ್
ಮಾನ್ವಿತಾ ಹರೀಶ್
ರಾಜೇಶ್ ನಟರಂಗ
ಪ್ರಕಾಶ್ ಬೆಳವಾಡಿ
ಚಂದ್ರಿಕಾ
ಶೀತಲ್ ಶೆಟ್ಟಿ
Cinematographyಸತ್ಯ ಹೆಗಡೆ
Edited byದೀಪು ಎಸ್.ಕುಮಾರ್
Music byವಿ ವಿ.ಹರಿಕೃಷ್ಣ
Production
company
ಪರಿಮಳ ಫಿಲ್ಮ್ ಫ್ಯಾಕ್ಟರಿ
Distributed byಆರ್ಎಸ್ ಫಿಲ್ಮ್ಸ್
Release date
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 11 ಸೆಪ್ಟೆಂಬರ್ 2015 (2015-09-11)
Running time
99 ನಿಮಿಷಗಳು
Countryಭಾರತ
Languageಕನ್ನಡ


ಕಥಾವಸ್ತು

ಬದಲಾಯಿಸಿ

ಎರಡು ಟ್ರ್ಯಾಕ್ ಗಳಲ್ಲಿ ನಡೆಯುವ ಕಥೆಯನ್ನು ಚಿತ್ರ ಹೊಂದಿದೆ. ನಕಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಡಿಸಿಪಿ ಸೂರ್ಯಕಾಂತ್ (ಪ್ರಕಾಶ್ ಬೆಳವಾಡಿ) ನೇತೃತ್ವದಲ್ಲಿ ಡ್ರಗ್ ಮಾಫಿಯಾದ ಮೇಲೆ ದಾಳಿ ನಡೆಸಿ, ವಶಪಡಿಸಿಕೊಂಡ ಮಾಲಿನಲ್ಲಿ ಬಹಳಷ್ಟು ಕಬಳಿಸಿ ಡೀಲ್ ಮಾಡುವ ಮೂವರು ಪೊಲೀಸರ ತಂಡ ಹಣವನ್ನು ಬಚ್ಚಿಡಲು ಯತ್ನಿಸುತ್ತದೆ. ಆದರೆ ಅವರಲ್ಲಿ ಒಬ್ಬ ಎಸ್ ಐ, ಡಿಸಿಪಿ ವಿರುದ್ಧ ಮಾತನಾಡಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಮತ್ತೊಂದು ಎಳೆಯಲ್ಲಿ ಸಿರಿವಂತೆ ಶಂಕುತಲಾ ಶೆಟ್ಟಿ, ಮಗಳು ಗೌರಿ(ಮಾನ್ವಿತಾ) ಮತ್ತು ತನ್ನ ಕಚೇರಿಯಲ್ಲೇ ಕೆಲಸ ಮಾಡುವ ಬಡ ನೌಕರ ಯುವಕ ರವಿ (ವಿಕ್ಕಿ) ಜೊತೆಗಿನ ಪ್ರೀತಿಯನ್ನು ಸಹಿಸದೆ, ಡಿಸಿಪಿ ಸೂರ್ಯಕಾಂತ್ ಗೆ ಇದಕ್ಕೆ ಅಂತ್ಯ ಹಾಡಲು ಸೂಚಿಸುತ್ತಾಳೆ. ಡಿಸಿಪಿ ಕುತಂತ್ರದಿಂದ ರವಿ ಬಂಧನಕ್ಕೊಳಗಾಗುತ್ತಾನೆ. ಆದರೆ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಎಸ್ ಐ ಒಬ್ಬನನ್ನು ಕೊಲೆ ಮಾಡಿ ಓಡಿಹೋಗಲು ಗೌರಿಯ ಸಹಾಯ ಕೇಳುತ್ತಾನೆ. ಗೌರಿ, ರವಿಗೆ ಸಹಾಯ ಮಾಡಲು ಜೊತೆಗೂಡಿ ಇಬ್ಬರೂ ಊರಿಂದೂರಿಗೆ ತಲೆತಪ್ಪಿಕೊಂಡು ಓಡುತ್ತಾರೆ. ರವಿ ನಿಜವಾಗಿಯೂ ಅಪರಾಧ ಮಾಡಿದ್ದಾನ? ರವಿಗೆ-ಗೌರಿಗೆ ಏನಾಗುತ್ತದೆ? ಮುಂದುವರೆಯುತ್ತದೆ.[]

ಬಿಗಿಯಾದ ಥ್ರಿಲ್ಲರ್ ಚಿತ್ರಕಥೆ,ಪೋಲಿಸರಿಂದ ತಪ್ಪಿಸಿಕೊಂಡು ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಹೀಗೆ ಊರೂರು ಅಲೆಯುವ ರವಿ ಮತ್ತು ಗೌರಿಯವರ ಜರ್ನಿ, ಗನ್ ತೋರಿಸಿ ಲೀಲಾಜಾಲವಾಗಿ ಕಾರುಗಳನ್ನು ಕದಿಯುವ ಗೌರಿ, ಹೋಟೆಲ್ ನಲ್ಲಿ ಜಾಗ ಸಿಗಲು ಕಷ್ಟವಾದರೂ ಹೇಗೋ ಕೊನೆಗೆ ಹೋಟೆಲ್ ಒಂದಕ್ಕೆ ಹೊಕ್ಕುವುದು,ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಗೀತರಚನೆಯ ಹರಿಕೃಷ್ಣ ಸಂಗೀತದ ಹಾಡುಗಳಿವೆ.

ನಿರ್ಮಾಣ

ಬದಲಾಯಿಸಿ

ಈ ಚಿತ್ರವು ೨ ನೇ ಭಾಗ ಕಾಗೆ ಬಂಗಾರ ಹೆಸರಿನಲ್ಲಿ ತಯಾರಾಗುತ್ತಿದೆ. ಅಪರಾಧದ ಪ್ರಕರಣದಲ್ಲಿ ರೂಪುಗೊಂಡ ಮತ್ತು ಪೊಲೀಸರಿಂದ ಓಡಿಹೋಗುವ ಜೊಡೀಗಳ ಮೆಲೆ ಈ ಚಿತ್ರ ಕೇಂದ್ರೀಕೃತವಾಗಿದೆ ಮತ್ತು ಕಥಾವಸ್ತುವು ನಂತರ ಪ್ರಭಾವಶಾಲಿಗಳ ನಡುವಿನ ಸಂಬಂಧವನ್ನು ಬಹಿರಂಗಪಡಿಸುತ್ತದೆ.[] ಪರಿಮಲಳ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ, ಚಿತ್ರದ ಛಾಯಾಗ್ರಹಣವನ್ನು ಸತ್ಯ ಹೆಗ್ಡೆ, ದೀಪು ಎಸ್. ಕುಮಾರ್ ಸಂಪಾದಿಸಿದ್ದಾರೆ. ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವು 11 ಸೆಪ್ಟೆಂಬರ್ 2015 ರಂದು ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆ ಪಡೆಯಿತು. ಚಲನಚಿತ್ರವನ್ನು ಕರ್ನಾಟಕದ 17 ಜಿಲ್ಲೆಗಳಲ್ಲಿ ಚಿತ್ರೀಕರಿಸಲಾಗಿದೆ. 18 ಡಿಸೆಂಬರ್ 2015 ರಂದು ಕೆಂಡಾಸಂಪಿಗೆ 5 ಚಿತ್ರಮಂದಿರಗಳಲ್ಲಿ 100 ದಿನಗಳ ಓಟವನ್ನು ಪೂರ್ಣಗೊಳಿಸಿದೆ. ಈ ಚಿತ್ರವು ಇನ್ನೂ ಎರಡು ಭಾಗಗಳನ್ನು ಹೊಂದಿದ್ದು, ಮುಂಬರುವ ಚಿತ್ರ ಕಾಗೆ ಬಂಗಾರ ಇದಕ್ಕೆ ಪೂರ್ವಭಾವಿಯಾಗಿರುತ್ತದೆ ಮತ್ತು ಬ್ಲ್ಯಾಕ್ ಮ್ಯಾಜಿಕ್ ಎಂಬ ಮೂರನೇ ಚಿತ್ರವೂ ಆಗಲಿದೆ ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ.

ಪಾತ್ರವರ್ಗ

ಬದಲಾಯಿಸಿ
  • ವಿಕ್ಕಿ ವರುಣ್: ರವೀಂದ್ರ ಆಲಿಯಾಸ್"ರವಿ"
  • ಮಾನ್ವಿತಾ ಹರೀಶ್: ಗೌರಿ ಶೆಟ್ಟಿಯಾಗಿ
  • ರಾಜೇಶ್ ನಟರಂಗ: ಎಸಿಪಿ ಎಸ್.ಪುರಂದರ್ ಆಗಿ
  • ಪ್ರಕಾಶ್ ಬೆಳವಾಡಿ: ಡಿಸಿಪಿ ಸೂರ್ಯಕಾಂತ್ ಆಗಿ
  • ಚಂದ್ರಿಕಾ: ಶಕುಂತಲಾ ಶೆಟ್ಟಿಯಾಗಿ
  • ಶೀತಲ್ ಶೆಟ್ಟಿ
  • ಶ್ವೇತಾ ಪಂಡಿತ್
  • ಪ್ರಶಾಂತ್ ಸಿದ್ದಿ
  • ಚಂದ್ರಶೇಖರ್ ಎಸ್.
  • ನಾರಾಯಣ ಸ್ವಾಮಿ
  • ಕಿಶೋರ್ ನಿತ್ತೂರು
  • ನಂದಗೋಪಾಲ್
  • ಸತ್ಯಮೂರ್ತಿ
  • ವಿಜಯಕುಮಾರ್
  • ಮುರಳೀಧರ್ ಕರಂತ್
  • ಭಾನುಪ್ರಕಾಶ್
  • ಸುಧೀರ್ ಉರ್ಸ್
  • ಮಾಸ್ಟರ್ ಪೃಥ್ವಿ
  • ಸುಧಿ
  • ವಿದ್ಯಾ ಕುಲಕರ್ಣಿ
  • ಕಿರಣ್
  • ಶಮಂತ್
  • ಶ್ರೀಧರ್ ಅಯ್ಯಂಗಾರ್
  • ಮಂಜು ಪ್ರಭಾಸ್
  • ಪ್ರಶಾಂತ್ ಮೈಸೂರು
  • ವಿನೋದ ಶ್ರೀ
  • ರಮ್ಯಾ ವಿಜಯಕುಮಾರ್
  • ಸುಜಯ್
  • ಕೆಂಪರಾಜ್ ದಾಸಪ್ಪ
  • ಮಂಜು
  • ಕುಮಾರ್
  • ಅಭಿಲಾಶಾ

ವಿ.ಹರಿಕೃಷ್ಣ ಅವರು ಚಿತ್ರದ ಸಂಗೀತವನ್ನು ಸಂಯೋಜಿಸಿದ್ದಾರೆ, ಇದಕ್ಕಾಗಿ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಬರೆದಿದ್ದಾರೆ. ಧ್ವನಿಪಥದ ಆಲ್ಬಮ್ ನಾಲ್ಕು ಹಾಡುಗಳನ್ನು ಒಳಗೊಂಡಿದೆ. ನಟರ ಪುನೀತ್ ರಾಜ್‌ಕುಮಾರ್ ಮತ್ತು ರಾಧಿಕಾ ಪಂಡಿತ್ ಸೇರಿದಂತೆ ಸೂರಿಯ ಮುಂಬರುವ ಚಿತ್ರ ಡಾಡ್ಮನೆ ಹುಡ್ಗಾ ತಂಡದ ಸಮ್ಮುಖದಲ್ಲಿ ಈ ಆಲ್ಬಂ ಅನ್ನು ಜುಲೈ 26, 2015 ರಂದು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ನಟರಾದ ವಿ.ರವಿಚಂದ್ರನ್ ಮತ್ತು ದುನಿಯಾ ವಿಜಯ್ ಇತರ ಆಹ್ವಾನಿತರಾಗಿದ್ದರು.

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ನೆನಪೇ ನಿತ್ಯ ಮಲ್ಲಿಗೆ"ಜಯಂತ ಕಾಯ್ಕಿಣಿಕಾರ್ತಿಕ್ 3:12
2."ಕನಸಲಿ ನಡೆಸು"ಜಯಂತ ಕಾಯ್ಕಿಣಿಶ್ವೇತಾ ಮೋಹನ್3:34
3."ಇಳಿಜಾರು ಹಾದಿ ಇದು"ಯೋಗರಾಜ ಭಟ್ವಿಜಯ್ ಪ್ರಕಾಶ್ 3:39
4."ಮರೆಯದೆ ಕ್ಷಮಿಸು"ಜಯಂತ ಕಾಯ್ಕಿಣಿಬಲರಾಮ್3:42
ಒಟ್ಟು ಸಮಯ:14:07

ಉಲ್ಲೇಖಗಳು

ಬದಲಾಯಿಸಿ
  1. ಬೂದಿ ಮುಚ್ಚಿದ ಕೆಂಡ; ಕೆಂಡವಿದೇಕೊ, ಸಂಪಿಗೆ ಇದೇಕೊ https://www.kannadaprabha.com
  2. https://kannada.filmibeat.com/movies/kendasampige/news.html