ಕೃತಿಸ್ವಾಮ್ಯವು ಸಾಮಾನ್ಯವಾಗಿ ಸೀಮಿತ ಸಮಯದವರೆಗೆ ಒಂದು ಮೂಲ ಕೃತಿಯ ಸೃಷ್ಟಿಕರ್ತನಿಗೆ ಕೃತಿಯ ಮೇಲೆ ವಿಶಿಷ್ಟ ಹಕ್ಕುಗಳನ್ನು ನೀಡುವ, ಬಹುತೇಕ ಸರ್ಕಾರಗಳು ಜಾರಿಗೆ ತಂದ, ಒಂದು ಕಾನೂನುಬದ್ಧ ಪರಿಕಲ್ಪನೆ. ಸಾಮಾನ್ಯವಾಗಿ, ಅದು "ನಕಲುಮಾಡುವ ಹಕ್ಕು", ಆದರೆ ಕೃತಿಸ್ವಾಮ್ಯ ಮಾಲೀಕನಿಗೆ ಕೃತಿಗಾಗಿ ಮನ್ನಣೆ ನೀಡುವ, ಯಾರು ಕೃತಿಯನ್ನು ಇತರ ರೂಪಗಳಿಗೆ ಅನುಗೊಳಿಸಿಕೊಳ್ಳುವುದನ್ನು ನಿರ್ಧರಿಸುವ, ಯಾರು ಅದನ್ನು ಮಾಡುತ್ತಾರೆಂಬ, ಯಾರು ಆರ್ಥಿಕವಾಗಿ ಅದರಿಂದ ಲಾಭಪಡೆಯಬಹುದೆಂಬ ಹಕ್ಕು ಮತ್ತು ಇತರ ಸಂಬಂಧಿತ ಹಕ್ಕುಗಳನ್ನು ನೀಡುತ್ತದೆ. ಅದು (ಪೇಟಂಟ್, ಟ್ರೇಡ್‌ಮಾರ್ಕ್, ಮತ್ತು ವ್ಯಾಪಾರ ರಹಸ್ಯದಂತೆ) ವಾಸ್ತವಾಂಶವಿರುವ ಮತ್ತು ಪ್ರತ್ಯೇಕವಾದ ಒಂದು ಕಲ್ಪನೆ ಅಥವಾ ಮಾಹಿತಿಯ ಯಾವುದೇ ವ್ಯಕ್ತಪಡಿಸಬಲ್ಲ ರೂಪಕ್ಕೆ ಅನ್ವಯಿಸುವ ಒಂದು ಪ್ರಕಾರದ ಬೌದ್ಧಿಕ ಆಸ್ತಿ. ಕೃತಿಗಳು ಯಾವುದೇ ರೂಪದಲ್ಲಿರಬಹುದು: ಕವನಗಳು, ಪ್ರಭಂದ, ನಾಟಕಗಳು ಮತ್ತು ಇತರ ಸಾಹಿತ್ಯ ಕೃತಿಗಳು, ಚಲನಚಿತ್ರಗಳು, ನೃತ್ಯ, ಸಂಗೀತ ಸಂಯೋಜನೆಗಳು, ಧ್ವನಿ ರೆಕಾರ್ಡಿಂಗ್, ವರ್ಣಚಿತ್ರಗಳು, ರೇಖಾಚಿತ್ರಗಳು, ಶಿಲ್ಪಕಲೆಗಳು, ಛಾಯಾಚಿತ್ರಗಳು, ಕಂಪ್ಯೂಟರ್ ಸಾಫ್ಟ್‍ವೇರ್, ರೇಡಿಯೋ ಮತ್ತು ದೂರದರ್ಶನದ ಪ್ರಸಾರ, ಮತ್ತು ಕೈಗಾರಿಕಾ ವಿನ್ಯಾಸಗಳನ್ನು ಒಳಗೊಳ್ಳಬಹುದು. ಗ್ರಾಫಿಕ್ ವಿನ್ಯಾಸ ಮತ್ತು ಕೈಗಾರಿಕಾ ವಿನ್ಯಾಸಗಳು ಇತ್ಯಾದಿ. ಭಾರತದಲ್ಲಿ "ಹಕ್ಕುಸ್ವಾಮ್ಯ ಕಾಯಿದೆ,೧೯೫೭" ಜನವರಿ ೧೯೫೮ರಲ್ಲಿ ಜಾರಿಗೆ ಬಂದಿತು.[೧]

ಉಲ್ಲೇಖ

ಬದಲಾಯಿಸಿ
  1. http://copyright.gov.in/Documents/CopyrightRules1957.pdf